ಮನಃಶಾಂತಿ ನೀಡುವ ನಕ್ಷತ್ರ
ನಮ್ಮ ದೈನಂದಿನ ಚಟುವಟಿಕೆಗಳು ಸಫಲವಾಗಲು ಅಥವಾ ವಿಫಲವಾಗಲು ನಮ್ಮ ಜನ್ಮ ನಕ್ಷತ್ರ/ ನಾಮ ನಕ್ಷತ್ರಕ್ಕೂ ಆಯಾ ದಿನಗಳ ನಕ್ಷತ್ರಗಳ ಜತೆ ಇರುವ ಮೂಲ ಸಂಬಂಧವೇ ಕಾರಣ.
ಹೀಗಾಗಿ ನಮ್ಮ ನಕ್ಷತ್ರಕ್ಕೂ ದಿನದ ನಕ್ಷತ್ರಕ್ಕೂ ಯಾವ ವಿಚಾರದಲ್ಲಿ ಸಂಬಂಧವಿರುತ್ತದೆ ಎಂಬುದನ್ನು ಅರಿಯಬೇಕು.
ನಕ್ಷತ್ರ ಕಿರಣಗಳಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಎಂಬ ಎರಡು ವಿಧಗಳಿವೆ. ಯಾವುದೇ ನಕ್ಷತ್ರದವರಿಗೆ ಸಕಾರಾತ್ಮಕ ಕಿರಣಗಳು ಅನುಕೂಲ. ನಕಾರಾತ್ಮಕ ಕಿರಣಗಳು ಪ್ರತಿಕೂಲ.
ಈ ಕಿರಣಗಳು ಮನಸು, ಆರೋಗ್ಯ, ಹಣ, ಕಷ್ಟ-ನಷ್ಟ, ವೈರತ್ವ, ಸಾಧನೆ, ವ್ಯಾಪಾರ-ವ್ಯವಹಾರ, ಮೈತ್ರಿ ಮೊದಲಾದವುಗಳ ಮೇಲೆ ಪ್ರಭಾವ ಬೀರುತ್ತವೆ.
ಎಲ್ಲ ನಕ್ಷತ್ರದವರು ಅತಿ ಮುಖ್ಯವಾಗಿ ಅಂಶಗಳು ಈ ರೀತಿ ಇವೆ.
೧ನಿಮ್ಮ ಜನ್ಮ/ನಾಮ ನಕ್ಷತ್ರವಿರುವ ದಿನ ಅನುಕೂಲವಾಗಲಿ, ಅನನುಕೂಲವಾಗಲಿ ಇರುವುದಿಲ್ಲ. ಅಂದರೆ ಸಾಮಾನ್ಯ ಫಲ.
೨ನಿಮ್ಮ ನಕ್ಷತ್ರದ ಮುಂದಿನ ನಕ್ಷತ್ರವೇ ಸಂಪತ್ ತಾರೆ. ಇದು ಹಣ, ಆಭರಣ, ವ್ಯವಹಾರಗಳಿಗೆ ಅನುಕೂಲ. ಧನಲಕ್ಷ್ಮೀ ಪೂಜೆಗೆ ಶ್ರೇಷ್ಠ ದಿನ. ಬರಬೇಕಾಗಿದ್ದ ಹಣ ಬರುವುದು. ಗೌರವ, ಕೀರ್ತಿ, ಉಡುಗೊರೆ ಪ್ರಾಪ್ತವಾಗುವ ದಿನ. ಸಾಲ ಪಡೆಯಲು ಪ್ರಯತ್ನಪಟ್ಟಾಗ ಫಲದಾಯಕವಾಗುವ ದಿನ.
3.ನಿಮ್ಮ ನಕ್ಷತ್ರದಿಂದ 3ನೆಯ ನಕ್ಷತ್ರವೇ ವಿಪತ್ ತಾರೆ. ವಿಪತ್ ತಾರೆ ಇರುವ ದಿನ ಅಪಘಾತ, ಹೊಡೆತ, ಕಲಹ, ನಷ್ಟ ಮೊದಲಾದ ತೊಂದರೆಗಳಾಗುವುದು. ಮೇಲಧಿಕಾರಿಗಳ ಅವಕೃಪೆ ಉಂಟಾಗುವುದು. ವ್ಯಾಪಾರಿಗಳಾದರೆ ಹಾನಿ, ಮನಸ್ತಾಪಗಳಾಗುವುದು. ಯಾವ ಕೆಲಸ ಕಾರ್ಯ ಪ್ರಾರಂಭಕ್ಕೂ ಇದು ಸೂಕ್ತವಲ್ಲ.
4.ನಿಮ್ಮ ನಕ್ಷತ್ರದಿಂದ 4ನೇ ತಾರೆಯೇ ಕ್ಷೇಮ ತಾರೆ. ಯಾರಿಗಾಗಲೇ ಕ್ಷೇಮ ತಾರೆಯಿದ್ದ ದಿನ ಮಾನಸಿಕ ಶಾಂತಿ, ಆರೋಗ್ಯ, ಆಪ್ತರ ಭೇಟಿ ಮೊದಲಾದ ಅನುಕೂಲಗಳಿರುತ್ತವೆ.
ಅಧಿಕಾರಿ ಭೇಟಿ, ಒಪ್ಪಂದ ಕಾರ್ಯ, ಶಸ್ತ್ರಚಿಕಿತ್ಸೆ, ಹೊಸ ಕಾರ್ಯ ಪ್ರಾರಂಭ, ಆರೋಗ್ಯ ತಪಾಸಣೆ, ಪ್ರಯಾಣ, ತಂಟೆ-ತಕರಾರುಗಳನ್ನು ಬಗೆಹರಿಸಿಕೊಳ್ಳಲು, ನ್ಯಾಯಾಲಯದ ವ್ಯವಹಾರಗಳಿಗೆ ಅನುಕೂಲಕರ.
5.ನಿಮ್ಮ ನಕ್ಷತ್ರದಿಂದ 5ನೇ ನಕ್ಷತ್ರವೇ ಪ್ರತ್ಯಕ್ ತಾರೆ. ಇದು ಯಾವ ಕೆಲಸ, ಕಾರ್ಯಗಳಿಗೂ ಅನುಕೂಲವಲ್ಲ. ನಿರೀಕ್ಷೆಗೆ ವಿರುದ್ಧವಾದ ಫಲಗಳು ಉಂಟಾಗುತ್ತವೆ. ಪ್ರತ್ಯಕ್ ತಾರೆ ಇರುವ ದಿನ ತಾಳ್ಮೆವಹಿಸಿ ಎಚ್ಚರಿಕೆಯಿಂದ ನಡೆದುಕೊಳ್ಳವುದರಿಂದ ತೊಂದರೆಗಳ ನಿವಾರಣೆ ಸಾಧ್ಯ.
6.ನಿಮ್ಮ ನಕ್ಷತ್ರದಿಂದ 6ನೇ ನಕ್ಷತ್ರವೇ ಸಾಧನ ತಾರೆ. ಈ ಸಾಧನ ತಾರೆಯಿರುವ ದಿನ ವಿದ್ಯಾಭ್ಯಾಸ, ಮಂತ್ರಸಿದ್ಧಿ, ಸಂಶೋಧನೆ, ಹೂಡಿಕೆ, ನೂತನ ಕಾರ್ಯ ಪ್ರಾರಂಭ, ಹೋರಾಟ, ಶುಭ ಕಾರ್ಯ, ಪ್ರೇಮ ವ್ಯವಹಾರಗಳಿಗೆ ಪ್ರಗತಿದಾಯಕ.
7.ನಿಮ್ಮ ನಕ್ಷತ್ರದಿಂದ 7ನೇ ನಕ್ಷತ್ರವೇ ನೈಧನ ತಾರೆ. ಇದು ಅತಿ ತೊಂದರೆದಾಯಕವಾಗಿರುವುದು. ನೈಧನ ತಾರೆಗೆ ವಧ ತಾರೆ ಎಂದೂ ಕರೆಯುವರು. ಯಾರಿಗೇ ಆಗಲಿ ನೈಧನ ತಾರೆಯಿದ್ದ ದಿನ ಕಷ್ಟ-ನಷ್ಟ, ಕಲಹ, ಅಪಘಾತ, ಶತ್ರು ಬಾಧೆ, ಅನಾರೋಗ್ಯ ಮೊದಲಾದ ತೊಂದರೆಗಳಾಗುತ್ತವೆ. ನಿಧನ ವಾರ್ತೆಗಳು ನೈಧನ ತಾರೆಯಿದ್ದಾಗಲೇ ಬರುವ ಸಾಧ್ಯತೆಗಳು ಹೆಚ್ಚು. ನೈಧನ ತಾರೆಯಿದ್ದಾಗಲೇ ಸಾವು ಉಂಟಾಗಿರುವ ಉದಾಹರಣೆಗಳು ಇವೆ.
8.ನಿಮ್ಮ ನಕ್ಷತ್ರದಿಂದ 8ನೇ ತಾರೆಯು ಮಿತ್ರ ತಾರೆಯಾಗುವುದು. ಈ ನಕ್ಷತ್ರವಿರುವ ದಿನ ಅಧಿಕಾರಿ ಭೇಟಿ, ಆಪ್ತರನ್ನು ಸಂಪರ್ಕಿಸಲು, ವ್ಯಾಪಾರ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments