ಪ್ರತಿಯೊಬ್ಬರೂ ಹೆಸರಿನ ಮಹತ್ವವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಶಕ್ತಿಯುತವಾದ ಹೆಸರಿನ ಬಲ ಮಾನವನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಹೆಸರಿನಿಂದ ನಮ್ಮ ಭಾವನೆಗಳು, ವ್ಯಕ್ತಿತ್ವ ತಿಳಿದುಬರುತ್ತವೆ. ಹೆಸರು ವ್ಯಕ್ತಿಯ ಬಲವನ್ನು ತೋರಿಸುತ್ತದೆ.
ಶಕ್ತಿಯುತವಾದ ಹೆಸರನ್ನಿಡದೆ ಹೋದರೆ ಅದು ಆ ವ್ಯಕ್ತಿಗೆ ಆಭಾಸವಾಗುತ್ತದೆ. ಉದಾಹರಣೆಗೆ 'ಸರಸ್ವತಿ' ಎಂದು ಹೆಸರಿಟ್ಟು ಆಕೆಗೆ ವಿದ್ಯೆಯೇ ಹತ್ತಲಿಲ್ಲ ಎಂದರೆ ಅದು ವಿರೋಧಾಭಾಸವಾಗುತ್ತದೆ. ಹಾಗಾಗಿ ಹೆಸರು ವ್ಯಕ್ತಿಗೆ ಬಲವನ್ನು ತಂದುಕೊಡುವಂತಹದ್ದಾಗಿರಬೇಕು.
ಜ್ಯೋತಿಷ್ಯಾಸ್ತ್ರದಲ್ಲಿ ಪ್ರಮುಖವಾಗಿ ಮೂರು ರೀತಿಯಾಗಿ ಹೆಸರನ್ನು ಸೂಚಿಸುವ ಪದ್ಧತಿ ಇದೆ. ಮೊದಲನೆಯದಾಗಿ ನೇಮಾಲಜಿ ಅಥವಾ ನಾಮಶಾಸ್ತ್ರ,ಎರಡನೆಯದಾಗಿ ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರ, ಮೂರನೆಯದಾಗಿ ವ್ಯಕ್ತಿಯ ಜಾತಕದಲ್ಲಿ ಯಾವ ಗ್ರಹಗಳ ಬಲ ಹೆಚ್ಚಿರುವುದೋ ಅದಕ್ಕೆ ಸಂಬಂಧಿಸಿದ ಅಕ್ಷರಗಳನ್ನಿಡುವುದು ಅಥವಾ ವ್ಯಕ್ತಿಯ ನಕ್ಷತ್ರಕ್ಕನುಗುಣವಾಗಿ ಹೆಸರನ್ನಿಡುವುದು.
ಮೊದಲನೆಯದಾಗಿ ನೇಮಾಲಜಿಯನ್ನು ತೆಗೆದುಕೊಳ್ಳೋಣ. ಇಲ್ಲಿ ವ್ಯಕ್ತಿಯ ನಕ್ಷತ್ರವನ್ನು ತೆಗೆದುಕೊಂಡು, ಆ ನಕ್ಷತ್ರಕ್ಕೆ ತಾರಾನುಕೂಲವಾಗುವ ನಕ್ಷತ್ರಗಳು ಸೂಚಿಸುವ ಅಕ್ಷರಗಳನ್ನು ತೆಗೆದುಕೊಂಡು ಹೆಸರಿಡುವುದು. ಉದಾಹರಣೆಗೆ ವ್ಯಕ್ತಿಯ ನಕ್ಷತ್ರ ಅಶ್ವಿನಿಯಾಗಿದ್ದರೆ ಈ ನಕ್ಷತ್ರಕ್ಕೆ ತಾರಾನುಕೂಲವಾಗುವ ನಕ್ಷತ್ರಗಳು ಭರಣಿ, ಪುಬ್ಬ, ಪೂರ್ವಾಷಾಢ, ರೋಹಿಣಿ, ಹಸ್ತ, ಶ್ರವಣ, ಆರಿದ್ರಾ, ಸ್ವಾತಿ, ಶತಃಭಿಷಾ, ಪುಷ್ಯ, ಅನುರಾಧಾ, ಉತ್ತರಾಭಾದ್ರಾ, ಆಶ್ಲೇಷ, ಜ್ಯೇಷ್ಠ, ಹಾಗೂ ರೇವತಿ ನಕ್ಷತ್ರ. ಈ ನಕ್ಷತ್ರಗಳು ಸೂಚಿಸುವ ಅಕ್ಷರಗಳನ್ನು ತೆಗೆದುಕೊಂಡು ಹೆಸರನ್ನಿಟ್ಟಲ್ಲಿ ಆ ವ್ಯಕ್ತಿಗೆ ಅದೃಷ್ಟ ಖುಲಾಯಿಸುವುದು. ಅಂದರೆ ಭರಣಿಗೆ ಲಕಾರ, ರೋಹಿಣಿಗೆ ವಕಾರ, ಆರ್ದ್ರಾಗೆ ಕಕಾರ, ಪುಷ್ಯಗೆ ಮ,ಟಕಾರ, ಹಸ್ತಗೆ ಪಕಾರ, ಸ್ವಾತಿಗೆ ರಕಾರ, ಅನುರಾಧಾಗೆ ನಕಾರ, ಜ್ಯೇಷ್ಠಗೆ ಯಕಾರ, ಪೂರ್ವಾಷಾಢಗೆ ಬ,ಧಕಾರ, ಶ್ರವಣಾಗೆ ಶಕಾರ, ಶತಃಭಿಷಾಗೆ ಸಕಾರ, ಉತ್ತರಾಭಾದ್ರಾಗೆ ದಕಾರ, ರೇವತಿಗೆ ದ,ಚಕಾರವಾಗುವುದು. ಈ ಅಕ್ಷರಗಳಲ್ಲಿ ಯಾವುದನ್ನಾದರೂ ತೆಗೆದುಕೊಂಡು ಒಂದು ಹೆಸರಿಟ್ಟಲ್ಲಿ ಅಶ್ವಿನಿ ನಕ್ಷತ್ರದ ವ್ಯಕ್ತಿಗೆ ಹೊಂದಿಬರುವುದು. ಈ ಅಕ್ಷರಗಳನ್ನು ತೆಗೆದುಕೊಂಡು ಪುನೀತ್, ರಾಮ, ಕೇಶವ, ಹೇಮ, ಕಲ್ಪನಾ, ಮುಂತಾದ ಹೆಸರು ಹೊಂದಿಬರುವುವು. ಇದು ನೇಮಾಲಜಿಯಿಂದ ಹೆಸರನ್ನು ಸೂಚಿಸುವ ಕ್ರಮ.
ಎರಡನೆಯದಾಗಿ ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರವನ್ನು ತೆಗೆದುಕೊಳ್ಳೋಣ. ಪ್ರಖ್ಯಾತ ಜ್ಯೋತಿಷಿ 'ಕೀರೋ'ರವರು ಇಂಗ್ಲಿಷ್ ಅಕ್ಷರಗಳಿಗೆ ಹಾಗೂ ಗ್ರಹಗಳಿಗೆ ನಿಕಟ ಸಂಪರ್ಕವಿದೆ ಎಂದು ತಿಳಿಸುತ್ತಾರೆ.
AIJQY-ರವಿ-1
BKR - ಚಂದ್ರ-2
CGLS- ಗುರು- 3
DMT - ರಾಹು -4
EHNX-ಬುಧ -5
UVW -ಶುಕ್ರ -6
OZ- ಕೇತು -7
PF- ಶನಿ -8
ಕುಜನಿಗೆ 9. ಆದರೆ ಅವನಿಗೆ ಅಕ್ಷರಗಳನ್ನು ಕೊಟ್ಟಿಲ್ಲ. ಈಗ ಉದಾಹರಣೆಗಳ ಮೂಲಕ ವ್ಯಕ್ತಿಯ ಅದೃಷ್ಟದ ಹೆಸರನ್ನು ಇಡುವುದು ಹೇಗೆ ಎಂಬುದನ್ನು ತಿಳಿಯೋಣ. ಕನ್ನಡದ ವರನಟ ಡಾ.ರಾಜ್ ಮೂಲ ಹೆಸರು ಮುತ್ತುರಾಜ್. ಇವರ ಜನ್ಮ ದಿನಾಂಕ 24.4.1929.
ರಾಜ್ ರವರ ಜನ್ಮ ಸಂಖ್ಯೆ 24. 2+4=6. ಶುಕ್ರನ ಸಂಖ್ಯೆ. ಭಾಗ್ಯ ಸಂಖ್ಯೆ 2+4+4+1+9+2+9=31. 3+1=4 ರಾಹುವಿನ ಸಂಖ್ಯೆ.
ಇವರ ಮೂಲ ಹೆಸರು ಮುತ್ತುರಾಜ್.(MUTTURAJ) -4+6+5+5+6+2+1+1=30=3 ಗುರುವಿನ ಸಂಖ್ಯೆ. ಈ ಹೆಸರು ಇವರ ಜನ್ಮ ಸಂಖ್ಯೆಯ ಶತ್ರುಸಂಖ್ಯೆ. ಹಾಗಾಗಿ ಇದು ಪ್ರಯೋಜನವಿಲ್ಲ. ಇವರು ರಾಜ್‌ಕುಮಾರ್ ಎಂದು ಬದಲಾಯಿಸಿಕೊಂಡಾಗ (RAJKUMAR)
-2+1+1+2+6+4+1+2=19=1+9=10=1. ಇದು ರವಿಯ ಸಂಖ್ಯೆ. ಈ ಹೆಸರು 6 ಮತ್ತು 4ರ ಸಂಖ್ಯೆಗಳಿಗೆ ಶಕ್ತಿಯುತವಾದ ರವಿಗ್ರಹದ ಸಂಖ್ಯೆಯಾಗಿ ಇವರಿಗೆ ಅದೃಷ್ಟದ ಬಾಗಿಲನ್ನೇ ತೆರೆಯಿತು. ಸೂರ್ಯ ಹಾಗೂ ಶುಕ್ರನ ಶಕ್ತಿ ಸೇರಿ ಅದ್ಭುತ ಯಶಸ್ಸನ್ನು ಕೊಟ್ಟಿತು.
ಮತ್ತೊಂದು ಉದಾಹರಣೆಯೆಂದರೆ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಜನ್ಮ ದಿನಾಂಕ 17.09.1950. 17-1+7=8 ಜನ್ಮ ಸಂಖ್ಯೆ. ಶನಿಯ ಸಂಖ್ಯೆ.
1+7+9+1+9+5+0=32=5. NARENDRA MODI- 5+1+2+5+5+4+2+1+4+7+4+1 -41=4+1=5. ನಾಮಸಂಖ್ಯೆ. ನರೇಂದ್ರ ಮೋದಿಯವರ ಭಾಗ್ಯ ಸಂಖ್ಯೆ ಹಾಗೂ ನಾಮಸಂಖ್ಯೆ ಪರಸ್ಪರ ಹೊಂದಾಣಿಕೆಯಾಗುವುದು. ನರೇಂದ್ರ ಮೋದಿಯವರ ನಾಮಸಂಖ್ಯೆ, ಭಾಗ್ಯಸಂಖ್ಯೆ -5, ಬಿಜೆಪಿಯ ಸಂಖ್ಯೆ 2. 5 ಮತ್ತು 2 ಸಂಖ್ಯೆಗಳು ಹೊಂದಿಬರುವುದು.
ಹೀಗೆ ವ್ಯಕ್ತಿಯು ಜನ್ಮಸಂಖ್ಯೆ, ಅದೃಷ್ಟ ಸಂಖ್ಯೆಗೆ ಹೊಂದುವಂತಹ ಹೆಸರನ್ನು ಇಟ್ಟುಕೊಳ್ಳುವುದು ಸೂಕ್ತ.
ಇನ್ನು ಮೂರನೆಯದಾಗಿ ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ಬಲದ ಆಧಾರದ ಮೇಲೂ ಹೆಸರು ಇಟ್ಟುಕೊಳ್ಳುವ ಸಂಪ್ರದಾಯವೂ ಇದೆ.
ರವಿಗೆ ಸ್ವರಗಳು ಅ ಇಂದ ಅ:ವರೆಗೆ ಕೊಟ್ಟಿರುತ್ತಾರೆ.
ಚಂದ್ರನಿಗೆ ಯ,ರ,ಲ,ವ,ಶ,ಷ,ಸ,ಹ,
ಕುಜನಿಗೆ ಕ,ಖ,ಗ,ಘ, ಙ,
ಬುಧನಿಗೆ ಟ,ಠ,ಡ,ಢ,ಣ,
ಶುಕ್ರನಿಗೆ ಚ,ಛ,ಜ,ಝ,ಞ,
ಗುರುವಿಗೆ ತ,ಥ,ದ,ಧ,ನ
ಶನಿಗೆ ಪ,ಫ,ಬ,ಭ,ಮ
ಹೀಗೆ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಗ್ರಹಗಳಿಗೆ ಅನ್ವಯಿಸಿರುತ್ತಾರೆ. ಉದಾಹರಣೆಗೆ ಜಾತಕದಲ್ಲಿ ರವಿ ಹಾಗೂ ಚಂದ್ರ ಬಲವಾಗಿದ್ದಾರೆಂದುಕೊಳ್ಳೋಣ. ರವಿಯ ಅಕ್ಷರಗಳಲ್ಲೊಂದಾದ ಉ ಹಾಗೂ ಚಂದ್ರನ ಅಕ್ಷರಗಳಲ್ಲೊಂದಾದ ಷವನ್ನು ತೆಗೆದುಕೊಂಡು ಉಷ ಎಂದು ಹೆಸರಿಟ್ಟಲ್ಲಿ ಜಾತಕರ ಸ್ವಭಾವ ಹೆಸರಿನಿಂದ ಅದಷ್ಟವನ್ನು ತಂದುಕೊಡುತ್ತದೆ.
ಇನ್ನು ನಕ್ಷತ್ರಗಳಿಗೆ ಕೊಡಲಾದ ಅಕ್ಷರಗಳನ್ನು ಇಡುವ ಹೆಸರು ಹಿಂದಿನಿಂದಲೂ ರೂಢಿಯಿದೆ. ಉದಾಹರಣೆಗೆ ಮನಸ್ವಿನಿ ಎಂಬ ಹೆಸರು ಮ ಇಂದ ಪ್ರಾರಂಭಗೊಳ್ಳುತ್ತದೆ. ಮ ಅಕ್ಷರವು ಮಖಾ ನಕ್ಷತ್ರಕ್ಕೆ ಸೇರಿದೆ. ಹೀಗೆ ಹೆಸರು ಹೇಳಿದೊಡನೆ ನಕ್ಷತ್ರ ಹೇಳುವ ಪರಿಪಾಠ ಹಿಂದಿನಿಂದಲೂ ಬಂದಿದೆ.
ಹೀಗೆ ಈ ಮೂರು ವಿಧಗಳಲ್ಲಿ ಯಾವುದಾದರೂ ರೀತಿಯಲ್ಲಿ ಹೆಸರು ಇಟ್ಟುಕೊಂಡಲ್ಲಿ ನಮಗೆ ಅದೃಷ್ಟದ ಬಾಗಿಲು ತಂತಾನೇ ತೆರೆದಿರುತ್ತದೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments