Skip to main content

ನವಗ್ರಹ ದೋಷ ನಿವಾರಣೆಗಾಗಿ ಔಷಧೀಯ ಸ್ನಾನ

ಓಂ ಆರೋಗ್ಯಂ ಪ್ರದದಾತುನೋ ದಿನಕರಃ|| ಚಂದ್ರೋ ಯಶೋ ನಿರ್ಮಲಂ| ಭೂತಿಂಭೂಮಿಸುತಃ|| ಸುಧಾಂಶುತನಯೋ ಪ್ರಜ್ಞಾಂ|ಗುರುಗೌರವಂ|| ಕಾವ್ಯ ಕೋಮಲವಾಗ್ವಿಲಾಸಮತುಲಂ|| ಮಂದೋ ಮುದಂ ಸರ್ವದಾ|ರಾಹುರ್ಬಾಹು ಬಲಂ ಕರೋತು ವಿರೋದ ಶಮನಂ| ಕೇತುಂ ಕುಲಸ್ಯೋನ್ನತಿ ಕುರು ಸರ್ವದಾ|| ನವಗ್ರಹ ದೋಷ ನಿವಾರಣೆಗಾಗಿ ಔಷಧೀಯ ಸ್ನಾನ ಸಾಮಾನ್ಯವಾಗಿ ನವಗ್ರಹಗಳ ಕಾಟದಿಂದ ಮುಕ್ತಿ ಪಡೆದ ವ್ಯಕ್ತಿಗಳು ಇಲ್ಲವೆಂದೇ ಹೇಳಬಹುದು.ಹೀಗಿದ್ದಾಗ್ಯು ಪ್ರಾಪ್ತ ಸಮಯಗಳಲ್ಲಿ ಕೈಗೊಳ್ಳಬಹುದಾದಂತಹ ಕೆಲವು ಉತ್ತಮ ಪರಿಹಾರಗಳು ಈ ನವಗ್ರಹ ದೋಷನಿವಾರಣೆಯಲ್ಲಿ ಪಾತ್ರ ವಹಿಸುತ್ತವೆ. ಹಾಗಿದ್ದರೆ ನವಗ್ರಹ ದೋಷನಿವಾರಣೆಗೆ ಮಾಡ ಬಹುದಾದ ಆರೋಗ್ಯಕರ ಔಷಧೀಯ ಸ್ನಾನದ ಬಗ್ಗೆ ವಿವರವಾಗಿ ತಿಳಿಯೋಣ ಪ್ರಾಚೀನ ಗ್ರಂಥಗಳಲ್ಲಿ ತಿಳಿಸಿರುವಂತೆ ಸ್ನಾನ ಮಾಡುವಲ್ಲಿ ಏಳು ಕ್ರಮಗಳಿವೆ. ೧.ಮಂತ್ರಗಳ ಜಪ ಮಾಡುತ್ತಾ ಕೈಗೊಳ್ಳುವದನ್ನು ಮಂತಸ್ನಾನ ಎನ್ನುವರು. ೨.ಮೃತ್ತಿಕೆ(ವಿಶೇಷ ಪ್ರಕಾರದ ಮಣ್ಣು) ಮೆತ್ತಿಕೊಂಡು ಸ್ನಾನ ಮಾಡುವುದನ್ನು ಬೌಮ ಸ್ನಾನ ಎನ್ನುವರು. ೩.ವಿಭೂತಿಯನ್ನು ದೇಹಕ್ಕೆಲ್ಲಾ ಬಳಿದುಕೊಂಡು ಸ್ನಾನ ಮಾಡುವುದನ್ನು ಭಸ್ಮ ಸ್ನಾನ ಅಥವ ಅಗ್ನಿಸ್ನಾನ ಎನ್ನುವರು. ೪.ಹಸುವಿನ ದೂಳನ್ನು ಮೆತ್ತಿಕೊಂದು ಸ್ನಾನ ಮಾಡುವುದನ್ನು ವಾಯವ್ಯ ಸ್ನಾನ ಎನ್ನುವರು. ೫.ಸೂರ್ಯ ಕಿರಣಗಳು ಪ್ರಖರವಾಗಿ ಇದಾಗ ಈ ಮೊದಲೇ ಸಂಗ್ರಹಿಸಿಟ್ಟುಕೊಂಡಿರ ತಕ್ಕ ಮಳೆಯ ನೀರಿನಲ್ಲಿ ಸ್ನಾನ ಮಾಡುವುದನ್ನು ದಿವ್ಯಸ್ನಾನ ಎನ್ನುವರು. ೬.ಪವಿತ್ರವಾದ ನದಿಗಳಲ್ಲಿ ಮುಳುಗಿ ಸ್ನಾನ ಮಾಡುವುದನ್ನು ವರುಣ ಸ್ನಾನ ಎನ್ನುವರು. ೭. ಮಂಗಳಕರ ಸಮಾರಂಭಗಳಲ್ಲಿ ಹಬ್ಬ-ಹರಿದಿನಗಳಲ್ಲಿ ನಿಶ್ಚಿತ ಕ್ರಮದಲ್ಲಿ ಸ್ನಾನ ಮಾಡುವುದನ್ನು ಮಂಗಳಸ್ನಾನ ಎಂದು ಹೇಳಲಾಗುವುದು. ಹೀಗೆ ಒಟ್ಟಾರೆ ಏಳು ರೀತಿಯ ಸ್ನಾನಗಳಿವೆ ಇವುಗಳನ್ನು ಮಾಡುವುದರಿಂದ ದೇಹಶುದ್ದಿಯಾಗುತ್ತದೆ,ಪಾಪ ನಾಶವಾಗುತ್ತದೆ,ಪುಣ್ಯಲಭಿಸುತ್ತದೆ. ವಿಶೇಷವಾಗಿ ದೀಪಾವಳಿಯ ಸಂದರ್ಭದಲ್ಲಿ ಈ ಏಳು ರೀತಿಯ ಸ್ನಾನ ಮಾಡುವುದರಿಂದ ಆಗ ನವಗ್ರಹ ದೋಷಗಳೆಲ್ಲಾ ಸಾಕಷ್ಟು ಮಟ್ಟಿಗೆ ಪರಿಹಾರಗೊಳ್ಳುವವು ಮತ್ತು ಜಾತಕರು ತಮ್ಮನ್ನು ತಾವು ಸಂಮೃದ್ದಿಶಾಲಿಗಳಾಗಿ ಮಾಡಿಕೊಳ್ಳುತ್ತಾರೆ,ಆರೋಗ್ಯವಂತರು,ಹಾಗು ಪವಿತ್ರರಾಗಿ ಮಾಡಿಕೊಳ್ಳಬಲ್ಲರು. ದೀಪಾವಳಿಯ ಹಬ್ಬದಲ್ಲಿ ಪ್ರಾತಃಕಾಲದಲ್ಲಿ ಎದ್ದು ತೈಲಸ್ನಾನ ಮಾಡುವ ಅಭ್ಯಾಸವನ್ನು ಮುಂಚಿನಿಂದಲು ನಮ್ಮ ಪೂರ್ವಜರು ಅಳವಡಿಸಿಕೊಂಡು ಬಂದಿರುವರು. ದೇಹಕ್ಕೆಲ್ಲಾ ಎಣ್ಣೆ ಬಳಿದುಕೊಂಡು ಎಣ್ಣೆ ಸ್ನಾನ ಮಾಡಿಸಲಾಗುತಿತ್ತು. ಹೀಗೆ ಮಾಡಿದರೆ ಧನ-ಐಶ್ವರ್ಯಗಳ ಪ್ರಾಪ್ತಿಯಾಗುವುದೆಂಬ ನಂಬಿಕೆ ಇದೆ. ಇದೇ ಪ್ರಕಾರವಾಗಿ ಚತುರ್ಧಶಿಯಂದು ನರಕ ಪ್ರಾಪ್ತಿಯಿಂದ ಪಾರಾಗಲು ತೈಲಸ್ನಾನ ಮಾಡುವ ಕ್ರಮವಿದೆ. ಸ್ನಾನದ ಬಳಿಕ ಎಡಗೈ ಹಿಂಬಾಗದಿಂದ ಇಡೀ ಶರೀರವನ್ನು ನೀವಳಿಸಿದರೆ ಸಮಸ್ತ ಕಷ್ಟಗಳು ಕೊನೆಗೊಳ್ಳುವದೆಂಬ ಬಂಬಿಕೆ ಇರುವುದು. ನವಗ್ರಹ ದೋಷಗಳಿಂದ ಪಾರಾಗಲು ಹೀಗೆ ಸ್ನಾನ ಮಾಡಬೇಕು,ಗ್ರಹಗಲ ಪ್ರಕಾರ ಯಾವ್ಯಾವಔಷಧಿಗಳೆಂದು ನಿಯುಕ್ತಿ ಗೊಂಡಿರುವವೋ ಅವುಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಪುಡಿಮಾಡಿಟ್ಟುಕೊಳ್ಳಬೇಕು ಇವನ್ನು ಅಂದಾಜು ೨ಲೀಟರ್ ನೀರಿನಲ್ಲಿ ೨೪ ಗಂಟೆಗಳಷ್ಟು ಮುಳುಗಿಸಿಡಬೇಕು.ಯಾವಾಗ ಈ ಔಷಧಿಗಳ ಸತ್ವವು ನೀರಿನಲ್ಲಿ ಸೇರಿಕೊಂಡು ಬಿಡುಬುದೋ ಆಗ ಆ ನೀರನ್ನು ಚೆನ್ನಾಗಿ ಶೋಧಿಸಿ ಒಂದು ಪಾತ್ರೆ ಅಥವ ಬಾಟಲಿನಲ್ಲಿ ತುಂಬಿಸಿಟ್ಟುಕೊಳ್ಳಬೇಕು.ಉಳಿದ ಗಸಿಯನ್ನು ಎಸೆದುಬಿಡಬೇಕು. ನಂತರ ಬಾಟಲಿನಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಔಷಧೀಯ ಸತ್ವವುಳ್ಳ ನೀರನ್ನು ಒಂದು ಬಕೇಟ್ ಸ್ನಾನದ ನೀರಿಗೆ ಒಂದು ಲೋಟ ಸೇರಿಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಎಂತಹ ರೋಗಿಗೇ ಆಗಲಿ ಲಾಭವಾಗುವುದು ಅಂದರೆ ರೋಗ ಗುಣವಾಗುವುದು.ಈ ಪ್ರಯೋಗವನ್ನು ಕನಿಷ್ಟಪಕ್ಷ೪೦ ದಿನಗಳ ಕಾಲ ಸತತವಾಗಿ ಮಾಡಬೇಕು. ತುಂಬಾ ಹಳೆಯ ರೋಗವಾದಲ್ಲಿ ಹಾಗು ಔಷಧೀಯ ಸ್ನಾನದಿಂದ ಗುಣಕಂಡು ಬಂದಲ್ಲಿ ಆಗ ಇದನ್ನು ಹಾಗೇ ಸಂಪೂರ್ಣ ಗುಣವಾಗುವವರೆಗು ಮುಂದುವರೆಸಬಹುದು. ಅನುಭವದಿಂದ ತಿಳಿದು ಬಂದಿರುವುದೇನೆಂದರೆ ನಿದಾನವಾಗಿ ಗುಣಾವಾದರೆ ಈ ಪ್ರಯೋಗದಿಂದ ಲಾಭವಿದೆ ಇದೇ ವೇಳೆ ವೈದ್ಯರ ಔಷಧಿ ತಗೆದುಕೊಳ್ಳುತ್ತಿದ್ದರೆ ನಿಲ್ಲಿಸದೆ ಮುಂದುವರೆಸಬೇಕು.ಒಂದು ವೇಳೆ ವೈದ್ಯರು ಸ್ನಾನ ನಿಷೇಧ ಮಾಡಿದಲ್ಲಿ ಆಗ ಈ ಔಷಧೀಯ ಜಲವನ್ನು ರೋಗಿಯ ದೇಹದಮೇಲೆ ಪ್ರೋಕ್ಷಿಸಿ( ಸಿಂಪಡಿಸಿ,ಚುಮುಕಿಸಿ) ತೇವಗೊಂಡ ಬಟ್ಟೆಯಿಂದ ಸ್ವಚ್ಚಗೊಳಿಸಬೇಕು. ನವಗ್ರಹಗಳ ಔಷಧೀಯ ಮೂಲಿಕೆಗಳು. ಸೂರ್ಯ:- ಏಲಕ್ಕಿ,ದೇವದಾರು ವೃಕ್ಷದ ತೊಗಟೆ ಇಲ್ಲವೇ ಬೇರು,ಗಸಗಸೆ,ಕೇಸರಿ,ಕೆಂಪುಹೂವು,ಕೆಂಪು ಕಣಗಲೆ. ಚಂದ್ರ:- ಶಂಖ,ಶ್ವೇತ ಚಂದನ,ಪಂಚಗವ್ಯ,ಸೀಫಿ,ಸಂಪಿಗೆ ಮರದ ತೊಗಟೆಯ ಪುಡಿ ಒಂದು ತೊಲೆ ಶಂಖವನ್ನು ಹಾಗು ಸಂಗಮರದ ಕಲ್ಲನ್ನು ಶ್ವೇತ ಚಹ್ಂದನವನ್ನು ಸೀಪಿಯನ್ನು ನೀರಿನಲ್ಲಿ ಮುಳುಗಿಸಿ ತೇಯ್ದ ಲೇಪನವನ್ನು ಸಿದ್ದಗೊಳಿಸಲಾಗುವುದು.ಗಜಮದ ಎಂದರೆ ಆನೆಯ ಕೊಬ್ಬು ಇದು ಸರಿಯಾಗಿ ಬೆರೆತರೆ ಒಳ್ಳೆಯದು.ಇಲ್ಲವೇ ಇದನ್ನು ವರ್ಜಿಸಬೇಕು,ಪಂಚಗವ್ಯ ಎಂದರೆ ಹಸುವಿನ ತುಪ್ಪ,ಹಾಲು,ಮೊಸರು,ಸಗಣಿ ಮತ್ತು ಗಂಜಲ(ಮೂತ್ರ) ಇವೆಲ್ಲವನ್ನೂ ಒಟ್ಟಿಗೇ ಬೆರೆಸಬೇಕು. ಮಂಗಳ/ಕುಜ:- ಬಿಲ್ವ ವೃಕ್ಷದತೊಗಟೆ,ಕೆಂಪು ಚಂದನದ ಚೂರ್ಣ,ಕೆಂಪು ಹೂವು,ಸಿಂಗಾರದ ಸಾಧನ ಕಪ್ಪು,ಒಂದು ಹೂವು(ದಾರದಂತಹುದು)ಬಳೆ, ಇವೆಲ್ಲವನ್ನೂ ತಲಾ ಒಂದೊಂದು ತೊಲ,ಕೆಂಪು ಚಂದನ ೫ ತೊಲಗಳಷ್ಟು ತಗೆದುಕೊಳ್ಳಬೇಕು. ಬುಧ:- ಹಸುವಿನ ಸಗಣಿ,ಅಕ್ಕಿ,ಅಮಟೇಕಾಯಿ,ಗೋರೋಜನ(ಒಂದಿಷ್ಟು)ಜೇನುತುಪ್ಪ,ಮುತ್ತು,ಹಾಗು ಚಿನ್ನಾಭರ‍್ರಣಗಳು.ಮುತ್ತು ಮತ್ತು ಚಿನ್ನಾಭರಣಗಳನ್ನು ಸ್ನಾನ ಮಾಡಿದ ನಂತರ ಹೊರತಗೆದು ಶುಭ್ರಗೊಳಿಸಿ ಜೋಪಾನವಾಗಿ ಇಟ್ಟುಕೊಳ್ಳತಕ್ಕದ್ದು ಎಸೆಯಬಾರದು.ಈ ಎಲ್ಲಾ ಸಾಮಗ್ರಿಗಳನ್ನು ಸಮಪ್ರಮಾಣದಲ್ಲಿ ಪಡೇದರೂ,ಅಮಟೇಕಾಯಿಯನ್ನು ಮಾತ್ರ ಕೊಂಚ ಹೆಚ್ಚಾಗಿ ತೆಗೆದುಕೊಳ್ಳಬೇಕು. ಬೃಹಸ್ಪತಿ/ ಗುರು:- ಶ್ವೇತ ಪುಷ್ಪ,ಬಿಳಿ ಸಾಸಿವೆ,ಹಳದಿ ಸಾಸಿವೆಯನ್ನು ಕೂಡ ಬಳಸಬಹುದು,ಮುಲೇಟಿ,ಜೇನುತುಪ್ಪ ಹಾಗು ವಿಶೇಷವಾಗಿ ಶ್ವೇತಪುಷ್ಪದ ಬಳ್ಳಿ. ಶುಕ್ರ:- ಏಲಕ್ಕಿ,ಮೈನ್ಸಿಲ್,ಕೇಸರಿ ಹಾಗು ಯಾವುದೇ ಸುಗಂಧ ಭರಿತ ವೃಕ್ಷದ ಇಲ್ಲವೇ ಲತೆಯ(ಬಳ್ಳಿ) ಬೇರು. ಶನಿ/ ಮಂದ:- ಕಪ್ಪು ಎಳ್ಳು,ಕಣ್ಣುಕಪ್ಪು,(ಕಾಡಿಗೆ)ಅಂಜನ,ಲೋಬಾನ(ಸಾಂಬ್ರಾಣಿ),ಕುಟ್ಟಿ ಪುಡಿಮಾಡಿದ ಸೋಂಪು,ಶಮಿವೃಕ್ಷದ(ಬನ್ನಿ ಮರದ)ಕಡ್ಡಿಯ ತೊಗಟೆ ರಾಹು:-ಸಾಂಬ್ರಾಣಿ,ಎಳ್ಳುಗಿಡದ ಎಲೆಗಳು,ಕಸ್ತೂರಿ,ಆನೆಯ ದಂತವನ್ನು ಪುಡಿಮಾಡಿ ಅದರ ಕೊಂಚಭಾಗವನ್ನು ಲೋಬಾನ(ಸಾಂಬ್ರಾಣಿ)ದೊಂದಿಗೆ ಬೆರೆಸಿ ಉಪಯೋಗಿಸಬೇಕು. ಕೇತು/ಶಿಖಿ:- ಲೋಬಾನ(ಸಾಂಬ್ರಾಣಿ),ಆನೆಯ ದಂತ,ಎಳ್ಳಿನ ಎಲೆಗಳು,ಕುರಿಯ ಮೂತ್ರ ಒಂದಿಷ್ಟು. ಮೇಲೆ ತಿಳಿಸಿಹ ಔಷಧಿಗಳ ಪ್ರಮಾಣದಲ್ಲಿ ಯಾವುದೇರೀತಿಯ ನಿಯಮಗಳಿಲ್ಲ.ದುಬಾರಿ ವಸ್ತುಗಳನ್ನು ಕಡಿಮೆ ಪ್ರಮಾಣದಲ್ಲಿಯು ತಗೆದುಕೊಳ್ಲಬಹುದು.ಕೇಸರಿ,ಕಸ್ತೂರಿ,ಗೋರೋಜನ ಮೊದಲಾದವುಗಳನ್ನು ಕೊಂಚ ಕೊಂಚವೇ ತೆಗೆದುಕೊಳ್ಳಬೇಕು.ಗಟ್ಟಿವಸ್ತುಗಳನ್ನು ಪುಡಿಮಾಡಿಟ್ಟುಕೊಳ್ಳಬೇಕು.ಒಂದು ವೇಳೆ ಮೇಲೆ ತಿಳಿಸಿರುವ ವಸ್ತುಗಳಲ್ಲಿ ಕೆಲವು ದೊರೆಯದೇ ಇದ್ದರೂ ಚಿಂತೆಇಲ್ಲ.ಯಾವುದು ದೊರೆಯುವುದೋ ಅವುಗಳನ್ನೇ ಬಳಸಿ ಸ್ನಾನ ಮಾಡಬೇಕು. ದೀಪಾವಳಿಯ ಶುಭ ಸಂದರ್ಭದಲ್ಲಿ ಇಂತಹ ಸ್ನಾನ ಮಾಡಿದಲ್ಲಿ ಆಗ ಲಕ್ಷ್ಮಿದೇವಿಯ ಕೃಪೆಗೂ ಪಾತ್ರರಾಗಬಹುದು. ೧.ದೀಪಾವಳಿಯ ಶುಭ ಸಂದರ್ಭದಲ್ಲಿ ಸ್ವಾತಿ ನಕ್ಷತ್ರದ ಸುಯೋಗದಲ್ಲಿ ಬಾಳೇಮರ,ಹೊಂಬಾಳೆಗಿಡ,ಅಶ್ವತ್ಥವೃಕ್ಷ,ಮಾವಿನಮರ ಮತ್ತು ನಿಂಬೇಮರಗಳ ತೊಗಟೆಗಳನ್ನು ನೀರಿನಲ್ಲಿ ಕುದಿಸಿ ನಂತರ ಸ್ನಾನ ಮಾಡುವುದರಿಂದಾಗಿ ಲಕ್ಷ್ಮಿದೇವಿಯು ಮನೆಯಲ್ಲಿ ಸ್ಥಿರವಾಗಿ ನೆಲೆಸುವಳು. ೨.ದೀಪಾವಳಿಯ ಪ್ರಾತಃಕಾಲದಲ್ಲಿ ಸೂರ್ಯೋದಯಕ್ಕೂ ಮೊದಲು ಅಭ್ಯಂಜನ ಸ್ನಾನ(ಎಣ್ಣೆ ನೀರು) ಮಾಡುವುದರಿಂದಾಗಿದಾರಿದ್ಯ ನಾಶವಾಗುವುದು. ೩.ಹಸುವಿನ ಸಗಣಿ(ಗೊಬ್ಬರ)ಯ ಪವಿತ್ರ ಜಲದಿಂದ ಸ್ಪರ್ಷ.ಪ್ರೋಕ್ಷಣೆ ಮಾಡಿಕೊಂಡು ಸ್ನಾನ ಮಾಡಿದಲ್ಲಿ ಧನಾಭಿವೃದ್ದಿಯಾಗಿಲಕ್ಷ್ಮಿಕಟಾಕ್ಷದೊರೆಯುವುದು. ೪.ದುಗ್ದ ಸ್ನಾನ(ಹಾಲಿನ ಸ್ನಾನ) ಮಾಡುವುದರಿಂದಾಗಿ ಶಕ್ತಿ ಹಾಗು ಬಲಗಳು ಪ್ರಾಪ್ತವಾಗುವವು. ೫.ರತ್ನ ಸ್ನಾನದಿಂದಾಗಿ ಆಭೂಷಣಗಳ(ಆಭರಣಗಳ,ವಸ್ತ್ರ)ಪ್ರಾಪ್ತಿಯುಂಟಾಗುವುದು. ೬.ಎಳ್ಳಿನ ಸ್ನಾನದಿಂದಾಗಿ ಲಕ್ಷ್ಮಿಪ್ರಾಪ್ತಿ ಉಂಟಾಗಬಲ್ಲದು. ೭.ಧಾತು ಫಲಸ್ನಾನದಿಂದಾಗಿ ಲಕ್ಷ್ಮಿಕಟಾಕ್ಷದೊರೆಯುವುದು. ೮.ಮೊಸರಿನ ಸ್ನಾನದಿಂದಾಗಿ ಸಂಪತ್ತುಗಳೆಲ್ಲವು ಹೆಚ್ಚಾಗುವುದು. ೯.ತುಪ್ಪದ ಸ್ನಾನದಿಂದಾಗಿ ಆಯುರ್ ಆರೋಗ್ಯ-ಐಷ್ವರ್ಯಗಳೇ ಪ್ರಾಪ್ತಿಯಾಗುವವು. ೧೦.ಶತಮೂಲ ಇಲ್ಲವೆ ಶತಾವರೀ ಬೇರುಗಳಿಂದ ಸಿದ್ದಗೊಳಿಸಿದ ಜಲದಿಂದ ಸ್ನಾನ ಮಾಡುವುದರಿಂದ ಮನೋಕಾಮನೆಗಳು ಈಡೇರುವವು. ೧೧.ಪಲಾಶ(ಮುತ್ತುಗ),ಬಿಲ್ವಪತ್ರೆ,ಕಮಲ ಹಾಗು ದರ್ಭೆಗಳಿಂದ ಸಿದ್ದಗೊಳಿಸಿಹ ಜಲದಿಂದ ಸ್ನಾನ ಮಾಡುವುದು ಲಕ್ಷ್ಮಿ ಪ್ರಾಪ್ತಿಗೆ ಖಚಿತವಾದ ಸಾಧನೆಯಾಗಿರುವುದು. ಮೇಲೆ ತಿಳಿಸಿದ ವಿಭಿನ್ನ ಪ್ರಕಾರದ ಸ್ನಾನಗಳಿಂದಾಗಿ ಸುಖ-ಸಂಮೃದ್ದಿ ಆಯುರಾರೋಗ್ಯ-ಐಶ್ವರ್ಯಗಳನ್ನೆಲ್ಲಾ ಪಡೆಯ ಬಹುದು. ವಾಚಕರೇ ನಿಮಗೆ ಬೇಕಾದ ಸುಖಗಳೆಲ್ಲವು ಕೆಲವು ವಿಶೇಷ ಸ್ನಾನಗಳಲ್ಲೇ ಅಡಗಿದೆಯೆಂದರೆ ಅದ್ಬುತ ತಾನೆ? ಈಗಲೇ ಇಂತಹ ಔಷಧಿಯ ಸ್ನಾನಗಳನ್ನು ಮಾಡಲು ಪ್ರಾರಂಭಿಸಿ ಬಿಡಿ. ಎಲ್ಲಾ ವಸ್ತುಗಳನ್ನು ತಗೆದುಕೊಂಡು ಗಟ್ಟಿಯಾಗಿರುವ ವಸ್ತುಗಳನ್ನು ಕುಟ್ಟಿ ಪುಡಿಮಾಡಿಕೊಂಡು ಎರಡು ಲೀಟರ್ ನೀರಿಗೆ ಎಲ್ಲವನ್ನು ಹಾಕಿ ಮುಚ್ಚಿಟ್ಟು ೨೪ ಗಂಟೆಯ ನಂತರ ಗಿಡಮೂಲಿಕೆಯ ಸಾರವು ನೀರಿಗೆ ಬಿಟ್ಟುಕೊಂಡಿರುತ್ತದೆ ಅದನ್ನು ಶೋಧಿಸಿಕೊಂಡು ಒಂದು ಬಾಟಲ್ ಅಥವ ಮುಚ್ಚಳ ವಿರುವ ಮಡಿಕೆ ಅಥವ ಗಡಿಗೆಯಲ್ಲಿ ಇಟ್ಟುಕೊಂಡು ನಿತ್ಯ ಸ್ನಾನಕ್ಕೆ ಒಂದು ಬಕೇಟ್ ನೀರಿಗೆ ಒಂದು ಲೋಟ ಈ ಶೋಧಿಸಿದ ಔಷಧೀಯ ಮೂಲಿಕೆಯ ರಸವನ್ನು ಸೇರಿಸಿ ನೀರಿನಲ್ಲಿ ಕೈ ಆಡಿಸುತ್ತಾ ನವಗ್ರಹ ಮಂತ್ರವನ್ನು ೨೧ ಸಲ ಅಥವ ೧೧ ಸಲ ಅಥವ ೧೦೮ ಸಲ ಜಪಿಸಿ ನಂತರ ಸ್ನಾನ ಮಾಡುವುದು ಈ ರೀತಿ ಸ್ನಾನ ಮಾಡುವುದರಿಂದ ಯಾವುದೇ ಗ್ರಹದೋಷವಿದ್ದರು ಪರಿಹಾರವಾಗುತ್ತದೆ ಸತತವಾಗಿ ೪೮ ದಿನಗಳು ಮಾಡುವುದು ಅಥವ ನಿತ್ಯ ವು ಮಾಡುವುದರಿಂದ ಜೀವನದಲ್ಲಿ ಬರಬಹುದಾದ ನವಗ್ರಹದೋಷಗಳು ನಿವಾರಣೆಯಾಗುತ್ತವೆ. ಒಂದು ವೇಳೆ ಯಾರಾದರು ಯಾವುದಾದರು ರೋಗದಿಂದ ನರಳುತಿದ್ದರೆ ರೋಗಿಯು ಈ ಸ್ನಾನವನ್ನು ನಿರಂತರವಾಗಿ ಮಾಡಿವುದರಿಂದ ಆತನಿಗಿರುವ ರೋಗವು ನಿದಾನವಾಗಿ ಗುಣವಾಗುತ್ತದೆ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...