Skip to main content

ವಿಶಾಖ ನಕ್ಷತ್ರದವರು ನೇರ ನುಡಿಯುವವರು

ನಕ್ಷತ್ರಗಳ ಸಾಲಿನಲ್ಲಿ 16ನೇ ನಕ್ಷತ್ರವೇ ವಿಶಾಖ. ವಿಶಾಖ ನಕ್ಷತ್ರದವರು ತಮ್ಮ ಹೆಸರಿನ ಮೊದಲ ಅಕ್ಷರವನ್ನು ತಿ, ತು, ತೇ ಮತ್ತು ತೊ ಗಳಿಂದ ಆರಂಭಿಸಿದರೆ ಒಳ್ಳೆಯದಾಗುವುದು. ಜೈನರ ಏಳನೇ ತೀರ್ಥಂಕರರಾದ ಸುಪಾರ್ಶ್ವನಾಥ ಸ್ವಾಮಿ ಈ ನಕ್ಷತ್ರದಲ್ಲಿಯೇ ಜನಿಸಿದವರು. ವೈಶಾಖ ಹುಣ್ಣಿಮೆ ದಿನ ವಿಶಾಖ ನಕ್ಷತದ ದಿನವೇ ಗೌತಮ ಬುದ್ಧರ ಜನನ ಆಗಿದೆ. ಪ್ರಖ್ಯಾತ ರಾಜಕಾರಣಿಗಳಾದ ಈಗಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಜನಿಸಿದುದು ಈ ನಕ್ಷತ್ರದಲ್ಲಿ. ಅಲ್ಲದೇ ಇಬ್ಬರದ್ದೂ ವೃಶ್ಚಿಕ ರಾಶಿ ಆಗಿರುವುದು ಇನ್ನೊಂದು ವಿಶೇಷ. ಈ ನಕ್ಷತ್ರದ ಚಿಹ್ನೆ ಕುಂಬಾರನ ಚಕ್ರ ರೂಪದಲ್ಲಿ 5 ನಕ್ಷತ್ರಗಳಿಂದ ಕೂಡಿರುತ್ತದೆ. ಹಾಗಾಗಿ ಪಂಚಮುಖಿ ರುದ್ರಾಕ್ಷಿ ಇವರಿಗೆ ಹಿಡಿಸಲಿದೆ. ಇಂದ್ರಾಗ್ನಿ ದೇವತೆ. ಸಾಲ ಕೊಡಲು ಈ ನಕ್ಷತ್ರ ಇರುವ ದಿನ ಉತ್ತಮ. ಆದರೆ ಯಾವುದೇ ಶುಭ ಕಾರ್ಯ, ವಿವಾಹಾದಿ ಮಂಗಳ ಕಾರ್ಯ, ಗೃಹ ಆರಂಭ ಮತ್ತು ಗೃಹ ಪ್ರವೇಶಗಳಿಗೆ ಉತ್ತಮ ದಿನವಲ್ಲ. ಆದರೆ ಔಷಧ ಅಂಗಡಿ ತೆರೆಯಲು, ಅಗ್ನಿ ಸಂಬಂಧ ವಸ್ತುಗಳ ವ್ಯವಹಾರ ಆರಂಭಿಸಲು, ಅಡುಗೆ ಅನಿಲ ವಿತರಿಸುವ ವ್ಯವಹಾರ ಆರಂಭಿಸಲು ಈ ನಕ್ಷತ್ರ ಬುಧವಾರ ಇದ್ದ ದಿನ ಉತ್ತಮ ಆಗಿದೆ. ಈ ದಿನ ಅಮೂಲ್ಯ ವಸ್ತು ಕಳೆದರೆ ಬೇಗನೇ ಸಿಗಲಿದೆ. ದೀರ್ಘ ರೋಗ ಚಿಕಿತ್ಸೆಗೆ ಮದ್ದು ಆರಂಭಿಸಲು ಉತ್ತಮ ದಿನ. ಈ ನಕ್ಷತ್ರದಲ್ಲಿ ಜನಿಸಿದವರು ಸಿಡುಕು ಸ್ವಭಾವದವರೂ, ದರ್ಪದಿಂದ ಮಾತಾಡತಕ್ಕವರು, ಉತ್ತಮ ಆಡಳಿತದಾರರು, ನೇರ ನುಡಿ ಇರತಕ್ಕವರು ಆಗುವರು. ಸ್ತ್ರೀ ಆದರೆ ಧನಿಕಳು, ಧರ್ಮ ಬಗ್ಗೆ ಶ್ರದ್ಧೆ ಉಳ್ಳವಳೂ, ಬಂಧುವರ್ಗದವರ ಮೇಲೆ ಅಭಿಮಾನ ಉಳ್ಳವಳೂ, ಹಿರಿಯರಿಗೆ ವಂದಿಸತಕ್ಕವಳೂ ಆಗುವಳು. ಈ ನಕ್ಷತ್ರದಲ್ಲಿ ರಜಸ್ವಲೆ ಆದರೆ ಸಿಡುಕು ಉಳ್ಳವಳೂ, ಹಿಂದು ಮುಂದು ಯೋಚಿಸದವಳೂ, ಪರರಿಗೆ ನಿಂದಿಸತಕ್ಕವಳೂ, ಜಗಳಗಂಟಿ ಆಗುವಳು. ಇವಳಿಗೆ ಪುತ್ರ ಸಂತಾಪ ಫಲವಿದೆ. ದ್ವಾದಶಿ ತಿಥಿ, ಗುರುವಾರ ಶತಭಿಷ ನಕ್ಷತ್ರ ಇರುವ ದಿನಗಳು ಘಾತ ಆಗಿರುತ್ತದೆ. 3, 12, 21 ಮತ್ತು 30 ತಾರೀಖು ಬುಧವಾರ ಇದ್ದ ದಿನ ಉತ್ತಮ. ವಿಶಾಖ ಬುಧವಾರ ಇದ್ದ ದಿನ ಉತ್ತಮ. ಅಮೃತ ಸಿದ್ಧಿಯೋಗ. ಆದರೆ ಭಾನುವಾರ, ಸೋಮವಾರ ಮತ್ತು ಮಂಗಳವಾರ ದಿನಗಳು ಉತ್ತಮವಲ್ಲ. ಯಾವ ಕಾರ್ಯವೂ ಮಾಡಬಾರದು. ಸಮಾಜದಲ್ಲಿ ಗುರುತಿಸತಕ್ಕ ಯೋಗ್ಯ ವ್ಯಕ್ತಿ ಆಗಬೇಕಾದರೆ ಹೆಸರನ್ನು ಸಾರ್ಥಕ ತಾರೆಗಳಾದ ಉತ್ತರ ಆಷಾಢ (ಜ, ಜಿ) ಕೃತ್ತಿಕೆ (ಅ, ಇ, ಉ) ಮತ್ತು ಉತ್ತರೆ (ಪ, ಪಿ) ಗಳಿಂದ ಆರಂಭದ ಹೆಸರು ಇಡತಕ್ಕದ್ದು. ಅನುರಾಧಾ (ಬುಧವಾರ), ಪುಷ್ಯ (ಗುರುವಾರ) ಹೊಸ ಬಟ್ಟೆ ಧರಿಸಲು, ರತ್ನಗಳನ್ನು ಖರೀದಿಸಲು ಉತ್ತಮ ದಿನಗಳು. ಮೂಲ (ಭಾನುವಾರ) ಅಶ್ವಿನಿ (ಶುಕ್ರವಾರ) ಗೃಹಪ್ರವೇಶ, ಗೃಹ ಆರಂಭ, ವಾಹನಗಳ ಖರೀದಿ ಮಾಡಲು ಉತ್ತಮ ದಿನಗಳು. ಉತ್ತರೆ (ಭಾನುವಾರ) ಉತ್ತರ ಆಷಾಢ (ಶುಕ್ರವಾರ) ಎಲ್ಲ ಕಾರ್ಯಗಳಿಗೆ ಉತ್ತಮ ದಿನಗಳು. ಜ್ಯೇಷ್ಠ, ರೇವತಿ ಮತ್ತು ಆಶ್ಲೇಷ ದಿನಗಳಲ್ಲಿ ದೂರದ ಪಯಣ ಮಾಡಬಾರದು. ಭರಣಿ ನಕ್ಷತ್ರದ ದಿನ ಶುಭ ಕಾರ್ಯ ಆರಂಭಿಸಬಾರದು. ಶ್ರವಣ, ಹಸ್ತ ಮತ್ತು ರೋಹಿಣಿ ದಿನಗಳಲ್ಲಿ ಜಾಗ್ರತೆ ಇರಬೇಕು. 5, 13, 34 ಮತ್ತು 70 ಕಂಟಕ ವರ್ಷಗಳು ಆಗಿದ್ದು ಪೂರ್ಣ ಆಯುಷ್ಯ 77 ವರ್ಷಗಳು. ಜನ್ಮ ನಕ್ಷತ್ರ ಎಂದರೆ ವಿಶಾಖದಲ್ಲಿ (ತಿ, ತು, ತೆ, ತೊ) ಹೆಸರಿದ್ದರೆ 3 ಕ್ಯಾರೆಟ್‌ನ ಕನಕಪುಷ್ಯರಾಗ ಹರಳಿನ ಉಂಗುರವನ್ನು ತೋರು ಬೆರಳಲ್ಲಿ ಧರಿಸತಕ್ಕದ್ದು. ಈ ನಕ್ಷತ್ರ ಸಂಜಾತ ಸ್ತ್ರೀಯೊಡನೆ ವಿವಾಹವಾದರೆ ಮೈದುನನಿಗೆ ದೋಷವಿದೆ. ಹಾಗಾಗಿ ಹಿರಿಯವ ವರ ಸಿಕ್ಕಿದರೆ ಉತ್ತಮ. ಹುಣ್ಣಿಮೆ ದಿನ ವಿಶಾಖ ನಕ್ಷತ್ರ ಇದ್ದುದರಿಂದ ಮಾಸಕ್ಕೆ ವೈಶಾಖ ಎಂದು ಹೆಸರು ಬಂತು. ಈ ತಿಂಗಳು ತುಂಬಾ ಉಷ್ಣತೆ ಪ್ರಭಾವವಿದೆ. ಆದರೆ ಈ ತಿಂಗಳು ಭೂಮಿ ಕಾದರೆ ಉತ್ತಮ ಮಳೆ ಮುಂದೆ ಬರಲಿದ್ದು ಕೃಷಿ ಉತ್ಪತ್ತಿ ಹೆಚ್ಚು ಆಗಲಿದೆ. ವಿವಾಹಾದಿ ಮಂಗಳ ಕಾರ್ಯಗಳಿಗೆ ಈ ತಿಂಗಳು ಉತ್ತಮ. ಈ ನಕ್ಷತ್ರದ ಕನ್ಯೆಗೆ ಕೃತಿಕೆ, ಆಶ್ಲೇಷ, ಉತ್ತರೆ, ಚಿತ್ರ, ಸ್ವಾತಿ, ಅನುರಾಧಾ, ಜ್ಯೇಷ್ಠ, ಧನಿಷ್ಠ, ಶತಭಿಷ ನಕ್ಷತ್ರಗಳ ವರನೊಡನೆ ವಿವಾಹ ಆಗಲು ಕೂಡಿ ಬರುತ್ತದೆ. ನಕ್ಷತ್ರದ 14ರಿಂದ 18 ಗಳಿಗೆಗಳು ವಿಷ ಕಾಲ ಆಗಿರುತ್ತದೆ. ಯಾವ ಕಾರ್ಯ ಮಾಡಬಾರದು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...