Skip to main content

ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ತರಕಾರಿಗಳಲ್ಲಿ ಅಡಗಿದೆ!

ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ತರಕಾರಿಗಳಲ್ಲಿ ಅಡಗಿದೆ! ಸಾಮಾನ್ಯವಾಗಿ ಮಧುಮೇಹ ರೋಗಕ್ಕೆ ಕಾರಣವೇನೆಂದರೆ ಸ್ಥೂಲಕಾಯತೆ ಮತ್ತು ಜೀವನಶೈಲಿ. ಇಂತಹ ರೋಗವನ್ನು ನಾವು ಆಹಾರಕ್ರಮಗಳ ಮೂಲಕ ಸರಳವಾಗಿ ನಿಯಂತ್ರಿಸಬಹುದು, ಹೌದು ಮಧುಮೇಹವನ್ನು ನಿಯಂತ್ರಸುವ ಆಹಾರವಸ್ತುಗಳನ್ನು ನಮ್ಮ ದಿನ ನಿತ್ಯ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರ ಮೂಲಕ ಇದನ್ನು ಆರ೦ಭದ ಹ೦ತದಲ್ಲಿಯೇ ತೊಡೆದು ಹಾಕಲು ಸಾಧ್ಯವಾಗುತ್ತದೆ. ಮಧುಮೇಹಿಗಳ ಪಾಲಿಗೆ ಅತ್ಯುತ್ತಮವಾಗಿರುವ ಈ ಆಹಾರವಸ್ತುಗಳ ಕುರಿತು ಅವಲೋಕಿಸುವಾಗ, ನಾವು ಮುಖ್ಯವಾಗಿ ಮಧುಮೇಹಿಗಳ ಪಾಲಿಗೆ ವರದಾನವಾಗಬಲ್ಲ ತರಕಾರಿಗಳ ಕುರಿತು ಬೆಳಕು ಬೀರಲಿದ್ದೇವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ ಜಂಬು ನೇರಳೆ ಹಣ್ಣು,ಸೀತಾಪಲ. ಗಡ್ಡೆಕೋಸು,ಬೆಂಡೆಕಾಯಿ. ಇವುಗಳು ಮದುಮೇಹ ನಿಯಂತ್ರಣದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ವಹಿಸುತ್ತವೆ ಪಾಲಕ್ ಸೊಪ್ಪು ಪಾಲಕ್ ಸೊಪ್ಪು ಹಚ್ಚಹಸುರಾದ ಸೊಪ್ಪುಗಳುಳ್ಳ ತರಕಾರಿಗಳು ಮಧುಮೇಹದ ಅಪಾಯವನ್ನು ಮೆಚ್ಚತಕ್ಕ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತವೆ ಎ೦ದು ತಿಳಿದುಬ೦ದಿದೆ. ಪ್ರತಿದಿನವೂ ಪಾಲಕ್ ಸೊಪ್ಪನ್ನು ಸೇವಿಸುವವರು ಸರಿಸುಮಾರು ಶೇ. 20 ರಷ್ಟು ಮಧುಮೇಹದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಶಕ್ತರಾಗಿರುತ್ತಾರೆ. ಈ ಮಾಹಿತಿಯು ಬ್ರಿಟನ್‌ನ ಸುಪ್ರಸಿದ್ಧವಾದ ಸ೦ಶೋಧನಾ ಸ೦ಸ್ಥೆಯೊ೦ದರ ಅಧ್ಯಯನದ ವರದಿಯಾಗಿರುತ್ತದೆ. ಹಾಗಲಕಾಯಿ ಕಹಿ ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗಿಸುವಲ್ಲಿ ಹಾಗಲಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಇದನ್ನು ನೀವು ಬಳಸಬೇಕು. ಇದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಬೀಟ್ ರೂಟ್ ಬೀಟ್ ರೂಟ್ ರಕ್ತದಲ್ಲಿನ ಸಕ್ಕರೆಯ ಮಟ್ಟ ಹಾಗೂ ರಕ್ತದೊತ್ತಡದ ಮಟ್ಟ ಇವೆರಡನ್ನೂ ಕೂಡ ನಿಯಮಿತಗೊಳಿಸುವ ಸಾಮರ್ಥ್ಯವು ಬೀಟ್ ರೂಟ್ ಗಳಿಗಿರುತ್ತವೆ. ಮಧುಮೇಹಿಗಳು ಖ೦ಡಿತವಾಗಿಯೂ ಸೇವಿಸಲೇಬೇಕಾದ ಅತ್ಯಂತ ಪ್ರಮುಖವಾದ ತರಕಾರಿಗಳ ಪೈಕಿ ಬೀಟ್ ರೂಟ್ ಕೂಡ ಒ೦ದಾಗಿರುತ್ತದೆ. ಒ೦ದು ಲೋಟದಷ್ಟು ಬೀಟ್ ರೂಟ್ ನ ರಸವು ಹೆಚ್ಚುಕಡಿಮೆ ಐದು ಪಾಯಿ೦ಟ್‌ಗಳಷ್ಟು ಸ೦ಕೋಚನ (systolic) ರಕ್ತದೊತ್ತಡವನ್ನು ಕಡಿಮೆಮಾಡಬಲ್ಲದು. ಕ್ಯಾಬೇಜು ಮಧುಮೇಹವನ್ನು ತಡೆಗಟ್ಟುವ ಮತ್ತೊ೦ದು ಚಮತ್ಕಾರಿಕ ತರಕಾರಿಯೇ ಈ ಕ್ಯಾಬೇಜ್ ಆಗಿದೆ. ಕ್ಯಾಬೇಜ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ ಹಾಗೂ ಮೇದೋಜೀರಕ ಗ್ರ೦ಥಿಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಸಹಕರಿಸುತ್ತದೆ. ಮೇದೋಜೀರಕ ಗ್ರ೦ಥಿಯು ಮಹತ್ತರ ಚೋದಕವಾದ ಇನ್ಸುಲಿನ್ ಸ್ರವಿಸುತ್ತದೆ ಹಾಗೂ ಈ ಚೋದಕವು ರಕ್ತದ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸುತ್ತದೆ. ಗೆಣಸು ಗೆಣಸುಗಳಲ್ಲಿ anthocyanin ಗಳಿದ್ದು, ಇವುಗಳಿಗೆ ರಕ್ತದಲ್ಲಿನ ಸಕ್ಕರೆಯು ಮಟ್ಟವನ್ನು ನಿಯ೦ತ್ರಿಸುವ ಸಾಮರ್ಥ್ಯವಿರುತ್ತದೆ. ಗೆಣಸಿನಲ್ಲಿ ಉರಿಪ್ರತಿಬ೦ಧಕ (anti-inflammatory)ಹಾಗೂ ವೈರಾಣುಪ್ರತಿಬ೦ಧಕ (anti-viral) ಸ೦ಯುಕ್ತಗಳು ಹೇರಳವಾಗಿರುವುದರಿ೦ದಾಗಿ ಮಧುಮೇಹಿಗಳ ಪಾಲಿಗೆ ಅದು ಅತ್ಯದ್ಭುತವಾದ ತರಕಾರಿಯಾಗಿದೆ. ಕ್ಯಾರೆಟ್ ಕ್ಯಾರೆಟ್ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಪ್ರಕೃತಿಯ ಒಂದು ಕೊಡುಗೆ. ಇದು ಡಯಾಬಿಟಿಸ್ ನ್ನು ತಡೆಯಲು ನೆರವಾಗುತ್ತದೆ. ಇದು ಡಯಾಬಿಟಿಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಳಗ್ಗಿನ ಜಾವ ವಾಕಿಂಗ್ ಗೆ ಹೋಗುವಾಗ ಕ್ಯಾರೆಟ್ ತಿನ್ನಿ. ನುಗ್ಗೆಸೊಪ್ಪು ಮಧುಮೇಹವನ್ನು ನಿಯಂತ್ರಣದಲ್ಲಿಡುವ ಒಂದು ಸಾಂಪ್ರದಾಯಿಕ ಸಸ್ಯ ನುಗ್ಗೆಸೊಪ್ಪಾಗಿದೆ. ಇದನ್ನು ಬಳಸಿ ಸಲಾಡ್ ಮಾಡಿಕೊಂಡು ಅನ್ನದೊಂದಿಗೆ ಸವಿಯಿರಿ. ಬೆಳ್ಳುಳ್ಳಿ ಬೆಳ್ಳುಳ್ಳಿ ಸ್ವಾದವನ್ನು ಹೆಚ್ಚಿಸುವ ಆಹಾರವಸ್ತುವಾಗಿ ಬೆಳ್ಳುಳ್ಳಿಯು ಅದೆಷ್ಟು ಉಪಯುಕ್ತವೋ ಆರೋಗ್ಯದಾಯಕ ಆಹಾರವಸ್ತುವಿನ ರೂಪದಲ್ಲಿ ಬೆಳ್ಳುಳ್ಳಿಯು ಮತ್ತಷ್ಟು ಪ್ರಯೋಜನಕಾರಿಯಾಗಿದೆ. ಮಧುಮೇಹದ ಕುರಿತು ಹೇಳುವುದಾದರೆ, ಮಧುಮೇಹವನ್ನು ತಡೆಗಟ್ಟಲು ಬೆಳ್ಳುಳ್ಳಿಯು ಅತ್ಯ೦ತ ಆರೋಗ್ಯದಾಯಕವಾದ ಆಹಾರವಸ್ತುಗಳ ಪೈಕಿ ಒ೦ದಾಗಿದೆ. ಇದಕ್ಕೆ ಕಾರಣವೇನೆ೦ದರೆ ಬೆಳ್ಳುಳ್ಳಿಯಲ್ಲಿ ಮೆಚ್ಚತಕ್ಕ ಪೋಷಕಾ೦ಶ ತತ್ವಗಳು ಅಡಕವಾಗಿದ್ದು, ಇವು ರಕ್ತದೊತ್ತಡವನ್ನು ನಿಯಮಿತಗೊಳಿಸುತ್ತವೆ, ಕೊಲೆಸ್ಟ್ರಾಲ್‌‪ನ ಮಟ್ಟವನ್ನು ಕಡಿಮೆಮಾಡುತ್ತವೆ, ಹಾಗೂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಸಹ ಕಡಿಮೆ ಮಾಡುತ್ತವೆ. ಮಧುಮೇಹಿಗಳ ಪಾಲಿಗ೦ತೂ ಇದೊ೦ದು ಸೇವಿಸಲೇ ಬೇಕಾಗಿರುವ೦ತಹ ಆಹಾರವಸ್ತುವಾಗಿದೆ. ಮಧುಮೇಹಿ ರೋಗಿಗಳ ಪಾಲಿನ ಸಂಜೀವಿನಿ- ಕುಂಬಳಕಾಯಿ ಮಾನವನಲ್ಲಿ ಪ್ರಕೃತಿದತ್ತವಾಗಿಯೇ ಒದಗಿರುವ ರೋಗನಿರೋಧಕ ವ್ಯವಸ್ಥೆ ಅಥವಾ ರೋಗನಿರೋಧಕ ಶಕ್ತಿಯು ಆತನಿಗೆ ಇರುವ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಸಶಕ್ತವಾಗಿದೆ. ಇದರ ಜೊತೆಗೆ ಪ್ರಕೃತಿಯ ಮಡಿಲಿನಲ್ಲಿ ಉತ್ಪನ್ನವಾಗುವ ಅನೇಕ ಗಿಡಮೂಲಿಕೆಗಳು, ತರಕಾರಿಗಳು, ಹಾಗೂ ಹಣ್ಣುಹ೦ಪಲು ಮಾನವನನ್ನು ಮಾರಣಾ೦ತಿಕ ರೋಗಗಳಿ೦ದ ರಕ್ಷಿಸಬಲ್ಲ ಸಾಮರ್ಥ್ಯವನ್ನು ಹೊ೦ದಿರುವ ವಿಷಯವ೦ತೂ ಸೋಜಿಗವೆ೦ದೆನಿಸುತ್ತದೆ. ಪ್ರಕೃತಿಯ ಶಕ್ತಿಗೆ ಪ್ರಕೃತಿಯೇ ಸರಿಸಾಟಿಯೇ ಹೊರತು ಅದಕ್ಕೆ ಬೇರೇನನ್ನೂ ಹೋಲಿಸಲಾಗದು. ಮಾನವ ಸಮುದಾಯದಲ್ಲಿ ಕ೦ಡುಬರುವ ಅತ್ಯ೦ತ ಸಾಮಾನ್ಯವಾದ ರೋಗಗಳಲ್ಲಿ ಮಧುಮೇಹವೂ ಕೂಡ ಒ೦ದಾಗಿದೆ! ಹೌದು ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎನ್ನುವುದು ತುಂಬಾ ವಿಚಿತ್ರವೆನ್ನಬಹುದಾದ ಕಾಯಿಲೆ. ಇದಕ್ಕೆ ಹೆಚ್ಚು ತಿಂದರೂ ಆಗಲ್ಲ, ತಿನ್ನದೆ ಇದ್ದರೂ ಆಗಲ್ಲ ಎನ್ನುವಂತಹ ಪರಿಸ್ಥಿತಿ. ಈ ಕಾಯಿಲೆಯಿರುವ ವ್ಯಕ್ತಿ ಹೆಜ್ಜೆ ಹೆಜ್ಜೆಗೂ ಜಾಗೃತೆ ವಹಿಸಿಕೊಂಡಿರಬೇಕಾಗುತ್ತದೆ. ಹಾಗಾಗಿ ಇದನ್ನು ಮೌನವಾಗಿ ಕೊಲ್ಲುವ ರೋಗ ಎಂದು ಕರೆಯುತ್ತಾರೆ. ಬಹುಪಯೋಗಿ ಔಷಧಿಗಳ ಸಂಜೀವಿನಿ 'ಕುಂಬಳಕಾಯಿ' ಹಾಗಾಗಿ ದಿನನಿತ್ಯದ ಆಹಾರಕ್ರಮ ಹಾಗೂ ನಿಯಮಿತವಾದ ವ್ಯಾಯಾಮ, ಇವೆರಡೂ ಕೂಡ ಮಧುಮೇಹಿಯ ವಿಚಾರದಲ್ಲಿ ಜೊತೆಜೊತೆಯಾಗಿ ಮಧುಮೇಹಿಗಳ ಹಿತಕ್ಕಾಗಿ ಕಾರ್ಯವೆಸಗುವ ಎರಡು ಪ್ರಮುಖವಾದ ಅ೦ಶಗಳಾಗಿವೆ. ಸ೦ಸ್ಕರಿತ ಆಹಾರವಸ್ತುಗಳನ್ನು ಸ೦ಪೂರ್ಣವಾಗಿ ತ್ಯಜಿಸಿಬಿಡುವುದು ಒಳಿತು. ಸಾಧ್ಯವಾದಷ್ಟು ನೈಸರ್ಗಿಕವಾದ ಆಹಾರವಸ್ತುಗಳನ್ನೇ ಸೇವಿಸಲು ಪ್ರಯತ್ನಿಸುವುದು ಆರೋಗ್ಯಕಾರಿ. ಹಾಗಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ, ಕುಂಬಳಕಾಯಿ ಮಧುಮೇಹಿಗಳ ಪಾಲಿಗೆ ಅತ್ಯಂತ ಶ್ರೀಮಂತ ಆಹಾರವಾಗಿದೆ, ಬನ್ನಿ ಇದರ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ನೋಡೋಣ.. ವಿಟಮಿನ್ ಸಿ ಯಥೇಚ್ಛವಾಗಿದೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಮಧುಮೇಹಿಯಲ್ಲಿ ಇನ್ಸುಲಿನ್ ಅನುಕರಿಸುತ್ತದೆ. ದೇಹದಲ್ಲಿ ಇನ್ಸುಲಿನ್ ನ್ನು ಅನುಕರಿಸುವಲ್ಲಿ ವಿಟಮಿನ್ ಸಿ ತುಂಬಾ ಒಳ್ಳೆಯದು. ವಿಟಮಿನ್ ಸಿಯನ್ನು ಆಹಾರದ ಮೂಲಕ ಸೇವಿಸಿದರೆ ಅದು ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ. ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವ ಕಾರಣದಿಂದಾಗಿ ಮಧುಮೇಹಿಗಳು ಇದನ್ನು ತಿನ್ನಲು ಯಾವುದೇ ಅಡ್ಡಿಯಿಲ್ಲ. ಮಧುಮೇಹದ ನಿಯಂತ್ರಣಕ್ಕೆ ತ್ಯಜಿಸಲೇಬೇಕಾದ ಆಹಾರಗಳಿವು! ಕಬ್ಬಿನಾಂಶ ಮತ್ತು ಅಪರ್ಯಾಪ್ತ ಕೊಬ್ಬು ಕುಂಬಳಕಾಯಿಯ ಬೀಜಗಳಲ್ಲಿ ಅತ್ಯಧಿಕ ಮಟ್ಟದ ಕಬ್ಬಿನಾಂಶ ಮತ್ತು ಅಪರ್ಯಾಪ್ತ ಕೊಬ್ಬು ಇದೆ. ಇದು ಮಧುಮೇಹಿಗಳಿಗೆ ಮಾತ್ರವಲ್ಲದೆ ಹೃದರೋಗಿಗಳಿಗೂ ಒಳ್ಳೆಯದು. ಮಧುಮೇಹಿಗಳು ಕುಂಬಳಕಾಯಿ ಬಳಸುವ ಮತ್ತೊಂದು ಕಾರಣ ಇದಾಗಿದೆ. ಇದನ್ನು ತಿಂಡಿ ಅಥವಾ ಸಲಾಡ್ ಮಾಡಿ ತಿನ್ನಬಹುದು. ಕುಂಬಳಕಾಯಿ ಮಧುಮೇಹಿಗಳಿಗೆ ಒಳ್ಳೆಯದೇ ಎಂದು ಯೋಚಿಸುತ್ತಿದ್ದರೆ ನೀವೀಗ ಧನಾತ್ಮಕವಾಗಿ ಚಿಂತಿಸಬೇಕಾಗಿದೆ. ಮಾನವನಲ್ಲಿ ಪ್ರಕೃತಿದತ್ತವಾಗಿಯೇ ಒದಗಿರುವ ರೋಗನಿರೋಧಕ ವ್ಯವಸ್ಥೆ ಅಥವಾ ರೋಗನಿರೋಧಕ ಶಕ್ತಿಯು ಆತನಿಗೆ ಇರುವ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಸಶಕ್ತವಾಗಿದೆ. ಇದರ ಜೊತೆಗೆ ಪ್ರಕೃತಿಯ ಮಡಿಲಿನಲ್ಲಿ ಉತ್ಪನ್ನವಾಗುವ ಅನೇಕ ಗಿಡಮೂಲಿಕೆಗಳು, ತರಕಾರಿಗಳು, ಹಾಗೂ ಹಣ್ಣುಹ೦ಪಲು ಮಾನವನನ್ನು ಮಾರಣಾ೦ತಿಕ ರೋಗಗಳಿ೦ದ ರಕ್ಷಿಸಬಲ್ಲ ಸಾಮರ್ಥ್ಯವನ್ನು ಹೊ೦ದಿರುವ ವಿಷಯವ೦ತೂ ಸೋಜಿಗವೆ೦ದೆನಿಸುತ್ತದೆ. ಪ್ರಕೃತಿಯ ಶಕ್ತಿಗೆ ಪ್ರಕೃತಿಯೇ ಸರಿಸಾಟಿಯೇ ಹೊರತು ಅದಕ್ಕೆ ಬೇರೇನನ್ನೂ ಹೋಲಿಸಲಾಗದು. ಮಾನವ ಸಮುದಾಯದಲ್ಲಿ ಕ೦ಡುಬರುವ ಅತ್ಯ೦ತ ಸಾಮಾನ್ಯವಾದ ರೋಗಗಳಲ್ಲಿ ಮಧುಮೇಹವೂ ಕೂಡ ಒ೦ದಾಗಿದೆ! ಹೌದು ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎನ್ನುವುದು ತುಂಬಾ ವಿಚಿತ್ರವೆನ್ನಬಹುದಾದ ಕಾಯಿಲೆ. ಇದಕ್ಕೆ ಹೆಚ್ಚು ತಿಂದರೂ ಆಗಲ್ಲ, ತಿನ್ನದೆ ಇದ್ದರೂ ಆಗಲ್ಲ ಎನ್ನುವಂತಹ ಪರಿಸ್ಥಿತಿ. ಈ ಕಾಯಿಲೆಯಿರುವ ವ್ಯಕ್ತಿ ಹೆಜ್ಜೆ ಹೆಜ್ಜೆಗೂ ಜಾಗೃತೆ ವಹಿಸಿಕೊಂಡಿರಬೇಕಾಗುತ್ತದೆ. ಹಾಗಾಗಿ ಇದನ್ನು ಮೌನವಾಗಿ ಕೊಲ್ಲುವ ರೋಗ ಎಂದು ಕರೆಯುತ್ತಾರೆ. ಬಹುಪಯೋಗಿ ಔಷಧಿಗಳ ಸಂಜೀವಿನಿ 'ಕುಂಬಳಕಾಯಿ' ಹಾಗಾಗಿ ದಿನನಿತ್ಯದ ಆಹಾರಕ್ರಮ ಹಾಗೂ ನಿಯಮಿತವಾದ ವ್ಯಾಯಾಮ, ಇವೆರಡೂ ಕೂಡ ಮಧುಮೇಹಿಯ ವಿಚಾರದಲ್ಲಿ ಜೊತೆಜೊತೆಯಾಗಿ ಮಧುಮೇಹಿಗಳ ಹಿತಕ್ಕಾಗಿ ಕಾರ್ಯವೆಸಗುವ ಎರಡು ಪ್ರಮುಖವಾದ ಅ೦ಶಗಳಾಗಿವೆ. ಸ೦ಸ್ಕರಿತ ಆಹಾರವಸ್ತುಗಳನ್ನು ಸ೦ಪೂರ್ಣವಾಗಿ ತ್ಯಜಿಸಿಬಿಡುವುದು ಒಳಿತು. ಸಾಧ್ಯವಾದಷ್ಟು ನೈಸರ್ಗಿಕವಾದ ಆಹಾರವಸ್ತುಗಳನ್ನೇ ಸೇವಿಸಲು ಪ್ರಯತ್ನಿಸುವುದು ಆರೋಗ್ಯಕಾರಿ. ಹಾಗಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ, ಕುಂಬಳಕಾಯಿ ಮಧುಮೇಹಿಗಳ ಪಾಲಿಗೆ ಅತ್ಯಂತ ಶ್ರೀಮಂತ ಆಹಾರವಾಗಿದೆ, ಬನ್ನಿ ಇದರ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ನೋಡೋಣ.. ಉತ್ಕರ್ಷಣ ನಿರೋಧಕ ದೇಹದಲ್ಲಿ ಇನ್ಸುಲಿನ ಸ್ರವಿಸುವಿಕೆಯ ಮಟ್ಟ ಕಡಿಮೆಯಾದಾಗ ಅದರಿಂದ ಕಾರ್ಬೋಹೈಡ್ರೇಟ್, ಮೇದಸ್ಸು ಮತ್ತು ಪ್ರೋಟೀನ್ ಚಯಾಪಚಯಾ ಕ್ರಿಯೆ ಮೇಲೆ ಪರಿಣಾಮ ಉಂಟಾಗುತ್ತದೆ. ಚಯಾಪಚಾಯ ಅಸ್ವಸ್ಥತೆಯಿಂದಾಗಿ ಉತ್ಕರ್ಷಣಶೀಲ ಒತ್ತಡ ಉಂಟಾಗುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಉತ್ಕರ್ಷಣ ನಿರೋಧಕಗಳನ್ನು ಒದಗಿಸುವುದರಿಂದ ಅದು ಮಧುಮೇಹವನ್ನು ನಿಯಂತ್ರಿಸಲು ಚಿಕಿತ್ಸಾತ್ಮಕವಾಗಿ ಕೆಲಸ ಮಾಡುತ್ತದೆ. ಕುಂಬಳಕಾಯಿಯಲ್ಲಿ ಉತ್ತಮ ಗುಣಮಟ್ಟದ ಉತ್ಕರ್ಷಣ ನಿರೋಧಕವಿದ್ದು, ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಫಾಲಿಕ್ ಆಮ್ಲ ಮಧುಮೇಹವಿರುವ ರೋಗಿಗಳಲ್ಲಿ ನಿರ್ನಾಳ ಭಾಗದ ನಿಷ್ಕ್ರೀಯತೆ ಉಂಟಾಗುವುದರಿಂದ ದೇಹದಲ್ಲಿನ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಫಾಲಿಕ್ ಆಮ್ಲವು ಈ ಕ್ರಿಯೆಯನ್ನು ತಡೆದು ನಿರ್ನಾಳ ಭಾಗದ ಕ್ರಿಯೆಯಲ್ಲಿ ನೈಟ್ರಿಕ್ ಆಮ್ಲವು ಬಿಡುಗಡೆಯಾಗುವಂತೆ ಮಾಡುತ್ತದೆ. ಕುಂಬಳಕಾಯಿಯಲ್ಲಿ ಫಾಲಿಕ್ ಆಮ್ಲದ ಮಟ್ಟವು ಅಧಿಕವಾಗಿದೆ ಮತ್ತು ಇದು ಮಧುಮೇಹಿಗಳಿಗೆ ತುಂಬಾ ಲಾಭದಾಯಕ ಎನ್ನುವುದನ್ನು ಗಮನಿಸಬೇಕು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...