Skip to main content

ಹೋಮ-ಹವನಗಳ ಮಹತ್ವ

ನಮ್ಮ ಕೆಲವು ಬುಜೀಗಳು ಹೋಮ-ಹವನ-ಯಜ್ಞಗಳನ್ನು ಮಾಡುವುದು ವ್ಯರ್ಥ,ಆ ಹಣವನ್ನು ಬಡವರಿಗೆ ದಾನಮಾಡಬೇಕೆಂದು ಹೇಳುತ್ತಾರೆ.ಬಡವರಿಗೆ ದಾನ ಮಾಡುವ ಉದ್ದೇಶವಿದ್ದರೆ ಅದನ್ನು ಮಾಡೋಣ.ಅದಕ್ಕಾಗಿ ಹೋಮ-ಹವನಗಳನ್ನು ನಿಷೇಧಿಸಿ ದಾನ ಮಾಡಬೇಕೆಂಬ ನಿಯಮವೇನಿಲ್ಲ..!! ನಮ್ಮ ಸಂಸ್ಕೃತಿಯಲ್ಲಿ ಹೋಮ-ಹವನಗಳ ಮಹತ್ವವೇನು..?ಏನಕ್ಕಾಗಿ ಅವುಗಳನ್ನು ಮಾಡಬೇಕೆಂದು ಅಗತ್ಯ ದಾಖಲೆಗಳನ್ನು ನೀಡಿ ಸವಿವರವಾಗಿ ತಿಳಿಸುತ್ತಿದ್ದೇನೆ.ಈ ಲೇಖನವನ್ನು ಓದಿ. ವೇದವೆಂದರೆ ಜ್ಞಾನ.ವೇದಗಳನ್ನು ನಮ್ಮ ಸಂಸ್ಕೃತಿಯ ಆಧಾರವೆಂದು ಪರಿಗಣಿಸಿದವರು ನಾವು.ನಮ್ಮ ಆಚರಣೆ-ವಿಚಾರದಲ್ಲೇನಾದರೂ ಅನುಮಾನ ಬಂದರೆ "ವೇದವಾಕ್ಯಂ ಪ್ರಮಾಣಂ" ಎಂದು ಒಪ್ಪಿಕೊಳ್ಳುವವರು.ವೇದವಾಕ್ಯವೆಂದರೆ ಅದು ಸರ್ವೋಚ್ಛ ನ್ಯಾಯಾಲಯದ ತೀರ್ಪು.ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.ಆ ವೇದಗಳು ಹೋಮ-ಹವನಗಳ ಮಹತ್ವವನ್ನು ಹೀಗೆ ತಿಳಿಸುತ್ತವೆ. "ಅಗ್ನಿಮೀಳೆ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ ಹೋತಾರಂ ರತ್ನಧಾತಮಮ್" "ಯಜ್ಞೋ ಹಿ ಶ್ರೇಷ್ಟತಮಂ ಕರ್ಮ" "ಅಗ್ನಿಂ ದೂತಂ ಪುರೋ ದಧೇ ಹವ್ಯವಾಹಮುಪ ಬ್ರುಹೇ" "ಪ್ರಾತಃ ಪ್ರಾತಃ ಗೃಹಪತಿರ್ನೋ ಅಗ್ನಿಃ,ಸಾಯಂ ಸಾಯಂ ಸೌಮನಸ್ಯ ದಾತಾ" "ತಂ ಯಜ್ಞಂ ಬರ್ಹಿಷಿಃ ಪ್ರೌಕ್ಷನ್ ಪುರುಷಂ ಜಾತಮಗ್ರತಃ" ನೆನಪಿಡಿ..ಇವು ಕೇವಲ ಉದಾಹರಣೆಗಳು.ಹುಡುಕುತ್ತಾ ಹೋದರೆ ನಮ್ಮ ವೇದಗಳಲ್ಲಿ ಇಂತಹ ಸಾವಿರಾರು ಯಜ್ಞಕ್ಕೆ ಸಂಬಂಧಿಸಿದ ಉದಾಹರಣೆಗಳು ಸಿಗಬಹುದು. "ಈ ಪ್ರಪಂಚವನ್ನು ಸೃಷ್ಟಿಸಿ ಭಗವಂತ ಯಜ್ಞವನ್ನು ಪ್ರಾರಂಭಿಸಿದನಂತೇ ಹಾಗೇ ನಾನೂ ಸಹ ಯಜ್ಞ ಮಾಡುತ್ತೇನೆ" "ಈ ಯಜ್ಞಗಳಿಂದ ಸಂಪತ್ತು ಸಿಗುತ್ತದೆ,ಹಾಗಾಗಿ ಯಜ್ಞಗಳನ್ನು ತಪ್ಪದೇ ಮಾಡು" "ನಾನು ಯಜ್ಞಕುಂಡದಲ್ಲಿ ನನ್ನೆಲ್ಲಾ ಪಾಪ-ದುಃಖಗಳನ್ನು ಸಮರ್ಪಿಸುತ್ತಿದ್ದೇನೆ" "ಈ ಅಗ್ನಿಯ ಜ್ವಾಲೆಯಂತೇ ನನ್ನ ಯಶಸ್ಸೂ ಉನ್ನತ ಸ್ಥಾನಕ್ಕೇರುತ್ತಿರಲಿ" "ಹೇ ಅಗ್ನಿ ! ಜಗತ್ತಿನಲ್ಲಿರುವ ಎಲ್ಲಾ ರೋಗಗಳನ್ನು ನಿವಾರಿಸು" ಹೀಗೆ ಯಜ್ಞ-ಅಗ್ನಿಗಳನ್ನು ಪ್ರಾರ್ಥಿಸಿಕೊಳ್ಳುವ ಅನೇಕ ಉದಾಹರಣೆಗಳು ವೇದಗಳಲ್ಲಿವೆ. ಆದ್ದರಿಂದ ಜನ್ಮದಿನ,ವ್ಯವಹಾರ ಪ್ರಾರಂಭದ ದಿನ,ಮದುವೆ,ಮುಂಜಿ,ದುಃಖದಲ್ಲಿ,ಖುಷಿಯಲ್ಲಿ ಆಜೀವನಪರ್ಯಂತ ಹೋಮವನ್ನು ಆಚರಿಸುತ್ತಲೇ ಇರುತ್ತೇವೆ.ಯಜ್ಞವನ್ನು ಮಾಡುವುದರಿಂದ ಭಗವಂತನ ಸನ್ನಿಧಿ ಪ್ರಾಪ್ತಿಯಾಗುತ್ತದೆ.ಪಾಪಕರ್ಮಗಳು ದೂರವಾಗುತ್ತವೆಯೆಂದು ನಂಬಿದ್ದೇವೆ.ಹೋಮ ಮಾಡುವಾಗಿನ ಭಕ್ತಿ,ಶ್ರದ್ಧೆಗಳಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ.ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ.ಈ ಮನಶ್ಶಾಂತಿ ಮನಸ್ಸಿನ ಅನೇಕ ಒತ್ತಡಗಳನ್ನು ಕಡಿಮೆಮಾಡುತ್ತದೆ. ಈ ನಂಬಿಕೆಗಳಿಗೆ ವೇದಗಳು ಪುಷ್ಟೀಕರಣ ನೀಡಿವೆ.ವೇದವಾಕ್ಯವನ್ನು ಪಾಲಿಸುವುದು ನಮ್ಮ ಕರ್ತವ್ಯ. ಕೇವಲ ಹೋಮಮಾಡಿಸಿದ ಯಜಮಾನನಿಗಷ್ಟೇ ಹೋಮದ ಫಲ ಸಿಗುವುದಿಲ್ಲ.ಪ್ರಕೃತಿಗೂ ಹೋಮದ ಫಲ ಸಿಗುತ್ತದೆ.ಹೇಗೆಂದು ಕೇಳುತ್ತೀರ..? ಹವನದಲ್ಲಿ ಉಪಯೋಗಿಸುವ ಸಾಮಗ್ರಿಗಳು (ಇವು ಶುದ್ಧವಾಗಿ,ಪ್ರಕೃತಿದತ್ತವಾಗಿರಬೇಕು) ಅಗ್ನಿಯಲ್ಲಿ ಆಹುತಿ ಬಿದ್ದು ಅದರಿಂದ ಬರುವ ಧೂಮ(ಹೊಗೆ) ಸರ್ವತ್ರ ವ್ಯಾಪಕವಾಗುತ್ತದೆ.ಈ ಧೂಮದಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ.ಪ್ರಕೃತಿಯಲ್ಲಿರುವ ರೋಗವನ್ನು ಹಬ್ಬಿಸುವ ವಿಷಾಣುಗಳನ್ನು ಇವು ನಾಶಪಡಿಸುತ್ತವೆ.ಇದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತುಪಟ್ಟಿದೆ. ವಿಶ್ವ ಸ್ವಾಸ್ಥ್ಯ ಸಂಘಟನೆಯ(WHO) ಪ್ರಕಾರ ಪ್ರತಿವರ್ಷ ವಿಶ್ವದಲ್ಲಿ ಸಂಭವಿಸುವ ೫೭ ಮಿಲಿಯನ್ ಸಾವುಗಳಲ್ಲಿ ಶೇಕಡ ೨೫ ಸಾವುಗಳಿಗೆ ಇಂತಹ ಬ್ಯಾಕ್ಟೀರಿಯಾಗಳೇ ಕಾರಣ. ಒಂದು ವಿಷಯ ನೆನಪಿಡಿ. ಹೋಮದಲ್ಲಿ ಬಳಸುವ ಪ್ರತಿವಸ್ತುವೂ ಪರಿಶುದ್ಧ ಹಾಗೂ ಪ್ರಾಕೃತಿಕವಾಗಿರಬೇಕು.ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸಿರಬಾರದು.ಆಗಲೇ ಹೋಮದ ಪರಿಣಾಮ ಚೆನ್ನಾಗಿರುತ್ತದೆ. ಹೋಮ-ಹವನಗಳಿಂದ ಅನೇಕ ರೋಗರುಜಿನಗಳೂ ನಿಯಂತ್ರಣಕ್ಕೆ ಬರುತ್ತವೆಯೆಂದು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ.. ೧.ಶೀತ ಹಾಗೂ ತಲೆನೋವು ೨.ಟಿ.ಬಿ (ಕ್ಷಯರೋಗ) ೩.ಮಾನಸಿಕ ಒತ್ತಡ ಹಾಗೂ ಖಿನ್ನತೆ ೪.ಚರ್ಮಸಂಬಂಧಿ ಕಾಯಿಲೆಗಳು ೫.ಮೂತ್ರ ಸಂಬಂಧಿರೋಗಗಳು ೬.ಶ್ವಾಸಸಂಬಂಧಿ ರೋಗಗಳು,ಅಸ್ಥಮಾ ಇತರೆ ೭.ಕೆಲವು ಅಲರ್ಜಿ ಸಮಸ್ಯೆಗಳು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇನ್ನೂ ಒಂದು ಅಚ್ಚರಿಯೇನೆಂದರೆ ಸುಮಾರು ನೂರಕ್ಕೂ ಹೆಚ್ಚಿನ ರೋಗಗಳನ್ನು "ಯಜ್ಞ ಥೆರಪಿ" ಎಂಬ ವೈದ್ಯಕೀಯ ವಿಧಾನದಿಂದ ಗುಣಪಡಿಸಬಹುದೆಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ."ಯಜ್ಞ ಥೆರಪಿ" ಎಂಬ ಹೊಸವಿಧಾನ ಪಾಶ್ಚಾತ್ಯ ದೇಶಗಳಲ್ಲಿ ಬೆಳೆಯುತ್ತಿದೆ. ಭಾರತೀಯರಾದ ನಾವು ಹೆಮ್ಮೆ ಪಡುವಂತಹ ವಿಷಯವಿದು.ಇಂತಹ ಚಮತ್ಕಾರಕ,ರೋಗನಾಶಕ,ಬಲವರ್ಧಕ ಅನ್ವೇಷಣೆ ನಮ್ಮ ಪೂರ್ವಜರದು.ಹೋಮಹವನಗಳನ್ನು ಪ್ರತಿಪಾದಿಸಿದ್ದು ನಮ್ಮ ವೇದಗಳು.ಈ ಸಂಸ್ಕೃತಿಯನ್ನು ಉಳಿಸಿ,ಬೆಳೆಸಿಕೊಂಡು ಹೋಗಬೇಕಾದ್ದು ನಮ್ಮ ಪರಮಕರ್ತವ್ಯ. ಯಜ್ಞ ಹೋಮಗಳು ಪುರೋಹಿತರು ಉದರಪೋಷಣೆಗಾಗಿ ಮಾಡಿಕೊಂಡಿದ್ದು ಎಂಬ ಮನೋಭಾವ ಬದಲಾಗಲಿ. ನಮ್ಮ ಸಂಸ್ಕೃತಿ,ಆಚರಣೆಯ ಬಗ್ಗೆ ಅಭಿಮಾನವಿರಲಿ.ನಮ್ಮ ಸನಾತನ ಆಚರಣೆಗಳನ್ನು ಪರಿಪಾಲಿಸುವ,ಪೋಷಿಸುವ ಕಾಯಕ ನಮ್ಮದಾಗಲಿ. ಲೋಕಾಃ ಸಮಸ್ತಾಃ ಸುಖಿನೋ ಭವಂತು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...