Skip to main content

ಸಂಖ್ಯಾಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳುವ ಮುನ್ನ ಒಂದಿಷ್ಟು ಅಂಶಗಳತ್ತ ಗಮನ ಹರಿಸೋಣ.

ಸಂಖ್ಯೆ ಮತ್ತು ನಿಮ್ಮ ವೃತ್ತಿ ಸಂಖ್ಯಾಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳುವ ಮುನ್ನ ಒಂದಿಷ್ಟು ಅಂಶಗಳತ್ತ ಗಮನ ಹರಿಸೋಣ. ನಮ್ಮಲ್ಲಿ ಒಂದರಿಂದ ಒಂಬತ್ತು ಸಂಖ್ಯೆಗಳಿವೆ. ಆಯಾ ಸಂಖ್ಯೆಗಳನ್ನು ಆಧರಿಸಿ ವ್ಯಕ್ತಿಯ ಸಾಮರ್ಥ್ಯ ಮತ್ತು ದುರ್ಬಲ ಅಂಶಗಳನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಬಹುದು. ಗೊಂದಲದಲ್ಲಿರುವವರಿಗೆ ಸಂಖ್ಯಾಶಾಸ್ತ್ರ ಒಂದು ಮಾನದಂಡ ಅಥವಾ ಮಾರ್ಗದರ್ಶಕವಾಗಬಹುದೇ ಹೊರತು ಅದುವೇ ಅಂತಿಮವಲ್ಲ. ಒಂದಿಷ್ಟು ಉದಾಹರಣೆಗಳನ್ನು ನಾವಿಲ್ಲಿ ಗಮನಿಸೋಣ. ಜನ್ಮ ದಿನಾಂಕ 1, 10, 19 ಅಥವಾ 28: ಸಂಖ್ಯಾ ಪಟ್ಟಿಯಲ್ಲಿ ಮೊದಲ ಸಂಖ್ಯೆಯೇ ಒಂದು. ವೃತ್ತಿ ಭೂಮಿಕೆಯಲ್ಲಿ ಮುಂದಿರುವವರನ್ನು ನಾವು ಅದ್ವಿತೀಯರು, ಮೊದಲಿಗರು ಎಂದೇ ಗುರುತಿಸುತ್ತೇವೆ. ಜನ್ಮ ಸಂಖ್ಯೆ ಒಂದಾಗಿದ್ದರೆ ನಿಮ್ಮಲ್ಲಿ ಉತ್ತಮ ನಾಯಕತ್ವ ಗುಣಗಳು ಮೇಳೈಸಿರುತ್ತವೆ. ಸಕಾರಾತ್ಮಕ ವರ್ತನೆಗಳನ್ನು ನೋಡಬಹುದು. ಈ ಸಂಖ್ಯೆಯವರು ಆಶಾವಾದಿಗಳು. ನಾಯಕತ್ವ ಗುಣ ಇವರಲ್ಲಿ ಹಾಸು ಹೊಕ್ಕಾಗಿರುತ್ತದೆ. ಉತ್ತಮ ನಾಯಕರು ಎನಿಸಿಕೊಳ್ಳುತ್ತಾರೆ ಮತ್ತು ಪ್ರತಿಷ್ಠಿತ ಉದ್ಯಮಿಗಳಾಗುತ್ತಾರೆ. ನಂಬರ್ ಒಂದರ ಹೊರತಾಗಿ ಜನಿಸಿದವರ ಜತೆಗೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ. ನಿಮಗೊಂದು ವಿಷಯ ಗೊತ್ತಾ ಪ್ರಪಂಚದ ಬಹುತೇಕ ಶ್ರೇಷ್ಠ ಉದ್ಯಮಿಗಳೆಲ್ಲರು ಹುಟ್ಟಿದ ದಿನಾಂಕ ಒಂದೇ ಆಗಿದೆ. ಒಂದು ವೇಳೆ ನೀವು ಉದ್ಯೋಗದಲ್ಲಿದ್ದರೆ ನಿಮಗೆ ವಹಿಸಿದ ಕೆಲಸ, ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ನಿಮಗಿದೆ. ಸ್ವಂತ ಆಲೋಚನಾ ಶಕ್ತಿ ನಿಮಗಿರುವುದರಿಂದ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದು ಕೆಲವೊಮ್ಮೆ ಮುಜುಗರವೆನಿಸಬಹುದು. ಸಕಾರಾತ್ಮಕ ಗುಣ: ಜನ ನಾಯಕ, ಆಶಾವಾದಿ, ಎಂತಹ ಪರಿಸ್ಥಿತಿಯನ್ನು ನಿಭಾಯಿಸಬಲ್ಲಿರಿ. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವಿರಿ. ನಕಾರಾತ್ಮಕ ಗುಣ: ಹಠಮಾರಿತನ, ಬಗ್ಗದಿರುವಿಕೆ, ಅಹಂಕಾರ ಪ್ರಸಿದ್ಧ ವ್ಯಕ್ತಿಗಳು : ಧೀರೂಬಾಯಿ ಅಂಬಾನಿ, ರತನ್ ಟಾಟಾ, ಮುಖೇಶ್ ಅಂಬಾನಿ, ಬಿಲ್‌ಗೇಟ್ಸ್. ಜನ್ಮ ದಿನಾಂಕ 2, 11, 20 ಮತ್ತು 29: ಸಂಖ್ಯೆ ಎರಡರಲ್ಲಿ ಜನ್ಮ ತಾಳಿರುವವರಲ್ಲಿ ಸೃಜನಶೀಲತೆ ಮತ್ತು ರಾಜತಾಂತ್ರಿಕತೆ ಮೈಗೂಡಿರುತ್ತದೆ. ಆದರೆ ಇವರದು ಭಾವನಾತ್ಮಕ ಸ್ವಭಾವ. ವ್ಯವಹಾರ ಜ್ಞಾನವೂ ಅಷ್ಟಕ್ಕಷ್ಟೇ. ಆದರೆ ಈ ಗುಣಗಳು ಹನ್ನೊಂದನೆ ಸಂಖ್ಯೆಯಲ್ಲಿ ಹುಟ್ಟಿದವರಿಗೆ ಅನ್ವಯಿಸುವುದಿಲ್ಲ. ಕಲೆ ಮತ್ತು ಮನರಂಜನಾ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ವಿಶ್ವದ ಅತ್ಯಂತ ಶ್ರೇಷ್ಠ ಕಲಾವಿದರ ಜನ್ಮ ಸಂಖ್ಯೆಯೂ ಎರಡು ಆಗಿದೆ. ಈ ಸಂಖ್ಯೆಯವರು ಫ್ಯಾಷನ್, ಡಿಸೈನ್, ಪೇಂಟಿಂಗ್, ಡಿಸೈನ್ ಕ್ಷೇತ್ರದಲ್ಲಿ ಪ್ರವೃದ್ಧಮಾನ ಹೊಂದುತ್ತಾರೆ. ಸಕಾರಾತ್ಮಕ ಗುಣ : ಕ್ರಿಯಾಶೀಲರು, ಮನರಂಜನಾಕಾರರು, ರಾಜತಾಂತ್ರಿಕವುಳ್ಳವರು. ನಕಾರಾತ್ಮಕ ಗುಣ : ನಿರಾಶಾವಾದಿ, ಮನಸಿನಲ್ಲಿ ತೀವ್ರ ತೊಳಲಾಟ, ಅನಿಶ್ಚತತೆಯ ಕಾರಣ ನಿರ್ಧಾರ ತೆಗೆದುಕೊಳ್ಳಲು ಕಷ್ಟ ಪಡುವರು. ಪ್ರಸಿದ್ಧ ವ್ಯಕ್ತಿಗಳು : ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಲಿಯೊನಾರ್ಡೊ ಡಿ ಕಾರ್ಪಿಯೋ ಜನ್ಮ ದಿನಾಂಕ 3, 12, 21 ಮತ್ತು 30: ಸಂಖ್ಯೆ ಮೂರರಲ್ಲಿ ಜನ್ಮ ತಾಳಿರುವವರು ವ್ಯವಹಾರದಲ್ಲಿ ಚತುರರು. ಗುರು ಮೂರು ಸಂಖ್ಯೆಯ ಅಧಿಪತಿ. ಗುರು ಸಂಪತ್ತಿನ ಅಧಿಪತಿ. ಆರ್ಥಿಕ ವ್ಯವಹಾರದಲ್ಲಿ ಇವರು ಚತುರರು. ಹಾಗಾಗಿ ವಿತ್ತ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸುತ್ತಾರೆ. ಉತ್ತಮ ಸಾಧನೆ ಮಾಡಬಲ್ಲರು. ಉದ್ಯೋಗಸ್ಥರಾದರೆ ಹಣಕಾಸು ನಿರ್ವಹಣೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಸಕಾರಾತ್ಮಕ ಗುಣ : ಹಣದ ವಿಚಾರದಲ್ಲಿ ಅದೃಷ್ಟಶಾಲಿಗಳು, ಸಕಾರಾತ್ಮಕ ನಡವಳಿಕೆ ನಕಾರಾತ್ಮಕ ಗುಣ : ಸ್ವಯಂ ಗೀಳು, ವಿಮರ್ಶಾತ್ಮಕರು ಪ್ರಸಿದ್ಧ ವ್ಯಕ್ತಿಗಳು : ವಾರೆನ್ ಬಫೆಟ್, ಎಡ್ಡಿ ಮರ್ಪಿ, ಕರೀನಾ ಕಪೂರ್ ಜನ್ಮ ದಿನಾಂಕ 4, 13, 22 ಮತ್ತು 31: ಸಂಖ್ಯೆ ನಾಲ್ಕರಲ್ಲಿ ಜನ್ಮ ತಾಳಿದವರಲ್ಲಿ ನಾಸ್ತಿಕ ಗುಣ ಹೆಚ್ಚಾಗಿ ಒಡಂಬಡಿಸಿರುತ್ತದೆ. ನಾಲ್ಕು ಎನ್ನುವ ಸಂಖ್ಯೆ ಭಿನ್ನತೆಯಿಂದ ಕೂಡಿದೆ. ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಎಂತಹ ಗಂಭೀರ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಹೋರಾಟದ ಮನೋಭಾವ ಇವರದು. ಉತ್ತಮ ಕೆಲಸಗಾರರು. ಕಾರ್ಯಕ್ಷೇತ್ರ ಮತ್ತು ಆರ್ಟ್ ಉದ್ಯಮಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ವಾಣಿಜ್ಯ, ವ್ಯವಹಾರ ಕ್ಷೇತ್ರ ಒಗ್ಗುತ್ತದೆ. ಆದರೆ ವ್ಯವಹಾರ ಜ್ಞಾನ ಸ್ವಲ್ಪ ಕಡಿಮೆ ಇರುವುದರಿಂದ ಹಣಕಾಸು ನಿರ್ವಹಣೆಯಲ್ಲಿ ತೊಂದರೆ ಅನುಭವಿಸುತ್ತಾರೆ. ಜೂಜು ಅಥವಾ ವ್ಯಾಪಾರದಿಂದ ಕಟ್ಟುನಿಟ್ಟಾಗಿ ದೂರವಿರುವುದು ಒಳ್ಳೆಯದು. ಸಕಾರಾತ್ಮಕ ಗುಣ: ಅಸಾಂಪ್ರದಾಯಕರು, ಹೋರಾಟಗಾರರು ನಕಾರಾತ್ಮಕ ಗುಣ: ಜೂಜಿನ ಪ್ರವೃತ್ತಿ ಉಳ್ಳವರು, ನಿರ್ಭಾಗ್ಯರು ಈ ದಿನಾಂಕಗಳಂದು ಹುಟ್ಟಿದ ಪ್ರಸಿದ್ಧರು: ಕಿಶೋರ್ ಕುಮಾರ್, ರಿಶಿ ಕಪೂರ್ ಜನ್ಮ ದಿನಾಂಕ 5, 14, 23: ಸಂಖ್ಯೆ ಐದರಲ್ಲಿ ಜನ್ಮ ತಾಳಿದವರದು ಅಸಹನೆ ಮತ್ತು ಖಿನ್ನತೆ ಸ್ವಭಾವ. ಯಾವುದೇ ತೀರ್ಮಾನವನ್ನು ಹಠಾತ್ತಾಗಿ ತೆಗೆದುಕೊಳ್ಳುವ ಪ್ರವೃತ್ತಿ ಇವರದು. ಹಿಂದೆ ಮುಂದೆ ಯೋಚಿಸದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ವ್ಯವಹಾರದ ವಿಷಯದಲ್ಲಿ ಮಾತ್ರ ಅತ್ಯಂತ ಜಾಗರೂಕರಾಗಿರುತ್ತಾರೆ. ಈ ಸಂಖ್ಯೆಯವರಿಗೆ ಸ್ಟಾಕ್ ಮಾರ್ಕೆಟ್ ಉತ್ತಮ ಆಯ್ಕೆ. ಶೇರ್ ಟ್ರೇಡಿಂಗ್ ವ್ಯವಹಾರವನ್ನು ಚೆನ್ನಾಗಿ ನಿಭಾಯಿಸಬಲ್ಲರು. ಕಾರಣ ಟ್ರೇಡಿಂಗ್ ವ್ಯವಹಾರದಲ್ಲಿ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುವ, ಆ ಕ್ಷಣವೇ ಲೆಕ್ಕ ಹಾಕುವ ಮನೋವೃತ್ತಿಯೇ ಮುಖ್ಯವಾಗುತ್ತದೆ. ಅಸಹನೆಯ ಸ್ವಭಾವವನ್ನು ಹೊಂದಿರುವ ಕಾರಣ ಕೆಲಸದಲ್ಲಿ ಬಹು ಹೊತ್ತು ತಮ್ಮನ್ನು ತೊಡಗಿಸಿಕೊಳ್ಳಲು ಇವರಿಗೆ ಆಗುವುದಿಲ್ಲ. ಕೆಲಸದ ವಿಷಯದಲ್ಲಿ ಸದಾ ಕ್ರಿಯಾಶೀಲರಾಗಿರಲು ಅವಶ್ಯವಾದ ಜರ್ಕ್ ಬೇಕಾಗುತ್ತಿರುತ್ತದೆ. ಈ ಸಂಖ್ಯೆಯವರು ಉತ್ತಮ ಸಂವಹನಾಶೀಲರು. ಉತ್ತಮ ಸಂವಹನಾ ಗುಣದಿಂದಾಗಿ ಸೇಲ್ಸ್ (ಮಾರಾಟ) ವಿಭಾಗದಲ್ಲಿ ಕೆಲಸ ಮಾಡಲು ಸೂಕ್ತರಾಗಿದ್ದಾರೆ. ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು ಅವರ ಮನ ಒಲಿಸಬೇಕು ಎಂಬ ಸಂಗತಿ ಇವರಿಗೆ ಚೆನ್ನಾಗಿ ಗೊತ್ತು. ಸಕಾರಾತ್ಮಕ ಗುಣ : ಉತ್ತಮ ಸಂವಹನ ಕೌಶಲ್ಯದವರು, ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಚೆನ್ನಾಗಿದೆ. ನಕಾರಾತ್ಮಕ ಗುಣ : ಹಠಾತ್ ಪ್ರವೃತ್ತಿಯವರು, ಶೀಘ್ರವಾಗಿ ಖಿನ್ನರಾಗುತ್ತಾರೆ. ಪ್ರಸಿದ್ಧ ವ್ಯಕ್ತಿಗಳು : ಮಾರ್ಕ್ ಜ್ಯೂಕ್‌ರ್ಬರ್ಗ್, ಆಮೀರ್ ಖಾನ್, ವಿರಾಟ್ ಕೊಹ್ಲಿ ಜನ್ಮ ದಿನಾಂಕ 6, 15, 24: ಸಂಖ್ಯೆ ಆರರಲ್ಲಿ ಜನ್ಮ ತಾಳಿದವರದು ಆಕರ್ಷಕ ವ್ಯಕ್ತಿತ್ವ. ವೃತ್ತಿಯಲ್ಲಿ ಮುನ್ನಡೆಯುತ್ತಾರೆ. ಪ್ರಚಾರ ಪ್ರಿಯರು. ಹೋಟೆಲ್ ಅಥವಾ ರೆಸ್ಟೋರೆಂಟ್, ಐಷಾರಾಮಿ ಉತ್ಪನ್ನಗಳು ಅಥವಾ ಯಾವುದೇ ರೀತಿಯ ವ್ಯಾಪಾರ ಕ್ಷೇತ್ರಗಳು ಉತ್ತಮ ಆಯ್ಕೆಯಾಗುತ್ತದೆ. ಆ ಕ್ಷೇತ್ರಗಳಲ್ಲಿ ಹೆಸರನ್ನು ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಸಕಾರಾತ್ಮಕ ಗುಣ : ಮನರಂಜಿಸುವುದು, ಅದೃಷ್ಟವಂತರು, ಆಕರ್ಷಕ ವ್ಯಕ್ತಿತ್ವ ನಕಾರಾತ್ಮಕ ಗುಣ : ಆಲಸ್ಯ, ರಸಿಕತೆ ಪ್ರಸಿದ್ಧ ವ್ಯಕ್ತಿಗಳು : ಸಚಿನ್ ತೆಂಡುಲ್ಕರ್, ಅನಿಲ್ ಕಪೂರ್, ಅಜೀಮ್ ಪ್ರೇಮ್‌ಜಿ, ಎಲ್.ಎನ್.ಮಿತ್ತಲ್ ಜನ್ಮ ದಿನಾಂಕ 7, 16, 25: ಸಂಖ್ಯೆ ಏಳರಲ್ಲಿ ಜನ್ಮ ತಾಳಿದವರಲ್ಲಿ ವಿಶ್ಲೇಷಣಾತ್ಮಕ ಗುಣ ಮೇಳೈಸಿರುತ್ತದೆ. ಚತುರಮತಿಗಳು, ಕುಶಲಿಗಳು ಆಗಿರುತ್ತಾರೆ. ಸಂಶೋಧನಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸುತ್ತಾರೆ. ಸ್ವಭಾವತಃ ಸೃಜನಶೀಲರು. ವಿದೇಶ ಸಂಚಾರ ಯೋಗ, ಅನ್ಯ ರಾಷ್ಟ್ರಗಳಲ್ಲಿ ತಮ್ಮದೇ ಉದ್ದಿಮೆ ಸ್ಥಾಪಿಸುವಷ್ಟು ಸಾಮರ್ಥ್ಯ ಹೊಂದಿದವರು. ಈ ನಿಟ್ಟಿನಲ್ಲಿ ದೈವಾನುಕೂಲವೂ ಇವರೊಂದಿಗೆ ಇದೆ. ಹಾಗಾಗಿ ವಿದೇಶೀ ಸಂಸ್ಥೆಗಳಲ್ಲಿ ಕೆಲಸ ಮಾಡುವುದು ಉತ್ತಮ ಆಯ್ಕೆಯಾಗುತ್ತದೆ. ಸಕಾರಾತ್ಮಕ ಗುಣ : ವಿದ್ವಾಂಸರು, ಕ್ರಿಯೇಟಿವ್, ಸಾಮರ್ಥ್ಯ ಮೀರಿ ಯೋಚಿಸಬಲ್ಲವರು ನಕಾರಾತ್ಮಕ ಗುಣ : ಖಿನ್ನತೆಯ ಪ್ರವೃತ್ತಿ, ನಿರ್ವಹಣೆಯ ಕೊರತೆ ಪ್ರಸಿದ್ಧ ವ್ಯಕ್ತಿಗಳು : ಸೈಫ್ ಅಲಿ ಖಾನ್, ಮಹೇಂದ್ರ ಸಿಂಗ್ ಧೋನಿ ಜನ್ಮ ದಿನಾಂಕ 8, 17, 26: ಸಂಖ್ಯೆ ಎಂಟರಲ್ಲಿ ಜನ್ಮ ತಾಳಿದವರು ಸ್ವಲ್ಪ ಮಟ್ಟಿಗೆ ಅದೃಷ್ಟವಂತರು. ಆದರೆ ಮೂವತ್ತೈದನೇ ವಯಸ್ಸಿನ ನಂತರ ಇವರಿಗೆ ದೈವ ಸಹಾಯ ತಾನಾಗಿಯೇ ಒದಗಿ ಬರುತ್ತದೆ. ಇವರು ಸ್ವಭಾವತಃ ಸರಳ ಸ್ವಭಾವದವರು. ಆದರೆ ಅಷ್ಟೇ ನಿಷ್ಠುರ ವಾದಿಗಳು. ಇದ್ದುದನ್ನು ಇದ್ದ ಹಾಗೇ ಹಿಂದೆ ಮುಂದೆ ಯೋಚಿಸದೇ ಹೇಳುವುದು ಇವರ ಸ್ವಭಾವ. ಕಷ್ಟ ಸಹಿಷ್ಣುಗಳು. ಈ ಸಂಖ್ಯೆಯಲ್ಲಿ ಜನ್ಮ ತಾಳಿದವರು ಮೆಟಲ್ ಅಥವಾ ರಿಯಲ್ ಎಸ್ಟೇಟ್ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಕಂಪನಿಗಳಲ್ಲಿ ಕೆಲಸ ಮಾಡುವವರಾದರೆ ಲೆಕ್ಕ ಮತ್ತು ಮಾನವ ಸಂಪನ್ಮೂಲ ವಿಭಾಗ ಇವರಿಗೆ ಸೂಕ್ತ. ಸಕಾರಾತ್ಮಕ ಗುಣ : ಶ್ರಮಪಟ್ಟು ದುಡಿಯುವ ಗುಣ, ವಿಶ್ವಾಸಕ್ಕೆ ಪಾತ್ರರು. ನಕಾರಾತ್ಮಕ ಗುಣ : ನಿಷ್ಠುರ ಸ್ವಭಾವದ ಕಾರಣ ಜನರ ಪ್ರತಿರೋಧ ಎದುರಿಸಬೇಕಾಗಬಹುದು. ಪ್ರಸಿದ್ಧ ವ್ಯಕ್ತಿಗಳು : ನರೇಂದ್ರ ಮೋದಿ, ಮನಮೋಹನ್ ಸಿಂಗ್ ಜನ್ಮ ದಿನಾಂಕ 9, 18, 27: ಸಂಖ್ಯೆ ಒಂಬತ್ತರಲ್ಲಿ ಜನ್ಮ ತಾಳಿದವರಲ್ಲಿ ಅಪಾರ ಸಾಮರ್ಥ್ಯ ಸ್ವಭಾವತಃ ಮೈಗೂಡಿದೆ. ಉತ್ತಮ ದೈಹಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹಾಗಾಗಿ ಕ್ರೀಡಾ ಕ್ಷೇತ್ರ ಇವರ ಅತ್ಯುತ್ತಮ ಆಯ್ಕೆಯಾಗುತ್ತದೆ. ಕ್ರೀಡಾಪಟುಗಳಾಗಿ ಹೆಸರು ಗಳಿಸುತ್ತಾರೆ. ಬಹುತೇಕ ಕ್ರೀಡಾಪಟುಗಳ ಜನ್ಮ ಸಂಖ್ಯೆಯೂ ಒಂಬತ್ತೇ ಆಗಿದೆ. ಉದ್ಯಮ ಕ್ಷೇತ್ರ ನಿಮ್ಮ ಆಯ್ಕೆಯಾಗಿದ್ದರೆ ರಿಯಲ್ ಎಸ್ಟೇಟ್ ಉದ್ಯಮ ಸೂಕ್ತವಾಗಿದೆ. ಈ ಸಂಖ್ಯೆಯಲ್ಲಿ ಜನಿಸಿದವರು ಸ್ವಭಾವತಃ ಸಾಹಸಿಗರು, ಧೈರ್ಯವಂತರು. ಯಾವುದೇ ಕ್ಷೇತ್ರದಲ್ಲೂ ಮುನ್ನುಗ್ಗುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಸಂಖ್ಯೆಯ ಅಧಿಪತಿ ಮಂಗಳ ಅಥವಾ ಕುಜನಾಗಿದ್ದಾನೆ. ಕುಜನ ಬಣ್ಣ ಕೆಂಪು. ತಾಪಮಾನವೂ ಹೆಚ್ಚು. ಹಾಗಾಗಿ ಈ ಸಂಖ್ಯೆಯುಳ್ಳವರಲ್ಲಿ ತೀಕ್ಷ್ಣವಾದ ಗುಣವನ್ನು ಕಾಣಬಹುದು. ಸಕಾರಾತ್ಮಕ ಗುಣ : ಶಕ್ತಿವಂತರು, ಹುಟ್ಟು ಹೋರಾಟಗಾರರು, ಶ್ರಮಪಟ್ಟು ದುಡಿಮೆಯುವವರು ನಕಾರಾತ್ಮಕ ಗುಣ : ಮುಂಗೋಪಿಗಳು, ಜಗಳಗಂಟರು ಪ್ರಸಿದ್ಧ ವ್ಯಕ್ತಿಗಳು : ಮೈಕಲ್ ಫಿಲಿಪ್ಸ್, ಮಹೇಲ ಜಯವರ್ಧನ, ಟಾಮ್ ಕ್ರೂಸ್.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...