Skip to main content

Posts

ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ತರಕಾರಿಗಳಲ್ಲಿ ಅಡಗಿದೆ!

ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ತರಕಾರಿಗಳಲ್ಲಿ ಅಡಗಿದೆ! ಸಾಮಾನ್ಯವಾಗಿ ಮಧುಮೇಹ ರೋಗಕ್ಕೆ ಕಾರಣವೇನೆಂದರೆ ಸ್ಥೂಲಕಾಯತೆ ಮತ್ತು ಜೀವನಶೈಲಿ. ಇಂತಹ ರೋಗವನ್ನು ನಾವು ಆಹಾರಕ್ರಮಗಳ ಮೂಲಕ ಸರಳವಾಗಿ ನಿಯಂತ್ರಿಸಬಹುದು, ಹೌದು ಮಧುಮೇಹವನ್ನು ನಿಯಂತ್ರಸುವ ಆಹಾರವಸ್ತುಗಳನ್ನು ನಮ್ಮ ದಿನ ನಿತ್ಯ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರ ಮೂಲಕ ಇದನ್ನು ಆರ೦ಭದ ಹ೦ತದಲ್ಲಿಯೇ ತೊಡೆದು ಹಾಕಲು ಸಾಧ್ಯವಾಗುತ್ತದೆ. ಮಧುಮೇಹಿಗಳ ಪಾಲಿಗೆ ಅತ್ಯುತ್ತಮವಾಗಿರುವ ಈ ಆಹಾರವಸ್ತುಗಳ ಕುರಿತು ಅವಲೋಕಿಸುವಾಗ, ನಾವು ಮುಖ್ಯವಾಗಿ ಮಧುಮೇಹಿಗಳ ಪಾಲಿಗೆ ವರದಾನವಾಗಬಲ್ಲ ತರಕಾರಿಗಳ ಕುರಿತು ಬೆಳಕು ಬೀರಲಿದ್ದೇವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ ಜಂಬು ನೇರಳೆ ಹಣ್ಣು,ಸೀತಾಪಲ. ಗಡ್ಡೆಕೋಸು,ಬೆಂಡೆಕಾಯಿ. ಇವುಗಳು ಮದುಮೇಹ ನಿಯಂತ್ರಣದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ವಹಿಸುತ್ತವೆ ಪಾಲಕ್ ಸೊಪ್ಪು ಪಾಲಕ್ ಸೊಪ್ಪು ಹಚ್ಚಹಸುರಾದ ಸೊಪ್ಪುಗಳುಳ್ಳ ತರಕಾರಿಗಳು ಮಧುಮೇಹದ ಅಪಾಯವನ್ನು ಮೆಚ್ಚತಕ್ಕ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತವೆ ಎ೦ದು ತಿಳಿದುಬ೦ದಿದೆ. ಪ್ರತಿದಿನವೂ ಪಾಲಕ್ ಸೊಪ್ಪನ್ನು ಸೇವಿಸುವವರು ಸರಿಸುಮಾರು ಶೇ. 20 ರಷ್ಟು ಮಧುಮೇಹದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಶಕ್ತರಾಗಿರುತ್ತಾರೆ. ಈ ಮಾಹಿತಿಯು ಬ್ರಿಟನ್‌ನ ಸುಪ್ರಸಿದ್ಧವಾದ ಸ೦ಶೋಧನಾ ಸ೦ಸ್ಥೆಯೊ೦ದರ ಅಧ್ಯಯನದ ವರದಿಯಾಗಿರುತ್ತದೆ. ಹಾಗಲಕಾಯಿ ಕಹಿ ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗ...

ಕಿಡ್ನಿ ಸಮಸ್ಯೆಗಳ ನಿವಾರಣೆಗಾಗಿ ಮುದ್ರೆ ಮಂತ್ರ

ಓಂ ಕ್ಲಾಂ ಕ್ಲೀಂಕ್ಲೂಂ ಗೋಪಾಲಾಯ ವಿದ್ಮಹೇ ಕ್ಲೀಂ ಗೋವಿಂದಾಯ ಧೀಮಹೀ ತನ್ನೋ ಕೃಷ್ಣ ಪ್ರಚೋದಯಾತ್ ಅಥವ ಓಂ ಕ್ಲೀಂ ಹೃಷಿಕೇಶಾಯ ನಮಃ ಈ ಮಂತ್ರವನ್ನು ಜಪಿಸುತ್ತಾ ಬಲಗೈನ ಮದ್ಯಭಾಗದಲ್ಲಿನ ನರವನ್ನು ಅದುಮಿ ಇಡಿಯುವುದರಿಂದ ಕಿಡ್ನಿಗೆ ಡಯಾಲಿಸೀಸ್ ಆಗಿತ್ತದೆ ಕಿಡ್ನಿ ಸಮಸ್ಯೆ ಇಲ್ಲದವರು ಇದನ್ನು ಮಾಡುವುದರಿಂದ ಆರೋಗ್ಯವಂತರಾಗಬಹುದು. ಕಿಡ್ನಿಯಲ್ಲಿ ಕಲ್ಲಿದ್ದರೆ ಅದನ್ನು ಪತಾಕ ಹಸ್ತ ಮುದ್ರೆಯೋಂದಿಗೆ ಎರಡು ಹೆಬ್ಬೆರಳ ತುದಿಯನ್ನು ೧೦-೨೦ನಿಮಿಷ ಘರ್ಷಿಸುವುದರಿಂದ ಕಲ್ಲು ಕರಗುತ್ತದೆ. ಮಕರಮುದ್ರೆಯೊಂದಿಗೆ ಈ ಮಂತ್ರವನ್ನು ೨೦-೩೦ನಿಮಿಶ ನಿತ್ಯ ೩ವೇಳೆ ಜಪಿಸುವುದರಿಂದ ಕಿಡ್ನಿಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ, ಮಂತ್ರ:- ಓಂ ಝೂಂ ಸಃ ಹಸಃ ಮಾಂ ಪಾಲಯ ಪಾಲಯ ಸೋ ಹಂ ಸಃ ಝೂಂ ಓಂ (ಮಕರ ಮುದ್ರೆಯೊಂದಿಗೆ ಈ ಮಂತ್ರವನ್ನು ಜಪಿಸುವುದು) ತಂತ್ರ ಪ್ರಯೋಗ:-ಎರಡು ನಿಂಬೆ ಹಣ್ಣನ್ನು ತಗೆದುಕೊಂಡು ಎರಡು ಪಾದದ ಕೆಳಗೆ ಇಟ್ಟುಕೊಂಡು ಈ ಮಂತ್ರವನ್ನು ೧೦೮ಸಲ ಜಪಿಸುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಕೃಪೆ:- ಮಾರ್ನಿಂಗ್ ಮಂತ್ರ ಟಿವಿ ಕಾರ್ಯಕ್ರಮ

ನವಗ್ರಹ ಆಧಾರದ ಮೇಲೆ ವ್ಯಾಧಿ ನಿರ್ಣಯ

ಆರೋಗ್ಯವೇ ಭಾಗ್ಯ. ಆರೋಗ್ಯವು ಜನ್ಮದತ್ತವಾಗಿ, ತಮ್ಮ ಪೂರ್ವ ಪುಣ್ಯಗಳಿಗನುಸಾರವಾಗಿ ಬರುತ್ತದೆ. 'ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿರೂಪೇಣ ಬಾಧ್ಯತೇ' ಎಂಬಂತೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಗನುಸಾರವಾಗಿ ವ್ಯಾಧಿಗಳು ನಮ್ಮನ್ನು ಕಾಡುತ್ತವೆ. ಇದನ್ನು ನಾವು ಜನ್ಮ ಜಾತಕದಿಂದ ತಿಳಿಯಬಹುದು. ಆರೋಗ್ಯ ಜ್ಯೋತಿಷ್ಯದ ಪ್ರಕಾರ ಕಾಲ ಪುರುಷನ ಅಂಗದ ಆಧಾರದ ಮೇಲೆ, ಲಗ್ನದಿಂದ ದ್ವಾದಶ ಭಾವಗಳ ಮೇಲೆ, ನವಗ್ರಹಗಳ ಆಧಾರದ ಮೇಲೆ ವ್ಯಾಧಿಗಳನ್ನು ನಿರ್ಧರಿಸಬಹುದು. 1. ಕಾಲ ಪುರುಷನ ಅಂಗಗಳನ್ನು ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹಂಚಿದ್ದಾರೆ. ಜಾತಕದಲ್ಲಿ ಯಾವ ರಾಶಿಯು ಪೀಡಿತವಾಗಿರುತ್ತದೋ ಆ ರಾಶಿಯ ಅಂಗ ವ್ಯಾಧಿಗ್ರಸ್ತವಾಗುತ್ತದೆ. ಮೇಷ: ತಲೆಯ ಭಾಗ, ಮಿದುಳು, ಬಾಯಿ, ಮನಸು. ವೃಷಭ: ಮುಖ, ಬಲಗಣ್ಣು, ಕಂಠ, ಕುತ್ತಿಗೆ, ಧ್ವನಿ ಪೆಟ್ಟಿಗೆ. ಮಿಥುನ: ಹೆಗಲು, ಬಾಹು, ಬಲಕಿವಿ, ಶ್ವಾಸಕೋಶ, ಉಸಿರಾಟ. ಕಟಕ:ಹೃದಯ, ವಕ್ಷಸ್ಥಳ, ಪಕ್ಕೆಗಳು ಸಿಂಹ: ಬೆನ್ನು, ಹೊಟ್ಟೆ, ಪಿತ್ತಕೋಶ, ರಕ್ತನಾಳಗಳು, ಜಠರ. ಕನ್ಯಾ: ಸೊಂಟ, ನಾಭಿ, ಸಣ್ಣಕರುಳು ತುಲಾ: ಕಿಬ್ಬೊಟ್ಟೆ, ದೊಡ್ಡಕರುಳು, ಪೃಷ್ಟ, ಮೂತ್ರಕೋಶ, ಗರ್ಭಕೋಶ. ವೃಶ್ಚಿಕ: ಗುಪ್ತಾಂಗ, ಜನನಾಂಗ, ಧನುಸ್ಸು: ತೊಡೆ, ಸ್ನಾಯುಗಳು. ಮಕರ:ಮೊಣಕಾಲು, ಮಂಡಿ,ಅಸ್ಥಿಗಳು. ಕುಂಭ:ಎಡ ಹಿಮ್ಮಡಿ, ಎಡ ಕಿವಿ, ಎಡ ಭುಜ, ಮೀನಖಂಡ ಮೀನ: ಪಾದಗಳು, ಕಾಲು ಬೆರಳುಗಳು, ರಸನಾತ್ಮಕ ದ್ರವ್ಯಗಳು, ಎಡಕಣ್ಣು. 2. ಲಗ್ನದಿಂದ ದ...

ಉತ್ತಮ ಪುರುಷರ ಲಕ್ಷಣ

ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ. ಉತ್ತಮ ಪುರುಷ, ಮಧ್ಯಮ ಪುರುಷ ಹಾಗೂ ಅಧಮ ಪುರುಷರೆಂದು ವ್ಯಕ್ತಿಯನ್ನು ವಿಂಗಡಿಸಲಾಗುತ್ತದೆ. ಈ ವಿಂಗಡನೆ ಸ್ವಭಾವದಿಂದಲ್ಲ. ಕೇವಲ ಬಾಹ್ಯ ನೋಟದಿಂದ ವಿಂಗಡಿಸಲಾಗಿದೆ. ಇಲ್ಲಿ ಶರೀರದ ಹತ್ತು ವಿಭಾಗಗಳನ್ನು ಕೊಡಲಾಗಿದೆ. ಅವುಗಳ ಆಧಾರದ ಮೇಲೆ ಉತ್ತಮ ಪುರುಷನ ಲಕ್ಷಣಗಳನ್ನು ತಿಳಿಸಲಾಗಿದೆ. ಶರೀರದ ಹತ್ತು ವಿಭಾಗಗಳು 1. ಪಾದದ ಬಿಳಿಯ ಸಂದಿನಿಂದ ಹಿಡಿದು ಕಾಲಿನ ಐದು ಬೆರಳುಗಳ ಭಾಗ 2. ಮೊಣಕಾಲು ಮತ್ತು ಮೀನಖಂಡಗಳು 3. ತೊಡೆಗಳು ಮತ್ತು ಗುಪ್ತಾಂಗ 4. ನಾಭಿ ಮತ್ತು ಅದರ ಕೆಳಗಿನ ಕಟಿ ಪ್ರದೇಶ 5. ಹೊಟ್ಟೆ 6. ಹೃದಯ, ಸ್ತನ ಪ್ರದೇಶ 7. ಹೆಗಲು ಮತ್ತು ಕತ್ತಿನ ಮೂಳೆಗಳು 8. ಕತ್ತು ಮತ್ತು ತುಟಿ 9. ಕಣ್ಣು ಮತ್ತು ಹುಬ್ಬು 10. ತಲೆ ಮನುಷ್ಯನಲ್ಲಿ ಈ ಎಲ್ಲ ಲಕ್ಷಣಗಳು ಸುಲಕ್ಷಣವಾಗಿದ್ದರೆ ಮಹಾಪುರುಷನಾಗುತ್ತಾನೆ. ಕುಲಕ್ಷಣವಾಗಿದ್ದರೆ ರಾಕ್ಷಸ ಅಥವಾ ನರಾಧಮನಾಗುತ್ತಾನೆ. ಉತ್ತಮ ಪುರುಷರ ಸುಲಕ್ಷಣತೆ : * ಪಂಚ ದೀರ್ಘಂ ಚತುರ್ಹಸ್ವಂ ಪಂಚ ಸೂಕ್ಷ್ಮಂ ಷಡುನ್ನತಮ್ ಸಪ್ತ ರಕ್ತಂ ತ್ರಿಗಂಭೀರಂ ತ್ರಿವಿಸ್ತೀರ್ಣ ಪ್ರಶಸ್ಯತೇ * ಪಂಚದೀರ್ಘಂ : ಕಣ್ಣುಗಳು, ಗಲ್ಲ, ಭುಜಗಳು, ಮೂಗು, ಎರಡು ಸ್ತನಗಳ ಮಧ್ಯದ ಅಗಲ, ಈ ಐದು ಅಂಗಗಳು ಭಾಗ್ಯಶಾಲಿ ಪುರುಷರಿಗೆ ದೊಡ್ಡದಾಗಿರುತ್ತದೆ. ಚತುರ್ಹಸ್ವಂ : ಕತ್ತು, ಮೀನಖಂಡಗಳು, ಸೊಂಟ, ಲಿಂಗ ಇವು ನಾಲ್ಕು ಚಿಕ್ಕ ದಾಗಿರಬೇಕು ಮೀನಖಂಡಗಳು ತೊಡೆಗಿಂತ ಸಣ್ಣಗಿರಬೇಕು....

ಆಹಾರ ಸೇವೆನೆಗೊಂದು ವಾರ

ಹಣ್ಣು ಸೇವಿಸುವುದಕ್ಕೂ ವಾರಕ್ಕೂ ಸಂಬಂಧವಿದೆ ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ವಾರಕ್ಕೆ ತಕ್ಕಂತೆ ಆಹಾರ ಸೇವಿಸಬೇಕೆಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಭಾನುವಾರ: ಈ ದಿನ ಹೆಚ್ಚಿನ ಜನರಿಗೆ ರಜೆ ಇರುತ್ತದೆ. ಸೊಪ್ಪು, ಮಾಂಸ ಮತ್ತು ಹಣ್ಣು ಹೀಗೆ ವಿವಿಧ ರೀತಿಯ ಆಹಾರವನ್ನು ಆರಾಮವಾಗಿ ಸೇವಿಸುವ ದಿನವಿದು. ಈ ದಿನ ಸೂರ್ಯನ ವೈಬ್ರೆನ್ಸ್ ಪಸರಿಸುವ ದಿನವಾಗಿರುವುದು ಈ ಆಹಾರ ಈ ದಿನಕ್ಕೆ ಸೂಟ್ ಆಗುತ್ತದೆ. ಸೋಮವಾರ: ಇದು ಚಂದ್ರನ ದಿನ. ಇದು ನೀರಿನ ಅಂಶವನ್ನು ಸೂಚಿಸುತ್ತದೆ. ಹೀಗಾಗಿ ಈ ದಿನ ನೀರಿನಂಶವನ್ನೊಳಗೊಂಡ ಕಲ್ಲಂಗಡಿ, ಸೌತೆಕಾಯಿ ಮತ್ತು ಬೂದು ಕುಂಬಳಕಾಯಿಯನ್ನು ಸೇವಿಸಬೇಕು. ಮಂಗಳವಾರ: ಈ ದಿನವನ್ನು ಮಂಗಳ ಗ್ರಹ ನಿಯಂತ್ರಿಸುತ್ತದೆ ಮತ್ತು ಉಷ್ಣವನ್ನು ಪಸರಿಸುತ್ತದೆ. ಮಾವಿನಹಣ್ಣು, ಖರ್ಚೂರ ಮತ್ತು ಅನಾನಸ್ ಸೇವಿಸಲು ಪ್ರಯತ್ನಿಸಿ. ಬುಧವಾರ: ಇದು ಬುಧ ಗ್ರಹದ ದಿನ. ಇದೊಂದು ಡಲ್ ಗ್ರಹ. ಆದ್ದರಿಂದ ಈ ದಿನ ನೀವು ಎಲ್ಲ ರೀತಿಯ ಆಹಾರವನ್ನು ಸೇವಿಸಬಹುದು. ಗುರುವಾರ: ಇದು ಗುರುವಿನ ದಿನ. ಕಿತ್ತಳೆಹಣ್ಣು ಅಥವಾ ಹಳದಿ ಬಣ್ಣಗಳನ್ನು ಹೊಂದಿರುವ ಹಣ್ಣುಗಳಾದ ಕಿತ್ತಳೆಹಣ್ಣು, ಲಿಂಬೆಹಣ್ಣು ಮತ್ತು ಬಾಳೆಹಣ್ಣು ಸೇವನೆ ಒಳ್ಳೆಯದು. ಶ್ರುಕವಾರ: ಇದು ಬುಧನ ದಿನ. ಬುಧವಾರದಂತೆಯೇ ಇದು ಕೂಡ ಡಲ್ ದಿವಸ. ಹೀಗಾಗಿ ಎಲ್ಲ ರೀತಿಯ ಆಹಾರವನ್ನು ಸೇವಿಸಬಹುದು. ಶನಿವಾರ: ಶನಿಗ್ರಹದ ದಿನ. ಈ ಗ್ರಹ ಎಣ್ಣೆಯನ್ನು ನಿಯಂತ್ರಿಸುವ ಕಾರಣ ಈ ದಿನ ...

ಭಾವನಾಮೇಳದ ಬಿಂದುವೇ ಶನಿ

ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ' ಎನ್ನುತ್ತಾರೆ ನಿಜಗುಣ ಶಿವಯೋಗಿ. ಆದರೆ ಅವರ ಭಾವವನ್ನು ಗ್ರಹಗಳು ನಿಯಂತ್ರಿಸುತ್ತವೆ ಎನ್ನುವುದು ಜ್ಯೋತಿಷ್ಯದ ಮಾತು. ಶುಭಕಾರಕನಾದ ಶನಿಗ್ರಹ ತನ್ನ ದೃಷ್ಟಿಯನ್ನೀಗ ಮಾರ್ಚ್ 14 ರಂದು ಬದಲಿಸುತ್ತಿದ್ದಾನೆ. ಅದರ ಪರಿಣಾಮ ಏನಿರಬಹುದು? ಬ್ಲ್ಯಾಕ್ ಈಸ್ ಬ್ಯೂಟಿಫುಲ್ ಎನ್ನುವುದು ಆಂಗ್ಲೋಕ್ತಿ. ಆದರೆ ಕಪ್ಪು ಮಾಯೆ, ಪಿಶಾಚರ, ನಿಶಾಚರ ಭಾವ ಎನ್ನುವುದು ಶ್ರೀಸಾಮಾನ್ಯನ ಅಂಬೋಣ. ನಿಮಗೊಂದು ವಿಷಯ ಗೊತ್ತಾ? ಕಪ್ಪು ಬಣ್ಣವೇನಾದರೂ ಇಲ್ಲದಿದ್ದರೆ ನಿಮಗೆ ಬೇರೆ ಬಣ್ಣಗಳ ವ್ಯತ್ಯಾಸವೇ ತಿಳಿಯುತ್ತಿರಲಿಲ್ಲ. ಅಷ್ಟೇಕೆ ಆಗಸದ ಕಡು ನೀಲಿ ಬಣ್ಣವನ್ನು ನೋಡುತ್ತಾ ಖುಷಿ ಪಡಲೂ ಸಾಧ್ಯವಾಗುತ್ತಿರಲಿಲ್ಲ. ಹೌದು, ಕಪ್ಪು ಬೆಳಕಿನ ಕಣ್ಣು, ಛಾಯೆಯಿಲ್ಲದೆ ವಸ್ತುವಿನ ಜೀವಂತಿಕೆಗೆ ಆಧಾರವಿಲ್ಲ ಎನ್ನುವುದು ವಿಜ್ಞಾನದ ಮಾತು. ಕಪ್ಪಿಲ್ಲದ ವಸ್ತುವಿಲ್ಲ, ಭಾವವಿಲ್ಲ ಎನ್ನುವುದು ನಾವು ಕಂಡುಕೊಂಡ ಸತ್ಯ. ಅಷ್ಟಾದರೂ ಕಪ್ಪು ಎಂದಾಕ್ಷಣ ನೆನಪಿಗೆ ಬರುವ ಶನಿಯ (ಯಮಾಗ್ರಜ)ನ ಹೆಸರು ಕೇಳಿದಾಕ್ಷಣ ಅದೇನೋ ಭೀತಿ. ಮೈಯಲ್ಲಿ ನಡುಕ. ನಮ್ಮ ಸೌರಮಂಡಲದಲ್ಲಿ ಲಕ್ಷಾಂತರ ಮೈಲಿಗಳಾಚೆ ಇರುವ ಶನಿ ಅಷ್ಟೊಂದು ಪೀಡಾಕಾರಕನೇ? ಅವನದು ಕ್ರೂರದೃಷ್ಟಿಯೇ? ಒಂದು ವರ್ಗದವರು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವುದಕ್ಕೋಸ್ಕರ ಅಲ್ಪಮತಿಗಳಲ್ಲಿ ಬಿತ್ತಿರುವ ಬೀಜವಿದು ಎಂದರೆ ಅತಿಶಯೋಕ್ತಿಯಲ್ಲ. ಗ್ರಹ ಪ್ರಭಾವವೂ ಕಾಂತತ...

ಸಂಖ್ಯೆ ಮತ್ತು ನಿಮ್ಮ ವೃತ್ತಿ ಸಂಖ್ಯಾಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳುವ ಮುನ್ನ ಒಂದಿಷ್ಟು ಅಂಶಗಳತ್ತ ಗಮನ ಹರಿಸೋಣ.

ಸಂಖ್ಯಾಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳುವ ಮುನ್ನ ಒಂದಿಷ್ಟು ಅಂಶಗಳತ್ತ ಗಮನ ಹರಿಸೋಣ. ನಮ್ಮಲ್ಲಿ ಒಂದರಿಂದ ಒಂಬತ್ತು ಸಂಖ್ಯೆಗಳಿವೆ. ಆಯಾ ಸಂಖ್ಯೆಗಳನ್ನು ಆಧರಿಸಿ ವ್ಯಕ್ತಿಯ ಸಾಮರ್ಥ್ಯ ಮತ್ತು ದುರ್ಬಲ ಅಂಶಗಳನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಬಹುದು. ಗೊಂದಲದಲ್ಲಿರುವವರಿಗೆ ಸಂಖ್ಯಾಶಾಸ್ತ್ರ ಒಂದು ಮಾನದಂಡ ಅಥವಾ ಮಾರ್ಗದರ್ಶಕವಾಗಬಹುದೇ ಹೊರತು ಅದುವೇ ಅಂತಿಮವಲ್ಲ. ಒಂದಿಷ್ಟು ಉದಾಹರಣೆಗಳನ್ನು ನಾವಿಲ್ಲಿ ಗಮನಿಸೋಣ. ಜನ್ಮ ದಿನಾಂಕ 1, 10, 19 ಅಥವಾ 28: ಸಂಖ್ಯಾ ಪಟ್ಟಿಯಲ್ಲಿ ಮೊದಲ ಸಂಖ್ಯೆಯೇ ಒಂದು. ವೃತ್ತಿ ಭೂಮಿಕೆಯಲ್ಲಿ ಮುಂದಿರುವವರನ್ನು ನಾವು ಅದ್ವಿತೀಯರು, ಮೊದಲಿಗರು ಎಂದೇ ಗುರುತಿಸುತ್ತೇವೆ. ಜನ್ಮ ಸಂಖ್ಯೆ ಒಂದಾಗಿದ್ದರೆ ನಿಮ್ಮಲ್ಲಿ ಉತ್ತಮ ನಾಯಕತ್ವ ಗುಣಗಳು ಮೇಳೈಸಿರುತ್ತವೆ. ಸಕಾರಾತ್ಮಕ ವರ್ತನೆಗಳನ್ನು ನೋಡಬಹುದು. ಈ ಸಂಖ್ಯೆಯವರು ಆಶಾವಾದಿಗಳು. ನಾಯಕತ್ವ ಗುಣ ಇವರಲ್ಲಿ ಹಾಸು ಹೊಕ್ಕಾಗಿರುತ್ತದೆ. ಉತ್ತಮ ನಾಯಕರು ಎನಿಸಿಕೊಳ್ಳುತ್ತಾರೆ ಮತ್ತು ಪ್ರತಿಷ್ಠಿತ ಉದ್ಯಮಿಗಳಾಗುತ್ತಾರೆ. ನಂಬರ್ ಒಂದರ ಹೊರತಾಗಿ ಜನಿಸಿದವರ ಜತೆಗೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ. ನಿಮಗೊಂದು ವಿಷಯ ಗೊತ್ತಾ ಪ್ರಪಂಚದ ಬಹುತೇಕ ಶ್ರೇಷ್ಠ ಉದ್ಯಮಿಗಳೆಲ್ಲರು ಹುಟ್ಟಿದ ದಿನಾಂಕ ಒಂದೇ ಆಗಿದೆ. ಒಂದು ವೇಳೆ ನೀವು ಉದ್ಯೋಗದಲ್ಲಿದ್ದರೆ ನಿಮಗೆ ವಹಿಸಿದ ಕೆಲಸ, ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ನಿಮಗಿದೆ. ಸ್ವಂತ ಆಲೋಚನಾ ಶಕ್ತ...