ರಕ್ತದಲ್ಲಿ ಸಕ್ಕರೆ ಅಂಶವು ಜಾಸ್ತಿಯಾಗಿ ಮಧುಮೇಹದ ರೂಪದಲ್ಲಿ ಕಾಡುವ ಸಮಸ್ಯೆ ಇನ್ಸುಲಿನ್ ಉತ್ಪತ್ತಿಯ ದೋಷದಿಂದ ಅಥವಾ ಇನ್ಸುಲಿನ್ ಹಾರ್ಮೋನ್ ಶರೀರದಲ್ಲಿ ಸರಿಯಾಗಿ ಕಾರ‌್ಯ ನಿರ್ವಹಿಸದೆ ಇರುವುದರಿಂದ ಉಂಟಾಗುತ್ತದೆ.
ಸಕ್ಕರೆ ಅಂಶವು ರಕ್ತದಲ್ಲಿ ಹೆಚ್ಚಾಗಿ ಕಿಡ್ನಿಯ ಮೂಖಾಂತರ ಮೂತ್ರದಲ್ಲಿ ಸಹ ಕಾಣಿಸುತ್ತದೆ. ಇದನ್ನು ಸಿಹಿಮೂತ್ರ ಅಂತಲೂ ಹೇಳುತ್ತಾರೆ. ಸಹಜವಾಗಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಇನ್ಸುಲಿನ್ ಸಮತೋಲನದಲ್ಲಿಡುತ್ತದೆ. ಇನ್ಸುಲಿನ್ ಅಂದರೆ ದೇಹದಲ್ಲಿರುವ ಪ್ಯಾಂಕ್ರಿಯಾಸ್ ಎನ್ನುವ ಅಂಗದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್.
ಆಹಾರ ಸೇವನೆ ನಂತರ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಪ್ಯಾಂಕ್ರಿಯಾಸ್‌ನಿಂದ ಇನ್ಸುಲಿನ್ ಉತ್ಪತ್ತಿಯಾಗಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ.
ಇನ್ಸುಲಿನ್ ಕೊರತೆ ಅಥವಾ ಇನ್ಸುಲಿನ್ ಉತ್ಪತ್ತಿಯಲ್ಲಿ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚುತ್ತದೆ.
ಮಧುಮೇಹದಲ್ಲಿ ಮೂರು ಮುಖ್ಯವಾದ ವಿಧಗಳಿವೆ. ಅವುಗಳೆಂದರೆ ಟೈಪ್1, ಟೈಪ್2, ಗೆಸ್ಟೇಷನಲ್ ಮಧುಮೇಹ.
ಟೈಪ್1 ಮಧುಮೇಹ- ಶರೀರದ ರೋಗ ನಿರೋಧಕ ಶಕ್ತಿಯು ಶರೀರದ ವಿರುದ್ಧವಾಗಿ ವರ್ತಿಸುವಾಗ ಉಂಟಾಗುವುದು ಆಟೋ ಇಮ್ಯೂನ್ ಕಾಯಿಲೆ. ಟೈಪ್1ಸಹ ಇಂಥದ್ದೇ. ಇದರಲ್ಲಿ ಶರೀರದ ರೋಗ ನಿರೋಧಕ ಶಕ್ತಿಯು ಇನ್ಸುಲಿನ್ ಉತ್ಪತ್ತಿಸುವ ಪ್ಯಾಂಕ್ರಿಯಾಸಿಸ್ ಬೀಟಾ ಕಣಗಳನ್ನು ನಾಶ ಪಡಿಸುತ್ತದೆ. ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಅಥವಾ ಮಧ್ಯವಯಸ್ಕರಲ್ಲಿ ಕಂಡು ಬರುತ್ತದೆ. ಇದರ ಲಕ್ಷಣಗಳೆಂದರೆ ಅತೀಯಾದ ಬಾಯಾರಿಕೆ, ಹಸಿವು, ಆಯಾಸ, ಅತಿಯಾದ ಮೂತ್ರವಿಸರ್ಜನೆ, ತೂಕ ಕಡಿಮೆ, ದೃಷ್ಟಿ ಮಾಂದ್ಯ,ವಾಕರಿಕೆ,ಮುಟ್ಟಿನ ತೊಂದರೆ. ಇದಕ್ಕೆ ಕಾರಣಗಳೆಂದರೆ ವಂಶಪಾರಂಪರ‌್ಯ, ವೈರಾಣು ಸೋಂಕು, ವಿಟಮಿನ್ ಡಿ ಕೊರತೆ.
ಟೈಪ್ 2-ಇದು ಸಾಮಾನ್ಯವಾಗಿ ಕಂಡು ಬರುವ ವಿಧ. ಶೇ.95ರಷ್ಟು ಮಂದಿ ಈ ವಿಧದ ಮಧುಮೇಹದಿಂದ ನರಳುತ್ತಾರೆ. ಇದಕ್ಕೆ ಕಾರಣಗಳೆಂದರೆ ಬೊಜ್ಜು, ವಂಶಪರಂಪರೆ, ಚಟುವಟಿಕೆ ಇಲ್ಲದ ಜೀವನಶೈಲಿ, ರಕ್ತದೊತ್ತಡ ಹೆಚ್ಚಾಗುವುದು, ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುವುದು.
ಇದರಲ್ಲಿ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದ್ದರೂ ಶರೀರವು ಅದನ್ನು ಸರಿಯಾದ ರೀತಿಯಲ್ಲಿ ಉತ್ಪತ್ತಿಯಾಗದೆ ಇರುವುದು. ಇದನ್ನು ಇನ್ಸುಲಿನ್ ರೆಸಿಸ್‌ಟೆನ್ಸ್ ಎನ್ನುತ್ತೇವೆ. ಇದರಲ್ಲಿ ಕ್ರಮೇಣ ಇನ್ಸುಲಿನ್ ಕೊರತೆ ಉಂಟಾಗುತ್ತದೆ. ಇದರ ಲಕ್ಷಣಗಳೆಂದರೆ ಅತಿಯಾದ ಆಯಾಸ, ಪದೇಪದೆ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ, ಹಸಿವು,ಸೋಂಕು ರೋಗ, ಗಾಯ ವಾಸಿಯಾಗದೆ ಇರುವುದು.
ಅಡ್ಡ ಪರಿಣಾಮಗಳೆಂದರೆ ಡಯಾಬಿಟಿಕ್ ರೆಟಿನೋಪತಿ, ಡಯಾಬಿಟಿಕ್ ನ್ಯೂರೋಪತಿ, ಡಯಾಬಿಟಿಸ್ ನೆಫ್ರೋಪತಿ, ರಕ್ತನಾಳ ರೋಗ ಇತ್ಯಾದಿ. ರೋಗ ನಿಯಂತ್ರಣದಲ್ಲಿಟ್ಟುಕೊಂಡರೆ ಅಡ್ಡ ಪರಿಣಾಮ ತಡೆಯಬಹುದು.
ಗೆಸ್ಟೇಷನಲ್ ಮಧುಮೇಹ
ಇದು ಗರ್ಭಾವಸ್ಥೆಯಲ್ಲಿ ಕಾಣಿಸುತ್ತದೆ. ಪ್ರಸವದ ನಂತರ ಗುಣಮುಖವಾಗುತ್ತದೆ. ಆದರೆ ಕೆಲವರಲ್ಲಿ ಗುಣವಾಗದೆ ಟೈಪ್2 ಮಧುಮೇಹವಾಗಿ ಕಾಡಬಹುದು. ಇದಕ್ಕೆ ಕಾರಣಗಳೆಂದರೆ ಬೊಜ್ಜು, ವಂಶಪರಂಪರೆ, ಹಿಂದಿನ ಗರ್ಭಾವಸ್ಥೆಯಲ್ಲಿ ಅತೀ ತೂಕದ ಮಗುವಿಗೆ ಜನ್ಮ ನೀಡುವುದು ಇತ್ಯಾದಿ.
ಇನ್ಸಿಪಿಡಸ್ ಅಂದರೆ ಇದು ಎಡಿಎಚ್ ಅಥವಾ ವ್ಯಾಸೋಪ್ರೆಸಿನ್ ಅನ್ನುವ ಹಾರ್ಮೋನ್ ಕೊರತೆಯಿಂದ ಕಾಣಿಸುತ್ತದೆ. ಈ ಸಮಸ್ಯೆ ಇದ್ದರೆ ಕಿಡ್ನಿ ಸರಿಯಾಗಿ ಕಾರ‌್ಯ ನಿರ್ವಹಿಸುವುದಿಲ್ಲ. ಆದ್ದರಿಂದ ಅತೀ ಪ್ರಮಾಣದ ಮೂತ್ರ ವಿಸರ್ಜನೆ ಆಗುತ್ತದೆ. ದಾಹವೂ ಹೆಚ್ಚುತ್ತದೆ.
ಜುವಿನೈಲ್ ಮಧುಮೇಹ- ಇದು 20ಗಿಂತ ಕಡಿಮೆ ವಯಸ್ಸಿನವರಲ್ಲಿ ಕಾಣಿಸುತ್ತದೆ. ಇದು ಟೈಪ್-1ಮಧುಮೇಹದ ಒಂದು ವಿಧ. ಇದನ್ನು ಪತ್ತೆ ಹಚ್ಚುವ ವಿಧಾನಗಳೆಂದರೆ ರಕ್ತಪರೀಕ್ಷೆ,ಮೂತ್ರ ಪರೀಕ್ಷೆ, ಇನ್ಸುಲಿನ್ ಪರೀಕ್ಷೆ, ಗ್ಲೂಕೋಸ್ ಟೊಲಕಿನ್ಸ್ ಪರೀಕ್ಷೆ, ಹೆಪಟೈಟ್ ಪರೀಕ್ಷೆ, ಗ್ಲೈಸೇಟೆಡ್ ಹಿಮೋಗ್ಲೋಬಿನ್ ಪರೀಕ್ಷೆಗಳನ್ನು ಒಳಗೊಂಡಿದೆ.
ಹೋಮಿಯೋಪಥಿ ವೈದ್ಯ ಪದ್ಧತಿಯಲ್ಲಿ ಗುಣಮಟ್ಟದ ಚಿಕಿತ್ಸೆ ಇದ್ದು, ಯಾವುದೇ ಅಡ್ಡ ಪರಿಣಾಮಗಳಿಗೆ ಶಾಶ್ವತ ಪರಿಹಾರ ನೀಡಲಾಗುತ್ತದೆ. ಇಲ್ಲಿ ರೋಗಕ್ಕಿಂತ ರೋಗಿಗೆ ಪ್ರಾಮುಖ್ಯ ನೀಡಲಾಗುತ್ತದೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments