Skip to main content

ಸಾಮಾನ್ಯ ತಿಳುವಳಿಕೆ ಭಾಗ-೧

ಸಾಮಾನ್ಯ ತಿಳುವಳಿಕೆ ಭಾಗ-೧ ಪ್ರತಿ ನಿತ್ಯದ ಜೀವನದಲ್ಲಿ ಅನೇಕ ಪ್ರಕಾರದ ಸಂಶಯಗಳು ನಾವು ಮಾಡುತ್ತಿರುವ ಪೂಜೆ-ವೃತ-ಹೋಮಗಳಲ್ಲಿ ಕಂಡುಬರುತ್ತದೆ. ಇದನ್ನೆಲ್ಲಾ ತಿಳಿಯಲೇ ಬೇಕಾಗುತ್ತದೆ. ಆದ್ದರಿಂದ ನಾವಿಲ್ಲಿ ಭಾಗ-೧ ರಿಂದ ಹುಟ್ಟಿನಿಂದ ಸಾಯುವವರೆಗಿನ ಕೆಲವು ಬೇಕಾಗುವ ಮಾರ್ಗದರ್ಶನವನ್ನು ಮತ್ತು ಭಾಗ-೨ ರಲ್ಲಿ ಮರಣ ಹೊಂದಿದ ನಂತರ ಬೇಕಾಗುವ ಕೆಲವು ಮಾರ್ಗದರ್ಶನವನ್ನು ತಿಳಿಸಿರುತ್ತೇವೆ. ಇದರಿಂದ ಜನರಿಗೆ ಸ್ವಲ್ಪ ಮಟ್ಟಿಗಾದರೂ ಅನುಕೂಲವಾಗಲಿದೆ ಎಂದು ಭಾವಿಸುತ್ತೇವೆ. ಭಾಗ-೧ ಮಗು ಜನಿಸಿದಾಗನಿಂದ ಆರಂಭಿಸಿ ಸಹಸ್ರಚಂದ್ರ ದರ್ಶನದ ವರೆಗಿನ ಮಾಡಬೇಕಾದ ವಾರ,ತಿಥಿ, ನಕ್ಷತ್ರ, ಕಾಲ ಈ ಬಗೆಗಿನ ವಿವರಗಳನ್ನು ಹಿಂದಿನ ಭಾಗಗಳಲ್ಲಿ ತಿಳಿಸಿರುತ್ತೇವೆ.ಅವುಗಳ ಹೊರತಾದ ಕೆಲವು ವಿವರಗಳನ್ನು ಇಲ್ಲಿ ತಿಳಿಸಲು ಇಚ್ಛಿಸುತ್ತೇವೆ. ಇವುಗಳನ್ನು ಕೆಲವು ಪಂಚಾಂಗದಲ್ಲಿಯೂ ತಿಳಿಸಿರುತ್ತಾರೆ. ಆದರೆ ನಮ್ಮವರು ಪ್ರಾಂತಕ್ಕೆ ಒಂದೊಂದು ಪಂಚಾಂಗ ಬಳಸುತ್ತಾರೆ. ಎಲ್ಲದರಲ್ಲಿಯೂ ಎಲ್ಲಾ ವಿಷಯಗಳು ಇರಲಿಕ್ಕಿಲ್ಲ,ಇರಲಿ. ಸಾಮಾನ್ಯ ಜ್ಞಾನಕ್ಕಾಗಿಯಾದರೂ ತಿಳಿಯಲೇ ಬೇಕಾದ ವಿಷಯವಿದು. ೧. ಪೂಜೆ ಎಂದರೇನು? In our culture, we do the idol of God from gold, silver, wood, stone, copper or diamond, … many more. The idol which we have created will not have the actual power which we expect. For this we have to do ಪಯಜ್ಞ_ಯಾಗpana to give the power to that idol and have to place in the proper place like how we treat our the guest by giving a place to sit with full of respect and honor. So to great the God with full of devotee and love is called ಪೂಜೆ. ೨. ಶಾಸ್ತ್ರೋಕ್ತ ಆದರ ಆತಿಥ್ಯ ಯಾವುದು? ೩. ಮನೆಯಲ್ಲಿ ಯಾವ ಯಾವ ದೇವರುಗಳನ್ನು ಇಡಬಹುದು? ಮುಖ್ಯವಾಗಿ ಆಚಾರ್ಯ ಶಂಕರರು ವಿಧಿಸಿದಂತೆ ಪಂಚಾಯತನ ಕ್ರಮವಿರುತ್ತದೆ. (ಕುಲ ದೇವರನ್ನು ಮೊದಲುಗೊಂಡು) -೧) ಸೂರ್ಯ ೨) ಗಣಪತಿ ೩) ಅಂಬಿಕಾ ೪) ಶಿವ ೫) ವಿಷ್ಣು ಹೀಗೆ ಐದು ದೇವತೆಗಳನ್ನು ಇಟ್ಟು ಪೂಜಿಸುವುದು. ಕೆಲವೊಮ್ಮೆ ನಮ್ಮ ಕುಲದೇವರು ವೀರಭದ್ರ ಅಥವಾ ವೆಂಕಟರಮಣ ಇಲ್ಲವೇ ರೇಣುಕಾದೇವಿ, ಹೀಗೆ ಬೇರೆ ಬೇರೆ ಇರಬಹುದು, ಆದರೆ ಇವು ಮೂಲ ಶಿವ, ವಿಷ್ಣು, ದೇವಿಯ ಅವತಾರವಿರುವುದರಿಂದ ಮುಖ್ಯ ದೇವತೆ ಪಂಚಾಯತನ ಕ್ರಮದಲ್ಲಿಯೇ ಪೂಜಿಸಿ ಅಥವಾ ಕುಲದೇವರು ಮೊದಲುಗೊಂಡು ಬಾಕಿ ಇನ್ನುಳಿದ ನಾಲ್ಕು ದೇವರನ್ನು ಇಟ್ಟು ಪೂಜಿಸಬಹುದು. ೪. ಪಂಚಾಯತನ ದೇವತೆಗಳನ್ನು ಇಡಲು ಕ್ರಮವಿದೆಯಾ? ಹೌದು. ಯಾವುದೇ ಕುಲದೇವರಿರಲಿ, ಅದನ್ನು ಮಧ್ಯದಲ್ಲಿಡಬೇಕು. ಬಾಕಿ ನಾಲ್ಕು ದೇವರುಗಳನ್ನು ಕ್ರಮವಾಗಿ ದಿಶೆ ಪ್ರಕಾರ ಇಡಬೇಕು. ಉದಾಹರಣೆ- ಅ) ಕುಲದೇವರು ವಿಷ್ಣು ಇರುವಾಗ ಕೆಳಗಿನಂತೆ ಇಡಬೇಕು. ಅಂಬಿಕೆ - ಪೂರ್ವ - ಶಿವ ಉತ್ತರ - ವಿಷ್ಣು - ದಕ್ಷಿಣ ಸೂರ್ಯ - ಪಶ್ಚಿಮ - ಗಣಪತಿ ಈಶಾನ್ಯ -- ಅಂಬಿಕೆ ಆಗ್ನೇಯ -- ಶಿವ ನೈರುತ್ಯ -- ಗಣಪತಿ ವಾಯುವ್ಯ -- ಸೂರ್ಯ ಆ) ಕುಲದೇವರು ಗಣಪತಿ ಇರುವಾಗ ಕೆಳಗಿನಂತೆ ಇಡಬೇಕು. ಅಂಬಿಕೆ - ವಿಷ್ಣು ಗಣಪತಿ ಸೂರ್ಯ - ಶಿವ ಈಶಾನ್ಯ -- ಅಂಬಿಕೆ ಆಗ್ನೇಯ -- ವಿಷ್ಣು ನೈರುತ್ಯ -- ಶಿವ ವಾಯುವ್ಯ -- ಸೂರ್ಯಯ 3. If ಅಂಬಿಕೆ is kula devata then placing as below. ಸೂರ್ಯ - ವಿಷ್ಣು ಅಂಬಿಕೆ ಗಣಪತಿ - ಶಿವ ಈಶಾನ್ಯ -- ಸೂರ್ಯ ಆಗ್ನೇಯ -- ವಿಷ್ಣು ನೈರುತ್ಯ -- ಶಿವ ವಾಯುವ್ಯ -- ಗಣಪತಿ ಈ) ಕುಲದೇವರು ಶಿವ ಇರುವಾಗ ಕೆಳಗಿನಂತೆ ಇಡಬೇಕು. ಅಂಬಿಕೆ - ವಿಷ್ಣು ಶಿವ ಗಣಪತಿ - ಸೂರ್ಯ ಈಶಾನ್ಯ -- ಅಂಬಿಕೆ ಆಗ್ನೇಯ -- ವಿಷ್ಣು ನೈರುತ್ಯ -- ಸೂರ್ಯ ವಾಯುವ್ಯ -- ಗಣಪತಿ ಉ) ಕುಲದೇವರು ಸೂರ್ಯ ಇರುವಾಗ ಕೆಳಗಿನಂತೆ ಇಡಬೇಕು. ಅಂಬಿಕೆ -ಶಿವ ಸೂರ್ಯ ಗಣಪತಿ - ಶಿವ ಈಶಾನ್ಯ -- ಅಂಬಿಕೆ ಆಗ್ನೇಯ -- ಶಿವ ನೈರುತ್ಯ -- ಗಣಪತಿ ವಾಯುವ್ಯ -- ವಿಷ್ಣು ಈ ಕ್ರಮದಲ್ಲಿ ಪಂಚಾಯತನ ದೇವರುಗಳನ್ನು ಇಟ್ಟು ಪೂಜಿಸಬೇಕು. ಅದರಿಂದ ನಮಗೆ ಸಂಪೂರ್ಣವಾಗಿ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದು. ೫. ಪೂಜಿಸುವ ವಿಗ್ರಹಗಳಿಗೆ ಹೀಗೆ ಇರಬೇಕು, ಇಷ್ಟೇ ಇರಬೇಕು ಎಂದೆಲ್ಲ ಇದೆಯೇ? ಹೌದು. ನಿತ್ಯ ಪೂಜೆಗೆ ಮನೆಯಲ್ಲಿ ಇಡುವ ಮೂರ್ತಿಯು ಯಜಮಾನನ ಹೆಬ್ಬೆರಳಿನಷ್ಟು ಉದ್ದವಿರಬಹುದು, ಮೂರ್ತಿಯು ಘನವಾಗಿರಬೇಕು(ತುಂಬಿರಬೇಕು, ಪೊಳ್ಳು ಇರಬಾರದು) ಅಂಗಾಂಗಗಳು ಸ್ಪಷ್ಟವಾಗಿರಬೇಕು. ಯಾವುದೇ ಭಾಗವು ತುಂಡಾಗಿರಬಾರದು. ಹಾಗಿದ್ದಲ್ಲಿ ಆ ಮೂರ್ತಿಯು ಪೂಜೆಗೆ ಯೋಗ್ಯವಾಗುತ್ತದೆ. ನಿಂತಿರುವ ಮೂರ್ತಿಗಿಂತ ಕುಳಿತಿರುವ ಮೂರ್ತಿ ಒಳ್ಳೆಯದು. ೬. ದೇವರನ್ನು ಇಡುವ ದಿಶೆ ಯಾವುದಾದರೆ ಒಳ್ಳೆಯದು? ದೇವರನ್ನು ಈಶಾನ್ಯದಲ್ಲಿ ಇಡುವುದು ಉತ್ತಮ. ಈಶಾನ್ಯದಲ್ಲಿ ಪಶ್ಚಿಮ ಅಭಿಮುಖ ಇಟ್ಟು ನಾವು ಪೂರ್ವಕ್ಕೆ ಮುಖವಾಗಿ ಕುಳಿತು ಪೂಜಿಸಬೇಕು. ಇಲ್ಲವೆ ಉತ್ತರ ಅಭಿಮುಖ ದೇವರನ್ನು ಇಟ್ಟಾಗ ನಾವು ಪಶ್ಚಿಮ ಮುಖವಾಗು ಕುಳಿತು ಪೂಜಿಸಬಹುದು. ಒಟ್ಟಿನಲ್ಲಿ ದೇವರನ್ನು ಪೂರ್ವ, ಉತ್ತರ, ಪಶ್ಚಿಮ ಮುಖವಿಟ್ಟು ಪೂಜಿಸಬೇಕು. ೭. ದೇವರನ್ನು ಇಡುವ ಪೀಠ ಹೇಗಿದ್ದರೆ ಉತ್ತಮ? ಅವರವರ ಕುಲಾಚಾರದಂತೆ ಪೀಠ ಇಡಬೇಕು. ಪೀಠಗಳಲ್ಲಿ ೨ ವಿಧ. ೧.ಗುಡಿ ಪೀಠ ೨. ತೊಟ್ಟಿಲು ಪೀಠ. ಪೀಠವನ್ನು ನೆಲದ ಮೇಲೆ ಇಡಬೇಕು. ಅಂದರೆ ಮರದ ಅಥವಾ ಕಲ್ಲಿನ ಪೀಠ ಇಡುವ ಸ್ಥಳವನ್ನು ನೆಲದ ನೇರಕ್ಕಿಂತ ಸ್ವಲ್ಪ ಎತ್ತರಗೊಳಿಸಿ ಅದರ ಮೇಲೆ ಪೀಠ ಇಡಬೇಕು. ಪೀಠಕ್ಕೆ ಗೋಪುರವಿರಬೇಕು. ಇದು ಪೃಥ್ವಿಯ ಅಂತರ್ಗತವಾಗ ಭಗವತ್ ಶಕ್ತಿಯನ್ನು ಎಳೆಯುವ (ಎರಿಯಲ್ ನಂತೆ) ಕೆಲಸ ಮಾಡುತ್ತದೆ. ದೇವರನ್ನು ಇಡುವ ಸ್ಥಳ ಪ್ರತ್ಯೇಕವಾಗಿದ್ದರೆ ಉತ್ತಮ. ೮. ದೇವರ ಸ್ಥಾನದಲ್ಲಿ ಇಡುವ ಶಂಖ, ಗಂಟೆ, ದೀಪದ ಮಹತ್ವ ಏನು? ನಮ್ಮನ್ನು ಅಜ್ಞಾನವೆಂಬ ಅಂಧಕಾರದಿಂದ ಹೊರ ತಂದು ಜ್ಞಾನದ ದಾರಿಯನ್ನು ತೋರಿಸಲು, ಭಗವತ್ ಶಕ್ತಿಯ ಆಕರ್ಷಣೆಗಾಗಿ, ಲಕ್ಷೀ ಪ್ರಾಪ್ತಿಗಾಗಿ ನಂದಾ ದೀಪವನ್ನು ಇಡಬೇಕು. ಸಮುದ್ರ ಮಥನಕಾಲದಲ್ಲಿ ಉತ್ಪನ್ನವಾದ ಶಂಖವನ್ನು ಮಹಾವಿಷ್ಣುವು ಕರದಲ್ಲಿ ಧರಿಸಿದನು. ಆಗ ಶಂಖವು ಅತಿ ಪಾವನವಾಯಿತು ಮತ್ತು ದೇವತೆಗಳ ರಾಜನಾದ ಇಂದ್ರನು, ವಾಸುದೇವನ ಆಜ್ಞೆಯಂತೆ ಶಂಖದಲ್ಲಿ ನೆಲೆಸಿದನು. ಆದ್ದರಿಂದ ಈ ಶಂಖವು ದೇವರ ಸಾನಿಧ್ಯಮಯವಾಯಿತು. ಹಾಗಾಗಿ ಶಂಖ ಇರುವುದು ಒಳ್ಳೆಯದು. ಪೂಜೆಗೆ ಆರಂಭದಲ್ಲಿ ಗಂಟೆಯನ್ನು ಭಾರಿಸಿ ಆರಂಭ ಮಾಡುವುದರಿಂದ ದುಷ್ಟ ಶಕ್ತಿಯ ಉಚ್ಛಾಟನೆಯಾಗಿ ಭಗವಂತನ ಆಗಮನವಾಗಿತ್ತದೆ. ಇದರಿಂದ ಗಂಟೆ ಇಡುವುದು ಉತ್ತಮ. ೯. ಯಾವುದು ತೀರ್ಥ ? ಸೇವನೆ ಕ್ರಮ ಏನು? ತಾಮ್ರದ ತಟ್ಟೆ(ಲೋಟ) ದಲ್ಲಿ ಶುದ್ಧವಾದ ನೀರನ್ನು ತೆಗೆದುಕೊಂಡು, ತುಳಸಿ ಮತ್ತು ಚಂದನದಿಂದ ಪೂಜಿಸಿದ ಸಾಲಿಗ್ರಾಮವನ್ನು ಅಥವಾ ದೇವರ ಮೂರ್ತಿಯನ್ನು ಪುರುಷಸೂಕ್ತ ಹೇಳುತ್ತಾ ಗಂಟಾ ನಾದವನ್ನು ಮಾಡುತ್ತಾ ಅಭಿಷೇಕವನ್ನು ಮಾಡುವಾಗ ಅಭಿಷೇಕ ಮಾಡಿದ ಜಲವನ್ನು ಹಿಡಿಯುವುದಕ್ಕೆ ತೀರ್ಥ ಎನ್ನುತ್ತೇವೆ. ತೀರ್ಥವನ್ನು ೩ ಬಾರಿಗೆ ಕುಡಿಯುಬೇಕು. ೧. ಅಕಾಲ ಮೃತ್ಯು ನಿವಾರಣೆಗೆ ೨. ಸರ್ವ ವ್ಯಾಧಿ ನಿವಾರಣೆಗೆ ೩. ಸಕಲ ದುರಿತ ಉಪಶಮನೆಗೆಂದು ಗೋಕರ್ಣ ಆಕೃತಿ ಹಸ್ತದಿಂದ ಕುಡಿಯಬೇಕು (ಬಲಗೈ ಮಧ್ಯ ಬೆರಳಿನ ಮಧ್ಯ ಗಂಟಿನ ಮೇಲೆ ಹೆಬ್ಬೆರಳಿನ ತುದುಯನ್ನು ಇಟ್ಟಾಗ ಗೋಕರ್ಣ ಆಕೃತಿ ಆಗುತ್ತದೆ) ೧೦. ಪಂಚಗವ್ಯ ಎಂದರೇನು? ಯಾವಾಗ ಕುಡಿಯಬೇಕು? ಕಪ್ಪು ಬಣ್ಣದ ಆಕಳಿನ -- ಗೋ ಮೂತ್ರ ಬಿಳಿ ಬಣ್ಣದ ಆಕಳಿನ -- ಗೋ ಮಯ (ಸಗಣಿ) ಕೆಂಪು ಬಣ್ಣದ ಆಕಳಿನ -- ಗೋವಿನ ಹಾಲು ಕೆಂಪು ಬಣ್ಣದ ಆಕಳಿನ -- ಹಸುವಿನ ಮೊಸರು ಕಪಿಲ ಬಣ್ಣದ ಆಕಳಿನ -- ಹಸುವಿನ ತುಪ್ಪ ಇವುಗಳನ್ನು ಗೋಮೂತ್ರ -- ೧ ತೊಲ ಗೋಮಯ -- ಅರ್ಧ ಹೆಬ್ಬೆರಳಿನಷ್ಟು ಹಾಲು -- ೭ ತೊಲ ಮೊಸರು -- ೩ ತೊಲ ತುಪ್ಪ -- ೧ ತೊಲ ಕುಶೋದಕ -- ೧ ತೊಲ ಇವುಗಳನ್ನು ಸೇರಿಸಿ ಅಭಿಮಂತ್ರಿಸುವುದಕ್ಕೆ ಪಂಚಗವ್ಯ ಎನ್ನುತ್ತಾರೆ. ದೇಹ ಶುದ್ಧಿ- ಸ್ಥಳ ಶುದ್ಧಿಗಾಗಿ, ಸೂತಕ ನಿವೃತ್ತಿಗಾಗಿ ಪ್ರಾಶನ ಮಾಡಬೇಕು. ಅಲ್ಲದೆ ಎಲ್ಲಾ ವೃತ- ಯಜ್ಞ-ಯಾಗಾದಿ ಆರಂಭದಲ್ಲೂ ಶುದ್ಧಿಗಾಗಿ ಪಂಚಗವ್ಯವನ್ನು ಮಾಡಲಾಗುತ್ತದೆ. ೧೧. ಪಂಚಾಮೃತ ಅಂದರೇನು? ಯಾವುದನ್ನು ಸೇರಿಸಿದಾಗ ಪಂಚಾಮೃತವಾಗುತ್ತದೆ? ಐದು ಅಮೃತ ಸದೃಶಗಳಾದ ದ್ರವ್ಯಗಳು ಸೇರಿದಾಗ ಪಂಚ + ಅಮೃತವಾಗುತ್ತದೆ. ೧. ಹಾಲು ೨. ಮೊಸರು ೩. ತುಪ್ಪ ೪. ಜೇನು ತುಪ್ಪ ೫. ಸಕ್ಕರೆ ಈ ಐದನ್ನು ಬೇರೆ ಬೇರೆಯಾಗಿ ಶುದ್ಧೋದಕದೊಡನೆ ದೇವರಿಗೆ ಅಭಿಷೇಕ ಮಾಡಿ ತೀರ್ಥವನ್ನು ಪಡೆಯುವುದು ಪಂಚಾಮೃತ. ಇದಕ್ಕೆ ಫಲವನ್ನು ಹಾಕವುದು ಬೇರೆ. ೧೨. ಅಕ್ಷತ ಎಂದರೇನು? ತೊಂಡಾಗಿರುವ ನೇರವಾದ ಅಕ್ಕಿಗೆ ಹಳದಿ ಕುಂಕುಮ ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಕಲಸಿ ಪೂಜೆಗೆ ಬಳಸುವುದನ್ನು ಅಕ್ಷತ ಎನ್ನುತ್ತೇವೆ. ೧೩. ನೈವೇದ್ಯದ ಬಗೆಗೆ ಅಭಿಪ್ರಾಯ ಏನು? ABOUT NAIVEDYA? ಪೀಠದಲ್ಲಿ ದೇವರನ್ನು ಇಟ್ಟು ಪ್ರತಿಷ್ಟಾಪಿಸಿದ ಮೇಲೆ ನಿತ್ಯವೂ ನೈವೇದ್ಯ ಮಾಡಲೇಬೇಕು. ನಾವು ಊಟ ಮಾಡುವ ಮೊದಲು ಊಟಕ್ಕೆ ತಯಾರಿಸಿದ ಎಲ್ಲವನ್ನು ಭಗವಂತನಿಗೆ ಸಮರ್ಪಿಸಿ ಆಮೇಲೆ ನಾವು ಸ್ವೀಕರಿಸಬೇಕು. ಸಮರ್ಪಿಸುವ ನೈವೇದ್ಯ ಕನಿಷ್ಟ ಒಂದು ವ್ಯಕ್ತಿಗೆ ಸಾಕಾಗುವಷ್ಟಾದರೂ ಇರಬೇಕು. ಶಾಖಾಹಾರವಾಗಿರಬೇಕು. ೧೪. ತುಪ್ಪ ಮತ್ತು ಎಣ್ಣೆಯ ದೀಪಗಳ ಬಗೆಗೆಗಿನ ಮಾಹಿತಿ ಏನು? ನಾವು ಮನೆಯಲ್ಲಿ ದೇವರಿಗೆ ದೀಪವನ್ನು ಹಚ್ಚುವುದು ಸಹಜ. ವಿಶೇಷವಾಗಿ ತುಪ್ಪದ ದೀಪವನ್ನು ದೇವರ ಬಲಭಾಗದಲ್ಲಿ ಇರಿಸಬೇಕು. ಎಣ್ಣೆಯ ದೀಪವನ್ನು ದೇವರ ಎಡಭಾಗದಲ್ಲಿ ಹಚ್ಚಬೇಕು. ಎಳ್ಳಿನಿಂದ ತಯಾರಿಸಿದ ಎಣ್ಣೆ ಯಾವಾಗಲೂ ಯೋಗ್ಯವಾಗಿರುತ್ತದೆ. ಹಸುವಿನ ತುಪ್ಪವು ಎಲ್ಲಾ ದೇವತಾ ಕಾರ್ಯಗಳಲ್ಲಿ ಉತ್ತಮವಾಗಿರುತ್ತದೆ. ೧೫. ದೇವರನ್ನು ಪೂಜಿಸುವಾಗ ಯಾವ ಬಗೆಯ ಬಟ್ಟೆಯನ್ನು ಧರಿಸಬೇಕು? ಕ್ರಮ ಏನು? ಪೂಜೆ ಅಥವಾ ಇನ್ನಿತರ ದೇವತಾ ಕಾರ್ಯಗಳಲ್ಲಿ ತೊಳೆದು ಒಣಗಿಸಿರುವ ಮಡಿ ಅಥವಾ ಧೋತಿಯನ್ನು ಸ್ನಾನವಾದ ಮೇಲೆ ಧರಿಸಿ ಪೂಜೆಗೆ ಕುಳಿತುಕೊಳ್ಳಬೇಕು. ಝರಿಅ ಅಂಚಿರುವ ಮಡಿ ಅಥವಾ ಧೋತಿಯು ಉತ್ತಮ. ಧರಿಸಿದ ಮೇಲೆ ಮಲ-ಮೂತ್ರ ವಿಸರ್ಜನೆ ಮಾಡಬಾರದು. ಒದ್ದೆ ಬಟ್ಟೆಯ್ನ್ನು ಧರಿಸಿ ದೇವತಾ ಕಾರ್ಯ ಮಾಡಬಾರದು. ಟವೆಲ್ ಅಥವಾ ಇನ್ನಾವುದೇ ಅಂದರೆ ಪ್ಯಾಂಟು- ಚಡ್ಡಿ ಅಂಗಿ ಧರಿಸಿ ದೇವತಾ ಕಾರ್ಯ ಮಾಡಬಾರದು. (ಹೇಗೆ ವಕೀಲರಿಗೆ ಅವರದ್ದೆ ಆದ ಬಟ್ಟೆಗಳನ್ನು ಧರಿಸಿದರೆ ಶೋಭೆಯೋ ಹಾಗೆ ದೇವತಾ ಕಾರ್ಯಕ್ಕೆ ಶಾಸ್ತ್ರ್ ಹೇಳಿದತೆ ಬಟ್ಟೆ ಧರಿಸಬೇಕು. ೧೬. ಮನೆಯಲ್ಲಿ ಮಾಂಸಹಾರ ಸೇವಿಸುವುದರಿಂದ ದೇವರ ಮೂರ್ತಿ ಇಡಬಾರದು ಎನ್ನುತ್ತಾರೆ ಸತ್ಯವೇ? ಇಂದಿನ ಕಾಲದಲ್ಲಿ ಮಾಂಸಾಹಾರ ಸಹಜವಾಗಿದೆ. ಆದರೆ ಮಾಂಸಾಹಾರ ಸೇವಿಸದೇ ಇರುವುದು ಉತ್ತಮ. ಬಾಕಿ ಅವರವರ ಇಚ್ಛೆಗೆ ಸಂಬಂಭಿಸಿರುತ್ತದೆ. ದೇವರಿಗೆಂದು ಪ್ರತ್ಯೇಕ ಸ್ಥಳವಿದ್ದರೆ ಬೆಳಿಗ್ಗೆ ಸ್ನಾನವಾದ ಬಳಿಕ ಮೊದಲು ಪೂಜೆ ಮಾಡಿ ನಂತರ ಆಹಾರ ಸೇವಿಸಲು ಶಕ್ಯವಿದ್ದರೆ ಮೂರ್ತಿಯನ್ನು ಇಡಲು ಏನೂ ತೊಂದರೆ ಇಲ್ಲಾ. ಇಲ್ಲಿ ಭಕ್ತಿ ಮತ್ತು ಶ್ರದ್ಧೆಯೇ ಮುಖ್ಯ. ೧೭. ಶನಿ ದೇವರ ಫೋಟೋ, ಮೂರ್ತಿ, ಯಂತ್ರ ಮನೆಯಲ್ಲಿ ಇಡಬಹುದೆ? ಶನಿ ದೇವರಿಗೆ ಎದುರಿನಿಂದ ಸಾಷ್ಟಾಂಗ ನಮಸ್ಕರಿಸಬಾರದು ಎನ್ನುತ್ತಾರೆ ಯಾಕೆ? ಶನಿ ದೇವರ ಫೋಟೋ, ಮೂರ್ತಿ, ಯಂತ್ರ ಇಡಬಾರದೆಂದು ಯಾವ ಶಾಸ್ತ್ರದಲ್ಲಿಯೂ ಹೇಳಿಲ್ಲ. ಆದರೆ ಎಲ್ಲಾ ಅನಿಷ್ಟಕ್ಕೂ ಶನಿ ಕಾರಣ ಎಂದು ಜನರು ಭಾವಿಸಿರುತ್ತಾರೆ ಇದು ತಪ್ಪು. ನಿಜವಾಗಿಯೂ ತಮ್ಮ ಸ್ಥಿತಿಯನ್ನು ಕಳೆದುಕೊಂಡಿರುವ ನಮ್ಮ ಸಂಸ್ಕೃತಿಯನ್ನು ಶನಿದೇವರ ಪೀಡಾಕಾಲದಲ್ಲಿಯೇ ನೆನಪಿಗೆ ತಂದುಕೊಳ್ಳಬೇಕಾಗುತ್ತದೆ. ಶನಿಯು ಒಲಿದರೆ ಬೇರಾವ ಗ್ರಹವೂ ಕೊಡಲಿಕ್ಕಿಲ್ಲದಷ್ಟು ಸಂಪತ್ತು ಕೀರ್ತಿ ಎಲ್ಲವನ್ನು ಕೊಡುತ್ತಾನೆ. ಹಾಗಾಗಿ ಮನೆಯಲ್ಲಿ ಇಡಬಾರದೆಂದು ತೋರಿದರೆ ದೇವಸ್ಥಾನದಲ್ಲಿಯೆ ಇರಲಿ. ಇಡುವುದಾದರೆ ತಪ್ಪಿಲ್ಲ. ಆರಾಧನೆಯೆ ಮುಖ್ಯ. ಇನ್ನು ಶನಿದೇವರ ಎದುರಿಗೆ ಸಾಷ್ಟಾಂಗ ನಮಸ್ಕಾರ ಬೇಡ ಎನ್ನುವುದು ತಪ್ಪು. ಹಾಗೇನು ಶಾಸ್ತ್ರ ಆಧಾರವಿಲ್ಲ. ಭಕ್ತಿಯಿಂದ ನಮಸ್ಕರಿಸಿದರೆ ಕಷ್ಟ ಪರಿಹಾರವಾಗಿತ್ತದೆ. ೧೮. ಭಿನ್ನವಾದ ವಿಗ್ರಹ ಯಂತ್ರ ಫೋಟೋಗಳನ್ನು ಏನು ಮಾಡಬೇಕು? ಪೂಜೆಗೆ ಅನುಕೂಲವಾಗದ ವಿಗ್ರಹ ಯಂತ್ರ ಫೋಟೋವನ್ನು ನದಿಯಲ್ಲಿ ವಿಸರ್ಜನೆ ಮಾಡಬೇಕು. ಇದು ಆಗದೆ ಇರುವ ಪರಿಸ್ಥಿತಿಯಲ್ಲಿ ಒಂದು ಪಾತ್ರ್ಯಲ್ಲಿ ನೀರು ಹಾಕಿ ಅದರಲ್ಲಿ ವಿಸರ್ಜನೆ ಮಾಡಿ ಒಂದೆರಡು ತಾಸುಗಳ ನಂತರ ಏಲ್ಲಾದರೂ ಭೂಮಿಯಲ್ಲಿ ಹುಗಿದು ಹಾಕಿರಿ. ಯಾರಿಗೂ ತೊಂದರೆ ಆಗದಂತಿರಲಿ. ೧೯. ಮನೆಯಲ್ಲಿ ಹಚ್ಚುವ ದೇವರ ದೀಪವನ್ನು ಎಷ್ಟು ಮುಖ ಹಚ್ಚಬೇಕು? ಬತ್ತಿ ಎಷ್ಟಿರಬೇಕು? ಮನೆಯಲ್ಲಿ ಹಚ್ಚುವ ದೇವರ ದೀಪಕ್ಕೆ ಒಂದು ಮುಖ. ಮಂದಿರದಲ್ಲಿ ಹಚ್ಚುವ ದೀಪಕ್ಕೆ ಎರಡು ಮುಖಗಳಿರುತ್ತವೆ. ದೀಪದಲ್ಲಿ ೫-೬ ಹಚ್ಚುವಂತೆ ಇರುತ್ತದೆ. ವಿಶೇಷದಲ್ಲಿ ೫ ಮುಖ ಹಚ್ಚಬಹುದು. ೨ ಅಥವಾ ೩ ಬತ್ತಿಯನ್ನು ಒಂದೊಂದು ಮುಖಕ್ಕೆ ಹಾಕಬೇಕು. ೨೦. ವೃತ ಯಜ್ಞಾದಿಗಳಲ್ಲಿ ಬಳಸುವ ದರ್ಬೆ(ಒಂದು ಪ್ರಭೇದದ ಹುಲ್ಲು) ಮಹತ್ವ ಏನು? ನಾವು ಯಾವ ವೃತವಾಗಲಿ ಯಜ್ಞ ಯಾಗಾದಿಗಳಾಗಲಿ ಪೂಜಾದಿಗಳಾಗಲಿ ಇದನ್ನು ಆಚರಿಸುವಾಗ ಭಗವಂತನ ಶಕ್ತಿಯ ಜೊತೆಗೆ ದುಷ್ಟ ಶಕ್ತಿಯೂ ಇರುತ್ತವೆ. ಆಗ ನಮ್ಮ ಕೈಯಲ್ಲಿರುವ ದರ್ಭೆಯ ದರ್ಶನ ಮಾತ್ರದಿಂದ ದುಷ್ಟ ಶಕ್ತಿಯು ಅಲ್ಲಿಂದ ಓಡಿ ಹೋಗುತ್ತವೆ. ಇದು ಇಂದ್ರನ ವಜ್ರಾಯುಧವಿದ್ದಂತೆ. ಆದ್ದರಿಂದ ದರ್ಭೆಯನ್ನು ಬಳಸುತ್ತೇವೆ. ಈ ಧರ್ಭೆಯು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೆ ಭೂ ಲೋಕಕ್ಕೆ ಭಗವಂತನು ಕಳಿಸಿರುತ್ತಾನೆ. ೨೧. ಎಲ್ಲಾ ದೇವತಾ ಕಾರ್ಯಗಳಲ್ಲಿ ಬಳಸುವ ದರ್ಭೆಯ ಪವಿತ್ರದ ಮಹತ್ವ ಏನು? ಎಷ್ಟು ದರ್ಭೆಯನ್ನು ಹಾಕುತ್ತಾರೆ? ಏಕೆ ಪವಿತ್ರ ಧರಿಸಬೇಕು? ಈ ವಿಷಯದಲ್ಲಿ ಒಂದು ಹಿನ್ನಲೆ ಇದೆ. ಬ್ರಹ್ಮ ದೇವನು ಸೃಷ್ಠಿಯನ್ನು ಮಾಡುವವನು, ವಿಷ್ಣುವು ಸ್ಥಿತಿಕರ್ತನು, ಶಿವನು ಲಯಕರ್ತನು. ಒಮ್ಮೆ ಶಿವನಿಗೆ ತಾನೇ ಎಲ್ಲರಿಗೂ ಮೇಲೆಂದು ಅಹಂಕಾರ ಬಂದಿತು. ಆ ಕಡೆ ಸೃಷ್ಠಿಕರ್ತ ಬ್ರಹ್ಮನಿಗೂ ತಾನೇ ಮೇಲೆಂದು ಅಹಂಕಾರ ಬಂದಾಗ ಇಬ್ಬರ ವಾದ-ವಿವಾದದಲ್ಲಿ ಶಿವನು ಬ್ರಹ್ಮನ ನಾಲ್ಕನೇ ತಲೆಯನ್ನು ತನ್ನ ಕೈಯಿಂದ ಕಿತ್ತು ತೆಗೆದಾಗ ಬ್ರಹ್ಮಹತ್ಯಾದೆ ದೋಷ ಬಂದಿತು ಹಾಗೂ ಜಗತ್ತೂ ದೋಷಯುಕ್ತವಾಯಿತು. ಯಜ್ಞ-ಯಾಗಾದಿಗಳನ್ನು ಮಾಡುವುದು ಕಠಿಣವಾಯಿತು. ಆಗ ಎಲ್ಲಾ ದೇವತೆಗಳು ಮತ್ತು ಋಷಿಮುನಿಗಳು ಸೇರಿ ಈ ಎಲ್ಲಾ ದೋಷ ನಿವಾರಣೆಗೆ ದರ್ಭೆಯನ್ನು ಭೂಲೋಕಕ್ಕೆ ತರಬೇಕಾಯಿತು ಮತ್ತು ಶಿವನು ತನ್ನ ಹೆಬ್ಬೆರಳು ಮತ್ತು ಉಂಗುರ ಬೆರಳಿನಿಂದ ಬ್ರಹ್ಮನ ಶಿರವನ್ನು ತೆಗೆದುದರಿಂದ ಶುದ್ಧಿಗಾಗಿ ಪೂಜಾ ಅಧಿಕಾರ ಪ್ರಾಪ್ತಿಗಾಗಿ ದರ್ಭೆಯ ಪವಿತ್ರ ಉಂಗುರ ಧರಿಸಬೇಕೆಂದು ನಿಯಮಿಸಲಾಯಿತು. ಇದು ದರ್ಭೆಯ ಮಹತ್ವ. ಸಾಮಾನ್ಯ ಎಲ್ಲಾ ಕಾರ್ಯಗಳಲ್ಲಿ ೨ ಅಥವಾ ೪ ದರ್ಭೆಯಿಂದ ಮಾಡಿದ ಪವಿತ್ರವನ್ನು ಯಾಗಾದಿಗಳಲ್ಲಿ ೫ ದರ್ಭೆಯಿಂದ ಮಾಡಿದ ಪವಿತ್ರವನ್ನು ಪಿತೃಕಾರ್ಯಗಳಲ್ಲಿ ೩ ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸಬೇಕು. ೨೨. ದೇವತಾ ಕಾರ್ಯಗಳಲ್ಲಿ ಯಾವ ಆಸನದ ಮೇಲೆ ಕುಳಿತುಕೊಳ್ಳುವುದು ಉತ್ತಮ? ದೇವತಾ ಕಾರ್ಯಗಳಲ್ಲಿ ದರ್ಭಾಸನ, ಕಂಬಳಿಯ ಆಸನ, ಮಣೆ ಅಥವಾ ಹುಲ್ಲಿನ ಆಸನದ ಮೇಲೆ ಕುಳಿತುಕೊಳ್ಳುವುದು ಉತ್ತಮ. ಸಾಮೂಹಿಕ ಮತ್ತು ೩ ಅಥವಾ ೪ ಜನ ಸೇರಿ ಪೂಜಾದಿ ಮಾಡುವ ವೇಳೆಯಲ್ಲಿ ಎಲ್ಲರೂ ಬೇರೆ ಬೇರೆ ಆಸನದಲ್ಲಿ ಕುಳಿತಿರಬೇಕು. ಎಲ್ಲರೂ ಒಂದೇ ಆಸನದ ಮೇಲೆ ಕುಳಿತು ಪೂಜಾ ಕಾರ್ಯವನ್ನು ಮಾಡಬಾರದು. ೨೩. ಉಪವಾಸದ ಮಹತ್ವ ಏನು? ಇದರ ಬಗ್ಗೆ ನಿಮ್ಮ ಅನಿಸಿಕೆ ಏನು? ಉಪವಾಸದಲ್ಲಿ ಪಾಕ್ಷಿಕ, ಮಾಸಿಕ ಮತ್ತು ವಾರ್ಷಿಕವಾಗಿ ಕ್ರಮಗಳಲ್ಲಿ ಕಾಣಬಹುದು. ಇನ್ನು ನಿತ್ಯ ವೃತಗಳಿಗಾಗಿ, ನೈಮಿತ್ತಿಕ ವೃತ ಹಗೂ ಕಾಮ್ಯ ವೃತ ಮತ್ತು ಯಜ್ಞ-ಯಾಗಾದಿಗಳಿಗಾಗಿ ಮಾಡುವ ಉಪವಾಸವೆಂದು ವಿಂಗಡಿಸಬಹುದು. ಉಪವಾಸವನ್ನು ಮಾಡುವವರು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಕೇವಲ ಜಲಪಾನ ಮಾಡುತ್ತಾ ಭಗವಂತನ ಜಪಾದಿಗಳನ್ನು ಮಾಡಬೇಕು. ಇಂದು ಉಪವಾಸದ ಮಹತ್ವ ತಿಳಿಯುವುದು ಮುಖ್ಯ. ಇಂದಿನ ದಿನಗಳಲ್ಲಿ ಎಲ್ಲರೂ ಉಪವಾಸವನ್ನು ಮಾಡುತ್ತಾರೆ. ಆದರೆ ಕೇವಲ ಆಹಾರ ಸೇವಿಸದೇ ಇದ್ದು ಬೆಳಿಗ್ಗೆ ಕಲಸಕ್ಕೆ ಹೋಗಿ ಸಂಜೆ ಮನೆಗೆ ಬಂದು ರಾತ್ರಿ ಫಲಾಹಾರ ಮಾಡುವುದು ಅಥವಾ ಇನ್ನೇನೋ ತಿನ್ನುವುದು ಉಪವಾಸವೇ? ಇಷ್ಟು ವರ್ಷಗಳಿಂದ ನಾನು ಸೋಮವಾರ ವೃತ ಉಪವಾಸ ಮಾಡುತ್ತಿದ್ದೇನೆ ನನಗೆ ಯಾವ ಪ್ರಯೋಜನವೂ ಆಗಿಲ್ಲ. ಆದ್ದರಿಂದ ದೇವರ ಮೇಲೆ ನಂಬಿಕೆ ಹೋಗಿದೆ ಎನ್ನುತ್ತಾರೆ. ಇದು ಯಾವ ನ್ಯಾಯ? ನೀವು ಮಾಡಿದ ಉಪವಾಸ ಕೇವಲ ನಿಮ್ಮ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಹಾನಿಯೋ ಅಷ್ಟೆ. ಆರಾಧನೆ ಮಾಡಿಲ್ಲ ಅಂದರೆ ಪ್ರಯೋಜನವಾಗುವುದಿಲ್ಲ. ಹಾಗಾಗಿ ಯಾವ ಉದ್ದೇಶಕ್ಕಾಗಿ ನಾವು ಉಪವಾಸ ಮಾಡುತ್ತಿದ್ದೇವೆಯೋ ಆ ದೇವರನ್ನು ಉಪವಾಸವಿದ್ದು ಶ್ರದ್ಧಾ-ಭಕ್ತಿಯಿಂದ ಪೂಜಿಸಿ ಜಪಾದಿಗಳನ್ನು ಮಾಡಿದಲ್ಲಿ ಮಾತ್ರ ಉಪವಾಸದ ಫಲ ಸಿಗುವುದು . ಉಪವಾಸವಿದ್ದಾಗ ದೇಹವು ಜಡವಾಗಿರದೇ ಹಗುರವಾಗಿದ್ದು ಸಹಸ್ರಾರ ಚಕ್ರವು ಜಾಗ್ರತವಾಗಲು ಅನುಕೂಲವಾಗಿರುತ್ತದೆ. ಆದ್ದರಿಂದ ಉಪವಾಸ ಮಾಡಿ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಉಪವಾಸದ ಸಂಪೂರ್ಣ ಫಲ ಸಿಗುತ್ತದೆ. ಕೇವಲ ನಿರಾಹಾರವಾಗಿದ್ದರೆ ಯಾವ ಫಲವೂ ಇಲ್ಲ. ಇದು ನಿರರ್ಥಕ. ೨೪. ಜಪವನ್ನು ಎಷ್ಟು ಮಾಡಬೇಕು? ನಿಯಮ ಏನು? ನಾವು ಯಾವುದೇ ಜಪವನ್ನು ಲೆಕ್ಕ ಮಾಡಿಯೇ ಮಾಡಬೇಕು. ಇಲ್ಲವಾದರೆ ಅದರಿಂದ ಫಲವಿಲ್ಲ. ಜಪವನ್ನು ಎಷ್ಟು ಮಾಡಬೇಕೆಂದು ಋಷಿಗಳು ಹೀಗೆ ಹೇಳಿದ್ದಾರೆ. ಅಶ್ವಲಾಯನ, ಸಾಂಖ್ಯಾಯನ, ಕೌಷೀತಕೇ ಗೃಹ್ಯ ಸೂತ್ರಗಳಲ್ಲಿ ಸೂರ್ಯೋದಯಕ್ಕೆ ೪ ಘಟಿಗಳ ಹಿಂದಿನಿಂದ ಸೂರ್ಯದರ್ಶನ ಪರ್ಯಂತ ಜಪ ಮಾಡಬೇಕು. ಸಾಯಂಕಾಲ ಸೂರ್ಯಾಸ್ತದ ಪರ್ಯಂತ ಜಪಮಾಡಬೇಕೆಂದು ಹೇಳಿದೆ. ಆದರೆ ಜೈಮಿನಿ ಮಹರ್ಷಿಗಳು- ೧೦೦೦, ೧೦೦ ಇಲ್ಲವೇ ೧೦, ಗೋಭಿಲೀಯ ಗೃಹ್ಯ ಸೂತ್ರದಲ್ಲಿ- ೧೦೦೦, ೧೦೦, ೧೫, ೧೧ ಅಥವಾ ೮. ಅಥರ್ವ ವೇದ ಕೌಶಿಕ ಗೃಹ್ಯಕಾರಿಕೆಯಲ್ಲಿ ೧೦೦೦, ೧೦೮, ೨೦, ೧೦ ಅಥವಾ ೮ ಹೀಗೆ ಸಂಖ್ಯೆಯನ್ನು ಹೇಳಿದೆ. ಹಾಗಾಗಿ ೧೦೦೦, ೧೦೮, ೫೪, ೨೮, ೧೦ ಮಾಡಬಹುದೆಂಬುದು ಹಿರಿಯರ ಅಭಿಪ್ರಾಯ. ಹೆಚ್ಚಾಗಿ ಎಷ್ಟೂ ಮಾಡಬಹುದು. ಜಪ ಮಾಡುವ ವಿಧಾನ : ಬಲಗೈಯನ್ನು ಅಂಗಾತವಾಗಿ ಮಾಡಿ ಎಲ್ಲಾ ನಾಲ್ಕು ಬೆರಳುಗಳನ್ನು ಸ್ವಲ್ಪ ಬಗ್ಗಿಸಿ ಒಂದಕ್ಕೊಂದು ತಾಗುವಂತೆ ಮಾಡಿಕೊಂಡು ಹೆಬ್ಬೆರಿಳಿನಿಂದ ಬಾಕಿ ಬೆರಳಿನ ಗಂಟನ್ನು ಸ್ಪರ್ಶಿನಿ ಸಂಖ್ಯೆಯನ್ನು ಎಣಿಸಬೇಕು. ( ಬೆರಳುಗಳು ಮೇಲ್ಮುಖ ಬರುವಂತೆ ಹಿಡಿದರೆ ಗಂಟುಗಳು ಕೆಳಗಿನಂತಿರುತ್ತವೆ) . _ ಕೊನೆ ಗಂಟು . _ ಮಧ್ಯ ಗಂಟು . _ ಕೆಳ ಗಂಟು ಹೆಬ್ಬೆರಳಿನಿಂದ ಪವಿತ್ರ(ಉಂಗುರ) ಬೆರಳಿನ ಮಧ್ಯ ಗಂಟು ಸ್ಪರ್ಶವಾದಾಗ ೧, ಹೆಬ್ಬೆರಳಿನಿಂದ ಪವಿತ್ರ ಬೆರಳಿನ ಕೆಳಗಂಟು ಮುಟ್ಟಿದಾಗ ೨, ಕಿರುಬೆರಳಿನ ಕೆಳಗಂಟು ಮುಟ್ಟಿದಾಗ ೩, ಕಿರು ಬೆರಳಿನ ಮಧ್ಯದ ಗಂಟು ಮುಟ್ಟಿದಾಗ ೪, ಕಿರು ಬೆರಳಿನ ಕೊನೆಯ ಗಂಟು ಮುಟ್ಟಿದಾಗ ೫, ಉಂಗುರ ಬೆರಳಿನ ಕೊನೆ ಗಂಟು ಮುಟ್ಟಿದಾಗ ೬, ಮಧ್ಯಬೆರೆಳಿನ ಕೊನೆ ಗಂಟು ಮುಟ್ಟಿದಾಗ ೭, ತೋರು ಬೆರೆಳಿನ ತುದಿಯ ಗಂಟು ಮುಟ್ಟಿದಾಗ ೮, ತೋರು ಬೆರಳಿನ ಮಧ್ಯದ ಗಂಟು ಮುಟ್ಟಿದಾಗ ೯, ತೋರು ಬೆರಳಿನ ಕೆಳಗಿನ ಗಂಟು ಮುಟ್ಟಿದಾಗ ೧೦. ಹೀಗೆ ಪುನಃ ೧ ರಿಂದ ೧೦ ಎಣಿಸುವುದು ಕ್ರಮವಿರುತ್ತದೆ. ೨೫. ನಾವು ಜನಿವಾರವನ್ನು ಧರಿಸುತ್ತೇವೆ. ಆದರೆ ಯಾವಾಗ ಎಷ್ಟೆಷ್ಟು ಜನಿವಾರ ಧರಿಸುವುದು ಸರಿ? ಮಾಹಿತಿ ನೀಡಿ. ಜನಿವಾರವು ಶುದ್ಧವಾದ ಹತ್ತಿಯಿಂದ ಕೈಯಲ್ಲಿ ತಯಾರಿಸಬೇಕು. ೩ ಎಳೆಯಿರುವ ಜನಿವಾರದಲ್ಲಿ ಒಂದೊಂದು ಎಳೆಗಳಲ್ಲೂ ೩-೩ ದಾರವಿದ್ದು ಒಟ್ಟು ೯ ದಾರಗಳಾಗುತ್ತದೆ. ಈ ೯ ದಾರಗಳಲ್ಲೂ ಬೇರೆ ಬೇರೆ ದೇವತೆಗಳನ್ನು ಆಹ್ವಾನ ಮಾಡಿ ಮುಖ್ಯ ೩ ಎಳೆಗಳನ್ನು ಒಂದುಗೂಡಿಸಿ ಕಟ್ಟಲಾಗಿತ್ತದೆ. ಇದಕ್ಕೆ ಬ್ರಹ್ಮಗಂಟು ಎಂದು ಹೆಸರು. ಈ ಗಂಟಿನಲ್ಲಿ ಬ್ರಹ್ಮ-ವಿಷ್ಣು- ಮಹೇಶ್ವರರನ್ನು ಕ್ರಮವಾಗಿ ಪೂಜಿಸಿ ಗಾಯತ್ರಿ ಅಭಿಮಂತ್ರಿಸಿದ ಜನಿವಾರವನ್ನು ಬ್ರಹ್ಮಚಾರಿಗಳು ಮದುವೆಗೆ ಮುನ್ನ ೧ ಜನಿವಾರವನ್ನು ಧರಿಸಬೇಕು. ಮದುವೆ ಆದ ಮೇಲೆ ಗ್ರಹಸ್ಥಾಶ್ರಮದ ಕೆಲವು ನಿಯಮ ಪಾಲನೆಗಾಗಿ ೨ ಜನಿವಾರವನ್ನು ಧರಿಸಬೇಕು. ಇನ್ನು ಕೆಲವರು ಉತ್ತರೀಯದ ಬದಲಿಗೆ ೩ನೇ ಜನಿವಾರ ಧರಿಸುತ್ತಾರೆ. ಇದಕ್ಕಿಂತ ಹೆಚ್ಚು ಧರಿಸಬಾರದು. ೨೫. ನಾವು ಜನಿವಾರವನ್ನು ಧರಿಸುತ್ತೇವೆ. ಆದರೆ ಯಾವಾಗ ಎಷ್ಟೆಷ್ಟು ಜನಿವಾರ ಧರಿಸುವುದು ಸರಿ? ಮಾಹಿತಿ ನೀಡಿ. ಜನಿವಾರವು ಶುದ್ಧವಾದ ಹತ್ತಿಯಿಂದ ಕೈಯಲ್ಲಿ ತಯಾರಿಸಬೇಕು. ೩ ಎಳೆಯಿರುವ ಜನಿವಾರದಲ್ಲಿ ಒಂದೊಂದು ಎಳೆಗಳಲ್ಲೂ ೩-೩ ದಾರವಿದ್ದು ಒಟ್ಟು ೯ ದಾರಗಳಾಗುತ್ತದೆ. ಈ ೯ ದಾರಗಳಲ್ಲೂ ಬೇರೆ ಬೇರೆ ದೇವತೆಗಳನ್ನು ಆಹ್ವಾನ ಮಾಡಿ ಮುಖ್ಯ ೩ ಎಳೆಗಳನ್ನು ಒಂದುಗೂಡಿಸಿ ಕಟ್ಟಲಾಗಿತ್ತದೆ. ಇದಕ್ಕೆ ಬ್ರಹ್ಮಗಂಟು ಎಂದು ಹೆಸರು. ಈ ಗಂಟಿನಲ್ಲಿ ಬ್ರಹ್ಮ-ವಿಷ್ಣು- ಮಹೇಶ್ವರರನ್ನು ಕ್ರಮವಾಗಿ ಪೂಜಿಸಿ ಗಾಯತ್ರಿ ಅಭಿಮಂತ್ರಿಸಿದ ಜನಿವಾರವನ್ನು ಬ್ರಹ್ಮಚಾರಿಗಳು ಮದುವೆಗೆ ಮುನ್ನ ೧ ಜನಿವಾರವನ್ನು ಧರಿಸಬೇಕು. ಮದುವೆ ಆದ ಮೇಲೆ ಗ್ರಹಸ್ಥಾಶ್ರಮದ ಕೆಲವು ನಿಯಮ ಪಾಲನೆಗಾಗಿ ೨ ಜನಿವಾರವನ್ನು ಧರಿಸಬೇಕು. ಇನ್ನು ಕೆಲವರು ಉತ್ತರೀಯದ ಬದಲಿಗೆ ೩ನೇ ಜನಿವಾರ ಧರಿಸುತ್ತಾರೆ. ಇದಕ್ಕಿಂತ ಹೆಚ್ಚು ಧರಿಸಬಾರದು. ೨೬. ನಾವು ಖರೀದಿಸುವ ಮನೆಯ ಎದುರು - ಅಕ್ಕ ಪಕ್ಕ ಮಂದಿರವಿದ್ದರೆ ದೋಷ ಉಂಟಾಗುವುದೇ? ಶಿವ ಮಂದಿರಕ್ಕೆ ನೂರು ಮಾರು ದೂರದಲ್ಲಿ ದುರ್ಗಾಮಂದಿರ, ಉಗ್ರನೃಸಿಂಹ ಮಂದಿರದ ೧೫೦ ಮಾರು ದೂರ, ವಿಷ್ಣು ಮಂದಿರದ ೨೦ ಮಾರು ದೂರ, ಆಂಜನೇಯ ಮಂದಿರದ ೮ ಮಾರು ದೂರದಲ್ಲಿ ಮನೆ ಇರಬೇಕೆಂದು ಕೆಲವು ಗ್ರಂಥಗಳಲ್ಲಿದೆ. ಆದರೆ ಯಾವುದೇ ಮಂದಿರದ ನೇರ ದೃಷ್ಟಿಗೆ ಮನೆ ಬರದಂತೆ ಇರಲಿ ಎನ್ನುವುದು ಹಿರಿಯರ ಅಭಿಪ್ರಾಯ. ಒಂದು ವೇಳೆ ಮಂದಿರದ ದಕ್ಷಿಣ ಮತ್ತಿ ಪಶ್ಚಿಮದಲ್ಲಿ ಇದ್ದರೂ ತೊಂದರೆ ಇಲ್ಲ. ಪೂರ್ವ ಮತ್ತು ಉತ್ತರ ಭಾಗದಲ್ಲಿ ಗೋಡೆಗೆ ಅಂಟಿದಂತೆ ಇರಬಾರದು. ೨೭. ಒಂದೇ ದೇವರ ೨ ಮೂರ್ತಿಗಳು, ಬಲಸೊಂಡಿಲ ಗಣಪತಿ, ಬಲ ಮುರಿಯ ಶಂಖ ಮನೆಯಲ್ಲಿ ಇರಬಾರದೆ? ಹೌದು. ಒಂದೇ ದೇವರ ೨ ಮೂರ್ತಿಗಳು ಬೇಡ. ಬಲ ಸೊಂಡಿಲ ಗಣಪತಿ ಉಗ್ರ ಎನ್ನುತ್ತಾರೆ. ಆದರೆ ಸರಿಯಾದ ಪೂಜೆ ಪುನಸ್ಕಾರಾದಿಗಳನ್ನು ಮಾಡುವುದಾದಲ್ಲಿ ತೊಂದರೆ ಇಲ್ಲ. ಇದು ಅವರವರ ಕುಲಾಚಾರಕ್ಕೆ ಬಿಟ್ಟಿದ್ದು. ಇನ್ನು ಬಲಮುರಿ ಶಂಖ. ಇಂದು ನಿತ್ಯ ಮನೆಯಲ್ಲಿ ಚಿಕ್ಕ ಎಡಮುರಿ ಶಂಖ ಪೂಜಿಸಿ ನೀರನ್ನು ಪೂಜಾ ದ್ರವ್ಯಕ್ಕೆ ದೇವರ ಮೇಲೆ ಮತ್ತು ಸ್ವಂತ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತೇವೆ. ಆದರೆ ಬಲಮುರಿ ಶಂಖ. ಇದು ಕೃಷ್ಣನ ಹಸ್ತಾಶ್ರಿತ ಪಾಂಚಜನ್ಯವಾದ್ದರಿಂದ ಸಾದಾ ಶಂಖದಂತೆ ಬಳಸದೇ ಸೀದಾ ದೇವರೆಂದು ಪೂಜಿಸಬೇಕು. ಅದಕ್ಕೆ ಅಭಿಷೇಕ, ಧೂಪ, ದೀಪ, ನೈವೇದ್ಯ ಮಾಡಬೇಕು. ಹಾಗಿದ್ದರೆ ಮಾತ್ರ ಬಲಮುರಿ ಶಂಖವನ್ನು ಇಡಬಹುದು. ಮನೆಯಲ್ಲಿ ಇಡಲೇಬಾರದು ಎಂದು ಎಲ್ಲೂ ಉಲ್ಲೇಖವಿಲ್ಲ. ೨೮. ನಿತ್ಯ ಸುವಾಸಿನಿಯರು ಪೂಜಿಸುವ ತುಳಸಿ ಗಿಡದ ಬಗೆಗಿನ ಮಾಹಿತಿ ಏನಾದರೂ ಇದ್ದರೆ ತಿಳಿಸಿ.? ತುಳಸಿಯನ್ನು ಮಂಗಳವಾರ, ಶುಕ್ರವಾರ, ರವಿವಾರ, ಪೂರ್ಣಿಮೆ, ಅಮವಾಸ್ಯೆ, ವೈಧೃತಿ, ವ್ಯತೀಪಾತ, ಸಂಕ್ರಾಂತಿ, ದ್ವಾದಶಿ, ಅಶೌಚ ಇರುವ ವೇಳೆ, ತುಳಸಿಯನ್ನು ಕೊಯ್ದರೆ ಮಹಾವಿಷ್ಣುವಿನ ಶಿರಚ್ಛೇದನ ಮಾಡಿದಷ್ಟು ಪಾಪ ಬರುತ್ತದೆ. ಆದ್ದರಿಂದ ಈ ಮೇಲೆ ತಿಳಿಸಿದ್ಫ ದಿನಗಳಲ್ಲಿ ತುಳಸಿಯನ್ನು ಕೊಯ್ಯಬೇಡಿರಿ.(ಸ್ಮೃತಿಸಾರ) ಅದೇ ರೀತಿ ರವಿವಾರ ದೂರ್ವೆಯನ್ನು ಕೊಯ್ಯಬಾರದು. ಇದರಿಂದ ಆಯುಷ್ಯ ಕ್ಷೀಣವಾಗುತ್ತದೆ. ೨೯. ತುಳಸಿ, ದೂರ್ವಾ, ಬಿಲ್ವ ಮತ್ತು ಹೂವು ಎಷ್ಟು ದಿನ ಸಂಗ್ರಹಿಸಬಹುದು? ನಿರ್ಣಯ ಸಿಂಧುವಿನಲ್ಲಿ ಮತ್ತು ಅನೇಕ ಗ್ರಂಥಗಳಲ್ಲಿ ಬೇರೆ ಬೇರೆ ಪ್ರಕಾರ, ತಿಳಿಸಿದಂತೆ ಬೇರೆ ಬೇರೆಯೇ ಇದೆ. ತುಳಸಿಯನ್ನು ಕೆಲವು ಕಡೆ ೩೦ ದಿನ, ೧೧ ದಿನ, ೬ ದಿನ ಮತ್ತು ತುಳಸಿ ಯಾವಾಗಲೂ ದೇವರಿಗೆ ಹಾಕಬಹುದು ಕಲುಶಿತವಾಗುವುದಿಲ್ಲ ಎಂದಿದೆ. ಆದ್ದರಿಂದ ತುಳಸಿಯನ್ನು ಕೊಯ್ದಿಟ್ಟಲ್ಲಿ ಯಾವಾಗಲೂ ಬಳಸಿ. ಬಿಲ್ವ ಪತ್ರೆಯನ್ನು ೩ ದಿನಗಳವರೆಗೆ ಇಟ್ಟು ಬಳಸಬಹುದು. ಕಮಲದ ಹೂವನ್ನು ೫ ದಿನ ಇಟ್ಟು ಬಳಸಬಹುದು. ಉಳಿದ ಪುಷ್ಪಗಳನ್ನು ೧ ದಿನ ಇಟ್ಟು ಬಳಸಬಹುದು. ೩೦. ನಿತ್ಯ ಪೂಜಿಸುವ ದೇವರ ಮೂರ್ತಿ ಅಥವಾ ಯಂತ್ರಗಳನ್ನು ಒಮ್ಮೊಮ್ಮೆ ಪೂಜೆ ಮಾಡಲು ಆಗದ ಪರಿಸ್ಥಿತಿ ಬಂದಾಗ ಏನು ಮಾಡಬೇಕು? ಉದಾ ೧. ನಿತ್ಯ ಆರಾಧಿಸುವ ದೇವರ ಪೂಜೆ ಮಾಡಲು ಕೆಲವು ಕಾರಣಗಳಿಂದ ಆಗುವುದಿಲ್ಲ. ಆಗ ೧) ಅಶೌಚ ಇದ್ದಲ್ಲಿ ೨) ಪ್ರಯಾಣಕ್ಕೆ ಹೋದಲ್ಲಿ ೩) ಇನ್ನಾವುದೋ ಕಾರಣ. ೧. ದೇವರಿಗೆ ದೀಪ ಹಚ್ಚಿ ೨. ಬೇರೆ ಬ್ರಾಹ್ಮಣರಿಂದ ಪೂಜೆ ಮಾಡಿಸಬಹುದು. ಪ್ರಯಾಣದಲ್ಲಿ ಇರುವಾಗ ಪೂಜೆ ಮಾಡಲು ಸರಿ ಆಗುವುದಿಲ್ಲ. ಆಗ ಸಮೀಪದ ದೇವಸ್ಥಾನದಲ್ಲಿ ಪೂಜೆಗೆ ಬ್ರಾಹ್ಮಣರು ಇದ್ದರೆ ಪೂಜೆಗೆ ಕೊಡಬಹುದು. ಯಾವುದೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ದೇವರನ್ನು ಒಂದು ಪಾತ್ರೆಯಲ್ಲಿ ಇಟ್ಟು ಧಾನ್ಯವನ್ನು (ಅಕ್ಕಿ, ಗೋಧಿ, ಜೋಳ) ದೇವರು ಮುಳುಗುವಷ್ಟು ಹಾಕಿ ಮೇಲಿಂದ ಹೂವು ಇಟ್ಟು ಪೂಜಿಸಿ ಪ್ರಾರ್ಥನೆ ಮಾಡಿಕೊಳ್ಳಿ. ಪೀಠದಲ್ಲಿ ದೇವರಿಟ್ಟ ಪಾತ್ರೆ ಇಡಿ. ಆಮೇಲೆ ಮುಚ್ಚಳವನ್ನು ಹಾಕಬೇಡಿ. ಧಾನ್ಯಾದಿವಾಸದಲ್ಲಿ ಇರುವಾಗ ಮೂರ್ತಿಗೆ ಸಂಪೂರ್ಣ ಬಲವಿರುತ್ತದೆ. ನೀವು ಪುನಃ ವಾಪಾಸ್ ಮನೆಗೆ ಬಂದಾಗ ಧಾನ್ಯದಿಂದ ತೆಗೆದು ವಿಶೇಷವಾಗಿ ಪೂಜಿಸಿ. ಯಾವ ದೋಷವೂ ಬರುವುದಿಲ್ಲ. ೩೧. ಗ್ರಹಣ ಕಾಲದಲ್ಲಿ ಏನು ಮಾಡಬೇಕು? ಗ್ರಹಣಸು ಸ್ಪರ್ಶವಾದಾಗ ಸ್ನಾನ ಮಾಡಿ ಜಾ, ಪೂಜೆ, ಹೋಮ ಮಾಡಬೇಕು. ಹೊಸ ಜಪವನ್ನು ಉಪದೇಶ ಗುರುಗಳಿಂದ ಪಡೆದು ಗ್ರಹಣ ಆರಂಭದಿಂದ ಮುಗಿಯುವವರೆಗೂ ಜಪಮಾಡಬೇಕು. ಮಂತ್ರಸಿದ್ಧಿಗೆ ಗ್ರಹಣಕಾಲ ಉತ್ತಮವಾಗಿರುತ್ತದೆ. ಗ್ರಹಣ ಮಧ್ಯಕಾಲದಲ್ಲಿ ತರ್ಪಣ ಮಾಡಬೇಕು. ಗ್ರಹಣ ಮೋಕ್ಷವಾದ ಮೇಲೆ ಸ್ನಾನಾದಿಗಳನ್ನು ಮಾಡಿ ಪುನಃ ದೇವರ ಪೂಜೆ ಮಾಡಬೇಕು. ಹಾಲು, ಮೊಸರು, ತುಪ್ಪ ಮುಂತಾದವುಗಳಿಗೆ, ಗ್ರಹಣಕಾಲದಲ್ಲಿ ತುಳಸಿ ಅಥವಾ ದರ್ಭೆಯನ್ನು ಹಾಕಿಡಬೇಕು. ಅದು ಕಲುಶಿತವಾಗುವುದಿಲ್ಲ. ೧) ಅಶೌಚ ಇರುವವರೆಗೂ ಸಹ ಗ್ರಹಣಕಾಲದಲ್ಲಿ ಸ್ನಾನ ಮಾಡಿ ತರ್ಪಣವನ್ನು ಕೊಡಬಹುದು. ೨) ಸೂರ್ಯಗ್ರಹಣ ಸಂಭವಿಸುತ್ತಿದ್ದರೆ ೪ ಯಾಮ ಮೊದಲು ಆಹಾರ ಸ್ವೀಕರಿಸುವುದು ನಿಶಿದ್ಧ. ೩) ಚಂದ್ರಹ್ರಹಣ ಸಂಭವಿಸುತ್ತಿದ್ದರೆ ೩ ಯಾಮ ಮೊದಲು ಆಹಾರ ಸ್ವೀಕರಿಸಬಾರದು(೧ಯಾಮ = ೩ ಗಂಟೆ). ೪) ಗ್ರಸ್ಥಾಸ್ಥ ಗ್ರಹಣವಾದರೆ ಮಾರನೇ ದಿನ ಶುದ್ಧ ಬಿಂಬ ದರ್ಶನ ಮಾಡಿ ಆಹಾರ ಸ್ವೀಕರಿಸಬೇಕು. ೫) ಜನ್ಮ ರಾಶಿ, ಜನ್ಮ ನಕ್ಷತ್ರಗಳಲ್ಲಿ ಗ್ರಹಣ ಸಂಭವಿಸುತ್ತಿದ್ದರೆ ವಸ್ತ್ರ-ಧಾನ್ಯ- ದಕ್ಷಿಣೆಯನ್ನು ಬ್ರಾಹ್ಮಣರಿಗೆ ಕೊಡಬೇಕು. ಗ್ರಹಣ ನಿಮಿತ್ತ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ಮುಖ್ಯವಾದವು: ಪೂರ್ಣ ಸೂರ್ಯಗ್ರಹಣವಿದ್ದರೆ ಹಿಂದೆ ಮತ್ತು ಮುಂದಿನ ೩ ದಿನಗಳು, ಪೂರ್ಣ ಚಂದ್ರಗ್ರಹಣವಿದ್ದರೆ ಹಿಂದೆ ಮತ್ತು ಮುಂದಿನ ೩ ದಿನಗಳು, ಖಂಡ ಗ್ರಹಣವಿದ್ದರೆ ಚತುರ್ದಶಿಯಿಂದ ಮೂರು ದಿನಗಳು ಶುಭ ಕಾರ್ಯಗಳಿಗೆ ಪ್ರಶಸ್ತವಾಗಿರುವುದಿಲ್ಲ. . 32. ೩೨. ಮೂಹೂರ್ತಗಳ ಬಗ್ಗೆ ಮಾಹಿತಿ ತಿಳಿಸಿ. ಒಂದು ದಿನಕ್ಕೆ ೨೪ ಘಂಟೆ = ೬೦ ಘಟಿ. ಹೀಗೆ ಒಂದು ದಿನಕ್ಕೆ ೬೦ ಘಟಿ ತೆಗೆದುಕೊಂಡಾಗ ಬೆಳಗಿನ ಜಾವದಲ್ಲಿ ಅಂದರೆ ೫೨.೩೦ ಘಟಿಯಿಂದ ೫೬.೧೫ ಘಟಿಯವರೆಗೆ ಕಾಲವನ್ನು ಬ್ರಾಹ್ಮೀಮೂಹೂರ್ತ ಎನ್ನುತ್ತಾರೆ. ಸೂರ್ಯನು ಆಕಾಶದ ಮಧ್ಯದಲ್ಲಿ ಇರುವ ೧ ಮೂಹೂರ್ತದ ಕಾಲವನ್ನು ಅಭಿಜಿನ್ ಮೂಹೂರ್ತ ಎನ್ನುತ್ತಾರೆ. ಸೂರ್ಯಾಸ್ಥ ಸಮಯದ ಹಿಂದೆ ಮತ್ತು ಮುಂದಿನ ಅರ್ಧ ಘಳಿಗೆ ೧೨ ನಿಮಿಷ ಕಾಲವನ್ನು ಗೋಧೂಳಿ ಮೂಹೂರ್ತ ಎನ್ನುತ್ತಾರೆ. ಮುಖ್ಯವಾದುದು: ಗುರು ಅಸ್ತ, ಶುಕ್ರ ಅಸ್ತ, ಅಯನಗಳಲ್ಲಿ, ಸಂಕ್ರಮಣ ಇರುವ ದಿನದಲ್ಲಿ ಶೂನ್ಯ ಮಾಸ ಮತ್ತು ಅಧಿಕ ಮಾಸದಲ್ಲಿ ದುಷ್ಟ ನಕ್ಷತ್ರ ವಾರ, ಕರಣ, ಯೋಗ ಇರುವ ದಿನಗಳಲ್ಲಿ ಶುಭಕಾರ್ಯವನ್ನು ಮಾಡಬಾರದು. ಇಷ್ಟ ಕಾಲೀನ ಲಗ್ನಕ್ಕೆ ಶುಕ್ರ ೬ರಲ್ಲಿ, ಮಂಗಳ ೮ರಲ್ಲಿ ಇರಬಾರದು. ಪಂಚಾಗ ಶುದ್ಧಿ ಮತ್ತು ಲಗ್ನ ಶುದ್ಧಿ ಇರಬೇಕು. ೩೩. ಶುಭಕಾರ್ಯದಲ್ಲಿ ಮಾಡುವ ನಾಂದಿ ಬಗ್ಗೆ ನಿಯಮ ತಿಳಿಸಿ. ಮನೆಯಲ್ಲಿ ಯಾವುದೇ ಶುಭಕಾರ್ಯವನ್ನು ಮಾಡುತ್ತಿದ್ದರೆ ಸ್ವರ್ಗಸ್ಥ ನಮ್ಮ ಪಿತೃಗಳು ಸೂಕ್ಷ್ಮ ರೂಪದಿಂದ ನೋಡುತ್ತಿರುತ್ತಾರೆ. ಅಲ್ಲದೆ ಪಿತೃಗಳ ಆಶೀರ್ವಾದವು ನಮಗೆ ಅತಿ ಮುಖ್ಯವಾದುದು. ಅವರು ನಮ್ಮ ವಂಶಕ್ಕೆ ಶುಭ ಕಾರ್ಯವನ್ನು ಮಾಡುವಾಗ ಪಿತೃ ದೇವತೆಗಳ ಅನುಗ್ರಹ ಪಡೆಯಲು ಮಾಡುವ ವಿಧಿಗೆ ನಾಂದಿ ಸಮಾರಾಧನೆ(ನಾಂದಿ ಶ್ರಾದ್ಧ) ಎನ್ನುತ್ತಾರೆ. ೧) ನಾವು ಯಾವುದೇ ಶುಭಕಾರ್ಯ ಮಾಡುವಾಗ ಕುಲದೇವತಾ ಸ್ಥಾಪನೆ ಮತ್ತು ನಾಂದೀ ಸಮಾರಾಧನೆ ಮಾಡಿ ಕಾರ್ಯ ಆರಂಭಮಾಡುತ್ತೇವೆ. ೨) ನಾಂದಿ ಮತ್ತು ಕುಲದೇವತೆ ಸ್ಥಾಪಿಸಿ ಕಂಕಣ ಧರಿಸಿದರೆ ಕಾರ್ಯ ಆರಂಭವಾದಂತೆ. ೩) ಒಂದು ವೇಳೆ ಮನೆಯಲ್ಲಿ ಅಶೌಚ ಬರುವ ಸಾಧ್ಯತೆ ಇದ್ದರೆ ಶಾಸ್ತ್ರದಲ್ಲಿ ತಿಳಿಸಿದಂತೆ ಕಾರ್ಯಕ್ಕೆ ಆಡ್ಡಿ ಬರದಂತೆ ಮೊದಲೇ ನಾಂದಿ ಮತ್ತು ಕುಲದೇವತೆ ಸ್ಥಾಪಿಸಿ ಕಂಕಣ ಧಾರಣೆ ಮಾಡಬಹುದು ವಿವಾಹಕ್ಕೆ = ೧೦ ದಿನಗಳ ಮೊದಲು ೨. ಉಪನಯನಕ್ಕೆ = ೬ ದಿನಗಳ ಮೊದಲು ೩. ಚೌಲ ಮತ್ತು ಇತ್ಯಾದಿ ಸಂಸ್ಕಾರಗಳಲ್ಲಿ = ೩ ದಿನಗಳ ಮೊದಲು ೪. ಯಜ್ಞ-ಯಾಗಾದಿಗಳಲ್ಲಿ = ೨೧ ದಿನಗಳ ಮೊದಲು ಕಂಕಣ ಧರಿಸಿ ಶುಭ ಕಾರ್ಯ ಮಾಡಬಹುದು ೫. ಶನಿವಾರ, ಮಂಗಳವಾರ ನಾಂದಿ ಮಾಡಬಾರದು. ೬. ನಾಂದಿ ಶ್ರಾದ್ಧ ಮಾಡಿದ ಮೇಲೆ ಅಶೌಚ ಬಂದರೂ ಶುಭ ಕಾರ್ಯ ಮಾಡಲೇ ಬೇಕಾದ ಸಂದರ್ಭವಿದ್ದರೆ ಮಾಡಬಹುದು ಇದು ಆಪತ್ ಧರ್ಮ. ೩೪. ವೃತ-ಪೂಜೆ- ಹೋಮ- ಹವನ ಬಗೆಗಿನ ನಿಯಮ ತಿಳಿಸಿ. ವೃತ ಅಥವಾ ಪೂಜೆ, ಯಜ್ಞ ಯಾವುದೇ ದೇವತಾ ಕಾರ್ಯ ಮಾಡುವ ಮೊದಲು ಬೆಳಿಗ್ಗೆ ಬೇಗ ಎದ್ದು ಸ್ನಾನಾದಿಗಳನ್ನು ಮಾಡಿ ಮನೆಯನ್ನು ಗೋಮಯದಿಂದ ಶುದ್ಧಗೊಳಿಸಿ ಆಮೇಲೆ ಮನೆದೇವರ ಪೂಜೆಮಾಡಬೇಕು. ಕೆಲವು ವೃತಗಳನ್ನು ಪ್ರದೋಷಕಾಲ(ಸಾಯಂಕಾಲ) ಮಾಡುವ ಸಂದರ್ಭದಲ್ಲಿ ಉಪವಾಸವಿದ್ದು ವೃತಾದಿಗಳು ಮುಗಿದ ಮೇಲೆ ಭೋಜನ ಮಾಡಬೇಕು. ಬೆಳಿಗ್ಗೆ ಪೂಜಾದಿಗಳು ನಡೆಸಿದಲ್ಲಿ ಪ್ರಸಾದ ಸ್ವೀಕರಣೆ , ಮರುದಿನ ಸೂರ್ಯೋದಯ ಪರ್ಯಂತ ಜಾಗರಣೆ ಮಾಡಿ ಅಂದರೆ ರಾತ್ರಿ ಪೂರ್ತಿ ಭಗವಂತನ ಜಪ-ನಾನಾವಿಧವಾದ ಕಥೆ ಪುರಾಣ ಕೀರ್ತನೆ ಕೇಳುತ್ತಾ ಮರುದಿನ ಸೂರ್ಯೋದಯದ ನಂತರ ಪುನಃ ಪೂಜೆ ಮಾಡಿ ಪ್ರಸಾದ ಸ್ವೀಕರಿಸಬೇಕು ಎಂದು ಪುರಾಣ ಹೇಳುತ್ತದೆ. ಆದರೆ ಇಂದಿನ ಕಾಲದಲ್ಲಿ ಅದು ಕಷ್ಟ. ಆದ್ದರಿಂದ ನಮಗೆ ಆದಷ್ಟು ಹೆಚ್ಚು ನಿಯಮ ಪಾಲಿಸಬೇಕು. ಯಜ್ಞ ಯಾಗಾದಿಗಳನ್ನು ಮಾಡುವ ಸಂದರ್ಭದಲ್ಲಿ ಮಾಂಸಾಹಾರ ಸ್ವೀಕರಿಸುವವರು ೮ ದಿನಗಳು ಇಲ್ಲವೇ ೩ ದಿನಗಳಾದರೂ ಬಿಟ್ಟಿರಬೇಕು. ಆದಷ್ಟು ಶುಚಿಯಾಗಿರಬೇಕು. ನಾವು ಏನೇ ಪೂಜೆ ಹೋಮ ಮಾಡಿದರೂ ಶ್ರದ್ಧಾ-ಭಕ್ತಿಯಿಂದ ಮಾಡಿದರೆ ಮಾತ್ರ ಫಲ ಸಿಗುತ್ತದೆ. ೩೫. ನಾವು ಬೇರೆ ಜಾತಿಯವರು ಈ ಪೂಜೆಯ ಅಥವಾ ಹೋಮ ಮಾಡಬಹುದೇ? ನನ್ನ ಅನಿಸಿಕೆಯಂತೆ ಶುಚಿರ್ಭೂತನಾಗಿ ಶ್ರದ್ಧಾ- ಭಕ್ತಿಯಿಂದ ಸಂಪೂರ್ಣ ವಿಶ್ವಾಸದಿಂದ ಎಲ್ಲಾ ಪೂಜೆ ಹೋಮಾದಿಗಳನ್ನು ಮಾಡಬಹುದು. ಭಗವಂತನು ಎಲ್ಲರಿಗೂ ಒಬ್ಬನೇ. ಇಲ್ಲಿ ಜಾತೀಯತೆ ಬೇಡ. ಆದರೆ ಶಾಸ್ತ್ರ ಮತ್ತು ಪುರಾಣಗಳು ಶೃತಿ- ಸ್ಮೃತಿಗಳು ನಿಯಮವನ್ನು ವಿಧಿಸಿದೆ. ೩೬. ಎಲ್ಲರೂ ಎಲ್ಲಾ ಮಂತ್ರವನ್ನು ಜಪಿಸಬಹುದಾ? ನಿಯಮ ಏನು? ಈಗ ನಾವು ಮಾರ್ಕೆಟಿನಲ್ಲಿ ಎಲ್ಲಾ ಮಂತ್ರಗಳ ಸಿ.ಡಿ ಅಥವಾ ಇನ್ನಾವುದೇ ಕೇಳಿ ಕೇಳಿ ಅದೇ ಮಕ್ಕಳಿಗೂ ಹೇಳಿಕೊಡುವುದನ್ನು ಕಾಣುತ್ತೇವೆ. ಆದರೆ ಸಿ.ಡಿ ಯಲ್ಲಿ ಮಂತ್ರವನ್ನು ಸಂಗೀತಕ್ಕೆ ಅಳವಡಿಸಿ ಅವರಿಗೆ ಬೇಕಾದಂತೆ ಹೇಳುತ್ತಾರೆ. ಆದರೆ ಮಂತ್ರವು ಅದರದ್ದೆ ಆದ ಸ್ವರದಲ್ಲಿ ಹೇಳಿದರೆ ಮಾತ್ರ ಫಲಕಾರಿಯಾಗುತ್ತದೆ. ವೇದ ಮಂತ್ರ ಮತ್ತು ಬೀಜಾಕ್ಷರ ಮಂತ್ರವನ್ನು ಗುರು ಉಪದೇಶದ ಹೊರತಾಗಿ ಮಾಡಲೇಬಾರದು. ಇದಕ್ಕೆ ಸರಿ ಸಮವಾದ ಶ್ಲೋಕ ಅಥವಾ ಪೌರಾಣಿಕ ಮಂತ್ರಗಳಿವೆ ಅದನ್ನು ಹೇಳಬೇಕು. ಸಿ.ಡಿಯನ್ನು ಕೇಳಿ ಅಥವಾ ಇನ್ನಾರೋ ಹೇಳಿದ್ದು ಕೇಳಿ ಮಕ್ಕಳಿಗೆ ಮಂತ್ರಗಳನ್ನು ಹೇಳಿಕೊಡಬಾರದು. ಸ್ವರಗಳು ತಪ್ಪುತ್ತದೆ. ಅದರಿಂದ ಯಾವ ಪ್ರಯೋಜನವಾಗುವುದಿಲ್ಲ. ಇದರಿಂದ ನಾವು ಪಡೆಯುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಆದ್ದರಿಂದ ಗುರು ಉಪದೇಶದ ಹೊರತಾಗಿ ಮಂತ್ರ ಮತ್ತು ಬೀಜಾಕ್ಷರ ಮಾಡಬಾರದು. ೩೭. ಯಾವ ದೇವರಿಗೆ ಯಾವ ಪುಷ್ಪ ಪೂಜೆ ಒಳ್ಳೆಯದು ? ಗಣಪತಿಗೆ - ಕೆಂಪು ಹೂ , ದೂರ್ವೆ ಶಿವನಿಗೆ - ಬಿಳಿ ಹೂ, ಬಿಲ್ವ ಪತ್ರೆ, ತುಂಬೆ ಹೂ ವಿಷ್ಣುವಿಗೆ - ಬಿಳಿ ಹೂ, ತುಳಸಿ, ಮಲ್ಲಿಗೆ ಇತ್ಯಾದಿ ದುರ್ಗೆಗೆ - ಕೆಂಪು ಮತ್ತು ಎಲ್ಲಾತರಹದ್ದು ರವಿ - ಕೆಂಪು ತಾವರೆ ಮತ್ತು ಇತರ ಕೆಂಪು ಹೂಗಳು ಚಂದ್ರ - ಬಿಳಿ ತಾವರೆ ಮತ್ತು ಇತರೆ ಬಿಳಿ ಹೂಗಳು ಮಂಗಳ - ಕೆಂಪು ಕರವೀರ, ಕೆಂಪು ಕಣಗಿಲು ಇತ್ಯಾದಿ ಬುಧ - ಸುವಾಸಿತ ಜಾಜಿ ಹೂವು ಗುರು - ಹಳದಿ ಸೇವಂತಿಗೆ ಮತ್ತು ಹಳದಿ ಹೂವು ಶುಕ್ರ - ಬಿಳಿ ತಾವರೆ, ಬಿಳಿ ಕಮಲ ಇತ್ಯಾದಿ ಶನಿ - ನೀಲಿ ಶಂಖ ಪುಷ್ಪ ಮತ್ತು ಇತರೆ ರಾಹು - ಮಂದಾರ ಇತ್ಯಾದಿ ಹೂವ ಕೇತು - ಕೆಂಪು ಕಣಗಿಲು ಮತ್ತು ಇತ್ಯಾದಿ ಆದರೆ ಸುವಾಸಿತವಾದ ಎಲ್ಲಾ ರೀತಿಯ ಹೂವುಗಳು ಎಲ್ಲಾ ದೇವರಿಗೂ ಶ್ರೇಷ್ಠ. ಆದರೆ ಲಕ್ಷ್ಮೀಗೆ ದೂರ್ವಾ ಮತ್ತು ತುಂಬೆಯ ಹೂವು, ಗಣಪತಿಗೆ ಚತುರ್ಥಿ ಬಿಟ್ಟು ಉಳಿದ ದಿನಗಳಲ್ಲಿ ತುಳಸಿ ಬೇಡ. ಶಿವನಿಗೆ ವಿಶೇಷ ದಿನ ಬಿಟ್ಟು ಉಳಿದ ದಿನ ತುಳಸಿ ಮತ್ತು ಕೇದಿಗೆ ಹೂವು ಬೇಡ. ೩೮. ನವಗ್ರಹ ಧಾನ್ಯ, ವಸ್ತ್ರ ಮತ್ತು ಜಪ ಸಂಖ್ಯೆ ತಿಳಿಸಿ. ಗ್ರಹ ಧಾನ್ಯ ವಸ್ತ್ರ ಜಪ ಸಂಖ್ಯೆt ರವಿ ಗೋಧಿ ಕೆಂಪು ವಸ್ತ್ರ ೭ ಸಾವಿರ ಚಂದ್ರ ಭತ್ತ ಬಿಳಿ ವಸ್ತ್ರ ೧೧ ಸಾವಿರ ಮಂಗಳ ತೊಗರಿ ಕೆಂಪು ವಸ್ತ್ರ ೧೦ ಸಾವಿರ ಬುಧ ಹೆಸರು ಕಾಳು ಹಸಿರು ವಸ್ತ್ರ ೪ ಸಾವಿರ ಗುರು ಕಡಲೆ ಕಡಲೆ ಹಳದಿ ೧೯ ಸಾವಿರ ಶುಕ್ರ ಅವರೆ ಬಿಳಿ ವಸ್ತ್ರ ೧೬ ಸಾವಿರ ಶನಿ ಕಪು ಎಳ್ಳು ಕಪ್ಪು ವಸ್ತ್ರ ೨೩ ಸಾವಿರ ರಾಹು ಉದ್ದಿನ ಕಾಳು ನೀಲಿ ವಸ್ತ್ರ ೧೮ ಸಾವಿರ ಕೇತು ಹುರುಳಿ ಕಾಳು ಚಿತ್ರವಿರುವ ವಸ್ತ್ರ ೧೭ ಸಾವಿರ ೩೯. ನವಗ್ರಹ ಮಂಡಲದಲ್ಲಿ ಗ್ರಹಗಳ ಸ್ಥಾನ ಮತ್ತು ಮುಖದ ದಿಶೆ ತಿಳಿಸಿ (ಋಕ್ ಮತ್ತು ಯಜುರ್ವೇದ ರೀತಿ) ರವಿ ವರ್ತುಲಾಕಾರ ಮಂಡಲ ಮಧ್ಯದಲ್ಲಿ ಪೂರ್ವಾಭಿಮುಖ ಚಂದ್ರ ಸಮಚತುರಸ್ರ ಆಗ್ನೇಯದಲ್ಲಿ ಪಶ್ಚಿಮಾಚಿಮುಖ ಮಂಗಳ ತ್ರಿಕೋಣಮಂಡಲ ದಕ್ಷಿಣದಲ್ಲಿ ದಕ್ಷಿಣಾಭಿಮುಖ ಬುಧ ಬಾಣಾಕಾರ ಮಂಡಲ ಈಶಾನ್ಯದಲ್ಲಿ ಉತ್ತರಾಭಿಮುಖ ಗುರು ದೀರ್ಘಚತುರಸ್ರ ಮಂಡಲ ಉತ್ತರದಲ್ಲಿ ಉತ್ತರಾಭಿಮುಖ ಶುಕ್ರ ಪಂಚಕೋಣಾಕಾರ ಮಂಡಲ ಪೂರ್ವದಲ್ಲಿ ಪೂರ್ವಾಭಿಮುಖ ಶನಿ ಧನುರಾಕಾರ ಮಂಡಲ ಪಶ್ಚಿಮದಲ್ಲಿ ಪಶ್ಚಿಮಾಭಿಮುಖ ರಾಹು ಶೂರ್ವಾಕಾರ ಮಂಡಲ ನೈರುತ್ಯದಲ್ಲಿ ದಕ್ಷಿಣಾಭಿಮುಖ ಕೇತು ಧ್ವಜಾಕಾರ ಮಂಡಲ ವಾಯುವ್ಯದಲ್ಲಿ ದಕ್ಷಿಣಾಭಿಮುಖ ೪೦. ಋತುಮತಿ(ಋತುಕಾಲ)(ಪೀರಿಯಡ್) ಈ ಬಗೆಗೆ ಇರುವ ನಿಯಮಗಳನ್ನು ತಿಳಿಸಿ? ಪೂಜೆ ಪುನಸ್ಕಾರಕ್ಕೆ ಎಷ್ಟನೇ ದಿನ ಶುದ್ಧಿ ಆಗುವುದು? ಸ್ತ್ರೀಯರು ಪ್ರತಿ ತಿಂಗಳು ಋತುಕಾಲದಲ್ಲಿ ೩ ರಾತ್ರಿಗಳು ಕಳೆದ ಮೇಲೆ ಸ್ನಾನಾದಿಗಳಿಂದ ಶುದ್ಧರಾಗುತ್ತಾರೆ. ೫ನೇ ದಿನ ಎಲ್ಲಾ ಪೂಜೆ ಪುನಸ್ಕಾರಗಳಿಗೆ ಕುಳಿತುಕೊಳ್ಳಬಹುದು. ಆದರೆ ಇಲ್ಲಿ ಕೆಲವೊಂದು ಸಮಸ್ಯೆಗಳು ಬರುತ್ತಿದ್ದಲ್ಲಿ ಅಂದರೆ ೧) ಋತುಕಾಲ ಮುಗಿದು ಪುನಃ ೧೭ ದಿನಗಳ ಒಳಗೆ ರಜೋದರ್ಶನ ಆದಲ್ಲಿ ಸ್ನಾನ ಮಾಡಿದರೆ ಸಾಕು. . ೨) ೧೮ನೇ ದಿನ ರಜೋದರ್ಶನವಾದಲ್ಲಿ ೧ ರಾತ್ರಿ ನಂತರ ಶುದ್ಧಿಯಾಗುವರು. ೩) ೧೯ನೇ ದಿನ ರಜೋದರ್ಶನವಾದಲ್ಲಿ ೨ ರಾತ್ರಿ ನಂತರ ಶುದ್ಧಿಯಾಗುತ್ತಾರೆ. ೪) ನಂತರ ರಜೋದರ್ಶನವಾದಲ್ಲಿ ೩ ರಾತ್ರಿಗಳ ನಂತರ ಶುದ್ಧಿಯಾಗುತ್ತಾರೆ. ಸಾಮಾನ್ಯವಾಗಿ ತಿಂಗಳಿಗೊಮ್ಮೆ ರಜೋದರ್ಶನವಾಗುತ್ತದೆ. ಆದರೆ ಕೆಲವೊಮ್ಮೆ ಶರೀರದಲ್ಲಿನ ಪರಿವರ್ತನೆಯಿಂದ ತೊಂದರೆ ಆದಲ್ಲಿ ಮೇಲಿನ ನಿಯಮ ಪಾಲಿಸಿರಿ. ೧. ತಂದೆ- ತಾಯಿಗಳು ಇರುವಾಗ ಉತ್ತರೀಯಾರ್ಥವಾಗಿ ೩ನೇ ಜನಿವಾರ ಧರಿಸಬಾರದು. ೨. ಮಾನವನು ಜನಿಸುವಾಗ ೩ ಋಣಗಳನ್ನು ತೀರಿಸಬೇಕಾಗುತ್ತದೆ. ಅ) ದೇವ ಋಣ ಆ) ಋಷಿ ಋಣ ಇ) ಪಿತೃ ಋಣ. ದೇವತಾ ಆರಾಧನೆ ಹೋಮಾದಿಗಳಿಂದ ದೇವ ಋಣ ತೀರಿಸಬೇಕು. ವೇದ-ಶಾಸ್ತ್ರ-ಪುರಾಣಗಳ ಅಧ್ಯಯನದಿಂದ ಋಷಿ ಋಣ ತೀರುವುದು. ತಂದೆ ತಾಯಿಗಳ ಸೇವೆ ಮಾಡುವುದರಿಂದ ಮತ್ತು ಪಿತೃ ಕಾರ್ಯವನ್ನು ಮರೆಯದೇ ಮಾಡುವುದರಿಂದ ಪಿತೃ ಋಣ ತೀರುವುದು. 3೩. ಜ್ಯೇಷ್ಠ ಪುತ್ರನಿಗೆ ಜ್ಯೇಷ್ಠ ಪುತ್ರಿಗೆ ಜ್ಯೇಷ್ಠ ಮಾಸದಲ್ಲಿ ವಿವಾಹ ಮಾಡಬಾರದು. ೪. ಒಂದು ವೇಳೆ ಮೊದಲನೇ ಹೆಂಡತಿ ಮೃತಳಾದರೆ ೨ನೇ ವಿವಾಹವಾಗುವುದಾದರೆ ಹೆಂಡತಿ ಮೃತ ದಿನದಿಂದ ಬೆಸ ವರ್ಷದಲ್ಲಿ ವಿವಾಹವಾಗಬೇಕು. ೩ನೇ ವಿವಾಹ ಕಲಿಯುಗದಲ್ಲಿ ನಿಶಿದ್ಧವಾಗಿದೆ. ಆದ್ದರಿಂದ ೩ನೇ ವಿವಾಹ ಆಗುವ ಸಮಯ ಬಂದಲ್ಲಿ ೩ನೇ ವಿವಾಹ ಅರ್ಕದ ಜೊತೆಗೆ ಮಾಡಿಕೊಂಡು ಮತ್ತೆ ವಿವಾಹ ಆಗಬಹುದು. ೫. ಯಮಳರಿಗೆ(ಅವಳಿ-ಜವಳಿ) ಒಂದೇ ಮಂಟಪದಲ್ಲಿ ಉಪನಯನ ಅಥವಾ ವಿವಾಹ ಸಂಸ್ಕಾರವನ್ನು ಮಾಡಬಹುದು. ೬. ದಕ್ಷಿಣಾಯನದಲ್ಲಿ ಉಪನಯನ ಮಾಡಬಾರದು. ೭. ಉಪನಯನ ಸಂಸ್ಕಾರದಲ್ಲಿ ಕೇಶ ಮುಂಡನವಿರುತ್ತದೆ. ಆ ವೇಳೆಯಲ್ಲಿ ವಟುವಿಗೆ ಗೋವಿನ ಪಾದದಷ್ಟು ದೊಡ್ಡ ಶಿಖೆಯನ್ನು ಬಿಡಬೇಕು ಅಥವಾ ಶಿಖೆಯಲ್ಲಿ ೩೨೦೦ಕ್ಕೂ ಹೆಚ್ಚು ಕೂದಲುಗಳು ಇರಬೇಕು. ೮. ಉಪನಯನ ಕಾಲದಲ್ಲಿ ವಟುವಿಗೆ ಗಾಯತ್ರೀ ಉಪದೇಶ ಮಾಡುವ ವಟುವಿನ ತಂದೆಗೆ ಉಪದೇಶ ಅಧಿಕಾರ ಪ್ರಾಪ್ರಿಗಾಗಿ ೧೨,೦೦೦ಕ್ಕೂ ಹೆಚ್ಚು ಗಾಯತ್ರೀ ಜಪ ಮಾಡಿಸಬೇಕು. ೯. ವೇದಕ್ಕೆ ಅಧಿಪತಿಗಳು ಋಗ್ವೇದಕ್ಕೆ ಅಧಿಪತಿ- ಗುರು ಯಜುರ್ವೇದಕ್ಕೆ ಅಧಿಪತಿ - ಶುಕ್ರ ಸಾಮವೇದಕ್ಕೆ ಅಧಿಪತಿ- ಕುಜ ಅಥರ್ವವೇದಕ್ಕೆ ಅಧಿಪತಿ - ಬುಧ, ಶನಿ ವೇದಾಧಿಪತಿಗಳು ಅಸ್ತರಿರುವಾಗ ಉಪನಯನ ಮಾಡಬಾರದು. ೧೦. ತಾಯಿಯ ಗರ್ಭಿಣಿ ಇರುವಾಗ ೫ ತಿಂಗಳ ಒಳಗಿದ್ದರೆ ಉಪನಯನ ಮಾಡಬಹುದು. ಆದರೆ ಗ್ರಹ ಪ್ರವೇಶ ಬಲಿ ಪ್ರಧಾನ ಮುಂತಾದವು ಬೇಡ. ೧೧. ಒಂದೇ ವರ್ಷದಲ್ಲಿ ೨ ಬಾರಿ ನಾಂದಿ ಸಮಾರಾಧನೆ ಮಾಡಬಾರದು. ಒಂದು ವೇಳೆ ಮಾಡಲೇಬೇಕಾದ ಪರಿಸ್ಥಿತಿಯಲ್ಲಿ ಮಾವಂದೀರುಗಳಿಂದ ಮಾಡಿಸಿ, ಸಂವತ್ಸರವಾದರೂ ಬದಲಿಯಾಗಿರಲಿ ಇಲ್ಲವೇ ನದಿ ಮತ್ತು ಪರ್ವತಗಳಿಂದ ಭೇಧಿಸಿದ ದೇಶಾಂತರವಾಗಿರಲಿ. ೧೨. ೧ ವರ್ಷಕ್ಕೆ ೧ ಸಂವತ್ಸರವಾಗುತ್ತದೆ. ಇದರಲ್ಲಿ ೫ ವಿಧಗಳು. ಅ) ಸೌರಮಾನ: ಸೂರ್ಯನು ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಚಕ್ರವನ್ನು ಸುತ್ತಿಬರಲು ಬೇಕಾಗುವ ಅವಧಿಗೆ ಸೌರವರ್ಷ ಎನ್ನುತ್ತಾರೆ. ಇದಕ್ಕೆ ೩೬೫ ದಿನ ೧೫ ಘಟಿ ೩೧ ವಿಘಟಿ. ಆ) ಚಾಂದ್ರಮಾನ- ಒಂದು ಚಾಂದ್ರಮಾನ ವರ್ಷಕ್ಕೆ ೩೫೪ ಅಥವಾ ೩೫೫ ದಿನಗಳು. ಇದು ಚೈತ್ರಾದಿ ಆರಂಭವಾಗುತ್ತದೆ. ವಿ. ಸೂ: ಸೌರಮಾನದಲ್ಲಿ ೩೬೫ ದಿನಗಳು ವರ್ಷಕ್ಕೆ, ಚಾಂದ್ರಮಾನದಲ್ಲಿ ೩೫೫ ದಿನಗಳು ವರ್ಷಕ್ಕೆ. ೧ ವರ್ಷಕ್ಕೆ ಬರುವ ೧೦ ಅಥವಾ ೧೧ ದಿನಗಳನ್ನು ಸರಿ ದೂಗಿಸುವ ಸಲುವಾಗಿ ೩ ವರ್ಷಗಳಿಗೊಮ್ಮೆ ೧ ಅಧಿಕವರ್ಷ ಬರುತ್ತದೆ. ಇ) ಸಾವನಮಾನ(ವರ್ಷ)- ಸಾವನ ಮಾನದಲ್ಲಿ ೧ ವರ್ಷಕ್ಕೆ ೩೬೦ ದಿನಗಳು. ಈ) ನಾಕ್ಷತ್ರ ಮಾನ(ವರ್ಷ) - ನಾಕ್ಷತ್ರಮಾನದಲ್ಲಿ ಒಂದು ವರ್ಷಕ್ಕೆ ೩೨೪ ದಿನಗಳು (ಚಂದ್ರನಿಗೆ ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಹೋಗಲು ಬೇಕಾಗುವ ಅವಧಿಗೆ ನಾಕ್ಷತ್ರದಿನವೆಂತಲೂ, ೨೭ ದಿನಗಳಿಗೆ ನಾಕ್ಷತ್ರಮಾಸವೆಂತಲೂ, ೧೨ ನಾಕ್ಷತ್ರ ಮಾಸಗಳಿಗೆ ಒಂದು ನಾಕ್ಷತ್ರ ವರ್ಷ. ಉ) ಬಾರ್ಹಸ್ಪತ್ಯಮಾನ: ಗುರುವಿಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಬೇಕಾಗುವ ಅವಧಿ. ೧೩. ಪಂಚಾಂಗವೆಂದರೆ ವಾರ, ತಿಥಿ, ನಕ್ಷತ್ರ, ಯೋಗ, ಕರಣ ಎಂಬ ೫ ಅಂಗಗಳು ಸೇರಿದವು ಎಂದರ್ಥ. 14.ಸಂವತ್ಸರಗಳು - ೬೦ ಅಯನಗಳು - ೨ ಋತುಗಳು- ೬ ಚಾಂದ್ರಮಾಸ - ೧೨ ಸೌರಮಾನ - ೧೨ ತಿಥಿಗಳು - ೩೦ ನಕ್ಷತ್ರಗಳು - ೨೭ ಯೋಗಗಳು - ೨೭ ಕರಣಗಳು - ೧೧ ಪಕ್ಷಗಳು - ೨ ೧೫. ಜ್ಯೋತಿಷ್ಯ ಶಾಸ್ತ್ರವು ಅ) ಸಿದ್ಧಾಂತ ಆ) ಸಂಹಿತೆ ಇ) ಹೋರಾ ಎಂಬ ತ್ರಿಸ್ಕಂಧ ರೂಪದಿಂದ ಆಗಿದೆ. ೧೫. ಜ್ಯೋತಿಷ್ಯ ಶಾಸ್ತ್ರವು ಅ) ಸಿದ್ಧಾಂತ ಆ) ಸಂಹಿತೆ ಇ) ಹೋರಾ ಎಂಬ ತ್ರಿಸ್ಕಂಧ ರೂಪದಿಂದ ಆಗಿದೆ. ಅ) ಸಿದ್ಧಾಂತವು ಗ್ರಹಗಳು ಚಲಿಸುವ ಕಕ್ಷೆ ಮಾರ್ಗದ ಗಣಿತ ಕ್ರಮವನ್ನು ತಿಳಿಸುತ್ತದೆ. ಆ) ಸಂಹಿತೆಯಲ್ಲಿ ಗ್ರಹಣಗಳು ಮತ್ತು ಗ್ರಹಗಳ ಉದಯಾಸ್ತದಿಂದ ಉಂಟಾಗುವ ಫಲವನ್ನು ತಿಳಿಸುತ್ತದೆ. ಇ) ಹೋರಾಸ್ಕಂಧದಿಂದ ಮಗು ಜನಿಸಿದಾಗ ಇರುವ ಅಂದರೆ ಜನನಕಾಲದಲ್ಲಿ ಇರತಕ್ಕ ಗ್ರಹ, ನಕ್ಷತ್ರ, ಲಗ್ನಾದಿಗಳಿಂದ ಬರುವ ಫಲವನ್ನು ತಿಳಿಸುತ್ತದೆ. ೧೬. ವೇದಗಳು ಜ್ಞಾನದ ಸಾಗರಗಳು. ಅವುಗಳಲ್ಲಿ ತಿಳಿಸಿರುವ ವಿಷಯಗಳು ಮಾನವನ ಅಭ್ಯುದಯದ ಆಧಾರ ಸ್ತಂಭಗಳು. ಹೀಗಿರುವ ನಮ್ಮ ವೇದಗಳು ೪. ಅ)ಋಗ್ವೇದ ಆ) ಯಜುರ್ವೇದ ಇ) ಸಾಮವೇದ ಈ) ಅಥರ್ವವೇದ. ೧೭. ಋಗ್ವೇದಕ್ಕೆ- ೨೧ ಶಾಖೆಗಳು ಯಜುರ್ವೇದಕ್ಕೆ - ೧೦೯ ಶಾಖೆಗಳು ಸಾಮವೇದಕ್ಕೆ - ೧೦೦೦ ಶಾಖೆಗಳು ಅಥರ್ವವೇದಕ್ಕೆ - ೫೦ ಶಾಖೆಗಳು ಹೀಗೆ ನಾಲ್ಕು ವೇದಗಳು ಸೇರಿ ೧೧೮೦ ಶಾಖೆಗಳು ಇರುತ್ತದೆ. ೧೮. ಇದಲ್ಲದೇ ಜ್ಞಾನಕ್ಕಾಗಿ ನಮ್ಮ ಋಷಿ ಮಹನೀಯರುಗಳು ೧೮ ಪುರಾಣಗಳನ್ನು ಮತ್ತು ಶಾಸ್ತ್ರಗಳನ್ನು ತಿಳಿಸಿರುತ್ತಾರೆ. ೧೯. ವೇದವ್ಯಾಸರು ರಚಿಸಿದ ನಾಲ್ಕು ವೇದಗಳು ಒಂದೇ ಮಹಾಮೇರುವಿನಂತೆ ಇತ್ತು. ಇದನ್ನು ಪುನಃ ಕೃಷ್ಣದ್ವೈಪಾಯನ ಮಹರ್ಷಿಗಳು ವರ್ಗಶಃ ಎತ್ತಿ ಪೃಥಕ್ಕರಿಸಿ, ವಿಭಾಗಗೊಳಿಸಿ ಒಂದೇ ಇರುವ ಮಹಾರಾಶಿಯನ್ನು ನಾಲ್ಕು ವೇದಗಳಾಗಿ ವಿಭಾಗಗೊಳಿಸಿದರು ಅಲ್ಲದೇ ಅಂದಿನಿಂದ ವೇದವ್ಯಾಸರೆಂದು ಪ್ರಶಿದ್ಧರಾದರು. ೨೦. ಕೃಷ್ಣದ್ವೈಪಾಯನ ಮೊದಲಿಗೆ, ಪೈಲನೆಂಬ ಶಿಷ್ಯನಿಗೆ ಋಗ್ವೇದವನ್ನು , ವೈಶಂಪಾಯನರಿಗೆ ಯಜುರ್ವೇದವನ್ನು, ಜೈಮಿನಿಗೆ ಸಾಮವೇದವನ್ನು, ಸುಮಂತುವಿಗೆ ಅಥರ್ವವೇದವನ್ನು ಉಪದೇಶ ಮಾಡಿದರು. ಇದು ವೇದ ಪ್ರಚಾರದ ಆರಂಭದ ಇತಿಹಾಸವಾಗಿದೆ. ಹೀಗೆ ಅನೇಕ ವಿಧವಾದ ತಿಳುವಳಿಕೆ ಜನಸಾಮಾನ್ಯರಿಗೆ ತಿಳಿಸಬೇಕೆಂದು ಚಿಕ್ಕ ಪ್ರಯತ್ನವನ್ನು ಮಾಡಿರುತ್ತೇವೆ. ಇದರ ಸದುಪಯೋಗವನ್ನು ಪಡೆಯಬೇಕು. ಮಹಾಮೇರು ಪರ್ವತದಂತಿರುವ ನಮ್ಮ ಸಂಸ್ಕೃತಿಯಲ್ಲಿನ ಎಲ್ಲಾ ಸಮಸ್ಯೆಗೆ ಉತ್ತರಿಸುವುದು ಅಸಾಧ್ಯ. ಗುರುಹಿರಿಯರಿಂದ ತಿಳಿದಫ಼್ ಕೆಲವನ್ನು ಮಾತ್ರ ಬರೆದಿರುತ್ತೇವೆ. ಇನ್ನೂ ಈ ಭಾಗದಲ್ಲಿ ತಿಳುವಳಿಕೆ ಬೇಕಾದಲ್ಲಿ ಸಂಪರ್ಕಿಸಬಹುದು. ೪೧. ಕಣ್ಣಿನ ಭಾಗಗಳು ಹಾರುತ್ತಿದ್ದರೆ ಫಲಗಳು ಪುರುಷರಿಗೆ ಪರಿಣಾಮ ಮಹಿಳೆಯರಿಗೆ ಪರಿಣಾಮ ಬಲಗಣ್ಣಿನ ಬಲಬದಿಗೆ ಯಶಸ್ಸು ಬಲಗಣ್ಣಿನ ಮೇಲಿನ ರೆಪ್ಪೆಯ ಬಲಭಾಗ ನಾಶ ಬಲಗಣ್ಣಿನ ಎಡಬದಿಗೆ ನಾಶ ಬಲಗಣ್ಣಿನ ಮೇಲಿನ ರೆಪ್ಪೆಯ ಎಡಭಾಗ ಕಷ್ಟ ಕಣ್ಣಿನ ರೆಪ್ಪೆಯ ಕೆಳಬದಿಗೆ ನಾಶ ಕಣ್ಣು ರೆಪ್ಪೆಗಳು ಭಯ ಕೆಳಗಣ್ಣಿನ ಬಲಬದಿಗೆ ಭಯ ಬಲಗಣ್ಣಿನ ಕೆಳಗಿನ ರೆಪ್ಪೆಯ ಬಲಭಾಗ ಸುಖ ಕೆಳಗಣ್ಣಿನ ಎಡಬದಿಗೆ ಹರಣ ಬಲಗಣ್ಣಿನ ಕೆಳಗಿನ ರೆಪ್ಪೆಯ ಎಡಭಾಗ ಸುಖ ಎಡಗಣ್ಣಿನ ಬಲಬದಿಗೆ ಪ್ರಸಿದ್ಧ ಕೆಳಗಣ್ಣಿನ ಕೆಳಭಾಗ ಭಯ ಎಡಗಣ್ಣಿನ ಎಡಬದಿಗೆ ನಾಶ ಎಡಗಣ್ಣಿನ ಮೇಲಿನ ರೆಪ್ಪೆಯ ಬಲಭಾಗ ಸುಖ ಹುಬ್ಬುಗಳು ಲಾಭ ಎಡಗಣ್ಣಿನ ಮೇಲಿನ ರೆಪ್ಪೆಯ ಎಡಭಾಗ ಸುಖ ಕೆಳಗಣ್ಣಿನ ಬಲ ರೆಪ್ಪೆಗಳು ಸುಖ ಹುಬ್ಬುಗಳು ಭಯ ಕೆಳಗಣ್ಣಿನ ಎಡ ರೆಪ್ಪೆಗಳು ಯಶಸ್ಸು ಎಡಗಣ್ಣಿನ ಕೆಳಗಿನ ರೆಪ್ಪೆಯ ಬಲಭಾಗ ಲಾಭ ಕೆಳರೆಪ್ಪೆಗಳು ನಾಶ ಕಣ್ಣಿನ ರೆಪ್ಪೆಯ ಕೆಳಗಿನ ಮಧ್ಯ ಭಾಗ ಭಯ ೪೨. ಹಲ್ಲಿ ಬಿದ್ದ ಫಲಗಳು ಸ್ಥಾನ ಪುರುಷರಿಗೆ ಸ್ತ್ರೀಯರಿಗೆ ತಲೆ ಜುಟ್ಟು ಸುಖ ಪ್ರಾಪ್ತಿ ಲಕ್ಶ್ಮೀ ಪ್ರಾಪ್ತಿ ಕೂದಲಿನ ಗಂಟು ರೋಗ ರೋಗ ನಡು ತಲೆಯಲ್ಲಿ ಮರಣ ಮರಣ ಹಣೆಯಲ್ಲಿ ಧನಲಾಭ ದ್ರವ್ಯನಾಶ ಹುಬ್ಬುಗಳಲ್ಲಿ ದ್ರವ್ಯನಾಶ ದ್ರವ್ಯನಾಶ ಬಲಗಣ್ಣಿಗೆ ಶುಭ ದುಃಖ ಎಡಗಣ್ಣಿಗೆ ಬಂಧನ ಪತಿ ದರ್ಶನ ಮುಖದಲ್ಲಿ ಮೃಷ್ಟಾನ್ನ ಮೃಷ್ಟಾನ್ನ ಮೂಗಿನಲ್ಲಿ ಸೌಭಾಗ್ಯ ಸೌಭಾಗ್ಯ ಬಲಭುಜಕ್ಕೆ ಜಯ ಸುಖ ಎಡಭುಜಕ್ಕೆ ಪರಾಜಯ ಸುಖ ಬಲಕೈಯಲ್ಲಿ ದ್ರವ್ಯನಾಶ ದ್ರವ್ಯನಾಶ ಎಡಕೈಯಲ್ಲಿ ಕಲಹ ಲಾಭ ಬಲಮುಂಗೈಗೆ ದ್ರವ್ಯನಾಶ ಭೂಷಣ ಎಡಮುಂಗೈಗೆ ಭೂಲಾಭ ಭೂಲಾಭ ಕೈ ಬೆರಳಿಗೆ ಇಷ್ಟಾರ್ಥ ಸಿದ್ಧಿ ಅಲಂಕಾರ ಕೈ ಉಗುರಿಗೆ ದ್ರವ್ಯನಾಶ ದ್ರವ್ಯನಾಶ ಅಂಗೈಯಲ್ಲಿ ಸುಖ ಸುಖ ಬೆನ್ನಿನಲ್ಲಿ ಮಿತ್ರಲಾಭ ಪುತ್ರಲಾಭ ಮೂಗಿನ ತುದಿ ವ್ಯಸನ ವ್ಯಸನ ಬಲಕಿವಿಯಲ್ಲಿ ಲಾಭ ಆಯುರ್ವದ್ದಿ ಎಡಕಿವಿಯಲ್ಲಿ ದುಃಖ ಸುವರ್ಣಲಾಭ ಬಲಕೆನ್ನೆಯಲ್ಲಿ ಇಷ್ಟಪ್ರಾಪ್ತಿ ಪತಿಗೆ ಕಷ್ಟ ಕೆಳ ತುಟಿಯಲ್ಲಿ ಸಂಪತ್ತು ಸಂಪತ್ತು ಮೇಲ್ತುಟಿಯಲ್ಲಿ ಕಲಹ ಕಲಹ ತುಟಿಯ ಕೆಳಗೆ ರಾಜದ್ವೇಷ ಕಲಹ ಕೊರಳಿನಲ್ಲಿ ಮಿತ್ರಾಗಮನ ಭೂಲಾಭ ಕೊರಳ ಹಿಂದೆ ಶತ್ರು ಭಯ ನಿತ್ಯ ಕಲಹ ಕಾಲುಗಳಲ್ಲಿ ಬಂಧನ ಪ್ರಯಾಣ ಪಾರ್ಶ್ವಗಳಲ್ಲಿ ಬಂಧು ದರ್ಶನ ಬಂಧು ದರ್ಶನ ಹೊಟ್ಟೆಯಲ್ಲಿ ದ್ರವ್ಯನಾಶ ಶುಭ ಮೊಲೆಯಲ್ಲಿ ಸೌಭಾಗ್ಯ ಬಹುದುಃಖ ಎಡತೋಳಿಗೆ ಬಹು ಕ್ಲೇಶ ಆಭರಣ ಲಾಭ ಸೊಂಟದಲ್ಲಿ ವಸ್ತ್ರಲಾಭ ವಸ್ತ್ರಲಾಭ ಹೊಕ್ಕಳಿನಲ್ಲಿ ಜಯ ಕೀರ್ತಿ ಬುದ್ಧಿ ವೃದ್ಧಿ ತೊಡೆಯಲ್ಲಿ ವಸ್ತ್ರಲಾಭ ಸಂತಾನ ಲಾಭ ಮೊಣಕಾಲಿಗೆ ಬಂಧನ ಬಂಧನ ಜಂಫೆಯಲ್ಲಿ ಪ್ರವಾಸ ದ್ರವ್ಯನಾಶ ಕಾಲುಬೆರಳಿಗೆ ಪುತ್ರನಾಶ ಧನಲಾಭ “LOKA SAMASTA SUKINO BHAVANTU”

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...