Skip to main content

Posts

ನಿಮ್ಮ ಯಾವುದೇ ರೀತಿಯ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ.

1.ಗೋಧಿ 2.ಮುಸುಕಿನ ಜೋಳ 3.ಬಿಳಿಜೋಳ 4.ಕಡಲೆ ಬೀಜ 5.ಕಡಲೆ ಕಾಳು 6.ಹುರಿಗಡಲೆ 7.ಅಕ್ಕಿ ತರಿ 8.ತುಗರಿ ಬೇಳೆ ಇವೆಲ್ಲವುಗಳನ್ನು 1ಕಿಲೋನಂತೆ ಕಲೆಸಿಕೊಂಡು ನಿತ್ಯ ಮುಂಜಾನೆ 7 ಹಿಡಿ ಗಳನ್ನು ತಗೆದುಕೊಂಡು ತಲೆಗೆ ಪ್ರದಕ್ಷಿಣೆ ಹಾಕಿ(ತಿರುಗಿಸಿ) ಗುಬ್ಬಿ/ ಪಾರಿವಾಳ ಗಳಿಗೆ ಹಾಕಿರಿ ನಿಮ್ಮ ಯಾವುದೇ ರೀತಿಯ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ.

ಪಾಯಪೂಜೆಗೆ ಬೇಕಾದ ಅಗತ್ಯ ಪೂಜಾ ಸಾಮಗ್ರಿಗಳು

*ಓಂ ವಿಶ್ವಕರ್ಮಣೇನಮಃ ವಾಸ್ತುದೇವತಾಭ್ಯೋನಮಃ* ಪಾಯಪೂಜೆಗೆ ಬೇಕಾದ ಅಗತ್ಯ ಪೂಜಾ ಸಾಮಗ್ರಿಗಳು 1.ಅರಿಸಿನ 2.ಕುಂಕುಮ 3.ಹೂವು 4.ಬಾಳೆಹಣ್ಣು 5.ಎಲೆ 6.ಅಡಿಕೆ 6.ತೆಂಗಿನಕಾಯಿ 7.ನವದಾನ್ಯದಗಂಟು ೯ (ಅಕ್ಕಿ,ಗೋಧಿ.ತುಗರಿ,ಹೆಸರು,ಕಡಲೆ,ಅವರೆ,ಎಳ್ಳು,ಉದ್ದು,ಉರುಳಿ) 8.ಪಂಚರತ್ನ(ಚಿನ್ನ,ಬೆಳ್ಳಿ,ತಾಮ್ರ,ಮುತ್ತು,ಹವಳ) 9.ಪಂಚಾಮೃತ(ಹಾಲು,ಮೊಸರು,ಜೇನು,ಕಲ್ಲುಸಕ್ಕರೆ,ಆಕಳತುಪ್ಪ) 10.ಬಾಳೆ ಎಲೆ 11.ಒಂದು ಕಳಸ(ತಾಮ್ರ ಅಥವ ಬೆಳ್ಳಿ ಚಂಬಿನ ಎಲೆ ಮತ್ತು ತೆಂಗಿನಕಾಯಿ,ಕಳಸದಸಾಮಾನುಗಳು) 12.ನೈವೇದ್ಯ(ಅವಲಕ್ಕಿ,ಹೆಸರುಬೇಳೆ,ಬಾಳೆಹಣ್ಣಿನ ರಸಾಯನ ಮಾಡಬಹುದು) ಪೂಜೆ ಮಾಡುವವಿದಾನ:- ವಿನಾಯಕನನ್ನು ಪ್ರತಿಸ್ಠಾಪಿಸಿ ಕಳಸವನ್ನಿಟ್ಟು ಒಂದು ನಾಲ್ಕು ಬಾಗ ಸಮನಾಗಿರುವ ಕಲ್ಲನ್ನು ತೊಳೆದುಕೊಂಡು ಸೈಟಿನ ಈಶಾನ್ಯಭಾಗವನ್ನು ಶುಚಿಗೊಳಿಸಿ ಕಲ್ಲನ್ನು ನಿಲ್ಲಿಸಿ ಅದರ ಪಕ್ಕದಲ್ಲಿ ಎಲೆಯಮೇಲೆ ಪಂಚಲೋಹ,ರತ್ನವನ್ನು ಇಟ್ಟು ಕೆಲಸದಸಾಮಾನುಗಳಾದ ಗುದ್ದಲಿ ಆರೆ ಪಿಕಾಶಿ ಇತ್ಯಾದಿಗಳನ್ನು ಇಟ್ಟು ವಿನಾಯಕನ ಪ್ರಾಥನೆಯೊಂದಿಗೆ ಆರಂಬಿಸಿ ತದನಂತರ ಮನೆದೇವರ ಪ್ರಾರ್ಥನೆ ಹಾಗು ವಾಸ್ತುದೇವನ ದ್ಯಾನ ಆವಾಹನಾದಿ ಶೋಡಶೋಪಚಾರ ಪೂಜೆಯನ್ನು ಮಾಡಿ ನಂತರ ಹಾಲು ತುಪ್ಪವನ್ನು ಅತ್ತಿ ಸೊಪ್ಪು,ಅಂಕೋಲೆ ಸಮೇತವಾದ ಕಲ್ಲಿಗೆ ಮನೆಯವರು ಬಿಡುವುದು.ನಂತರ ಐದುಜನ ಹಿರಿಯ ಮುತೈದೆಯರಿಗೆ ಅರಿಸಿನ ಕುಂಕುಮ ತಾಂಬೂಲನೀಡಿ ಅವರ ಆಶೀರ್ವಾದ ಪಡೆದು ಆನಂತರ ಅವರಿಂದ ಕಲ್ಲಿಗೆ ಪೂಜೆಮಾಡಿಸಿ ಹಾಲುತುಪ್ಪ ಬಿಡ...

ಶ್ರೀ ಮಹದೇವನ ಸ್ಮರಣೆ (ಸ್ತೋತ್ರ)

ಶ್ರೀ ಮಹದೇವನ ಸ್ಮರಣೆ (ಸ್ತೋತ್ರ) ಶರಣೆನ್ನಿರೋ ಎಲ್ಲ ಶರಣೆನ್ನಿರೋ ಕಲಿಯುಗ ದೈವನಿಗೆ ನಲಿಯುವ ಮಹದೇವನಿಗೆ ಶರಣೆನ್ನಿರೋ ಎಲ್ಲ ಶರಣೆನ್ನಿರೋ ಕರುಣೆಯಿಂದಲಿ ನಮ್ಮ ಕಾಯೆನ್ನಿರೋ ಕಷ್ಟ,ಅನಿಷ್ಟಗಳ ಕಳೆಯೆನ್ನಿರೋ ||ಪ|| ಮಲೆ ಮಾದಪ್ಪನಿಗೆ ಶರಣೆನ್ನಿರೋ ಮನೆ ಮನವ ಶುದ್ದಿಯಗೊಳಿಸೆನ್ನಿರೋ ಶ್ರೀ ಮಂಜುನಾಥನಿಗೆ ಶರಣೆನ್ನಿರೋ ಶ್ರೀರಕ್ಷೆ ಯಿತ್ತೆಮ್ಮ ಕಾಯೆನ್ನಿರೋ ಭೂತನಾತನಿಗೆ ಶರಣೆನ್ನಿರೋ ನಮ್ಮ ಭಯಭೀತಿಗಳ ಕಳೆಯೆನ್ನಿರೋ ||ಶರಣೆನ್ನಿರೋ|| ಚುಂಚನಗಿರಿಯೋಡೆಯನಿಗೆ ಶರಣೆನ್ನಿರೋ ಚಂದದಿ ಬಂದನವ ಕಳೆಯೆನ್ನಿರೋ ಮುಕ್ಕಣ್ಣ ದೇವನಿಗೆ ಶರಣೆನ್ನಿರೋ ನಮ್ಮ ಸೊಕ್ಕುಗಳನೆಲ್ಲ ಅಳಿಸೆನ್ನಿರೋ ನಂಜುಂಡಸ್ವಾಮಿಗೆ ಶರಣೆನ್ನಿರೋ ನಾನು ನನ್ನದೆಂಬುದ ಮರೆಸೆನ್ನಿರೋ ||ಶರಣೆನ್ನಿರೋ|| ವಿಶ್ವನಾಥನಿಗೆ ಶರಣೆನ್ನಿರೋ ನಮ್ಮ ವಿಪ್ಪತ್ತುಗಳನೆಲ್ಲ ಕಳೆಯೆನ್ನಿರೋ ವೀರಭದ್ರಸ್ವಾಮಿಗೆ ಶರಣೆನ್ನಿರೋ ನಮ್ಮ ವಿರೋಧಿಗಳನೆಲ್ಲ ಅಳಿಸೆನ್ನಿರೋ ವಿಶ್ವೇಶ್ವರಸ್ವಾಮಿಗೆ ಶರಣೆನ್ನಿರೋ ನಮ್ಮ ವಿಘ್ನಗಳನೆಲ್ಲ ಕಳೆಯೆನ್ನಿರೋ ||ಶರಣೆನ್ನಿರೋ|| ಪಶುಪತಿನಾಥನಿಗೆ ಶರಣೆನ್ನಿರೋ ನಮ್ಮ ಪಾಪಗಳನೀ ಪರಿಹರಿಸೆನ್ನಿರೋ ರುದ್ರದೇವನಿಗೆ ಶರಣೆನ್ನಿರೋ ನಮ್ಮ ರೋಗರುಜಿನಗಳ ಕಳೆಯೆನ್ನಿರೋ ಶಂಕರದೇವನಿಗೆ ಶರಣೆನ್ನಿರೋ ನಮ್ಮ ಸಂಕಟಗಳನೆಲ್ಲ ಕಳೆಯೆನ್ನಿರೋ ||ಶರಣೆನ್ನಿರೋ||

||ಶ್ರೀ ಸಿಭೀಶ ಇಚ್ಚಾ ಜಯತುಃ||

||ಶ್ರೀ ಸಿಭೀಶ ಇಚ್ಚಾ ಜಯತುಃ|| ಶ್ರೀ ಗುರುಭ್ಯೋ ನಮಃ ( ಸರ್ವ ಕಾರ್ಯ ಸಿದ್ದಿಗಾಗಿ,ಆಪತ್ತು ಪರಿಹಾರಕ್ಕಾಗಿ ಶ್ರೀ ಸಿಭೀಶ ಲಕ್ಷ್ಮಿನರಸಿಂಹಸ್ವಾಮಿ ಸ್ತೋತ್ರ) "ಓಂ ಕ್ಷಂ" ಶ್ರೀ ಲಕ್ಷ್ಮಿ ನರಸಿಂಹದೇವಾ ಕಟ್ಟು ಕಟ್ಟು ಹೇ ಸಿಭೀ ವಾಸ ಕಟ್ಟು ಕಟ್ಟು ದೃಷ್ಟಗ್ರಹಛಾಯಾಗಳನ್ನು ಕಟ್ಟು ಒಟ್ಟು ದಶದಿಕ್ಕನು ಕಟ್ಟು ಕಟ್ಟು ಸರ್ವ ಕೆಟ್ಟ ಯಂತ್ರ-ಮಂತ್ರ-ತಂತ್ರ ಮೆಟ್ಟು ಮೆಟ್ಟು ಹಿಮ್ಮೆಟ್ಟು ದುಷ್ಟರಾ ಹೆಡೆ ಮುರಿಯ ಕಟ್ಟು,ಬಂಧನವ ಮಾಡು ಖೂಳ ದೈತ್ಯರ,ನರ,ವಾಕ್.ನೇತ್ರ,ದೇಹ,ಬುದ್ದಿಸ್ತಂಬನ ಮಾಡು ದುರುಳರಿಗೆ ಕಾಣು ನೀ ಕರಾಳ ರೂಪವ ತೋರು ತೋರೋ ನಿನ್ನ ಶರಣೆಂದವರಿಗೆ ಮಾಡು ಮಾಡು ಸಕಲತ್ರ ಭದ್ರಮಯ ನೀಡು ನೀಡು ನಿನ್ನ ದಾಸರ ಸಂಘ ಹೌದಭಯಕರ ವರ ಕರುಣಾಕರ ರಕ್ಷಿಸು ಮನ್ನಿಸು ಕಾಯೋ ಕೃಪಾಕರ (ಶ್ರೀ) ಸಿರಿ ಜಯ ಸಿಭೀಶ ಲಕ್ಷ್ಮಿನರಸಿಂಹ... ನಿನ್ನ ಸ್ಮರಣೆಯ ನಿತ್ತು ಸಕಲತ್ರ ಕಾಯೋ ನಿನ್ನ ದಾಸರ ದಾಸರನು ಕಟ್ಟು ಕಟ್ಟು ಕಂಕಣವ ತೊಟ್ಟು ಎನ್ನೊಡೆಯ ಶ್ರೀ ಗುರು ಪೊರಮೊಟ್ಟು ಶ್ರೀ ತತ್ವಾಭಿಮಾನಿ ದೇವತೆಗಳಂತರ್ಗತ ಶ್ರೀ ಸಿಭೀ ವಾಸ ಶೋಡಶಬಾಹುವೇ,ಎನ್ನ ಸರ್ವ ದೋಶಗಳನ್ನು ದಹಿಸು ಹೇ ಕ್ಷಮಾಸಾಗರಾ...... ಸಿರಿ ಜಯ ಸಿಭೀನಾರಸಿಂಹಾ ನಿನ್ನ ಸ್ಮರಣೆಯನಿತ್ತು ಸಕಲತ್ರ ಕಾಯೋ ನಿನ್ನ ದಾಸರ ದಾಸರನು ಸೂಚನೆ:ದಿನಕ್ಕೆ ೧೧ ಸಲ,೨೧ಸಲ,ಅಥವ ೧೦೮ಸಲ ಪರಿಶುದ್ದ ಮನಸ್ಸಿನಿಂದ ಪಠಿಸಬೇಕು ಪ್ರತಿಫಲ ನಿಶ್ಚಯ.

ಬಂಧಕಶಕ್ತಿಯೇ ರಾಹು-ಕೇತು

ಬಂಧಕಶಕ್ತಿಯೇ ರಾಹು-ಕೇತು ಸೂರ್ಯನ ಮಂಡಲದಲ್ಲಿ ಭೂಮಿಗೆ ಆಕರ್ಷಣೆ ಇರುವ ಏಳು ಗ್ರಹಗಳೂ (ಸೂರ್ಯನೂ ಸೇರಿ), 27 ನಕ್ಷತ್ರಗಳೂ, 12 ರಾಶಿಗಳಲ್ಲಿ ತ್ರಿಸರ್ಗ ಸೃಷ್ಟಿಯು ಹರಡಿಕೊಂಡಿದೆ. ಈ ಆಕರ್ಷಣೆ ಸೂರ್ಯ ಗ್ರಹದ್ದು, ಏಕಮೇವವಾಗಿ, ಸೂರ್ಯನ ಏಕ ತೇಜಸ್ಸು ಸಮಸ್ತ ಗ್ರಹಗೋಲವನ್ನು ತಿರುಗುತ್ತ ಸೃಷ್ಟಿ ಇರುವಿಕೆಗೆ ಆಧಾರವಾಗಿದೆ. ಇದಲ್ಲದೇ ಇನ್ನೂ ಕೋಟ್ಯಂತರ ಗೋಲಗಳೂ ಇವೆ. ಆದರೆ ಇವೇ ಏಕೆ ಹೆಣೆಯಲಾಗಿದೆ? ಇಷ್ಟು ಕರಾರುವಾಕ್ಕಾಗಿ ಜೋಡಿಸಿದಂತೆ ಇರುವುದು, ಅದು ತನ್ನಿಂತಾನೇ ಆಗುವಂಥದ್ದಲ್ಲ ಎಂದು ಬಾಲರಿಗೂ ತಿಳಿಯುವುದು. ಈ ಜೋಡಣೆ ಅನೂಹ್ಯ ಎಂದಿರುವರು ಆಂಗ್ಲ ವಿಜ್ಞಾನಿಗಳು. ಈ ಅನೂಹ್ಯವನ್ನೇ ವೇದಗಳು 'ಪರಬ್ರಹ್ಮ' ಎಂದಿರುವುದು. ಶಬ್ದಗಳು ಬೇರೆಯಾದರೆ ಅರ್ಥ ಬೇರೆಯಾಗಬೇಕೆಂಬ ನಿಯಮವೇನಿಲ್ಲವಷ್ಟೆ! ಹಾಗಾಗಿ ನಾವು ಗ್ರಹಗಳ ಕಾರಕತ್ವ ಅರ್ಥ ಮಾಡಿಕೊಳ್ಳಬೇಕಾದರೆ, ಭಗವಂತನ ಆ 'ಅನೂಹ್ಯ'ದ ಇರುವನ್ನು ಒಪ್ಪಿಯೇ ಮುನ್ನಡೆಯಬೇಕಾಗುತ್ತದೆ. ಈ ಗ್ರಹಗಳಿಗೆ ತಮ್ಮದೇ ಆದ ದೈವಶಕ್ತಿ ಚೇತನರಿದ್ದಾರೆ. ಆಯಾ ಗ್ರಹರ ಹೆಸರಲ್ಲೇ ಆ ಚೇತನರನ್ನು ಕರೆಯಲಾಗುವುದು. ಈ ಗ್ರಹಗಳು ತಮ್ಮ ಕಕ್ಷೆಯಲ್ಲಿ ಇದ್ದು, ಸುತ್ತುತ್ತಾ ಭೂಮಿಯನ್ನು ಒಳಗೊಂಡು ಸೂರ್ಯನನ್ನು ಸುತ್ತುವುದು. ಈ ತ್ರಿಪುಟಿಯನ್ನೇ 'ತ್ರಿಕಾಲ'ದ ಹೊರಪರಿಧಿ ಎನ್ನುವುದು. ನಾವು ಬದುಕುವುದು ಒಳಪರಿಧಿಯಲ್ಲಿ. ಈ ತಿರುಗುವ ಸಾಲಿಗೆ ಸೂರ್ಯನು ಬಾರನು, ಆತ ಸ್ಥಿರ, ಮತ್ತೆಲ್ಲವೂ ಆತನಿಂ...

ಅಪರಿಚಿತ ಗ್ರಹಗಳ ಮಹತ್ವ

ಭಾರತೀಯ ಜ್ಯೋತಿಷ್ಯಶಾಸ್ತ್ರದ ಅನುಸಾರ ಏಳು ಪ್ರಮುಖ ಗ್ರಹಗಳು ಮತ್ತು ಎರಡು ಛಾಯಾ ಗ್ರಹಗಳು ಜನ ಜೀವನದ ಮೇಲೆ ಪ್ರಭಾವ ಬೀರುವುದನ್ನು ಸ್ವೀಕರಿಸಲಾಗಿದೆ. ಪಾಶ್ಚಾತ್ಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಏಳು ಗ್ರಹಗಳು ಹೊರತಾಗಿ ಹರ್ಷಲ್, ಪ್ಲೂಟೊ ಮತ್ತು ನೆಪ್ಚೂನ್ ಮೂರು ಗ್ರಹಗಳನ್ನು ಪರಿಗಣಿಸಲಾಗುತ್ತಿದೆ. ಆಳವಾದ ವಿಶ್ಲೇಷಣೆ ಮತ್ತು ಅಧ್ಯಯನದ ನಂತರ ಈ ಗ್ರಹಗಳು ಮಾನವ ಜೀವನದ ಮೇಲೆ ಬೀರುವ ಪ್ರಭಾವವನ್ನು ಒಪ್ಪಿಕೊಳ್ಳಬೇಕಾಗಿದೆ. *ಜನ್ಮ ಕುಂಡಲಿಯಲ್ಲಿ ನೆಪ್ಚೂನ್ ಮೀನ ರಾಶಿಗತನಾಗಿ ಯಾವುದೇ ಭಾವದಲ್ಲಿದ್ದರೂ ಅದರ ಶುಭತ್ವವು ಪ್ರಾಪ್ತವಾಗುತ್ತದೆ. *ನೆಪ್ಚೂನ್‌ದೊಂದಿಗೆ ಗುರುವೂ ಇದ್ದರೆ ಆ ಭಾವದ ಶುಭತ್ವವು ವೃದ್ಧಿಯಾಗುತ್ತದೆ. *ಪಂಚಮ ಭಾವದಲ್ಲಿ ನೆಪ್ಚೂನದೊಂದಿಗೆ ಮಂಗಲ ಅಥವಾ ರಾಹುವಿದ್ದರೆ ಸಂತಾನ ಸಂಬಂಧಿ ಕಷ್ಟವಿರುತ್ತದೆ. ಸ್ತ್ರೀಯರೇ ಜಾತಕದಲ್ಲಿ ಈ ಯೋಗವು ಗರ್ಭಪಾತ ಮಾಡಿಸುತ್ತದೆ. *ನೀಚ ರಾಶಿಯ ಸಪ್ತಮೇಶನೊಂದಿಗೆ ನೆಪ್ಚೂನ್ ಇದ್ದರೆ ದಾಂಪತ್ಯ ಸುಖ ಕಷ್ಟವಾಗುತ್ತದೆ. *ನೆಪ್ಚೂನ್ ಮತ್ತು ಶನಿ ಮಕರ ಅಥವಾ ಕುಂಭ ರಾಶಿಯಲ್ಲಿದ್ದು ದಶಮ ಭಾವದಲ್ಲಿದ್ದರೆ ವ್ಯವಹಾರದಲ್ಲಿ ಸಫಲತೆಯನ್ನು ನೀಡುತ್ತದೆ. ಆದರೆ ಪಿತೃ ಸುಖದಲ್ಲಿ ಕೊರತೆಯಾಗುತ್ತದೆ. *ದ್ವಾದಶ ಭಾವದಲ್ಲಿ ಕೇವಲ ನೆಪ್ಚೂನ್ ಇದ್ದರೆ ಅನೇಕ ಪ್ರಕಾರದ ಶುಭಫಲಗಳಿರುತ್ತವೆ. ಪಾಪ ಗ್ರಹದಿಂದ ಗ್ರಸ್ತವಾಗಿದ್ದರೆ ಧನಾಭಾವವಿರುತ್ತದೆ. *ಯಾವುದೇ ಭಾವದಲ್ಲಿ ನೆಪ್ಚೂನ್ ಶುಕ್ರ-ಬುಧ-ಚಂದ್ರ ಅಥ...

*ಗ್ರಹಗಳು ಮತ್ತು ಅವುಗಳ ವಿದ್ಯೆ*

ರವಿ ಎಲ್ಲಾ ಇಂಜಿನಿಯರಿಂಗ್(ಮೊಲತಂತ್ರಜ್ನಾನ,ಕೋರ್ ಸಬ್ಜಕ್ಟ್ ಮೆಕಾನಿಕಲ್,ಎಲೆಕ್ಟ್ರಿಕಲ್,ಸಿವಿಲ್,ಐಎಪ್ ಎಸ್, ಆರ್ಕ್,ಐ ಪಿ ಎಸ್. ಚಂದ್ರ ಸಿ ಎಸ್, ಕೆಮಿಕಲ್,ಪ್ಯಾಷನ್ ಟೆಕ್ನಾಲಜಿ,ಮನೋವಿಜ್ನಾನ,ಎಂಬಿಬಿಎಸ್,ಅಕೌಂಟ್ಸ್,ಎಂಬಿಎ,ಮಾರ್ಕೇಟಿಂಗ್. ಕುಜ ಎಲ್ಲಾಬಗೆಯ ಇಂಜನಿಯರಿಂಗ್,ಪ್ರಾಕ್ಟಿಕಲ್ ಇಂಜಿನಿಯರಿಂಗ್. ಬುಧ ತರ್ಕಶಾಸ್ತ್ರ,ವಿಜ್ನಾನ,(ಶುಕ್ರ)ವ್ಯಾಪಾರ,ಎಂ ಸಿ ಎ,ಎಂಬಿಎ,(ಬುದ,ಗುರು) ಗುರು ಎಂ ಬಿ ಎ,ಎಂ ಎಸ್ ಡ್ಬ್ಯು,ಬಯೋಟೆಕ್,ಎಸ್ ಪಿ ಎ,ಬಿಇಡಿ,ಎಂಇಡಿ.ಆಟೋಮೊಬೈಲ್ ಇಂಜಿನಿಯರಿಂಗ್,ಬಾಷಾತಜ್ನರು,ಎಕಾನಮಿಕ್ಸ್. ಶುಕ್ರ ಎಲ್ಲಾಕಲೆ,ವಿನ್ಯಾಸ,ಭರತನಾಟ್ಯ,ವಾದ್ಯಸಂಗೀತ,(ಲಲಿತಕಲೆಗಳು)ಸಂಗೀತ,ರೆಕಾರ್ಡಿಂಗ್,ನಟನೆ,ಕೊರಿಯೋಗ್ರಪಿ,ಸಿದ್ದ ಉಡುಪುಗಳವಿನ್ಯಾಸ,ಕಲೆಮತ್ತು ವಿಜ್ನಾನ,ವಿಜ್ನಾನಗಳ ಸಂಶೋದನೆ(ಕುಜ,ಶುಕ್ರ) ಶಿಕ್ಷಕ,ಬರಹಗಾರ,ಕಸ್ಮೆಟಾಲಜಿ,ಸರ್ಜರಿ,ಪರ್ಲರ್ಸ್. ಶನಿ ಮೆಟಲ್,ಕಬ್ಬಿಣ(ಪೌಂಡ್ರಿ)ಜಿಯಾಲಜಿ,ಮೆಟಾಲಜಿ,ಮೈನಿಂಗ್,ಎಂಇ,ಎರೋನಾಟಿಕ್ ಇಂಜಿನಿಯರಿಂಗ್,ಸರ್ಜರಿ,ಪಿಡ್ಬ್ಯುಡಿ,ಎಂಎಸ್ ಡಬ್ಲ್ಯು,ಸಾಪ್ಟ್ವೇರ್ ಇಂಜಿನಿಯರಿಂಗ್.