Skip to main content

ಮೈದಾ ಹಿಟ್ಟು - ಅತಿ ಅಪಾಯಕಾರಿ ಹಿಟ್ಟು(maida flour)

ಮೈದಾ ಹಿಟ್ಟು - ಅತಿ ಅಪಾಯಕಾರಿ ಹಿಟ್ಟು(maida flour) ನೀವು ಆಸಿಡಿಟಿಯನ್ನು ವಾಸಿಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈಗ ಹೇಳುತ್ತಿದ್ದೇನೆ. ಆಸಿಡಿಟಿ ಬರಲು ಕಾರಣ ಏನೆಂದರೆ ಯಾವಾಗಲೂ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ, ಅತಿಯಾದ ಸಿಹಿತಿಂಡಿಗಳ ಸೇವನೆ, ಅತಿಯಾದ ಕಾಫೀ ಮತ್ತು ಟೀ ಕುಡಿಯುವಿಕೆ, ಅತಿಯಾದ ಧೂಮಪಾನ ಮಾಡುವಿಕೆ, ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳ ಅತಿಯಾಗಿ ತಿನ್ನುವುದು, ಪಾಲೀಶ್ ಮಾಡಿದ ಅಕ್ಕಿಯ ಅನ್ನವನ್ನು ಊಟಮಾಡುವುದು, ಸಕ್ಕರೆಯನ್ನು ಉಪಯೋಗಿಸುವುದು, ಇತ್ಯಾದಿ ಪದಾರ್ಥಗಳಿಂದ ಅಸಿಡಿಟಿ ಬರುವುದು. ಇದು ಎಲ್ಲಕ್ಕಿಂತಲೂ ಮಲಬದ್ಧತೆ ಮೂಲ ಕಾರಣ ಈ ರೋಗ ಬರಲು. ನಮ್ಮ ಮತ್ತು ನಿಮ್ಮ ಮನೆಗಳಲ್ಲಿ ಚರಂಡಿ ಇದೆ ತಾನೇ? ಹಾಗೆಯೇ ನಮ್ಮ ಮತ್ತು ನಿಮ್ಮ ದೇಹದಲ್ಲೂ ಚರಂಡಿ ಇದೆ. ಮನೆಯ ಚರಂಡಿ ಶುದ್ಧವಾಗಿದ್ದರೆ ಯಾವುದೇ ಥರಹದ ದುರ್ವಾಸನೆ ಇರುವುದಿಲ್ಲಾ ತಾನೇ. ಮನೆಗಳ ಚರಂಡಿ ಚೊಕ್ಕಟವಾಗಿಟ್ಟುಕೊಳ್ಲಲು ನಮಗೆಲ್ಲಾ ಗೊತ್ತು. ಅಲ್ವೇ??? ಸಿಕ್ಕಿದ್ದೆಲ್ಲಾ ಮನೆಯ ಚರಂಡಿಯಲ್ಲಿ ಹಾಕುತ್ತಿದ್ದರೆ ಏನಾಗುತ್ತದೆ? ನೀವೇ ಯೋಚನೆ ಮಾಡಿನೋಡಿ. ಹಾಗೆಯೇ ನಮ್ಮ ದೇಹದ ಚರಂಡಿಯನ್ನು ನೋಡಿಕೊಳ್ಳಬೇಕಲ್ಲವೇ? ಅದೂ ಶುದ್ಧವಾಗಿರಬೇಕು ತಾನೇ? ಅದು ಶುದ್ಧವಾಗಿರಲು ಏನು ಮಾಡಬೇಕು? ಮನೆಯ ಚರಂಡಿಯನ್ನು ಶುದ್ಧಗೊಳಿಸಲು ಪರಕೆ ಅಥವಾ ಬ್ರಷ್ ಉಪಯೋಗಿಸುತ್ತೇವೆ, ಹೌದು ತಾನೇ? ಆದರೆ ನಮ್ಮ ಮತ್ತು ನಿಮ್ಮ ದೇಹದ ಚರಂಡಿಯನ್ನು ಪರಕೆ ಹಾಗೂ ಬ್ರಷ್ ಹಾಕಿ ಶುದ್ಧಗೊಳಿಸಲು ಆಗುತ್ತದೆಯೇ? ಯೋಚನೆ ಮಾಡಿನೋಡಿ. ಮೇಲೆ ಹೇಳಿದ ಮೈದಾ ಮತ್ತು ಇತರೆ ವಸ್ತುಗಳನ್ನು ತಿನ್ನುವುದರಿಂದ ನಮ್ಮ ದೇಹದ ಚರಂಡಿಯೊಳಗೆ ಒಂದು ತರಹದ ಪೇಸ್ಟ್ ತಯಾರಾಗಿ ಅಲ್ಲಲ್ಲೇ ಕಟ್ತಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ಎಲ್ಲರ ೧೦ನೇ ವಯಸ್ಸಿನಿಂದ ಶುರುವಾಗುತ್ತದೆ. ನಮಗೆ ಅದು ಗೊತ್ತಾಗುವ ಹೊತ್ತಿಗೆ ಸುಮಾರು ವಯಸ್ಸಾಗಿರುತ್ತದೆ. ಆಗ ಪರದಾಡಿಕೊಂದು ಡಾಕ್ಟರ್ ಬಳಿ ಓಡಿಹೋಗುತ್ತೇವೆ. ವಾಸಿಯಾಗದೇ ಪರದಾಡುತ್ತೇವೆ. ಇದಕ್ಕೆ ಕಾರಣ ನಾವು ಸರಿಯಾದ ಆಹಾರಗಳನ್ನು ತಿನ್ನುತ್ತಿದ್ದರೆ ಈ ಅಸಿಡಿಟಿ ಅನ್ನುವ ಗೋಜೇ ಇರುವುದಿಲ್ಲ. ಈ ಅಸಿಡಿಟಿ ಇಲ್ಲದಿದ್ದರೆ ಯಾವ ರೋಗವೂ ಹತ್ತಿರ ಸುಳಿಯುವುದಿಲ್ಲ. ಇದಕ್ಕೆ ಏನು ಮಾಡಬೇಕು? ಮೈದಾ ಹಿಟ್ಟಿನ ವಿಷಯ ಏನೆಂದರೆ ಅದರಲ್ಲಿ ಚೆನ್ನಾಗಿರುವ ಪೇಸ್ಟನ್ನು ತಯಾರಿಸಬಹುದು. ಇದನ್ನು ವಾಲ್ ಪೇಪರ್ ನ್ನು ಅಂಟಿಸಲು ಉಪಯೋಗಿಸುತ್ತಾರೆ. ಅದು ಎಷ್ಟು ಕಷ್ಟಪಟ್ಟರೂ ಕೀಳಲು ಆಗುವುದಿಲ್ಲ. ಇದು ನಿಮಗೆ ಗೊತ್ತಾ? ಅದೇ ತರಹ ಮೈದಾ ಹಿಟ್ಟಿನಿಂದ ತಯಾರಿಸಿದ ಎಲ್ಲಾ ತಿಂಡಿಗಳು, ಇದರಿಂದ ತಯಾರಿಸಿದ ಸಿಹಿ ತಿಂಡಿಗಳು, ಇದರಿಂದ ತಯಾರಿಸಿದ ಬ್ರೆಡ್, ಬಿಸ್ಕತ್, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮಾಡಲು ಕೆಲವುಸಲ ಮೈದಾವನ್ನು ಉಪಯೋಗಿಸುತ್ತಾರೆ. ಈ ಮೈದಾ ಹಿಟ್ಟನ್ನು ತಿಂದವರು ಅತ್ಯಂತ ಮಲಬದ್ಧತೆಯಿಂದ ನರಳುತ್ತಾರೆ. ಆದ್ದರಿಂದ ಇನ್ನುಮೇಲೆ ಅತ್ಯಂತ ಪವಿತ್ರವಾದ ನಿಮ್ಮ ದೇಹವನ್ನು ಕಾಪಾಡಿಕೊಳ್ಳಿ. ಯಾವುದೇ ರೋಗಗಳು ಹತ್ತಿರ ಸುಳಿಯುವುದಿಲ್ಲ. ನಿಮ್ಮ ದೇಹವನ್ನು ಶುದ್ಧವಾಗಿಟ್ಟುಕೊಳ್ಳಿರಿ. ಇದಕ್ಕೆ ನೀವುಗಳು ಹೊಟ್ಟು ಇರುವ ಪದಾರ್ಥಗಳನ್ನು ಸೇವನೆ ಮಾಡಬೇಕು. ಕೆಂಪು ಅಕ್ಕಿ ಅಂದರೆ ಪಾಲೀಶ್ ಮಾಡದ ಕೆಂಪು ಅಕ್ಕಿ ಅತ್ಯಂತ ಶ್ರೇಷ್ಠ. ಇದಕ್ಕೆ ಮುಂಡಗ ಅಕ್ಕಿ ಎಂತಲೂ, ಕಜ್ಜಾಯ ಅಕ್ಕಿ ಎಂತಲೂ ಕರೆಯುತ್ತಾರೆ. ಗೋಧಿಯನ್ನು ಹಿಟ್ಟುಮಾಡಿಸಿದಾಗ ಅದರ ಹೊಟ್ಟನ್ನು ತೆಗೆಯದೇ ಉಪಯೋಗಿಸಿ. ಅಂದರೆ ಒಂದರಿ ಆಡದೇ ಉಪಯೋಗಿಸಬೇಕು. ಎಲ್ಲಾ ಕಾಳು, ಬೇಳೆಗಳನ್ನು ಅದರ ಸಿಪ್ಪೆ ಸಮೇತವಾಗಿ ತಿನ್ನಿ. ಏಲಕ್ಕಿ ಬಾಳೆಹಣ್ಣನ್ನು ಸಿಪ್ಪೇಸಮೇತವಾಗಿ ತಿನ್ನಿ. ಮೊಳಕೆ ಬರಿಸಿದ ಕಾಳುಗಳನ್ನು ಉಪಯೋಗಿಸಿ. ಒಂದು ಪಕ್ಷ ನಿಮಗೆ ಕೆಂಪು ಅಕ್ಕಿ ಸಿಕ್ಕದೇ ಇದ್ದ ಪಕ್ಷದಲ್ಲಿ ಅಂಗಡಿಯಲ್ಲಿ "WHEAT BRAN" ಎಂಬ ಗೋಧಿಯ ಹೊಟ್ಟು ಸಿಕ್ಕುತ್ತದೆ. ಅದನ್ನು ನಿಮ್ಮ ಅಕ್ಕಿಯ ಊಟದಲ್ಲಿ ಉಪಯೋಗಿಸಿ. ಇಲ್ಲವಾದರೆ ಅದರ ಪಾಯಸವನ್ನು ಮಾಡಿ ಕುಡಿಯಿರಿ. ಸಕ್ಕರೆಯನ್ನು ನಿಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸಬೇಡಿ. ಸಕ್ಕರೆ ಉಪಯೋಗಿಸುವುದರಿಂದ 146 ತರಹ ಖಾಯಿಲೆಗಳು ಬರುತ್ತವೆ. ಎಲ್ಲಾ ರೋಗಕ್ಕೂ ಮೂಲ ಕಾರಣ ಸಕ್ಕರೆ, ಮೈದಾ ಮತ್ತು ಪಾಲೀಶ್ ಮಾಡಿದ ಅಕ್ಕಿ. ನೆನಪಿರಲಿ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...