ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು (11-20)
೧೧. ಸೆಕ್ಸ್- ಪ್ರೇಮಾಭಿವ್ಯಕ್ತಿಗೆ ಉನ್ನತ ಸಾಧನ!
ಪತಿ – ಪತ್ನಿಯರ ನಡುವಿನ ಲೈಂಗಿಕ ಕ್ರಿಯೆ ಉನ್ನತ ಪ್ರೇಮಾಭಿವ್ಯಕ್ತಿಯಾಗಿರುತ್ತದೆ. ಪ್ರೇಮದ ಸಹಜತೆ ದಂಪತಿಗಳ ನಡುವೆ ಬಾಂಧವ್ಯವನ್ನು ವೃದ್ಧಿಗೊಳಿಸುತ್ತದೆ ಮತ್ತ ಜಾಗೃತಿಯನ್ನು ಮೂಡಿಸುತ್ತದೆ.
ಲೈಂಗಿಕ ಜೀವನವನ್ನು ದಂಪತಿಗಳು ಉತ್ತೇಜನಕಾರಿಯನ್ನಾಗಿಟ್ಟುಕೊಂಡರೆ ಸಂತೋಷ – ಸಂತೃಪ್ತಿ ಲಭಿಸುವುದಲ್ಲದೆ, ವಿವಾಹ ವಿಚ್ಛೇದನ ಪ್ರಮೇಯವೇ ಉದ್ಭವಿಸುವುದಿಲ್ಲ.
* * *
೧೨. ಸಮರ್ಥ ಲೈಂಗಿಕ ಜೀವನಕ್ಕೆ ಹಸ್ತಮೈಥುನ ಸಹಕಾರಿ!
ಅನೇಕ ತಜ್ಞರ ಪ್ರಕಾರ ಹಸ್ತಮೈಥುನ ಲೈಂಗಿಕ ಸಾಮರ್ಥ್ಯವನ್ನು ಅಧಿಕಗೊಳಿಸುತ್ತದೆ ! ಉದಾಃ ಹಸ್ತಮೈಥುನ ಮಾಡಿಕೊಳ್ಳುವುದರಿಂದ ನೀವು ವೀರ‍್ಯಸ್ಖಲನವನ್ನು ನಿಯಂತ್ರಿಸಿಕೊಳ್ಳುವುದನ್ನು ಕಲಿಯುತ್ತೀರಿ. ಪ್ರೀತಿಗೆ ಸದಾ ಪೋಷಣೆ ಅಗತ್ಯ. ಹಾಗಿದ್ದಾಗಲೇ ಅದು ಜೀವಂತವಾಗಿರುತ್ತದೆ.
ಹಾಗೆಯೆ ಅದು ನಿತ್ಯನೂತನವೂ ಆಗಿರಬಲ್ಲದು! ಇದು ಶೀಘ್ರ ಸ್ಖಲನ ಸಮಸ್ಯೆಗಳಿಗೆ ಪರಿಹಾರ ತೋರಿಸಬಲ್ಲದು.
ಅಲ್ಲದೆ, ಸಂಗಾತಿಗೆ ಹುಷಾರಿಲ್ಲದಾಗ, ಬಹಳ ದಿನಗಳು ತವರಿಗೆ ಹೋಗಿದ್ದಾಗ ಲೈಂಗಿಕ ಉದ್ರೇಕವನ್ನು ಹಸ್ತಮೈಥುನದಿಂದ ನಿವಾರಿಸಿಕೊಳ್ಳಬಹುದು.
* * *
೧೩. ಪ್ರಾಸ್ಟೇಟ್‌ಗೆ ಸೆಕ್ಸ್‌ಏಕೆ ಒಳ್ಳೆಯದು?
ಇಳಿವಯಸ್ಸಿನ ಪುರುಷರಲ್ಲಿ ಅವರ ಪ್ರಾಸ್ಟೇಟ್‌ಗ್ರಂಥಿಯಲ್ಲಿರುವ ದ್ರವಗಳು ಸಾಕಷ್ಟು ಖಾಲಿಯಾಗದಿರುವುದರಿಂದ ಪ್ರಾಸ್ಟೇಟ್ ಸಮಸ್ಯೆ ಉಂಟಾಗುತ್ತದೆ. ಭಾವಪ್ರಾಪ್ತಿ (ಆರ್ಗ್ಯಾಸಮ್)ಯ ಅವಧಿಯಲ್ಲಿ ಪ್ರಾಸ್ಟೇಟ್‌ನ ಸುತ್ತಲೂ ಇರುವ ಸ್ನಾಯುಗಳು ಅನೇಕ ಬಾರಿ ಸಂಕುಚಿತಗೊಳ್ಳುತ್ತದೆ ಮತ್ತು ಹೆಚ್ಚಾಗಿರುವ ದ್ರವಗಳನ್ನು ಹಿಂಡಿ ಹಾಕುತ್ತದೆ.
ಆದುದರಿಂದ ಪ್ರಾಸ್ಟೇಟ್‌ಗ್ರಂಥಿಯ ಆರೋಗ್ಯಕ್ಕೆ ಕ್ರಮವಾದ ಸೆಕ್ಸ್‌ಕ್ರಿಯೆ ಅತ್ಯಗತ್ಯ.
* * *
೧೪. ಉತ್ತಮ ಆರೋಗ್ಯಕ್ಕೆ ಲೈಂಗಿಕ ಚಟುವಟಿಕೆ
ಆಯುಷ್ಯದ ಹೆಚ್ಚಳ
ನಿಯಮಿತವಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡು ಕ್ರಮಬದ್ಧವಾಗಿ ಭಾವಪ್ರಾಪ್ತಿ (ಆರ‍್ಲ್ಯಾಸಮ್) ಪಡೆಯಬಲ್ಲ ದಂಪತಿಗಳು ದೀರ್ಘಕಾಲ ಬಾಳುತ್ತಾರೆ.
ವಯಸ್ಸಾಗುವುದು ನಿಧಾನ
ಸಂಶೋಧನೆಯ ಪ್ರಕಾರ – ವಾರದಲ್ಲಿ ಮೂರು ದಿನ ಲೈಂಗಿಕ ತೊಡಗಿಕೊಳ್ಳುವ ದಂಪತಿಗಳಲ್ಲಿ ವಯಸ್ಸಾಗುವ ಪ್ರಕ್ರಿಯೆ ತುಸು ನಿಧಾನವಾಗುತ್ತದೆ. ಹಾಗಾಗಿ ಅಂಥವರು, ಲೈಂಗಿಕ ಚಟುವಟಿಕೆಯಲ್ಲಿ ನಿಯಮಿತವಾಗಿ ಭಾಗವಹಿಸಿದ ದಂಪತಿಗಳಿಗಿಂತಲೂ ಚಿಕ್ಕವರಂತೆ ಕಂಡುಬರಬಲ್ಲರು!
ಲೈಂಗಿಕ ಚಟುವಟಿಕೆ ವೇಗದ ಕ್ರಿಯೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರಿಂದಾಗಿ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ. ಅಷ್ಟೇ ಅಲ್ಲ, ಅದು ಚರ್ಮದ ಜೀವಕೋಶಗಳಿಗೆ ರಕ್ತದ ಸರಬರಾಜನ್ನು ಹೆಚ್ಚಿಸುವುದರಿಂದ, ಚರ್ಮದ ಮೇಲ್ಪದರಿನಲ್ಲಿ ತಾಜಾ ಜೀವಕೋಶಗಳ ಸಂಖ್ಯೆ ಹೆಚ್ಚಿ, ಚರ್ಮ ಕಾಂತಿಯುತವಾಗುತ್ತದೆ. ಹೊಳಪು ಮೈಕಾಂತಿ ಆರೋಗ್ಯ ಹಾಗೂ ಯೌವನದ ಸಂಕೇತ. ಇನ್ನು ಸ್ತ್ರೀಯರಲ್ಲಿ – ಮುಟ್ಟಂತ್ಯ ಸಮೀಪಿಸಿದಂತೆಲ್ಲ ಹಲವಾರು ತೊಡಕುಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ನಿಯಮಿತ ಲೈಂಗಿಕ ಚಟುವಟಿಕೆ ಅಂಥ ತೊಡಕುಗಳನ್ನು ಬಹುಮಟ್ಟಿಗೆ ನಿವಾರಿಸಬಲ್ಲದು ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ.
* * *
೧೫. ಸೆಕ್ಸ್! ರತಿ ಎನ್ನಿ, ಪ್ರಣಯವೆನ್ನಿ
ಕಾಮದಾಟ………. ಏನೇ ಅನ್ನಿ… ಅದು ಸೃಷ್ಟಿಕ್ರಿಯೆ ಎನ್ನುವುದು ಸತ್ಯ.
ಹಾಗೆಯೇ, ಇತರೆಲ್ಲ ಜೀವಿಗಳಿಗಿಂತಲೂ ಮನುಷ್ಯನಲ್ಲಿ ಲೆಂಗಿಕತೆ ವಿಶಿಷ್ಟ ಎನ್ನುವುದೂ ಪರಮಸತ್ಯ.
ರತಿ ಮಧುರವೂ ಹೌದು, ಮನೋರಂಜನೆಯೂ ಹೌದು, ಹಾಗೆಯೇ ಅದು ಸಹಜವು ಕೂಡ! ಅಂಥ ರತಿಗೆ ಪೂರಕವಾಗಿ ಒದಗಿಬರುವ ಅಂಶಗಳೆಂದರೆ – ಪ್ರೀತಿ, ಪ್ರಣಯದಾಟ, ಅನುರಾಗ ಸ್ಪಂದನ, ಪ್ರೀತಿ, ಅನುರಾಗಯುತ ಲೈಂಗಿಕ ಚಟುವಟಿಕೆ, ದೈಹಿಕ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯದೆಂದು ಕೆಲವು ಸಂಶೋಧಕರ ಅಭಿಪ್ರಾಯ. ದಂಪತಿಗಳ ದೈಹಿಕ – ಮಾನಸಿಕ ಆರೋಗ್ಯಕ್ಕೆ ಲೈಂಗಿಕ ಚಟುವಟಿಕೆ ಯಾವ ರೀತಿ ಸಹಕಾರಿ ಎಂಬುದಕ್ಕೆ ಕೆಳಗೆ ನೀಡಿರುವ ಕಾರಣಗಳನ್ನು ಗಮನಿಸಿ :
ಮೂಳೆಗಳು ಸದೃಢಗೊಳ್ಳಬಲ್ಲವು!
ಡಾ|| ಸರಾಹ್ಹ ಬ್ರೇವರ್‌ಎನ್ನುವವರ ಪ್ರಕಾರ – ನಿಯಮಿತ ಲೈಂಗಿಕ ಚಟುವಟಿಕೆಯಿಂದಾಗಿ, ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನಿನ ಪ್ರಮಾಣ ಹೆಚ್ಚುತ್ತದೆ. ಇದು ಸ್ತ್ರೀಯರಲ್ಲಿ ಮೂಳೆ ಸವೆತ, ಎಲುಬು ಸೀಳುವುದು ಮುಂತಾದ ತೊಂದರೆಗಳನ್ನು ನಿವಾರಿಸಲು ಸಹಕಾರಿ.
ಕಣ್ಣುಗಳು ಕಾಂತಿಯುತವಾಗುತ್ತವೆ!
ನಿಯಮಿತ ರತಿ ಚಟುವಟಿಕೆ ದಂಪತಿಗಳನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ನಿರುಮ್ಮಳವಾಗಿಸಬಲ್ಲದು ಅದರಿಂದಾಗಿ ಮುಖಕಾಂತಿ ತನ್ನಿಂತಾನೆ ಹೆಚ್ಚುತ್ತದೆ. ಅದರಂತೆ ಕಣ್ಣುಗಳ ಹೊಳಪು ಕೂಡ!
ಸೊಗಸಾದ ನಿದ್ದೆಗೆ ಸರಿಯಾದ ವಿಧಾನ
ರತಿಯಲ್ಲಿ ತೊಡಗಿರುವಾಗ ಆಕ್ಸಿಟೋಸಿಸ್ ಎನ್ನುವ ಹಾರ್ಮೋನಿನ ಪ್ರಮಾಣ ಹೆಚ್ಚುತ್ತದೆ. ಇದು ಸಂತಸದಾಯಿ ಚೋದಕ. ಪುರುಷರಲ್ಲಿ ಈ ಚೋದಕ ಬಿಡುಗಡೆಯಾಗುವುದು ಜಾಸ್ತಿ. ಹಾಗಾಗಿಯೇ ರತಿ ಮುಗಿದ ನಂತರ ಪುರುಷರು ಗಾಢ ನಿದ್ದೆಗೊಳಗಾಗುತ್ತಾರೆ.
ದೈಹಿಕ – ಮಾನಸಿಕ ನಿರುಮ್ಮಳತೆಯ ಭಾವನೆ
ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗ, ಬಿಡುಗಡೆಯಾಗುವ ಚೋದಕಗಳಲ್ಲಿ ಎಂಡಾರ್ಫಿನ್ಸ್ ಎನ್ನುವುದು ಮುಖ್ಯ ಚೋದಕ. ಇದು ಒತ್ತಡ ನಿವಾರಿಸಿ, ಸಂತಸದ ಭಾವನೆ ಉಂಟು ಮಾಡುವಂಥದ್ದು, ಹಾಗಾಗಿ, ಪ್ರೀತಿಯುತ ಲೈಂಗಿಕ ಚಟುವಟಿಕೆ ದಂಪತಿಗಳನ್ನು ದೈಹಿಕವಾಗಿಯೂ ಮಾನಸಿಕವಾಗಿಯೂ ನಿರುಮ್ಮಳವಾಗಿಸುತ್ತದೆ.
ನೋವು ನಿವಾರಕವೂ ಹೌದು!
ಈಗಾಗಲೇ ಹೇಳಿರುವಂತೆ ರತಿ ಸಮಯದಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್‌ಚೋಕದವು ಒತ್ತಡ ನಿವಾರಿಸುವಂತೆ ನೋವನ್ನೂ ನಿವಾರಿಸುತ್ತದೆ.
ಇನ್ನೂ ಕೆಲವು ಉಪಯೋಗಗಳನ್ನು ಗಮನಿಸಿ:
ಈ ಸಮಯದಲ್ಲಿ ಬಿಡುಗಡೆಯಾಗುವ ಇನ್ನೊಂದು ಚೋದಕ – ಟಿಸ್ಟೋಸ್ಟೆರೋನ್. ಇದು ಕೀಲುಗಳ ಉರಿಯೂತವನ್ನು ನಿವಾರಿಸುತ್ತದೆ.
ಸಂಧಿವಾತ ರೋಗಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ತದನಂತರ ಆರು ತಾಸುಗಳು ಕಾಲು ನೋವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆಂಬುದು ಸಂಶೋಧನಾಧ್ಯಯನಗಳಲ್ಲಿ ವ್ಯಕ್ತವಾಗಿದೆ.
ಸ್ತ್ರೀಯರಲ್ಲಿ ಕಂಡುಬರುವ ಮುಟ್ಟಿ ಏರುಪೇರು, ಮುಟ್ಟಿನ ಮುನ್ನಿನ ಬವಣೆಯನ್ನು ತಡೆಗಟ್ಟಬಲ್ಲದು.
ದಂಪತಿಗಳು ರತಿಯಲ್ಲಿ ಪಡೆಯುವ ಭಾವಪ್ರಾಪ್ತಿತ ನೋವನ್ನು (ಅರೆತಲೆಶೂಲೆಯನ್ನು ಸಹ) ನಿವಾರಿಸುತ್ತದೆ.
ಮಿದುಳು ಚುರುಕಾಗುತ್ತದೆ
ರತಿಯಲ್ಲಿ ಭಾವಪ್ರಾಪ್ತಿ ಪಡೆಯುವಾಗ ರಕ್ತಚಲನೆ ತೀವ್ರಗೊಳ್ಳುವುದು ಸ್ವಾಭಾವಿಕ. ಅದರಿಂದಾಗಿ ದೇಹದ ಎಲ್ಲ ಭಾಗಗಳಿಗೂ ತಾಜಾ ರಕ್ತ ಸರಬರಾಜಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಿದುಳಿಗೆ ಅದರ ಪ್ರಮಾಣ ಜಾಸ್ತಿ. ಮೆದುಳಿನ ಸಾಮರ್ಥ್ಯ ಹೆಚ್ಚಲು ಅದು ಸಹಕಾರಿ ಎಂಬುದು ತಜ್ಞರ ಅಭಿಪ್ರಾಯ.
ಸೊಗಸಾದ ದೇಹಾಕೃತಿಗೆ ಪೂರಕ
ಸೊಗಸಾದ ಮೈಕಟ್ಟಿಗೆ ವ್ಯಾಯಾಮ ಉತ್ತಮ ಸಾಧನ ಎಂಬುದು ಗೊತ್ತಿದ್ದುದೇ. ಅದು ಲೈಂಗಿಕ ಚಟುವಟಿಕೆಗೂ ಅನ್ವಯಿಸುತ್ತದೆ. ಪ್ರಣಯದಾಟ ಕೂಡ ಉತ್ತಮ ವ್ಯಾಯಾಮ ವಿಧಾನಗಳಲ್ಲೊಂದು. ದೇಹದ ಸ್ನಾಯುಗಳು ಚುರುಕಾಗಿರುವಲ್ಲಿ ಲೈಂಗಿಕ ಕ್ರಿಯೆಯೂ ತಕ್ಕಮಟ್ಟಿಗೆ ನೆರವಾಗುತ್ತಿರುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ನಿಯಮಿತ ಲೈಂಗಿಕ ಕ್ರಿಯೆಯಿಂದಾಗಿ ದಂಪತಿಗಲ್ಲಿ ಗಣನೀಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದನ್ನು ಅನೇಕ ಸಂಶೋಧನಾ ಫಲಿತಾಂಶಗಳು ತೋರ್ಪಡಿಸಿದೆ.
ಒಟ್ಟಿನಲ್ಲಿ-ಅನುರಾಗಯುತ ಲೈಂಗಿಕ ಚಟುವಟಿಕೆ ದಂಪತಿಗಳ ಸರ್ವತೋಮುಖ ಸಂತೋಷಕ್ಕೆ ಕಾರಣವಾಗುತ್ತದೆ ಎಂಬುದಂತೂ ನಿರ್ವಿವಾದ.
* * *
೧೬. ಯೋನಿ ಸೆಡೆತ
ಯೋನಿಯ ಸ್ನಾಯುಗಳು ಸೆಳೆತುಕೊಂಡಿರುವುದರಿಂದ ಶಿಶ್ನವನ್ನು ಯೋನಿಯಲ್ಲಿ ಸೇರಿಸಲು ಆಂತಕ ಉಂಟಾಗುವುದು. ಸಂಭೋಗದ ನೋವು ಮತ್ತು ಯೋನಿ ಸೆಡೆತ ಇವೆರಡೂ ಲೈಂಗಿಕ ನಿರುತ್ಸಾಹದ ಲಕ್ಷಣಗಳಾಗಿರಬಹುದು. ಲೈಂಗಿಕ ನಿರುತ್ಸಾಹ ಚಿಕಿತ್ಸೆಯನ್ನೇ ಈ ಸಂದರ್ಭಲ್ಲಿಯೂ ಕೈಗೊಳ್ಳಬಹುದು. ಅನೇಕ ದೈಹಿಕ ಮತ್ತು ಮಾನಸಿಕ ಕಾರಣಗಳೂ ಯೋನಿ ಸೆಡೆತವನ್ನುಂಟು ಮಾಡುವುವು; ಜನನೇಂದ್ರಿಯಗಳಿಗೆ ಪೆಟ್ಟು ಇಲ್ಲವೆ ಅವುಗಳ ನ್ಯೂನತೆ, ಹಳೆಯ ಗಾಯದ ನೋವು, ಸೋಂಕು ರೋಗಗಳು, ಮಾನಸಿಕ ರೋಗಗಳು ಮೊದಲಾದವು. ಶೆಕಡಾ ೯೫ ರಷ್ಟು ಸ್ತ್ರೀಯರಲ್ಲಿ ಮಾನಸಿಕ ಕಾರಣಗಳೇ ಯೋನಿ ಸೆಡೆತಕ್ಕೆ ಮುಖ್ಯವಾದವು. ಅದು ಸಂಭೋಗದಲ್ಲಿರುವ ಅನಾಸಕ್ತಿಯ ಸಂಕೇತವೂ ಹೌದು.
* * *
೧೭. ‘ಪ್ರೇಮ’ ಎಂದರೆ
‘ಪ್ರೇಮ ಅದೊಂದು ಅಂದವಾದ ಅನುಭೂತಿ’.
‘ಪ್ರೇಮವೆಂದರೆ ನೆಮ್ಮದಿಯಿಂದ ಜೀವಿಸಲು ಅನುಗ್ರಹಿಸಿದ ಒಂದು ಅಪರೂಪದ ವರ.’
‘ನೀನು ಬರುತ್ತಿದ್ದೀಯಾ ಎಂದು ಮಲ್ಲಿಗೆ ಹೂವುಗಳ ಸೌರಭದಿಂದ ನಿನಗೆ ಸ್ವಾಗತ ಕೋರಲು ಕಾಯುತ್ತಿದ್ದೇನೆ’ ಎಂದಳಂತೆ ಮತ್ತೊಬ್ಬ ತರುಣಿ.
ಪ್ರೇಮದಲ್ಲಿ ಬಿದ್ದ ಭಾವುಕರು – ಮಹಾಕವಿಗಳಾಗುವುದರಲ್ಲಿ ತಪ್ಪಿಲ್ಲ.
‘ಪ್ರೇಮ’ ಕುರಿತ ಅನುಭೂತಿ ಎಲ್ಲರಿಗೂ ಒಂದೆ. ಆದರೆ, ಪ್ರೇಮದಲ್ಲಿ ಅಡಗಿರುವ ಭಾವನೆ ಎಲ್ಲರದು ಒಂದೇ ಅಲ್ಲ, ಕೆಲವರು ಮೊದಲ ನೋಟದಲ್ಲೇ ಪ್ರೇಮದಲ್ಲಿ ಬಿದ್ದುಬಿಡುತ್ತಾರೆ. ಕೆಲವರ ಪ್ರೇಮ, ಮೊದಲ ಸ್ನೇಹ ಪರಿಮಳವನ್ನು ಬೀರುತ್ತದೆ. ಅನಂತರ, ಪ್ರೇಮ ಬಂಧನಕ್ಕೊಳಗಾಗುತ್ತಾರೆ.
ನೀವು, ಪ್ರೇಮದಲ್ಲಿ ಹೇಗೆ ಬಿದ್ದಿರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯತ್ತಿನ ಜೀವನ ರೂಪುಗೊಳ್ಳುತ್ತದೆ. – ಎನ್ನುತ್ತಾರೆ ‘ಫಾಲಿಂಗ್ ಇನ್ ಲವ್’ ಪುಸ್ತಕದ ಲೇಖಕರಾದ ಅಯಲಿ ಫೈನ್ಸ್‌ರವರು.
* * *
೧೮. ರತಿ ಎಂದರೇನು?
ರತಿ ಕಾರ‍್ಯದಲ್ಲಿ ಪುರುಷ ಹೆಚ್ಚಾಗಿ ಶಾರೀರಿಕ ಸುಖವನ್ನು ಆಶಿಸುತ್ತಾನೆ.
ರತಿ ಎಂದರೆ ನಮ್ಮವರ ದೃಷ್ಟಿಯಲ್ಲಿ ಓರ್ವ ಸ್ತ್ರೀ ಒಬ್ಬ ಪುರುಷನ್ನು ಕೂಡಿ ಸಂಭೋಗಿಸುವುದು ‘ರತಿ’ ಎಂದರೆ ಕೇವಲ ಅಷ್ಟೇ ಅಲ್ಲ. ರತಿ ಕಾರ‍್ಯದಲ್ಲಿ ಪುರುಷ ಹೆಚ್ಚಾಗಿ ಶಾರೀರಿಕ ಸುಖವನ್ನು ಆಶಿಸುತ್ತಾನೆ. ಆದರೆ, ಸ್ತ್ರೀ ಹಾಗಲ್ಲ. ಮಾನಸಿಕ ಸುಖಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತಾಳೆ. ಮಾನಸಿಕ ಆನಂದವನ್ನು ಹೊಂದಬೇಕಾದರೆ ಶಾರೀರಿಕ ಸಂಯೋಗ ಆಗಲೇಬೇಕು.
ಹೆಚ್ಚು ಮಂದಿ ಸ್ತ್ರೀಯರು ಲೈಂಗಿಕ ಅಜ್ಞಾನದಿಂದಾಗಿ ತಮ್ಮ ಪತಿಯಿಂದ ತೃಪ್ತಿಯನ್ನು ಹೊಂದುವುದಿಲ್ಲ. ಶಾರೀರಿಕ ಸಂತೃಪ್ತಿಗೆ ಅಲ್ಲದೆ, ಮಾನಸಿಕ ತೃಪ್ತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತಿರುವ ಸ್ತ್ರೀ ತಮ್ಮ ಸಂಗಾತಿಯಿಂದ ಹೆಚ್ಚು ಸಮಯದವರೆಗೂ ರತಿಕೂಟ ಮುನ್ನಲಿಯನ್ನು ಬಯಸುತ್ತಾಳೆಂಬುದನ್ನು ಪುರುಷರು ನೆನಪಿನಲ್ಲಿಡಬೇಕು. ಅಲ್ಲದೆ, ವೈವಿಧ್ಯಮಯವಾದ ರತಿಕೇಳಿ ಹಾಗೂ ರತಿಕ್ರಿಯೆಯಿಂದ ಸ್ತ್ರೀ ಭಾವಪ್ರಾಪ್ತಿಗಳಿಸಲು ಸಾಧ್ಯವಾಗುತ್ತದೆ.
ಲೈಂಗಿಕ ಕ್ರಿಯೆಯಲ್ಲಿ ಪುರುಷ ಏನನ್ನು ಮಾಡಬೇಕೆಂದು ಹೇಳುವುದಿಲ್ಲ. ಮುಖ್ಯ ಹೇಗೆ ಮಾಡಬೇಕೆಂಬುದನ್ನು ತಿಳಿಸಬೇಕೆಂದು ಮನೋವಿಜ್ಞಾನಿ ಡಾ|| ಫ್ರಾಂಕ್ ಕಾಪ್ರಿಯೋ ತಿಳಿಸಿದ್ದಾರೆ.
* * *
೧೯. ಸ್ವರತಿ ಪ್ರಮಾದವೆ?
ರತಿಯಲ್ಲಿ ಎಷ್ಟೋ ಭಂಗಿಗಳಿವೆ. ಆದರೆ ಎಷ್ಟೋ ವಿಧಗಳಿಲ್ಲ. ಪ್ರಧಾನವಾಗಿರುವುದು ಎರಡು ವಿಧ ಮಾತ್ರವೆ. ಇದರಲ್ಲಿ ಒಂದು ಸ್ವರತಿ ಮತ್ತೊಂದು ಪರರತಿ.
ಸ್ವರತಿ ಎಂದರೆ – ಹಸ್ತಮೈಥುನ.
ಪರರತಿ ಎಂದರೆ – ಓರ್ವ ಸ್ತ್ರೀ, ಒಬ್ಬ ಪುರುಷ ಸಂಭೋಗಿಸುವುದು.
ಸ್ವರತಿ ಪ್ರಮಾದಕವೆಂದು, ಅದರಿಂದ ಪುರುಷತ್ವ ಕಡಿಮೆಯಾಗುತ್ತದೆಂದು ಕೆಲವರು ಅವೈಜ್ಞಾನಿಕವಾಗಿ ತಿಳಿಸಿರುವುದುಂಟು. ಆದರೆ, ಸ್ವರತಿಯಿಂದ ಯಾವುದೇ ಪ್ರಮಾದ ಉಂಟಾಗುವುದಿಲ್ಲ. ನಿರ್ಭಯ, ನಿಸ್ಸಂಕೋಚದಿಂದ ಸ್ವರತಿಯನ್ನು ಮಾಡಿಕೊಳ್ಳಬಹುದು. ಗಂಡಸರಲ್ಲಿ ೧೪ ರಿಂದ ೧೮ ವಯಸ್ಸಿನಲ್ಲಿ ಟೆಸ್ಟೋಸ್ಟೆರೋನ್ ಹಾರ್ಮೋನು ವಿಪರೀತವಾಗಿ ಬಿಡುಗಡೆಗೊಂಡು ಅಪರಿಮಿತವಾದ ಕಾಮದಾಸೆಯನ್ನು ಮೂಡಿಸುತ್ತದೆ. ಅಂತಹ ಸಂದರ್ಭದಲ್ಲಿ ಸ್ವಯಂ ಹಸ್ತಮೈಥುನವನ್ನು ಮಾಡಿಕೊಂಡು ಕಾಮೋದ್ರೇಕವನ್ನು ನಿವಾರಿಸಿಕೊಳ್ಳಬಹುದು.
ಡಾ|| ಡೇವಿಡ್ ರೂಬಿನ್ ಎಂಬ ಮನೋವಿಜ್ಞಾನಿಯು – ಹೆಂಡತಿ ಸಹಕರಿಸದಿದ್ದರೆ ಸ್ವರತಿಯಲ್ಲಿ ತೊಡಗಬಹುದೆಂದು ತಿಳಿಸಿದ್ದಾನೆ. ಸ್ವರತಿಯ ಬಗ್ಗೆ ವೈಜ್ಞಾನಿಕ ಮಾಹಿತಿ ಇಲ್ಲದಿರುವುದರಿಂದ ಕೆಲವರು ಭಯ – ಆತಂಕಕ್ಕೆ ಒಳಗಾಗಿರುತ್ತಾರೆ. ಈ ಭಯ ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಪರರತಿಯನ್ನು ಜರುಗಿಸಿದಾಗ ಅಂಗಾಂಗಗಳ ಜತೆ ಮನಸ್ಸು ಸಹ ಸಂಭೋಗದಲ್ಲಿ ಪಾಲ್ಗೊಳ್ಳುತ್ತದೆ. ಆದುದರಿಂದ, ಮಾನಸಿಕ ಭಯ – ಆತಂಕ ಉಂಟಾಗುವುದಿಲ್ಲ. ಅಷ್ಟೆ ಅಲ್ಲ, ಸ್ವರತಿ ಮನುಷ್ಯನಲ್ಲಿ ಆತ್ಮವಿಶ್ವಾಸವನ್ನು ಸಹ ಬೆಳೆಸುತ್ತದೆ.
ಪ್ರಖ್ಯಾತ ಲೈಂಗಿಕ ಚಿಕಿತ್ಸಾ ಡಾ|| ಅಲೆಕ್ಸ್ ಕಂಫರ್ಟ್’ಸ್ವರತಿ ಹೆಚ್ಚು ಸಹಜವಾದುದು ಹಾಗೂ ಅಗತ್ಯವಾದುದು. ಲೈಂಗಿಕ ಪರಿಣತಿ ಹೊಂದಲು ಇದು ಎಷ್ಟೋ ಸಹಕರಿಸುತ್ತದೆ. ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿರುತ್ತದೆ. ಇದರ ಬಗ್ಗೆ ಆತಂಕಕ್ಕೆ ಒಳಗಾದಾಗ ಮಾತ್ರ ಇದರಿಂದ ಹಾನಿ ಉಂಟಾಗುತ್ತದೆ’ ಎಂದು ತಿಳಿಸಿದ್ದಾರೆ.
* * *
೨೦. ಸೆಕ್ಸ್‌ಫನ್
ಸ್ತ್ರೀ, ಪುರುಷರಿಬ್ಬರ ಪಾದಗಳಲ್ಲಿ ಅನೇಕ ಕಾಮನೆಯ ಭಾಗಗಳಿವೆ. ಇವು ಅಂಗಾಲು ಮತ್ತು ಕಾಲಿನ ಹರಡು (ಅಂಕ್ಯಲ್) ಗಳಲ್ಲಿವೆ. ಇವುಗಳನ್ನು ಉಜ್ಜುವುದರಿಂದ, ಮಸಾಜ್ ಮಾಡುವುದರಿಂದ ಪ್ರತಿಕ್ರಿಯೆ ಮೂಡುತ್ತದೆ. ಈ ಭಾಗಗಳನ್ನು ಉತ್ತೇಜಿಸುವುದರಿಂದ ರಿಲ್ಯಾಕ್ಸೆಂಟ್‌ಹಾರ್ಮೋನುಗಳು ನರ ವ್ಯೂಹದಿಂದ ಬಿಡುಗಡೆಗೊಳ್ಳುತ್ತವೆ. ಅಂದರೆ, ಎಂಡಾರ‍್ಟಿನ್ಸ್‌ಗುಂಪುಗಳು – ಇವು ನಿಶ್ಚಿತವಾಗಿ ಲೈಂಗಿಕ ಆಟಕ್ಕೆ ಸಹಾಯ ಮಾಡುತ್ತದೆ.
ಪುಸ್ತಕ: ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು
ಲೇಖಕರು: ಎನ್. ವಿಶ್ವರೂಪಾಚಾರ್
ಪ್ರಕಾಶಕರು: ವಿಶ್ವರೂಪ ಪ್ರಕಾಶನ ಬೆಂಗಳೂರು
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments