ಅಯ್ಯೋ ನಿನಗೆ ಕಾಳ ಸರ್ಪ ದೋಷವಿದೆ ಕಣಯ್ಯಾ ನಿನ್ ಕಥೆ ಮುಗೀತು ಅಂತ ಹೇಳುವ ಜ್ಯೋತಿಷ್ಯರೂ ಇದ್ದಾರೆ.ಇದನ್ನೇ ನನ್ನ ಬಳಿ ಜಾತಕ ತೋರಿಸಲಿಕ್ಕೆ ಬಂದ ಜನರೇ ತಮ್ಮ ಅನುಭವಗಳನ್ನು ಹೇಳಿಕೊಂಡದ್ದಿದೆ. ಒಂದಂತೂ ನೆನಪಿಟ್ಟುಕೊಳ್ಳಿ.ಅತಿಯಾದ ಒಳ್ಳೆಯ ಗುಣವೂ ಒಳ್ಳೆಯದಲ್ಲ.ಅತಿಯಾದ ದುರ್ಗುಣದ ಬಗ್ಗೆ ಹೇಳಬೇಕಾಗಿಲ್ಲ.
ಆದರೂ ಒಳ್ಳೆಯದರೊಳಗೆ ಕೆಟ್ಟದ್ದೂ ಇರಬಹುದು,ಕೆಟ್ಟದರ ಒಳಗೆ ಒಳ್ಳೆಯದ್ದೂ ಇರಬಾರದೆಂದೇನಿಲ್ಲ. ಒಟ್ಟಿನಲ್ಲಿ ನಮ್ಮ mentality ಯನ್ನು how to applying ಎಂದು ತಿಳಿದುಕೊಂಡರೆ ಜೀವನ ಸುಗಮ. ಹಾಗೆಯೇ ಕಾಲ ಸರ್ಪ ಸುಯೋಗವೂ ಹೌದು ಅತಿಯಾದರೆ ದುರ್ಯೋಗವೂ ಹೌದು. ಕಾಲ ಎಂದರೆ ಕತ್ತಲೆ.ಇದನ್ನು 'ಕಾಳ 'ಎಂದೂ ಕರೆದಿದ್ದಾರೆ.
ಕುಂಡಲಿಯಲ್ಲಿ 180°ಅಂತರದಲ್ಲಿ ಲಗ್ನ ಮತ್ತು ಗ್ರಹರಿಲ್ಲದಿದ್ದರೆ ಅದು ಕಾಲ ಸರ್ಪವಾಗುತ್ತದೆ.ಇಲ್ಲಿ ಸರ್ಪ ಎಂದರ ನಾಗರ ಹಾವು ಎಂಬ ಅರ್ಥವಲ್ಲ. ಸರ್ಪ ಎಂದರೆ ವಕ್ರಕಿರಣಗಳು.ಅಂದರೆ ಭೂಮಿಗೆ ಬರುವ ಎಲ್ಲಾ ಕಿರಣಗಳು ಸರಳರೇಖೆಯಲ್ಲಿ ಬರುವುದಿಲ್ಲ.ಅದು ~ ಈ ರೂಪದಲ್ಲೇ ಬರುವುದು.ಯಾಕೆಂದರೆ ಗ್ರಹರಿಂದ ಕೋಟಿ ಮೈಲುದೂರದ ಭೂಮಿಗೆ ಬರಬೇಕಾದರೆ ಭೂಮಿಯ ವಾತಾವರಣದ layers ಗಳಲ್ಲಿರುವ ಸೂಕ್ಚ್ಮರೂಪದ ಖನಿಜಗಳು,ಅನಿಲಗಳಿಂದ ಪ್ರತಿಫಲಿಸಿಕೊಂಡು ಬಂದಾಗ ಇದು ವಕ್ರವಾಗುತ್ತದೆ. ಕುಂಡಲಿಯಲ್ಲಿ.ಕೇತುವಿನಿಂದ ರಾಹುವಿಗೆ ಅಥವಾ ರಾಹುವಿನಿಂದ ಕೇತುವಿನವರೆಗೆ ಗ್ರಹ ಶೂನ್ಯವಿದ್ದಾಗ ಕಾಳಸರ್ಪವಾಗುತ್ತದೆ. ಇದು ಯೋಗವೂ ಹೌದು,ದೋಷವೂ ಹೌದು.
ಈ ರಾಹು ಕೇತುಗಳು ಯಾವ ಭಾವ,ಯಾವ ರಾಶಿ,ಯಾವ ನಕ್ಷತ್ರ, ಯಾವ ಅಂಶ, ಎಷ್ಟು ಅಂಶಗಳು ಇತ್ಯಾದಿ ಆಧಾರದಲ್ಲಿ ಫಲಗಳು ಉತ್ಪತ್ತಿಯಾಗುತ್ತದೆ.ಒಟ್ಟಿನಲ್ಲಿ ಕಾಳಸರ್ಪ ಯೋಗ ಇರುವವರು revolutionary minded ವ್ಯಕ್ತಿಗಳಾಗಿ ಇರುತ್ತಾರೆ.ಆದರೆ ಈ ಕ್ರಾಂತಿಕಾರಕತ್ವದ ರೂಪಗಳು ಅನೇಕ. ಅದು ಮೇಲೆ ಹೇಳಿದ ಸ್ಥಿತಿ ಆಧಾರಿತವಾಗಿರುತ್ತದೆ. ಯಾರೋ ಹನ್ನೆರಡು ರೂಪದ ಕಾಳಸರ್ಪ ದೋಷಗಳಿವೆ ಎಂದರು.ಅದಕ್ಕೆ ಹನ್ನೆರಡು ಹೆಸರುಗಳನ್ನೂ ನೀಡಿ ಕಾಲಸರ್ಪದ ಬಗ್ಗೆ ಬಹಳ ಗಮನ ಹರಿಸುವಂತೆಯೂ ಮಾಡಿದರು. ಹಾಗೆ ಹೆಸರಿಸುವುದಾದರೆ 72ಸಾವಿರ ಅಂಶ ಬೇಧಗಳೂ ಇವೆ.ಅದನ್ನೂ ಹೆಸರಿಸಬಹುದು. ಇದಕ್ಕೆ ವೈದಿಕದಲ್ಲಿ ಕಾಳಸರ್ಪ ಹೋಮ,ಆಶ್ಲೇಷಾಬಲಿ ಗಳನ್ನು ಪರಿಹಾರವಾಗಿ ಹೇಳಿದೆ. ರಾಹು ಅಭಿಮಾನಿ ದೇವರು ನಾಗಸ್ವರೂಪಿ ಸಂಕರ್ಷಣ. ಹಾಗಾಗಿ ನಾಗ,ಸುಬ್ರಹ್ಮಣ್ಯ ದೇವರ ದರ್ಶನ,ಸೇವೆಗಳಿಂದ ಪರಿಹಾರವಿದೆ.ಸುಬ್ರಹ್ಮಣ್ಯ ದೇವರಿಗೆ ಉರುಳುಸೇವೆ( ದೇಹ ದಂಡನೆ) ಮಾಡುವುದೂ ಪರಿಣಾಮಕಾರಿಯಾಗುತ್ತದೆ. ಇದು ಯಾವುದೂ ಮಾಡುವ ಪದ್ಧತಿ ಕೆಲ ಕೋಮಿನವರಿಗೆ ಅಸಾಧ್ಯವಾದರೆ ಅಂತವರು ರಾಹು ಸಂಬಂಧಿತ ಆಹಾರ ಅಂದರೆ ಉದ್ದು ಇತ್ಯಾದಿಗಳನ್ನು ಕಡಿಮೆ ಮಾಡಬೇಕು. ಶರೀರದಲ್ಲಿ ಸೀಸದ ಪ್ರಭಾವ ಜಾಸ್ತಿಯಾಗದಂತೆ ನಿಯಂತ್ರಿಸಿಕೊಳ್ಳಬೇಕು.ಮತ್ತು ಆಗಾಗ ಪಿಕ್ನಿಕ್ ಮುಂತಾದ ಪ್ರೋಗ್ರಾಂ ಮಾಡಿಕೊಂಡು ಮನೋ ನಿಯಂತ್ರಣ ಮಾಡಿಕೊಳ್ಳಬೇಕು.ಯಾವ ಭಾವಕ್ಕೆ ನಿಯಂತ್ರಣ ಮಾಡಿಕೊಳ್ಳಬೇಕು ಎಂದು ತಜ್ಞರಿಂದ ಸಲಹೆ ಪಡೆದು ಕೊಂಡರೆ ಉತ್ತಮ .
ಹಾಗಾಗಿ ಕಾಳಸರ್ಪ ಇರುವವರು ಭಯಪಡಬೇಕಾಗಿಲ್ಲ.ತನ್ನ ಯಾವ ಗುಣವು ಅತಿಯಾಗುತ್ತದೋ ಅದರ ನಿಯಂತ್ರಣ ಮಾಡಿಕೊಂಡಾಗ ಅಪಾಯವಿಲ್ಲ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments