ಸಾಮಾನ್ಯಜ್ಞಾನ ಭಾಗ ೨ ಮಾನವನು ಜನಿಸುವಾಗ ಮೂರು ಋಣ(ಸಾಲ)ವನ್ನು ಹೊಂದಿರುತ್ತಾನೆ. ಇವುಗಳಲ್ಲಿ ದೇವ ಋಣ, ಋಷಿ ಋಣ, ಪಿತೃ ಋಣ ಎಂಬುದಾಗಿರುತ್ತದೆ. ದೇವ ಮತ್ತು ಋಷಿ ಋಣಗಳ ಬಗೆಗೆ ನಾನು ಈ ಹಿಂದೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಪಿತೃ ಋಣ ತೀರಿಸುವ ಬಗ್ಗೆ ವಿಚಾರಮಾಡಬೇಕಾಗಿದೆ. ಪಿತೃಗಳೆಂದರೆ ನಮ್ಮ ತಾಯಿ, ತಂದೆ, ಅಜ್ಜ, ಅಜ್ಜಿ ಹೀಗೆ ತಂದೆಯಿಂದ ೩ ಪೀಡಿಗಳು, ತಾಯಿಯಿಂದ ೩ ಪೀಡಿಗಳು, ತಾಯಿಯ ತಂದೆಯಿಂದ ೩ ಪೀಡಿಗಳು, ತಾಯಿಯ ತಾಯಿಯಿಂದ ೩ ಪೀಡಿಗಳು, ಒಟ್ಟು ೧೨ ಪ್ರಮುಖವಾಗಿರುತ್ತದೆ. ಆಮೇಲೆ ದೊಡ್ಡಪ್ಪ- ಚಿಕ್ಕಪ್ಪ- ದೊಡ್ಡಮ್ಮ- ಚಿಕ್ಕಮ್ಮ- ಅಣ್ಣ- ತಮ್ಮರು- ಅಕ್ಕ-ತಂಗಿ-ಮಾವ-ಅತ್ತೆ ಇತ್ಯಾದೆ ೨ ಮತ್ತು ೩ ನೇ ಹಂತದಲ್ಲಿ ತೆಗೆದುಕೊಳ್ಳುತ್ತೇವೆ. ನಾವು ನಮ್ಮ ತಂದೆ-ತಾಯಿಗಳನ್ನು ಬದುಕಿರುವವರೆಗೆ ಪ್ರೀತೆಯಿಂದ ನೋಡಿಕೊಳ್ಳಬೇಕು. ಅವರು ನಮ್ಮನ್ನು ಸಾಕಿ -ಸಲಹಿ ಮಡಿ ನಮ್ಮ ಏಳಿಗೆಗಾಗಿ ಪಟ್ಟ ಶ್ರಮವನ್ನು ಎಂದೂ ಮರೆಯಬಾರದು. ಮಕ್ಕಳಾದ ನಾವು ಅವರಿಗೆ ಕಷ್ಟ ಕೊಟ್ಟರೆ, ಅವರ ಶಾಪ ಮತ್ತು ಕಣ್ಣೀರು ಮಕ್ಕಳ ಜೀವನದಲ್ಲಿ ಪ್ರವಾಹದಷ್ಟು ಕಠಿಣವಾದೀತು. ಅಲ್ಲದೆ ಸರ್ವ ನಾಶ ಹೊಂದುವುದು ಖಚಿತ. ಪಿತೃಗಳ ಆಶೀರ್ವಾದ ನಮ್ಮ ಜೊತೆ ಇದ್ದರೆ ದೇವರ ಆಶೀರ್ವಾದ ಇದ್ದಂತೆ ನಮ್ಮ ಗೆಲುವು ನಿಶ್ಚಿತ. ಹಾಗಾಗಿ ಪಿತೃಗಳು ಬದುಕಿ ಇರುವ ವರೆಗೆ ಸಂತೋಷದಿಂದ ನೋಡಿಕೊಂಡು ಆಮೇಲೆ ಅವರಿಗೆ ಸದ್ಗತಿ ಅಥವಾ ಮೋಕ್ಷ ಮಾರ್ಗ ಹೊಂದಲು ಬೇಕಾದ ಕ್ರಿಯಾ-ಕರ್ಮ-ದಾನ-ಧರ್ಮ ಮೊದಲಾದವುಗಳನ...