Skip to main content

Posts

ಹೆಣ್ಣಿನ ಜನುಮ ದೊಡ್ಡದು

ಹೆಣ್ಣಿನ ಜನುಮ ದೊಡ್ಡದುಯಾರು ಅದ ಸಣ್ಣದೆಂದೆನ ಬೇಡಿಅಣ್ಣ ತಮ್ಮ ಬಂಧು ಬಳಗ ಹೆಣ್ಣಿನ ಜನುಮ ದೊಡ್ಡದು ಬಲುದೊಡ್ಡದು "ಪಲ್ಲವಿ" ಹುಟ್ಟಿದ ಮನೆ,ಮಂದಿ ಬಿಟ್ಟುಕಾಲಿಟ್ಟ ಮನೆ,ಮನ ಬೆಳಗಿಮೊಜಗಕ್ಕೆ ಮಾದರಿಯಾಗಿ ಬಾಳುವ"ಹೆಣ್ಣಿನ" ತಾಯಾಗಿ,ತಂಗಿಯಾಗಿ,ಮಗಳಾಗಿ,ಮಡದಿಯು ತಾನಾಗಿಪ್ರೀತಿ,ವಾತ್ಸಲ್ಯ,ಅನುರಾಗಕ್ಕೆ ಬೆಸುಗೆಯಾಗಿ ಪ್ರತಿನಿತ್ಯ ಪರಪಂಚದೊಳಗೆ(ಬಳಲುವ)ಬಾಳುವ "ಹೆಣ್ಣಿನ" ಕಾರ್ಯೇಷುದಾಸಿ,ಕರಣೇಶು ಮಂತ್ರಿ ರೂಪೇಚ ಲಕ್ಷ್ಮಿ,ಶಯನೇಶು ರಂಬ ಕ್ಷಮಯಾದರಿತ್ರಿ,ಭೋಜ್ಯೇಶು ಮಾತೆಯಾಗಿ ಬಾಳುವ"ಹೆಣ್ಣಿನ" ಸತ್ಯಕ್ಕೆ ಸಾವಿತ್ರಿ,ಸೀತೆ,ಅಹಲ್ಯೆಯಾಗಿ ಧರ್ಮಕ್ಕೆ ಚಂದ್ರಮತಿ,ಚಂದ್ರಹಾಸೆಯಾಗಿ ತ್ಯಾಗಕ್ಕೆ ಶಾಂತಲೆ,ಶಕುಂತಲೆಯಾಗಿ ಬಾಳುವ"ಹೆಣ್ಣಿನ" ಕೀರ್ತಿಯಲಿ ಚನ್ನಮ್ಮ ಸ್ಪೂರ್ತಿಗೆ ಸಂಚಿ ಹೊನ್ನಮ್ಮಧೀರತ್ವಕ್ಕೆ ವನಕೆ ಓಬವ್ವ,ಅಕ್ಕಯ್ಯ(ಅಕ್ಕಮಹಾದೇವಿ) ಕನ್ನಡ ನಾಡಿಗೆ ಹೆಸರಾಗಿ ಬಾಳಿದ "ಹೆಣ್ಣಿನ" -ಕೃಷ್ಣಮೊರ್ತಿ

ವಿರಹದಲಿಮನ

ನೀನಿಲ್ಲದೆ ಅನುದಿನ ವಿರಹ ಎನ್ನತುಂಬ ನಿನ್ನ ಮುಗ್ದಮೊಗವೇ ನೀರಲ್ಲರಳಿದ ನಳಿನಬಿಂಬ ಪ್ರತಿ ಇರುಳು ಕಾಡುತಿಹುದು ಮೌನ ಮನಮಾಡುತಿಹುದು ನಿನ್ನ ಹೆಸರದ್ಯಾನ ಯಾರೇ ಅಡ್ಡಿಮಾಡಲಿ ಯಾವುದೇ ಕಷ್ಟಬರಲಿ ನಿನ್ನಲಿಗೆ ಬರುವೆ ಎಲ್ಲವ ತೂರಿ ಗಾಳಿಗೆ ತಾರೆಗಳು ನಗುತಿವೆ ಶಶಿಯಕಂಡು ಶ್ರಾವಣದ ಇರುಳಚಳಿಗೆ ಇಟ್ಟಿರುವೆ ನೀನಿತ್ತ ಮುತ್ತ ಕವನದಲ್ಲಿ ಬರೆಯಲಾರೆ ಎನ್ನ ಮನದ ಉತ್ತರ ನನ್ನವಳೆ ಇಲ್ಲಿ ತಾರೆ ನಿನ್ನ ಅದರ ಹತಿರ ನಿನ್ನ ನಯನ ದರ್ಪಣದಿ ಮರೆವೆ ಮನದ ಎಲ್ಲ ನೋವನು ಹೂಬಳ್ಳಿಯಂತೆ ಬಳುಕೊ ನಡುವ ಕುರಿತು ಕವನ ಕೊರೆವೆನು ಸಂಜೆ ಕೆಂಪು ಪ್ರೀತಿಗೆ ದ್ಯೋತಕ ವಾಗಿದೆ ಹರಿವ ನೀರು ಶೃಂಗಾರಕ್ಕೆ ದ್ಯೋತಕ ವಾಗಿದೆ ಕವನ ಕನಸಿನಾಚೆಗೂ ನಿನ್ನ ಪ್ರೀತಿ ಅಚ್ಚಳಿಯದೆ ಉಳಿವುದು ಓಲವರೀತಿ ನೋವನುಂಗಿ ಬದುಕೆ ಬಾಳೆ ಹೂವಮಲ್ಲಿಗೆ ಕಾಡದಿರು ಇನ್ನ ಮುಂದಾದರೂ ನೀ ಬಾಮೆಲ್ಲಗೆ ಅರಳಿ ಕಂಪಸೂಸೋ ಸಂಜೆ ಮಲ್ಲಿಗೆ -ವಿ ಕೃಷ್ಣಮೊರ್ತಿಅಜ್ಜಹಳ್ಳಿ

*ಪ್ರೇಮಿಗಳ ಹಾಡು*

ಮಾಡಿಮ್ಯಾಲೆನಿಂತುಕೊಂಡು ಮಲ್ಗೆಹೂವಮುಡ್ದುಕೊಂಡುಮೆಲ್ಲಮೆಲ್ಲಗೆ ನಡಿಯೋಳೆ ಮುದ್ದಾದಮೊಗದವಳೆ ನೀನಾರೆಕೊಡವ ಹಿಡಿದು ಕೆರೆಕಡೆಗೆ ಹೊರಟವಳೆ ಕನಕಾಂಗಿ ನಾ ಬರುವೆ ನಿಲ್ಲೆ ಕೆರೆತನಕ ಪಲ್ಲವಿ ಕಿಲಕಿಲನೆ ನಗುತ್ತಾ ನೀರನ್ನು ತುಂಬುತ್ತಾ ಮನಸನ್ನು ಕಲಕಿದವಳೆ ನೀನಾರೆನನಚಲುವೆಎದೆಯ ಕದವನ್ನು ತೆಗೆದವಳೆ ನೀನಾರೆ "ಮಾ" ಅಂದಾನೆ ನಾನೆಂದು ಚಂದಾನೆ ತಾನೆಂದು ಬಿಂಕದಲಿ ನಿಂತವಳು ನೀನ್ಯಾರೆನನಚಲುವೆಬಾವದ ಚಿಲುಮೆ ಚಿಮ್ಮಿಸಿದವಳೆ ನೀನ್ಯಾರೆ"ಮಾ" ಮಂದಹಾಸ ಬೀರುತ್ತಾ ತುಂಬುನಗೆ ಚಲ್ಲುವ ಚಂದಿರನ ಮೊಗದವಳೆ ನೀನ್ಯಾರೆನನ ಚಲುವೆಮನ ಮಂದಿರದಿ ಬೆಳಕ ತಂದವಳೆ ನೀನ್ಯಾರೆ "ಮಾ" ಇಳಿಬಿದ್ದ ಜಡೆಯವಳೆ ಗುಳಿಬಿದ್ದ ಕೆನ್ನೆಯವಳೆ ಸುಳಿದು ಸುಳಿದೆನ್ನ ಕಾಡೋಳೆನನ ಚಲುವೆಸುಮದಂತೆ ಪರಿಮಳ ತಂದವಳೆ ನೀನ್ಯಾರೆ"ಮಾ" ನವಿಲಂತೆ ಕುಣಿಯೋಳೆ ಮಿಚಂತೆ ಹೊಳೆಯೊಳೆನಾಟ್ಯದ ರಾಣಿ ನೀನ್ಯಾರೆನನ ಚಲುವೆ ಎದೆಯಾಗ ತಾಳ ತುಂಬಿದವಳೆ ನೀನ್ಯಾರೆ "ಮಾ" ಮನವೆಲ್ಲ ಹಸಿರಾಗಿ ಜೀವಕ್ಕೆ ಉಸಿರಾದ ಕನಸಿನ ಕಣ್ಮ್ಣಣಿ ನೀನ್ಯಾರೆನನ ಚಲುವೆ ಇರುಳಿಗೆ ಜೊತೆಯಾಗಿ ಬಂದವಳೆ ನೀನ್ಯಾರೆ"ಮಾ" ಮನಸಿನ ಚಿತ್ತಾರ ಪಡೆದು ನೀ ಆಕಾರನನಗಾಗಿ ಎಂದು ನೀ ಬರುವೆನನ ಚಲುವೆ ಕಾಯಲಾರೆ ನಾ ಬಳಿ ಬಾರೆನನಗಾಗಿ ಇಂದು ನೀ ಬಾರೆ "ಮಾ" -ವಿ ಕೃಷ್ಣಮೊರ್ತಿ ಅಜ್ಜಹಳ್ಳಿ

ಜಾನಪದಶೈಲಿಯ ಗೀತೆ

ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡುಗಿಯ ಪಕ್ಕಕೆ ಬಂದು ನಿಂತಿತ್ತ "ಪ" ಹುಡುಗನ ಕಂಡ ಹುಡುಗಿ ಬೆಚ್ಚಿ ದೂರ ಸರಿದಿತ್ತ ಎಲೆಯ ಮರೆಯಲಿ ನಿಂತು ಹುಡುಗನ ಕದ್ದು ನೋಡತಿತ್ತ ಹುಡುಗಿ ತೊಟ್ಟಿದ್ದ ಲಂಗ ದಾವಣಿ ಹುಡುಗನ ಮನದ ಕದವನ ತಟ್ಟಿತ್ತ "ಹ" ಎದ್ದು ಬರುವಂತಿದ್ದ ಉಬ್ಬು-ತಗ್ಗಿಗೆ ಹುಡುಗನ ಮನವು ಉಬ್ಬಿ ಹೊಗಿತ್ತ ಹುಡುಗನ ಕಣ್ಣು ಹುಡುಗಿಯ ಉದ್ದ ಅಗಲ ಲೆಕ್ಕ ಹಾಕತಿತ್ತ ಅದನು ಕಂಡ ಹುಡುಗಿಯ ಕಾಲು ನೆಲದಿ ರಂಗೊಲಿ ಹಾಕತಿತ್ತ "ಹ" ಬಾಯತೆರೆದು ಮಾತಾಡಲೊದ ಹುಡುಗನ ಗಂಟಲೆ ಹಿಡಿದಿತ್ತ ಬಯದಲಿ ಹುಡುಗನ ಕೈಕಾಲು ನಡುಗಿತ್ತ ತೊದಲುತ-ಅಂಜುತ ಹುಡುಗಿ ಕೈಯ ಹಿಡಿದಿತ್ತ ಹಿತವಾಗಿ ಉಲಿದ ಹುಡುಗಿಯ ಕಂಡ ಹುಡುಗನ ಮನ ಮುದವಗೊಂಡಿತ್ತ "ಹ" ಬಳ್ಳಿ ಮರವ ಬಳಸಿದಂತೆ ಹುಡುಗಿ ಹುಡುಗನ ಬಾಚಿತಬ್ಬಿತ್ತ ನಾಚಿ ನಡುಗುತ ಮೆಲ್ಲನೆ ನಗುವ ಚಿಮ್ಮಿತ್ತಾ ಪ್ರೀತಿಯು ಹೊಮ್ಮಿ ಹೊಳೆಯಾಗಿ ಹರಿದಿತ್ತಾ "ಹ"

ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು

ಮನದ ಮೃದಂಗ ನುಡಿಸಿ ಎದೆಯಲ್ಲಿ ಪ್ರೇಮರಾಗ ಮಿಡಿವಂತೆ ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು ಅಂದಕಾರದ ಬದುಕಿಗೆ ಬೆಳಕಾಗಬಲ್ಲ ಅರಿವಿನ ಅ(ಹ)ರಿಣಿ ಅವಳಾಗಬೇಕು ಜೀವಕ್ಕೆ ಉಸಿರು-ಹಸಿರಾಗ ಬಯಸುವ ಚೈತ್ರ ಚಲುವ ಹೆಣ್ಣಾಗಿರಬೇಕು ಬರಡಾದ ಬದುಕಿಗೆ ಜೀವಕಳೆಯ ತುಂಬಬಲ್ಲ ಹೆಣ್ಣು ಅವಳಾಗಬೇಕು ಬತ್ತಿದೆದೆಯಲ್ಲಿ ಬರವಸೆಯ ಜಲವ ತುಂಬುವಂತಹ ತರುಣಿ ಅವಳಾಗಬೇಕು ಮನದ ಮೌನ ಮುರಿದು ಜೀವದಲಿ ಹೊಸಕಳೆಯ ತರಬಲ್ಲ ಹುಡುಗಿಯಾಗಬೇಕು ಮನದ ಬಾವ ಅರಿತು ನಡೆವ ನುಡಿವ ನವ ತರುಣಿಮಣಿ ಅವಳಾಗಬೇಕು ಮನದ ಹಸಿವು-ದಾಹಗಳ ಅರಿತು ತೀರಿಸ ಬಲ್ಲ ಹೆಣ್ಣು ಅವಳಾಗಲುಬೇಕು ವನಪು ವಯ್ಯಾರ ಮರೆತಿರಬೇಕು ಒಲವು-ಛಲವು ಜೊತೆಗಿದ್ದರೆ ಸಾಕು ಬೆಳ್ಳಿಗೆಜ್ಜೆ ಯಾರಿಗೆ ಬೇಕು ಒಳ್ಳೆ ಲಜ್ಜೆ ಅವಳಿಗಿದ್ದರೆ ಸಾಕು ಮುತ್ತು ರತ್ನ ಯಾರಿಗೆ ಬೇಕು ಮುಗುಳ್ನಗೆ ಸದಾಇರಲಿ ಸಾಕು ಸಿರಿ ಸಂಪತ್ತು ಯಾಕೆ ಬೇಕು ಸನ್ನಡತೆಯಲಿ ಎನ್ನ ಪ್ರೀತಿಸುತಿರೆ ಸಾಕು -ವಿ ಕೃಷ್ಣಮೊರ್ತಿ ಅಜ್ಜಹಳ್ಳಿ

ಆಶಯ ಗೆಳೆಯ/ಗೆಳತಿ ಯರಿಗೆ

ಹುಚ್ಚೆದ್ದು ಕುಣಿವ ಹುಚ್ಚು ಮನಸಿನ ಬಾವನೆ ಗಳಿಗೆ ನಿನ್ನ ಹೃದಯದ ಬಾಗಿಲು ಮುಚ್ಚಿರಲಿ ಅಚ್ಚು ಮೆಚ್ಚಿನ ಶುಚಿತ್ವದ ಮನಸಿನ ಬಾವನೆಗಳಿಗೆ ನಿನ್ನ ಹೃದಯದ ಬಾಗಿಲು ಸದಾ ತೆರೆದಿರಲಿ ಎಂದು ಆಶಿಸುತ್ತೇನೆ ಪ್ರಿಯ ಮಿತ್ರರೇ

*ನನ್ನ ಸ್ವಪ್ನ ಸುಂದರಿ*

ಕಣ್ಮುಚಿದರೆ ಬರುವಳು ಮನದ ಮನೆಯೊಳಗೆ ಕುಣಿದು ನಲಿವಳು ನನ್ನ ಸ್ವಪ್ನ ಸುಂದರಿ ನನ್ನವಳು ಚಲುವೆಯರಲ್ಲಿ ಚಲುವೆ ರಂಬೆ ಅಪ್ಸರೆಯ ನಾಚಿಸುವಳು ಪರಿಮಳ ತುಂಬಿದ ಪಾರಿಜಾತ ನನ್ನ ಸ್ವಪ್ನ ಸುಂದರಿ ನನ್ನವಳು ಮಾತು ಕನ್ನಡ ಕಸ್ತೂರಿ ಮಾತಿನಿಂದಲೇ ಮಾಡಿದಳು ನನ್ನ ಮನಸೂರೆ ವಯ್ಯಾರದ ನೀರೆ ನನ್ನ ಸ್ವಪ್ನ ಸುಂದರಿ ನನ್ನವಳು ಮಂದಹಾಸ ಚೆಲ್ಲಿ ನನ್ನ ಸ್ವಾಗತಿಸುವಳು ಹೆಜ್ಜೆ ಮೇಲೆ ಹೆಜ್ಜೆ ಅಂದಿಗೆ ಕಾಲ್ಗೆಜ್ಜೆ ನೀರಾದವಳೇ ನನ್ನ ಸ್ವಪ್ನ ಸುಂದರಿ ನನ್ನವಳು ಕೆನೆ ಹಾಲಕೈಗೆ ನೀಡಿ ಮನೆ ಮಾಡಿದಳು ಎದೆಗೆ ಒಲವ ಚಿಲುಮೆ ಹರಿಯುವಂತೆ ಎದೆಗೂಡಿಗೆ ಮೊಕವಾಯ್ತು ಮನ ಅವಳ ಮೋಡಿಗೆ