Skip to main content

"ದೇವರ ಮನೆ ಮತ್ತು ಪೂಜೆ" ಯ ವಿಷಯಗಳು..

೧. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ.. ೨. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ.. ೩. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು. ೪. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ, ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ.. ೫. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ "ನೈವೇದ್ಯ "ದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು.. ೬. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು.. ೭. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ.. (ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು) ೮. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನು "ಅರಿಸಿನದ ನೀರಿನಿಂದ ಶುದ್ಧ ಮಾಡಿ.. ೯. ದೇವರ ಪೂಜೆಗೆ "ಆಂಜನೇಯ" ಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು.. ೧೦. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ , ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ.. ೧೧. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ.. ೧೨. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ.. ೧೩. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು.. ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು.. ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ.. ೧೪. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮ .ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು.. ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು.. ೧೫. ದೇವರ ಪೂಜೆಗೆ "ಹಸಿಯಾದ ಹಾಲನ್ನು ಮಾತ್ರ ಬಳಸಿ.. ೧೬. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ.. ನೈವೇದ್ಯ ಮಾಡೋವಾಗ "ತುಳಸೀಪತ್ರೆಯನ್ನು" ಬಳಸಬೇಕು.. ೧೭. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ.. ೧೮. ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ.. ೧೯. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು.. ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ.. ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ, ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು "ಮನೆದೇವರೇ.."! ೨೦. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ "ಮಹಾಲಕ್ಷ್ಮೀ" ಸಾನಿಧ್ಯ ಇರುತ್ತದೆ.. ೨೧. "ಶ್ರೀ ಚಕ್ರ" , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ ಮಹಾಲಕ್ಷ್ಮೀ .. ಇತ್ಯಾದಿ ಈ ದೇವರುಗಳೆಲ್ಲಾ "ಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು, ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ..

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...