ಸಾಮಾನ್ಯವಾಗಿ ಎಲ್ಲರಿಗೂ ಕನಸುಗಳು ಬೀಳುತ್ತವೆ. ಕೆಲವು ಸಿಹಿಗನಸಾದರೆ, ಮತ್ತೆ ಕೆಲವು ದುಃಸ್ವಪ್ನ! ಈ ಕನಸುಗಳು ಕೆಲವರಿಗೆ ಶಕುನಗಳಾಗಿ ಕಾಣುವುದೂ ಉಂಟು. ಇನ್ನು ಕೆಲವಕ್ಕೆ ಯಾವ್ಯಾವುದೋ ನಂಬಿಕೆಗಳನ್ನು ತಳುಕು ಹಾಕಲಾಗಿದೆ. ಉದಾಹರಣೆಗೆ, ಲೋಕದ ಕಣ್ಣಲ್ಲಿ ನಿಂದನೆಗೆ ಈಡಾಗಿರುವ ವೇಶ್ಯೆಯು ಕನಸಿನಲ್ಲಿ ಬಂದರೆ ಶುಭಶಕುನ! ಹೀಗೆ ವಾಸ್ತವಕ್ಕೂ ಕನಸಿನ ಗ್ರಹಿಕೆಗೂ ವೈರುಧ್ಯಗಳಿವೆ. ಹಾಗಾದರೆ, ಕನಸೆನ್ನುವುದು ನಿಜಕ್ಕೂ ಏನು? * ಲಕ್ಷ್ಮಿವಾರಣಾಶಿ ಅಡ್ಕತ್ತಿಮಾರ್ ಪ್ರತಿಯೊಬ್ಬನಿಗೂ ರಾತ್ರಿ ಕನಸುಗಳು ಬರುತ್ತವೆ. ಕೆಲವು ಜನ ತಮ್ಮ ಕನಸುಗಳು ನಿಜವಾಗಿಯೂ ಘಟಿಸಿದವು ಎಂದು ಹೇಳಿಕೊಂಡರೆ, ಮತ್ತೆ ಕೆಲವರು ಅವರ ಕನಸುಗಳು ಭಯಾನಕವಾದ ಚಿತ್ರಗಳನ್ನೊಳಗೊಂಡು ರಾತ್ರಿ ಎಲ್ಲಾ ಮನಸ್ಸನ್ನು ಕೆಡಿಸಿ ದುಃಸ್ವಪ್ನವಾಗಿ ಕಾಡಿತು ಎನ್ನುತ್ತಾರೆ. ಕನಸೆಂಬುದು ಯಾವತ್ತಿಗೂ ಪೂರ್ಣವಾಗಿ ಅರಿಯಲಾರದಂತಹ ಒಂದು ನಿಗೂಢವಾದಂತಹ, ಸತ್ಯವೋ, ಅಸತ್ಯವೋ ಎಂಬುದನ್ನು ತಿಳಿಯುವುದೂ ಕಷ್ಟಕರ. ಕೆಲವರ ಪ್ರಕಾರ, ನಾವು ಹಿಂದಿನ ದಿನ ರಾತ್ರಿ ಏನನ್ನು ಯೋಚಿಸಿಕೊಂಡು ಮಲಗುತ್ತೇವೋ ಅದಕ್ಕೆ ಪೂರಕವಾಗಿ ಕನಸುಗಳು ಬೀಳುತ್ತವೆ. ಅದರಲ್ಲೂ ನಾವು ರಾತ್ರಿ ಕಂಡ ಸ್ವಪ್ನಗಳು ಮುಂಜಾನೆ ಎಚ್ಚರವಾದ ನಂತರ ಸರಿಯಾಗಿ ನಮ್ಮ ನೆನಪಿಗೆ ಬರುವುದಿಲ್ಲ ! ಹೀಗಾಗಿ ಕನಸೆಂಬುದು ಎಷ್ಟು ನಿಜ ಎಂಬುದನ್ನು ನಿಖರವಾಗಿ ಅರಿತವರಿಲ್ಲ. ಗ್ರೀಕರು, 'ದೇವರೇ ಕನಸಿನ ಮೂಲಕ ಬಂದು ನಮಗೆ ಸಂದೇಶವನ್ನು ರವಾನಿ...