ಮಸಾಜ್ ಗೆ ಯಾವ ಎಣ್ಣೆ ಸೂಕ್ತ ಗೊತ್ತಾ?
ದೇಹಕ್ಕೆ ತುಂಬಾ ದಣಿವು ಉಂಟಾದಾಗ ಮಸಾಜ್ ಮಾಡಿದರೆ ಸ್ವಲ್ಪ ಸಮಧಾನವಾಗುವುದು. ಅಲ್ಲದೆ ಮೈಕೈ ನೋವು ಕಡಿಮೆಯಾಗಿ ದೇಹಕ್ಕೆ ಹೊಸ ಚೈತನ್ಯ ದೊರೆಯುತ್ತದೆ. ತ್ವಚೆ ಕೂಡ ಕಾಂತಿಯನ್ನು ಪಡೆಯುತ್ತದೆ. ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದರೂ ಎಣ್ಣೆ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಮಸಾಜ್ ಮಾಡಿಸಲು ಮಸಾಜ್ ಸೆಂಟರ್ ಗೆ ಹೋಗಬೇಕಾಗಿಲ್ಲ, ಮಸಾಜ್ ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಮಸಾಜ್ ಮಾಡಲು ಈ ಕೆಳಗಿನ ಎಣ್ಣೆಗಳು ತುಂಬಾ ಸಹಕಾರಿಯಾಗಿದೆ.
1. ಬಾದಾಮಿ ಎಣ್ಣೆ: ಮಸಾಜ್ ಎಣ್ಣೆಗಳಲ್ಲಿ ಬಾದಾಮಿ ಎಣ್ಣೆಗೆ ವಿಶೇಷ ಸ್ಥಾನವಿದೆ. ಈ ಎಣ್ಣೆಯನ್ನು ಚರ್ಮ ಬೇಗನೆ ಹೀರಿಕೊಳ್ಳುತ್ತದೆ. ವಿಟಮಿನ್ ಇ ಎಣ್ಣೆಯೊಂದಿಗೆ ಈ ಎಣ್ಣೆಯನ್ನು ಬೆರೆಸಿ ಹಚ್ಚಿಕೊಂಡರೆ ಚರ್ಮಕ್ಕೆ ಅವಶ್ಯಕವಿರುವ ಪೋಷಕಾಂಶವನ್ನು ಒದಗಿಸಿದಂತೆ.
* ಈ ಎಣ್ಣೆಯನ್ನು ಹಚ್ಚಿ ಅರ್ಧ ಗಂಟೆ ನಂತರ ಸ್ನಾನ ಮಾಡುವುದರಿಂದ ಕೂದಲಿಗಷ್ಟೇ ಅಲ್ಲ , ಮೆದುಳಿನ ಸಾಮರ್ಥ್ಯ ಕೂಡ ಹೆಚ್ಚಿಸುತ್ತದೆ. ಬಾದಾಮಿ ತೈಲವು ಚೈತನ್ಯ ಮತ್ತು ವೀರ್ಯವೃದ್ಧಿ ಮಾಡುತ್ತದೆ.
* ಈ ಎಣ್ಣೆ ಹಚ್ಚಿದರೆ ಎಣ್ಣೆಯು ಮಾನಸಿಕ ಒತ್ತಡ ನಿವಾರಣೆ, ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ, ನರ ಸಂಬಂಧಿತ ನೋವನ್ನು ನಿವಾರಿಸುತ್ತದೆ.
* ಕೂದಲಿನ ಪೋಷಣೆಗೆ, ತಲೆಹೊಟ್ಟಿನ ನಿವಾರಣೆಗೆ ಮತ್ತು ಕೂದಲಿನ ಹೊಳಪನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
2. ಸೂರ್ಯಕಾಂತಿ ಎಣ್ಣೆ: ಇದರಲ್ಲಿನ ಲೀನೊಲೀಕ್ ಆಸಿಡ್, ಪಾಲ್ಮಿಟಿಕ್, ಸ್ಟೀರಿಯಕ್ ಆಸಿಡ್ ಅಂಶವಿರುವುದರಿಂದ ಇದರಿಂದ ಮಸಾಜ್ ಮಾಡಿದರೆ ತ್ವಚೆಯನ್ನು ತಾಜಾತನದಿಂದ ಇರಿಸುತ್ತದೆ. ಇದರ ಜೊತೆ ವಿಟಮಿನ್ ಇ ಮತ್ತು ಅರಿಶಿನ ಬೆರೆಸಿ ಮಸಾಜ್ ಮಾಡಿಕೊಂಡರೆ ಇನ್ನೂ ಉತ್ತಮ ಫಲಿತಾಂಶ ಪಡೆಯಬಹುದು.
3. ಸಾಸಿವೆ ಎಣ್ಣೆ: ಇದರಲ್ಲಿರುವ ಔಷಧೀಯ ಗುಣವಿರುವುದರಿಂದ ಮೂಳೆಗಳಿಗೆ ಒಳ್ಳೆಯದು. ಈ ಎಣ್ಣೆಯಿದ ನಿತ್ಯವೂ ಮಸಾಜ್ ಮಾಡಿಕೊಂಡರೆ ದುರ್ಬಲ ಮೂಳೆ ಸುಧಾರಿಸುತ್ತದೆ ಮತ್ತು ರಕ್ತಸಂಚಲನವೂ ಚೆನ್ನಾಗಿರುತ್ತದೆ.
4. ಕೊಬ್ಬರಿ ಎಣ್ಣೆ: ಈ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ತ್ವಚೆಯ ಹೊಳಪು ಹೆಚ್ಚಗುತ್ತದೆ. ಚಿಕ್ಕ ಪುಟ್ಟ ಗಾಯಗಳಿದ್ದರೆ ಬೇಗನೆ ಒಣಗುತ್ತದೆ. ಕೂದಲಿನ ಪೋಷಣೆಗೆ ತೆಂಗಿನ ಎಣ್ಣೆ ಒಳ್ಳೆಯದು.
5. ಜೋಜೋಬಾ ಎಣ್ಣೆ: ಬೆನ್ನು ನೋವಿನಿಂದ ಬಳಲುತ್ತಿದ್ದವರಿಗೆ ಜೋಜೋಬಾ ಎಣ್ಣೆಯ ಮಸಾಜ್ ಮಾಡಿದರೆ ಆರಾಮ ಅನಿಸುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶವಿರುವುದರಿಂದ ಚರ್ಮದ ಅನೇಕ ಕಾಯಿಲೆಗಳನ್ನು ದೂರವಿರಿಸುತ್ತದೆ.
6. ನೀಲಗಿರಿ ಎಣ್ಣೆ: ಚರ್ಮಕ್ಕೆ ಬೇಗ ಸೇರಿಕೊಳ್ಳುವ ವಿಶೇಷ ಗುಣ ಹೊಂದಿರುವ ಈ ತೈಲ ದೇಹಕ್ಕೆ ಉತ್ತಮ ಮಸಾಜ್ ಎಣ್ಣೆ, ಏಕೆಂದರೆ ಇದನ್ನು ಹಚ್ಚಿದರೆ ಚರ್ಮವು ಈ ಎಣ್ಣೆಯನ್ನು ಬೇಗನೆ ಹೀರಿಕೊಳ್ಳುವುದರಿಂದ ಇದನ್ನು ಮೈ ಕೈನೋವು ನಿವಾರಣೆಗೆ ಬಳಸಬಹುದು. ಅಲ್ಲದೆ ಇದನ್ನು ಮೈಗೆ ಹಚ್ಚಿದರೆ ತುರಿಕೆ, ಕಜ್ಜಿ, ಗುಳ್ಳೆ, ಕೀವು ಮುಂತಾದ ಚರ್ಮ ಮತ್ತು ದೇಹ ಸಂಬಂಧಿ ರೋಗಗಳು ಬೇಗನೆ ಗುಣಮುಖವಾಗುತ್ತದೆ. ಮುಲ್ತಾನಿ ಮಿಟ್ಟಿ ಅಥವಾ ಕಡಲೆಹಿಟ್ಟಿನೊಂದಿಗೆ ನೀಲಗಿರಿ ತೈಲ ಬೆರೆಸಿ ಸ್ಕ್ರಬ್ ನಂತೆ ತಯಾರಿಸಿ ದೇಹಕ್ಕೆ ಮಸಾಜ್ ಮಾಡಬಹುದು. ಹೆಚ್ಚು ಅಂಟಿಲ್ಲದ ಈ ಎಣ್ಣೆ ತ್ವಚೆಯ ಕಾಂತಿಯನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ.
7. ಆಲೀವ್ ಎಣ್ಣೆ: ಆಲೀವ್ ಎಣ್ಣೆಯಿಂದ ಮಸಾಜ್ ಮಾಡಿದರೆ ಕೂಡ ಉತ್ತಮ ರೀತಿಯ ಪ್ರಯೋಜನವನ್ನು ಪಡೆಯಬಹುದು. ಆಲೀವ್ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಮಿಶ್ರ ಮಾಡಿ ಮಸಾಜ್ ಗೆ ಬಳಸಬಹುದು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments