Skip to main content

ಭಾವನಾಮೇಳದ ಬಿಂದುವೇ ಶನಿ

ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ' ಎನ್ನುತ್ತಾರೆ ನಿಜಗುಣ ಶಿವಯೋಗಿ. ಆದರೆ ಅವರ ಭಾವವನ್ನು ಗ್ರಹಗಳು ನಿಯಂತ್ರಿಸುತ್ತವೆ ಎನ್ನುವುದು ಜ್ಯೋತಿಷ್ಯದ ಮಾತು. ಶುಭಕಾರಕನಾದ ಶನಿಗ್ರಹ ತನ್ನ ದೃಷ್ಟಿಯನ್ನೀಗ ಮಾರ್ಚ್ 14 ರಂದು ಬದಲಿಸುತ್ತಿದ್ದಾನೆ. ಅದರ ಪರಿಣಾಮ ಏನಿರಬಹುದು? ಬ್ಲ್ಯಾಕ್ ಈಸ್ ಬ್ಯೂಟಿಫುಲ್ ಎನ್ನುವುದು ಆಂಗ್ಲೋಕ್ತಿ. ಆದರೆ ಕಪ್ಪು ಮಾಯೆ, ಪಿಶಾಚರ, ನಿಶಾಚರ ಭಾವ ಎನ್ನುವುದು ಶ್ರೀಸಾಮಾನ್ಯನ ಅಂಬೋಣ. ನಿಮಗೊಂದು ವಿಷಯ ಗೊತ್ತಾ? ಕಪ್ಪು ಬಣ್ಣವೇನಾದರೂ ಇಲ್ಲದಿದ್ದರೆ ನಿಮಗೆ ಬೇರೆ ಬಣ್ಣಗಳ ವ್ಯತ್ಯಾಸವೇ ತಿಳಿಯುತ್ತಿರಲಿಲ್ಲ. ಅಷ್ಟೇಕೆ ಆಗಸದ ಕಡು ನೀಲಿ ಬಣ್ಣವನ್ನು ನೋಡುತ್ತಾ ಖುಷಿ ಪಡಲೂ ಸಾಧ್ಯವಾಗುತ್ತಿರಲಿಲ್ಲ. ಹೌದು, ಕಪ್ಪು ಬೆಳಕಿನ ಕಣ್ಣು, ಛಾಯೆಯಿಲ್ಲದೆ ವಸ್ತುವಿನ ಜೀವಂತಿಕೆಗೆ ಆಧಾರವಿಲ್ಲ ಎನ್ನುವುದು ವಿಜ್ಞಾನದ ಮಾತು. ಕಪ್ಪಿಲ್ಲದ ವಸ್ತುವಿಲ್ಲ, ಭಾವವಿಲ್ಲ ಎನ್ನುವುದು ನಾವು ಕಂಡುಕೊಂಡ ಸತ್ಯ. ಅಷ್ಟಾದರೂ ಕಪ್ಪು ಎಂದಾಕ್ಷಣ ನೆನಪಿಗೆ ಬರುವ ಶನಿಯ (ಯಮಾಗ್ರಜ)ನ ಹೆಸರು ಕೇಳಿದಾಕ್ಷಣ ಅದೇನೋ ಭೀತಿ. ಮೈಯಲ್ಲಿ ನಡುಕ. ನಮ್ಮ ಸೌರಮಂಡಲದಲ್ಲಿ ಲಕ್ಷಾಂತರ ಮೈಲಿಗಳಾಚೆ ಇರುವ ಶನಿ ಅಷ್ಟೊಂದು ಪೀಡಾಕಾರಕನೇ? ಅವನದು ಕ್ರೂರದೃಷ್ಟಿಯೇ? ಒಂದು ವರ್ಗದವರು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವುದಕ್ಕೋಸ್ಕರ ಅಲ್ಪಮತಿಗಳಲ್ಲಿ ಬಿತ್ತಿರುವ ಬೀಜವಿದು ಎಂದರೆ ಅತಿಶಯೋಕ್ತಿಯಲ್ಲ. ಗ್ರಹ ಪ್ರಭಾವವೂ ಕಾಂತತ್ವವೂ ಸೂರ್ಯನಿಗೆ ಸಮೀಪದಲ್ಲಿರುವ ಬುಧ, ಶುಕ್ರ, ಭೂಮಿ ಮತ್ತು ಮಂಗಳ ಇವುಗಳನ್ನು ಭೂ ಸದೃಶ ಗ್ರಹಗಳು. ಮಂಗಳ ಗ್ರಹದ ಆಚೆ ಇರುವ ಶನಿಯನ್ನು ದೈತ್ಯ ಗ್ರಹವೆಂದು ಗುರುತಿಸಲಾಗಿದೆ. ಶನಿ ಗ್ರಹದಲ್ಲಿ ಹೈಡ್ರೋಜನ್ ಮತ್ತು ಹೀಲಿಯಂ ಅನಿಲ ಸಾಂಧ್ರತೆ ಹೆಚ್ಚಾಗಿದೆ. ಅದರ ಕಾಂತಕ್ಷೇತ್ರವು ವ್ಯೋಮದಲ್ಲಿ ಹರಡಿಕೊಂಡಿದೆ. ಹೀಗೆ ವ್ಯೋಮದಲ್ಲಿ ಹರಡಿಕೊಂಡ ಕಾಂತತ್ವದ ಪ್ರಭಾವ ಜೀವಿಯ ಮೇಲಾಗುತ್ತದೆ. ಅದನ್ನೇ ಜ್ಯೋತಿಷ್ಯಶಾಸ್ತ್ರವು ಗ್ರಹ ಪ್ರಭಾವ ಎಂದು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಕರ್ಮಾಧಿಪತಿಯೇ ಶನಿ ಶನಿ ಎನ್ನುವ ಶಬ್ಧ ಮೂಲತಃ ಸಂಸ್ಕೃತದಿಂದ ಬಂದದ್ದು. 'ಶನಯೇ ಕ್ರಮತಿ ಸಃ' ಅಂದರೆ ನಿಧಾನವಾಗಿ ಚಲಿಸುವವನು ಎಂದರ್ಥ. ಮಂದಸ್ಥಾಯಿ ರಾಗಗಳಾದ ಹಿಂದೋಳ, ರೇವತಿ, ಬಸಂತಿ ಹೇಗೆ ಭಾರವಾದ ಮನಸ್ಸಿಗೆ ಒಪ್ಪುತ್ತದೋ ಹಾಗೆಯೇ ಮಂದವಾಗಿ ಚಲಿಸುವ ಶನಿಯೂ ಎಲ್ಲರಿಗೂ ಶುಭಕರನಾಗಿದ್ದಾನೆ. ಅವನದು ನ್ಯಾಯೋಚಿತ ನಡಿಗೆ. ನೇರ, ನಿಷ್ಠುರನಾದರೂ ಜನರನ್ನು ಸರಿದಾರಿಗೆ ತರುವ ದೃಷ್ಟಿ ಅವನದು. ಶನಿಯು ಸೂರ್ಯನನ್ನು ಪ್ರದಕ್ಷಿಣೆ ಹಾಕಲು 30 ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ನಮ್ಮ ಧರ್ಮಗ್ರಂಥಗಳ ಪ್ರಕಾರ ಶನಿದೇವನು ಉಪಾಧ್ಯಾಯನಂತೆ ವರ್ತಿಸುತ್ತಾನೆ. ಯಾರು ತಪ್ಪು ಎಸಗುತ್ತಾರೋ ಅವರನ್ನು ಆ ಕೂಡಲೇ ಸರಿದಾರಿಗೆ ತರಲು ಬಹಳ ಕಷ್ಟ ನೀಡುತ್ತಾನೆ. ಇನ್ನಿಲ್ಲದ ತೊಂದರೆ ನೀಡಿ ಲೋಕದ ದೃಷ್ಟಿಯಲ್ಲಿ ಕಟುಕ ಎನಿಸಿಕೊಂಡರೂ ಅವನ ಉದ್ದೇಶವು ಒಳ್ಳೆಯದೇ ಆಗಿದೆ. ಈತನನ್ನು ಕರ್ಮಾಧಿಪತಿ ಎಂತಲೂ ಕರೆಯುತ್ತಾರೆ. ಕಾರಣ, ಯಾವುದೇ ವ್ಯಕ್ತಿಯ ಕರ್ಮಗಳು (ಒಳ್ಳೆಯದು ಅಥವಾ ಕೆಟ್ಟದ್ದು) ಶನಿಯ ಮೂಲಕವೇ ಘಟಿಸುತ್ತವೆ. ಶನಿಯ ಪ್ರಭಾವದಿಂದ ಉಂಟಾಗುವ ಕಾಯಿಲೆಗಳೆಂದರೆ, ಕ್ಷಯ, ಸಂಕುಚಿತ ಮನೋಭಾವ, ನೀಚ ಯೋಚನೆ, ಮಾನಸಿಕ ಒತ್ತಡ, ರಕ್ತ ಸಂಚಾರದಲ್ಲಿ ಏರುಪೇರು ಇತ್ಯಾದಿ. ಶನಿ ಪ್ರಭಾವ ಅಂದರೆ ದ್ವಾದಶ ರಾಶಿಗಳನ್ನೂ ದಾಟಲು 30 ವರ್ಷದ ಅವಧಿ ತೆಗೆದುಕೊಳ್ಳುತ್ತಾನೆ. ಹೀಗೆ ಪ್ರತಿಯೊಂದು ರಾಶಿಯಲ್ಲಿ ಶನಿಯ ಪ್ರಭಾವ ಎರಡೂವರೆ ವರ್ಷಗಳಷ್ಟಿರುತ್ತದೆ. ಈತ ಮಕರ ಮತ್ತು ಕುಂಭ ರಾಶಿಯ ಅಧಿಪತಿ. ಬುಧ, ಶುಕ್ರ , ರಾಹು, ಕೇತು ಗ್ರಹಗಳೊಂದಿಗೆ ಮಿತ್ರತ್ವ ಹೊಂದಿದ್ದಾನೆ. ಆದರೆ ಸೂರ್ಯ, ಚಂದ್ರ ಮತ್ತು ಗುರು ಗ್ರಹಗಳೊಂದಿಗೆ ಶತೃತ್ವ ಭಾವವಿದೆ. ವಕ್ರಶನಿ ಆರಂಭ ಮಾರ್ಚ್ 14, 2015 ಶನಿಯು ವಕ್ರನಾಗುತ್ತಿದ್ದಾನೆ. ವಕ್ರಭಾವದಲ್ಲೇ ಶನಿಯು ಸುಮಾರು ಐದೂವರೆ ತಿಂಗಳು ಇರುತ್ತಾನೆ. ಶನಿಯು ವಕ್ರಭಾವದಲ್ಲಿದ್ದಾಗ ಆಗುವ ಪರಿಣಾಮಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಿದೆ. ಈ ಸಂದರ್ಭದಲ್ಲಿ ಗ್ರಹದ ಪ್ರಭಾವವು ತೀವ್ರವಾಗಿರುತ್ತದೆ. ತಾತ್ಕಾಲಿಕವಾಗಿ ತನ್ನ ಫಲಗಳನ್ನು ಕೊಡಲು ಅಸಮರ್ಥನಾಗುತ್ತಾನೆ. ನಿಮ್ಮ ಕುಂಡಲಿಯಲ್ಲಿ ಶನಿಯ ಪ್ರಭಾವ ಶಕ್ತಿಯುತವಾಗಿದ್ದರೆ ಅಂತಹವರು ಒಂದು ಸಂದರ್ಭದಲ್ಲಿ ಒಳ್ಳೆಯ ಪರಿಣಾಮಗಳನ್ನು ಕಾಣುವರು. ಮತ್ತೊಂದು ಭಾಗದಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಇದ್ದಕ್ಕಿದ್ದಂತೆ ಯಾವುದೇ ಪರಿಣಾಮವಿಲ್ಲದೆ ಶೂನ್ಯ ಸ್ಥಿತಿಗೆ ತಲುಪುವರು. ಶನಿಯು ವಕ್ರನಾಗಿದ್ದಾಗ, ತಾವು ಮಾಡಿದ ಕೆಲಸಕ್ಕೆ ಯಾವುದೇ ಪ್ರತಿಫಲ ದೊರೆಯುತ್ತಿಲ್ಲ ಎಂದವರು ನಿರಾಶರಾಗುವರು. ಈ ಸಂದರ್ಭದಲ್ಲಿ ಯಾವುದೇ ಹೊಸ ಕೆಲಸಗಳನ್ನು ಪ್ರಾರಂಭಿಸದಿರುವುದು ಒಳ್ಳೆಯದು. ಒಂದು ವೇಳೆ ಯಾವುದಾದರೂ ಹೊಸ ಕೆಲಸವನ್ನು ಪ್ರಾರಂಭಿಸಿದರೆ ಅದರ ಪರಿಣಾಮಗಳು ನಿಧಾನವಾಗುವವು. ಶನಿ ಗ್ರಹವನ್ನು ಕರ್ಮಗ್ರಹವೆಂದು ಕರೆಯುತ್ತಾರೆ. ಇದು ವ್ಯಕ್ತಿಯ ಕರ್ಮವನ್ನು ನಿರ್ಧರಿಸುತ್ತದೆ. ಒಬ್ಬ ಮನುಷ್ಯನ ಶುಭ, ಅಶುಭ ಫಲಗಳನ್ನು ತೀರ್ಮಾನಿಸುತ್ತದೆ. ಈ ಬಾರಿ ಸುದೀರ್ಘಕಾಲ ವಕ್ರೀಭಾವದಲ್ಲಿ ಇರುವುದರಿಂದ ಶನಿಗ್ರಹದ ಆರಾಧನೆ ಅತಿ ಮುಖ್ಯವಾಗುತ್ತದೆ. ಜೀವನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಇದು ಮುಖ್ಯವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಶನಿಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಿದೆ. ವಕ್ರಶನಿ ಕುರಿತಂತೆ ಎರಡು ಪ್ರಮುಖ ಅಂಶಗಳನ್ನು ನಾವಿಲ್ಲಿ ಗಮನಿಸಬಹುದು. ಮೊದಲಿಗೆ ವಕ್ರಶನಿಯು ವ್ಯಕ್ತಿಯ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುತ್ತಾನೆ. ಇದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ನಿರ್ಣಾಯಕ ಹಂತ. ಈ ಹಂತದಲ್ಲಿ ಶನಿಯಿಂದ ತಮ್ಮೆಲ್ಲ ಚಟುವಟಿಕೆಗಳಿಗೆ ಸೂಕ್ತ ನ್ಯಾಯವನ್ನು ಪಡೆದುಕೊಳ್ಳಬಹುದು. ಈ ಹಂತದಲ್ಲಿ ವ್ಯಕ್ತಿಯ ತಾಳ್ಮೆ ಮತ್ತು ಸಹನೆಯ ಪರೀಕ್ಷೆಯಾಗುತ್ತದೆ. ಮೇಷ, ಕಟಕ, ಸಿಂಹ, ವಶ್ಚಿಕ, ಮಕರ ಮತ್ತು ಕುಂಭ ರಾಶಿಯವರ ಮೇಲೆ ವಕ್ರಶನಿಯ ನೇರ ಪ್ರಭಾವ ಉಂಟಾಗುತ್ತದೆ. ಮೇಲಿನ ಪ್ರಭಾವವು ಚಂದ್ರನ ಗತಿಯನ್ನು ಅವಲಂಬಿಸಿದೆ. ವೃಶ್ಚಿಕ ರಾಶಿಯಲ್ಲಿ ಜನಿಸಿದವರು ತುಂಬಾ ಜಾಗರೂಕರಾಗಿರಬೇಕು. ಕಾರಣ ಚಂದ್ರನ ಪ್ರಭಾವ ತೀವ್ರವಾಗಿರುತ್ತದೆ. ಹಾಗಾಗಿ ಚಂದ್ರನ ಪ್ರಭಾವವೂ ತೀಕ್ಷ್ಮವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ಮನಸ್ಸಿನ ಮೇಲೆ ಪರಿಣಾಮ ಬೀರುತ್ತಾನೆ. ಹಾಗಾಗಿ ಮಾನಸಿಕ ಆಘಾತಗಳು, ಯೋಚನಾ ಲಹರಿಯಲ್ಲಿ ಏರುಪೇರು ಕಂಡುಬರುವುದುಂಟು.ಯದ್ಭಾವಂ ತದ್ಭವತಿ ಎನ್ನುವಂತೆ ಮನಸ್ಸಿನ ವ್ಯತಿರಿಕ್ತ ಪರಿಣಾಮಗಳು ಅವರವರ ಕಾರ್ಯಚಟುವಟಿಕೆಗಳ ಮೇಲೂ ಆಗುತ್ತದೆ. ಶನಿದೇವರ ಹತ್ತು ನಾಮಗಳನ್ನು ಜಪಿಸುವುದರಿಂದ ಹೆದರಿಕೆ, ಆತಂಕ, ಅಡೆತಡೆಗಳು ಮತ್ತು ದುರಾದಷ್ಟವನ್ನು ಕಳೆದುಕೊಳ್ಳಬಹುದು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...