Skip to main content

Posts

Showing posts from 2016

"ದೇವರ ಮನೆ ಮತ್ತು ಪೂಜೆ" ಯ ವಿಷಯಗಳು..

೧. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ.. ೨. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ.. ೩. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು. ೪. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ, ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ.. ೫. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ "ನೈವೇದ್ಯ "ದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು.. ೬. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು.. ೭. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ.. (ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು) ೮. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನು "ಅರಿಸಿನದ ನೀರಿನಿಂದ ಶುದ್ಧ ಮಾಡಿ.. ೯. ದೇವರ ಪೂಜೆಗೆ "ಆಂಜನೇಯ" ಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು.. ೧೦. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವ...

ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು

ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು ಸಾದಾರಣವಾಗಿ ಯಾರದೇ ಜನ್ಮಕುಂಡಲಿಯಲ್ಲಿ (ಯಾವುದೇರೀತಿಯ)ಹನ್ನೆರಡು ಕಾಳಸರ್ಪದೋಷಗಳಿದ್ದಾಗ್ಯು ಕೂಡ ಅದನ್ನು ಭಂಗಗೊಳಿಸಬಲ್ಲ ಕೆಲವು ಯೋಗಗಳಿದ್ದಾಗ ಈ ಸರ್ಪದೋಷಗಳು ನಿವಾರಣೆಯಾಗುತ್ತವೆ ಅಥವ ಈ ಯೋಗದಿಂದ ಉಂಟಾಗುವ ಕೆಟ್ಟಫಲಗಳು ನಾಶವಾಗುತ್ತವೆ.ಅಂತಹ ಬಲವಾದ ಯೋಗಗಳೆಂದರೆ:- ಯಾರ ಜನ್ಮಕುಂಡಲಿಯಲ್ಲಿ ಪಂಚಮಹಾಪುರುಷಯೋಗಗಳಲ್ಲಿ ಯಾವುದಾದರು ಒಂದು ಯೋಗವಿದ್ದಾಗ್ಗೆ ಈ ಕಾಳಸರ್ಪದೋಷವು ಉಂಟುಮಾಡುವ ಕೆಟ್ಟಫಲವನ್ನು ನಾಶಮಾಡುತ್ತದೆ. ಆ ಪಂಚ ಮಹಾಪುರುಷ ಯೋಗಗಳು ಯಾವುವೆಂದರೆ:- *ಕುಜನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ರುಚಕಯೋಗದಿಂದ* *ಬುದನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಭದ್ರಯೋಗದಿಂದ *ಗುರುವಿನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಹಂಸಯೋಗದಿಂದ* *ಶುಕ್ರನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಮಾಳವ್ಯಯೋಗದಿಂದ* *ಶನಿಯಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಶಶ(ಸಸ)ಯೋಗದಿಂದ* *ಜನ್ಮ ಕುಂಡಲಿಯಲ್ಲಿ ಕೇಂದ್ರಗಳಾದ ೧ ೪ ೭ ೧೦ ನೇ ಮನೆಯಲ್ಲಿ ಶುಭಗ್ರಹಗಳಿದ್ದರೆ* *ಪ್ರಭಲವಾದ ಯೋಗಗಳು ಇರುವುದರಿಂದ* *ರಾಹುವುನೊಂದಿಗೆ ಯಾವುದೇ ಇತರೆ ಗ್ರಹವಿದ್ದು ಆ ಗ್ರಹ ಹೆಚ್ಚಿನ ಅಂತರದಲ್ಲಿ(ಡಿಗ್ರಿಯಲ್ಲಿ) ಇದ್ದಲ್ಲಿ ಈ ಯೋಗ ಭಂಗವಾಗುತ್ತದೆ(ಉದಾ:-೬ಡಿಗ್ರಿ೨೫ ನಿಮಿಷದಲ್ಲಿ ರಾ...

ಶ್ರಿಶನೈಶ್ಚರ ಪೀಡಾ ಪರಿಹಾರೋಪಾಯಗಳು

ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ | ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ || – ಗರುಡಪುರಾಣ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ. ಇಂಥಹ ಕರ್ಮಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯವೆಂಬ ದಿವ್ಯವಾದ ವಿದ್ಯೆಯನ್ನು ಪ್ರಾಚೀನರು ನಮಗೆ ದಯಪಾಲಿಸಿದ್ದಾರೆ. ವರಾಹಮಿಹಿರಾಚಾರ್ಯರು ಈ ಕುರಿತು “ಕರ್ಮಾರ್ಜಿತಂ ಪೂರ್ವಭವೇಸದಾದಿ ಯತ್ತಸ್ಯಪಂಕ್ತಿಂ ಸಮಭಿವ್ಯನಕ್ತಿ” ಪೂರ್ವಜನ್ಮದಲ್ಲಿ ಸಂಚಿತ ಶುಭಾಶುಭ ಕರ್ಮಫಲದ ಅನುಭವಕಾಲವನ್ನು ಈ ಶಾಸ್ತ್ರವು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಗ್ರಹ್ಣಂತೀತಿ ಗ್ರಹಾಃ ಸರ್ವೇ ಗ್ರಹಾ ಪೀಡಾಕರಾಃ ಸ್ಮೃತಾಃ | (ಇನ್ನೋಬ್ಬರನ್ನು) ಹಿಡಿದುಕೊಳ್ಳುತ್ತವೆ ಎಂಬರ್ಥದಲ್ಲಿ ಗ್ರಹ ಎಂದು ಕರೆಯುತ್ತಾರೆ. ಗ್ರಹಗಳು ಪೀಡೆಯನ್ನು ಮಾಡುತ್ತವೆ. ಛಾಯಾಸೂನುಶ್ಚ ದುಃಖದಃ (ಪರಾಶರಹೋರಾ) – ಶನಿದೇವನು ದುಃಖವನ್ನು ಉಂಟುಮಾಡುತ್ತಾನೆ (ಸೂಚಿಸುತ್ತಾನೆ). ಇಂಥಹ ಗ್ರಹಗಳ ಪೀಡಾಪರಿಹಾರಕ್ಕಾಗಿ ಶಾಸ್ತ್ರಗಳು ಅನೇಕ ವಿಧಿ-ನಿರ್ದೇಶಗಳನ್ನು ಸೂಚಿಸುತ್ತವೆ. ಯಥೋಕ್ತಮೌಷಧಿಸ್ನಾನಂ ಗ್ರಹವಿಪ್ರಾರ್ಚನಂ ತಥಾ | ಗ್ರಹಾನುದ್ದಿಷ್ಯ ಹೋಮೋ ವಾ ತ್ರಿಧಾಶಾಂತಿರ್ಬುಧೈಃ ಸ್ಮೃತಾ || ವಿಶಿಷ್ಟ ಔಷಧಿಗಳಿಂದ ಸ್ನಾನ, ಬ್ರಾಹ್ಮಣರ ಸೇವೆ (ದಾನಾದಿಗಳಿಂದ), ಗ್ರಹಗಳ ಉದ್ದಿಷ್ಟ ಮಾಡುವ ಹೋಮ-ಹವನಗಳು – ಇವು ಗ್ರಹಗಳ ಶಾಂತಿಕರ್ಮಗಳು. ಇವುಗಳಲ್ಲದೆ ಪಾರಾಯಣ...

ತೌಡು ತೆಗೆಯದ ಅಮೃತಾಹಾರ

ತೌಡು ತೆಗೆಯದ ಅಮೃತಾಹಾರ ದೇಶದಲ್ಲಿ ಡಾಕ್ಟರುಗಳ ಸಂಖ್ಯೆ ಹೆಚ್ಚುತ್ತಿದೆ; ದೇಶೀಯ ಮತ್ತು ವಿದೇಶೀಯ ಪ್ರಚಂಡ ಔಷಧಿಗಳು ಹೊಸ ಹೊಸತಾಗಿ ನಿರ್ಮಿಸಲ್ಪಡುತ್ತಿವೆ; ರೋಗಗಳ ತಜ್ನರೂ ಮತ್ತು ರೋಗಗಳನ್ನು ಪರೀಕ್ಷಿಸುವ ವಿಧಾನಗಳೂ ವಿಫುಲವಾಗಿ ಬೆಳೆಯುತ್ತಿವೆ. ಆಸ್ಪತ್ರೆಗಳ ಸಂಖ್ಯೆ ವೃದ್ಧಿಗೊಳ್ಳುತ್ತಿದೆ. ಆದರೂ ರೋಗಿಗಳ ಸಂಖ್ಯೆ ಏಕೆ ಕಡಿಮೆಯಾಗುತ್ತಿಲ್ಲ? ಬ್ಲಡ್ ಪ್ರೆಶರ್, ಸಿಹಿಮೂತ್ರ, ಹೃದಯಾಘಾತ, ಕ್ಯಾನ್ಸರ್, ಮುಂತಾದ ರೋಗಗಳು ದಿನೇ ದಿನೇ ಹೆಚ್ಚು ಹೆಚ್ಚು ರೋಗಿಗಳನ್ನು ಏಕೆ ಬಲಿ ತೆಗೆದುಕೊಳ್ಳುತ್ತಿವೆ? ಈ ಪ್ರಶ್ನೆಗಳಿಗೆ ಸತ್ಯಪೂರ್ಣವಾದ ಒಂದೇ ಉತ್ತರವಿದೆ; ಅದೆಂದರೆ, ಜನತೆ ತಮ್ಮ ಆರೋಗ್ಯ ಮತ್ತು ರೋಗಪರಿಹಾರಕ್ಕಾಗಿ ಸರಿಯಾದ ಆಹಾರಕ್ಕಿಂತ ವಿಷಮಯವಾದ ಔಷಧಗಳನ್ನು ಹೆಚ್ಚಾಗಿ ಅವಲಂಬಿಸುತ್ತಿದೆ. ಈ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಪರಿಸ್ಥಿತಿ ಇನ್ನೂ ಭೀಕರವಾಗುತ್ತಾ ಹೋಗುವುದು ನಿಶ್ಚಿತ. ’ಆಹಾರಾಧೀನಮಾರೋಗ್ಯಂ’ ಎಂದರೆ, ’ಆರೋಗ್ಯದ ಸ್ಥಿರವಾದ ಬುನಾದಿಯೇ ಆಹಾರ’ ಎಂದು ಆಯುರ್ವೇದವು ಸಾವಿರಾರು ವರ್ಷಗಳ ಹಿಂದೆಯೇ ಸಾರಿದೆ. ಆಯುರ್ವೇದದ ಆ ಸತ್ಯವನ್ನು ಪಾಶ್ಚಾತ್ಯ ವಿಜ್ನಾನಿಗಳು ಒಂದೊಂದನ್ನಾಗಿ ತಿಳಿಯುತ್ತಾ ಬಂದಿದ್ದಾರೆ. ಅದಕ್ಕೆ ನಾವು ಒಂದು ಉದಾಹರಣೆಯನ್ನು ಹೇಳಬಹುದೇ? ೧೮೯೮ ರಲ್ಲಿ ಅಮೆರಿಕೆಯು ಫಿಲಿಪೈನ್ ದ್ವೀಪಗಳನ್ನು ವಶಪಡಿಸಿಕೊಂಡಿತು. ಆಗ ಅಲ್ಲಿಯ ಜನತೆಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಡಾಕ್ಟರುಗಳ ಸಮಿ...

ಪೋಷಕಾಂಶ ಬೇಕೆಂದರೆ ಸಿಪ್ಪೆಯನ್ನು ತಿನ್ನಿ

ಪೋಷಕಾಂಶ ಬೇಕೆಂದರೆ ಸಿಪ್ಪೆಯನ್ನು ತಿನ್ನಿ ಆಲೂಗೆಡ್ಡೆ ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ , ಅದು ದೇಹದಲ್ಲಿ ಬೊಜ್ಜು ಮತ್ತು ಗ್ಯಾಸ್ ಸಮಸ್ಯೆ ಹೆಚ್ಚು ಮಾಡುತ್ತೆ. ಆದರೆ ಅದನ್ನು ಸಿಪ್ಪೆ ಸಹಿತ ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಿಮಗೆ ಗೊತ್ತೆ? ಆಲೂಗೆಡ್ಡೆ ಸಿಪ್ಪೆಯನ್ನು ತೆಗೆಯದಿದ್ದರೆ ಅದರಲ್ಲಿರುವ ಮಣ್ಣು ಹೊಟ್ಟೆ ಸೇರುತ್ತದೆ ಎಂದು ಭಾವಿಸುವವರು ಗಮನಿಸಬೇಕಾದ ಅಂಶವೆಂದರೆ ಇನ್ನು ಮುಂದೆ ಸಿಪ್ಪೆ ತೆಗೆದು ಆಲೂಗೆಡ್ಡೆಯನ್ನು ತಿನ್ನುವ ಬದಲು, ಚೆನ್ನಾಗಿ ತೊಳೆದು ಸಿಪ್ಪೆ ಸಹಿತ ಬೇಹಿಸಿ ತಿನ್ನಿ. ಈ ರೀತಿ ತಿನ್ನುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿಯಲು ಮುಂದೆ ಓದಿ. 1.ಆಲೂಗೆಡ್ಡೆಯನ್ನು ಸಿಪ್ಪೆ ಸಹಿತ ಬೇಯಿಸಿ ತಿನ್ನವುದರಿಂದ ಇದರಲ್ಲಿರುವ ಅಧಿಕ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಇದನ್ನು ಇತರ ತರಕಾರಿ ಜೊತೆ ತಿನ್ನವುದರಿಂದ ಬೇರೆ ತರಕಾರಿಗಳು ಕೂಡ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. 2. ಆಲೂಗೆಡ್ಡೆ ಚಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೊಟಾಷಿಯಂ, ತಾಮ್ರಾಂಶ, ಮ್ಯಾಗ್ನಷಿಯಂ ಮತ್ತು ನಾರಿನಂಶ ಅಧಿಕವಿರುತ್ತದೆ. 3. ಆಲೂಗೆಡ್ಡೆ ಸಿಪ್ಪೆಯಲ್ಲಿ 20% ಕಬ್ಬಿಣ ಮತ್ತು 8ಗ್ರಾಂ ಪ್ರೊಟೀನ್ ಇದ್ದು ಇತರ ತರಕಾರಿಗಳಿಗೆ ಹೋಲಿಸಿದರೆ ಆಲೂಗೆಡ್ಡೆ ಸಿಪ್ಪೆಯಲ್ಲಿ ಈ ಅಂಶಗಳು ಅಧಿಕವಿದೆ. 4. ಆಲೂಗೆಡ್ಡೆ ಸಿಪ್ಪೆ ಸೇವಿಸಿದರೆ ಹಾನಿಗೊಳಗಾದ ಜೀವ ಕಣಗಳನ್ನು ಮತ್ತೆ ಸರಿ ಪಡಿಸು...

ಸ್ಪ್ರಿಂಗ್ ಈರುಳ್ಳಿ ತಿನ್ನಿ, 12 ಆರೋಗ್ಯ ಲಾಭ ಪಡೆಯಿರಿ

ಸ್ಪ್ರಿಂಗ್ ಈರುಳ್ಳಿ ತಿನ್ನಿ, 12 ಆರೋಗ್ಯ ಲಾಭ ಪಡೆಯಿರಿ ಸ್ಪ್ರಿಂಗ್ ಈರುಳ್ಳಿ ಅತ್ಯಂತ ಜನಪ್ರಿಯ ತರಕಾರಿ ಮತ್ತು ಅದು ಬಿಳಿ, ಹಳದಿ ಮತ್ತು ಕೆಂಪು ಸೇರಿದಂತೆ ಬೇರೆ ಬೇರೆ ವಿಧಗಳಲ್ಲಿ ದೊರಕುತ್ತವೆ. ಇದು ಮುಟ್ಟಲು ಮೃದುವಾಗಿರುತ್ತದೆ ಮತ್ತು ರುಚಿಯಲ್ಲಿ ಬಹಳ ಉತ್ತಮವಾಗಿದ್ದು ಹೇರಳ ಪೋಷಕಾಂಶಗಳಿಂದ ಕೂಡಿವೆ. ಬಹಳ ವರ್ಷಗಳಿಂದ ಚೀನೀ ಸಾಂಪ್ರದಾಯಿಕ ಔಷಧಿಗಳಲ್ಲಿ ಇದನ್ನು ಬಳಸುತ್ತಿದ್ದಾರೆ. ಈರುಳ್ಳಿಯಲ್ಲಿರುವಂತೆಯೇ ಸ್ಪ್ರಿಂಗ್ ಈರುಳ್ಳಿಯಲ್ಲೂ ಸಹ ಗಂಧಕದ ಪ್ರಮಾಣ ಹೆಚ್ಚಾಗಿರುತ್ತದೆ. ಹೆಚ್ಚಿನ ಗಂಧಕವಿರುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿರುತ್ತದೆ. ಈ ಮೃದು ಈರುಳ್ಳಿಯಲ್ಲಿ ಕ್ಯಾಲೋರಿ ಅಂಶ ಕಡಿಮೆಯಿರುತ್ತದೆ. ಸ್ಪ್ರಿಂಗ್ ಈರುಳ್ಳಿ ಒಂದು ವೈವಿಧ್ಯಮಯ ಗೊಂಡೆ ಈರುಳ್ಳಿ ಜಾತಿ ಮತ್ತು ಹಸಿರು ಈರುಳ್ಳಿ ಎಂದೂ ಕರೆಯುತ್ತಾರೆ. ಸ್ಪ್ರಿಂಗ್ ಈರುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ2 ಮತ್ತು ತಿಯಾಮೈನ್ ಅಂಶಗಳು ಹೇರಳವಾಗಿವೆ. ಅವುಗಳ ಜೊತೆಗೆ ವಿಟಮಿನ್ ಎ ಮತ್ತು ವಿಟಮಿನ್ ಕೆ ಸಹ ಇರುತ್ತವೆ. ಇವುಗಳಲ್ಲದೆ ಸ್ಪ್ರಿಂಗ್ ಈರುಳ್ಳಿಯು ತಾಮ್ರ, ಫಾಸ್ಫರಸ್, ಮೆಗ್ನೀಸಿಯುಮ್, ಪೊಟ್ಯಾಷಿಯಂ, ಕ್ರೋಮಿಯುಮ್, ಮ್ಯಾಂಗನೀಸ್ ಮತ್ತು ನಾರಿನಾಂಶಗಳ ಮೂಲವಾಗಿದೆ. ಸ್ಪ್ರಿಂಗ್ ಈರುಳ್ಳಿಯು ಕ್ವೆರ್ಸೆಟಿನ್(Quercetin) ಎಂಬುದಕ್ಕೆ ಫ್ಲೇವೋನಾಯ್ಡ್ (Flavonoids) ಪ್ರಬಲ ಮೂಲವಾಗಿದೆ. ಈ ರಾಸಾಯನವನ್ನು ಕ್ಯಾನ್ಸರ್ ಮತ್ತು ಆರ್ಟರಿ ಸಂಬಂಧಪಟ್ಟ ಖಾಯಿಲೆಗಳಿಗ...

ಸಪೋಟದಲ್ಲಿ 23 ಆರೋಗ್ಯ ವೃದ್ಧಿ ಗುಣಗಳಿವೆ!

ಸಪೋಟದಲ್ಲಿ 23 ಆರೋಗ್ಯ ವೃದ್ಧಿ ಗುಣಗಳಿವೆ! ಸಪೋಟ ಎಂಬ ಹಣ್ಣಿನ ಹೆಸರು ಬಹಳ ಜನಗಳಿಗೆ ಗೊತ್ತಿಲ್ಲದೇ ಇರಬಹುದು. ಸಪೋಟಾಹಣ್ಣಿಗೆ ಚಿಕ್ಕೂ ಇನ್ನೊಂದು ಚೆನ್ನಾಗಿ ಪರಿಚಯವಿರುವ ಹೆಸರು. ಮೂಲತಃ ನಾವು ಉಷ್ಣವಲಯದಲ್ಲಿ ಬೆಳೆಯುವ ನಿತ್ಯ ಹರಿದ್ವರ್ಣದ ಮರಕ್ಕೆ ಸಪೋಟ ಎಂದು ಕರೆಯುವ ರೂಢಿಯಾಗಿದೆ. ಸಪೋಟ ಹಣ್ಣು ಸೊಗಸಾದ ಕ್ಯಾಲರಿಯುಕ್ತ ಹಣ್ಣುಗಳಾದ ಮಾವಿನ ಹಣ್ಣು, ಬಾಳೆ ಹಣ್ಣು ಮತ್ತು ಹಲಸಿನಹಣ್ಣುಗಳ ವರ್ಗಕ್ಕೆ ಸೇರಿದೆ. ಈ ಹಣ್ಣಿಗೆ ಇತರೆ ಹೆಸರುಗಳು ನೋಸ್ ಬೆರ್ರಿ, ಸಪೋಡಿಲ್ಲಾ ಪ್ಲಮ್, ಚಿಕೂ ಸಪೋಟೆ, ಇತ್ಯಾದಿ. ಸಪೋಟಹಣ್ಣಿನಲ್ಲಿರುವ ವಿಶಾಲ ಶ್ರೇಣಿಯ ಪೋಷಕಾಂಶಗಳು ಆರೋಗ್ಯಕ್ಕೆ ಬಹಳ ಶ್ರೇಷ್ಠವಾಗಿರುವುದಲ್ಲದೆ ತಿನ್ನಲು ಅತ್ಯಂತ ರುಚಿಯಾಗಿಯೂ ಇರುತ್ತದೆ. ಈ ಹಣ್ಣಿನಲ್ಲಿರುವ ರುಚಿಯಾದ ತಿರುಳು ಸುಲಭವಾಗಿ ಜೀರ್ಣವಾಗುವುದು ಹಾಗೂ ಅದರಲ್ಲಿರುವ ಹೆಚ್ಚಿನ ಗ್ಲೂಕೋಸ್ ನಮ್ಮ ದೇಹಕ್ಕೆ ಪುನರ್ಚೇತನ ಕೊಡುವ ಶಕ್ತಿಯುಳ್ಳದ್ದಾಗಿದೆ. ಆಗಲೇ ಹೇಳಿದಂತೆ ಈ ಹಣ್ಣಿನಲ್ಲಿ ಜೀವಸತ್ವಗಳು (ವಿಟಮಿನ್ಸ್), ಖನಿಜಾಂಶಗಳು ಮತ್ತು ಟ್ಯಾನಿನ್ ಇವುಗಳು ಸಮೃದ್ಧವಾಗಿವೆ. ಅಷ್ಟು ಮಾತ್ರವಲ್ಲದೆ ಇನ್ನು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ: ಸಪೋಟಹಣ್ಣಿನ ವಿವಿಧ ಆರೋಗ್ಯದ ಲಾಭಗಳ ಕಡೆಗೆ ಗಮನ ಹರಿಸೋಣ ಬನ್ನಿ. ಸಪೋಟ(ಚಿಕ್ಕೂ)ಹಣ್ಣಿನ 23 ಆರೋಗ್ಯಕ್ಕಾಗುವ ಲಾಭಗಳು.

ಕಣ್ಣು ಉರಿ, ತುರಿತಕ್ಕೆ ಇಲ್ಲಿದೆ ಮನೆಮದ್ದು

ಕಣ್ಣು ಉರಿ, ತುರಿತಕ್ಕೆ ಇಲ್ಲಿದೆ ಮನೆಮದ್ದು Natural Remedies For Itchy Eyes ಕಣ್ಣು ತುರಿಸುವುದು, ಕಣ್ಣು ಉರಿ ಇವೆಲ್ಲಾ ಸಾಮನ್ಯವಾದ ಸಮಸ್ಯೆಗಳು. ಆದರೆ ಈ ರೀತಿ ಉಂಟಾದಾಗ ತುಂಬಾ ಕಿರಿಕಿರಿ ಉಂಟಾಗುವುದು. ಕಣ್ಣಿಗೆ ಅಲರ್ಜಿಯಾದಾಗ ಕಂಪ್ಯೂಟರ್ ಮುಂದೆ ಕೂತಾಗ, ಟಿವಿ ನೋಡುವಾಗ ಕಣ್ಣಿನಿಂದ ನೀರು ಸುರಿಯುತ್ತಿರುತ್ತದೆ. ಈ ರೀತಿಯ ಸಮಸ್ಯೆಗಳನ್ನು ಈ ಕೆಳಗಿನ ಮನೆ ಮದ್ದಿನಿಂದ ಪರಿಹರಿಸಬಹುದು. 1. ರೋಸ್ ವಾಟರ್ ನಿಂದ ಕಣ್ಣು ಶುಚಿಗೊಳಿಸಿದರೆ ಕಣ್ಣು ತಂಪಾಗುವುದು, ಇದರಿಂದ ಕಣ್ಣು ಉರಿ ಉಂಟಾಗುವುದಿಲ್ಲ. 2. ಕಣ್ಣು ಉರಿಯಾಗುತ್ತಿರುವಾಗ ಸೌತೆಕಾಯಿ ಕತ್ತರಿಸಿ ಕಣ್ಣಿಗೆ ಇಡುವುದು ಒಳ್ಳೆಯದು. 3. ಆಲೂಗೆಡ್ಡೆ ಕತ್ತರಿಸಿ ಕಣ್ಣಿಗೆ ಇಟ್ಟರೆ ಕಣ್ಣಿನ ಉರಿ ಕಡಿಮೆಯಾಗುವುದು. 4. ಹೊರಗಿನಿಂದ ಬಂದ ತಕ್ಷಣ ಮುಖವನ್ನು ತೊಳೆಯಿರಿ, ಕಣ್ಣುನ್ನು ಶುದ್ಧ ನೀರಿನಲ್ಲಿ ತೊಳೆಯುವುದರಿಂದ ದೂಳಿನಿಂದ ಉಂಟಾಗುವ ಅಲರ್ಜಿ ಹೋಗಲಾಡಿಸಬಹುದು. 5. ಕಣ್ಣು ಉರಿ ಅಥವಾ ತುರಿಸುತ್ತಿದ್ದರೆ ಹತ್ತಿಯನ್ನು ಹಾಲಿನಲ್ಲಿ ಅದ್ದಿ ಅದರಿಂದ ಕಣ್ಣನ್ನು ಶುಚಿಗೊಳಿಸಬೇಕು. 6. ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವಾಗ 1 ಗಂಟೆಯಲ್ಲಿ 2-3 ನಿಮಿಷ ಕಣ್ಣಿಗೆ ವಿಶ್ರಾಂತಿ ಕೊಡಬೇಕು. ಸ್ವಲ್ಪ ದೂರಕ್ಕೆ ನೋಡುವುದು, ಕಣ್ಣು ಮಿಟುಕಿಸುವ ವ್ಯಾಯಾಮ ಒಳ್ಳೆಯದು. 7. ಕಣ್ಣಿಗೆ ಲೆನ್ಸ್ ಬಳಸುವವರು ಅದನ್ನು ತುಂಬಾ ಹೊತ್ತು ಬಳಸದೆ, ಮನೆಯಲ್ಲಿರುವಾಗ ಕನ್ನಡಕ ಬಳಸುವುದ...

'ವಿಟಮಿನ್ ಇ' ಡಯಟ್ ನಲ್ಲಿ ಏಕೆ ಇರಬೇಕು?

ಆರೋಗ್ಯವಂತರಾಗಿರಲು ವಿಟಮಿನ್ ಗಳು ಅವಶ್ಯಕ. ಈ ವಿಟಮಿನ್ ಗಳು ನಮಗೆ ಆಹಾರಗಳಿಂದ ದೊರೆಯುತ್ತದೆ. ಎಲ್ಲಾ ವಿಟಮಿನ್ ಗಳು ಒಂದೇ ಆಹಾರದಲ್ಲಿರುವುದಿಲ್ಲ. ಆದ್ದರಿಂದ ಬೇರೆ-ಬೇರೆ ವಿಟಮಿನ್ ಇರುವ ಆಹಾರಗಳನ್ನು ಡಯಟ್ ನಲ್ಲಿ ಅಳವಡಿಸಿದರೆ ದೇಹದ ಆರೋಗ್ಯ ಹೆಚ್ಚುವುದು. ಇವತ್ತು ನಾವು 'ವಿಟಮಿನ್ ಇ' ಇರುವ ಆಹಾರಗಳು ಮತ್ತು ಈ ವಿಟಮಿನ್ ನಮ್ಮ ದೇಹದ ಆರೋಗ್ಯಕ್ಕೆ ಎಷ್ಟು ಅವಶ್ಯಕ ಎಂದು ತಿಳಿಯೋಣ: 'ವಿಟಮಿನ್ ಇ' ಇರುವ ಆಹಾರಗಳು:ಬ್ರೊಕೋಲಿ, ಪಾಲಾಕ್, ಮಾವಿನ ಹಣ್ಣು, ಗೋಧಿ, ಬಾದಾಮಿ, ಬೆಣ್ಣೆ ಹಣ್ಣು, ಬಾಳೆಹಣ್ಣು, ಮೀನು, ಬೆಳ್ಳುಳ್ಳಿ, ಕರ್ಬೂಜ, ಕೆಂಪು ಮೆಣಸಿನ ಕಾಯಿ, ಜೋಳ, ಟೊಮೆಟೊ, ಸೇಬು,ಕಲ್ಲಂಗಡಿ, ಅಣಬೆ ಈ ಆಹಾಗಳಲ್ಲಿ ವಿಟಮಿನ್ ಇ ಮತ್ತು anti oxidant ಅಂಶ ಹೆಚ್ಚಾಗಿರುತ್ತದೆ. ಆರೋಗ್ಯ ರಕ್ಷಣೆಯಲ್ಲಿ ವಿಟಮಿನ್ ಇ: 1. ತ್ವಚೆ ಸಂರಕ್ಷಣೆ: 'ವಿಟಮಿನ್ ಇ' ಇರುವ ಆಹಾರಗಳಲ್ಲಿ anti oxidant ಪ್ರಮಾಣ ಹೆಚ್ಚಾಗಿ ಇರುವುದರಿಂದ ತ್ವಚೆ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ. ಅಲ್ಲದೆ ತ್ವಚೆ ಹೊಳಪನ್ನು ಹೆಚ್ಚಿಸುವುದು. 2. ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡುತ್ತದೆ: ಇದು ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಪ್ರಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ. ವಿಟಮಿನ್ ಇ ಕೊರತೆ ಉಂಟಾದರೆ ಕೂಡಲೆ ಚಿಕಿತ್ಸೆಯನ್ನು ಪಡೆಯಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು. 3. ರಕ್ತ ಹೆಪ್ಪುಗಟ್ಟುವ ಸ...

ಬುದ್ಧಿಶಕ್ತಿಯನ್ನು ಕೊಲ್ಲುವ ಆಹಾರಗಳಿವು

ಬುದ್ಧಿಶಕ್ತಿಯನ್ನು ಕೊಲ್ಲುವ ಆಹಾರಗಳಿವು ಕೆಲವೊಂದು ಆಹಾರಗಳಲ್ಲಿರುವ ಪೋಷಕಾಂಶಗಳು ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ದೇಹದ ಶಕ್ತಿ ಹೆಚ್ಚಾಗಿ ಯಾವಾಗಲೂ ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ. ಇನ್ನು ಕೆಲವು ಆಹಾರಗಳು ನಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಇದರಿಂದ ನಮ್ಮ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ. ಮಿದುಳಿನ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ತಿಂದರೆ ಒಳ್ಳೆಯದು. ಆದರೆ ಮೆದುಳಿನ ಶಕ್ತಿಯನ್ನು ಕುಗ್ಗಿಸುವಂತಹ ಕೆಲವು ಆಹಾರಗಳು ಇವೆ. ಇದನ್ನು ನಾವು ತಿಳಿಯದೆ ತಿನ್ನುತ್ತಲೇ ಇರುತ್ತೇವೆ. ಇಂತಹ ಆಹಾರಗಳು ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜ್ಞಾಪಕ ಶಕ್ತಿಯನ್ನು ಕುಗ್ಗಿಸುತ್ತದೆ. ಇಂತಹ ಆಹಾರಗಳು ಮಿದುಳಿಗೆ ಋಣಾತ್ಮಕ ಪರಿಣಾಮ ಬೀರದಂತೆ ಮಾಡಲು ಕೆಲವೊಂದು ಸಲಹೆಗಳನ್ನು ನೀಡಲಾಗುತ್ತದೆ. ನಿಮ್ಮ ಜ್ಞಾಪಕ ಶಕ್ತಿಯನ್ನು ನಿಧಾನವಾಗಿ ಕೊಲ್ಲುವ 11 ಬಗೆಯ ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. 1. ಸಕ್ಕರೆ ಉತ್ಪನ್ನಗಳು ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳು ನಿಮ್ಮಲ್ಲಿ ಬೊಜ್ಜು ಹೆಚ್ಚಿಸುವುದಲ್ಲದೆ, ಮಿದುಳಿನ ಕ್ರಿಯೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ. ದೀರ್ಘಾವಧಿ ತನಕ ಸಕ್ಕರೆ ಸೇವನೆಯಿಂದಾಗಿ ನರದ ಸಮಸ್ಯೆ ಉಂಟಾಗಬಹುದು ಮತ್ತು ಇದು ಮೆದುಳಿನ ಮೇಲೆ ಪರಿಣಾಮ ಬೀರಬಹುದು. ಮತ್ತೊಂದು ಕಡೆಯಲ್ಲಿ ಸಕ್ಕರೆ ನಿಮ್ಮ ಕಲಿಯುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಹುದು. ಇದರಿಂದಾಗಿ ಬೇಕರಿ ಪದಾರ್ಥಗಳು...

ಬೆನ್ನು ನೋವಿಗೆ ಗುಡ್ ಬೈ ಹೇಳಲು ಈ ರೀತಿ ಮಾಡಿ!

ಬೆನ್ನು ನೋವಿಗೆ ಗುಡ್ ಬೈ ಹೇಳಲು ಈ ರೀತಿ ಮಾಡಿ! ಈಗೆಲ್ಲಾ ಬೆನ್ನು ನೋವು ಚಿಕ್ಕ ಪ್ರಾಯದಲ್ಲಿಯೇ ಪ್ರಾರಭವಾಗುತ್ತದೆ. ಹೀಗೆ ಚಿಕ್ಕದಾಗಿ ಬೆನ್ನು ನೋವು ಕಾಣಿಸಿಕೊಂಡರೆ ಸ್ವಲ್ಪ ಮೂವ್ ಅಥವಾ ಅಮೃತಾಂಜನ ಹಚ್ಚಿ ಸುಮ್ಮನೆಯಾಗಿ ಬಿಡುತ್ತೇವೆ. ಸಹಿಸಲು ಅಸಾಧ್ಯವಾದ ಬೆನ್ನುನೋವು ಕಾಣಿಸಿಕೊಂಡಾಗ ವೈದ್ಯರನ್ನು ಕಾಣಲು ಹೋಗುತ್ತೇವೆ. ಆರೋಗ್ಯಕರವಲ್ಲದ ಜೀವನ ಶೈಲಿ, ತುಂಬಾ ಹೊತ್ತು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದು, ವ್ಯಾಯಾಮ ಮಾಡದಿರುವುದು , ಮಾನಸಿಕ ಒತ್ತಡ ಈ ಎಲ್ಲಾ ಕಾರಣಗಳಿದ ಬೆನ್ನು ನೋವು ಅಧಿಕವಾಗುತ್ತದೆ. ಈ ರೀತಿ ಬೆನ್ನು ನೋವು ಕಾಣಿಸಿಕೊಂಡರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಸಾಕು, ಬೆನ್ನು ನೋವು ನಿವಾರಣೆಯಾಗುವುದು. 1. ವಿಟಮಿನ್ ಡಿ ಅಧಿಕ ಸೇವಿಸಿ: ವಿಟಮಿನ್ ಡಿ ಕೊರತೆ ಉಂಟಾದರೆ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ವಿಟಮಿನ್ ಡಿ ಇರುವ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಕು. ಅಣಬೆ, ಕಾಡ್ ಲಿವರ್, ಮೊಟ್ಟೆ, ಸೊಪ್ಪು ಮತ್ತು ಮೀನಿನಲ್ಲಿ ವಿಟಮಿನ್ ಡಿ ಹೆಚ್ಚಾಗಿರುತ್ತದೆ. 2. ಮ್ಯೂಸಿಕ್ ಥೆರಪಿ: ಒಳ್ಳೆಯ ಸಂಗಿತವನ್ನು ಕೇಳುತ್ತಿದ್ದರೆ ಒತ್ತಡ ಕಡಿಮೆಯಾಗುತ್ತದೆ. ಒತ್ತಡ ಕಡಿಮೆಯಾದರೆ ಬೆನ್ನು ನೋವು ಕೂಡ ಕಡಿಮೆಯಾಗುವುದು. ಸಂಗೀತವನ್ನು ಕೇಳುವುದರಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಹೆಚ್ಚಿನ ಕಾಯಿಲೆಗಳು ಒತ್ತಡದಿಂದ ಬರುತ್ತದೆ. ಸಂಗೀತವು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುವುದು. 3. ಪ್ರಾಣಾಯ...

ಮಸಾಜ್ ಗೆ ಯಾವ ಎಣ್ಣೆ ಸೂಕ್ತ ಗೊತ್ತಾ?

ಮಸಾಜ್ ಗೆ ಯಾವ ಎಣ್ಣೆ ಸೂಕ್ತ ಗೊತ್ತಾ? ದೇಹಕ್ಕೆ ತುಂಬಾ ದಣಿವು ಉಂಟಾದಾಗ ಮಸಾಜ್ ಮಾಡಿದರೆ ಸ್ವಲ್ಪ ಸಮಧಾನವಾಗುವುದು. ಅಲ್ಲದೆ ಮೈಕೈ ನೋವು ಕಡಿಮೆಯಾಗಿ ದೇಹಕ್ಕೆ ಹೊಸ ಚೈತನ್ಯ ದೊರೆಯುತ್ತದೆ. ತ್ವಚೆ ಕೂಡ ಕಾಂತಿಯನ್ನು ಪಡೆಯುತ್ತದೆ. ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದರೂ ಎಣ್ಣೆ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಮಸಾಜ್ ಮಾಡಿಸಲು ಮಸಾಜ್ ಸೆಂಟರ್ ಗೆ ಹೋಗಬೇಕಾಗಿಲ್ಲ, ಮಸಾಜ್ ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಮಸಾಜ್ ಮಾಡಲು ಈ ಕೆಳಗಿನ ಎಣ್ಣೆಗಳು ತುಂಬಾ ಸಹಕಾರಿಯಾಗಿದೆ. 1. ಬಾದಾಮಿ ಎಣ್ಣೆ: ಮಸಾಜ್ ಎಣ್ಣೆಗಳಲ್ಲಿ ಬಾದಾಮಿ ಎಣ್ಣೆಗೆ ವಿಶೇಷ ಸ್ಥಾನವಿದೆ. ಈ ಎಣ್ಣೆಯನ್ನು ಚರ್ಮ ಬೇಗನೆ ಹೀರಿಕೊಳ್ಳುತ್ತದೆ. ವಿಟಮಿನ್ ಇ ಎಣ್ಣೆಯೊಂದಿಗೆ ಈ ಎಣ್ಣೆಯನ್ನು ಬೆರೆಸಿ ಹಚ್ಚಿಕೊಂಡರೆ ಚರ್ಮಕ್ಕೆ ಅವಶ್ಯಕವಿರುವ ಪೋಷಕಾಂಶವನ್ನು ಒದಗಿಸಿದಂತೆ. * ಈ ಎಣ್ಣೆಯನ್ನು ಹಚ್ಚಿ ಅರ್ಧ ಗಂಟೆ ನಂತರ ಸ್ನಾನ ಮಾಡುವುದರಿಂದ ಕೂದಲಿಗಷ್ಟೇ ಅಲ್ಲ , ಮೆದುಳಿನ ಸಾಮರ್ಥ್ಯ ಕೂಡ ಹೆಚ್ಚಿಸುತ್ತದೆ. ಬಾದಾಮಿ ತೈಲವು ಚೈತನ್ಯ ಮತ್ತು ವೀರ್ಯವೃದ್ಧಿ ಮಾಡುತ್ತದೆ. * ಈ ಎಣ್ಣೆ ಹಚ್ಚಿದರೆ ಎಣ್ಣೆಯು ಮಾನಸಿಕ ಒತ್ತಡ ನಿವಾರಣೆ, ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ, ನರ ಸಂಬಂಧಿತ ನೋವನ್ನು ನಿವಾರಿಸುತ್ತದೆ. * ಕೂದಲಿನ ಪೋಷಣೆಗೆ, ತಲೆಹೊಟ್ಟಿನ ನಿವಾರಣೆಗೆ ಮತ್ತು ಕೂದಲಿನ ಹೊಳಪನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. 2. ಸೂರ್ಯಕಾಂತಿ ಎ...

ಮೈಕ್ರೋವೇವ್ ಆಹಾರ ಆರೋಗ್ಯಕರವೇ?

ಮೈಕ್ರೋವೇವ್ ಆಹಾರ ಆರೋಗ್ಯಕರವೇ? ನಗರ ಪ್ರದೇಶದಲ್ಲಿ, ಹಳ್ಳಿಯ ಕೆಲವು ಮನೆಗಳಲ್ಲೂ ಕೂಡ ಮೈಕ್ರೋವೇವ್ ಬಳಕೆ ಸಾಮನ್ಯವಾಗಿದೆ. ಸುಲಭವಾಗಿ ಅಡುಗೆ ಮಾಡುಬಹುದಾಗಿರುವುದರಿಂದ ಮೈಕ್ರೋವೇವ್ ಬಳಸಲು ಹೆಚ್ಚಿನವರು ಇಷ್ಟಪಡುತ್ತಾರೆ. ಅಲ್ಲದೆ ಈ ಮೈಕ್ರೋವೇವ್ ನಲ್ಲಿ ಅಡುಗೆ ಮಾಡುವಾಗ ನಾನಾ ಬಗೆಯ ಅಡುಗೆಗಳನ್ನು ಬಲು ಸುಲಭದಲ್ಲಿ ಕೆಲವೇ ನಿಮಿಷದಲ್ಲಿ ತಯಾರಿಸಬಹುದು. ಮೈಕ್ರೋವೇವ್ ಬಂದ ಮೇಲೆ ಕೆಲವರಂತೂ ಕೇಕ್, ಗ್ರಿಲ್ಡ್ ಪದಾರ್ಥಗಳನ್ನು ಹೊರಗಿನಿಂದ ಕೊಂಡು ತರುವುದಕ್ಕಿಂತ ಮನೆಯಲ್ಲಿಯೇ ತಯಾರಿಸುತ್ತಿದ್ದಾರೆ. ಆದರೆ ಈ ಮೈಕ್ರೋವೇವ್ ಅಡುಗೆ ಆರೋಗ್ಯಕ್ಕೆ ಒಳ್ಳೆಯದೇ ಎಂಬ ಗುಮಾನಿ ಹೆಚ್ಚಿನವರಲ್ಲಿದೆ. ಮೈಕ್ರೋವೇವ್ ಅಡುಗೆ ಆರೋಗ್ಯಕ್ಕೆ ಒಳ್ಳೆಯದಾಗಿದ್ದು ಬೇಗನೆ ಅಡುಗೆ ಮಾಡಬೇಕು ಆದರೆ ಆ ಅಡುಗೆ ಆರೋಗ್ಯಕರವಾಗಿರಬೇಕು ಎಂದು ಬಯಸುವವರು ಈ ಕೆಳಗಿನ ಆಹಾರ ಪದಾರ್ಥಮಾಡಬಹುದು. ಕೆಂಪಕ್ಕಿ ಅನ್ನ: ಕೆಂಪಕ್ಕಿ ಅನ್ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ತೂಕ ಕಡಿಮೆ ಮಾಡುತ್ತೆ. ಮೈಕ್ರೋವೇವ್ ನಲ್ಲಿ ಈ ಅನ್ನ ಬೇಯಿಸುವ ಮೊದಲು 3-4 ಬರಿ ತೊಳೆದು ನಂತರ ಬೇಯಿಸಬೇಕು. ಮೃಕ್ರೋವೇವ್ ನಲ್ಲಿ ಅಡುಗೆ ಮಾಡುವ ಮೊದಲು 20 ನಿಮಿಷ ತೊಳೆದು ನೀರಿನಲ್ಲಿ ನೆನೆಹಾಕಿ. ನಂತರ ಆ ನೀರಿನ್ನೇ ಅಡುಗೆಗೆ ಬಳಸಿ. ಇದರಿಂದ ಪೋಷಕಾಂಶಗಳು ಹಾಳಾಗುವುದಿಲ್ಲ. ಇದರ ಪ್ರಮುಖ ಪ್ರಯೋಜನವೆಂದರೆ ಇದನ್ನು ಒಲೆಯಲ್ಲಿ ಅಥವಾ ಗ್ಯಾಸ್ ನಲ್ಲಿ ಮಾಡುವುದಾದರೆ ಅಧಿ...

ಆರೋಗ್ಯಕರ ಜೀವನಕ್ಕಾಗಿ 12 ಸರಳ ಸೂತ್ರಗಳು

ಆರೋಗ್ಯಕರ ಜೀವನಕ್ಕಾಗಿ 12 ಸರಳ ಸೂತ್ರಗಳು ಜೀವನದಲ್ಲಿ ಕಾಯಿಲೆ ಕಸಾಲೆಗಳು ಸಾಮನ್ಯ. ಆದರೆ ನಮ್ಮ ಜೀವನ ಕ್ರಮ ಕಾಯಿಲೆಯನ್ನು ಹೆಚ್ಚು ಮಾಡುವಲ್ಲಿ ಅಥವಾ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಿಕ್ಕ ಪುಟ್ಟ ಕಾಯಿಲೆ ಬರುವಾಗಲೇ ಅದರ ಬಗ್ಗೆ ಗಮನ ಹರಿಸಿದರೆ ಬೇಗನೆ ಗುಣ ಪಡಿಸಬಹುದು. ಆದರೆ ಸಣ್ಣ ಪುಟ್ಟ ಕಾಯಿಲೆಗಳನ್ನು ಹಾಗೇ ಬಿಟ್ಟರೆ ಅವು ದೊಡ್ಡ ಸಮಸ್ಯೆಯಾಗಿ ಉದ್ಭವವಾಗುತ್ತದೆ. ಉದಾಹರಣೆಗೆ ನಿದ್ರಾ ಹೀನತೆ. ಇದನ್ನು ಆರಂಭದಲ್ಲಿಯೇ ಗುಣ ಪಡಿಸದಿದ್ದರೆ ಮುಂದೆ ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಮನೆ ಔಷಧಿಯಿಂದ ಪರಿಹಾರ ಕಾಣಬಹುದು. ಈ ಕೆಳಗ್ಗೆ ಕೆಲ ಸಲಹೆಗಳನ್ನು ನೀಡಲಾಗಿದೆ. ಅವುಗಳು ನಿಮ್ಮನ್ನು ಆರೋಗ್ಯವಂತರಾಗಿ ಇಡುವಲ್ಲಿ ಸಹಕಾರಿಯಾಗಿದೆ. 1. ಪ್ರತಿದಿನ ಹಸಿ ಕರಿ ಬೇವಿನ ಎಲೆ ತಿಂದರೆ ಅಕಾಲಿಕ ಮುಪ್ಪು ಉಂಟಾಗುವುದಿಲ್ಲ. ಅಲ್ಲದೆ ಇದನ್ನು ತಿಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. 2. ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಉತ್ತಮ ಪ್ರಯೋಜನವನ್ನು ಕಾಣಬಹುದು. 3. ಅಜೀರ್ಣತೆ ಉಂಟಾದರೆ 2-3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಜಜ್ಜಿ, ಅದನ್ನು ಹಾಲಿನಲ್ಲಿ ಹಾಕಿ ಕುದಿಸಿ ಕುಡಿದರೆ ತಕ್ಷಣ ಗುಣವಾಗುವುದು. 4. ನಿದ್ದೆ ಸರಿಯಾಗಿ ಬರದಿದ್ದರೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಅರೆದು ಅದರಿಂದ ಜ್ಯ...

ಆಸಿಡಿಟಿ ಅಂದರೇನು?

ಆಸಿಡಿಟಿ ಅಂದರೇನು? ಆಸಿಡಿಟಿ ಅಂದರೆ ಹೊಟ್ಟೆಯಲ್ಲಿ ಚುಚ್ಚಿದಂತೆ ಆಗುವುದು, ಹುಳಿ ತೇಗು ಬರುವುದು, ಹೊಟ್ಟೆಯುಬ್ಬರಿಸಿದಂತೆ ಆಗುವುದು, ಪದೇ, ಪದೇ ಜೋರಾದ ತೇಗು ಬರುವುದು, ಹೊಟ್ಟೆ ತುಂಬಿದಂತಿದ್ದರೂ ಏನಾದರೂ ತಿನ್ನುತ್ತಾ ಇರಬೇಕು ಅನ್ನಿಸುವುದು, ವಿಪರೀತವಾಪ ಕೋಪ, ಸಣ್ಣ, ಸಣ್ಣ ವಿಷಯಕ್ಕೂ ಮನಸ್ಸು ಉದ್ರೇಕಗೊಳ್ಳುವಿಕೆ, ಮಂಕುತನ, ಒಂಟಿಯಾಗಿ ಇರಬೇಕೆನ್ನುಸುವಿಕೆ, ಕೆಲಸದಲ್ಲಿ ಆಸಕ್ತಿ ಇಲ್ಲದಿರುವಿಕೆ, ಎಲ್ಲರ ಮೇಲೂ ರೇಗಾಡುವಿಕೆ, ಯಾವಾಗಲೂ ಮಲಗಿರಬೇಕೆಂಬ ಆಸಕ್ತಿಯು, ಇಡೀದಿನ ಮಲಗುವಿಕೆ, ವಿಪರೀತ ನಿದ್ದೆ ಮಾಡುವಿಕೆ, ಇದು ಬಂದಾಗ ಬರೀ ಎಣ್ಣೆಯಲ್ಲಿ ಕರಿದ ತಿಂಡಿಗಳಮೇಲೆ ಆಸಕ್ತಿ, ಚಿಪ್ಸ್, ಮೈದಾದಿಂದ ಮಾಡಿದ ತಿಂಡಿ ತಿನಸುಗಳು, ವಿಪರೀತ ಎಣ್ಣೆಹಾಕಿ ಮಾಡಿದ ತಿಂಡಿ ತಿನಸುಗಳು, ಅತಿಯಾದ ಕಾಫೀ ಸೇವನೆ, ಅತಿಯಾಗಿ ಸಿಗರೇಟ್, ಬೀಡಿ ಸೇದುವಿಕೆ, ಹೋಟೆಲಿನಲ್ಲಿ ಮಾಡಿದ ತಿಂಡಿಗಳ ಮೇಲೆ ಆಸಕ್ತಿ, ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುವುದು ಇತ್ಯಾದಿ ಇದು ಬಂದಾಗ ನಮ್ಮ ಜನರು ಏನು ಮಾಡುತ್ತಾರೆ? ತಕ್ಷಣ ಅಲ್ಲೋಪತಿ ಡಾಕ್ಟರರ ಹತ್ತಿರ ಓಡುತ್ತಾರೆ. ಅವರು ಕೊಡುವುದು ಏನನ್ನು? ಡೈಜೀನ್ ಮಾತ್ರೆ ಕೊಡುತ್ತಾರೆ ಅಥವಾ ಜೆಲ್ಯೂಸಿಲ್ ಮಾತ್ರೆ ಕೊಡುತ್ತಾರೆ. ಇದರಿಂದ ತಾತ್ಕಾಲಿಕ ಶಮನ ಅಗುವುದೇನೋ ನಿಜ. ಆದರೆ ಇದು ಶಾಶ್ವತವಾಗಿ ವಾಸಿಯಾಗುವುದಿಲ್ಲ. ಕಾರಣ ಏನೆಂದರೆ ಮತ್ತೆ ಇನ್ನು ಎರಡು ದಿನ ಕಳೆದಮೇಲೆ ಮತ್ತೆ ಶುರುವಾಗುತ್ತದೆ. ಯಾಕಂದರೆ ಮತ್ತದೇ ಮೇಲೆ ಬರ...

ಮೈದಾ ಹಿಟ್ಟು - ಅತಿ ಅಪಾಯಕಾರಿ ಹಿಟ್ಟು(maida flour)

ಮೈದಾ ಹಿಟ್ಟು - ಅತಿ ಅಪಾಯಕಾರಿ ಹಿಟ್ಟು(maida flour) ನೀವು ಆಸಿಡಿಟಿಯನ್ನು ವಾಸಿಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈಗ ಹೇಳುತ್ತಿದ್ದೇನೆ. ಆಸಿಡಿಟಿ ಬರಲು ಕಾರಣ ಏನೆಂದರೆ ಯಾವಾಗಲೂ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ, ಅತಿಯಾದ ಸಿಹಿತಿಂಡಿಗಳ ಸೇವನೆ, ಅತಿಯಾದ ಕಾಫೀ ಮತ್ತು ಟೀ ಕುಡಿಯುವಿಕೆ, ಅತಿಯಾದ ಧೂಮಪಾನ ಮಾಡುವಿಕೆ, ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳ ಅತಿಯಾಗಿ ತಿನ್ನುವುದು, ಪಾಲೀಶ್ ಮಾಡಿದ ಅಕ್ಕಿಯ ಅನ್ನವನ್ನು ಊಟಮಾಡುವುದು, ಸಕ್ಕರೆಯನ್ನು ಉಪಯೋಗಿಸುವುದು, ಇತ್ಯಾದಿ ಪದಾರ್ಥಗಳಿಂದ ಅಸಿಡಿಟಿ ಬರುವುದು. ಇದು ಎಲ್ಲಕ್ಕಿಂತಲೂ ಮಲಬದ್ಧತೆ ಮೂಲ ಕಾರಣ ಈ ರೋಗ ಬರಲು. ನಮ್ಮ ಮತ್ತು ನಿಮ್ಮ ಮನೆಗಳಲ್ಲಿ ಚರಂಡಿ ಇದೆ ತಾನೇ? ಹಾಗೆಯೇ ನಮ್ಮ ಮತ್ತು ನಿಮ್ಮ ದೇಹದಲ್ಲೂ ಚರಂಡಿ ಇದೆ. ಮನೆಯ ಚರಂಡಿ ಶುದ್ಧವಾಗಿದ್ದರೆ ಯಾವುದೇ ಥರಹದ ದುರ್ವಾಸನೆ ಇರುವುದಿಲ್ಲಾ ತಾನೇ. ಮನೆಗಳ ಚರಂಡಿ ಚೊಕ್ಕಟವಾಗಿಟ್ಟುಕೊಳ್ಲಲು ನಮಗೆಲ್ಲಾ ಗೊತ್ತು. ಅಲ್ವೇ??? ಸಿಕ್ಕಿದ್ದೆಲ್ಲಾ ಮನೆಯ ಚರಂಡಿಯಲ್ಲಿ ಹಾಕುತ್ತಿದ್ದರೆ ಏನಾಗುತ್ತದೆ? ನೀವೇ ಯೋಚನೆ ಮಾಡಿನೋಡಿ. ಹಾಗೆಯೇ ನಮ್ಮ ದೇಹದ ಚರಂಡಿಯನ್ನು ನೋಡಿಕೊಳ್ಳಬೇಕಲ್ಲವೇ? ಅದೂ ಶುದ್ಧವಾಗಿರಬೇಕು ತಾನೇ? ಅದು ಶುದ್ಧವಾಗಿರಲು ಏನು ಮಾಡಬೇಕು? ಮನೆಯ ಚರಂಡಿಯನ್ನು ಶುದ್ಧಗೊಳಿಸಲು ಪರಕೆ ಅಥವಾ ಬ್ರಷ್ ಉಪಯೋಗಿಸುತ್ತೇವೆ, ಹೌದು ತಾನೇ? ಆದರೆ ನಮ್ಮ ಮತ್ತು ನಿಮ್ಮ ದೇಹದ ಚರಂಡಿಯನ್ನು ಪರಕೆ ಹಾಗೂ ಬ್ರಷ್ ಹಾಕಿ ಶುದ್ಧಗ...

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿಯನ್ನೇ ಯಾವಾಗಲೂ ಊಟಕ್ಕೆ ಉಪಯೋಗಿಸಿ ಆನಂದವನ್ನು ಪಡೆಯಿರಿ. ಈ ಅಕ್ಕಿಗೆ ಆಡು ಭಾಷೆಯಲ್ಲಿ ಕೆಂಪು ಮುಂಡಗ ಅಕ್ಕಿ ಅಥವಾ ಕಜ್ಜಾಯ ಅಕ್ಕಿ ಎಂದೂ ಕರೆಯುತ್ತಾರೆ. ಈ ಅಕ್ಕಿಯಲ್ಲಿ ಬೇಕಾದಷ್ಟು ಪೌಷ್ಟಿಕಾಂಶಗಳು ಇವೆ. ಹೊರಗಡೆ ಯಾವುದೇ ಅಂಗಡಿಯಲ್ಲಿ ಇದು ದೊರಕುವಂತಾದ್ದಲ್ಲ. ಕೋಟಿ ರೂಪಾಯಿಗಳನ್ನು ಕೊಟ್ಟರೂ ಸಿಗುವುದಿಲ್ಲ. ಊಟ ಮಾಡುತ್ತಿರುವಾಗಲೇ ಈ ಪೌಷ್ಟಿಕಾಂಶಗಳು ದೇಹದಲ್ಲಿರುವ ಎಲ್ಲ ಕಸಕಡ್ಡಿಗಳನ್ನೂ, ಅತಿಯಾದ ವಾತ ಪಿತ್ತ ಕಫಗಳನ್ನೂ, ಯಾವುದೇ ರೀತಿಯ ಬೆನ್ನುನೋವು, ತಲೆನೋವು, ಸೊಂಟನೋವು, ಕಾಲುನೋವು, ತಲೆಭಾರ, ನಿದ್ರೆ ಸರಿಯಾಗಿ ಬಾರದಿರುವುದು, ಕೊಲೆಸ್ಟರಾಲನ್ನು ಪೂರ್ತಿಯಾಗಿ ಕರಗಿಸುವುದು. ಮುಂದೆ ಎಂದೆಂದಿಗೂ ಕೊಲೆಸ್ಟರಾಲ್ ದೇಹದಲ್ಲಿ ಸೇರಲು ಅವಕಾಶ ಕೊಡುವುದಿಲ್ಲ, ಬ್ಲಡ್ ಶುಗರನ್ನು ೧೦೦ ಕ್ಕೆ ೧೦೦ ರಷ್ಟು ಕಡಿಮೆಮಾಡುವುದು. ಇದನ್ನೆಲ್ಲ ವಿಜ್ನಾನಿಗಳು ದೃಡಪಡಿಸಿದ್ದಾರೆ. ಮನೆಯಲ್ಲಿ ಪಿ.ಸಿ. ಇದ್ದು ಇಂಟರ್ನೆಟ್ ಹಾಕಿಸಿಕೊಂಡಿರುವವರು ಗೂಗಲ್ ನಲ್ಲಿ ಜಾಲಾಡಿನೋಡಿ. ಈ ಕಜ್ಜಾಯ ಅಕ್ಕಿಗೆ ೧೦೦ ಕ್ಕೆ ೧೦೦ ರಷ್ಟು ಕ್ಯಾನ್ಸರ್ ವಾಸಿಮಾಡುವ ಶಕ್ತಿ ಇದೆ. ಇದಲ್ಲದೆ ಆಸಿಡಿಟಿ, ಗ್ಯಾಸ್ಟ್ರೈಟಿಸ್, ಬೊಜ್ಜು ಈ ಎಲ್ಲವೂ ೧೦೦% ವಾಸಿಯಾಗುತ್ತದೆ. ಇದಲ್ಲದೇ ಮುಖವೂ ಕಾಂತಿಯುಕ್ತವಾಗುತ್ತದೆ. ಕಣ್ಣುಗಳು ಮಿನುಗುತ್ತವೆ. ಚಟುವಟಿಕೆ ಜಾಸ್ತಿಯಾಗುತ್ತದೆ. ಊಟ ಮಾಡಿದ ತಕ್ಷಣ ...

ಸಮತೋಲನ ಆಹಾರ(ಬ್ಯಾಲನ್ಸಡ್ ಡಯಟ್)

ಸಮತೋಲನ ಆಹಾರ(ಬ್ಯಾಲನ್ಸಡ್ ಡಯಟ್) ಇಂದು ಯಾರೇ ಡಾಕ್ಟರರ ಹತ್ತಿರ ಹೋದರೂ ಒಂದು ಪದ ಉಪಯೋಗಿಸುತ್ತಾರೆ. 'ನೀವು ಸಮತೋಲನ ಆಹಾರ ತೆಗೆದುಕೊಳ್ಳುತ್ತಿಲ'. ಯಾವುದೇ ಡಯಟೀಷಿಯನ್ ಬಳಿ ಹೋದರೂ ಇದೇ ಮಾತು. ಈ ಸಮತೋಲನ ಆಹಾರವೆಂದರೇನು? ಆಹಾರದಲ್ಲಿ ಆರೂ ಘಟಕಗಳೂ ಇರಬೇಕು. ಅದೂ ಪ್ರಮಾಣಬದ್ಧವಾಗಿರಬೇಕು. ಒಂದೇ ಒಂದು ಘಟಕವನ್ನು ಹೊಟ್ಟೆಯ ತುಂಬಾ ತಿಂದರೂ ಪ್ರಯೋಜನವಿಲ್ಲ. ಯಾವ ಯಾವ ಗುಂಪಿನ ಆಹಾರ ಎಷ್ಟೆಷ್ಟು? ಒಂದು ದಿನದ ಒಬ್ಬನ ಆಹಾರ : ೧. ಏಕದಳ ಧಾನ್ಯಗಳು ೪೬೦ ಗ್ರಾಂ ೨. ಬೇಳೆಗಳು ೪೦ ಗ್ರಾಂ ೩. ಹಸಿ ತರಕಾರಿಗಳು ೪೦ ಗ್ರಾಂ ೪. ಇತರೆ ತರಕಾರಿಗಳು ೪೦ ಗ್ರಾಂ ೫. ಗೆಡ್ಡೆ, ಗೆಣಸುಗಳು ೫೦ ಗ್ರಾಂ ೬. ಹಣ್ಣುಗಳು ೩೦ ಗ್ರಾಂ ೭. ಹಾಲು ೧೫೦ ಗ್ರಾಂ ೮. ಕೊಬ್ಬು ೪೦ ಗ್ರಾಂ ೯. ಬೆಲ್ಲ ೩೦ ಗ್ರಾಂ ಈ ಸಮತೋಲನ ಆಹಾರವೂ ಸಹ ಎಲ್ಲರಿಗೂ, ಯಾವಾಗಲೂ ಸಮತೋಲನವಾಗುವುದಿಲ್ಲ. ೧) ಮಕ್ಕಳ ಬೆಳೆಯುವ ವಯಸ್ಸಿನಲ್ಲಿ: ಬೆಳವಣಿಗೆಗಾಗಿ ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕಾಗುತ್ತದೆ. ಮೂಳೆಗಳ ಬೆಳವಣಿಗೆಗೆ ಹೆಚ್ಚು ಕ್ಯಾಲ್ಷಿಯ್ಂ ಮತ್ತು ರಂಜಕ, ವಿಟಮಿನ್ 'ಎ' ಕಣ್ಣುಗಳ ಆರೋಗ್ಯಕ್ಕಾಗಿ, ವಿಟಮಿನ್ 'ಸಿ' ಶರೀರದ ರಕ್ಷಣೆಗಾಗಿ, ಹಾಗೂ ವಿಟಮಿನ್ 'ಡಿ' ಬೆಳವಣಿಗೆಗಾಗಿ, ಈ ವಿಷಯಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಆಹಾರ ಕೊಡಬೇಕಾಗುತ್ತದೆ. ೨. ಶ್ರಮ ಜೀವಿಗಳಿಗೆ : ಇವರಿಗೆ ಹೆಚ್ಚು ಕಾರ್ಬೋಹೈಡ್ರ್‍ಏಟ್ ಮತ್ತು ಕೊಬ್ಬ...

ಭತ್ತ/ಕೆಂಪಕ್ಕಿ ಮತ್ತು ಅದರ ತಿನಿಸುಗಳು

ಕೆಂಪಕ್ಕಿ(ಕಜಾಯ ಅಕ್ಕಿ) ಮತ್ತು ಅದರ ತಿನಿಸುಗಳು ಭತ್ತ/ಕೆಂಪಕ್ಕಿ ಭತ್ತದಿಂದ ಅಕ್ಕಿ, ಅಕ್ಕಿಯಿಂದ ಅನ್ನ, ಆಹಾರಕ್ಕೆ ಪರ್‍ಯಾಯ ಪದವೇ ಅನ್ನ. ದಕ್ಷಿಣ ಭಾರತದಲ್ಲಿ ನಾವು ಹೆಚ್ಚು ಉಪಯೋಗಿಸುವ ಆಹಾರವೇ ಅನ್ನ. ಹಿಂದೆ ಒಬ್ಬನ ಶಕ್ತಿಯನ್ನು ಅಳೆಯುತ್ತಿದ್ದುದೇ ಅವನು ತಿನ್ನುವ ಅನ್ನದ ಅಳತೆಯಿಂದ. "ಪಾವಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ, ಸೇರಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ." ನಾವು ಮಾಡುತ್ತಿದ್ದ ಹಾಗೂ ಮಾಡುತ್ತಿರುವ ತಪ್ಪು ಇದೇ. ಅವಶ್ಯಕತೆಗಿಂತ ಹೆಚ್ಚು ಅನ್ನವನ್ನು ತಿನ್ನಬಾರದು. ಬಹುಶಃ ಭತ್ತವನ್ನು ಬೆಳೆಯುವ ಕಲೆಯನ್ನು ಕಲಿತ ಮೇಲೆ ದಿನನಿತ್ಯದ ಆಹಾರ ಹುಡುಕಬೇಕಾದ ಕಷ್ಟ ತಪ್ಪಿ ಮನುಷ್ಯ ನಿರಾಳನಾದನೆಂದು ಕಾಣುತ್ತದೆ. ಅದರಿಂದ, ಅನ್ನ ಅವನ ಎಲ್ಲಾ ಆಹಾರಪದಾರ್ಥಗಳಲ್ಲಿ ಮೊದಲ ಸ್ಥಾನ ಪಡೆಯಿತು. ಈಗ ಉಪಯೋಗಿಸುತ್ತಿರುವ ಬಿಳಿಯ ಅಕ್ಕಿ ಯಾವ ಅಳತೆಗೋಲಿನಿಂದಲೂ ಸರಿಯಾದ ಆಹಾರಪದಾರ್ಥವಲ್ಲ. ತೌಡಿನಲ್ಲಿ ಎಲ್ಲಾ ಸತ್ವಗಳು ಹೊರಟುಹೋಗಿರುತ್ತವೆ. ನಾವು ಅಕ್ಕಿ ಎಂದು ಹೇಳಿದರೆ ಅದು ಕೆಂಪಕ್ಕಿಯೇ. ಹಿಂದೆ ಇದರಲ್ಲಿ ಅನೇಕ ತಳಿಗಳಿದ್ದವು. ಈಗ 'ದೇವಮಲ್ಲಿಗೆ' ಎಂಬ ಒಂದೇ ರೀತಿಯ ತಳಿ ಉಳಿದಿದೆ. ಅದನ್ನೂ ಸಹ ಹೆಚ್ಚು ಪಾಲೀಶ್ ಮಾಡಿರುತ್ತಾರೆ. ಹಾಗೆ ಮಾಡದಂತೆ ವಿನಂತಿಸಿಕೊಳ್ಳಬೇಕು. ಅಕ್ಕಿಯನ್ನು ತಿಕ್ಕಿ ತಿಕ್ಕಿ ಅನೇಕ ಸಲ ತೊಳೆಯಬಾರದು. ಧೂಳು ಹೋಗುವಂತೆ ಒಮ್ಮೆ ತೊಳೆದರೆ ಸಾಕು. ಇಲ್ಲದಿದ್ದರೆ ಜೀವಸತ್ವಗಳು ನಷ್ಟವಾಗುತ್ತವೆ....

ಧನ, ಮಧ್ಯ ಮತ್ತು ರುಣಾತ್ಮಕ ಆಹಾರ

ಧನ, ಮಧ್ಯ ಮತ್ತು ರುಣಾತ್ಮಕ ಆಹಾರ ಧನಾತ್ಮಕ ಆಹಾರ ಧನಾತ್ಮಕ, ಸತ್ವಯುತ, ಅಮೃತಾನ್ನ, ಸಾತ್ವಿಕ(ಪ್ರೈಮರಿ, ಪಾಸಿಟೀವ್) ೧. ಹಣ್ಣುಗಳು ೧. (ಅ) ಸಿಹಿ/ಖಂಡಭರಿತ : ಬಾಳೆ, ಪಪಾಯಿ, ಮಾವು, ಸೀಬೆ, ಹಲಸು, ಕರಬೂಜ, ಸಪೋಟ(ಚಿಕ್ಕು), ಸೇಬು, ರಾಮಫಲ, ಸೀತಾಫಲ, ಕಲ್ಲಂಗಡಿ, ಬೆಟ್ಟನೆಲ್ಲೀಕಾಯಿ ಇತ್ಯಾದಿ. (ಆ) ಹುಳಿಹಣ್ಣುಗಳು : ಕಿತ್ತಲೆ, ದ್ರಾಕ್ಷಿ, ಮೂಸಂಬಿ, ನೇರಳೆ, ದಾಳಿಂಬೆ, ಚಕ್ಕೋತ, ನಿಂಬೆ, ಟೊಮೇಟೋ ಇತ್ಯಾದ. (ಇ) ಒಣಹಣ್ಣುಗಳು : ಒಣದ್ರಾಕ್ಷಿ, ಖರ್ಜೂರ, ಅಂಜೂರ ಇತ್ಯಾದಿ ೨. ತರಕಾರಿಗಳು (ಅ) ಸೊಪ್ಪುಗಳು : ಬಸಳೆ, ಮೆಂಥ್ಯ, ಕೊತ್ತಂಬರಿ, ಪುದೀನ, ಲೆಟ್ಯೂಸ್, ಪಾಲಕ್, ಸಬ್ಬಸಿಗೆ, ಕರಿಬೇವು, ದೊಡ್ಡಪತ್ರೆ, ಒಂದೆಲಗ, ಗರಗ ಇತ್ಯಾದಿ. (ಆ) ಹಸಿರು ತರಕಾರಿಗಳು : ಪಡ್ವಲ, ಹೀರೇಕಾಯಿ, ಎಲೆಕೋಸು, ಸೌತೇಕಾಯಿ, ಟೊಮೇಟೋ, ಬುದುಗುಂಬಳ, ಸಿಹಿಗುಂಬಳ ಇತ್ಯಾದಿ. (ಇ) ಗೆಡ್ಡೆಗೆಣಸುಗಳು : ಕ್ಯಾರಟ್, ಗೆಡ್ಡೆಕೋಸು, ಬೀಟ್ ರೂಟ್, ಮರಗೆಣಸು, ಸಿಹಿ ಗೆಣಸು, ಮೂಲಂಗಿ. ೩. ಕಾಯಿಗಳು(ನಟ್ಸ್) : ತೆಂಗಿನಕಾಯಿ, ಕಡ್ಲೇಕಾಯಿಬೀಜ, ಬಾದಾಮಿ, ಗೋಡಂಬಿ, ಪಿಸ್ತ, ವಾಲ್ ನಟ್ ಇತ್ಯಾದಿ. ೪. ರಸಗಳು : ಎಳೆನೀರು, ಹಣ್ಣಿನ ರಸಗಳು, ತರಕಾರಿ ರಸಗಳು, ದೊಡ್ಡಪತ್ರೆ ರಸ, ಒಂದೆಲಗದ ರಸ, ಗರಗದ ರಸ, ತುಳಸೀ ರಸ, ಬಿಲ್ಪತ್ರೇ ರಸ, ಗರಿಕೆಹುಲ್ಲಿನ ರಸ, ಗೋಧೀಹುಲ್ಲಿನ ರಸ, ಕಬ್ಬಿನ ರಸ ಇತ್ಯಾದಿ. ೫) ಮೊಳಕೆ ಕಾಳುಗಳು : ಗೋಧಿ, ಹೆಸರುಕಾಳು, ಕಡಲೆಕಾಳು, ಬಟಾಣಿ, ಮೆಂಥ್ಯ, ...

ಮನೆ ಮದ್ದು

ಮನೆ ಮದ್ದು ವಸ್ತು : ಸೌತೆಕಾಯಿ ಉಪಯೋಗ : ಜೀರ್ಣಶಕ್ತಿ ಹೆಚ್ಚಳ ಮತ್ತು ಉತ್ತಮ ನಿದ್ರೆ. ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು. ವಸ್ತು : ಏಲಕ್ಕಿ ಶಮನ : ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಏಲಕ್ಕಿ ಸೇವಿಸಿದರೆ ಶಮನಗೊಳ್ಳುವುದು. ಏಲಕ್ಕಿ ಯಿಂದ ಆಹಾರ ಜೀರ್ಣವಾಗಿ ಬಾಯಿಗೆ ರುಚಿಯುಂಟಾಗುತ್ತದೆ. ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ಪರಿಣಾಮ ಬೀರುವುದು. ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ. ವಸ್ತು : ಮೆಣಸು ಶಮನ : ಅಜೀರ್ಣ, ಮೊಡವೆ, ಜಂತುಹುಳು. ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣವು ನಿವಾರಣೆಯಾಗುತ್ತದೆ. ಕೆಲವು ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತವೆ. ಹೊಟ್ಟೆಯಲ್ಲಿ ಜಂತುಹುಳುಗಳ ಉಪಟಳ ಜಾಸ್ತಿಯಾದಾಗ ಬೆಳಗ್ಗೆ ಮತ್ತು ರಾತ್ರಿ ಮೆಣಸಿನ ಕಷಾಯವನ್ನು ಕುಡಿಯುವುದು ಪರಿಣಾಮಕಾರಿ...