Skip to main content

Posts

*ಮೂಲಾ ನಕ್ಷತ್ರ ಮೂರುಲೋಕವಾಸ*

*ಮೂಲಾ ನಕ್ಷತ್ರ ಮೂರುಲೋಕವಾಸ* ಮೂಲಾ ನಕ್ಷತ್ರವು ಒಂದು ವರ್ಷದಲ್ಲಿ ತಲಾ ೪ ತಿಂಗಳಿನಂತೆ ಸ್ವರ್ಗ,ಮರ್ತ್ಯ,ಪಾತಾಳಗಳಲ್ಲಿ ವಾಸಮಾಡುತ್ತದೆ. ಆಷಾಡ,ಆಶ್ವೀಜ,ಬಾದ್ರಪದ,ಮಾಘಮಾಸಗಳಲ್ಲಿ ಸ್ವರ್ಗಲೋಕದಲ್ಲಿಯು. ವೈಶಾಖ,ಜ್ಯೇಷ್ಟ,ಮಾರ್ಗಶಿರ,ಪಾಲ್ಗುಣ ಮಾಸಗಳಲ್ಲಿ ಪಾತಾಳದಲ್ಲು. ಚೈತ್ರ,ಶ್ರಾವಣ,ಕಾರ್ತೀಕ,ಪುಷ್ಯ ಮಾಸಗಳಲ್ಲಿ ಭೂಲೋಕದಲ್ಲಿಯು ವಾಸಮಾಡುತ್ತದೆ. ಭೂಲೋಕದಲ್ಲಿ ಮೂಲಾ ನಕ್ಷತ್ರವು ವಾಸಮಾಡುತ್ತಿರುವಾಗ ಮಗು ಜನಿಸಿದರೆ(ಅಂದರೆ ಚೈತ್ರ,ಶ್ರಾವಣ,ಕಾರ್ತೀಕ,ಪುಷ್ಯ ಮಾಸಗಳಲ್ಲಿ)ಮಾತ್ರ ದೋಷ ಉಂಟಾಗುತ್ತದೆ.ಆಗ ಗೋಮುಖಪ್ರಸವ ಶಾಂತಿ ಮಾಡಿಸಬೇಕು. ಪೂರ್ವಾಷಾಡ:- ಈ ನಕ್ಷತ್ರದಲ್ಲಿ ಮಗು ಜನಿಸಿದರೆ ಮಗುವಿನ ತಂದೆ-ತಾಯಿಗೆ ದೋಷವುಂಟಾಗುತ್ತದೆ. ಆದ್ದರಿಂದ ಕಂಚಿನ ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ವಸ್ತ್ರ,ಫಲ,ತಾಂಬೂಲ,ದಕ್ಷಿಣೆ ಸಹಿತ ಪುರೋಹಿತರಿಗೆ/ಬಡವರಿಗೆ/ಗುರುಗಳಿಗೆ ದಾನಕೊಡಬೇಕು ಈ ಕಾರ್ಯ ಮಗು ಜನಿಸಿದ ೨೭ ದಿನದೊಳಗೆ ನಡೆಯಬೇಕು. ಅಶ್ಲೇಷ:- ಈ ನಕ್ಷತ್ರಕ್ಕೆ ಆದಿಶೇಷನು ಅಧಿಪತಿಯಾಗಿರುವುದರಿಂದ ಸರ್ಪದ ಹೆಡೆ ಅಗಲದಷ್ಟು ಇರುವ ಕಲಾಪತ್ತಿನ ಅಂಚುಳ್ಳ ಶಾಲನ್ನು ತಂದುಶಾಂತಿ ಮಾಡತಕ್ಕ ಸ್ಥಳದಲ್ಲಿ ಸಾರಿಸಿ ಗಣಪತಿಯನ್ನು ಸ್ಥಾಪಿಸಿ ಪೂಜಿಸಬೇಕು.ರಂಗವಲ್ಲಿಯಿಂದ ಕಮಲಾಕಾರದ ಮಂಡಲವನ್ನು ಬರೆದು ಒಂದು ಹೊಸ ಮೊರದಲ್ಲಿ ಭತ್ತವನ್ನು (ಅಕ್ಕಿ)ಹರವಿ ಒಂದು ದೊನ್ನೆಯಲ್ಲಿ ೯ವಿಧ ದಾನ್ಯವನ್ನು ಹಾಕಿ(ನವದಾನ್ಯ)೯ ವಿಧವಾದ ಪತ್ರೆಗಳಿಂದ(ಬಿಲ್ವ,ಭನ್ನಿ,ಎಕ್ಕ,ಅರಳ...

ಜನನ ನಕ್ಷತ್ರ ದೋಷ ಮತ್ತು ಶಾಂತಿ(ಪರಿಹಾರ)

ಅಶ್ವಿನಿ:- ಈ ನಕ್ಷತ್ರದಲ್ಲಿ ಗಂಡು ಮಗು ಜನಿಸಿದರೆ ತಂದೆಗೆ ಅರಿಷ್ಟ ಇದು ೩ತಿಂಗಳವರೆಗು ಇರುತ್ತದೆ.ಆದ್ದರಿಂದ ಇದರ ಪರಿಹಾರಕ್ಕಾಗಿ ಮಗು ಜನಿಸಿದ ೫ದಿನದೊಳಗಾಗಿ ಒಂದು ಗುಲಗಂಜಿ ತೂಕದ ಬಂಗಾರ ಮತ್ತು ಬಿಳಿವಸ್ತ್ರವನ್ನು ಫಲ,ತಾಂಬೂಲ ಸಹಿತ ಪುರೋಹಿತರಿಗೆ ಅಥವ ಗುರುಗಳಿಗೆ ಅಥವ ತೀರಾ ಬಡವರಿಗೆ ದಕ್ಷಿಣೆ ಸಮೇತ ದಾನಕೊಡುವುದು. ಆನಂತರ ತಂದೆಯು ಮಗುವಿನ ಮುಖವನ್ನು ನೋಡಬೇಕು.ದಾನಕೊಡದೆ ತಂದೆ ಮಗುವಿನ ಮುಖವನ್ನು ನೋಡಬಾರದು. ಭರಣಿ:- ಈ ನಕ್ಷತ್ರದಲ್ಲಿ ಜನಿಸಿದ ಕೂಸಿಗೆ ಅರಿಷ್ಟ ಉಂಟಾಗುವುದು. ಜನಿಸಿದ ೨೭ದಿನದೊಳಗಾಗಿ ತಾಮ್ರದ ಪಾತ್ರೆಯಲ್ಲಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಮಾತಾಪಿತೃಗಳು ಜಂಗಮರಿಗೆ ದಾನಕೊಡಬೇಕು. ರೋಹಿಣಿ:- ಈ ನಕ್ಷತ್ರದಲ್ಲಿ ಶ್ರೀ ಕೃಷ್ಣ ಜನಿಸಿ ಸೋದರ ಮಾವನಾದ ಕಂಸನಿಗೆ ಕಂಟಕನಾದನು ಆದ್ದರಿಂದ ಮಗುವಿನ ಸೋದರಮಾವಂದಿರಿಗೆ ಅರಿಷ್ಟ ಉಂಟಾಗುವುದರಿಂದ ಬೆಳ್ಳಿಪಾತ್ರೆಯಲ್ಲಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಸೋದರಮಾವಂದಿರು ಪುರೋಹಿತರಿಗೆ ದಾನಮಾಡಿದ ಮೇಲೆ ಮಗುವಿನ ಮುಖವನ್ನು ನೋಡಬೇಕು.ಈ ಕಾರ್ಯವನ್ನು ಮಗು ಜನಿಸಿದ ೨೭ದಿನದೊಳಗಾಗಿ ಮಾಡಬೇಕು. ಆರಿದ್ರಾ:- ಈ ನಕ್ಷತ್ರದಲ್ಲಿ ಮಗು ಜನಿಸಿದರೆ ತಾಯಿಗೆ ಅರಿಷ್ಟ ಉಂಟಾಗುವುದರಿಂದ ಹಿತ್ತಾಳೆ ಪಾತ್ರೆಯಲ್ಲಿ ೨೭ದಿನದೊಳಗಾಗಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಮಾತಾಪಿತೃಗಳು ಪುರೋಹಿತರಿಗೆ ದಾನಕೊಡಬೇಕು. ಪುಷ್ಯ:- ಈ ನಕ್ಷ್ತತ್ರದಲ್...

ಜಾತಕ ಫಲ ತರುವುದು ಭಾಗ್ಯ

ಭಾಗ್ಯಕ್ಕಾಗಿ ಚಿಂತೆ ಮಾಡುವ ಜನರೇ ಇರುವರು. ಭಾಗ್ಯಕ್ಕಾಗಿ ಬಹಳ ಪ್ರಯತ್ನ ಮಾಡುವವರೂ ಇರುತ್ತಾರೆ. ಆದರೆ ಪ್ರಯತ್ನ ಮಾಡದೆ ಭಾಗ್ಯ ಬರುವುದು ಇದೆ. ಇದು ಅವರವರ ಗ್ರಹಗಳಿಂದ ಬರುತ್ತದೆ. ರಾಷ್ಟ್ರದ ಪ್ರಧಾನಿಯ ಜಾತಕದಲ್ಲಿ ಶುಕ್ರ ಮತ್ತು ಶನಿಯ ದೃಷ್ಟಿ ಗುರುವಿನ ಮೇಲೆ ಇರುವುದರಿಂದ ಇವರು ರಾಷ್ಟ್ರದ ಮುಖಂಡರಾದರು. ಸಾಮಾನ್ಯವಾಗಿ ಜಾತಕದಲ್ಲಿ ಲಗ್ನ ಅಥವಾ ಚಂದ್ರನ ನವಮ ಸ್ಥಾನ ಭಾಗ್ಯ ಸ್ಥಾನ. ಇದರಲ್ಲಿ ಬಲಿಷ್ಠವಾಗಿರುವವನ ಭಾವದಿಂದ ಭಾಗ್ಯವನ್ನು ನೋಡಬೇಕು. ಭಾಗ್ಯದ ಅಧಿಪತಿ ಇರುವ ಸ್ಥಾನ, ಭಾಗ್ಯದಲ್ಲಿರುವ ಬಲಿಷ್ಠ ಅಥವಾ ಬಲಹೀನ ಗ್ರಹರು ಇದನ್ನೆಲ್ಲ ನೋಡಿ ಲೆಕ್ಕಾಚಾರ ಮಾಡಬೇಕು. ಭಾಗ್ಯ ಸ್ಥಾನದಲ್ಲಿ ಭಾಗ್ಯಾಧಿಪತಿ ಇದ್ದರೆ ಅಥವಾ ಭಾಗ್ಯ ಸ್ಥಾನವನ್ನು ನೋಡಿದರೆ ಜಾತಕನು ಭಾಗ್ಯ ಫಲ ಪಡೆಯುತ್ತಾನೆ. ತೃತೀಯ ಪಂಚಮ ಅಥವಾ ಲಗ್ನದಲ್ಲಿರುವ ಗ್ರಹರು ಬಲಿಷ್ಠವಾಗಿ ಭಾಗ್ಯ ಭಾವವನ್ನು ಪೂರ್ಣ ದೃಷ್ಟಿಯಿಂದ ನೋಡಿದರೆ ಇಂತಹವರು ಅತಿ ಭಾಗ್ಯವಂತರಾಗುತ್ತಾರೆ. ಗುರುವು ಭಾಗ್ಯ ಭಾವದಲ್ಲಿ ಇದ್ದಾಗ ಜಾತಕನು ಮಂತ್ರಿ ಆಗುತ್ತಾನೆ. ನವಮದ ಗುರುವನ್ನು ಚಂದ್ರನು ನೋಡಿದರೆ ಜಾತಕನು ಭೋಗವಂತನಾಗುತ್ತಾನೆ. ಭಾಗ್ಯದಲ್ಲಿರುವ ಗುರುವನ್ನು ಕುಜನು ನೋಡಿದರೆ ಜಾತಕನಲ್ಲಿ ಬಂಗಾರ ಇರುತ್ತದೆ. ಭಾಗ್ಯದಲ್ಲಿರುವ ಗುರುವನ್ನು ಬುಧನು ನೋಡಿದರೆ ಇವರು ಧನವಂತರಾಗುತ್ತಾರೆ. ನವಮದಲ್ಲಿರುವ ಗುರುವನ್ನು ಶುಕ್ರನು ನೋಡಿದರೆ ಮನೆ, ವಾಹನ ಮತ್ತು ಧನದಿಂದ ಕೂಡಿದವನಾಗುತ್ತಾನೆ. ನವಮದಲ್ಲಿರ...

ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ದೇವರನ್ನು ಪೂಜಿಸಿ

ಮಾನವ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕ್ಕತಿಕ ಜೀವನದ ಸ್ವರೂಪವು ಅದರ ಮೂಲಭೂತ ಜೀವನ-ಸಿದ್ದಾಂತವನ್ನು ಅವಲಂಬಿಸಿರುತ್ತದೆ. ಹಿಂದೂಗಳಿಗೆ ಮೂಲ ನೆಲೆಯಾಗಿರುವುದು ಧರ್ಮ. ಈ ಧರ್ಮಕ್ಕೆ ಮೂರು ದೃಷ್ಟಿಕೋನಗಳು. 1. ಮೂಲಭೂತ ತತ್ವಗಳ ಅಥವಾ ಸಿದ್ದಾಂತದ ದೃಷ್ಟಿಕೋನ 2. ಆ ತತ್ವಗಳನ್ನು ಜನ ಸಾಮಾನ್ಯನಿಗೆ ನಿರೂಪಿಸುವ ಪೌರಾಣಿಕ ದೃಷ್ಟಿಕೋನ. 3. ಆ ತತ್ವಗಳ ಸಿದ್ದಿಗಾಗಿ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆಯ ದೃಷ್ಟಿಕೋನ. ಎರಡನೇ ಬಗೆಯ ವರ್ಗೀಕರಣವನ್ನು ವ್ರತಕ್ಕೆ ನಿಗದಿಯಾದ ಕಾಲದ ಆಧಾರದ ಮೇಲೆ ಮಾಡಬಹುದು. ಒಂದು ದಿನ ಮಾತ್ರ ನಡೆಯುವ ವ್ರತವನ್ನು ಶಿದಿನವ್ರತಷಿವೆಂದೂ, ಒಂದು ವಾರ ನಡೆಯುವುದನ್ನು ಶಿವಾರವ್ರತಷಿವೆಂದೂ, ಒಂದು ಪಕ್ಷದ ಕಾಲ ನಡೆಯುವುದನ್ನು ಶಿಪಕ್ಷವ್ರತಷಿ ವೆಂದೂ ಒಂದು ತಿಥಿ ಅಥವಾ ಒಂದು ನಕ್ಷತ್ರದ ಅವಧಿಯಲ್ಲಿ ನಡೆಸಬೇಕಾದ್ದನ್ನು ಶಿನಕ್ಷತ್ರ ವ್ರತಷಿ ವೆಂದು ವಿಂಗಡಿಸಲಾಗಿದೆ. ಭವಿಷ್ಯ ಪುರಾಣ 102ನೇ ಅಧ್ಯಾಯದಲ್ಲಿ ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ವ್ಯಕ್ತಿಗಳ ಜನ್ಮಕಾಲದಲ್ಲಿಯ ನಕ್ಷತ್ರವನ್ನು ತಿಳಿದು ಆಚರಿಸಿದರೆ. ದೋಷಗಳು ಪರಿಹಾರವಾಗಿ, ಶುಭಫಲವನ್ನೇ ನೀಡುತ್ತವೆ. ನಿಯಮಗಳನ್ನು ತಿಳಿದು ಆಚರಿಸಬೇಕು. ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರಾಗಿದ್ದು, ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು ...

ಉದ್ಯೋಗ ದೊರೆಯತ್ತಿಲ್ಲವೆ? ಉದ್ಯೋಗ ಪಡೆಯಲು ಇಲ್ಲಿವೆ ಜ್ಯೋತಿಷ್ಯ ಸಲಹೆಗಳು

ಒಂದು ವೇಳೆ ನಿಮಗೆ ಉದ್ಯೋಗ ಬೇಕು ಎಂದರೆ ಯಾವುದಾದರು ಜ್ಯೋತಿಷಿಯನ್ನು ಭೇಟಿಯಾಗಿ. ಯಾವ ಗ್ರಹದ ಕಾರಣ ನಿಮಗೆ ಉದ್ಯೋಗ ದೊರೆಯುತ್ತಿಲ್ಲ ಎಂದು ತಿಳಿದುಕೊಳ್ಳಿ. ಯಾವ ಗ್ರಹದಿಂದ ಉದ್ಯೋಗ ಸಿಗುತ್ತಿಲ್ಲ ಎಂದು ಗೊತ್ತಾದರೆ ಈ ಕೆಳಗೆ ನೀಡಿದ ತರಹದ ಉಪಾಯ ಓದಿ ಮತ್ತು ನೌಕರಿ ಗಿಟ್ಟಿಸಿಕೊಳ್ಳಿ. * ಸೂರ್ಯನ ಕಾರಣ ನಿಮಗೆ ನೌಕರಿ ಸಿಗಲಿಲ್ಲ ಎಂದಾದರೆ ಆಕಳಿಗೆ ರೊಟ್ಟಿ ನೀಡಲು ಪ್ರಾರಂಭಿಸಿ. ಕಪ್ಪು ಅಥವಾ ಹಳದಿ ಆಕಳಿಗೆ ಮಾತ್ರ ರೊಟ್ಟಿ ತಿನಿಸಿ. * ಚಂದ್ರ ದೋಷವಿದ್ದರೆ , ರಾತ್ರಿ ಹಾಲನ್ನು ಸೇವಿಸಬೇಡಿ ಮತ್ತು ಪ್ರತಿನಿತ್ಯ ರಾತ್ರಿ ನಿಮ್ಮ ತಂದೆಗೆ ನೀವೇ ಸ್ವತಃ ಹಾಲನ್ನು ಕುಡಿಸಿರಿ. * ಬುಧ ಗ್ರಹದ ದೋಷವಿದ್ದರೆ ಬೆಳ್ಳಿಯ ಆಭರಣ ಧರಿಸಿ ಮತ್ತು ಚಿನ್ನವನ್ನು ಖರೀದಿಸಿ. ಮನೆಯಲ್ಲಿ ನಿಮ್ಮ ಸ್ನಂತ ಕೈಯಿಂದ ಗಿಡ-ಬಳ್ಳಿಗಳನ್ನು ಹಚ್ಚಬೇಡಿ. * ಗುರ ಗ್ರಹದ ದೋಷವಿದ್ದರೆ ಕೆಂಪು ಬಣ್ಣದ ಗುಲಗಂಜಿ ಅಥವಾ ಚಿನ್ನದ ನಾಣ್ಯ ಹಳದಿ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿ ಯಾವುದಾದರು ಒಂದು ಸ್ಥಾನದಲ್ಲಿ ಇಡಿ. ಮತ್ತು ಚಿನ್ನದ ಆಭರಣ ಧರಿಸಬೇಡಿ. ಆಕಳಿಗೆ ಬೆಲ್ಲ ಮತ್ತು ಬೇಳೆ ತಿನಿಸಿ. *ಶುಕ್ರ ಗ್ರಹದ ಕಾರಣ ನಿಮಗೆ ಉದ್ಯೋಗ ಸಿಗದಿದ್ದರೆ, ಮನೆಯ ಹಿರಿಯ ಮಹಿಳೆಯರ ಪಾದ ಸ್ಪರ್ಶ ಮಾಡಿರಿ ಈ ನಿಯಮ ಪ್ರತಿನಿತ್ಯ ಅನುಸರಿಸಿ. * ಶನಿಯ ದೋಷದಿಂದ ನಿಮಗೆ ಉದ್ಯೋಗ ಲಭಿಸಲಿಲ್ಲ ಎಂದಾದರೆ, ಎಳ್ಳಿನ ಎಣ್ಣೆಯಲ್ಲಿ ನಿಮ್ಮ ಪ್ರತಿಬಿಂಬ ನೋಡಿ ನಂತರ ಬಿಕ್ಷುಕರಿಗೆ ದಾನ ಮಾಡಿ....

ಕಾಳಸರ್ಪ ಯೋಗದ ಭಯವೇ? ಇಲ್ಲಿದೆ ಪರಿಹಾರ!

ಮನುಷ್ಯ ಜೀವನವೇ ಹಾಗೆ. ಸುಖವನ್ನು ಬಯಸುವಂಥದ್ದು. ಅಷ್ಟೇ ಅಲ್ಲ, ಜಿಜ್ಞಾಸೆಯಿಂದಲೇ ಕಾಲ ತಳ್ಳುವ ಜೀವನವದು. ತನ್ನ ಜಾತಕದಲ್ಲಿ ಕಷ್ಟ-ಸುಖ, ಶುಭ- ಅಶುಭಗಳ ಹಿಂದಿರುವ ರಹಸ್ಯ ಹುಡುಕಿಕೊಂಡು ಹೋಗುವ ಮನೋಧರ್ಮ ಕೆಲವರದಾದರೆ, ತನಗೆ ಬಂದ ಕಷ್ಟದ ಮೂಲ ಹುಡುಕಿಕೊಂಡು ಹೋಗಿ ಪರಿಹಾರ ಪಡೆಯಲು ಹವಣಿಸುವುದು ಹಲವರ ಮಾನವ ಸಹಜ ಗುಣ. ಕಷ್ಟ ಪರಿಹರಿಸಿ ಸುಖ ನೆಲೆಯಾಗಲು ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ದಾರಿ ಕಾಣದೆ ಕಂಗಾಲಾಗುವವರೂ ಅನೇಕರು. ಬಹುತೇಕರು ಸಾಡೇಸಾತ್ ಶನಿಗೆ ಹೆದರಿದರೆ ಇನ್ನೂ ಅನೇಕರು ತಮ್ಮ ಜಾತಕದಲ್ಲಿ ತಮಗೆ ಕಾಳಸರ್ಪ ಯೋಗವಿದೆಯೆಂದು ತಿಳಿದು ಭಯಭೀತರಾಗುತ್ತಾರೆ. ಕಾಳ ಸರ್ಪ ಯೋಗದ ಬಗ್ಗೆ ಜನರಲ್ಲಿ ಭಯವಿರುವ ಜೊತೆಗೇ ಸಾಕಷ್ಟು ತಪ್ಪುತಿಳುವಳಿಕೆಗಳೂ ಇವೆ. ಹಾಗಾಗಿ ಕಾಳಸರ್ಪ ಯೋಗದ ಬಗ್ಗೆ ಹಾಗೂ ಪರಿಹಾರ ಉಪಾಯಗಳ ಬಗ್ಗೆ ಈ ಲೇಖನದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಒಂದೇ ಪರಿವಾರದಲ್ಲಿ ಅಣ್ಣತಮ್ಮಂದಿರು ಅಕ್ಕತಮ್ಮಂದಿರು ಇರುತ್ತಾರೆ. ನಾವು ಒಂದೇ ಕುಟುಂಬದವರೆಂದು ಅಣ್ಣ ತಮ್ಮ ಅಕ್ಕ ತಂಗಿಯರೆಂದು ಹೇಳಿಕೊಂಡರೂ ಅವರೆಲ್ಲರಲ್ಲೂ ವ್ಯತ್ಯಾಸಗಳಿದ್ದೇ ಇರುತ್ತದೆ. ಅಭಿರುಚಿ, ರೀತಿ ನೀತಿ, ಭಾವನೆ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ. ಅವರವರ ಕರ್ಮವನ್ನವಲಂಬಿಸಿಕೊಂಡು ಅವರವರ ಜೀವನಕ್ರಮ, ಆಸಕ್ತಿ ಭಿನ್ನವಾಗಿರುತ್ತದೆ. ಹಾಗಾಗಿಯೇ ಅವರವರ ಕರ್ಮಕ್ಕನುಗುಣವಾಗಿ ಫಲವಾದ ಭೋಗವೂ ಕೂಡಾ ಭಿನ್ನಭಿನ್ನವೇ. ನಿಮ್ಮ ಜಾತಕದಲ್ಲಿ ಗ್ರಹಬಲವಿದ್ದಾಗ....

ಸೂರ್ಯದೇವನ 21 ಹೆಸರುಗಳನ್ನು ತಿಳಿದುಕೊಳ್ಳಲು -ಗ್ರಹಗಳಿಗೆ ಅರ್ಪಿಸಬೇಕಾದ ಹೂಗಳನ್ನು ಮತ್ತು ಹಾರಗಳನ್ನು -ಓದಿ

ಸೂರ್ಯದೇವನ 21 ಹೆಸರುಗಳನ್ನು ತಿಳಿದುಕೊಳ್ಳಲು ಓದಿ ಭಗವಾನ್‌ ಸೂರ್ಯದೇವರ 21 ಹೆಸರುಗಳನ್ನು ಪಠಣ ಮಾಡಿದರೆ 1000ರಷ್ಟು ಫಲ ಸಿಗುತ್ತದೆ . ಈ ಮಂತ್ರಗಳನ್ನು ಪಠಿಸುವುದು ಪವಿತ್ರ ಎಂದು ನಂಬಲಾಗುತ್ತದೆ. ಈ 21 ಸೂರ್ಯನ ಮಂತ್ರಗಳು ಸೂರ್ಯೊದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪಠಿಸಬೇಕು. ಇದರಿಂದ ಮನುಷ್ಯನ ರೋಗಗಳು ದೂರವಾಗುತ್ತವೆ. ಇದರಿಂದ ಮನುಷ್ಯನ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗುತ್ತದೆ ಮತ್ತು ಇದರಿಂದ ಮನುಷ್ಯನ ಸಂಪತ್ತು ಹೆಚ್ಚುತ್ತದೆ ಎಂದು ಜ್ಯೋತಿಷ ಶಾಸ್ತ್ರ ತಿಳಿಸುತ್ತದೆ . ಬನ್ನಿ ತಿಳಿದುಕೊಳ್ಳೊಣ ಸೂರ್ಯನ ಹೇಸರುಗಳನ್ನು ತಿಳಿದುಕೊಳ್ಳೊಣ 1. ವಿಕರ್ತನ ( ವಿಪತ್ತುಗಳನ್ನು ದೂರ ಮಾಡುವುದು ) 2. ವಿವಸ್ಥಾನ್ ( ಪ್ರಕಾಶ ರೂಪ ) 3. ಮಾರ್ತಂಡ್ 4. ಭಾಸ್ಕರ 5.ರವಿ 6. ಲೋಕ ಪ್ರಕಾಶಕ್ 7.ಶ್ರೀಮಾನ್‌ 8. ಲೋಕ ಚಕ್ಷು 9.ಗೃಹೇಶ್ವರ 10. ಲೋಕ ಸಾಕ್ಷಿ 11.ತ್ರಿಲೋಕೆಶ 12.ಕರ್ತಾ 13.ಹರ್ತಾ 14.ತಮಿಸ್ತ್ರಾಹ ( ಅಂಧರ ತೋಲಗಿಸುವವ) 15.ತಪನ್‌ 16. ತಾಪನ್‌ 17 ಶೂಚಿ ( ಪವಿತ್ರ) 18. ಸಪ್ತಾಶ್ವಾಹನ್ 19. ಗಭಾಸ್ತಿಹಸ್ತ 20.ಬ್ರಹಾ 21.ಸರ್ವದೇವನಮಸ್ಕ್ರುತ್. ಭಗವಾನ ಸೂರ್ಯನ ನಾಮ ಪಠಿಸುವುದರಿಂದ ಮನುಷ್ಯನಿಗ ಯಶಸ್ವಿ ಸಿಗುತ್ತದೆ ಮತ್ತು ವೈಭಮ , ಸಂಪತ್ತು , ಉತ್ತಮ ಆರೋಗ್ಯ ಲಭಿಸುತ್ತದೆ. ನವಗ್ರಹಗಳಿಗೆ ಯಾವ ಪುಷ್ಪ ಅರ್ಪಿಸಬೇಕು ಗೊತ್ತಾ ? ಪುಷ್ಪಗಳು ದೇವತೆಗಳಿಗೆ ಮನುಷ್ಯನು ಸಮರ್ಪಣೆ ಮಾಡುವುದರಲ್ಲಿ ಪ್...