Skip to main content

ಔಷಧೀಯ ಗುಣವುಳ್ವ ಬಿಲ್ವ ಡಾ.ವಸುಂಧರಾ ಭೂಪತಿ

ಭಕ್ತರು ಶಿವನಿಗೆ ವಿಶೇಷವಾದ ಬಿಲ್ವ ಪತ್ರೆಯಿಂದ ಪೂಜಿಸಿ ಪಾವನರಾಗುತ್ತಾರೆ. ಶಿವನ ಪೂಜೆಗೆ ಬಿಲ್ವ ಪತ್ರೆ ಎಷ್ಟು ಮಹತ್ವವೋ ಅಂತೆಯೇ ಈ ಬಿಲ್ವಪತ್ರೆಯು ಔಷಧೀಯ ಗುಣಗಳನ್ನೂ ಹೊಂದಿವೆ. ಬಿಲ್ವ ಸಮೃದ್ಧಿಯ ಸಂಕೇತ. ಇದರ ವೈಜ್ಞಾನಿಕ ಹೆಸರು ಛಿಜ್ಝಛಿ ಞಚ್ಟಞಛ್ಝಿಟ. ಬಿಲ್ವವನ್ನು ಭಾರತದೆಲ್ಲೆಡೆಯೂ ಬೆಳೆಯಲಾಗುತ್ತದೆ. ಬಿಲ್ವ ಮಧ್ಯಮ ಗಾತ್ರದ ಮರವಾಗಿದ್ದು, ಆರರಿಂದ ಏಳೂವರೆ ಮೀಟರ್ ಎತ್ತರ ಬೆಳೆಯುತ್ತದೆ. ಉಪಯುಕ್ತ ಭಾಗ ಬೇರು, ಎಲೆ, ತೊಗಟೆ, ಹೂ, ಹಣ್ಣು, ಕಾಯಿ ಎಲ್ಲವೂ ಔಷಧೀಯ ಗುಣ ಹೊಂದಿವೆ. ರಾಸಾಯನಿಕ ಅಂಶಗಳು ಎಲೆ: ರುಟಿನ್ ಮಾರ್ಮೆಸಿನ್, ಎಗಿಲಿನ್, ಎಗಿಲಿನಿನ್, ಆಲ್ಫಾ ಮತ್ತು ಬೀಟಾ ಫಿಲ್ಲಾಂಡ್ರಿನ್ ಇರುತ್ತವೆ. ತಾಜಾ ಎಲೆಗಳಿಂದ ತೈಲವನ್ನು ತೆಗೆಯಲಾಗುತ್ತದೆ. ತೈಲವು ಹಳದಿಯುಕ್ತ ಹಸಿರು ಬಣ್ಣದಿಂದ ಕೂಡಿದ್ದು ಸುಗಂಧ ಹೊಂದಿರುತ್ತವೆ. ಬಿಲ್ವದ ಬೇರು: ಕ್ಯಾಂಥೊಟಾಕ್ಸಿನ್, ಅಂಬೆಲಿಫೆರಾನ್, ಮಾರ್ಮೆಸಿನ್, ಮಾರ್ಮಿನ್, ಸ್ಕಿಮ್ನಿನ್ ಇರುತ್ತವೆ. ಹಣ್ಣು: ಪಿಕ್ವಿನ್, ಟಾನಿನ್, ಮಾರ್ಮೆಸಿನ್ ಇರುತ್ತದೆ. ಕಾಯಿ: ಮಾರ್ಮೆಲಿನ್, ಎಗೆಲಿನ್, ಇಂಪಿರೆಟೊರಿನ್ ಇರುತ್ತದೆ. ಉಪಯುಕ್ತ ಗುಣಗಳು ಕಾಮಾಲೆ: ಬಿಲ್ವದ ಎಲೆಯ ರಸವನ್ನು 10 ರಿಂದ 20 ಮಿಲಿಯಷ್ಟು ಜೇನು ತುಪ್ಪದೊಂದಿಗೆ ಬೆರೆಸಿ ಕಾಮಾಲೆಯಿಂದ ಬಳಲುವವರಿಗೆ 7 ರಿಂದ 14 ದಿನ ನೀಡಬೇಕು. ಜ್ವರ ಇರುವವವರಿಗೆ ಎಲೆಯ ರಸದೊಂದಿಗೆ ಕಾಳುಮೆಣಸಿನ ಪುಡಿ (ಒಂದು ಚಿಟಿಕೆ) ಬೆರೆಸಿ ಕುಡಿಯಬೇಕು. ರೋಗ ನಿರೋಧಕ ಶಕ್ತಿ: ಬಿಲ್ವ ರಸಾಯನವಾಗಿ ಕಾರ್ಯ ನಿರ್ವಹಿಸುತ್ತದೆ. ಬಿಲ್ವದ ತಿರುಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಊತ: ಮಂಡಿ ನೋವು, ತಲೆ ನೋವು, ಮುಂತಾದವುಗಳಿಂದ ಬಳಲುವವರು ಬಿಲ್ವದ ಎಲೆಯನ್ನು ಬಿಸಿ ಮಾಡಿ ವಾತ, ನೋವು ಇರುವ ಜಾಗದಲ್ಲಿರಿಸಿ ಶಾಖ ತೆಗೆದುಕೊಳ್ಳಬೇಕು. ಅಜೀರ್ಣ: ಅಜೀರ್ಣದಿಂದ ಹೊಟ್ಟೆ ನೋವು ಉಂಟಾಗಿದ್ದರೆ ಬಿಲ್ವದ ಕಾಯಿಯ ತಿರುಳನ್ನು ಚಿಟಿಕೆ ಶುಂಠಿ ಪುಡಿ ಮತ್ತು ಬೆಲ್ಲ ಬೆರೆಸಿ ಸೇವಿಸಬೇಕು. ಭೇದಿ: ಭೇದಿಗೆ ಒಳ್ಳೆಯ ಔಷಧ. ಬಿಲ್ವದ ಹಣ್ಣಿನ ತಿರುಳನ್ನು ಬೆಲ್ಲ ಮತ್ತು ಜೇನುತುಪ್ಪದೊಂದಿಗೆ ಸವಿಯಬೇಕು. ಆಯುರ್ವೇದಲ್ಲಿ ಬಳಸಲಾಗುವ ಬಹು ಮುಖ್ಯ ಔಷಧವಾದ 'ದಶಮೂಲ'ಗಳಲ್ಲಿ ಬಿಲ್ವವೂ ಒಂದು. ಚಿಕ್ಕ ಮಕ್ಕಳಲ್ಲಿ ಪದೇ ಪದೆ ಭೇದಿ ಉಂಟಾಗುತ್ತಿದ್ದರೆ ಬಿಲ್ವದ ತಿರುಳಿನಿಂದ ಶರಬತ್ ತಯಾರಿಸಿ ಜೇನು ಬೆರೆಸಿ ಕುಡಿಸಬೇಕು. ಸಕ್ಕರೆ ಕಾಯಿಲೆ: ಸಕ್ಕರೆ ಕಾಯಿಲೆಯಿಂದ ಬಳಲುವವರು ಬಿಲ್ವದ ಎಲೆಯ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು. ಸಂಶೋಧನೆ: ಎಲೆಗಳಿಂದ ತೆಗೆದ ರಸ ಹೃದ್ರೋಗದಿಂದ ಬಳಲುವವರಿಗೆ ಉಪಯುಕ್ತವಾಗಿದೆ. ಕಪ್ಪೆಗಳ ಮೇಲೆ ಮಾಡಿದ ಪ್ರಯೋಗದಿಂದ ಹೃದಯದ ಬಡಿತವನ್ನು ಸಹಜ ಸ್ಥಿತಿಗೆ ತರುತ್ತದೆ ಎಂದು ದೃಢಪಟ್ಟಿದೆ. ಬಿಲ್ವದಿಂದ ತಯಾರಿಸಿದ ಬಿಲ್ವ ರಸಾಯನ, ಬಿಲ್ವ ತೈಲ, ಬಿಲ್ವ ಲೇಹ, ದಶಮೂಲಾರಿಷ್ಟ, ಬಿಲ್ವದ ವಟಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...