ನವಗ್ರಹಗಳ ವಿಚಾರ ನವಗ್ರಹಗಳ ಕರಾಮತ್ತು ಮಾರ್ಚಿ ೨೦೧೧ ಹೊಸತು ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ
ನವಗ್ರಹಗಳು ಮನುಜನಿಗೆ ಒಳ್ಳೆಯದು ಮಾಡುವುದಿಲ್ಲವೇ? ಕೆಟ್ಟದೇ ಮಾಡುವುದೇ? ಎಂಬ ಜಿಜ್ಞಾಸೆ ನನ್ನನ್ನು ಕಾಡಿತು. ಏನೇ ತೊಂದರೆ ಎದುರಾದರೂ ಅದು ನವಗ್ರಹಗಳ ಉಪಟಳ ಎಂದು ಭಾವಿಸಿ ನವಗ್ರಹ ಹೋಮ, ದಾನ, ಪೂಜೆ ಮಾಡಿಸುತ್ತಾರೆ. ಉದಾಹರಣೆಗೆ ಹೇಳಬೇಕೆಂದಾದರೆ ಮನೆ ಒಳಗೆ ನಡೆಯುತ್ತಿರುವಾಗ ಬಾಗಿಲು, ಕಿಟಕಿ, ಗೋಡೆ, ಅಡುಗೆ ಮನೆಯ ಕಟ್ಟೆ ಪದೇಪದೇ ಕೈಗೆ ಕಾಲಿಗೆ ತಗಲಿ ನೋವು ಕೊಟ್ಟರೆ ಅದು ನವಗ್ರಹಗಳ ಕಾಟವೇ ಸೈ ಎಂದು ಭಾವಿಸುತ್ತಾರೆ. ಪರಿಚಿತರೊಬ್ಬರಿಗೆ ಪ್ರತೀದಿನವೂ ಒಮ್ಮೆ ತಗಲಿದಲ್ಲಿಗೇ ಬಾಗಿಲು ಕಟ್ಟೆ ಇತ್ಯಾದಿ ತಗಲಿ ಕೈ ತೋಳೆಲ್ಲ ನೋವು ಬಂತಂತೆ. ಸುಮಾರು ದಿನ ನೋವು ಅನುಭವಿಸಿದರಂತೆ. ಇದರ ಪರಿಹಾರಕ್ಕಾಗಿ ಇರುವ ದಾರಿ ಒಂದೇ. ನವಗ್ರಹ ಹೋಮ ಹಾಗೂ ಪೂಜೆ ಎಂದು ಬಲ್ಲವರು ಹೇಳಿದರಂತೆ. ಹಾಗಾಗಿ ತಡಮಾಡದೆ ಅವನ್ನು ಮಾಡಿಸಿದರು. ತದನಂತರದ ಪರಿಣಾಮ ಏನಾಯಿತೆಂದು ಗೊತ್ತಿಲ್ಲ. ಬಾಗಿಲು ಹಿಡಿ, ಕಟ್ಟೆ ಎಲ್ಲ ತಟಸ್ಥವಾಗಿ ಅವರಿಗೆ ತಗಲದೆ ಇದ್ದುವೋ ಏನೋ?
ಈಗ ನವಗ್ರಹಗಳೆಂದರೆ ಏನು ಎಂಬುದನ್ನು ತಿಳಿಯೋಣ: ಭಾರತೀಯ ಸಂಪ್ರದಾಯದಂತೆ ಸೂರ್ಯ, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಎಂಬ ಒಂಬತ್ತು ಗ್ರಹಗಳು.
ನವಗ್ರಹ ಜಪ: ಸೂರ್ಯನೇ ಮೊದಲಾದ ಗ್ರಹಗಳ ಅನುಗ್ರಹಕ್ಕಾಗಿ ಶಾಸ್ತ್ರೋಕ್ತವಾದ ವಿಧಾನದಿಂದ ಮಾಡುವ ಆಯಾಯ ಗ್ರಹಗಳ ಮಂತ್ರ ಪುರಶ್ಚರಣೆ. ನವಗ್ರಹಜಪ ಮಾಡಿದರೆ ಬಂದ ಪೀಡೆ ಪರಿಹಾರವಾಗುತ್ತದೆ ಎಂಬುದು ಲೊಕಾರೂಢಿ.
ನವಗ್ರಹದಾನ: ನವಗ್ರಹಗಳನ್ನು ಸುಪ್ರೀತಗೊಳಿಸುವುದಕ್ಕಾಗಿ ಮಾಡುವ ನವಧಾನ್ಯಗಳ ದಾನ. ಸೂರ್ಯನ ಪ್ರೀತ್ಯರ್ಥ ಗೋದಿ, ಚಂದ್ರನಿಗೆ ಬತ್ತ, ಕುಜನಿಗೆ ತೊಗರಿ, ಬುಧನಿಗೆ ಹೆಸರು, ಗುರುವಿಗೆ ಕಡಲೆ, ಶುಕ್ರನಿಗೆ ಅವರೆ, ಶನಿಗೆ ಎಳ್ಳು, ರಾಹುವಿಗೆ ಉದ್ದು, ಕೇತುವಿಗೆ ಹುರುಳಿ ಇವನ್ನು ದಾನ ಮಾಡಬೇಕೆಂಬ ವಿಧಿಯಿದೆ. ಅದಕ್ಕೆ ನವಗ್ರಹ ದಾನ ಎನ್ನುವರು. (ಇಂತಿಂಥವನಿಗೆ ಇಂತಿಂಥದೇ ಧಾನ್ಯ ಎಂದು ಯಾರು ನಿಗದಿ ಮಾಡಿರಬಹುದು ಎಂಬ ಕುತೂಹಲ ನನ್ನನ್ನು ಸುಮ್ಮನಿರಲು ಬಿಡುತ್ತಿಲ್ಲ.)
ನವಗ್ರಹಶಾಂತಿ: ಜಪ, ದಾನ, ಹೋಮಗಳಿಂದ ನವಗ್ರಹಗಳನ್ನು ಪ್ರಸನ್ನಗೊಳಿಸುವ ಪುಣ್ಯಕರ್ಮ. (ಮಾಹಿತಿ ಕನ್ನಡ ನಿಘಂಟು ನಾಲ್ಕನೆಯ ಸಂಪುಟ)
ನವಗ್ರಹ ಹೋಮ: ನವಗ್ರಹಗಳ ಸಂಪ್ರೀತಿಗಾಗಿ ಸೂರ್ಯನಿಗೆ ಅರ್ಕ, ಚಂದ್ರನಿಗೆ ಪಲಾಶ, ಅಂಗಾರಕ(ಕುಜ)ನಿಗೆ ಖದಿರ, ಬುಧನಿಗೆ ಅಪಾಮಾರ್ಗ, ಗುರುವಿಗೆ ಅಶ್ವತ್ಥ, ಶುಕ್ರನಿಗೆ ಉದುಂಬರ, ಶನಿಗೆ ಶಮಿ, ರಾಹುವಿಗೆ ದೂರ್ವಾ, ಕೇತುವಿಗೆ ಕುಶ ಈ ಸಮಿತ್ತುಗಳನ್ನು ಚರು ಮತ್ತು ತುಪ್ಪವನ್ನು ಪ್ರತ್ಯೇಕವಾಗಿ ೮ ಅಥವಾ ೨೮ ಇಲ್ಲವೇ ೧೦೮ ಬಾರಿ ಅಗ್ನಿಯಲ್ಲಿ ಹಾಕುತ್ತ ಆಯಾಯ ಗ್ರಹ ಮಂತ್ರೋಚ್ಚಾರಣ ಪೂರ್ವಕ ಹೋಮ ಮಾಡಬೇಕು. ಅಂತೆಯೇ ಅಧಿದೇವತೆ, ಪ್ರತ್ಯಧಿ ದೇವತೆಗಳಿಗೆ ಪ್ರಧಾನ ದೇವತೆಯ ದಶಮಾಂಶ ಸಂಖ್ಯೆಯಲ್ಲಿಯೂ ಕ್ರತು ಸಂರಕ್ಷಣ ದೇವತೆಗಳಿಗೆ ಇಪ್ಪತ್ತನೆಯ ಒಂದು ಅಂಶ ಸಂಖ್ಯೆಯಲ್ಲಿಯೂ ಹೋಮ ಮಾಡಬೇಕು. ಈ ಕ್ರಮದಲ್ಲಿ ಮಾಡುವ ನವಗ್ರಹ ಹೋಮದಿಂದ ಗ್ರಹಜನ್ಯ ದೋಷಗಳು ಹೋಗುತ್ತವೆ. (ಮಾಹಿತಿ ಕೃಪೆ: ಕನ್ನಡ ವಿಶ್ವಕೋಶ)
ನನಗೆ ಬಂದ ಸಂಶಯ ಅಂದರೆ ಈ ಗ್ರಹಗಳು ನಾವು ಓಡಾಡುವಾಗ ಬೇಕೂಂತಲೇ ಕಿಟಕಿ, ಬಾಗಿಲ ಹಿಡಿ, ಅಡುಗೆ ಮನೆಯ ಕಟ್ಟೆ, ಗೋಡೆಗಳ ರೂಪದಲ್ಲಿ ನಮಗೆ ಡಿಕ್ಕಿ ಹೊಡೆಯುತ್ತವೆಯಾ? ಗ್ರಹಗಳಿಗೆ ಸುಮ್ಮನೆ ಇದ್ದು ಬೇಜಾರಾಗಿ ನಾವು ನಡೆಯುವಾಗ ನೇರ ದಾರಿ ತಪ್ಪಿಸಿ ಗೋಡೆ, ಸೋಫಾ, ಕುರ್ಚಿ ಕಾಲುಗಳಿಗೆ ನಮ್ಮ ಕೈ ಕಾಲು ತಗಲಿ ನಾವು ನೋವು ಅನುಭವಿಸುವುದನ್ನು ಅವುಗಳು ನೋಡಿ ಸಂತೋಷ ಪಡುತ್ತವೆಯೇ ಎಂದು ಕಾಣುತ್ತದೆ. ಏಕೆಂದರೆ ಸೋಪಾ, ಕುರ್ಚಿ ಇವೆಲ್ಲ ಅದಾಗಿಯೇ ನಮಗೆ ತಗಲಲು ಸಾಧ್ಯವಿಲ್ಲವಲ್ಲ. ನವಗ್ರಹಕ್ಕೆ ಪೂಜೆ ಇತ್ಯಾದಿ ಮಾಡಿದ ಕೂದಲೇ ಅವೆಲ್ಲ ತೃಪ್ತಿ ಹೊಂಡಿ ಗೃಹದಲ್ಲಿ ಶಾಂತಿ ಮೂಡಿಸುತ್ತದಾ? ಎಂಥ ಚೋದ್ಯವಲ್ಲವೇ ನವಗ್ರಹಗಳ ಬಾಳು. ಅವುಗಳೊಂದಿಗೆ ನಮ್ಮದೂ ಕೂಡ.
ಯಾವಾಗಲೂ ನವಗ್ರಹಗಳು ನನ್ನೊಂದಿಗೇ ಇರುತ್ತವೆ. ಹೆಚ್ಚಾಗಿ ನನಗೆ ಬಾಗಿಲು ಚಿಲಕ, ಸೋಫಾ ಕಾಲು, ಕಬ್ಬಿಣದ ಸ್ಟೂಲ್ ಇವೆಲ್ಲ ಡಿಕ್ಕಿ ಹೊಡೆಯುತ್ತಲೇ ಇರುತ್ತವೆ. ಆದರೆ ಅದು ನವಗ್ರಹಗಳ ಕರಾಮತ್ತು ಎಂದು ಇಷ್ಟು ದಿನ ನನಗೆ ಗೊತ್ತಿರಲಿಲ್ಲ. ಎಷ್ಟು ಸಲ ಪೂಜೆ ಮಾಡಬೇಕಿತ್ತೊ ನಾನು ಎಂದು ಅಂದುಕೊಂಡೆ. ಅಯ್ಯೊ ಮಂಕೆ ಒಮ್ಮೆ ಪೂಜೆ ಮಾಡಿಸಿದರೆ ಅವು ನಮ್ಮ ತಂಟೆಗೆ ಬರಲ್ಲ ಎಂದು ನನ್ನ ಮನಸ್ಸು ಹೇಳಿತು. ಒಮ್ಮೆ ಪೂಜೆ ಮಾಡಿದಮೇಲೆ ಹಾಗಾದರೆ ಎಷ್ಟು ದಿನ ಸುಮ್ಮನೆ ಇದ್ದಿತು? ಆಮೇಲೆ ಅವು ಬರುವುದಿಲ್ಲ ಎಂಬ ಭರವಸೆ ಯಾರು ಕೊಡುತ್ತಾರೆ? ಎಂಬ ಸಂಶಯವೂ ನನ್ನನ್ನು ಪೀಡಿಸುತ್ತಿದೆ. ಈಗ ನನಗೆ ಏನೇ ತಗಲಿದರೂ ಓ ರಾಹು ಕೇತುಗಳಾದಿಗಳೇ ನಿಮ್ಮ ಆಟ ಸುರು ಮಾಡಿದಿರ ಎಂದು ಕೈಕಾಲು ತಿಕ್ಕಿಕೊಳ್ಳುತ್ತ ಕೇಳಿಕೊಳ್ಳುತ್ತೇನೆ! ನಾನಂತು ಈಗ ನಡೆಯುವಾಗಲೆಲ್ಲ ನವಗ್ರಹಗಳನ್ನು ನೆನಪು ಮಾಡಿಕೊಳ್ಳುತ್ತ ಎಚ್ಚರದಿಂದ ಹೆಜ್ಜೆ ಇಡುತ್ತಿದ್ದೇನೆ!
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments