Skip to main content

Posts

ನಕ್ಷತ್ರ ಮಾಲಿಕೆ: ಸ್ವಾತಿ ನಕ್ಷತ್ರದವರು ಸಹಾಯ ಹಸ್ತರು

ರತ್ನರಾಜ್ ಜೈನ್ ನೋಡುವಾಗ ಮಾಣಿಕ್ಯರತ್ನದಂತೆ ಏಕ ನಕ್ಷತ್ರ. ಹಾಗಾಗಿ ಮಾಣಿಕ್ಯರತ್ನದ ಜತೆ ಏಕಮುಖ ರುದ್ರಾಕ್ಷಿ ಧರಿಸಬಹುದು. ಈ ನಕ್ಷತ್ರಕ್ಕೆ ದೇವತೆ ವಾಯು. ನರಸಿಂಹ ಸ್ವಾಮಿ ದೇವರ ಜನನ ಈ ನಕ್ಷತ್ರದಲ್ಲಿಯೇ ಆಗಿರುತ್ತದೆ. (ಇದು ಸತ್ಯವೇ ಎಂದು ತಿಳಿದುಕೊಳ್ಳಬೇಕಾದರೆ 13.5.2014ರ ಮಂಗಳವಾರ ವೈಶಾಖ ಶುದ್ಧ ಚತುರ್ದಶಿ ದಿನ ಸ್ವಾತಿ ನಕ್ಷತ್ರವಿದೆ ಅದನ್ನು ನೋಡಬಹುದು). ಆ ದಿನ ನರಸಿಂಹಜಯಂತಿ ಕೂಡ ಆಗಿದೆ. ಜೈನರ 24ನೇ ತೀರ್ಥಂಕರರು ಮಹಾವೀರಸ್ವಾಮಿ ದೀಪಾವಳಿ ಅಮಾವಾಸ್ಯೆಯ ದಿನದಂದು ಸ್ವಾತಿ ನಕ್ಷತ್ರದಲ್ಲಿಯೇ ಮೋಕ್ಷ ಪಡೆದರು. ನಕ್ಷತ್ರದ ವಿಶೇಷತೆಯೆಂದರೆ ಈ ನಕ್ಷತ್ರದ ದಿನ ಗೃಹ ಪ್ರವೇಶವಾದರೆ ಮೂರು ವರ್ಷಗಳಲ್ಲಿ ಮನೆಯನ್ನು ಮಾರಾಟ ಮಾಡಿ ಬೇರೆ ಮನೆ ಕಟ್ಟುವಿರಿ. ಸಮುದ್ರದಲ್ಲಿರುವ ಮುತ್ತುಗಳಿಗೆ ಈ ನಕ್ಷತ್ರದ ಮಳೆ ಶ್ರೇಷ್ಠ ಆಗಿದೆ. ಈ ನಕ್ಷತ್ರದ ದಿನ ಅಮೂಲ್ಯವಸ್ತು ಕಳವಾದರೆ ಸಿಗಲಾರದು. ವಧು-ವರರ ಕೂಟಗಳಲ್ಲಿ ವ್ಯತ್ಯಾಸವಿದ್ದರೂ ಮಾಡಬಹುದು. ಆದರೆ ವಿವಾಹದ ನಂತರ ಲಕ್ಷ್ಮೀ ನರಸಿಂಹದೇವರ ದರ್ಶನ ಮಾಡತಕ್ಕದ್ದು. ಈ ನಕ್ಷತ್ರದಲ್ಲಿ ಜನಿಸಿದವನು ದೈವ ಭಕ್ತನೂ,ವಿನಯವಂತನೂ,ಉತ್ತಮ ವ್ಯಾಪಾರಿಯೂ, ದಯೆ ಉಳ್ಳವನೂ, ಕೈಲಾಸದ ಬಡ ಜನರಿಗೆ ಸಹಾಯ ಹಸ್ತ ಉಳ್ಳವನೂ, ಇವನ ಆರಾಧ್ಯ ದೇವರು ಲಕ್ಷ್ಮೀ ನರಸಿಂಹಸ್ವಾಮಿ. ಸ್ತ್ರೀಯಾದರೆ ಐಶ್ವರ್ಯವಂತಳೂ, ಪತಿವ್ರತೆ, ಪುತ್ರಸಂಹಾರ ಉಳ್ಳವಳೂ, ಯಶೋವಂತಳೂ, ನಿಧಾನವಾಗಿ ಕೆಲಸ ಮಾಡುವವಳು. ಆದರೆ ತವರು ಮನೆ ಬಗ್ಗೆ...

ವಿಶಾಖ ನಕ್ಷತ್ರದವರು ನೇರ ನುಡಿಯುವವರು

ನಕ್ಷತ್ರಗಳ ಸಾಲಿನಲ್ಲಿ 16ನೇ ನಕ್ಷತ್ರವೇ ವಿಶಾಖ. ವಿಶಾಖ ನಕ್ಷತ್ರದವರು ತಮ್ಮ ಹೆಸರಿನ ಮೊದಲ ಅಕ್ಷರವನ್ನು ತಿ, ತು, ತೇ ಮತ್ತು ತೊ ಗಳಿಂದ ಆರಂಭಿಸಿದರೆ ಒಳ್ಳೆಯದಾಗುವುದು. ಜೈನರ ಏಳನೇ ತೀರ್ಥಂಕರರಾದ ಸುಪಾರ್ಶ್ವನಾಥ ಸ್ವಾಮಿ ಈ ನಕ್ಷತ್ರದಲ್ಲಿಯೇ ಜನಿಸಿದವರು. ವೈಶಾಖ ಹುಣ್ಣಿಮೆ ದಿನ ವಿಶಾಖ ನಕ್ಷತದ ದಿನವೇ ಗೌತಮ ಬುದ್ಧರ ಜನನ ಆಗಿದೆ. ಪ್ರಖ್ಯಾತ ರಾಜಕಾರಣಿಗಳಾದ ಈಗಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಜನಿಸಿದುದು ಈ ನಕ್ಷತ್ರದಲ್ಲಿ. ಅಲ್ಲದೇ ಇಬ್ಬರದ್ದೂ ವೃಶ್ಚಿಕ ರಾಶಿ ಆಗಿರುವುದು ಇನ್ನೊಂದು ವಿಶೇಷ. ಈ ನಕ್ಷತ್ರದ ಚಿಹ್ನೆ ಕುಂಬಾರನ ಚಕ್ರ ರೂಪದಲ್ಲಿ 5 ನಕ್ಷತ್ರಗಳಿಂದ ಕೂಡಿರುತ್ತದೆ. ಹಾಗಾಗಿ ಪಂಚಮುಖಿ ರುದ್ರಾಕ್ಷಿ ಇವರಿಗೆ ಹಿಡಿಸಲಿದೆ. ಇಂದ್ರಾಗ್ನಿ ದೇವತೆ. ಸಾಲ ಕೊಡಲು ಈ ನಕ್ಷತ್ರ ಇರುವ ದಿನ ಉತ್ತಮ. ಆದರೆ ಯಾವುದೇ ಶುಭ ಕಾರ್ಯ, ವಿವಾಹಾದಿ ಮಂಗಳ ಕಾರ್ಯ, ಗೃಹ ಆರಂಭ ಮತ್ತು ಗೃಹ ಪ್ರವೇಶಗಳಿಗೆ ಉತ್ತಮ ದಿನವಲ್ಲ. ಆದರೆ ಔಷಧ ಅಂಗಡಿ ತೆರೆಯಲು, ಅಗ್ನಿ ಸಂಬಂಧ ವಸ್ತುಗಳ ವ್ಯವಹಾರ ಆರಂಭಿಸಲು, ಅಡುಗೆ ಅನಿಲ ವಿತರಿಸುವ ವ್ಯವಹಾರ ಆರಂಭಿಸಲು ಈ ನಕ್ಷತ್ರ ಬುಧವಾರ ಇದ್ದ ದಿನ ಉತ್ತಮ ಆಗಿದೆ. ಈ ದಿನ ಅಮೂಲ್ಯ ವಸ್ತು ಕಳೆದರೆ ಬೇಗನೇ ಸಿಗಲಿದೆ. ದೀರ್ಘ ರೋಗ ಚಿಕಿತ್ಸೆಗೆ ಮದ್ದು ಆರಂಭಿಸಲು ಉತ್ತಮ ದಿನ. ಈ ನಕ್ಷತ್ರದಲ್ಲಿ ಜನಿಸಿದವರು ಸಿಡುಕು ಸ್ವಭಾವದವರೂ...

ಹೆಸರಲ್ಲೇ ಅಡಗಿದೆ ವ್ಯಕ್ತಿಯ ವ್ಯಕ್ತಿತ್ವ ಡಾ.ಅನಸೂಯಾ ಎಸ್. ರಾಜೀವ್

ಪ್ರತಿಯೊಬ್ಬರೂ ಹೆಸರಿನ ಮಹತ್ವವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಶಕ್ತಿಯುತವಾದ ಹೆಸರಿನ ಬಲ ಮಾನವನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಹೆಸರಿನಿಂದ ನಮ್ಮ ಭಾವನೆಗಳು, ವ್ಯಕ್ತಿತ್ವ ತಿಳಿದುಬರುತ್ತವೆ. ಹೆಸರು ವ್ಯಕ್ತಿಯ ಬಲವನ್ನು ತೋರಿಸುತ್ತದೆ. ಶಕ್ತಿಯುತವಾದ ಹೆಸರನ್ನಿಡದೆ ಹೋದರೆ ಅದು ಆ ವ್ಯಕ್ತಿಗೆ ಆಭಾಸವಾಗುತ್ತದೆ. ಉದಾಹರಣೆಗೆ 'ಸರಸ್ವತಿ' ಎಂದು ಹೆಸರಿಟ್ಟು ಆಕೆಗೆ ವಿದ್ಯೆಯೇ ಹತ್ತಲಿಲ್ಲ ಎಂದರೆ ಅದು ವಿರೋಧಾಭಾಸವಾಗುತ್ತದೆ. ಹಾಗಾಗಿ ಹೆಸರು ವ್ಯಕ್ತಿಗೆ ಬಲವನ್ನು ತಂದುಕೊಡುವಂತಹದ್ದಾಗಿರಬೇಕು. ಜ್ಯೋತಿಷ್ಯಾಸ್ತ್ರದಲ್ಲಿ ಪ್ರಮುಖವಾಗಿ ಮೂರು ರೀತಿಯಾಗಿ ಹೆಸರನ್ನು ಸೂಚಿಸುವ ಪದ್ಧತಿ ಇದೆ. ಮೊದಲನೆಯದಾಗಿ ನೇಮಾಲಜಿ ಅಥವಾ ನಾಮಶಾಸ್ತ್ರ,ಎರಡನೆಯದಾಗಿ ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರ, ಮೂರನೆಯದಾಗಿ ವ್ಯಕ್ತಿಯ ಜಾತಕದಲ್ಲಿ ಯಾವ ಗ್ರಹಗಳ ಬಲ ಹೆಚ್ಚಿರುವುದೋ ಅದಕ್ಕೆ ಸಂಬಂಧಿಸಿದ ಅಕ್ಷರಗಳನ್ನಿಡುವುದು ಅಥವಾ ವ್ಯಕ್ತಿಯ ನಕ್ಷತ್ರಕ್ಕನುಗುಣವಾಗಿ ಹೆಸರನ್ನಿಡುವುದು. ಮೊದಲನೆಯದಾಗಿ ನೇಮಾಲಜಿಯನ್ನು ತೆಗೆದುಕೊಳ್ಳೋಣ. ಇಲ್ಲಿ ವ್ಯಕ್ತಿಯ ನಕ್ಷತ್ರವನ್ನು ತೆಗೆದುಕೊಂಡು, ಆ ನಕ್ಷತ್ರಕ್ಕೆ ತಾರಾನುಕೂಲವಾಗುವ ನಕ್ಷತ್ರಗಳು ಸೂಚಿಸುವ ಅಕ್ಷರಗಳನ್ನು ತೆಗೆದುಕೊಂಡು ಹೆಸರಿಡುವುದು. ಉದಾಹರಣೆಗೆ ವ್ಯಕ್ತಿಯ ನಕ್ಷತ್ರ ಅಶ್ವಿನಿಯಾಗಿದ್ದರೆ ಈ ನಕ್ಷತ್ರಕ್ಕೆ ತಾರಾನುಕೂಲವಾಗುವ ನಕ್ಷತ್ರಗಳು ಭರಣಿ, ಪುಬ್ಬ, ಪೂರ್ವಾಷಾಢ, ರೋಹಿಣಿ...

ನವಗ್ರಹಗಳು ಮತ್ತು ಅವುಗಳ ವಿಚಾರ (ಗ್ರಹದೋಷಗಳು ನಿವಾರಣೆ.)

ನವಗ್ರಹಗಳು ಮತ್ತು ಅವುಗಳ ವಿಚಾರ ಗ್ರಹ ದಾನ್ಯ ಸಮಿತ್ತು ದೇವತೆ ಅದಿದೇವತೆ ದಿಕ್ಕು ರತ್ನ ವಸ್ತ್ರದ ಬಣ್ಣ ರವಿ ಗೋಧಿ ಎಕ್ಕ ರಾಮ ಇಂದ್ರ ಪೂರ್ವ ಮಾಣಿಕ್ಯ ಕಿತ್ತಳೆ ಬಣ್ಣ ಶಶಿ ಅಕ್ಕಿ ಮುತ್ತುಗ ಪಾರ್ವತಿ ವಾಯು ವಯುವ್ಯ ಮುತ್ತು ಹಾಲಿನಕೆನೆ ಕುಜ ತುಗರಿ ಕಗ್ಗಲಿ ಕಾರ್ತಿಕೇಯ ಯಮ ದಕ್ಷಿಣ ಹವಳ ರಕ್ತಕೆಂಪು ಬುಧ ಹೆಸರು ಉತ್ತರಾಣಿ ವಿಷ್ಣು ಕುಬೇರ ಉತ್ತರ ಪಚ್ಚೆ ಹಸಿರು ಗುರು ಕಡಲೆ ಅರಳಿ ಶಿವ ಈಶ ಈಶಾನ್ಯ ಪುಷ್ಯರಾಗ ಹಳದಿ ಶುಕ್ರ ಅವರೆ ಅತ್ತಿ ಲಕ್ಷ್ಮಿ ಅಗ್ನಿ ಆಗ್ನೇಯ ವಜ್ರ ಬಿಳಿ ಶನಿ ಎಳ್ಳು ಬನ್ನಿ ಮಾರುತಿ ವರುಣ ಪಶ್ಚಿಮ ನೀಲಮಣಿ ಕಪ್ಪು ರಾಹು ಉದ್ದು ಗರಿಗೆ ದುರ್ಗ ನಿರುತಿ ನೈರುತ್ಯ ಗೋಮೇಧ ದೂಮ್ರವರ್ಣ ಕೇತು ಹುರುಳಿ ದರ್ಬೆ ಗಣೇಶ ನಿರುತಿ ನೈರುತ್ಯ ವೈಡೂರ್ಯ ಚಿತ್ರವರ್ಣ ಆಯಾ ದಿಕ್ಕಿಗೆ ಸಂಬಂದಿಸಿದ ದೇವತೆ/ಅಧಿದೇವತೆ/ಗ್ರಹ ವನ್ನು ಅವುಗಳ ದಾನ್ಯ,ಸಮಿತ್ತು ಪುಷ್ಪ/ಪತ್ರೆ ವಸ್ತ್ರಗಳಿಂದ ಆಯಾಗ್ರಹದ ವಾರದಂದು ಆಯಾಗ್ರಹಕ್ಕೆ ಸಂಬಂದಿಸಿದ ಸ್ತೋತ್ರ,ಗಾಯತ್ರಿ ಮಂತ್ರ,ಪೀಡಾಪರಿಹಾರಮಂತ್ರ ಇ...

ವಾಸ್ತುವಿನಲ್ಲಿ ಸ್ವಸ್ತಿಕ್ ಮಹತ್ವ ಎಂ. ಮಹದೇವಸ್ವಾಮಿ

ವಾಸ್ತುವಿನಲ್ಲಿ ಸ್ವಸ್ತಿಕ್ ಮಹತ್ವ 'ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ನಮ್ಮಲ್ಲಿ ನಡೆಯುವ ಅನೇಕ ನಿಗೂಢ ಪ್ರಶ್ನೆಗಳಿಗೆ ವಿಜ್ಞಾನದಲ್ಲಿ ಉತ್ತರವಿಲ್ಲ. ಆದರೆ ಅಧ್ಯಾತ್ಮಿಕವಾಗಿ ಅದಕ್ಕೆ ಉತ್ತರ ದೊರೆಯುತ್ತದೆ.' ಹಿಂದೂಗಳಲ್ಲಿ ಸ್ವಸ್ತಿಕ್, ಕ್ರಿಶ್ಚಿಯನ್‌ರಲ್ಲಿ ಕ್ರಾಸ್, ರಷ್ಯನ್ನರಲ್ಲಿ ಕೀ ಪವಿತ್ರವಾದ ಚಿಹ್ನೆಗಳಾಗಿವೆ. ಸ್ವಸ್ತಿಕ್ ಚಿಹ್ನೆಯು ಅದ್ಭುತವಾದ ನಿಗೂಢ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಈ ಚಿಹ್ನೆಯು ವಾಸ್ತು ರಚನಾಶಾಸ್ತ್ರದಲ್ಲಿ ಸಹ ಅಪಾರವಾದ ಮಾಹಿತಿಯನ್ನು ನೀಡಿದೆ. ಈ ಚಿಹ್ನೆಯನ್ನು ನಮ್ಮ ಪುರಾತನ ಕಾಲದಿಂದಲೂ ಪೂರ್ವಿಕರು ಬಳಸುತ್ತಿದ್ದರು. ಇದರ ಶುಭ ಫಲವನ್ನು ತಲೆಮಾರಿನಿಂದ ತಲೆಮಾರಿಗೆ ಹೇಳುತ್ತಾ ಬೆಳೆಸಿ ಉಳಿಸಿಕೊಂಡು ಬಂದಿದ್ದೇವೆ. ಹರ್‌ನೆಸ್ಟ್ ಹರ್ಟ್‌ಮನ್ ಎಂಬ ಜರ್ಮನ್ ಖಗೋಳ ವಿಜ್ಞಾನಿಯು ಲಂಬಾ ಅಂಟಿನಾ ಎಂಬ ತನ್ನ ಉಪಕರಣದಿಂದ ಪ್ರಪಂಚದಲ್ಲಿರುವ ಪ್ರತಿ ವಸ್ತುವಿಗೂ, ಪ್ರತಿ ಸ್ಥಳಕ್ಕೂ, ಅಗೋಚರವಾದ ನಿಗೂಢವಾದ ಶಕ್ತಿಯಿದೆ ಎಂದು ತೋರಿಸಿಕೊಟ್ಟನು. ಅವನು ಸತ್ತ ಮನುಷ್ಯನ ದೇಹದ ಮೇಲೆ ಆ ಯಂತ್ರವನ್ನು ಇಟ್ಟಾಗ 0 (ಶೂನ್ಯ) ಭೋವಿಸ್ (ಶಕ್ತಿಯನ್ನು ಅಳೆಯುವ ಅಳತೆಗೋಲು) ಅನ್ನು ತೋರಿಸಿದೆ. ವಾಸ್ತು ಜಗತ್ತು: ವಿದ್ಯಾಲಯಗಳ ವಾಸ್ತು ಹೇಗಿರಬೇಕು ? ಜೆ.ಕೆ. ಜೈನ್ ವಿದ್ಯಾದದಾತಿ ವಿನಯಂ, ವಿದ್ಯಾ ವಿಹೀನಂ ಪಶು ಸಮಾನಂ. ಇವೆಲ್ಲ ಹಿಂದಿನವರು ಬರೆದು ಹಾಕಿದ ಪದ ಪುಂಜಗಳು. ಬಹಳ ಅರ್ಥಪೂರ್ಣ ಮತ್ತ...

ಶ್ರೀ ಸೂಕ್ತಮ್

ಶ್ರೀ ಸೂಕ್ತಮ್ ಒಂ ಹಿರಣ್ಯವರ್ಣಾಂ ಹರಿಣೇಂ ಸುವರ್ಣರಜತಸ್ರಜಾಮ್ ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಂ ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರಾಷಾನಹಮ್ ಅಶ್ವಪೊರ್ವಾಂ ರಥಮಧ್ಯಾಂ ಹಸ್ತಿನಾದ ಪ್ರಭೋಧಿನಿಮ್ ಶ್ರೀಯಂ ದೇವೀಮುಪಹ್ವಯೇ ಶ್ರೀರ್ಮಾದೇವೀ ಜುಷತಾಮ್ ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಂ ಜ್ವಲಂತೀಂ ತೃಪ್ತಾಂ ತರ್ಪಯಂತೀಮ್ ಪದ್ಮೇ ಸ್ಥಿತಾಂ ಪದ್ಮವರ್ಣಾಂ ತ್ವಾಮಿಹೋಪಹ್ವಯೇ ಶ್ರಿಯಮ್ ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜುಷ್ಟಾ ಮುದಾರಾಮ್ ತಾಂ ಪದ್ಮಿನೀಮೀಂ ಶರಣಮಹಂ ಪ್ರಪದ್ಯೇಲಕ್ಷ್ಮೀರ್ಮೇನಶ್ಯತಾಂ ತ್ವಾಂ ವೃಣೇ ಆದಿತ್ಯವರ್ಣೇ ತಪಸೋಧಿಜಾತೋ ವನಸ್ಪತಿಸ್ತವ ವೃಕ್ಷೋಥ ಬಿಲ್ವಃ ತಸ್ಯ ಫಲಾನಿ ತಪಸಾ ನುದಂತು ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ ಉಪೈತು ಮಾಂ ದೇವಸಖಃ ಕೀರ್ತಿಶ್ಚಮಣಿನಾ ಸಹ ಪ್ರಾದುರ್ಭೊತೋಸ್ಮಿ ರಾಷ್ಟ್ರೇಸ್ಮಿನ್ ಕೀರ್ತಿಮೃದ್ದಿಂ ದದಾತು ಮೇ ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷ್ಮೀಂ ನಾಶಯಾಮ್ಯಹಮ್ ಅಭೊತಿಮಸಮೃದ್ದಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್ ಈಗಂಧಿದ್ವಾರಾಂ ದುರಾಧರ್ಪಾಂ ನಿತ್ಯಪುಷ್ಪಾಂ ಕರೀಷಿಣೀಂ ಶ್ವರೀಗಂ ಸರ್ವಭೊತಾನಾಂ ತ್ವಾಮಿಹೋಪಹ್ವಯೇ ಶ್ರಿಯಂ ಮನಸಃ ಕಾಮಮಾಕೊತಿಂ ವಾಚಸ್ಸತ್ಯಮಶೀಮಹಿ ಪಶೊನಾಂ ರೊಪಮನ್ನಸ್ಯ ಮಯಿ ಶ್ರೀಃ ಶ್ರಯತಾಂ ಯಶಃ ಕರ್ದಮೇನ ಪ್ರಜಾಭೊತಾ ಮಯಿ ಸಂಭವ ಕರ್ದಮ ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಾಮಾಲ...

ಲಿಂಗಾಷ್ಟಕಂ

ಲಿಂಗಾಷ್ಟಕಂ ಬ್ರಹ್ಮಮುರಾರಿ ಸುರಾರ್ಚಿತ ಲಿಂಗಮ್ ನಿರ್ಮಲ ಭಾಷಿತ ಶೋಭಿತ ಲಿಂಗಮ್ ಜನ್ಮಜ ದುಃಖ ವಿನಾಶಕ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ದೇವಮುನಿ ಪ್ರವರಾರ್ಚಿತ ಲಿಂಗಮ್ ಕಾಮದಹನ ಕರುಣಾಕರ ಲಿಂಗಮ್ ರಾವಣ ದರ್ಪ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಸರ್ವಸುಗಂಧ ಸುಲೇಪಿತ ಲಿಂಗಮ್ ವುದ್ಧಿವಿವರ್ಧನ ಕಾರಣ ಲಿಂಗಮ್ ಸಿದ್ಧ ಸುರಾಸುರ ವಂದಿತ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಕನಕ ಮಹಾಮಣಿ ಭೂಷಿತ ಲಿಂಗಮ್ ಫಣಿಪತಿವೇಷ್ಟಿತ ಶೋಭಿತ ಲಿಂಗಮ್ ದಕ್ಷ ಸುಯಜ್ಞ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಕುಂಕುಮ ಚಂದನ ಲೇಪಿತ ಲಿಂಗಮ್ ಪಂಕಜಹಾರ ಸುಶೋಭಿತ ಲಿಂಗಮ್ ಸಂಚಿತ ಪಾಪ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ದೇವಗಣಾರ್ಚಿತ ಸೇವಿತ ಲಿಂಗಮ್ ಭಾವೈರ್ಭಕ್ತಿಭಿರೇವಚ ಲಿಂಗಮ್ ದಿನಕರ ಕೋಟಿ ಪ್ರಭಾಕರ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಅಷ್ಟದಲೋಪರಿ ವೇಷ್ಟಿತ ಲಿಂಗಮ್ ಸರ್ವ ಸಮುದ್ಬವ ಕಾರಣ ಲಿಂಗಮ್ ಅಷ್ಟ ದರಿದ್ರ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಸುರಗುರು ಸುರವರ ಪೂಜಿತ ಲಿಂಗಮ್ ಸುರವನ ಪುಷ್ಟ ಸದಾರ್ಚಿತ ಲಿಂಗಮ್ ಪರಮಪದಂ ಪರಮಾತ್ಮಕ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಲಂಗಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವಸನ್ನಿಧೌ ಶಿವಲೋಕಮವಾಪ್ನೋತಿ ಶಿವೇನ ಸಹಮೋದತೇ ಇತಿ ಶ್ರೀ ಲಿಂಗಾಷ್ಟಕ ಸ್ತೋತ್ರಂ