ರತ್ನರಾಜ್ ಜೈನ್
ನೋಡುವಾಗ ಮಾಣಿಕ್ಯರತ್ನದಂತೆ ಏಕ ನಕ್ಷತ್ರ. ಹಾಗಾಗಿ ಮಾಣಿಕ್ಯರತ್ನದ ಜತೆ ಏಕಮುಖ ರುದ್ರಾಕ್ಷಿ ಧರಿಸಬಹುದು. ಈ ನಕ್ಷತ್ರಕ್ಕೆ ದೇವತೆ ವಾಯು. ನರಸಿಂಹ ಸ್ವಾಮಿ ದೇವರ ಜನನ ಈ ನಕ್ಷತ್ರದಲ್ಲಿಯೇ ಆಗಿರುತ್ತದೆ.
(ಇದು ಸತ್ಯವೇ ಎಂದು ತಿಳಿದುಕೊಳ್ಳಬೇಕಾದರೆ 13.5.2014ರ ಮಂಗಳವಾರ ವೈಶಾಖ ಶುದ್ಧ ಚತುರ್ದಶಿ ದಿನ ಸ್ವಾತಿ ನಕ್ಷತ್ರವಿದೆ ಅದನ್ನು ನೋಡಬಹುದು). ಆ ದಿನ ನರಸಿಂಹಜಯಂತಿ ಕೂಡ ಆಗಿದೆ. ಜೈನರ 24ನೇ ತೀರ್ಥಂಕರರು ಮಹಾವೀರಸ್ವಾಮಿ ದೀಪಾವಳಿ ಅಮಾವಾಸ್ಯೆಯ ದಿನದಂದು ಸ್ವಾತಿ ನಕ್ಷತ್ರದಲ್ಲಿಯೇ ಮೋಕ್ಷ ಪಡೆದರು.
ನಕ್ಷತ್ರದ ವಿಶೇಷತೆಯೆಂದರೆ ಈ ನಕ್ಷತ್ರದ ದಿನ ಗೃಹ ಪ್ರವೇಶವಾದರೆ ಮೂರು ವರ್ಷಗಳಲ್ಲಿ ಮನೆಯನ್ನು ಮಾರಾಟ ಮಾಡಿ ಬೇರೆ ಮನೆ ಕಟ್ಟುವಿರಿ.
ಸಮುದ್ರದಲ್ಲಿರುವ ಮುತ್ತುಗಳಿಗೆ ಈ ನಕ್ಷತ್ರದ ಮಳೆ ಶ್ರೇಷ್ಠ ಆಗಿದೆ. ಈ ನಕ್ಷತ್ರದ ದಿನ ಅಮೂಲ್ಯವಸ್ತು ಕಳವಾದರೆ ಸಿಗಲಾರದು. ವಧು-ವರರ ಕೂಟಗಳಲ್ಲಿ ವ್ಯತ್ಯಾಸವಿದ್ದರೂ ಮಾಡಬಹುದು. ಆದರೆ ವಿವಾಹದ ನಂತರ ಲಕ್ಷ್ಮೀ ನರಸಿಂಹದೇವರ ದರ್ಶನ ಮಾಡತಕ್ಕದ್ದು.
ಈ ನಕ್ಷತ್ರದಲ್ಲಿ ಜನಿಸಿದವನು ದೈವ ಭಕ್ತನೂ,ವಿನಯವಂತನೂ,ಉತ್ತಮ ವ್ಯಾಪಾರಿಯೂ, ದಯೆ ಉಳ್ಳವನೂ, ಕೈಲಾಸದ ಬಡ ಜನರಿಗೆ ಸಹಾಯ ಹಸ್ತ ಉಳ್ಳವನೂ, ಇವನ ಆರಾಧ್ಯ ದೇವರು ಲಕ್ಷ್ಮೀ ನರಸಿಂಹಸ್ವಾಮಿ. ಸ್ತ್ರೀಯಾದರೆ ಐಶ್ವರ್ಯವಂತಳೂ, ಪತಿವ್ರತೆ, ಪುತ್ರಸಂಹಾರ ಉಳ್ಳವಳೂ, ಯಶೋವಂತಳೂ, ನಿಧಾನವಾಗಿ ಕೆಲಸ ಮಾಡುವವಳು. ಆದರೆ ತವರು ಮನೆ ಬಗ್ಗೆ ಅದರಲ್ಲೂ ತಂದೆ ತಾಯಿಯವರ ಬಗ್ಗೆ ವಿಶೇಷ ಪ್ರೀತಿ ಇರತಕ್ಕವಳು. ಮದುವೆಯಾದ ನಂತರ ತವರು ಮನೆಗೆ ಹೋದರೆ ಅಂತಹ ಗಂಡನನ್ನು ವಿಶೇಷ ಭಕ್ತಿಯಿಂದ ಕಾಣುವಳು.
ಈ ನಕ್ಷತ್ರದಲ್ಲಿ ರಜಸ್ವಲೆಯಾದರೆ ಆಯುಷ್ಯವಂತಳೂ, ಅಲಂಕಾರ ಸ್ತ್ರೀಯಳೂ, ಪುತ್ರವತಿ, ಆದರ್ಶ ಹೆಂಡತಿಯಂತೆ ಇರತಕ್ಕವಳು. ಮನೆಯ ಜವಾಬ್ದಾರಿ ಪಡೆಯತಕ್ಕವಳು ಆಗುವಳು. ಈ ನಕ್ಷತ್ರದಲ್ಲಿ ಹುಟ್ಟಿದ ಮಕ್ಕಳು ವಾಣಿಜ್ಯ,ಅರ್ಥಶಾಸ್ತ್ರ, ಗಣಕೀಕರಣ ವಿದ್ಯೆಯಲ್ಲಿ ಪರಿಣತರು. ಗಜ ಕೇಸರಿ ಯೋಗವಿದ್ದರೆ ಉತ್ತಮ ಜ್ಯೋತಿಷ್ಯ ಜ್ಞಾನಿಗಳು ಆಗುವರು. ಮಂಗಳ ಉತ್ತಮ ರಾಶಿಯಲ್ಲಿದ್ದರೆ ಕ್ರೀಡಾರ್ಥಿಗಳು ಆಗುವರು.
ಈ ನಕ್ಷತ್ರ ಶುಕ್ರವಾರ, ಶನಿವಾರ ಇದ್ದರೆ ಅಮೃತ ಸಿದ್ಧಿಯೋಗ. ಯಾವುದೇ ಶುಭ ಕಾರ್ಯ ವಿವಾಹಾದಿ ಮಂಗಳ ಕಾರ್ಯಗಳನ್ನು ಮಾಡಬಹುದು.
ಈ ನಕ್ಷತ್ರ ಯಾವ ದಿವಸ ಬಂದರೂ ದೋಷವಿಲ್ಲ, ಉತ್ತಮವೇ. ಆದರೆ ದ್ವಾದಶಿ ತಿಥಿ, ಗುರುವಾರ, ಶತಃಭಿಷ ನಕ್ಷತ್ರ ಇರುವ ದಿನಗಳಲ್ಲಿ ಯಾವುದೇ ಕಾರ್ಯ ಮಾಡಬಾರದು ಘಾತ ಆಗಿರುತ್ತದೆ. ಆರ್ಥಿಕ ಸಂಸ್ಥೆಯ ಅಧಿಕಾರ, ಮಾಹಿತಿ ತಂತ್ರಜ್ಞಾನವುಳ್ಳ ಉದ್ಯೋಗ, ಸ್ವ ಉದ್ಯೋಗ ಹಿಡಿಸಲಿದೆ. ವ್ಯಾಪಾರವಾದರೆ ವಾಹನ ಬಿಡಿ ಭಾಗಗಳು, ಎಲೆಕ್ಟ್ರೋನಿಕ್ ಸಂಬಂಧ ವ್ಯವಹಾರ, ಅಲಂಕಾರಿಕ ಸಾಮಗ್ರಿ, ಬಟ್ಟೆಗಳು ಹಿಡಿಸಲಿವೆ. ಹಾಗೆಯೇ ಅಡುಗೆ ಅನಿಲ, ಪೆಟ್ರೋಲಿಯಂ, ಉತ್ಪನ್ನ ಹಿಡಿಸಲಿವೆ.
ಇವರ ಹೆಸರು ಜನ್ಮ ನಕ್ಷತ್ರ ರು,ರೆ,ರೊ, ಗಳಿಂದ ಆರಂಭವಾಗಿದ್ದರೆ 4 ಕ್ಯಾರೆಟ್‌ನ ಗೋಮೇದಿಕ ರತ್ನದ ಪದಕ ಧರಿಸುವುದು. ಸಮಾಜದಲ್ಲಿ ಕೀರ್ತಿಶಾಲಿ ಆಗಬೇಕಾದರೆ ಹೆಸರನ್ನು ಸಾಧಕ ತಾರೆಗಳಾದ ಪೂರ್ವಆಷಾಢ(ಭ,ಧ) ಭರಣಿ (ಲೆ ಲೊ) ಮತ್ತು ಹುಬ್ಬ (ಮೊ ಮೌ) ಅಕ್ಷರಗಳಿಂದ ಆರಂಭದ ಹೆಸರು ಇಡತಕ್ಕದ್ದು. ಈ ನಕ್ಷತ್ರದವರು ವಿಶಾಖ(ಬುಧವಾರ) ಪೂರ್ವಭಾದ್ರ(ಗುರುವಾರ) ಮತ್ತು ಪುನರ್ವಸು(ಸೋಮವಾರ) ಹೊಸಬಟ್ಟೆ, ಆಭರಣಗಳನ್ನು ಖರೀದಿಸಲು ಧರಿಸಲು ಉತ್ತಮ ದಿನಗಳು. ರೇವತಿ(ಶುಕ್ರವಾರ) ಇದ್ದ ದಿನದಂದು ಗೃಹಪ್ರವೇಶ, ವಿವಾಹಾದಿ ಮಂಗಳ ಕಾರ್ಯಗಳಿಗೆ ಉತ್ತಮದಿನ. ಪೂರ್ವಆಷಾಢ(ಗುರುವಾರ) ಎಲ್ಲ ಕಾರ್ಯಗಳಿಗೆ ಉತ್ತಮ ದಿನ. ಅನುರಾಧಾ, ಉತ್ತರಾಭಾದ್ರ ಮತ್ತು ಪುಷ್ಯ ದಿನಗಳಲ್ಲಿ ಪ್ರಯಾಣ ಮಾಡಬಾರದು. ಕೃತಿಕೆ, ಉತ್ತರೆ,ಉತ್ತರಆಷಾಢ ದಿನಗಳಲ್ಲಿ ಜಾಗ್ರತೆ ಇರಬೇಕು. ಆರಂಭ ದೆಸೆ ರಾಹು 18 ವರ್ಷ. 9,12,34,53,70 ಕಂಟಕದಾದರೆ 80 ವರ್ಷ ಆಯುಷ್ಯ. ಗಜ ಕೇಸರಿ ಯೋಗವಿದ್ದರೆ ಒಂದು ಸಾವಿರ ತಿಂಗಳು ಆಯುಷ್ಯ ಇರುವುದು. 13 ತಾರೀಖು ಶುಕ್ರವಾರ ಇದ್ದ ದಿನ ಯಾವ ಕಾರ್ಯ ಮಾಡಬಾರದು. ಹಾಗೆಯೇ 22 ಬುಧವಾರ ದಿನ ಪ್ರಯಾಣ ಮಾಡಬಾರದು. ಈ ನಕ್ಷತ್ರದ ವರನಿಗೆ ಅಶ್ವಿನಿ,ಭರಣಿ, ಮೃಗಶಿರ,ಆರಿದ್ರ, ಪುನರ್ವಸು, ಪುಷ್ಯ, ಹುಬ್ಬ,ಉತ್ತರೆ,ಹಸ್ತ,ಅನುರಾಧಾ, ಶ್ರವಣ, ಧನಿಷ್ಠ,ಪೂರ್ವಬಾದ್ರ ಕನ್ಯೆಯೊಡನೆ ವಿವಾಹ ಆಗಲು ಕೂಡಿಬರುತ್ತದೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments