Skip to main content

Posts

Showing posts from 2017

ಸಾಮಾನ್ಯಜ್ಞಾನ ಭಾಗ ೨

ಸಾಮಾನ್ಯಜ್ಞಾನ ಭಾಗ ೨ ಮಾನವನು ಜನಿಸುವಾಗ ಮೂರು ಋಣ(ಸಾಲ)ವನ್ನು ಹೊಂದಿರುತ್ತಾನೆ. ಇವುಗಳಲ್ಲಿ ದೇವ ಋಣ, ಋಷಿ ಋಣ, ಪಿತೃ ಋಣ ಎಂಬುದಾಗಿರುತ್ತದೆ. ದೇವ ಮತ್ತು ಋಷಿ ಋಣಗಳ ಬಗೆಗೆ ನಾನು ಈ ಹಿಂದೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಪಿತೃ ಋಣ ತೀರಿಸುವ ಬಗ್ಗೆ ವಿಚಾರಮಾಡಬೇಕಾಗಿದೆ. ಪಿತೃಗಳೆಂದರೆ ನಮ್ಮ ತಾಯಿ, ತಂದೆ, ಅಜ್ಜ, ಅಜ್ಜಿ ಹೀಗೆ ತಂದೆಯಿಂದ ೩ ಪೀಡಿಗಳು, ತಾಯಿಯಿಂದ ೩ ಪೀಡಿಗಳು, ತಾಯಿಯ ತಂದೆಯಿಂದ ೩ ಪೀಡಿಗಳು, ತಾಯಿಯ ತಾಯಿಯಿಂದ ೩ ಪೀಡಿಗಳು, ಒಟ್ಟು ೧೨ ಪ್ರಮುಖವಾಗಿರುತ್ತದೆ. ಆಮೇಲೆ ದೊಡ್ಡಪ್ಪ- ಚಿಕ್ಕಪ್ಪ- ದೊಡ್ಡಮ್ಮ- ಚಿಕ್ಕಮ್ಮ- ಅಣ್ಣ- ತಮ್ಮರು- ಅಕ್ಕ-ತಂಗಿ-ಮಾವ-ಅತ್ತೆ ಇತ್ಯಾದೆ ೨ ಮತ್ತು ೩ ನೇ ಹಂತದಲ್ಲಿ ತೆಗೆದುಕೊಳ್ಳುತ್ತೇವೆ. ನಾವು ನಮ್ಮ ತಂದೆ-ತಾಯಿಗಳನ್ನು ಬದುಕಿರುವವರೆಗೆ ಪ್ರೀತೆಯಿಂದ ನೋಡಿಕೊಳ್ಳಬೇಕು. ಅವರು ನಮ್ಮನ್ನು ಸಾಕಿ -ಸಲಹಿ ಮಡಿ ನಮ್ಮ ಏಳಿಗೆಗಾಗಿ ಪಟ್ಟ ಶ್ರಮವನ್ನು ಎಂದೂ ಮರೆಯಬಾರದು. ಮಕ್ಕಳಾದ ನಾವು ಅವರಿಗೆ ಕಷ್ಟ ಕೊಟ್ಟರೆ, ಅವರ ಶಾಪ ಮತ್ತು ಕಣ್ಣೀರು ಮಕ್ಕಳ ಜೀವನದಲ್ಲಿ ಪ್ರವಾಹದಷ್ಟು ಕಠಿಣವಾದೀತು. ಅಲ್ಲದೆ ಸರ್ವ ನಾಶ ಹೊಂದುವುದು ಖಚಿತ. ಪಿತೃಗಳ ಆಶೀರ್ವಾದ ನಮ್ಮ ಜೊತೆ ಇದ್ದರೆ ದೇವರ ಆಶೀರ್ವಾದ ಇದ್ದಂತೆ ನಮ್ಮ ಗೆಲುವು ನಿಶ್ಚಿತ. ಹಾಗಾಗಿ ಪಿತೃಗಳು ಬದುಕಿ ಇರುವ ವರೆಗೆ ಸಂತೋಷದಿಂದ ನೋಡಿಕೊಂಡು ಆಮೇಲೆ ಅವರಿಗೆ ಸದ್ಗತಿ ಅಥವಾ ಮೋಕ್ಷ ಮಾರ್ಗ ಹೊಂದಲು ಬೇಕಾದ ಕ್ರಿಯಾ-ಕರ್ಮ-ದಾನ-ಧರ್ಮ ಮೊದಲಾದವುಗಳನ...

ಸಾಮಾನ್ಯ ತಿಳುವಳಿಕೆ ಭಾಗ-೧

ಸಾಮಾನ್ಯ ತಿಳುವಳಿಕೆ ಭಾಗ-೧ ಪ್ರತಿ ನಿತ್ಯದ ಜೀವನದಲ್ಲಿ ಅನೇಕ ಪ್ರಕಾರದ ಸಂಶಯಗಳು ನಾವು ಮಾಡುತ್ತಿರುವ ಪೂಜೆ-ವೃತ-ಹೋಮಗಳಲ್ಲಿ ಕಂಡುಬರುತ್ತದೆ. ಇದನ್ನೆಲ್ಲಾ ತಿಳಿಯಲೇ ಬೇಕಾಗುತ್ತದೆ. ಆದ್ದರಿಂದ ನಾವಿಲ್ಲಿ ಭಾಗ-೧ ರಿಂದ ಹುಟ್ಟಿನಿಂದ ಸಾಯುವವರೆಗಿನ ಕೆಲವು ಬೇಕಾಗುವ ಮಾರ್ಗದರ್ಶನವನ್ನು ಮತ್ತು ಭಾಗ-೨ ರಲ್ಲಿ ಮರಣ ಹೊಂದಿದ ನಂತರ ಬೇಕಾಗುವ ಕೆಲವು ಮಾರ್ಗದರ್ಶನವನ್ನು ತಿಳಿಸಿರುತ್ತೇವೆ. ಇದರಿಂದ ಜನರಿಗೆ ಸ್ವಲ್ಪ ಮಟ್ಟಿಗಾದರೂ ಅನುಕೂಲವಾಗಲಿದೆ ಎಂದು ಭಾವಿಸುತ್ತೇವೆ. ಭಾಗ-೧ ಮಗು ಜನಿಸಿದಾಗನಿಂದ ಆರಂಭಿಸಿ ಸಹಸ್ರಚಂದ್ರ ದರ್ಶನದ ವರೆಗಿನ ಮಾಡಬೇಕಾದ ವಾರ,ತಿಥಿ, ನಕ್ಷತ್ರ, ಕಾಲ ಈ ಬಗೆಗಿನ ವಿವರಗಳನ್ನು ಹಿಂದಿನ ಭಾಗಗಳಲ್ಲಿ ತಿಳಿಸಿರುತ್ತೇವೆ.ಅವುಗಳ ಹೊರತಾದ ಕೆಲವು ವಿವರಗಳನ್ನು ಇಲ್ಲಿ ತಿಳಿಸಲು ಇಚ್ಛಿಸುತ್ತೇವೆ. ಇವುಗಳನ್ನು ಕೆಲವು ಪಂಚಾಂಗದಲ್ಲಿಯೂ ತಿಳಿಸಿರುತ್ತಾರೆ. ಆದರೆ ನಮ್ಮವರು ಪ್ರಾಂತಕ್ಕೆ ಒಂದೊಂದು ಪಂಚಾಂಗ ಬಳಸುತ್ತಾರೆ. ಎಲ್ಲದರಲ್ಲಿಯೂ ಎಲ್ಲಾ ವಿಷಯಗಳು ಇರಲಿಕ್ಕಿಲ್ಲ,ಇರಲಿ. ಸಾಮಾನ್ಯ ಜ್ಞಾನಕ್ಕಾಗಿಯಾದರೂ ತಿಳಿಯಲೇ ಬೇಕಾದ ವಿಷಯವಿದು. ೧. ಪೂಜೆ ಎಂದರೇನು? In our culture, we do the idol of God from gold, silver, wood, stone, copper or diamond, … many more. The idol which we have created will not have the actual power which we expect. For this we have to do ಪಯಜ್ಞ_ಯಾಗp...

ಯಜ್ಞ-ಯಾಗಾದಿಗಳು

ಯಜ್ಞ-ಯಾಗಾದಿಗಳು ಮಾನವರಾದ ನಾವುಗಳು ಎಷ್ಟು ಜನ್ಮವೆತ್ತಿ ಏನೇನು ಮಾಡಿ ಈ ಜನ್ಮದಲ್ಲಿ ಹೀಗಿದ್ದೇವೆ ಎಂಬುದು ನಮಗೆ ತಿಳಿಯದ ವಿಷಯ. ಆದರೆ ನಮ್ಮಲ್ಲಿರುವ ಆತ್ಮಚೈತನ್ಯಕ್ಕೆ ಎಲ್ಲವೂ ತಿಳಿದಿದೆ. ಆ ಚೇತನವು ಸುಮ್ಮನಿದ್ದು, ನಮ್ಮ ಕರ್ಮಫಲವು ನಮ್ಮಿಂದ ಒಳ್ಳೆಯದನ್ನು, ಕೆಟ್ಟದನ್ನು ಮಾಡಿಸುತ್ತದೆ.ಆದರೆ ಯಾವಾಗ ಕೆಟ್ಟಕರ್ಮದ ಫಲವು ಕಡಿಮೆ ಆಗುವುದೋ,ಆಗ ನಮ್ಮ ಸರ್ವಾಂಗೀಣ ಅಭಿವೃದ್ಧಿ ನಿಶ್ಚಿತ. ಅದಕ್ಕಾಗಿ ನಮಗೆ ಋಷಿ-ಮುನಿಗಳು ಅನೇಕ ಮಾರ್ಗದರ್ಶನಗಳನ್ನು ಮಾಡಿರುವರು.ಅವುಗಳಲ್ಲಿ ಮಹತ್ತರವಾದವುಗಳೆಂದರೆ ಯಜ್ಞ-ಯಾಗಾದಿಗಳು. ಇವುಗಳಲ್ಲಿ ಸೂರ್ಯ,ಗಣಪತಿ,ಅಂಬಿಕಾ,ಶಿವ,ವಿಷ್ಣುಗಳಾದ ಪಂಚಾಯತನ ದೇವತೆಗಳನ್ನು ಉದ್ದೇಶಿಸಿ ಮಾಡುವ ಜಪ,ಹೋಮ,ತರ್ಪಣ,ಮಾರ್ಜನ,ಬ್ರಾಹ್ಮಣ-ಭೋಜನಗಳಿಂದ ಮಾಡುವ ವಿಶೇಷ ಅನುಷ್ಠಾನಕ್ಕೆ ಯಜ್ಞ-ಯಾಗಾದಿಗಳು ಎನ್ನಬಹುದು. ೧. ಸೂರ್ಯ ಸಂತತಿ ಪ್ರಾಪ್ತಿಗಾಗಿ, ಮೋಕ್ಷ ಪ್ರಾಪ್ತಿಗಾಗಿ,ಲೋಕ ಕಲ್ಯಾಣಕ್ಕಾಗಿ,ರೋಗ ನಿವೃತ್ತಿಗಾಗಿ ಗಾಯತ್ರಿ ಪುರಶ್ಚರಣ ಯಾಗವನ್ನು ಮಾಡಬೇಕು. ಹೀಗೆ ಎಲ್ಲಾ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಈ ಯಾಗವನ್ನು ಮಾಡಬೇಕು. ೨. ಗಣಪತಿ ಸ್ವೀಕರಿಸಿದ ಕಾರ್ಯದಲ್ಲಿ ಬರುವಂತಹ ವಿಘ್ನ ನಿವಾರಣೆಗಾಗಿ, ಮಕ್ಕಳಿಗೆ ವಿದ್ಯಾಭ್ಯಾಸ ಸಲುವಾಗಿ,ಲಕ್ಷ್ಮೀ ಪ್ರಾಪ್ತಿಗಾಗಿ,ಉದ್ಯೋಗದಲ್ಲಿ ಯಶ; ಪ್ರಾಪ್ತಿಗಾಗಿ ಮತ್ತು ಈ ರೀತಿಯ ಎಲ್ಲ ಮನೋಕಾಮನೆಗಳನ್ನು ಪಡೆಯಲು ಚತುರ್ದ್ರವ್ಯ (ಮೋದಕ,ದೂರ್ವಾ,ಲಾಜಾ,ತುಪ್ಪ)ದಿಂದ ಗಣೇಶ ಯಾಗವನ್ನು ಮ...

ವೃತಾದಿಗಳು ಕೆಲವು ವೃತಗಳ ಬಗ್ಗೆ ತಿಳಿಸಿರುತ್ತೇವೆ.

ವೃತಾದಿಗಳು ಸೃಷ್ಠಿಯಲ್ಲಿ ಭಗವತ್ ಶಕ್ತಿಯನ್ನು ಒಲಿಸಿಕೊಳ್ಳಲು ನಾನಾ ವಿಧವಾದ ಮಾರ್ಗಗಳಿವೆ. ಪಯಜ್ಞ_ಯಾಗಾದಿಗಳನ್ನು ಮಾಡಿದರೆ ಮಾತ್ರ ದೇವರನ್ನು ಒಲಿಸಿಕೊಳ್ಳಬಹುದು ಎಂದಿಲ್ಲ. ಸರ್ವೇ ಸಾಮಾನ್ಯರಿಗೆಂದು,ಪಯಜ್ಞ_ಯಾಗಾದಿಗಳನ್ನು ಮಾಡಲು ಅಶಕ್ತರುಗಳಿಗೆ ವೃತವೂ ಒಂದು ಮಾರ್ಗವಾಗಿದೆ. ಇದನ್ನು ಭಕ್ತಿ_ಶ್ರದ್ಧೆಯಿಂದ, ಶಾಸ್ತ್ರೋಕ್ತವಾಗಿ ಮಾಡಿದಲ್ಲಿ ಮನೋಕಾಮನೆಯನ್ನು ಖಂಡಿತವಾಗಿಯೂ ಪಡೆಯಬಹುದು. ಹಲವಾರು ವೃತಾದಿಗಳಿದ್ದು ನಾವು ಇಲ್ಲಿ ಕೆಲವು ವೃತಗಳ ಬಗ್ಗೆ ತಿಳಿಸಿರುತ್ತೇವೆ. ೧. ಸತ್ಯ ಗಣಪತಿ ವೃತ ವೈಶಾಖ ಪೂರ್ಣಿಮೆಯಂದು ಜನನವಾದ ಪುಷ್ಠಿ ಗಣಪತಿ ಸತ್ಯ ವಿನಾಯಕನನ್ನು ಯಾರು ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜಿಸುತ್ತಾರೋ ಅವರ ಎಲ್ಲ ಮನೋಕಾಮನೆಗಳು ಸಿದ್ಧಿಸುವುದು. ಯಾವುದೋ ಮುಖ್ಯ ಮನೋಕಾಮನೆಗಾಗಿ ಭಕ್ತಿಯಿಂದ ೧೨(ಸುಮುಖಾದಿ)ನಾಮಗಳಿಗೆ ಒಂದಂತೆ ಮಾಡಿದರೆ ಇಚ್ಚೆಯು ಖಂಡಿತವಾಗಿಯೂ ನೆರವೇರುವುದು. ೨. ವರಸಿದ್ಧಿವಿನಾಯಕ ವೃತ ಭಾದ್ರಪದ ಶುಕ್ಲ ಚತುರ್ಥಿಯಂದು ಮಣ್ಣಿನಿಂದ ಗಣಪತಿ ವಿಗ್ರಹವನ್ನು ಮಾಡಿ, ಭಕ್ತಿ- ಶ್ರದ್ಧೆಯಿಂದ ಪೂಜಿಸುವ ವೃತ. ಇದನ್ನು ೧,೩,೫,೭,೯,ದಿನಗಳವರೆಗೆ ಆಚರಿಸುವ ಪದ್ಧತಿ ಇದೆ. ೩. ಋಷಿ ಪಂಚಮಿ ವೃತ ಕಾಯಕ, ವಾಚಿಕ, ಮಾನಸಿಕ, ಸಾಂಸರ್ಗಿಕ ಜ್ಞಾತ- ಅಜ್ಞಾತ ಸಮಸ್ತ ಪಾಪಕ್ಷಯಕ್ಕಾಗಿ ದಂಪತಿಗಳು ಈ ವೃತವನ್ನು ಆಚರಿಸಬೇಕು. ೪. ಅನಂತ ಪದ್ಮನಾಭ ವೃತ ಧರ್ಮ-ಅರ್ಥ-ಕಾಮ-ಮೋಕ್ಷಕ್ಕಾಗಿ ಪುತ್ರ-ಪೌತ್ರ ಅಭಿವೃದ್ಧಿಗಾಗಿ ಈ ವೃತವನ್ನು ಆಚ...

ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ.ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡಬೇಕು?

ಶಾಂತಿಗಳು ಪ್ರತ್ಯೇಕ ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ.ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡಬೇಕು? ಮಗುವಿನ ಜನನ ಕಾಲದಲ್ಲಿ ನಾನಾವಿಧ ದೋಷಾದಿಗಳು ಬರುತ್ತವೆ. ಇದನ್ನು ಗುರುಗಳ ಮುಖೇನ ತಿಳಿದು ಬಂದಿರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಕೊಳ್ಳಬೇಕು. ೧. ಕೃಷ್ಣಚತುರ್ದಶಿ ಜನನ ಶಾಂತಿ ಮಗು ಕೃಷ್ಣ ಪಕ್ಷದ ಚತುರ್ದಶಿಯ ದಿನ ಜನನವಾದಲ್ಲಿ ಅನೇಕವಾದ ಅನಿಷ್ಠ ಫಲಗಳು ಬರುತ್ತದೆ.ಚತುರ್ದಶಿ ತಿಥಿಯ ಕಾಲವನ್ನು ಆರು ಭಾಗ ಮಾಡಿ ಒಂದನೇಯ ಭಾಗವನ್ನು ಶುಭ ಎಂತಲೂ,ಏ ಎರಡನೇಯ ಭಾಗವನ್ನು ತಂದೆಗೆ ಅನಿಷ್ಠ ಎಂತಲೂ,ಮೂರನೇಯ ಭಾಗವನ್ನು ತಾಯಿಗೆ ಅನಿಷ್ಠ ಎಂತಲೂ, ನಾಲ್ಕನೇಯ ಭಾಗವನ್ನು ಮಾವನಿಗೆ ಅನಿಷ್ಠ ಶಎಂದೂ,ಐದನೇಯ ಭಾಗವನ್ನು ವಂಶನಾಶ ಎಂತಲೂ,ಆರನೇಯ ಭಾಗವನ್ನು ಧನಹಾನಿ ಎಂದೂ ಶಾಸ್ತ್ರದಲ್ಲಿ ಹೇಳಿದೆ. ೨. ಸಿನೀವಾಲೀ-ಕುಹೂ ಜನನ ಶಾಂತಿ ಮಗುವು ಅಮವಾಸ್ಯೆಯ ದಿನದಂದು ಜನಿಸಿದಲ್ಲಿ, ಅಮವಾಸ್ಯೆಯ ಪರಮಘಟಿಯನ್ನು ೮ ಭಾಗವನ್ನು ಮಾಡಿ ಪ್ರಥಮ ಭಾಗ ಜನನಕ್ಕೆ ಸಿನೀವಾಲೀ, ಅಷ್ಟಮ ಭಾಗಕ್ಕೆ ಕುಹೂ ಜನನ ಎಂದೂ ಕರೆಯುತ್ತಾರೆ. ಈ ಜನನದಲ್ಲಿ ಬರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು. ೩. ದರ್ಶ ಜನನ ಶಾಂತಿ: ಅಮವಾಸ್ಯೆ ತಿಥಿಯ ಪರಮಘಟಿಯನ್ನು ಭಾಗವನ್ನಾಗಿ ಮಾಡಿದಾಗ ೨ನೇಯ ಭಾಗದಿಂದ ೬ನೇ ಭಾಗದವರೆಗೆ ಹುಟ್ಟಿದ ಮಗುವಿಗೆ ಬರುವ ದೋಷ ನಿವಾರಣೆಗೆ ದರ್ಶ ಜನನ ಶಾಂತಿ ಅಥವಾ ಅಮವಾಸ್ಯೆ ಜನನ ಶಾಂತಿ ಮಾಡಿಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಜಪ-ಮಂತ್ರ-ಅನುಷ್ಠಾನ, ಹೋಮಗಳು

ಜಪ-ಮಂತ್ರ-ಅನುಷ್ಠಾನ ವಿಭಾಗಃ| ಈ ಜಗತ್ತು ದೇವತೆಗಳ ಅಧೀನ. ದೇವತೆಗಳು ಮಂತ್ರದ ಅಧೀನ. ಆದ್ದರಿಂದ ನಾವು ಶ್ರದ್ಧಾ-ಭಕ್ತಿ ಮತ್ತು ಛಲದಿಂದ ಜಪ ಮತ್ತು ಮಂತ್ರಗಳ ಅನುಷ್ಠಾನ ಮಾಡಬೇಕು. ಜಪ ಹಾಗೂ ಮಂತ್ರಗಳನ್ನು ಗುರು ಮುಖದಿಂದ ಉಪದೇಶ ಪಡೆದು ಅನುಷ್ಠಾನ ಮಾಡಬೇಕು. ಜಪ-ತಂತ್ರ-ಮಂತ್ರಗಳನ್ನು ಒಳ್ಳೆಯ ಕಾರ್ಯಕ್ಕಾಗಿ ಮಾತ್ರ ಬಳಸಬೇಕು. ಬೇರೆಯವರಿಗೆ ಕೆಡುಕಾಗುವಂತೆ ಮಾಡಬಾರದು. ಇದು ಕೊನೆಯಲ್ಲಿ ನಮಗೇ ಮಾರಕವಾಗುತ್ತದೆ. ಭಗವತ್ ಶಕ್ತಿಯನ್ನು ಒಲಿಸಿಕೊಳ್ಳುವುದಕ್ಕಿಂತ ಅಸುರೀ ಶಕ್ತಿಯನ್ನು ಒಲಿಸಿಕೊಳ್ಳುವುದು ಅತಿ ಕಠಿಣ. ಆದರೆ ಕೆಲವರು ಅಸುರೀ ಶಕ್ತಿಯನ್ನೇ ಆರಾಧಿಸುತ್ತಾರೆ. ಇದು ಒಳ್ಳೆಯದಲ್ಲ. ಜಪಗಳು: ಒಂದೊಂದು ಬೀಜಾಕ್ಷರಗಳಿಗೂ ಅತಿಯಾದ ಶಕ್ತಿಗಳಿರುತ್ತದೆ. ಋಷಿ- ಛಂದಸ್ಸು-ಸ್ಯಾಸ-ಧ್ಯಾನ ಮಂತ್ರ ಹೀಗೇ ಕ್ರಮವಾಗಿ ಎಲ್ಲವನ್ನೂ ಮಾಡಿ ನಂತರ ಜಪವನ್ನು ಮಾಡಬೇಕು. ನ್ಯಾಸದ ಮೂಲಕ ಮೊದಲು ನಮ್ಮಲ್ಲಿ ಜಪಿಸುವ ದೇವರನ್ನು ಸ್ಥಾಪಿಸಿಕೊಂಡು ನಂತರ ಜಪವನ್ನು ಮಾಡಬೇಕು. ಕೆಲವು ಜಪಗಳಲ್ಲಿ ಮಾರಣ-ಮೋಹನ-ಸ್ಥಂಬನ-ವಿಚ್ಛಾಟನಾದಿ ಶಕ್ತಿಗಳಿರುತ್ತದೆ. ಆದ್ದರಿಂದ ಯಾವುದೇ ಜಪವನ್ನು ಗುರುಮುಖದಿಂದ ಉಪದೇಶ ಪಡೆದು ಒಳ್ಳೆಯದಕ್ಕಾಗಿ ಉಪಯೋಗಿಸಬೇಕು. ಆಗ ಒಳ್ಳೆಯದಾಗುತ್ತದೆ. ಓದಲು ಬರುತ್ತದೆ ಎಂದು ಪುಸ್ತಕವನ್ನೊ ಅಥವಾ ಇನ್ನಾವುದನ್ನೋ ನೋಡಿ ಜಪಾದಿಗಳನ್ನು ಮಾಡಬೇಡಿರಿ. ಇದಕ್ಕೆ ಫಲ ಸಿಗಲಾರದು. ಜಪ ಅನುಷ್ಠಾನಗಳಲ್ಲಿ ದೇಶ-ಕಾಲ ಅನುಸಾರದಂತೆ ತುಂಬಾ ವಿಧಗಳಿವೆ. ಆದರೆ ನ...

ಶ್ಲೋಕಗಳು ಸ್ತೋತ್ರಗಳು

ಶ್ಲೋಕಗಳು ಶ್ರೀ ಗಣಪತಿ ಸ್ತೋತ್ರ: ೧. ವಕ್ರತುಂಡ ಮಹಾಕಾಯಾ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೆಶು ಸರ್ವದಾ || ೨.ಗಜಾನನಂ ಭೂತ ಗಣಾಧಿ ಸೇವಿತಂ ಕಪಿತ್ಥ ಜಂಬು ಫ಼ಲಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ || ೩.ನಮೋ ನಮೋ ಗಣೇಶಾಯಾ ವಿಘ್ನೇಶಾಯ ನಮೋ ನಮಃ ವಿನಾಯಕಾಯ ವೈ ತುಭ್ಯಂ ವಿಕ್ರತಾಯ ನಮೋ ನಮಃ || ಶ್ರೀ ಶಾರದಾ ಸ್ತೋತ್ರ: ೧. ಯಾಕುಂದೆಂದು ತುಷಾರಹಾರಧವಲಾ ಯಾ ಶುಭ್ರ ವಸ್ತ್ರಾವೃತಾ ಯಾ ವೀಣಾವರ ದಂಡಮಂಡಿತಕರಾ ಯಾ ಶ್ವೇತ ಪದ್ಮಾಸನಾ ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಃ ಸದಾಪೂಜಿತಾ ಸಾ ಮಾಂ ಪಾತು ಸರಸ್ವತಿ ಭಗವತಿ ನಿಶ್ಯೇಷಜಾಡ್ಯಾಪಹಾ || ೨. ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ ತ್ವಾಮಹಂ ಪ್ರಾರ್ಥಯೇ ದೇವಿ ವಿದ್ಯಾದಾನಂಚ ದೇಹಿಮೇ || ೩. ಶುಕ್ಲಾಂ ಬ್ರಹ್ಮ ವಿಚಾರ ಸಾರ ಪರಮಾ ಆದ್ಯಾಂ ಜಗತ್ ವ್ಯಾಪಿನಿಂ ವೀಣಾ ಪುಸ್ತಕಧಾರಿಣೀಂ ಅಭಯದಾಂ ಜಾಡ್ಯಾಂಧಕಾರಾಪಹಾಂ ಹಸ್ತ್ಯೆ ಸ್ಪಾಟಿಕ ಮಾಲಿಕಾಂ ವಿಧದತಿಂ ಪದ್ಮಾಸನೆ ಸುಸ್ಥಿತಾಂ ವಂದೆ ತಾಂ ಜಗದೀಶ್ವರೀಂ ಭಗವತೀಂ ಬುದ್ಧಿ ಪ್ರದಾಂ ಶಾರದಾಂ || ೪. ಅನ್ವಹಂ ಕೃಪಯಾ ದೇವಿ ಪರಮೇಶಿ ಪ್ರಸಿದಮೇ ಅಭಿಷ್ಟ ದಾನಾತ್ ದೇವೇಶಿ ಚತುರಾನನ ವಲ್ಲಭೇ || ಶ್ರೀ ಶಿವ ಸ್ತೋತ್ರ: ೧. ಪ್ರಭೋ ಶೂಲಪಾಣೀ ವಿಭೋ ವಿಶ್ವನಾಥ ಮಹಾದೇವಶಂಭೋ ಮಹೇಶಃ ತ್ರಿನೇತ್ರಃ ಶಿವಾಕಾಂತಃ ಶಾಂತಸ್ಸ್ಮರಾರೆ ಪುರಾರೆ ತ್ವದನ...