Skip to main content

Posts

ದಾಂಪತ್ಯ ಜೀವನ ಆಯ್ಕೆಗೆ ಪೂರಕವಾಗುವ ಗ್ರಹ ಸ್ಥಿತಿ1

ವಿವಾಹವೆಂಬ ಕಲ್ಪನೆಯು ಒಂದು ದೇಶದಿಂದ ಮತ್ತೊಂದು ದೇಶಕ್ಕೂ ಹಾಗು ಪೀಳಿಗೆಯಿಂದ ಪೀಳಿಗೆಗೂ ಬದಲಾಗುತ್ತಿರುತ್ತದೆ. ವಿವಾಹ ಸಂಬಂಧವು ಮನುಷ್ಯನ ವೈಯಕ್ತಿಕ ಬೆಳವಣಿಗೆ ಮತ್ತು ಆಧ್ಯಾತ್ಮಿಕ ಮಟ್ಟ ಪ್ರಮುಖವಾಗಿದೆ. ಇದು ಮಾನವನಿಗೆ ಕರ್ಮಗಳ ಮೂಲಕ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಪರಿಪೂರ್ಣತೆಯನ್ನು ನೀಡುತ್ತದೆ. ವಿವಾಹವು ಮೂರು ಘಟ್ಟಗಳಲ್ಲಿ ಅಭಿವೃದ್ದಿ ಹೊಂದಲು ಸಹಕಾರಿಯಾಗಿದೆ - 1. ಭೌತಿಕ ಬೆಳವಣಿಗೆ 2. ಬೌದ್ಧಿಕ ಬೆಳವಣಿಗೆ 3. ಮಾನಸಿಕ ಬೆಳವಣಿಗೆ. ಈ ಮೂರು ಆಧಾರದ ಮೇಲೆ ಗಂಡು ಮತ್ತು ಹೆಣ್ಣಿನ ಅವಶ್ಯಕತೆಗಳು ಏನು ಎಂಬುದನ್ನು ಅಭ್ಯಸಿಸಬಹುದು. ಇದರಿಂದ ಅವರುಗಳ ಸಂಬಂಧದಲ್ಲಿ ಸುಧಾರಣೆಯನ್ನು ಕಂಡುಕೊಳ್ಳಬಹುದು. ಪುರುಷ ಕುಂಡಲಿಯಲ್ಲಿ ಕುಜ ಮತ್ತು ಶುಕ್ರ ಪುರುಷ ಕುಂಡಲಿಯಲ್ಲಿ ಶುಕ್ರವು ಆತ ಯಾರಿಗೆ ಆಕರ್ಷಿತರಾಗುತ್ತಾನೆಂಬುದನ್ನು ತಿಳಿಸಿದರೆ, ಕುಜವು ಹೆಣ್ಣಿನ ಜೊತೆಗೆ ವರ್ತನೆಯನ್ನು ತಿಳಿಸುತ್ತದೆ. 1. ಪುರುಷನ ಕುಂಡಲಿಯಲ್ಲಿ ಶುಕ್ರನು ಕನ್ಯೆಯ ಗುಣಲಕ್ಷಣಗಳನ್ನು ಮತ್ತು ಯಾವ ರೀತಿಯ ಕನ್ಯೆ ಆಯ್ಕೆ ಮಾಡುತ್ತಾನೆಂದು ತಿಳಿಸುತ್ತದೆ. ಉದಾಹರಣೆಗೆ ಶುಕ್ರನು ಮೀನ ರಾಶಿಯಲ್ಲಿದ್ದರೆ ಕಲಾನಿಪುಣ ಕನ್ಯೆಯನ್ನು ಇಷ್ಟಪಡುತ್ತಾನೆ. ಶುಕ್ರನು ಕುಂಭರಾಶಿಯಲ್ಲಿದ್ದು ಕುಜನೊಂದಿಗೆ ವೃಷಭ ರಾಶಿ ಅಥವಾ ತುಲಾ ರಾಶಿಯಲ್ಲಿದ್ದರೆ ಅವರ ವೈಯಕ್ತಿಕ ದಾಂಪತ್ಯ ಜೀವನದಲ್ಲಿ ವ್ಯತ್ಯಾಸಗಳನ್ನು ನೋಡಬಹುದು. 2. ಶುಕ್ರನು ಪೃಥ್ವಿತತ್ವದ ರಾಶಿಗಳಾದ ವೃಷಭ, ಕ...

ದಾಂಪತ್ಯ ಸುಖಕ್ಕಾಗಿ 10 ಮಹತ್ವದ ಟಿಪ್ಸ್‌ಗಳು

1. ಸಂಗಾತಿಯ ಜೊತೆಗೆ : ಖುದ್ದಾಗಿ ನೀವೇ ಫ್ರೀಯಾಗಿರಿ ಮತ್ತು ಮನಸ್ಸಿನ ಇಚ್ಛೆಗಳನ್ನು ಸಂಗಾತಿಯ ಜೊತೆಗೆ ಶೇರ್‌ ಮಾಡಿಕೊಳ್ಳಿ. 2. ರೂಟಿನ್‌ ಮುರಿಯಿರಿ : ಸೆಕ್ಸ್‌ ಎನ್ನುವುದು ಕೇವಲ ಬೆಡ್‌‌‌ರೂಂ ವಿಷಯವಲ್ಲ ಮತ್ತು ಇದಕ್ಕಾಗಿ ಮೀಸಲು ಸಮಯವಷ್ಟೆ ಅಲ್ಲ. ಯಾವಾಗ ಮನಸ್ಸಿನಲ್ಲಿ ಸೆಕ್ಸ್‌ ಭಾವನೆ ಬರುತ್ತದೆಯೊ ಆಗ ಸೆಕ್ಸ್‌‌ನ ಇಚ್ಛೆಯನ್ನು ಸಂಗಾತಿಗೆ ತಿಳಿಸಿ. 3, ಜಗತ್ತು ಹೊಸ ಐಡಿಯಾಗಳದ್ದಾಗಿದೆ: ಸೆಕ್ಸ್‌‌ಲೈಫ್‌‌‌ ಉತ್ತಮವಾಗಿಸಲು ಹೊಸ ಐಡಿಯಾ ಕಂಡು ಹಿಡಿಯಿರಿ. 4 ಆರೋಗ್ಯಕರ ಸೆಕ್ಸ್‌ ಲೈಫ್‌‌ಗಾಗಿ ಉತ್ತಮ ಮತ್ತು ಪೌಷ್ಠಿಕ ಆಹಾರ ಸೇವಿಸಿ ಮತ್ತು ಪ್ರತಿ ನಿತ್ಯ ತಪ್ಪದೆ ವ್ಯಾಯಾಮ ಮಾಡಿ. ಯಾರು ಫಿಟ್‌‌‌ ಆಗಿದ್ದಾರೋ ಅವರ ಸೆಕ್ಸ್‌ ಹಿಟ್‌‌ ಆಗಿರುತ್ತದೆ. 5.ಫೋರ್‌‌ ಪ್ಲೇನಲ್ಲಿ ಸಮಯ ನೀಡಿ ಮತ್ತು ಹಂತ ಹಂತವಾಗಿ ಕ್ಲೈಮ್ಯಾಕ್ಸ್‌‌‌‌‌‌ವರೆಗೆ ತಲುಪಿ. ದಾಂಪ್ಯತ್ಯದ ಎಂಜಾಯ್ ಕೇವಲ ಮನೆಯಲ್ಲಿ ಅಲ್ಲ, ಪ್ರವಾಸದಲ್ಲು ಇದೆ. ಇದಕ್ಕಾಗಿ ನೀವು ವಿವಿಧ ಪ್ರವಾಸಿ ತಾಣಗಳಿಗೆ ಹೋಗಿ ಮತ್ತು ಎಂಜಾಯ್‌ ಮಾಡಿ. 6. ಮನಸ್ಸಿನ ಇಷ್ಟವಾದ ಅಂಶಗಳನ್ನು ಬಹಿರಂಗ ಪಡಿಸಿ. ಇದರಿಂದ ಖುಷಿ ಸಿಗುತ್ತೆ. ಸೆಕ್ಸ್‌‌ಗೆ ಸಂಬಂಧಿಸಿದ ಯಾವ ಅಂಶಗಳು ಇಷ್ಟವಿಲ್ಲವೋ ಅವುಗಳನ್ನು ಯಾವುದೇ ಮುಲಾಜಿಲ್ಲದೆ ಸಂಗಾತಿಗೆ ತಿಳಿಸಿ. 7. ಸೆಕ್ಸ್‌‌ ಸಮಯದಲ್ಲಿ ಚಿಂತೆಗಳನ್ನು ದೂರವಿಡಿ. ಸೆಕ್ಸ್‌‌‌ನಲ್ಲಿ ಏಕಾಗ್ರತೆ ಇದ್ದರೆ ಮಾತ್ರ ಸೆಕ್ಸ್‌ ಮಜವಾಗಿರುತ್ತದೆ. ಮಾ...

ದಾಂಪತ್ಯ ಜೀವನ ಆಯ್ಕೆಗೆ ಪೂರಕವಾಗುವ ಗ್ರಹ ಸ್ಥಿತಿ

ವಿವಾಹವೆಂಬ ಕಲ್ಪನೆಯು ಒಂದು ದೇಶದಿಂದ ಮತ್ತೊಂದು ದೇಶಕ್ಕೂ ಹಾಗು ಪೀಳಿಗೆಯಿಂದ ಪೀಳಿಗೆಗೂ ಬದಲಾಗುತ್ತಿರುತ್ತದೆ. ವಿವಾಹ ಸಂಬಂಧವು ಮನುಷ್ಯನ ವೈಯಕ್ತಿಕ ಬೆಳವಣಿಗೆ ಮತ್ತು ಆಧ್ಯಾತ್ಮಿಕ ಮಟ್ಟ ಪ್ರಮುಖವಾಗಿದೆ. ಇದು ಮಾನವನಿಗೆ ಕರ್ಮಗಳ ಮೂಲಕ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಪರಿಪೂರ್ಣತೆಯನ್ನು ನೀಡುತ್ತದೆ. ವಿವಾಹವು ಮೂರು ಘಟ್ಟಗಳಲ್ಲಿ ಅಭಿವೃದ್ದಿ ಹೊಂದಲು ಸಹಕಾರಿಯಾಗಿದೆ - 1. ಭೌತಿಕ ಬೆಳವಣಿಗೆ 2 . ಬೌದ್ಧಿಕ ಬೆಳವಣಿಗೆ 3. ಮಾನಸಿಕ ಬೆಳವಣಿಗೆ. ಈ ಮೂರು ಆಧಾರದ ಮೇಲೆ ಗಂಡು ಮತ್ತು ಹೆಣ್ಣಿನ ಅವಶ್ಯಕತೆಗಳು ಏನು ಎಂಬುದನ್ನು ಅಭ್ಯಸಿಸಬಹುದು. ಇದರಿಂದ ಅವರುಗಳ ಸಂಬಂಧದಲ್ಲಿ ಸುಧಾರಣೆಯನ್ನು ಕಂಡುಕೊಳ್ಳಬಹುದು. ಪುರುಷ ಕುಂಡಲಿಯಲ್ಲಿ ಕುಜ ಮತ್ತು ಶುಕ್ರ ಪುರುಷ ಕುಂಡಲಿಯಲ್ಲಿ ಶುಕ್ರವು ಆತ ಯಾರಿಗೆ ಆಕರ್ಷಿತರಾಗುತ್ತಾನೆಂಬುದನ್ನು ತಿಳಿಸಿದರೆ, ಕುಜವು ಹೆಣ್ಣಿನ ಜೊತೆಗೆ ವರ್ತನೆಯನ್ನು ತಿಳಿಸುತ್ತದೆ.

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ಮಂಗಳಮಯವಾದ ಸಂಸ್ಕಾರ.ಗುರುಹಿರಿಯರು ಪ್ರಾಪ್ತವಯಸ್ಸಿಗೆ ಬಂದ ತಮ್ಮ ವರನಿಗೆ ಸೂಕ್ತವಾದ ವಧುವನ್ನು ಅನ್ವೇಷಿಸಿ ಸುಂದರ ದಾಂಪತ್ಯ ಜೀವನ ನಡೆಸಲೆಂಬ ಸದಾಶಯದೊಂದಿಗೆ ವಧು-ವರರಿಗೆ ಬಾಂಧವ್ಯ ಬೆಸೆಯುವ ಸುಮಧುರವಾದ ಕ್ಷಣ. ಇಂತಹ ಸುಮಧುರವಾದ ಕ್ಷಣವು ಜೀವನಪರ್ಯಂತ ಸುಖವನ್ನು ನೀಡುವಂತೆ ಮಾಡಿ, ಪರಸ್ಪರ ಅರಿಯುವಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ‘ ವಿವಾಹ ಸಮಯ’ ವನ್ನು ನಿಗದಿಮಾಡಲಾಗುತ್ತದೆ. ಸಾಮಾನ್ಯವಾಗಿ ಸಪ್ತಮಸ್ಥಿತಿ, ಗ್ರಹದೆಸೆ,ಅಥವಾ ಸಪ್ತಮವನ್ನು ವೀಕ್ಷಿಸುವ ಗ್ರಹದೆಸೆ ಸಪ್ತಮಾದಿ ಪತಿಯ ದಶಾ ಭುಕ್ತಿಯಕಾಲಗಳು,ಲಗ್ನಾಧಿಪತಿಯು ಸಪ್ತಮಭಾವದಲ್ಲಿ ಸಂಚರಿಸುವಾಗ ಶುಕ್ರ ಮತ್ತು ಸಪ್ತಮಾಧಿಪತಿ ಗೋಚಾರದಲ್ಲಿ ಲಗ್ನಾಧಿಪತಿ ಸ್ಥಿತರಾಶಿ ಮತ್ತು ಅದರ ನವಾಂಶ ತ್ರಿಕೋಣದಲ್ಲಿ ಸಂಚರಿಸುವಾಗ ವಿವಾಹ ಸಮಯವನ್ನು ನಿಷ್ಕರ್ಷಿಸುತ್ತಾರೆ. ಇಷ್ಟಲ್ಲದೇ ಸಪ್ತಮಾಧಿಪತಿಯ ದೆಸೆ ಮತ್ತು ಸಪ್ತಮಸ್ಥಾನದಲ್ಲಿರುವ ಗ್ರಹಗಳ ಅಂತರ್ದೆಸೆ ಶುಕ್ರಯುಕ್ತನಾಗಿರುವ ಸಪ್ತಮಾಧಿಪತಿಯು ದಶಾಭುಕ್ತಿ,ಸಪ್ತಮಾಧಿಪತಿಯ ಮೇಲೆ ಗುರುಸಂಚಾರ ಮಾಡುವ ಕಾಲದಲ್ಲಿ ಅಥವಾ ಸಪ್ತಮಾಧಿಪತಿಯು ಯಾವ ನಕ್ಷತ್ರದಲ್ಲಿರುತ್ತಾನೋ, ಆ ದಶಾ ನಕ್ಷತ್ರಗಳ ಮೇಲೆ ಗುರು ಸಂಚಾರ ಮಾಡುವ ಕಾಲದಲ್ಲಿ, ವಿವಾಹ ಸಮಯವನ್ನು ನಿಷ್ಕರ್ಷಿಸುತ್ತಾರೆ. ದಶಾನಕ್ಷತ್ರದಲ್ಲಿ ಗುರ...

*ಮೂಲಾ ನಕ್ಷತ್ರ ಮೂರುಲೋಕವಾಸ*

*ಮೂಲಾ ನಕ್ಷತ್ರ ಮೂರುಲೋಕವಾಸ* ಮೂಲಾ ನಕ್ಷತ್ರವು ಒಂದು ವರ್ಷದಲ್ಲಿ ತಲಾ ೪ ತಿಂಗಳಿನಂತೆ ಸ್ವರ್ಗ,ಮರ್ತ್ಯ,ಪಾತಾಳಗಳಲ್ಲಿ ವಾಸಮಾಡುತ್ತದೆ. ಆಷಾಡ,ಆಶ್ವೀಜ,ಬಾದ್ರಪದ,ಮಾಘಮಾಸಗಳಲ್ಲಿ ಸ್ವರ್ಗಲೋಕದಲ್ಲಿಯು. ವೈಶಾಖ,ಜ್ಯೇಷ್ಟ,ಮಾರ್ಗಶಿರ,ಪಾಲ್ಗುಣ ಮಾಸಗಳಲ್ಲಿ ಪಾತಾಳದಲ್ಲು. ಚೈತ್ರ,ಶ್ರಾವಣ,ಕಾರ್ತೀಕ,ಪುಷ್ಯ ಮಾಸಗಳಲ್ಲಿ ಭೂಲೋಕದಲ್ಲಿಯು ವಾಸಮಾಡುತ್ತದೆ. ಭೂಲೋಕದಲ್ಲಿ ಮೂಲಾ ನಕ್ಷತ್ರವು ವಾಸಮಾಡುತ್ತಿರುವಾಗ ಮಗು ಜನಿಸಿದರೆ(ಅಂದರೆ ಚೈತ್ರ,ಶ್ರಾವಣ,ಕಾರ್ತೀಕ,ಪುಷ್ಯ ಮಾಸಗಳಲ್ಲಿ)ಮಾತ್ರ ದೋಷ ಉಂಟಾಗುತ್ತದೆ.ಆಗ ಗೋಮುಖಪ್ರಸವ ಶಾಂತಿ ಮಾಡಿಸಬೇಕು. ಪೂರ್ವಾಷಾಡ:- ಈ ನಕ್ಷತ್ರದಲ್ಲಿ ಮಗು ಜನಿಸಿದರೆ ಮಗುವಿನ ತಂದೆ-ತಾಯಿಗೆ ದೋಷವುಂಟಾಗುತ್ತದೆ. ಆದ್ದರಿಂದ ಕಂಚಿನ ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ವಸ್ತ್ರ,ಫಲ,ತಾಂಬೂಲ,ದಕ್ಷಿಣೆ ಸಹಿತ ಪುರೋಹಿತರಿಗೆ/ಬಡವರಿಗೆ/ಗುರುಗಳಿಗೆ ದಾನಕೊಡಬೇಕು ಈ ಕಾರ್ಯ ಮಗು ಜನಿಸಿದ ೨೭ ದಿನದೊಳಗೆ ನಡೆಯಬೇಕು. ಅಶ್ಲೇಷ:- ಈ ನಕ್ಷತ್ರಕ್ಕೆ ಆದಿಶೇಷನು ಅಧಿಪತಿಯಾಗಿರುವುದರಿಂದ ಸರ್ಪದ ಹೆಡೆ ಅಗಲದಷ್ಟು ಇರುವ ಕಲಾಪತ್ತಿನ ಅಂಚುಳ್ಳ ಶಾಲನ್ನು ತಂದುಶಾಂತಿ ಮಾಡತಕ್ಕ ಸ್ಥಳದಲ್ಲಿ ಸಾರಿಸಿ ಗಣಪತಿಯನ್ನು ಸ್ಥಾಪಿಸಿ ಪೂಜಿಸಬೇಕು.ರಂಗವಲ್ಲಿಯಿಂದ ಕಮಲಾಕಾರದ ಮಂಡಲವನ್ನು ಬರೆದು ಒಂದು ಹೊಸ ಮೊರದಲ್ಲಿ ಭತ್ತವನ್ನು (ಅಕ್ಕಿ)ಹರವಿ ಒಂದು ದೊನ್ನೆಯಲ್ಲಿ ೯ವಿಧ ದಾನ್ಯವನ್ನು ಹಾಕಿ(ನವದಾನ್ಯ)೯ ವಿಧವಾದ ಪತ್ರೆಗಳಿಂದ(ಬಿಲ್ವ,ಭನ್ನಿ,ಎಕ್ಕ,ಅರಳ...

ಜನನ ನಕ್ಷತ್ರ ದೋಷ ಮತ್ತು ಶಾಂತಿ(ಪರಿಹಾರ)

ಅಶ್ವಿನಿ:- ಈ ನಕ್ಷತ್ರದಲ್ಲಿ ಗಂಡು ಮಗು ಜನಿಸಿದರೆ ತಂದೆಗೆ ಅರಿಷ್ಟ ಇದು ೩ತಿಂಗಳವರೆಗು ಇರುತ್ತದೆ.ಆದ್ದರಿಂದ ಇದರ ಪರಿಹಾರಕ್ಕಾಗಿ ಮಗು ಜನಿಸಿದ ೫ದಿನದೊಳಗಾಗಿ ಒಂದು ಗುಲಗಂಜಿ ತೂಕದ ಬಂಗಾರ ಮತ್ತು ಬಿಳಿವಸ್ತ್ರವನ್ನು ಫಲ,ತಾಂಬೂಲ ಸಹಿತ ಪುರೋಹಿತರಿಗೆ ಅಥವ ಗುರುಗಳಿಗೆ ಅಥವ ತೀರಾ ಬಡವರಿಗೆ ದಕ್ಷಿಣೆ ಸಮೇತ ದಾನಕೊಡುವುದು. ಆನಂತರ ತಂದೆಯು ಮಗುವಿನ ಮುಖವನ್ನು ನೋಡಬೇಕು.ದಾನಕೊಡದೆ ತಂದೆ ಮಗುವಿನ ಮುಖವನ್ನು ನೋಡಬಾರದು. ಭರಣಿ:- ಈ ನಕ್ಷತ್ರದಲ್ಲಿ ಜನಿಸಿದ ಕೂಸಿಗೆ ಅರಿಷ್ಟ ಉಂಟಾಗುವುದು. ಜನಿಸಿದ ೨೭ದಿನದೊಳಗಾಗಿ ತಾಮ್ರದ ಪಾತ್ರೆಯಲ್ಲಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಮಾತಾಪಿತೃಗಳು ಜಂಗಮರಿಗೆ ದಾನಕೊಡಬೇಕು. ರೋಹಿಣಿ:- ಈ ನಕ್ಷತ್ರದಲ್ಲಿ ಶ್ರೀ ಕೃಷ್ಣ ಜನಿಸಿ ಸೋದರ ಮಾವನಾದ ಕಂಸನಿಗೆ ಕಂಟಕನಾದನು ಆದ್ದರಿಂದ ಮಗುವಿನ ಸೋದರಮಾವಂದಿರಿಗೆ ಅರಿಷ್ಟ ಉಂಟಾಗುವುದರಿಂದ ಬೆಳ್ಳಿಪಾತ್ರೆಯಲ್ಲಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಸೋದರಮಾವಂದಿರು ಪುರೋಹಿತರಿಗೆ ದಾನಮಾಡಿದ ಮೇಲೆ ಮಗುವಿನ ಮುಖವನ್ನು ನೋಡಬೇಕು.ಈ ಕಾರ್ಯವನ್ನು ಮಗು ಜನಿಸಿದ ೨೭ದಿನದೊಳಗಾಗಿ ಮಾಡಬೇಕು. ಆರಿದ್ರಾ:- ಈ ನಕ್ಷತ್ರದಲ್ಲಿ ಮಗು ಜನಿಸಿದರೆ ತಾಯಿಗೆ ಅರಿಷ್ಟ ಉಂಟಾಗುವುದರಿಂದ ಹಿತ್ತಾಳೆ ಪಾತ್ರೆಯಲ್ಲಿ ೨೭ದಿನದೊಳಗಾಗಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಮಾತಾಪಿತೃಗಳು ಪುರೋಹಿತರಿಗೆ ದಾನಕೊಡಬೇಕು. ಪುಷ್ಯ:- ಈ ನಕ್ಷ್ತತ್ರದಲ್...

ಜಾತಕ ಫಲ ತರುವುದು ಭಾಗ್ಯ

ಭಾಗ್ಯಕ್ಕಾಗಿ ಚಿಂತೆ ಮಾಡುವ ಜನರೇ ಇರುವರು. ಭಾಗ್ಯಕ್ಕಾಗಿ ಬಹಳ ಪ್ರಯತ್ನ ಮಾಡುವವರೂ ಇರುತ್ತಾರೆ. ಆದರೆ ಪ್ರಯತ್ನ ಮಾಡದೆ ಭಾಗ್ಯ ಬರುವುದು ಇದೆ. ಇದು ಅವರವರ ಗ್ರಹಗಳಿಂದ ಬರುತ್ತದೆ. ರಾಷ್ಟ್ರದ ಪ್ರಧಾನಿಯ ಜಾತಕದಲ್ಲಿ ಶುಕ್ರ ಮತ್ತು ಶನಿಯ ದೃಷ್ಟಿ ಗುರುವಿನ ಮೇಲೆ ಇರುವುದರಿಂದ ಇವರು ರಾಷ್ಟ್ರದ ಮುಖಂಡರಾದರು. ಸಾಮಾನ್ಯವಾಗಿ ಜಾತಕದಲ್ಲಿ ಲಗ್ನ ಅಥವಾ ಚಂದ್ರನ ನವಮ ಸ್ಥಾನ ಭಾಗ್ಯ ಸ್ಥಾನ. ಇದರಲ್ಲಿ ಬಲಿಷ್ಠವಾಗಿರುವವನ ಭಾವದಿಂದ ಭಾಗ್ಯವನ್ನು ನೋಡಬೇಕು. ಭಾಗ್ಯದ ಅಧಿಪತಿ ಇರುವ ಸ್ಥಾನ, ಭಾಗ್ಯದಲ್ಲಿರುವ ಬಲಿಷ್ಠ ಅಥವಾ ಬಲಹೀನ ಗ್ರಹರು ಇದನ್ನೆಲ್ಲ ನೋಡಿ ಲೆಕ್ಕಾಚಾರ ಮಾಡಬೇಕು. ಭಾಗ್ಯ ಸ್ಥಾನದಲ್ಲಿ ಭಾಗ್ಯಾಧಿಪತಿ ಇದ್ದರೆ ಅಥವಾ ಭಾಗ್ಯ ಸ್ಥಾನವನ್ನು ನೋಡಿದರೆ ಜಾತಕನು ಭಾಗ್ಯ ಫಲ ಪಡೆಯುತ್ತಾನೆ. ತೃತೀಯ ಪಂಚಮ ಅಥವಾ ಲಗ್ನದಲ್ಲಿರುವ ಗ್ರಹರು ಬಲಿಷ್ಠವಾಗಿ ಭಾಗ್ಯ ಭಾವವನ್ನು ಪೂರ್ಣ ದೃಷ್ಟಿಯಿಂದ ನೋಡಿದರೆ ಇಂತಹವರು ಅತಿ ಭಾಗ್ಯವಂತರಾಗುತ್ತಾರೆ. ಗುರುವು ಭಾಗ್ಯ ಭಾವದಲ್ಲಿ ಇದ್ದಾಗ ಜಾತಕನು ಮಂತ್ರಿ ಆಗುತ್ತಾನೆ. ನವಮದ ಗುರುವನ್ನು ಚಂದ್ರನು ನೋಡಿದರೆ ಜಾತಕನು ಭೋಗವಂತನಾಗುತ್ತಾನೆ. ಭಾಗ್ಯದಲ್ಲಿರುವ ಗುರುವನ್ನು ಕುಜನು ನೋಡಿದರೆ ಜಾತಕನಲ್ಲಿ ಬಂಗಾರ ಇರುತ್ತದೆ. ಭಾಗ್ಯದಲ್ಲಿರುವ ಗುರುವನ್ನು ಬುಧನು ನೋಡಿದರೆ ಇವರು ಧನವಂತರಾಗುತ್ತಾರೆ. ನವಮದಲ್ಲಿರುವ ಗುರುವನ್ನು ಶುಕ್ರನು ನೋಡಿದರೆ ಮನೆ, ವಾಹನ ಮತ್ತು ಧನದಿಂದ ಕೂಡಿದವನಾಗುತ್ತಾನೆ. ನವಮದಲ್ಲಿರ...