ಆರೋಗ್ಯವೇ ಭಾಗ್ಯ. ಆರೋಗ್ಯವು ಜನ್ಮದತ್ತವಾಗಿ, ತಮ್ಮ ಪೂರ್ವ ಪುಣ್ಯಗಳಿಗನುಸಾರವಾಗಿ ಬರುತ್ತದೆ. 'ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿರೂಪೇಣ ಬಾಧ್ಯತೇ' ಎಂಬಂತೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಗನುಸಾರವಾಗಿ ವ್ಯಾಧಿಗಳು ನಮ್ಮನ್ನು ಕಾಡುತ್ತವೆ. ಇದನ್ನು ನಾವು ಜನ್ಮ ಜಾತಕದಿಂದ ತಿಳಿಯಬಹುದು. ಆರೋಗ್ಯ ಜ್ಯೋತಿಷ್ಯದ ಪ್ರಕಾರ ಕಾಲ ಪುರುಷನ ಅಂಗದ ಆಧಾರದ ಮೇಲೆ, ಲಗ್ನದಿಂದ ದ್ವಾದಶ ಭಾವಗಳ ಮೇಲೆ, ನವಗ್ರಹಗಳ ಆಧಾರದ ಮೇಲೆ ವ್ಯಾಧಿಗಳನ್ನು ನಿರ್ಧರಿಸಬಹುದು. 1. ಕಾಲ ಪುರುಷನ ಅಂಗಗಳನ್ನು ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹಂಚಿದ್ದಾರೆ. ಜಾತಕದಲ್ಲಿ ಯಾವ ರಾಶಿಯು ಪೀಡಿತವಾಗಿರುತ್ತದೋ ಆ ರಾಶಿಯ ಅಂಗ ವ್ಯಾಧಿಗ್ರಸ್ತವಾಗುತ್ತದೆ. ಮೇಷ: ತಲೆಯ ಭಾಗ, ಮಿದುಳು, ಬಾಯಿ, ಮನಸು. ವೃಷಭ: ಮುಖ, ಬಲಗಣ್ಣು, ಕಂಠ, ಕುತ್ತಿಗೆ, ಧ್ವನಿ ಪೆಟ್ಟಿಗೆ. ಮಿಥುನ: ಹೆಗಲು, ಬಾಹು, ಬಲಕಿವಿ, ಶ್ವಾಸಕೋಶ, ಉಸಿರಾಟ. ಕಟಕ:ಹೃದಯ, ವಕ್ಷಸ್ಥಳ, ಪಕ್ಕೆಗಳು ಸಿಂಹ: ಬೆನ್ನು, ಹೊಟ್ಟೆ, ಪಿತ್ತಕೋಶ, ರಕ್ತನಾಳಗಳು, ಜಠರ. ಕನ್ಯಾ: ಸೊಂಟ, ನಾಭಿ, ಸಣ್ಣಕರುಳು ತುಲಾ: ಕಿಬ್ಬೊಟ್ಟೆ, ದೊಡ್ಡಕರುಳು, ಪೃಷ್ಟ, ಮೂತ್ರಕೋಶ, ಗರ್ಭಕೋಶ. ವೃಶ್ಚಿಕ: ಗುಪ್ತಾಂಗ, ಜನನಾಂಗ, ಧನುಸ್ಸು: ತೊಡೆ, ಸ್ನಾಯುಗಳು. ಮಕರ:ಮೊಣಕಾಲು, ಮಂಡಿ,ಅಸ್ಥಿಗಳು. ಕುಂಭ:ಎಡ ಹಿಮ್ಮಡಿ, ಎಡ ಕಿವಿ, ಎಡ ಭುಜ, ಮೀನಖಂಡ ಮೀನ: ಪಾದಗಳು, ಕಾಲು ಬೆರಳುಗಳು, ರಸನಾತ್ಮಕ ದ್ರವ್ಯಗಳು, ಎಡಕಣ್ಣು. 2. ಲಗ್ನದಿಂದ ದ...