Skip to main content

ವ್ಯವಹಾರ ನಿರ್ಧರಿಸುವ ತಿಲ ರಹಸ್ಯ ಡಾ.ಅನಸೂಯ ಎಸ್.ರಾಜೀವ್

ವ್ಯವಹಾರ ನಿರ್ಧರಿಸುವ ತಿಲ ರಹಸ್ಯ ಡಾ.ಅನಸೂಯ ಎಸ್.ರಾಜೀವ್ ಪರಮಾತ್ಮನ ಲೀಲೆ ವಿಚಿತ್ರವಾದುದು. ಅವನು ಮನುಷ್ಯನಿಗೆ ಬುದ್ಧಿಶಕ್ತಿಯನ್ನು ಕೊಟ್ಟು ಉನ್ನತಮಟ್ಟದಲ್ಲಿಟ್ಟ. ಮನುಷ್ಯನು ತನ್ನ ಪ್ರತಿಭಾಶಕ್ತಿಯಿಂದ ಗೂಢವಿದ್ಯೆಗಳನ್ನು ಅಭ್ಯಾಸ ಮಾಡಿದ. ಶರೀರದಲ್ಲಿರುವ ಮಚ್ಚೆಗಳ ಮೂಲಕ ಮನುಷ್ಯನ ಸ್ವಭಾವ, ಆಚಾರ, ವ್ಯವಹಾರಗಳನ್ನು ನಿರ್ಧರಿಸುವುದೇ ತಿಲ ರಹಸ್ಯ. ಭಾರತೀಯ ಆಚಾರ್ಯರು ತಿಲದ ವರ್ಣಗಳ ಬಗ್ಗೆ ಹೀಗೆ ತಿಳಿಸಿರುತ್ತಾರೆ. ಜಾತಕದಲ್ಲಿ ರವಿ, ಕುಜರು ಬಲಾಢ್ಯರಾಗಿದ್ದರೆ ಕೆಂಪು ವರ್ಣದ ಮಚ್ಚೆಯನ್ನು ಜಾತಕರು ಹೊಂದಿರುತ್ತಾರೆ. ಚಂದ್ರ, ಶುಕ್ರ ಬಲಾಢ್ಯರಾಗಿದ್ದರೆ ಬಿಳಿ ಬಣ್ಣದ ಮಚ್ಚೆ, ಗುರು ಬಲಾಢ್ಯನಾಗಿದ್ದರೆ ಜೇನು ವರ್ಣದ ಮಚ್ಚೆ, ಶನಿ ಬಲಾಢ್ಯನಾಗಿದ್ದರೆ ಕಪ್ಪು ಬಣ್ಣದ ಮಚ್ಚೆಯನ್ನು ಹೊಂದಿರುತ್ತಾರೆ. ಹೀಗೆ ವ್ಯಕ್ತಿಗಳಿಗೆ ಯಾವ ಗ್ರಹ ಬಲಾಢ್ಯವಾಗಿರುವುದೋ ಆ ಗ್ರಹದ ವರ್ಣದ ಮಚ್ಚೆ ಇರುತ್ತದೆ. ಶಿರೋ ಭಾನು: ಮುಖ:ಚಂದ್ರ: ಕಂಠೇ ಕುಜ: ವಕ್ಷೇ ಬುಧ: ಉದರೇ ಗುರು: ಗುಹ್ಯೇ ಶುಕ್ರ: ಜಂಘೇ ಶನಿ: ಪಾದಾಭ್ಯೋ ರಾಹು ಕೇತುಶ್ಚ ಎಂಬ ಸೂತ್ರದಂತೆ ದೇಹದ ಯಾವ ಭಾಗದಲ್ಲಿ ಮಚ್ಚೆ ಕಾಣುತ್ತದೋ ಆ ಭಾಗವನ್ನಾಳುವ ಗ್ರಹ ಬಲಾಢ್ಯವಾಗಿರುತ್ತದೆ ಎಂದು ಅವರು ತಿಳಿಸಿರುತ್ತಾರೆ. ನಕ್ಷತ್ರ ಪುರುಷನ ಅಂಗಗಳಿಗೆ ಸಂಬಂಧಿಸಿದ ಜಾಗದಲ್ಲಿ ಮಚ್ಚೆ ಇದ್ದರೆ ಆಯಾ ನಕ್ಷತ್ರದಲ್ಲಿ ಹುಟ್ಟಿದವರು ಅಥವಾ ಆ ನಕ್ಷತ್ರಗಳ ಅಧಿಕ ಪ್ರಭಾವಕ್ಕೆ ಒಳಗಾದವರು ಎಂದೂ ತಿಳಿಸಿರುತ್ತಾರೆ. ಅಶ್ವಿನಿಗೆ ತೊಡೆ, ಭರಣಿಗೆ ತಲೆ, ಕೃತ್ತಿಕಾಗೆ ಸೊಂಟ, ರೋಹಿಣಿಗೆ ತೊಡೆ, ಮೃಗಶಿರಾಗೆ ಕಣ್ಣುಗಳು, ಆರಿದ್ರಾಗೆ ಕೂದಲು, ಪುನರ್ವಸುಗೆ ಬೆರಳುಗಳು, ಪುಷ್ಯಗೆ ಬಾಯಿ, ಆಶ್ಲೇಷಾಗೆ ಉಗುರುಗಳು, ಮಖಾಗೆ ಮೂಗು, ಪುಬ್ಬಾಗೆ ಗುಹ್ಯಾಂಗ, ಉತ್ತರಾಗೆ ಗುಹ್ಯಾಂಗ, ಹಸ್ತಾಗೆ ಕೈಗಳು, ಚಿತ್ತಾಗೆ ಕೆನ್ನೆ, ಹಣೆ ಭಾಗಗಳು, ಸ್ವಾತಿಗೆ ಹಲ್ಲುಗಳ ಮೇಲಿನ ವಸಡುಗಳು, ವಿಶಾಖಗೆ ತೋಳುಗಳು, ಅನುರಾಧಾಗೆ ಎದೆ, ಜ್ಯೇಷ್ಠಕ್ಕೆ ಕತ್ತು, ಮೂಲಾಗೆ ಕಾಲು, ಪೂರ್ವಾಷಾಢಾಗೆ ವಕ್ಷಸ್ಥಳ, ಶ್ರವಣಾಗೆ ಕಿವಿಗಳು, ಧನಿಷ್ಟಾಗೆ ಬೆನ್ನು, ಶತ:ಭಿಷಾಗೆ ಕೆನ್ನೆಗಳು, ಗಲ್ಲ, ಪೂರ್ವಾಭಾದ್ರಾಗೆ ಪಾರ್ಶ್ವಗಳು, ಉತ್ತರಾಭಾದ್ರಾಗೆ ಪಾರ್ಶ್ವಗಳು, ರೇವತಿಗೆ ಹೊಟ್ಟೆ ಎಂದು ತಿಳಿಸಿರುತ್ತಾರೆ. ಕಾಲ ಪುರುಷನ ಅಂಗಗಳಿಗೆ ಸಂಬಂಧಿಸಿದಂತೆ ಆಯಾ ಲಗ್ನದವರಿಗೆ ಆಯಾಭಾಗದಲ್ಲಿ ಮಚ್ಚೆ ಇರುತ್ತದೆ ಎಂದು ಜನನ ಲಗ್ನ ಹಾಗೂ ಮಚ್ಚೆಗಳ ಸಂಬಂಧದ ಬಗ್ಗೆ ಹೀಗೆ ತಿಳಿಸಿರುತ್ತಾರೆ. ಮೇಷ ಲಗ್ನದವರಿಗೆ ತಲೆ, ಮುಖ, ತುಟಿ ಗಡ್ಡದ ಭಾಗಗಳಲ್ಲಿ ಮಚ್ಚೆಗಳಿರುತ್ತವೆ. ವೃಷಭ ಲಗ್ನದವರಿಗೆ ಕೊರಳ ಬಳಿ ಮಚ್ಚೆ ಇರುತ್ತವೆ. ಮಿಥುನ ಲಗ್ನದವರಿಗೆ ಭುಜ ಭಾಗದಲ್ಲಿ, ಕಟಕ ಲಗ್ನದಲ್ಲಿ ಜನಿಸಿದವರಿಗೆ ಎದೆ ಭಾಗದಲ್ಲಿ, ಸಿಂಹ ಲಗ್ನದವರಿಗೆ ಸೊಂಟ , ತುಲಾ ಲಗ್ನದವರಿಗೆ ನಾಭಿಯ ಸ್ಥಳದಲ್ಲಿ, ವೃಶ್ಚಿಕ ಲಗ್ನದವರಿಗೆ ಗುಹ್ಯ ಸ್ಥಾನದಲ್ಲೂ ಬೆನ್ನಿನ ಭಾಗದಲ್ಲಿ, ಧನುರ್ಲಗ್ನದಲ್ಲಿ ಜನಿಸಿದವರಿಗೆ ಎಡ, ಬಲ ತೊಡೆಗಳಲ್ಲಿ, ಮಕರ ಲಗ್ನದವರಿಗೆ ಎಡ, ಬಲ ಕಾಲು ಮತ್ತು ಮೊಣಕಾಲು. ಕುಂಭ ಲಗ್ನದಲ್ಲಿ ಜನಿಸಿದವರಿಗೆ ಎರಡೂ ಕಾಲುಗಳ ಹಿಮ್ಮಡಿಯಲ್ಲಿ ಕಾಲುಗಳ ಗಂಟುಗಳ ಬಳಿ ಮಚ್ಚೆಗಳಿರುತ್ತವೆ. ಮೀನ ಲಗ್ನದವರಿಗೆ ಎಡ, ಬಲ ಪಾದಗಳು, ಅಂಗಾಲುಗಳ ಭಾಗದಲ್ಲಿ ಮಚ್ಚೆಗಳಿರುತ್ತವೆ. ಲಗ್ನಕ್ಕೆ ಯಾವ ಯಾವ ಗ್ರಹಗಳ ಸಂಬಂಧವಿರುತ್ತದೆಯೋ ಆಯಾ ಭಾಗಗಳಲ್ಲೂ ಮಚ್ಚೆಗಳು ಇರುತ್ತವೆ. ಗಂಡಸರಿಗೆ ದೇಹದ ಬಲ ಭಾಗದ ಮೇಲೆ ಮಚ್ಚೆ ಇದ್ದರೆ ಶುಭ ಸೂಚಕವೆಂದೂ, ಹೆಂಗಸರಿಗೆ ಎಡ ಭಾಗದಲ್ಲಿದ್ದರೆ ಶುಭ ಸೂಚಕವೆಂದೂ ಅಂತಹವರಿಗೆ ಲಕ್ಷ್ಮೀದೇವಿ ಜತೆಯಲ್ಲಿರುತ್ತಾಳೆಂಬ ಉಕ್ತಿಯೂ ಇದೆ. ಇನ್ನು ಪಾಶ್ಚಾತ್ಯ ಆಚಾರ್ಯರು ಮಚ್ಚೆಗಳ ಬಗ್ಗೆ ಸಾಕಷ್ಟು ಉಲ್ಲೇಖಿಸಿರುತ್ತಾರೆ. ಅವರಲ್ಲಿ ವರ್ನಿಯಾ್ ಪ್ರಮುಖರು. ಪ್ರಕೃತಿಯು ವ್ಯಾಪಾರಿ ಇದ್ದಂತೆ. ವ್ಯಾಪಾರಿಯು ತನ್ನ ಅಂಗಡಿಯಲ್ಲಿರುವ ಸಾಮಾನುಗಳನ್ನೆಲ್ಲ ಪ್ರದರ್ಶನಕ್ಕೆ ಇಡುವುದಿಲ್ಲ. ಇದರಿಂದ ಗ್ರಾಹಕನು ಒಳಗೆ ಏನೇನು ವಸ್ತುಗಳಿವೆ ಎಂದು ಗ್ರಹಿಸುತ್ತಾನೆ. ಹಾಗೆಯೇ ಈ ಶರೀರವೆಂಬ ಅಂಗಡಿಯ ವಸ್ತುಗಳು ಮುಖದಲ್ಲಿ ಮಚ್ಚೆಗಳ ರೂಪದಲ್ಲಿ ಕಂಡುಬರುತ್ತವೆ. ಈ ಮಚ್ಚೆಗಳ ಅಧ್ಯಯನದಿಂದ ಶರೀರದ ಬೇರೆ ಬೇರೆ ಭಾಗಗಳಲ್ಲಿರುವ ಮಚ್ಚೆಗಳ ಫಲವನ್ನು ತಿಳಿದುಕೊಳ್ಳಬಹುದು ಎಂಬ ವಿಷಯ ವಸ್ತುವನ್ನು ಆಧಾರವಾಗಿಟ್ಟುಕೊಂಡೇ ಮಚ್ಚೆಗಳ ಅಧ್ಯಯನವನ್ನು ಮಾಡಿರುತ್ತಾನೆ. ಮುಖದಲ್ಲಿ 55 ಮಚ್ಚೆಗಳನ್ನು ಗುರುತಿಸಿರುತ್ತಾನೆ. ಹಣೆಯಲ್ಲಿ 12, ಕಣ್ಣುಗಳಲ್ಲಿ 9, ಕಿವಿಗಳಲ್ಲಿ 5, ಗಲ್ಲದಲ್ಲಿ 5, ಕೆನ್ನೆಗಳಲ್ಲಿ 7, ಮೂಗಿನಲ್ಲಿ 8, ಗದ್ದದಲ್ಲಿ 9 ಎಂಬುದಾಗಿ ವಿಭಜಿಸಿ ಅದಕ್ಕೆ ಫಲ ಪರಿಹಾರಗಳನ್ನೂ ನೀಡಿರುತ್ತಾನೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...