Skip to main content

ಚೆಲುವ ಮಲ್ಲಿಗೆ ಹೂವೆ

ಚೆಲುವ ಮಲ್ಲಿಗೆ ಹೂವೆ
ಮುಂಜಾನೆ ಮನೆಯಂಗಳದಿ
ನಗುಚಲ್ಲಿ ಅರಳಿರುವೆ
ನನ್ನ ನಿನ್ನೆಡೆಗೆ ಸೆಳದಿರುವೆ
ಒಲವ ಪರಿಮಳ ಚಲ್ಲಿರುವೆ
ಒಲಿದು ಬರಲು ಮೌನದಿಂದೇಕಿರುವೆ
ನಿನ್ನ ಸವಿ ಮದುವಿಗಾಗಿ ನಾ ಕಾದಿರುವೆ
ನಲಿದು ನೀ ನೀಡು ಸವಿಯ ಸವಿವೆ
ಮನ ಒಲಿದು ನಿನ್ನ ಕೈಹಿಡಿವೆ
ಕೊನೆವರಗೆ ಬಿಡದೆ ಕಣ್ಣಲ್ಲಿ ಕಣ್ಣಾಗಿ
ನಿನ್ನ ನಾ ಕಾಪಾಡುವೆ ನಿನಗಾಗಿ
ನಾ ಹಂಬಲಿಸುತ್ತಿರುವೆ.

- ಕೃಷ್ಣಮೂರ್ತಿ ಅಜ್ಜಹಳ್ಳಿ

Comments