ಭಾರತೀಯ ಸಂಸ್ಕೃತಿಯ ಜೀವಾಳವೇ ವೇದಗಳು.ವೇದವೃಕ್ಷಗಳ ಒಂದು ಶಾಖೆ ಆಯುರ್ವೇದ. ಆಯುರ್ವೇದವೆಂದರೆ ನಮ್ಮ ಪ್ರಾಚೀನ ವೈದ್ಯಕೀಯಶಾಸ್ತ್ರ. ಆಯುರ್ವೇದದ ದೃಷ್ಟಿಯಲ್ಲಿ ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವೊಂದಷ್ಟೇ ಅಲ್ಲ ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವೂ ಕೂಡ.ಮನುಷ್ಯನ ಸಾಧನೆಗೆ ಆರೋಗ್ಯವೇ ಮೂಲ.
ಆಯುರ್ವೇದದಲ್ಲಿ ಗೋವಿನ ಮಹತ್ವ ಹಾಗೂ ಗೋಉತ್ಪನ್ನಗಳಿಗಿರುವ ಪ್ರಾಮುಖ್ಯತೆಯನ್ನು ವಿವರವಾಗಿ ತಿಳಿಸಲಾಗಿದೆ.ಗೋವಿನಿಂದ ಸಿಗುವ ಪಂಚಪವಿತ್ರ ವಸ್ತುಗಳೇ ಪಂಚಗವ್ಯ.
ಅವು-ಹಾಲು,ಮೊಸರು,ತುಪ್ಪ,ಗೋಮಯ (Cow Dung) ಹಾಗೂ ಗೋಮೂತ್ರ (Cow Urine).ಈ ಐದೂ ಪವಿತ್ರ ವಸ್ತುಗಳಿಗೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ವಾತ,ಪಿತ್ಥ,ಕಫ ತ್ರಿದೋಷಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿವೆ. ಆಯುರ್ವೇದದಲ್ಲಿ "ಮೂತ್ರ" ಎಂಬ ಶಬ್ದ ಎಲ್ಲೆಲ್ಲಿ ಬಳಕೆಯಾಗಿದೆಯೋ ಅವೆಲ್ಲವೂ ಗೋಮೂತ್ರವೆಂಬ ಅರ್ಥವನ್ನೇ ಪಡೆಯುತ್ತವೆ.ಗೋಮೂತ್ರದಿಂದ ತಯಾರಿಸಲ್ಪಡುವ ನೂರಾರು ಔಷಧಿಗಳ ಉಲ್ಲೇಖ ಆಯುರ್ವೇದ ಸೂತ್ರಗಳಲ್ಲಿವೆ.
ಗೋವಿಗೆ ಕಾಮಧೇನು ಎಂದೂ ಕರೆಯುತ್ತಾರೆ.ಕಾಮಧೇನು ಎಂದರೆ ಮನೋಕಾಮನೆಗಳನ್ನು ನೀಡುವವಳು. "ಮಾತರಃ ಸರ್ವಭೂತಾನಾಮ್ ಗಾವಃ ಸರ್ವಸುಖಪ್ರದಾಮ್" ಅಂದರೆ ಎಲ್ಲ ಪ್ರಾಣಿಗಳ ತಾಯಿ ಹಾಗೂ ಎಲ್ಲಾ ಸುಖಗಳ ಜನನಿ ಗೋಮಾತೆ. "ಆದೌ ಮಾತಾ ಗುರುಪತ್ನೀ ಬ್ರಾಹ್ಮಣಿ ರಾಜಪತ್ನಿಕಾ | ಧೇನುರ್ಧಾತ್ರೀ ತಥಾ ಪೃಥ್ವೀ ಸಪ್ತೈತಾಃ ಮಾತರಃ ಸ್ಮೃತಾಃ ||" ಜನ್ಮಕೊಟ್ಟ ಜನನಿಯಷ್ಟೇ ತಾಯಿಯಲ್ಲ. ಗುರುಪತ್ನೀ,ಬ್ರಾಹ್ಮಣಿ,ರಾಜಪತ್ನೀ,ಧೇನು,ಶುಷ್ರೂಶಕಿ ಹಾಗೂ ಭೂಮಿ ಇವು ಕೂಡ ನಮ್ಮ ಸಾಕ್ಷಾತ್ ಮಾತೆಯರು ಎಂದು ಈ ಶ್ಲೋಕ ತಿಳಿಸುತ್ತದೆ.ಇಲ್ಲಿ ಧೇನುವೂ ಕೂಡ ನಮ್ಮ ಮಾತೆ, ಏಕೆಂದರೆ ಗೋವಿನ ಉತ್ಪನ್ನಗಳನ್ನು ಸೇವಿಸುತ್ತಾ ಬೆಳೆದವರು ನಾವು.ಹಾಗಾಗಿ ಸದಾ ಮಾತೃಸ್ಥಾನದಲ್ಲಿ ಗೋವನ್ನಿಟ್ಟು ಗೌರವಿಸುವುದು ನಮ್ಮ ಕರ್ತವ್ಯ. ಎಲ್ಲಾ ದೇವಾನುದೇವತೆಗಳಿರುವುದು ಗೋಶರೀರದಲ್ಲೆಂದು ನಂಬಿದ್ದೇವೆ.
ಅದಕ್ಕೆ ಕಾರಣವಿಷ್ಟೇ..ದೇವಾನುದೇವತೆಗಳಿಂದ ಹೊರಹೊಮ್ಮುವ ಮಂಗಳಕಿರಣಗಳು ಗೋವಿನ ಶರೀರವನ್ನು ಪ್ರವೇಶಿಸುತ್ತವೆ.ಹಾಗಾಗಿ ಹಾಲು,ಗೋಮೂತ್ರ ಮತ್ತು ಗೋಮಯಗಳಿಗೆ ದಿವ್ಯೌಷಧೀಯ ಗುಣಗಳಿವೆ ಎನ್ನುತ್ತದೆ ಆಯುರ್ವೇದ.
ಇನ್ನೂ "ಸೂರ್ಯಕೇತುನಾಡಿ" ಎಂಬ ವಿಶಿಷ್ಟವಾದ ನಾಡಿ ಧೇನುವಿನ ಬೆನ್ನಿನಲ್ಲಿದೆ.ಈ ನಾಡಿಯಿರುವ ಜಗತ್ತಿನ ಏಕೈಕಪ್ರಾಣಿ ಗೋವು.ಸೂರ್ಯನ ಕಿರಣಗಳಲ್ಲಿರುವ ಅನೇಕ ಔಷಧೀಯ ಗುಣಗಳನ್ನು ಈ ನಾಡಿ ಸ್ವೀಕರಿಸುತ್ತದೆ.ಹಾಗಾಗಿ ಗೋ ಉತ್ಪನ್ನಗಳು ಅನೇಕ ಔಷಧೀಯಗುಣಗಳಿಂದ ಕೂಡಿರುತ್ತವೆ. ಪಂಚಗವ್ಯವನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿರುವ ಕೊಬ್ಬಿನಾಂಶ ಕಡಿಮೆಯಾಗಿ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.ಚಿಕ್ಕಮಕ್ಕಳಿಗೆ ನೆಗಡಿ,ಕೆಮ್ಮು ಇರುವಂತಹ ಸಂದರ್ಭದಲ್ಲಿ ಮಕ್ಕಳಿಗೆ ಪಂಚಗವ್ಯವನ್ನು ನೀಡಬಹುದು.ಇದರಿಂದ ಮಕ್ಕಳಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲ.ಗೋಮೂತ್ರ ಅರ್ಕದ (ಗೋಮೂತ್ರದ ಉಗಿ) ಮೂಲಕ ಶ್ವಾಸಸಂಬಂಧಿ ಕಾಯಿಲೆಗಳನ್ನು ನಿಯಂತ್ರಣಕ್ಕೆ ತರಬಹುದು.ಇದಲ್ಲದೇ ಜ್ವರ,ಮೂಗು ಕಟ್ಟುವಿಕೆ,ಅಸ್ಥಮಾ,ರಕ್ತದೊತ್ತಡ,ಎಸಿಡಿಟಿ,ದೇಹದ ತೂಕ ಭಾರ,ಮಧುಮೇಹ,ಕಾಮಾಲೆ,ಅತಿಸಾರ,ಗ್ಯಾಸ್ಟ್ರೀಕ್ ಮುಂತಾದ ವ್ಯಾಧಿಗಳನ್ನು ಗುಣಪಡಿಸಲು ಗೋಮೂತ್ರದ ಅರ್ಕ ಪರಿಣಾಮಕಾರಿ ಎಂದು ಸಂಶೋಧನೆಗಳು ತಿಳಿಸಿವೆ. ಇನ್ನು ಗೋಮಯವನ್ನು ಒಣಗಿಸಿ ಬಹುಕಾಲ ಇಡಲಾಗುತ್ತದೆ.ಗೋಮಯದಿಂದ ಸ್ಥಳವನ್ನು ಶುದ್ಧೀಕರಿಸಿದರೆ ವಿಷಾಣುಗಳು ನಾಶವಾಗುತ್ತವೆಯೆಂದು ಸಂಶೋಧನೆಗಳಿಂದ ಸಾಬೀತಾಗಿದೆ.ಗೋಮಯವನ್ನು ಬಿಸಿ ಮಾಡಿ ನೋವಿರುವ ಪ್ರದೇಶದಲ್ಲಿ ಹಚ್ಚಿ ೨೦ ಅಥವಾ ೩೦ ನಿಮಿಷಗಳಷ್ಟು ಕಾಲ ಬಿಟ್ಟರೆ ನೋವು ಶಾಶ್ವತ ಪರಿಹಾರವಾಗುತ್ತದೆಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.
ಹಾಲು,ಮೊಸರು,ತುಪ್ಪಗಳಲ್ಲಿರುವ ಪ್ರಾಮುಖ್ಯತೆ ನಮಗೆಲ್ಲರಿಗೂ ಗೊತ್ತು.ಹಾಗಾಗಿ ಪಂಚಗವ್ಯಪ್ರಾಶನ ನಮ್ಮ ಸಂಸ್ಕೃತಿಯಲ್ಲಿ ವೈಜ್ಞಾನಿಕ ಮಹತ್ವವನ್ನು ಹೊಂದೆದೆಯೆಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೇ ಅಲ್ಲವೇ..?
ಅಮೇರಿಕದಂತಹ ದೇಶವೂ ಗೋಮೂತ್ರದ ಅರ್ಕಕ್ಕೆ ಎರಡು ಪೇಟೇಂಟ್ ಪಡೆದುಕೊಂಡಿದ್ದು. •
US Patent No. 1 = 6410059 25-06-2002 •
US Patent No. 2 = 6896907 24-05-2005
ಪಂಚಗವ್ಯವನ್ನು ಸೇವಿಸುವಾಗ ಈ ಪ್ರಾರ್ಥನೆ ಮಾಡಿದರೊಳಿತು.. "ಯತ್ವಗಸ್ತಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ | ಪ್ರಾಶನಾತ್ ಪಂಚಗವ್ಯಸ್ಯ ದಾಹಸ್ಯಾಗ್ನಿರಿವಾಂಧನಮ್ ||" ದೇಹದ ಚರ್ಮದಲ್ಲಿ,ಮೂಳೆಯಲ್ಲಿ,ಅಂಗಾಂಗಗಳಲ್ಲಿ ಯಾವುದಾದರೂ ಕೆಟ್ಟ ಅಂಶಗಳು ಸೇರಿದ್ದರೆ,ಅಗ್ನಿಯಿಂದ ಹೇಗೆ ಇಂಧನ ಸುಡುತ್ತದೆಯೋ ಹಾಗೇ ಪಂಚಗವ್ಯ ಪ್ರಾಶನದಿಂದ ನನ್ನ ಶರೀರದಲ್ಲಿರುವ ಎಲ್ಲಾ ಪಾಪಗಳೂ ದೂರವಾಗಲಿ. ಪ್ರಾಚೀನಕಾಲದಲ್ಲಿ ಪಂಚಗವ್ಯವನ್ನು ಪ್ರತಿದಿನ ಸೇವಿಸುವ ಪದ್ಧತಿಯಿತ್ತು.
ಈಗ ಶುದ್ಧಕರ್ಮದಲ್ಲಿ,ವಿಶೇಷವಾದ ಪೂಜೆಗಳಲ್ಲಷ್ಟೇ ಸೇವಿಸುವ ಪದ್ಧತಿ ಬೆಳೆದುನಿಂತಿದೆ.ಇನ್ನೂ ಕೆಲವರು ಪಂಚಗವ್ಯದ ಮಹತ್ವವನ್ನು ಅರಿಯದೇ ಅದನ್ನು ತಿರಸ್ಕರಿಸುವವರೂ ಇದ್ದಾರೆ.ಹಿತ್ತಲಗಿಡ ಎಂದಿಗೂನಮಗೆ ಮದ್ದೆನಿಸುವುದಿಲ್ಲ.ಇಂಗ್ಲೀಷ್ ಔಷಧಿ ಸೇವಿಸಿದರಷ್ಟೇ ನೆಮ್ಮದಿ..!!
ಇಂದಿಗೂ ಗೋ ಉತ್ಪನ್ನಗಳ ವಿಷಯದಲ್ಲಿ ನಿರಂತರ ಸಂಶೋಧನೆ ನಡೆಯುತ್ತಿದೆ.ಗೋವು ದಿವ್ಯಪ್ರಾಣಿಯೆಂದು ಸಾಬೀತಾಗಿದೆ.ಹಾಗಾಗಿ ಗೋತಳಿಯ ಪಾಲನೆ ಹಾಗೂ ಸಂರಕ್ಷಣೆ ನಮ್ಮ ಕರ್ತವ್ಯವಾಗಬೇಕಿದೆ. ಗೋಮಾತೆ ಎಲ್ಲರಿಗೂ ಆಯುರಾರೋಗ್ಯ-ಐಶ್ವರ್ಯಗಳನ್ನು ಕರುಣಿಸಲಿ..
ಲೋಕಾಃ ಸಮಸ್ತಾಃ ಸುಖಿನೋ ಭವಂತು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments