Skip to main content

ವೃತಾದಿಗಳು ಕೆಲವು ವೃತಗಳ ಬಗ್ಗೆ ತಿಳಿಸಿರುತ್ತೇವೆ.

ವೃತಾದಿಗಳು ಸೃಷ್ಠಿಯಲ್ಲಿ ಭಗವತ್ ಶಕ್ತಿಯನ್ನು ಒಲಿಸಿಕೊಳ್ಳಲು ನಾನಾ ವಿಧವಾದ ಮಾರ್ಗಗಳಿವೆ. ಪಯಜ್ಞ_ಯಾಗಾದಿಗಳನ್ನು ಮಾಡಿದರೆ ಮಾತ್ರ ದೇವರನ್ನು ಒಲಿಸಿಕೊಳ್ಳಬಹುದು ಎಂದಿಲ್ಲ. ಸರ್ವೇ ಸಾಮಾನ್ಯರಿಗೆಂದು,ಪಯಜ್ಞ_ಯಾಗಾದಿಗಳನ್ನು ಮಾಡಲು ಅಶಕ್ತರುಗಳಿಗೆ ವೃತವೂ ಒಂದು ಮಾರ್ಗವಾಗಿದೆ. ಇದನ್ನು ಭಕ್ತಿ_ಶ್ರದ್ಧೆಯಿಂದ, ಶಾಸ್ತ್ರೋಕ್ತವಾಗಿ ಮಾಡಿದಲ್ಲಿ ಮನೋಕಾಮನೆಯನ್ನು ಖಂಡಿತವಾಗಿಯೂ ಪಡೆಯಬಹುದು. ಹಲವಾರು ವೃತಾದಿಗಳಿದ್ದು ನಾವು ಇಲ್ಲಿ ಕೆಲವು ವೃತಗಳ ಬಗ್ಗೆ ತಿಳಿಸಿರುತ್ತೇವೆ. ೧. ಸತ್ಯ ಗಣಪತಿ ವೃತ ವೈಶಾಖ ಪೂರ್ಣಿಮೆಯಂದು ಜನನವಾದ ಪುಷ್ಠಿ ಗಣಪತಿ ಸತ್ಯ ವಿನಾಯಕನನ್ನು ಯಾರು ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜಿಸುತ್ತಾರೋ ಅವರ ಎಲ್ಲ ಮನೋಕಾಮನೆಗಳು ಸಿದ್ಧಿಸುವುದು. ಯಾವುದೋ ಮುಖ್ಯ ಮನೋಕಾಮನೆಗಾಗಿ ಭಕ್ತಿಯಿಂದ ೧೨(ಸುಮುಖಾದಿ)ನಾಮಗಳಿಗೆ ಒಂದಂತೆ ಮಾಡಿದರೆ ಇಚ್ಚೆಯು ಖಂಡಿತವಾಗಿಯೂ ನೆರವೇರುವುದು. ೨. ವರಸಿದ್ಧಿವಿನಾಯಕ ವೃತ ಭಾದ್ರಪದ ಶುಕ್ಲ ಚತುರ್ಥಿಯಂದು ಮಣ್ಣಿನಿಂದ ಗಣಪತಿ ವಿಗ್ರಹವನ್ನು ಮಾಡಿ, ಭಕ್ತಿ- ಶ್ರದ್ಧೆಯಿಂದ ಪೂಜಿಸುವ ವೃತ. ಇದನ್ನು ೧,೩,೫,೭,೯,ದಿನಗಳವರೆಗೆ ಆಚರಿಸುವ ಪದ್ಧತಿ ಇದೆ. ೩. ಋಷಿ ಪಂಚಮಿ ವೃತ ಕಾಯಕ, ವಾಚಿಕ, ಮಾನಸಿಕ, ಸಾಂಸರ್ಗಿಕ ಜ್ಞಾತ- ಅಜ್ಞಾತ ಸಮಸ್ತ ಪಾಪಕ್ಷಯಕ್ಕಾಗಿ ದಂಪತಿಗಳು ಈ ವೃತವನ್ನು ಆಚರಿಸಬೇಕು. ೪. ಅನಂತ ಪದ್ಮನಾಭ ವೃತ ಧರ್ಮ-ಅರ್ಥ-ಕಾಮ-ಮೋಕ್ಷಕ್ಕಾಗಿ ಪುತ್ರ-ಪೌತ್ರ ಅಭಿವೃದ್ಧಿಗಾಗಿ ಈ ವೃತವನ್ನು ಆಚರಿಸಬೇಕು. ೫. ನಾಗಪಂಚಮಿ ವೃತ ಇದನ್ನು ಶ್ರಾವಣ ಮಾಸದ ಪಂಚಮಿ ತಿಥಿಯಂದು ನಾಗರಾಜನ ಅನುಗ್ರಹ ಪ್ರಾಪ್ತಿಗಾಗಿ, ನಾಗ ದೋಷ ನಿವಾರಣೆಗಾಗಿ ಎಲ್ಲಾ ಮನೋಕಾಮನೆ ಪಡೆಯಲು ಆಚರಿಸಬೇಕು. ೬. ಮಂಗಳಗೌರಿ ವೃತ ಮದುವೆಯಾದ ನವ ವಧುವು ಪತಿಯ ಆಯುಷ್ಯ ಅಭಿವೃದ್ಧಿಗಾಗಿ, ಸುದೀರ್ಘ ಕಾಲ ಸೌಮಾಂಗ್ಯ ಪ್ರಾಪ್ತಿಗಾಗಿ ಶ್ರಾವಣ ಮಾಸದಲ್ಲಿ ಬರುವ ಮಂಗಳವಾರ ಆಚರಿಸಬೇಕು (೫ ವರ್ಷಗಳು). ೭. ಸ್ವರ್ಣಗೌರೀ ವೃತ ಭಾದ್ರಪದ ಮಾಸದ ಶುಕ್ಲ ತೃತೀಯದಂದು ಶ್ರೀ ದೇವಿಯ ಅನುಗ್ರಹ ಪ್ರಾಪ್ತಿಗಾಗಿ ಚಿಂತಿತ ಮನೋಕಾಮನೆ ಪ್ರಾಪ್ತಿಗಾಗಿ ಈ ವೃತವನ್ನು ಮಾಡಬೇಕು. ೮. ಭೀಮನ ಅಮವಾಸ್ಯೆ ವೃತ(ಪತಿಸಂಜೀವಿನಿ ವೃತ) ಆಷಾಢ ಮಾಸದ ಅಮವಾಸ್ಯೆಯಂದು ವಿವಾಹಿತೆಯರು ಮತ್ತು ಅವಿವಾಹಿತೆಯರು ಸುದೀರ್ಘಕಾಲ ಸೌಮಾಂಗಲ್ಯ ಪ್ರಾಪ್ತಿಗಾಗಿ, ಆಯುಃರಾರೋಗ್ಯ ಐಶ್ವರ್ಯ ಪ್ರಾಪ್ತಿಗಾಗಿ ಈ ವೃತವನ್ನು ಮಾಡಬೇಕು (೯ ವರ್ಷಗಳ ವೃತ) ೯. ಕೃಷ್ಣ ಜನ್ಮಾಷ್ಟಮೀ ವೃತ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀಕೃಷ್ಣನು ಭೂಮಿಯ ಮೇಲೆ ಅವತರಿಸಿದನು. ಈ ದಿನದಂದು ಎಲ್ಲಾ ಮನಸ್ಸಿನ ಕಾಮನೆ ಪೂರ್ತಿಗಾಗಿ ಈ ವೃತವನ್ನು ಮಾಡಬೇಕು. ೧೦. ವರಮಹಾಲಕ್ಷ್ಮಿ ವೃತ ಶ್ರಾವಣ ಮಾಸದ ಶುಕ್ಲ ಪಕ್ಷದ ೨ನೇ ಶುಕ್ರವಾರದಂದು ಸುವಾಸಿನಿಯರು ಸಕಲ ಸೌಭಗ್ಯ ಪ್ರಾಪ್ತಿಗಾಗಿ ಈ ವೃತವನ್ನು ಮಾಡಬೇಕು. ೧೧. ಸರಸ್ವತೀ ವೃತ ಅಶ್ವೀಜ ಶುಕ್ಲ ನವರಾತ್ರಿಯಲ್ಲಿ ಬರುವ ಮೂಲಾ ನಕ್ಷತ್ರದಂದು ವಿದ್ಯಾ ಪ್ರಾಪ್ತಿಗಾಗಿ ಈ ವೃತವನ್ನು ಮಾಡಬೇಕು. ೧೨. ಶರನ್ನವರಾತ್ರಿ ವೃತ ಅಶ್ವೀಜ ಶುಕ್ಲ ಪ್ರತಿಪದೆಯಿಂದ ಮಹಾ ನವಮಿಯವರೆಗೆ ಉಪವಾಸವಿದ್ದು ಜಗನ್ಮಾತೆಯ ಅನುಗ್ರಹಕ್ಕಾಗಿ, ಎಲ್ಲಾ ಮನೋಕಾಮನೆಗಳ ಪ್ರಾಪ್ತಿಗಾಗಿ ಈ ವೃತವನ್ನು ಭಕ್ತಿ-ಶ್ರದ್ಧೆಯಿಂದ ಮಾಡಬೇಕು. ೧೩. ಕೇದಾರೇಶ್ವರ ವೃತ ಆಶ್ವೀಜ ಮಾಸದ ಅಮವಾಸ್ಯೆಯ ದಿನದಂದು ಧರ್ಮ-ಅರ್ಥ-ಕಾಮ-ಮೋಕ್ಷ ಪ್ರಾಪ್ತಿ ಮತ್ತು ಪುತ್ರ-ಪೌತ್ರಾದಿ ಅಭಿವೃದ್ಧಿಗಾಗಿ ಆಚರಿಸಬೇಕು. ೧೪. ಹದಿನಾರು ಸೋಮವಾರ ವೃತ ಈ ವೃತವನ್ನು ಪರಶಿವನ ಅನುಗ್ರಹ ಪ್ರಾಪ್ತಿಗಾಗಿ, ವಿವಾಹವಾಗಲೆಂದು, ಪುತ್ರ-ಪೌತ್ರಾದಿ ಅಭಿವೃದ್ಧಿಗಾಗಿ, ಕಾರ್ಯದಲ್ಲಿ ವಿಜಯಕ್ಕಾಗಿ, ಲಕ್ಷ್ಮೀ ಪ್ರಾಪ್ತಿಗಾಗಿ ಹೀಗೆ ಎಲ್ಲ ಮನೋಕಾಮನೆಗಳನ್ನು ಪಡೆಯಲು ಆಚರಿಸಬೇಕು. ೧೫. ಮಾಸ ಶಿವರಾತ್ರಿ ವೃತ ಪ್ರತಿ ತಿಂಗಳಿನ ಕೃಷ್ಣ ಪಕ್ಷದ ಚತುರ್ದಶಿಯ ದಿನದಂದು ಜನ್ಮ ಜನ್ಮಾಂತರದಲ್ಲಿ ಮಾಡಿದ ಪಾಪ ಕ್ಷಯವಾಗಿ ಮನೋಕಾಮನೆಯನ್ನು ಪಡೆಯಲು ಈ ವೃತವನ್ನು ಮಾಡಬೇಕು. ೧೬. ವಟ ಸಾವಿತ್ರಿ ವೃತ ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನದಂದು ಸ್ತ್ರೀಯರು ತಮ್ಮೆಲ್ಲ ಮನೋಕಾಮನೆಗಳನ್ನು, ದೀರ್ಘ ಸೌಮಾಂಗ್ಯ ಪ್ರಾಪ್ತಿಗಾಗಿ ಈ ವೃತವನ್ನು ಮಾಡಬೇಕು. ೧೭. ಗಜಗೌರೀ ವೃತ ಭಾದ್ರಪದ ಕೃಷ್ಣ ಅಷ್ಟಮಿಯಂದು ಸಹ ಕುಟುಂಬದ ಎಲ್ಲ ಮನೋಕಾಮನೆ ಪ್ರಾಪ್ತಿಗಾಗಿ, ಧರ್ಮ-ಅರ್ಥ-ಕಾಮ-ಮೋಕ್ಷ ಪ್ರಾಪ್ತಿಗಾಗಿ ಈ ವೃತವನ್ನು ಆಚರಿಸಬೇಕು. ೧೮. ವೈಕುಂಠ ಚತುರ್ದಶೀ ವೃತ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶೀ ದಿನದಂದು ಜನ್ಮ-ಜನ್ಮಾಂತರೇಣ ಮಾಡಿದ ಪಾಪ ಪರಿಹಾರಕ್ಕಾಗಿ ಈ ವೃತವನ್ನು ಮಾಡಬೇಕು. ೧೯. ಮಹಾಶಿವರಾತ್ರೀ ವೃತ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಶಿವ-ಪಾರ್ವತಿಯರು ಒಂದಾದ ದಿನ. ಈ ದಿನದಂದು ಶಿವಾರಾಧನೆ ಮಾಡಿದರೆ ಎಲ್ಲಾ ಪಾಪವು ಕ್ಷಯವಾಗುತ್ತದೆ. ಅಲ್ಲದೆ ಎಲ್ಲ ಮನೋಕಾಮನೆ ಪ್ರಾಪ್ತಿಗಾಗಿ ಈ ವೃತವನ್ನು ಮಾಡಬೇಕು. ೨೦. ಉಪಾಂಗ ಲಲಿತಾ ವೃತ ಈ ವೃತವನ್ನು ಅಶ್ವೀಜ ಮಾಸದ ಶುಕ್ಲ ಪಂಚಮಿಯಂದು ಮಕ್ಕಳಿಗೆ ವಿದ್ಯಾ ಪ್ರಾಪ್ತಿಗಾಗಿ, ರೋಗ ನಿವೃತ್ತಿಗಾಗಿ, ಸುಖ, ವಿಜಯ ಪ್ರಾಪ್ತಿಗಾಗಿ ಈ ವೃತವನ್ನು ಮಾಡಬೇಕು. ೨೧. ಜ್ಯೇಷ್ಠಾ ದೇವೀ ವೃತ ಭಾದ್ರಪದ ಶುಕ್ಲ ಅಷ್ಟಮಿ ದಿವಸ ಜ್ಯೇಷ್ಠಾ ನಕ್ಷತ್ರದಲ್ಲಿ ಈ ವೃತವನ್ನು ಮಾಡಬೇಕು. ಅಷ್ಟಮಿಯ ದಿನ ಜ್ಯೆಷ್ಠಾ ನಕ್ಷತ್ರ ಇಲ್ಲದಿದ್ದರೆ ಮಾರನೆಯ ದಿನ ಅನುರಾಧಾ ನಕ್ಷತ್ರದಲ್ಲಿ ಇದನ್ನು ಆಚರಿಸಬಹುದು. ಆವಾಹನೆ ಅನುರಾಧಾ ನಕ್ಷತ್ರದಲ್ಲಿ , ವಿಸರ್ಜನೆ ಮೂಲಾ ನಕ್ಷತ್ರದಲ್ಲಿ ಆಗಬೇಕು. ಸ್ತ್ರೀಯುರಿಗೆ ಸಕಲ ಸೌಭಾಗ್ಯ, ಧನಧಾನ್ಯ, ಐಶ್ವರ್ಯಾದಿಗಳನ್ನು ಕೂಡಲೇ ದಯಪಾಲಿಸುವ ವೃತವೇ ಜ್ಯೇಷ್ಠಾ ದೇವೀ ವೃತ. ೨೨. ಸತ್ಯ ನಾರಾಯಣ ವೃತ ಸಕಲ ಇಷ್ಟಾರ್ಥ ಪ್ರಾಪ್ತಿಗಾಗಿ ಯಾವಾಗ ಈ ವೃತವನ್ನು ಮಾಡಬೇಕೆಂದು ಮನಸ್ಸಿಗೆ ಬರುವುದೋ ಆ ದಿನವಾಗಲಿ ಅಥವಾ ಪೂರ್ಣಿಮಾ, ಸಂಕ್ರಾಂತಿ ಮೊದಲಾದ ದಿನಗಳಲ್ಲಿ ಪ್ರದೋಷ ಕಾಲದಲ್ಲಿ ಈ ವೃತವನ್ನು ಆಚರಿಸಬೇಕು. ೨೩. ರಥ ಸಪ್ತಮಿ ವೃತ ಸಕಲ ರೋಗ ಪರಿಹಾರಕ್ಕಾಗಿ ಮಾಘ ಶುಕ್ಲ ಷಷ್ಠಿಯ ದಿನ ಈ ವೃತವನ್ನು ಆಚರಿಸಬೇಕು. ೨೪. ಶನಿ ಪ್ರದೋಷ ವೃತ ಶನಿ ತ್ರಯೋದಶಿ ಎಂಬ ಈ ವೃತವನ್ನು ಶ್ರಾವಣ ಅಥವಾ ಕಾರ್ತೀಕ ಮಾಸದ ಶುಕ್ಲ ಪಕ್ಷದಲ್ಲಿ ತ್ರಯೋದಶಿಯು ಶನಿವಾರವಾಗಿಯೂ, ಜಯನಾಮ ಯೋಗವಾಗಿಯೂ ಇರುವಾಗ ಋಣ ದಾರಿದ್ರ್ಯ, ಕಷ್ಟ ನಿವಾರಣೆಗಾಗಿ ಆಚರಿಸಬೇಕು. ೨೫. ಹರಿತಾಳಕ ಗೌರೀ ವೃತ ಭಾದ್ರಪದ ಮಾಸದ ತದಿಗೆಯ ದಿನ ಹಸ್ತಾ ನಕ್ಷತ್ರದಂದು ಸೌಭಾಗ್ಯವೂ,ಸಮಸ್ತ ಪಾಪ ಪರಿಹರಿಸುವಂತ, ಅಲ್ಪ ಪ್ರಯಾಸದಿಂದ ಅಧಿಕ ಫಲಕ್ಕಾಗಿ ಈ ವೃತವನ್ನು ಮಾಡಬೇಕು. ೨೬. ಆಮುಕ್ತಾಭರಣ ಸಪ್ತಮಿ ವೃತ ಬಂಜೆತನ ಪರಿಹಾರಕ್ಕಾಗಿ ಭಾದ್ರಪದ ಶುಕ್ಲ ಸಪ್ತಮಿಯ ದಿನ ಈ ವೃತವನ್ನು ಮಾಡಬೇಕು. ೨೭. ಸಂಕಷ್ಟಹರ ಚತುರ್ಥಿ ವೃತ ಮನುಷ್ಯನ ಸಕಲ ಕಷ್ಟಗಳನ್ನು, ಸಂಕಷ್ಟಗಳನ್ನು ಪರಿಹಾರ ಮಾಡತಕ್ಕ ಸಂಕಟಹರ ಗಣಪತಿ ವೃತವನ್ನು ಪ್ರತೀ ಮಾಸದಲ್ಲಿಯೂ ಕೃಷ್ಣ ಚೌತಿಯ ದಿನ ಆಚರಿಸಬೇಕು. ೨೮. ರಾಮ ನವಮೀ ವೃತ ಈ ವೃತವನ್ನು ಚೈತ್ರ ಶುದ್ಧ ನವಮಿಯ ದಿನ ಆಚರಿಸುತ್ತಾರೆ. ಇದು ಮನುಷ್ಯನ ಅನೇಕ ಜನ್ಮಗಳ ಪಾಪವನ್ನು ಪರಿಹರಿಸುತ್ತದೆ. ೨೯. ಕ್ಷೀರಾಬ್ಧಿ ದ್ವಾದಶಿ ವೃತ ಈ ವೃತವನ್ನು ಕಾರ್ತೀಕ ಶುದ್ಧ ದ್ವಾದಶಿ ದಿನ ಆಚರಿಸುತ್ತಾರೆ. ಇದರಿಂದ ಮನುಷ್ಯನ ಸಕಲ ಪಾಪಗಳು ವಿಮುಕ್ತಿಯಾಗಿ ಸಾಯುಜ್ಯವನ್ನು ಹೊಂದುತ್ತಾನೆ. ೩೦. ಮಾರ್ಗಶಿರ ಮಹಾಲಕ್ಷ್ಮೀ ವೃತ ಮಾರ್ಗಶಿರ ಮಾಸದ ಮುಖ್ಯವಾದ ಗುರುವಾರದ ದಿನ ಆಚರಿಸುವ ಈ ವೃತವು ಸ್ತ್ರೀಯರು ಆಚರಿಸತಕ್ಕ ವೃತಗಳಲ್ಲಿ ಅತ್ಯಂತ ಉತ್ತಮವಾಗಿದ್ದು, ಪುತ್ರ ಪೌತ್ರಾದಿ ಸಂಪತ್ತುಗಳನ್ನು ಕೊಡತಕ್ಕದ್ದಾಗಿದೆ. ೩೧. ಶ್ರಾವಣ ದ್ವಾದಶಿ ವೃತ ಈ ವೃತವನ್ನು ಶ್ರವಣಾ ನಕ್ಷತ್ರಯುತವಾದ ದ್ವಾದಶಿ ದಿನ ಆಚರಿಸುತ್ತಾರೆ. ಇದರಿಂದ ಸಕಲ ಪಾಪಗಳು ನಾಶವಾಗಿ ಸನ್ಮಂಗಲ ಉಂಟಾಗುತ್ತದೆ. ೩೨. ಅಮವಾಸ್ಯೆ ಸೋಮವಾರ ವೃತ(ಸೋಮವತಿ ಅಮವಾಸ್ಯೆ) ಅಮವಾಸ್ಯೆಯು ಸೋಮವಾರದ ದಿನ ಪ್ರಾಪ್ತವಾದಾಗ ಈ ವೃತವನ್ನು ಆಚರಿಸಬೇಕು. ಇದರಿಂದ ದೀರ್ಘಾಯುಷ್ಯವುಳ್ಳ ಸಂತತಿಯು ಪ್ರಾಪ್ತವಾಗುತ್ತದೆ. ೩೩. ಉಮಾ ಮಹೇಶ್ವರ ವೃತ ಈ ವೃತವನ್ನು ಭಾದ್ರಪದ ಶುದ್ಧ ಪೌರ್ಣಿಮೆಯ ದಿನ ಆಚರಿಸುತ್ತಾರೆ. ಇದರಿಂದ ಮನುಷ್ಯನ ಸಕಲ ಕಾಮ್ಯಗಳು ಸಿದ್ಧಿಯಾಗುತ್ತದೆ. ೩೪. ಗೋ ಪದ್ಮ ವೃತ ಈ ವೃತವನ್ನು ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತೀಕ ದ್ವಾದಶಿಯವರೆಗೂ ಆಚರಿಸಬಹುದು. ಈ ಚಾತುರ್ಮಾಸ್ಯ ವೃತವು ಸರ್ವ ದು:ಖ ಪರಿಹಾರವು,ಸಕಲ ಸೌಭಾಗ್ಯದಾಯಕವೂ ಆದುದು. ೩೫. ಹನುಮ ಜಯಂತಿ ವೃತ ಹನುಮಂತನ ಜನ್ಮದಿನವಾದ ಮಾರ್ಗಶಿರ ಶುದ್ಧ ತ್ರಯೋದಶಿ ಮೂಲಾ ನಕ್ಷತ್ರದಲ್ಲಿ ಈ ವೃತವನ್ನು ಆಚರಿಸುತ್ತಾರೆ.ಇದರಿಂದ ಜ್ಞಾನ,ಬಲ,ತೇಜಸ್ಸು,ನಿರ್ಭಯ ಸಿದ್ಧಿಯಾಗುತ್ತದೆ. ೩೬. ನರಸಿಂಹ ಜಯಂತಿ ವೃತ ವೈಶಾಖ ಶುಕ್ಲ ಚತುರ್ದಶಿಯ ದಿನ ಮಾಡುವ ಈ ವೃತವು ಬ್ರಹ್ಮ ಹತ್ಯಾದಿ ಪಂಚಮಹಾ ಪಾತಕಗಳನ್ನು ನಿವಾರಿಸುತ್ತದೆ. ಈ ರೀತಿಯಾಗಿ ಹಲವಾರು ವೃತಾದಿಗಳಿದ್ದು ಪುರಾಣ ಹಾಗೂ ಶಾಸ್ತ್ರಗಳಲ್ಲಿ ವಿಧಿಸಿದಂತೆ ಆಯಾಯ ದಿನಗಳಲ್ಲಿ ಮಾಡಬೇಕಾಗುತ್ತದೆ. ಇದರಿಂದ ಎಲ್ಲಾ ವಿಧವಾದ ಮನೋಕಾಮನೆಗಳು ಪೂರ್ಣವಾಗುತ್ತದೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...