Skip to main content

Posts

ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು

ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು ಸಾದಾರಣವಾಗಿ ಯಾರದೇ ಜನ್ಮಕುಂಡಲಿಯಲ್ಲಿ (ಯಾವುದೇರೀತಿಯ)ಹನ್ನೆರಡು ಕಾಳಸರ್ಪದೋಷಗಳಿದ್ದಾಗ್ಯು ಕೂಡ ಅದನ್ನು ಭಂಗಗೊಳಿಸಬಲ್ಲ ಕೆಲವು ಯೋಗಗಳಿದ್ದಾಗ ಈ ಸರ್ಪದೋಷಗಳು ನಿವಾರಣೆಯಾಗುತ್ತವೆ ಅಥವ ಈ ಯೋಗದಿಂದ ಉಂಟಾಗುವ ಕೆಟ್ಟಫಲಗಳು ನಾಶವಾಗುತ್ತವೆ.ಅಂತಹ ಬಲವಾದ ಯೋಗಗಳೆಂದರೆ:- ಯಾರ ಜನ್ಮಕುಂಡಲಿಯಲ್ಲಿ ಪಂಚಮಹಾಪುರುಷಯೋಗಗಳಲ್ಲಿ ಯಾವುದಾದರು ಒಂದು ಯೋಗವಿದ್ದಾಗ್ಗೆ ಈ ಕಾಳಸರ್ಪದೋಷವು ಉಂಟುಮಾಡುವ ಕೆಟ್ಟಫಲವನ್ನು ನಾಶಮಾಡುತ್ತದೆ. ಆ ಪಂಚ ಮಹಾಪುರುಷ ಯೋಗಗಳು ಯಾವುವೆಂದರೆ:- *ಕುಜನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ರುಚಕಯೋಗದಿಂದ* *ಬುದನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಭದ್ರಯೋಗದಿಂದ *ಗುರುವಿನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಹಂಸಯೋಗದಿಂದ* *ಶುಕ್ರನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಮಾಳವ್ಯಯೋಗದಿಂದ* *ಶನಿಯಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಶಶ(ಸಸ)ಯೋಗದಿಂದ* *ಜನ್ಮ ಕುಂಡಲಿಯಲ್ಲಿ ಕೇಂದ್ರಗಳಾದ ೧ ೪ ೭ ೧೦ ನೇ ಮನೆಯಲ್ಲಿ ಶುಭಗ್ರಹಗಳಿದ್ದರೆ* *ಪ್ರಭಲವಾದ ಯೋಗಗಳು ಇರುವುದರಿಂದ* *ರಾಹುವುನೊಂದಿಗೆ ಯಾವುದೇ ಇತರೆ ಗ್ರಹವಿದ್ದು ಆ ಗ್ರಹ ಹೆಚ್ಚಿನ ಅಂತರದಲ್ಲಿ(ಡಿಗ್ರಿಯಲ್ಲಿ) ಇದ್ದಲ್ಲಿ ಈ ಯೋಗ ಭಂಗವಾಗುತ್ತದೆ(ಉದಾ:-೬ಡಿಗ್ರಿ೨೫ ನಿಮಿಷದಲ್ಲಿ ರಾ...

ಶ್ರಿಶನೈಶ್ಚರ ಪೀಡಾ ಪರಿಹಾರೋಪಾಯಗಳು

ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ | ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ || – ಗರುಡಪುರಾಣ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ. ಇಂಥಹ ಕರ್ಮಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯವೆಂಬ ದಿವ್ಯವಾದ ವಿದ್ಯೆಯನ್ನು ಪ್ರಾಚೀನರು ನಮಗೆ ದಯಪಾಲಿಸಿದ್ದಾರೆ. ವರಾಹಮಿಹಿರಾಚಾರ್ಯರು ಈ ಕುರಿತು “ಕರ್ಮಾರ್ಜಿತಂ ಪೂರ್ವಭವೇಸದಾದಿ ಯತ್ತಸ್ಯಪಂಕ್ತಿಂ ಸಮಭಿವ್ಯನಕ್ತಿ” ಪೂರ್ವಜನ್ಮದಲ್ಲಿ ಸಂಚಿತ ಶುಭಾಶುಭ ಕರ್ಮಫಲದ ಅನುಭವಕಾಲವನ್ನು ಈ ಶಾಸ್ತ್ರವು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಗ್ರಹ್ಣಂತೀತಿ ಗ್ರಹಾಃ ಸರ್ವೇ ಗ್ರಹಾ ಪೀಡಾಕರಾಃ ಸ್ಮೃತಾಃ | (ಇನ್ನೋಬ್ಬರನ್ನು) ಹಿಡಿದುಕೊಳ್ಳುತ್ತವೆ ಎಂಬರ್ಥದಲ್ಲಿ ಗ್ರಹ ಎಂದು ಕರೆಯುತ್ತಾರೆ. ಗ್ರಹಗಳು ಪೀಡೆಯನ್ನು ಮಾಡುತ್ತವೆ. ಛಾಯಾಸೂನುಶ್ಚ ದುಃಖದಃ (ಪರಾಶರಹೋರಾ) – ಶನಿದೇವನು ದುಃಖವನ್ನು ಉಂಟುಮಾಡುತ್ತಾನೆ (ಸೂಚಿಸುತ್ತಾನೆ). ಇಂಥಹ ಗ್ರಹಗಳ ಪೀಡಾಪರಿಹಾರಕ್ಕಾಗಿ ಶಾಸ್ತ್ರಗಳು ಅನೇಕ ವಿಧಿ-ನಿರ್ದೇಶಗಳನ್ನು ಸೂಚಿಸುತ್ತವೆ. ಯಥೋಕ್ತಮೌಷಧಿಸ್ನಾನಂ ಗ್ರಹವಿಪ್ರಾರ್ಚನಂ ತಥಾ | ಗ್ರಹಾನುದ್ದಿಷ್ಯ ಹೋಮೋ ವಾ ತ್ರಿಧಾಶಾಂತಿರ್ಬುಧೈಃ ಸ್ಮೃತಾ || ವಿಶಿಷ್ಟ ಔಷಧಿಗಳಿಂದ ಸ್ನಾನ, ಬ್ರಾಹ್ಮಣರ ಸೇವೆ (ದಾನಾದಿಗಳಿಂದ), ಗ್ರಹಗಳ ಉದ್ದಿಷ್ಟ ಮಾಡುವ ಹೋಮ-ಹವನಗಳು – ಇವು ಗ್ರಹಗಳ ಶಾಂತಿಕರ್ಮಗಳು. ಇವುಗಳಲ್ಲದೆ ಪಾರಾಯಣ...

ತೌಡು ತೆಗೆಯದ ಅಮೃತಾಹಾರ

ತೌಡು ತೆಗೆಯದ ಅಮೃತಾಹಾರ ದೇಶದಲ್ಲಿ ಡಾಕ್ಟರುಗಳ ಸಂಖ್ಯೆ ಹೆಚ್ಚುತ್ತಿದೆ; ದೇಶೀಯ ಮತ್ತು ವಿದೇಶೀಯ ಪ್ರಚಂಡ ಔಷಧಿಗಳು ಹೊಸ ಹೊಸತಾಗಿ ನಿರ್ಮಿಸಲ್ಪಡುತ್ತಿವೆ; ರೋಗಗಳ ತಜ್ನರೂ ಮತ್ತು ರೋಗಗಳನ್ನು ಪರೀಕ್ಷಿಸುವ ವಿಧಾನಗಳೂ ವಿಫುಲವಾಗಿ ಬೆಳೆಯುತ್ತಿವೆ. ಆಸ್ಪತ್ರೆಗಳ ಸಂಖ್ಯೆ ವೃದ್ಧಿಗೊಳ್ಳುತ್ತಿದೆ. ಆದರೂ ರೋಗಿಗಳ ಸಂಖ್ಯೆ ಏಕೆ ಕಡಿಮೆಯಾಗುತ್ತಿಲ್ಲ? ಬ್ಲಡ್ ಪ್ರೆಶರ್, ಸಿಹಿಮೂತ್ರ, ಹೃದಯಾಘಾತ, ಕ್ಯಾನ್ಸರ್, ಮುಂತಾದ ರೋಗಗಳು ದಿನೇ ದಿನೇ ಹೆಚ್ಚು ಹೆಚ್ಚು ರೋಗಿಗಳನ್ನು ಏಕೆ ಬಲಿ ತೆಗೆದುಕೊಳ್ಳುತ್ತಿವೆ? ಈ ಪ್ರಶ್ನೆಗಳಿಗೆ ಸತ್ಯಪೂರ್ಣವಾದ ಒಂದೇ ಉತ್ತರವಿದೆ; ಅದೆಂದರೆ, ಜನತೆ ತಮ್ಮ ಆರೋಗ್ಯ ಮತ್ತು ರೋಗಪರಿಹಾರಕ್ಕಾಗಿ ಸರಿಯಾದ ಆಹಾರಕ್ಕಿಂತ ವಿಷಮಯವಾದ ಔಷಧಗಳನ್ನು ಹೆಚ್ಚಾಗಿ ಅವಲಂಬಿಸುತ್ತಿದೆ. ಈ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಪರಿಸ್ಥಿತಿ ಇನ್ನೂ ಭೀಕರವಾಗುತ್ತಾ ಹೋಗುವುದು ನಿಶ್ಚಿತ. ’ಆಹಾರಾಧೀನಮಾರೋಗ್ಯಂ’ ಎಂದರೆ, ’ಆರೋಗ್ಯದ ಸ್ಥಿರವಾದ ಬುನಾದಿಯೇ ಆಹಾರ’ ಎಂದು ಆಯುರ್ವೇದವು ಸಾವಿರಾರು ವರ್ಷಗಳ ಹಿಂದೆಯೇ ಸಾರಿದೆ. ಆಯುರ್ವೇದದ ಆ ಸತ್ಯವನ್ನು ಪಾಶ್ಚಾತ್ಯ ವಿಜ್ನಾನಿಗಳು ಒಂದೊಂದನ್ನಾಗಿ ತಿಳಿಯುತ್ತಾ ಬಂದಿದ್ದಾರೆ. ಅದಕ್ಕೆ ನಾವು ಒಂದು ಉದಾಹರಣೆಯನ್ನು ಹೇಳಬಹುದೇ? ೧೮೯೮ ರಲ್ಲಿ ಅಮೆರಿಕೆಯು ಫಿಲಿಪೈನ್ ದ್ವೀಪಗಳನ್ನು ವಶಪಡಿಸಿಕೊಂಡಿತು. ಆಗ ಅಲ್ಲಿಯ ಜನತೆಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಡಾಕ್ಟರುಗಳ ಸಮಿ...

ಪೋಷಕಾಂಶ ಬೇಕೆಂದರೆ ಸಿಪ್ಪೆಯನ್ನು ತಿನ್ನಿ

ಪೋಷಕಾಂಶ ಬೇಕೆಂದರೆ ಸಿಪ್ಪೆಯನ್ನು ತಿನ್ನಿ ಆಲೂಗೆಡ್ಡೆ ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ , ಅದು ದೇಹದಲ್ಲಿ ಬೊಜ್ಜು ಮತ್ತು ಗ್ಯಾಸ್ ಸಮಸ್ಯೆ ಹೆಚ್ಚು ಮಾಡುತ್ತೆ. ಆದರೆ ಅದನ್ನು ಸಿಪ್ಪೆ ಸಹಿತ ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಿಮಗೆ ಗೊತ್ತೆ? ಆಲೂಗೆಡ್ಡೆ ಸಿಪ್ಪೆಯನ್ನು ತೆಗೆಯದಿದ್ದರೆ ಅದರಲ್ಲಿರುವ ಮಣ್ಣು ಹೊಟ್ಟೆ ಸೇರುತ್ತದೆ ಎಂದು ಭಾವಿಸುವವರು ಗಮನಿಸಬೇಕಾದ ಅಂಶವೆಂದರೆ ಇನ್ನು ಮುಂದೆ ಸಿಪ್ಪೆ ತೆಗೆದು ಆಲೂಗೆಡ್ಡೆಯನ್ನು ತಿನ್ನುವ ಬದಲು, ಚೆನ್ನಾಗಿ ತೊಳೆದು ಸಿಪ್ಪೆ ಸಹಿತ ಬೇಹಿಸಿ ತಿನ್ನಿ. ಈ ರೀತಿ ತಿನ್ನುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿಯಲು ಮುಂದೆ ಓದಿ. 1.ಆಲೂಗೆಡ್ಡೆಯನ್ನು ಸಿಪ್ಪೆ ಸಹಿತ ಬೇಯಿಸಿ ತಿನ್ನವುದರಿಂದ ಇದರಲ್ಲಿರುವ ಅಧಿಕ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಇದನ್ನು ಇತರ ತರಕಾರಿ ಜೊತೆ ತಿನ್ನವುದರಿಂದ ಬೇರೆ ತರಕಾರಿಗಳು ಕೂಡ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. 2. ಆಲೂಗೆಡ್ಡೆ ಚಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೊಟಾಷಿಯಂ, ತಾಮ್ರಾಂಶ, ಮ್ಯಾಗ್ನಷಿಯಂ ಮತ್ತು ನಾರಿನಂಶ ಅಧಿಕವಿರುತ್ತದೆ. 3. ಆಲೂಗೆಡ್ಡೆ ಸಿಪ್ಪೆಯಲ್ಲಿ 20% ಕಬ್ಬಿಣ ಮತ್ತು 8ಗ್ರಾಂ ಪ್ರೊಟೀನ್ ಇದ್ದು ಇತರ ತರಕಾರಿಗಳಿಗೆ ಹೋಲಿಸಿದರೆ ಆಲೂಗೆಡ್ಡೆ ಸಿಪ್ಪೆಯಲ್ಲಿ ಈ ಅಂಶಗಳು ಅಧಿಕವಿದೆ. 4. ಆಲೂಗೆಡ್ಡೆ ಸಿಪ್ಪೆ ಸೇವಿಸಿದರೆ ಹಾನಿಗೊಳಗಾದ ಜೀವ ಕಣಗಳನ್ನು ಮತ್ತೆ ಸರಿ ಪಡಿಸು...

ಸ್ಪ್ರಿಂಗ್ ಈರುಳ್ಳಿ ತಿನ್ನಿ, 12 ಆರೋಗ್ಯ ಲಾಭ ಪಡೆಯಿರಿ

ಸ್ಪ್ರಿಂಗ್ ಈರುಳ್ಳಿ ತಿನ್ನಿ, 12 ಆರೋಗ್ಯ ಲಾಭ ಪಡೆಯಿರಿ ಸ್ಪ್ರಿಂಗ್ ಈರುಳ್ಳಿ ಅತ್ಯಂತ ಜನಪ್ರಿಯ ತರಕಾರಿ ಮತ್ತು ಅದು ಬಿಳಿ, ಹಳದಿ ಮತ್ತು ಕೆಂಪು ಸೇರಿದಂತೆ ಬೇರೆ ಬೇರೆ ವಿಧಗಳಲ್ಲಿ ದೊರಕುತ್ತವೆ. ಇದು ಮುಟ್ಟಲು ಮೃದುವಾಗಿರುತ್ತದೆ ಮತ್ತು ರುಚಿಯಲ್ಲಿ ಬಹಳ ಉತ್ತಮವಾಗಿದ್ದು ಹೇರಳ ಪೋಷಕಾಂಶಗಳಿಂದ ಕೂಡಿವೆ. ಬಹಳ ವರ್ಷಗಳಿಂದ ಚೀನೀ ಸಾಂಪ್ರದಾಯಿಕ ಔಷಧಿಗಳಲ್ಲಿ ಇದನ್ನು ಬಳಸುತ್ತಿದ್ದಾರೆ. ಈರುಳ್ಳಿಯಲ್ಲಿರುವಂತೆಯೇ ಸ್ಪ್ರಿಂಗ್ ಈರುಳ್ಳಿಯಲ್ಲೂ ಸಹ ಗಂಧಕದ ಪ್ರಮಾಣ ಹೆಚ್ಚಾಗಿರುತ್ತದೆ. ಹೆಚ್ಚಿನ ಗಂಧಕವಿರುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿರುತ್ತದೆ. ಈ ಮೃದು ಈರುಳ್ಳಿಯಲ್ಲಿ ಕ್ಯಾಲೋರಿ ಅಂಶ ಕಡಿಮೆಯಿರುತ್ತದೆ. ಸ್ಪ್ರಿಂಗ್ ಈರುಳ್ಳಿ ಒಂದು ವೈವಿಧ್ಯಮಯ ಗೊಂಡೆ ಈರುಳ್ಳಿ ಜಾತಿ ಮತ್ತು ಹಸಿರು ಈರುಳ್ಳಿ ಎಂದೂ ಕರೆಯುತ್ತಾರೆ. ಸ್ಪ್ರಿಂಗ್ ಈರುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ2 ಮತ್ತು ತಿಯಾಮೈನ್ ಅಂಶಗಳು ಹೇರಳವಾಗಿವೆ. ಅವುಗಳ ಜೊತೆಗೆ ವಿಟಮಿನ್ ಎ ಮತ್ತು ವಿಟಮಿನ್ ಕೆ ಸಹ ಇರುತ್ತವೆ. ಇವುಗಳಲ್ಲದೆ ಸ್ಪ್ರಿಂಗ್ ಈರುಳ್ಳಿಯು ತಾಮ್ರ, ಫಾಸ್ಫರಸ್, ಮೆಗ್ನೀಸಿಯುಮ್, ಪೊಟ್ಯಾಷಿಯಂ, ಕ್ರೋಮಿಯುಮ್, ಮ್ಯಾಂಗನೀಸ್ ಮತ್ತು ನಾರಿನಾಂಶಗಳ ಮೂಲವಾಗಿದೆ. ಸ್ಪ್ರಿಂಗ್ ಈರುಳ್ಳಿಯು ಕ್ವೆರ್ಸೆಟಿನ್(Quercetin) ಎಂಬುದಕ್ಕೆ ಫ್ಲೇವೋನಾಯ್ಡ್ (Flavonoids) ಪ್ರಬಲ ಮೂಲವಾಗಿದೆ. ಈ ರಾಸಾಯನವನ್ನು ಕ್ಯಾನ್ಸರ್ ಮತ್ತು ಆರ್ಟರಿ ಸಂಬಂಧಪಟ್ಟ ಖಾಯಿಲೆಗಳಿಗ...

ಸಪೋಟದಲ್ಲಿ 23 ಆರೋಗ್ಯ ವೃದ್ಧಿ ಗುಣಗಳಿವೆ!

ಸಪೋಟದಲ್ಲಿ 23 ಆರೋಗ್ಯ ವೃದ್ಧಿ ಗುಣಗಳಿವೆ! ಸಪೋಟ ಎಂಬ ಹಣ್ಣಿನ ಹೆಸರು ಬಹಳ ಜನಗಳಿಗೆ ಗೊತ್ತಿಲ್ಲದೇ ಇರಬಹುದು. ಸಪೋಟಾಹಣ್ಣಿಗೆ ಚಿಕ್ಕೂ ಇನ್ನೊಂದು ಚೆನ್ನಾಗಿ ಪರಿಚಯವಿರುವ ಹೆಸರು. ಮೂಲತಃ ನಾವು ಉಷ್ಣವಲಯದಲ್ಲಿ ಬೆಳೆಯುವ ನಿತ್ಯ ಹರಿದ್ವರ್ಣದ ಮರಕ್ಕೆ ಸಪೋಟ ಎಂದು ಕರೆಯುವ ರೂಢಿಯಾಗಿದೆ. ಸಪೋಟ ಹಣ್ಣು ಸೊಗಸಾದ ಕ್ಯಾಲರಿಯುಕ್ತ ಹಣ್ಣುಗಳಾದ ಮಾವಿನ ಹಣ್ಣು, ಬಾಳೆ ಹಣ್ಣು ಮತ್ತು ಹಲಸಿನಹಣ್ಣುಗಳ ವರ್ಗಕ್ಕೆ ಸೇರಿದೆ. ಈ ಹಣ್ಣಿಗೆ ಇತರೆ ಹೆಸರುಗಳು ನೋಸ್ ಬೆರ್ರಿ, ಸಪೋಡಿಲ್ಲಾ ಪ್ಲಮ್, ಚಿಕೂ ಸಪೋಟೆ, ಇತ್ಯಾದಿ. ಸಪೋಟಹಣ್ಣಿನಲ್ಲಿರುವ ವಿಶಾಲ ಶ್ರೇಣಿಯ ಪೋಷಕಾಂಶಗಳು ಆರೋಗ್ಯಕ್ಕೆ ಬಹಳ ಶ್ರೇಷ್ಠವಾಗಿರುವುದಲ್ಲದೆ ತಿನ್ನಲು ಅತ್ಯಂತ ರುಚಿಯಾಗಿಯೂ ಇರುತ್ತದೆ. ಈ ಹಣ್ಣಿನಲ್ಲಿರುವ ರುಚಿಯಾದ ತಿರುಳು ಸುಲಭವಾಗಿ ಜೀರ್ಣವಾಗುವುದು ಹಾಗೂ ಅದರಲ್ಲಿರುವ ಹೆಚ್ಚಿನ ಗ್ಲೂಕೋಸ್ ನಮ್ಮ ದೇಹಕ್ಕೆ ಪುನರ್ಚೇತನ ಕೊಡುವ ಶಕ್ತಿಯುಳ್ಳದ್ದಾಗಿದೆ. ಆಗಲೇ ಹೇಳಿದಂತೆ ಈ ಹಣ್ಣಿನಲ್ಲಿ ಜೀವಸತ್ವಗಳು (ವಿಟಮಿನ್ಸ್), ಖನಿಜಾಂಶಗಳು ಮತ್ತು ಟ್ಯಾನಿನ್ ಇವುಗಳು ಸಮೃದ್ಧವಾಗಿವೆ. ಅಷ್ಟು ಮಾತ್ರವಲ್ಲದೆ ಇನ್ನು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ: ಸಪೋಟಹಣ್ಣಿನ ವಿವಿಧ ಆರೋಗ್ಯದ ಲಾಭಗಳ ಕಡೆಗೆ ಗಮನ ಹರಿಸೋಣ ಬನ್ನಿ. ಸಪೋಟ(ಚಿಕ್ಕೂ)ಹಣ್ಣಿನ 23 ಆರೋಗ್ಯಕ್ಕಾಗುವ ಲಾಭಗಳು.

ಕಣ್ಣು ಉರಿ, ತುರಿತಕ್ಕೆ ಇಲ್ಲಿದೆ ಮನೆಮದ್ದು

ಕಣ್ಣು ಉರಿ, ತುರಿತಕ್ಕೆ ಇಲ್ಲಿದೆ ಮನೆಮದ್ದು Natural Remedies For Itchy Eyes ಕಣ್ಣು ತುರಿಸುವುದು, ಕಣ್ಣು ಉರಿ ಇವೆಲ್ಲಾ ಸಾಮನ್ಯವಾದ ಸಮಸ್ಯೆಗಳು. ಆದರೆ ಈ ರೀತಿ ಉಂಟಾದಾಗ ತುಂಬಾ ಕಿರಿಕಿರಿ ಉಂಟಾಗುವುದು. ಕಣ್ಣಿಗೆ ಅಲರ್ಜಿಯಾದಾಗ ಕಂಪ್ಯೂಟರ್ ಮುಂದೆ ಕೂತಾಗ, ಟಿವಿ ನೋಡುವಾಗ ಕಣ್ಣಿನಿಂದ ನೀರು ಸುರಿಯುತ್ತಿರುತ್ತದೆ. ಈ ರೀತಿಯ ಸಮಸ್ಯೆಗಳನ್ನು ಈ ಕೆಳಗಿನ ಮನೆ ಮದ್ದಿನಿಂದ ಪರಿಹರಿಸಬಹುದು. 1. ರೋಸ್ ವಾಟರ್ ನಿಂದ ಕಣ್ಣು ಶುಚಿಗೊಳಿಸಿದರೆ ಕಣ್ಣು ತಂಪಾಗುವುದು, ಇದರಿಂದ ಕಣ್ಣು ಉರಿ ಉಂಟಾಗುವುದಿಲ್ಲ. 2. ಕಣ್ಣು ಉರಿಯಾಗುತ್ತಿರುವಾಗ ಸೌತೆಕಾಯಿ ಕತ್ತರಿಸಿ ಕಣ್ಣಿಗೆ ಇಡುವುದು ಒಳ್ಳೆಯದು. 3. ಆಲೂಗೆಡ್ಡೆ ಕತ್ತರಿಸಿ ಕಣ್ಣಿಗೆ ಇಟ್ಟರೆ ಕಣ್ಣಿನ ಉರಿ ಕಡಿಮೆಯಾಗುವುದು. 4. ಹೊರಗಿನಿಂದ ಬಂದ ತಕ್ಷಣ ಮುಖವನ್ನು ತೊಳೆಯಿರಿ, ಕಣ್ಣುನ್ನು ಶುದ್ಧ ನೀರಿನಲ್ಲಿ ತೊಳೆಯುವುದರಿಂದ ದೂಳಿನಿಂದ ಉಂಟಾಗುವ ಅಲರ್ಜಿ ಹೋಗಲಾಡಿಸಬಹುದು. 5. ಕಣ್ಣು ಉರಿ ಅಥವಾ ತುರಿಸುತ್ತಿದ್ದರೆ ಹತ್ತಿಯನ್ನು ಹಾಲಿನಲ್ಲಿ ಅದ್ದಿ ಅದರಿಂದ ಕಣ್ಣನ್ನು ಶುಚಿಗೊಳಿಸಬೇಕು. 6. ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವಾಗ 1 ಗಂಟೆಯಲ್ಲಿ 2-3 ನಿಮಿಷ ಕಣ್ಣಿಗೆ ವಿಶ್ರಾಂತಿ ಕೊಡಬೇಕು. ಸ್ವಲ್ಪ ದೂರಕ್ಕೆ ನೋಡುವುದು, ಕಣ್ಣು ಮಿಟುಕಿಸುವ ವ್ಯಾಯಾಮ ಒಳ್ಳೆಯದು. 7. ಕಣ್ಣಿಗೆ ಲೆನ್ಸ್ ಬಳಸುವವರು ಅದನ್ನು ತುಂಬಾ ಹೊತ್ತು ಬಳಸದೆ, ಮನೆಯಲ್ಲಿರುವಾಗ ಕನ್ನಡಕ ಬಳಸುವುದ...