Skip to main content

ಬೆನ್ನು ನೋವಿಗೆ ಗುಡ್ ಬೈ ಹೇಳಲು ಈ ರೀತಿ ಮಾಡಿ!

ಬೆನ್ನು ನೋವಿಗೆ ಗುಡ್ ಬೈ ಹೇಳಲು ಈ ರೀತಿ ಮಾಡಿ! ಈಗೆಲ್ಲಾ ಬೆನ್ನು ನೋವು ಚಿಕ್ಕ ಪ್ರಾಯದಲ್ಲಿಯೇ ಪ್ರಾರಭವಾಗುತ್ತದೆ. ಹೀಗೆ ಚಿಕ್ಕದಾಗಿ ಬೆನ್ನು ನೋವು ಕಾಣಿಸಿಕೊಂಡರೆ ಸ್ವಲ್ಪ ಮೂವ್ ಅಥವಾ ಅಮೃತಾಂಜನ ಹಚ್ಚಿ ಸುಮ್ಮನೆಯಾಗಿ ಬಿಡುತ್ತೇವೆ. ಸಹಿಸಲು ಅಸಾಧ್ಯವಾದ ಬೆನ್ನುನೋವು ಕಾಣಿಸಿಕೊಂಡಾಗ ವೈದ್ಯರನ್ನು ಕಾಣಲು ಹೋಗುತ್ತೇವೆ. ಆರೋಗ್ಯಕರವಲ್ಲದ ಜೀವನ ಶೈಲಿ, ತುಂಬಾ ಹೊತ್ತು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದು, ವ್ಯಾಯಾಮ ಮಾಡದಿರುವುದು , ಮಾನಸಿಕ ಒತ್ತಡ ಈ ಎಲ್ಲಾ ಕಾರಣಗಳಿದ ಬೆನ್ನು ನೋವು ಅಧಿಕವಾಗುತ್ತದೆ. ಈ ರೀತಿ ಬೆನ್ನು ನೋವು ಕಾಣಿಸಿಕೊಂಡರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಸಾಕು, ಬೆನ್ನು ನೋವು ನಿವಾರಣೆಯಾಗುವುದು. 1. ವಿಟಮಿನ್ ಡಿ ಅಧಿಕ ಸೇವಿಸಿ: ವಿಟಮಿನ್ ಡಿ ಕೊರತೆ ಉಂಟಾದರೆ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ವಿಟಮಿನ್ ಡಿ ಇರುವ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಕು. ಅಣಬೆ, ಕಾಡ್ ಲಿವರ್, ಮೊಟ್ಟೆ, ಸೊಪ್ಪು ಮತ್ತು ಮೀನಿನಲ್ಲಿ ವಿಟಮಿನ್ ಡಿ ಹೆಚ್ಚಾಗಿರುತ್ತದೆ. 2. ಮ್ಯೂಸಿಕ್ ಥೆರಪಿ: ಒಳ್ಳೆಯ ಸಂಗಿತವನ್ನು ಕೇಳುತ್ತಿದ್ದರೆ ಒತ್ತಡ ಕಡಿಮೆಯಾಗುತ್ತದೆ. ಒತ್ತಡ ಕಡಿಮೆಯಾದರೆ ಬೆನ್ನು ನೋವು ಕೂಡ ಕಡಿಮೆಯಾಗುವುದು. ಸಂಗೀತವನ್ನು ಕೇಳುವುದರಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಹೆಚ್ಚಿನ ಕಾಯಿಲೆಗಳು ಒತ್ತಡದಿಂದ ಬರುತ್ತದೆ. ಸಂಗೀತವು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುವುದು. 3. ಪ್ರಾಣಾಯಾಮ: ಪ್ರಾಣಾಯಾಮ ಮಾಡುವುದರಿಂದ ಕೂಡ ಬೆನ್ನುನೋವಿಗೆ ಪರಿಹಾರವನ್ನು ಕಂಡು ಹಿಡಿಯಬಹುದು. ಪ್ರಾಣಾಯಾಮವನ್ನು ಮನೆಯಲ್ಲಿಯೇ ಮಾಡಬಹುದಾಗಿದ್ದು ಕೇವಲ ಬೆನ್ನು ನೋವು ಮಾತ್ರ ಕಡಿಮೆ ಮಾಡುವುದಲ್ಲದೆ, ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ, ಇದನ್ನು ಮಾಡಿದ್ದೇ ಆದರೆ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದು. 4. ಮಸಾಜ್: ಬೆನ್ನು ನೋವು ಕಾಣಿಸಿಕೊಂಡರೆ ಮಸಾಜ್ ಥೆರಪಿ ಮಾಡಿಸಿಕೊಂಡರೆ ಗುಣವಾಗುತ್ತದೆ. ಈ ರೀತಿಯ ಥೆರಪಿಯನ್ನು ಗರ್ಭಿಯಾಗಿರುವಾಗ ಬೆನ್ನು ನೋವು ಕಡಿಮೆ ಮಾಡಲು ಬಳಸುತ್ತಾರೆ. * ಬೆಳ್ಳುಳ್ಳಿ ಎಣ್ಣೆಯನ್ನು ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು. 5. ಕೂರುವ ಭಂಗಿ: * ಬೆನ್ನಿಗೆ ಹೊಂದಿಕೊಳ್ಳುವಂತೆ ಕುರ್ಚಿಗಳನ್ನು ಉಪಯೋಗಿಸಬೇಕು. * ಗಟ್ಟಿಯಾದ ಜಮಖಾನ ಅಥವಾ ಚಾಪೆಯ ಮೇಲೆ ಮಲಗುವ ಅಭ್ಯಾಸ ಮಾಡಬೇಕು. *ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. * ಕುಳಿತುಕೊಳ್ಳುವ ಮತ್ತು ನಿಲ್ಲುವ ಭಂಗಿಯನ್ನು ಕ್ರಮವಾಗಿ ಅಭ್ಯಾಸ ಮಾಡಬೇಕು. * ಹೆಚ್ಚು ಕಾಲ ನಿಲ್ಲುವುದನ್ನು ತಪ್ಪಿಸಬೇಕು. 6.ಆಹಾರ: ಲಿಂಬೆಯಲ್ಲಿರುವ 'ಸಿ' ಸತ್ವ, ಬೆಳ್ಳುಳ್ಳಿ, ಆಲೂಗೆಡ್ಡೆ, ಟೊಮೆಟೋ, ಕ್ಯಾರೆಟ್, ಸೌತೆಕಾಯಿ, ಮೂಲಂಗಿ, ಹಣ್ಣುಗಳ ಸಲಾಡ್‌ಗಳನ್ನು ಹೆಚ್ಚಾಗಿ ಬಳಸಬೇಕು. ಹೂಕೋಸು, ಎಲೆ ಕೋಸು ಬಸಳೆ, ಸೇವಿಸಿದರೆ ಒಳ್ಳೆಯದು. ಬಾಳೆಹಣ್ಣನ್ನು ಒಂದು ತಿಂದರೆ ಒಳ್ಳೆಯದು. ಹೆಚ್ಚು ತಿನ್ನಲು ಹೋಗಬಾರದು. ದೇಹದ ತೂಕ ಅದರಲ್ಲೂ ಬೆನ್ನಿನ ಬೊಜ್ಜು ಕಡಿಮೆ ಮಾಡಲು ವ್ಯಾಯಾಮ ಮಾಡಬೇಕು. ಬೆನ್ನು ನೋವನ್ನು ಹೊಂದಿರುವ ವ್ಯಕ್ತಿಯು ಕೊಬ್ಬು ಇರುವ ಪದಾರ್ಥಗಳು, ಖಾರ ಪದಾರ್ಥಗಳು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು, ಮೊಸರು, ಸಿಹಿತಿಂಡಿಗಳು, ಸಕ್ಕರೆ, ಉಪ್ಪಿನಕಾಯಿ ಟೀ ಕಾಫಿ ಮೊದಲಾದವುಗಳನ್ನು ತಿನ್ನಬಾರದು. 7. ಮಧ್ಯ ವಯಸ್ಸು ದಾಟಿದ ಮಹಿಳೆಯರಿಗೆ ಬೆನ್ನು ನೋವು ಹೆಚ್ಚಾಗಿ ಕಂಡು ಬರುತ್ತದೆ. ಈ ರೀತಿ ಬೆನ್ನು ನೋವು ಬರದಂತೆ ತಡೆಯಲು ಈ ಕೆಳಗಿನ ಸಲಹೆ ಪಾಲಿಸ ಬಹುದು. 1. ಕ್ಯಾಲ್ಸಿಯಂ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. 2. ಹೆರಿಗೆಯಾದಾಗ ಅಧಿಕ ಕ್ಯಾಲ್ಸಿಯಂ ಇರುವ ಆಹಾರಗಳನ್ನು ಸೇವಿಸಬೇಕು. 3. ತುಂಬಾ ಹೊತ್ತು ಕೂತು ಕೆಲಸ ಮಾಡುವಾಗ ಕೂರುವ ಭಂಗಿ ಸರಿಯಾಗಿದ್ದರೆ (ಬೆನ್ನಿಗೆ ಸಪೋರ್ಟ್ ಕೊಟ್ಟು ಕೂರಿ) ಬೆನ್ನುನೋವು ಬರುವುದಿಲ್ಲ. 4. ದೇಹದ ತೂಕ ಮಿತಿಮೀರಿ ಹೆಚ್ಚಾಗಲು ಬಿಡಬಾರದು. 1/2 ಗಂಟೆ ನಡೆಯುವ ವ್ಯಾಯಾಮ ಒಳ್ಳೆಯದು. 5. ಡ್ರೈವಿಂಗ್ ಮಾಡುವಾಗ ಕುರ್ಚಿಯಲ್ಲಿ ಕೂರುವಾಗ ಬೆನ್ನಿಗೆ ಸರಿಯಾದ ಸಪೋರ್ಟ್ ಇಟ್ಟುಕೊಳ್ಳುವುದು ಒಳ್ಳೆಯದು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...