Skip to main content

ಸಂಸ್ಕಾರಗಳು ೧೬

ಸಂಸ್ಕಾರಗಳು ಕೃಷಿಕನು ತನ್ನ ಹೊಲದಿಂದ ಭತ್ತದ ಗಿಡವನ್ನು ಕೊಯ್ದುತಂದು ಭತ್ತಗಳನ್ನು ಬೇರ್ಪಡಿಸಿ ಕುಟ್ಟಿ ಶುದ್ದಿಗೊಳಿಸಿ ಉತ್ತಮವಾದ ಅಕ್ಕಿಯನ್ನು ತಯಾರಿಸುವನೋ, ಹಾಗೇ ಸಂಸ್ಕಾರ ಎನ್ನುವುದು ಮನುಷ್ಯನನ್ನು ಪರಿಪಕ್ವನನ್ನಾಗಿ ಮಾಡುವುದು, ಶುದ್ಧೀಕರಿಸುವಂತಹದ್ದು. ಪ್ರಧಾನವಾಗಿ ೧೬ ಸಂಸ್ಕಾರಗಳು ಇವೆ. ೧. ಗರ್ಭಾದಾನ ಹೆಣ್ಣು ಮತ್ತು ಗಂಡು ಮದುವೆಯಾಗಿ ಅವರು ಸೇರುವ ಮುನ್ನ ತಮ್ಮ ಜನ್ಮಾಂತರದಿಂದ ಬರುವಂತಹ ದೋಷ ನಿವಾರಣೆಗಾಗಿ ಗರ್ಭಾದಾನವೆಂಬ ವೈದಿಕ ಸಂಸ್ಕಾರವನ್ನು ಮಾಡಬೇಕು. ಗರ್ಭಾದಾನವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ರೋಹಿಣಿ, ಉತ್ತರಾ, ಹಸ್ತ, ಸ್ವಾತಿ, ಅನುರಾಧಾ,ಮೂಲಾ, ಉ.ಷಾಢಾ, ಶ್ರವಣ, ರೇವತಿ, ಉ. ಭಾದ್ರ ತಿ,ಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ ಕಾಲ: ರಸಜ್ವಲೆ ಅಥವಾ ಋತುಮತಿಯಾದ ಮೇಲಿನ ೫ ರಿಂದ ೧೦ ದಿನದವರೆಗೆ ಮತ್ತು ೧೪ ರಿಂದ ೧೬ ದಿನದ ರಾತ್ರಿಯವರೆಗೆ ಲಗ್ನ: ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ಧನು, ಮೀನ ಹೀಗೆ ವೈದಿಕ ಸಂಸ್ಕಾರವಾದ ನಂತರ ಮೇಲೆ ಹೇಳಿದ ವಾರ, ತಿಥಿ, ನಕ್ಷತ್ರ, ಲಗ್ನಗಳಲ್ಲಿ ಪತಿ-ಪತ್ನಿಯರು ಸೇರಬೇಕು. ೨. ಪುಂಸವನ ಸಂಸ್ಕಾರ ಪ್ರಥಮ ಗರ್ಭ ಉಂಟಾದ ೩ನೇ ತಿಂಗಳಿನಲ್ಲಿ ಪುತ್ರ ಸಂತತಿ ಪ್ರಾಪ್ತಿಗಾಗಿ ಈ ವೈದಿಕ ಸಂಸ್ಕಾರವನ್ನು ಮಾಡಬೇಕು. ಈ ವಿಧಿಯಲ್ಲಿ ವಿಶೇಷವಾಗಿ ೨ ಉದ್ದು ಮತ್ತು ೧ ಗೋಧಿಯ ಪ್ರಾಶನವನ್ನು ವಿಧಿಸಿದೆ. ಪುಂಸವನ ಸಂಸ್ಕಾರವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ರೋಹಿಣಿ, ಪುನರ್ವಸು, ಪುಷ್ಯ, ಹಸ್ತ, ಸ್ವಾತಿ, ಅನುರಾಧಾ, ಶ್ರವಣ, ಉ. ಭಾದ್ರ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ ಕಾಲ: ೩ನೇ ತಿಂಗಳಿನಲ್ಲಿ ಲಗ್ನ: ಮೇಷ, ಧನು, ಮೀನ ಈ ತಿಥಿ, ವಾರ, ನಕ್ಷತ್ರ, ಲಗ್ನ, ಕಾಲಗಳಲ್ಲಿ ಪುಂಸವನ ಸಂಸ್ಕಾರವನ್ನು ಮಾಡಬೇಕು. ೩. ಅನವಲೋಭನ ಸಂಸ್ಕಾರ ಗರ್ಭವು ಮಧ್ಯದಲ್ಲಿ ನಾಶವಾಗದಂತೆ ರಕ್ಷಿಸಲು ಈ ವೈದಿಕ ಸಂಸ್ಕಾರವನ್ನು ಮಾಡಬೇಕು. ಈ ಸಂಸ್ಕಾರವನ್ನು ಪುಂಸವನ ಸಂಸ್ಕಾರದಲ್ಲಿ ಹೇಳಲಾದ ತಿಥಿ, ವಾರ, ನಕ್ಷತ್ರ, ಲಗ್ನದಲ್ಲಿ ೩ನೇ ಅಥವಾ ೪ನೇ ತಿಂಗಳಲ್ಲಿ ಮಾಡಬೇಕು. ೪. ಸೀಮಂತ ಸಂಸ್ಕಾರ ಈ ಸಂಸ್ಕಾರವನ್ನು ಗರ್ಭಿಣಿಯ ಪ್ರಥಮ ಗರ್ಭದ ೭ನೇ ಅಥವ ೯ನೇ ತಿಂಗಳಲ್ಲಿ ಮಾಡಬೇಕು. ವೈದಿಕರಿಂದ ಉದಕ ಶಾಂತ್ಯಾದಿಯನ್ನು ಮಾಡಿಸಿ, ಗರ್ಭಿಣಿಯು ಬಯಸುವ ತಿಂಡಿ ತಿನಿಸುಗಳನ್ನು ಮಾಡಿ, ಉಡಿಯನ್ನು ತುಂಬಿ ಗುರು-ಹಿರಿಯರಿಂದ ಆಶೀರ್ವಾದವನ್ನು ಪಡೆಯುವುದು. ಇದು ಗರ್ಭಿಣಿಗೆ ಮಾಡುವಂತಹ ಮೊದಲನೆ ಸಂಸ್ಕಾರವಾಗಿರುತ್ತದೆ. ಸುಖ ಪ್ರಸವ ಹಾಗೂ ಗರ್ಭಸ್ಥ ಶಿಶುವಿನ ಸುಬುದ್ಧಿ ಬೆಳವಣಿಗೆಗೂ ಅನುಕೂಲವಾಗುತ್ತದೆ. ಯಾವಾಗ ಈ ಸಂಸ್ಕಾರವನ್ನು ಮಾಡಬೇಕು? ವಾರ: ಸೋಮವಾರ, ಬುಧವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಯ, ಉತ್ತರಾ, ಹಸ್ತ, ಸ್ವಾತಿ, ಅನುರಾಧಾ, ಮೂಲ, ಉ.ಷಾಡ, ಶ್ರವಣ, ಉ. ಭಾದ್ರ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ ಲಗ್ನ: ಮೇಷ, ಧನು, ಮೀನ ಉತ್ತಮ. ವೃಷಭ, ಕರ್ಕ ಸಾಮಾನ್ಯ. ಕಾಲ: ಪ್ರಥಮ ಗರ್ಭದ ೭ ಅಥವಾ ೮ನೇ ತಿಂಗಳು ( ೬ನೇ ಮತ್ತು ೮ನೇ ತಿಂಗಳಲ್ಲೂ ಕೆಲವರು ಮಾಡುತ್ತಾರೆ.) ೫. ಜಾತಕರ್ಮ ಸಂಸ್ಕಾರ ಈ ಸಂಸ್ಕಾರವನ್ನು ಮಗು ಜನಿಸಿದ ಮೇಲೆ ಮಗುವಿಗೆ ಎಲ್ಲಾ ವಿಧವಾದ ಮೃತ್ಯು ಪೀಡೆ ಪರಿಹಾರವಾಗಿ ಆಯುಃ ಶ್ರೀಃ ಬಲ ವೃದ್ಧಿಗಾಗಿ ಮಾಡುತ್ತಾರೆ. ಈ ವೇಳೆಯಲ್ಲಿ ಮಗುವಿಗೆ ಸುವರ್ಣದಿಂದ ಜೇನುತುಪ್ಪ ಮತ್ತು ತುಪ್ಪದ ಮಿಶ್ರಣವನ್ನು ಬಾಯಿಗೆ ಹಾಕುವುದು ರೂಢಿ. ಈ ಸಂಸ್ಕಾರ ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಯ, ಉತ್ತರಾ, ಹಸ್ತ, ಸ್ವಾತಿ, ಅನುರಾಧಾ, ಮೂಲ, ಶ್ರವಣ, ಉ. ಭಾದ್ರ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿಯಲ್ಲಿ ಚಂದ್ರಬಲವನ್ನು ನೋಡಿ ಮಾಡಬೇಕು. ೬. ನಾಮಕರಣ ಸಂಸ್ಕಾರ ಇದನ್ನು ಮಗು ಜನಿಸಿದ ೧೧ನೇ ದಿನ ಗೋಮಯ ಮತ್ತು ಪುಣ್ಯಾಹವಾಚನೆಗಳಿಂದ ಶುದ್ಧಗೊಳಿಸಿದ ಮೇಲೆ ಆಯುರ್ವೃದ್ಧಿ ಹಾಗೂ ಲೋಕದಲ್ಲಿ ವ್ಯವಹಾರ ಮತ್ತು ಪ್ರತಿಷ್ಠೆ ಪ್ರಾಪ್ತಿಗಾಗಿ ಮಾಡುತ್ತಾರೆ. ಈ ಸಂಸ್ಕಾರವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಯ, ಮಘ, ಉತ್ತರಾ, ಹಸ್ತ, ಸ್ವಾತಿ, ಅನುರಾಧಾ, ಶ್ರವಣ, ಉ.ಷಾಢ , ಉ. ಭಾದ್ರ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ ಲಗ್ನ: ವೃಷಭ, ಸಿಂಹ, ಕುಂಭ ಉತ್ತಮ. (ಕರ್ಕ, ಮೀನ, ವೃಶ್ಚಿಕ ಸಾಮಾನ್ಯ) ಕಾಲಗಳು: ಮಗು ಜನಿಸಿದ ೧೧ನೇ ದಿನ, ಇಲ್ಲವಾದಲ್ಲಿ ೧೨ನೇ ದಿನ ೧೬-೨೦, ೨೨ನೇ ದಿನದಲ್ಲಿ ಬ್ರಾಹ್ಮಣ ಮುಖೇನ ಮಾಡುವುದು ಉತ್ತಮ. ೭. ನಿಷ್ಕ್ರಮಣ ಸಂಸ್ಕಾರ ಈ ಸಂಸ್ಕಾರವನ್ನು ಸಾಮಾನ್ಯವಾಗಿ ನಾಮಕರಣವಾದ ಮೇಲೆ ಹಾಲು ಮತ್ತು ಮೊಸರು, ಗಂಧ, ಪುಷ್ಪಕ್ಷತೆ ಜೊತೆಗೆ ತಾಯಿ ಮತ್ತು ಮಗು ಮನೆಯಿಂದ ಹೊರಗೆ ಬಂದು ಇಂದ್ರಾದಿ ಎಂಟು ದಿಕ್ಕಿನ ದೇವತೆಗಳಿಗೆ ನಮಸ್ಕರಿಸಿ ಸೂರ್ಯ, ಚಂದ್ರ, ನಕ್ಷತ್ರ ಹಾಗೂ ದಿಗಂತದಲ್ಲಿರುವ ಎಲ್ಲ ದೇವತೆಗಳ ದರ್ಶನ ಪಡೆದು ಮಗುವನ್ನು ರಕ್ಷಿಸುವಂತೆ ಪ್ರಾರ್ಥನೆ ಮಾಡುವುದು. ಅಲ್ಲದೇ ಗುರು-ಹಿರಿಯರಿಂದ ಆಶೀರ್ವಾದವನ್ನು ಪಡೆಯುವುದು. ಇದನ್ನು ಮಾನಸಿಕ ಹಾಗೂ ಶಾರೀರಿಕ ಶಕ್ತಿವರ್ಧನೆಗೆಂದು ಮಾಡಬೇಕು. ಇದನ್ನು ನಾಮಕರಣದ ಜೊತೆಗೆ ಮಾಡುವುದು ಉತ್ತಮ. ಇಲ್ಲವಾದರೆ ಅವರವರ ಪದ್ಧತಿಯಂತೆ ಮಾಡಬಹುದು. ೮. ಅನ್ನ ಪ್ರಾಶನ ಸಂಸ್ಕಾರ ಅನ್ನಮಯವಾದ ಈ ದೇಹಕ್ಕೆ ಅನ್ನವೇ ಪ್ರಾಣ. ಅನ್ನವೇ ಅಮೃತ, ಅನ್ನವೇ ಸರ್ವಸ್ವ. ಹೀಗಾಗಿ ಈ ಮಗುವಿಗೆ ಅನ್ನದಿಂದ ಆಯುಷ್ಯ, ತೇಜಸ್ಸು, ಬಲವೃದ್ಧಿಯಾಗಲೆಂದು ಅನ್ನಪ್ರಾಶನ ಮಾಡಬೇಕು. ಈ ವೇಳೆಯಲ್ಲಿ ಮಗುವಿಗೆ ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ ಈ ಪಂಚ ಅಮೃತ ಮಿಶ್ರಿತ ಅನ್ನವನ್ನು ಸುವರ್ಣದಿಂದ ಪ್ರಾಶನ ಮಾಡಿಸಬೇಕು. ಈ ಸಂಸ್ಕಾರವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ (ರವಿವಾರ) ನಕ್ಷತ್ರ: ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಯ, ಉತ್ತರಾ, ಹಸ್ತ, ಸ್ವಾತಿ, ಅನುರಾಧಾ, ಶ್ರವಣ, ಉ. ಭಾದ್ರ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ ಲಗ್ನ: ವೃಷಭ, ಮಿಥುನ, ಕರ್ಕ, ಧನು, ಮೀನ ಕಾಲ: ಚಂದ್ರ, ಬುಧ, ಗುರು, ಶುಕ್ರ ಗ್ರಹಗಳು ಶುಭವಿದ್ದಾಗ ಗುರು ಮತ್ತು ಶುಕ್ರ ಅಸ್ತಂಗತವಿಲ್ಲದಿರುವಾಗ ಮಾಡಬೇಕು. ಗಂಡು ಮಗುವಿಗೆ ೬,೮,೧೦, ೧೨ನೇ ತಿಂಗಳಿನಲ್ಲಿ, ಹೆಣ್ಣು ಮಗುವಿಗೆ ೭,೯,೧೧ನೇ ತಿಂಗಳಿನಲ್ಲಿ ಈ ಸಂಸ್ಕಾರವನ್ನು ಮಾಡಬೇಕು. ೯. ಚೌಲ ಸಂಸ್ಕಾರ ಜನನವಾದಾಗಿನಿಂದ ಬೆಳೆದು ಬಂದಿರುವ ಕೇಶಗಳನ್ನು ಮಗುವಿನ ಆಯುರ್ವೃದ್ಧಿ, ತೇಜಸ್ಸು ವೃದ್ಧಿಗಾಗಿ ಅವರವರ ಕುಲ ಧರ್ಮದಂತೆ ಜುಟ್ಟು ಬಿಡುವ ಮೂಲಕ ಕೇಶಗಳನ್ನು ಶಾಸ್ತ್ರೋಕ್ತವಾಗಿ ತೆಗೆಯುವ ಸಂಸ್ಕಾರ. ಈ ಸಂಸ್ಕಾರವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ (ರವಿವಾರ) ನಕ್ಷತ್ರ: ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಹಸ್ತ, ಶ್ರವಣ, ಧನಿಷ್ಠ ಉತ್ತಮ.(ರೋಹಿಣಿ,ಉತ್ತರ, ಸ್ವಾತಿ, ಅನುರಾಧಾ, ಉ.ಷಾಢ, ಉ.ಭಾದ್ರಪದ ) ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ ಲಗ್ನ: ವೃಷಭ, ಮಿಥುನ, ಕರ್ಕ, ಧನು, ಮೀನ ಕಾಲ: ತಾಯಿ ಗರ್ಭಿಣಿ ಅಲ್ಲದಿರುವಾಗ ಜನ್ಮ ರಾಶಿಯಿಂದ ಅಷ್ಟಮ ಶುದ್ಧಿ ಇರುವಾಗ ಬೆಸ ತಿಂಗಳುಗಳಲ್ಲಿ ಅಂದರೆ ೭,೯,೧೧ನೇ ತಿಂಗಳಿನಲ್ಲಿ ಅಥವಾ ೩,೫ನೇ ವರ್ಷದಲ್ಲಿ ಉತ್ತರಾಯಣದಲ್ಲಿ ಮಾಡಬೇಕು. ೧೦. ಉಪನಯನ ಸಂಸ್ಕಾರ ಈ ಸಂಸ್ಕಾರವನ್ನು ಮಗುವಿಗೆ ಬುದ್ಧಿ, ಶಕ್ತಿ ವರ್ಧನೆಗೆ ಮತ್ತು ಬ್ರಹ್ಮ ತೇಜಸ್ಸು ವೃದ್ಧಿಗಾಗಿ ದ್ವಿಜತ್ವ ಪ್ರಾಪ್ತಿಗಾಗಿ ವೇದ, ಶಸ್ತ್ರಾ, ಪುರಾಣ ಅಧ್ಯಯನ, ಅಧಿಕಾರ ಪ್ರಾಪ್ತಿಗಾಗಿ ಮಾಡಲೇಬೇಕದಂತಹ ಸಂಸ್ಕಾರ. ಈ ಸಂಸ್ಕಾರವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಹಸ್ತ, ಶ್ರವಣ, ಧನಿಷ್ಠ, ರೋಹಿಣಿ,ಉತ್ತರ, ಸ್ವಾತಿ, ಅನುರಾಧಾ, ಉ.ಭಾದ್ರಪದ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ ಲಗ್ನ: ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕುಂಭ, ಮೀನ ಕಾಲ: ತಾಯಿ ಗರ್ಭಿಣಿ ಅಲ್ಲದಿರುವಾಗ ಮಗುವಿನ ಗರ್ಭಾದಿ ಅಷ್ಟಮ ವರ್ಷದಲ್ಲಿ ಅಂದರೆ ಬ್ರಾಹ್ಮಣರಿಗೆ ೭ ಮತ್ತು ೮ನೇ ವಯಸ್ಸಿನಲ್ಲಿ, ಕ್ಷತ್ರಿಯರಿಗೆ ೯ ಮತ್ತು ೧೦ನೇ ವಯಸ್ಸಿನಲ್ಲಿ, ವೈಶ್ಯರಿಗೆ ೧೧ನೇ ವರ್ಷದವರೆಗೆ ಉತ್ತರಾಯಣದಲ್ಲಿ ಚಂದ್ರಬಲವಿರುವಾಗ ಈ ಸಂಸ್ಕಾರವನ್ನು ಮಾಡಬೇಕು. ೧೧. ಮಹಾನಾಮ್ನಿ ವೃತ ೧೨. ಮಹಾವೃತ ೧೩. ಉಪನಿಷದ್ವೃತ ೧೪. ಗೋದಾನ ವೃತ ೧೫. ಸಮಾವರ್ತನ ೧೬. ವಿವಾಹ ಸಂಸ್ಕಾರ ಈ ಸಂಸ್ಕಾರಾದಿಗಳನ್ನು ಬ್ರಹ್ಮಚಾರಿಯು ಬ್ರಹ್ಮಚರ್ಯೆಯಿಂದ ಅಧ್ಯಯನಾದಿಗಳನ್ನು ಮುಗಿಸಿ ಬ್ರಹ್ಮಚರ್ಯೆಯನ್ನು ತ್ಯಜಿಸಿ ಗ್ರಹಸ್ಥಾಶ್ರಮ ಧರ್ಮವನ್ನು ಸ್ವೀಕರಿಸುವ ವೇಳೆಯಲ್ಲಿ ಈ ಸಂಸ್ಕಾರಾದಿಗಳನ್ನು ಮಾಡಬೇಕು. ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ, ರವಿವಾರ ನಕ್ಷತ್ರ: ಅಶ್ವಿನಿ, ಮೃಗಶಿರಾ, ಮಘ, ಪುಷ್ಯ, ಹಸ್ತ, ಶ್ರವಣ, ರೋಹಿಣಿ,ಉತ್ತರ, ಸ್ವಾತಿ, ಅನುರಾಧಾ, ಉ.ಭಾದ್ರಪದ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ ಲಗ್ನ: ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ಧನು ಮೀನ ಕಾಲ: ವಿವಾಹ ಲಗ್ನಕ್ಕೆ ಸಪ್ತಮ, ಅಷ್ಟಮ ಸ್ಥಾನ ಶುದ್ಧಿ ಇರುವಾಗ ಈ ಸಂಸ್ಕಾರಾದಿಗಳನ್ನು ಮಾಡಬೇಕು. -ಕೃಪೆ ಅಂತರ್ ಜಾಲ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...