ತೌಡು ತೆಗೆಯದ ಅಮೃತಾಹಾರ
ದೇಶದಲ್ಲಿ ಡಾಕ್ಟರುಗಳ ಸಂಖ್ಯೆ ಹೆಚ್ಚುತ್ತಿದೆ; ದೇಶೀಯ ಮತ್ತು ವಿದೇಶೀಯ ಪ್ರಚಂಡ ಔಷಧಿಗಳು ಹೊಸ ಹೊಸತಾಗಿ ನಿರ್ಮಿಸಲ್ಪಡುತ್ತಿವೆ; ರೋಗಗಳ ತಜ್ನರೂ ಮತ್ತು ರೋಗಗಳನ್ನು ಪರೀಕ್ಷಿಸುವ ವಿಧಾನಗಳೂ ವಿಫುಲವಾಗಿ ಬೆಳೆಯುತ್ತಿವೆ. ಆಸ್ಪತ್ರೆಗಳ ಸಂಖ್ಯೆ ವೃದ್ಧಿಗೊಳ್ಳುತ್ತಿದೆ. ಆದರೂ ರೋಗಿಗಳ ಸಂಖ್ಯೆ ಏಕೆ ಕಡಿಮೆಯಾಗುತ್ತಿಲ್ಲ? ಬ್ಲಡ್ ಪ್ರೆಶರ್, ಸಿಹಿಮೂತ್ರ, ಹೃದಯಾಘಾತ, ಕ್ಯಾನ್ಸರ್, ಮುಂತಾದ ರೋಗಗಳು ದಿನೇ ದಿನೇ ಹೆಚ್ಚು ಹೆಚ್ಚು ರೋಗಿಗಳನ್ನು ಏಕೆ ಬಲಿ ತೆಗೆದುಕೊಳ್ಳುತ್ತಿವೆ?
ಈ ಪ್ರಶ್ನೆಗಳಿಗೆ ಸತ್ಯಪೂರ್ಣವಾದ ಒಂದೇ ಉತ್ತರವಿದೆ; ಅದೆಂದರೆ, ಜನತೆ ತಮ್ಮ ಆರೋಗ್ಯ ಮತ್ತು ರೋಗಪರಿಹಾರಕ್ಕಾಗಿ ಸರಿಯಾದ ಆಹಾರಕ್ಕಿಂತ ವಿಷಮಯವಾದ ಔಷಧಗಳನ್ನು ಹೆಚ್ಚಾಗಿ ಅವಲಂಬಿಸುತ್ತಿದೆ. ಈ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಪರಿಸ್ಥಿತಿ ಇನ್ನೂ ಭೀಕರವಾಗುತ್ತಾ ಹೋಗುವುದು ನಿಶ್ಚಿತ.
’ಆಹಾರಾಧೀನಮಾರೋಗ್ಯಂ’ ಎಂದರೆ, ’ಆರೋಗ್ಯದ ಸ್ಥಿರವಾದ ಬುನಾದಿಯೇ ಆಹಾರ’ ಎಂದು ಆಯುರ್ವೇದವು ಸಾವಿರಾರು ವರ್ಷಗಳ ಹಿಂದೆಯೇ ಸಾರಿದೆ. ಆಯುರ್ವೇದದ ಆ ಸತ್ಯವನ್ನು ಪಾಶ್ಚಾತ್ಯ ವಿಜ್ನಾನಿಗಳು ಒಂದೊಂದನ್ನಾಗಿ ತಿಳಿಯುತ್ತಾ ಬಂದಿದ್ದಾರೆ. ಅದಕ್ಕೆ ನಾವು ಒಂದು ಉದಾಹರಣೆಯನ್ನು ಹೇಳಬಹುದೇ?
೧೮೯೮ ರಲ್ಲಿ ಅಮೆರಿಕೆಯು ಫಿಲಿಪೈನ್ ದ್ವೀಪಗಳನ್ನು ವಶಪಡಿಸಿಕೊಂಡಿತು. ಆಗ ಅಲ್ಲಿಯ ಜನತೆಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಡಾಕ್ಟರುಗಳ ಸಮಿತಿಯೊಂದು ಅಲ್ಲಿಗೆ ಹೋಯಿತು. ಆಗ ಅಲ್ಲಿಯವರ ಆಹಾರ, ವಸತಿ, ಮತ್ತು ಶರೀರದ ಸ್ವಚ್ಚತೆಯು ಡಾಕ್ಟರುಗಳ ಅಭಿಪ್ರಾಯದಲ್ಲಿ ಅಪಾಯಕರವಾಗಿತ್ತು. ಆದರೂ ಅಲ್ಲಿಯ ಜನ, ತಾವು ಸೇವಿಸುತ್ತಿದ್ದ ಕುಟ್ಟಿದ ಕೆಂಪು ಅಕ್ಕಿಯ ಮೂಲಕ ಆರೋಗ್ಯ ಧೃಡಕಾಯರಾಗಿದ್ದರು. ರೋಗಗಳೂ ಅಪರೂಪವಾಗಿದ್ದವು.
ಅಮೇರಿಕೆಯ ಆಡಳಿತವು ಪ್ರಾರಂಭವಾದೊಡನೆ ಅಲ್ಲಿನ ಜನತೆಯ ಮತ್ತು ಸೆರೆಮನೆಗಳ ಆರೋಗ್ಯ ಸುಧಾರಣೆಗಾಗಿ ಕೆಂಪು ಅಕ್ಕಿಯ ಪೂರೈಕೆಯನ್ನು ತಡೆಗಟ್ಟಿ, ಪರಿಷೃತ ಬಿಳಿ(ಪಾಲಿಶ್ಡ್) ಅಕ್ಕಿಯನ್ನೇ ಬಳಸಬೇಕೆಂದು ಘೋಷಿಸಲಾಯಿತು. ಅದರಂತೆ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಆ ದ್ವೀಪದ ಜನತೆಯು ರೋಗಿಷ್ಟವಾಯಿತು. ಬೆರಿಬೆರಿ ಎಂಬ, ಸ್ನಾಯುನಿಶ್ಚೇತನದ ರೋಗವು ಹರಡತೊಡಗಿತು. ಆ ಅನಾಹುತವನ್ನು ನಿವಾರಿಸಲು ಡಾಕ್ಟರುಗಳ ಸಮಿತಿಯು ಔಷಧಗಳ ಮೂಲಕ ಮಾಡಿದ ಪ್ರಯತ್ನಗಳೆಲ್ಲ ಸೋಲನ್ನನುಭವಿಸಬೇಕಾಯಿತು.
ಆದರೆ ೧೯೧೧ ರಲ್ಲಿ ಎಡ್ಮಂಡ್ ಫಂಕ್ ಎನ್ನುವವನು, ಕುಟ್ಟಿದ ಕೆಂಪು ಅಕ್ಕಿಯಲ್ಲಿ ರೋಗನಿರೋಧಕ ಸತ್ವವಿರುವುದೆಂದೂ ಅಕ್ಕಿಯ ತೌಡಿನಲ್ಲಿ ಸ್ನಾಯುಗಳಿಗೆ ಬಲ ಕೊಡುವ ಸತ್ವವಿದೆಯೆಂದೂ ಕಂಡುಹಿಡಿದನು. ತೌಡು ತೆಗೆದ ಪರಿಷೃತ ಅಕ್ಕಿಯನ್ನು ಪಾರಿವಾಳಗಳಿಗೆ ತಿನ್ನಿಸುವುದರಿಂದ ಅವುಗಳಿಗೆ ಅರ್ಧಾಂಗ ವಾಯು ಬಡಿಯುವುದೆಂದೂ ಕಂಡುಹಿಡಿದನು. ಮತ್ತು ತೌಡು ತಿನ್ನಿಸುವುದರಿಂದ ವಾಯು ಪರಿಹಾರವಾಗುವುದೆಂದು ಕೂಡ ತೋರಿಸಿದನು.
ಅಕ್ಕಿಯ ತೌಡಿನ ವಿಷಯವು ಗೋಧಿ, ಜೋಳ, ರಾಗಿ ಮುಂತಾದ ಧಾನ್ಯಗಳಿಗೂ ಅನ್ವಯಿಸುತ್ತದೆ. ಉತ್ತರಭಾರತದಲ್ಲಿ ಮಾತ್ರ ನಿತ್ಯಾಹಾರವಾಗಿದ್ದ ಗೋಧಿಯು ಇತ್ತೀಚೆಗೆ ಸಾರ್ವತ್ರಿಕವಾದ ನಿತ್ಯಾಹಾರವಾಗಲು ಹವಣಿಸುತ್ತಿದೆ. ಅದರಿಂದ ಒಳಿತೇ ಆದೀತು. ಆದರೆ ಹೊಸ ಆಹಾರಪರಿಷ್ಕರಣಗಳ ಒಲವು ಬೆಳೆಯುತ್ತಿದ್ದ ಹಾಗೆ ಗೋಧಿಯು ತನ್ನ ಪೌಷ್ಟಿಕತೆಯನ್ನೇ ಕಳೆದುಕ್ಕೊಳ್ಳುತ್ತಿದೆಯಲ್ಲದೇ, ತತ್ಪರಿಣಾಮವಾಗಿ ನರದೌರ್ಬಲ್ಯ ಮತ್ತು ರೋಗನಿರೋಧಕ ಶಕ್ತಿಯ ಕೊರತೆಯೂ ಮಾನವನನ್ನು ಬಲವಾಗಿ ಕಾಡಲಾರಂಬಿಸಿದೆ. ಈಗಿನ ಕ್ಯಾನ್ಸರ್ ರೋಗದ ಪ್ರಾಚುರ್ಯಕ್ಕೆ ದುರಾಹಾರಗಳ ಜೊತೆಗೆ ಧಾನ್ಯಗಳ ಪರಿಷ್ಕರಣವೂ(ಮಾರಣ) ಒಂದು ಪ್ರಮುಖ ಕಾರಣವೆಂದು ತಜ್ನರ ಅಭಿಪ್ರಾಯವಾಗಿದೆ.
ತೌಡು ತೆಗೆದ ಅಕ್ಕಿ, ಅಕ್ಕಿಯ ಹಿಟ್ಟು, ತೌಡು ತೆಗೆದ ಗೋಧಿಹಿಟ್ಟಿನ ಚಪಾತಿ, ಮೈದಾಹಿಟ್ಟುಗಳ ಆಹಾರ ತಿನಿಸುಗಳಿಂದ ರಾಷ್ಟ್ರವು ತ್ರಾಣಗುಂದುತ್ತಿದೆ; ಮಲಬದ್ಧತೆ, ಸಿಹಿಮೂತ್ರ, ಮೂತ್ರಾಂಗ ರೋಗಗಳು, ಹೃದಯ ರೋಗಗಳು ಮುಂತಾದುವುಗಳಿಗೆ ತುತ್ತಾಗುತ್ತಿದೆ. ತಿಳಿಗೇಡಿತನದಿಂದ ನಿ:ಸತ್ವಗೊಳಿಸಿದ ಆಹಾರದಿಂದ ಭಯಂಕರ ರೋಗಗಳನ್ನು ತಂದುಕೊಂಡು, ಅವನ್ನು ಗುಣಪಡಿಸಲು ಇನ್ನೂ ಹೆಚ್ಚು ವಿಷಮಯವಾದ ಪ್ರಚಂಡ ಔಷಧಗಳನ್ನು ಅವಲಂಬಿಸಿ ಮಾನವನು ಮಸಣದ ದಾರಿ ಹಿಡಿಯುತ್ತಿರುವನೆಂದು ಬಲ್ಲವರು ಎಚ್ಚರಿಸುತ್ತಿದ್ದಾರೆ.
ಆರೋಗ್ಯ ಮತ್ತು ಬಲಗಳು ಸ್ಥಿರವಾಗಬೇಕಾದರೆ ಮಾನವನು ಕೂಡಲೇ ಮೃತಾಹಾರದ(ಪರಿಷ್ಕೃತಾಹಾರದ) ಮರುಳಿನಿಂದ ಬಿಡುಗಡೆ ಹೊಂದಿ ಅಮೃತಾಹಾರದ(ತೌಡು ತೆಗೆಯದ ಆಹಾರದ) ಅಭ್ಯಾಸಕ್ಕೆ ಮರಳಬೇಕು. ತೌಡು ತೆಗೆಯದ ಹಿಟ್ಟುಗಳ ರೊಟ್ಟಿ, ದೋಸೆ, ಉಪ್ಪಿಟ್ಟುಗಳೂ, ಹೆಚ್ಚು ಬೇಯಿಸದ ಸತ್ವಭರಿತ ಕಾಯಿಪಲ್ಲೆಗಳೂ, ಹಣ್ಣು, ಗೆಡ್ಡೆ ಗೆಣಸುಗಳೂ ’ಅಮೃತಾಹಾರ’ಗಳಾಗಿವೆ. ಅವುಗಳಿಂದ ಮಾನವನು ಅಮರನಾಗದಿದ್ದರೂ, ಧೀರ್ಘಾಯುವಾಗುವುದು ನಿಶ್ಚಿತ.
ಬರೆದವರು : (ಲೇಟ್) ಡಾ. ಎಂ.ಗೋಪಾಲಕೃಷ್ಣ ರಾವ್. - ೧೯೭೮ ರಲ್ಲಿ ಬರೆದದ್ದು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments