Skip to main content

Posts

Showing posts from May, 2014

ಜೀರ್ಣ ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಏಕೆ ಮಾಡಬಾರದು?

ಶಾಸ್ತ್ರ - ಜೀರ್ಣ ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರಿಂದ ರಜ-ತಮಾತ್ಮಕ ಲಹರಿಗಳು ಮತ್ತು ವಾಯುಗಳು ಹರಡಿ ಪವಿತ್ರ ವಾಯುಮಂಡಲವು ಅಪವಿತ್ರವಾಗುತ್ತದೆ: ‘ಜೀರ್ಣ’ ಎಂದರೆ ಅತ್ಯಂತ ಹಳೆಯ. ಕಾಲಕಳೆದಂತೆ ಇಂತಹ ದೇವಾಲಯಗಳ ಸ್ಥಳಗಳಲ್ಲಿ ಅಲ್ಲಿನ ದೇವತೆಗಳ ಶಕ್ತಿರೂಪೀ ವಾಯುಮಂಡಲವು ಭೂಮಂಡಲದೊಂದಿಗೆ ಘನೀಕೃತವಾಗಿರುತ್ತದೆ. ಜೀರ್ಣ ದೇವಸ್ಥಾನಗಳ ಭಗ್ನ ಅವಶೇಷಗಳಿಂದ ವಾಯುಮಂಡಲದಲ್ಲಿ ಹೊರಬೀಳುವ ದೇವತೆಯ ಚೇತನವು ಕಡಿಮೆಯಾಗಿದ್ದರೂ ಆ ದೇವತೆಯ ಪೃಥ್ವಿ ಮತ್ತು ಆಪತತ್ತ್ವಗಳೊಂದಿಗೆ ಸಂಬಂಧಿಸಿದ ಶಕ್ತಿಸ್ವರೂಪ ವಾಯುಮಂಡಲವು ಭೂಮಂಡಲದೊಂದಿಗೆ ಘನೀಕೃತವಾಗಿ ಸುಪ್ತ ರೂಪದಲ್ಲಿ ಇರುವುದರಿಂದ ಅದು ಒಂದು ಪವಿತ್ರ ವಾಯುಮಂಡಲವೇ ಆಗಿರುತ್ತದೆ. ಇಂತಹ ಪವಿತ್ರ ಸ್ಥಳದಲ್ಲಿ ರಜ-ತಮಾತ್ಮಕ ಲಹರಿಗಳ ಮತ್ತು ವಾಯುಗಳ ಹರಡುವಿಕೆಗೆ ಕಾರಣವಾಗುವ ಮಲಮೂತ್ರ ವಿಸರ್ಜನೆಯಂತಹ ಕೃತಿಗಳನ್ನು ಮಾಡುವುದರಿಂದ ಆ ಸ್ಥಳದಲ್ಲಿರುವ ಪವಿತ್ರ ವಾಯುಮಂಡಲವು ಅಪವಿತ್ರವಾಗುತ್ತದೆ ಮತ್ತು ಇದು ಒಂದು ಪಾಪಭರಿತ ಕರ್ಮವಾಗುತ್ತದೆ. ಟಿಪ್ಪಣಿ : ಜೀರ್ಣ ದೇವಸ್ಥಾನಗಳ ಬಳಿ ಅಷ್ಟೇ ಅಲ್ಲದೇ, ದೇವಸ್ಥಾನದ ಸುತ್ತಮುತ್ತಲಿನ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಪಾಪಕರ್ಮವೇ ಆಗಿದೆ. (ಹೆಚ್ಚಿನ ಮಾಹಿತಿಗಾಗಿ ಓದಿರಿ ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ)

ದಾಂಪತ್ಯದಲ್ಲಿ ಅಡೆತಡೆಗಳ ನಿವಾರಣೆಗಾಗಿ ಜ್ಯೋತಿಷ್ಯದಲ್ಲಿನ ಪರಿಹಾರೋಪಾಯಗಳು

ಸ್ವರ್ಗದಲ್ಲಿ ಮದುವೆ ನಿಶ್ಚಯವಾಗಿರುತ್ತವೆ ಎಂದು ಹೇಳುತ್ತಾರೆ ನಂಬಬಹುದು.ಆದರೆ ಕಲಹವನ್ನು ಅಲ್ಲಿಂದಲೇ ತಂದಿರುತ್ತಾರೋ ಏನೋ ಎಂದು ಒಂದೋಂದುಸಲ ಅನ್ನಿಸುತ್ತದೆ.ಸುಕಕರವಾದ ದಾಂಪತ್ಯ ಜೀವನ ಯಾರದಾಗಿರುತ್ತದೋ ಅವರೇ ಪುಣ್ಯವಂತರು.ಅಲವಾರು ಸಂಸಾರಗಳಲ್ಲಿ ಪತಿ ಹೊಂದಾಣಿಕೆಯಿದ್ದರೆ ಸತಿ ಇರುವುದಿಲ್ಲ.ಸತಿ ಇದ್ದಲ್ಲಿ ಪತಿ ಇರುವುದಿಲ್ಲ. ಸತಿ-ಪತಿಯಲ್ಲಿ ಯಾವುದಾದರು ವಿಚಾರಕ್ಕೆ ಜಗಳವಿಲ್ಲದೆ ದಿನವೊಂದು ಕಳೆದರೆ ಅದರಂಥ ಶುಭ ದಿನವೇ ಇನ್ನೊಂದಿಲ್ಲ ಎನ್ನಬೇಕಾಗುತ್ತದೆ. ಸತಿ-ಪತಿಯರಲ್ಲಿ ಚಿಕ್ಕಪುಟ್ಟ ಮಾತುಗಳಿಗು ಜಗಳವಾಗಬುದು.ಗಂಡ ಹೆಂಡಿರ ಜಗಳ ಉಂಡುಮಲಗುವತನಕ ಇದ್ದರೆ ಚೆಂದ ಜಗಳ ವಿಕೋಪಕ್ಕೆ ಹೋದರೆ ಸಂಸಾರಜೀವನ ಅಧೋಗತಿ. ಸಾಮಾನ್ಯವಾಗಿ ಸತಿ-ಪತಿಗಳಲ್ಲಿ ಉಂಟಾಗುವ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದೆ ಓದುಗರು ತಮಗೆ ಆಗಬಹುದಾದ ತೊಂದರೆಯಾನುಸಾರ ಯತಾಶಕ್ತಿ ಸೂಚಿಸಿದಂತೆ ಪರಿಹಾರಮಾಡಿಕೊಂಡರೆ ತಾವು ನೆಮ್ಮದಿಯ ಜೀವನಮಾಡಬಹುದು. ೧.ಗಂಡ ಶ್ರೀರಾಮನಂತಿದ್ದರೂ ಹೆಂಡತಿ ಆತನನ್ನು ಅನುಮಾನದಿಂದನೋಡುವುದು.ಮನೆಗೆ ಬಂದರೆ ಆತನಿಗೆ ಮನೆ ನರಕವೆಂದೆನಿಸುದು,ಹಾಸಿಗೆ ಮುಳ್ಳಿನಂತಾಗುವುದು.ಜೀವನವೇ ಬೇಸರವೆನಿಸುವುದು. ಪರಿಹಾರ:-ಪತಿಯು ೯ ಶುಕ್ರವಾರ ಹಸುವಿಗೆ ಹಸಿಹುಲ್ಲನ್ನು ತಿನ್ನಿಸುವುದು. ೨.ಪತಿ ಸಮಾದಾನಿಯಿದ್ದರೂ ಪತ್ನಿಗೆ ತಾಳ್ಮೆ ಇರುವುದಿಲ್ಲ ಪ್ರತಿಮಾತಿಗು ಜಗಳ ಪತಿಯು ತನ್ನ ಪತ್ನಿಗೆ ಹೆದರುವಂತ ಪರಿಸ್ಥಿತಿ ಇದ್ದರ...

ಮಧುಮೇಹ ಮರೆತರೆ ಜೀವಕ್ಕೆ ಮಾರಕ

ರಕ್ತದಲ್ಲಿ ಸಕ್ಕರೆ ಅಂಶವು ಜಾಸ್ತಿಯಾಗಿ ಮಧುಮೇಹದ ರೂಪದಲ್ಲಿ ಕಾಡುವ ಸಮಸ್ಯೆ ಇನ್ಸುಲಿನ್ ಉತ್ಪತ್ತಿಯ ದೋಷದಿಂದ ಅಥವಾ ಇನ್ಸುಲಿನ್ ಹಾರ್ಮೋನ್ ಶರೀರದಲ್ಲಿ ಸರಿಯಾಗಿ ಕಾರ‌್ಯ ನಿರ್ವಹಿಸದೆ ಇರುವುದರಿಂದ ಉಂಟಾಗುತ್ತದೆ. ಸಕ್ಕರೆ ಅಂಶವು ರಕ್ತದಲ್ಲಿ ಹೆಚ್ಚಾಗಿ ಕಿಡ್ನಿಯ ಮೂಖಾಂತರ ಮೂತ್ರದಲ್ಲಿ ಸಹ ಕಾಣಿಸುತ್ತದೆ. ಇದನ್ನು ಸಿಹಿಮೂತ್ರ ಅಂತಲೂ ಹೇಳುತ್ತಾರೆ. ಸಹಜವಾಗಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಇನ್ಸುಲಿನ್ ಸಮತೋಲನದಲ್ಲಿಡುತ್ತದೆ. ಇನ್ಸುಲಿನ್ ಅಂದರೆ ದೇಹದಲ್ಲಿರುವ ಪ್ಯಾಂಕ್ರಿಯಾಸ್ ಎನ್ನುವ ಅಂಗದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್. ಆಹಾರ ಸೇವನೆ ನಂತರ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಪ್ಯಾಂಕ್ರಿಯಾಸ್‌ನಿಂದ ಇನ್ಸುಲಿನ್ ಉತ್ಪತ್ತಿಯಾಗಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ. ಇನ್ಸುಲಿನ್ ಕೊರತೆ ಅಥವಾ ಇನ್ಸುಲಿನ್ ಉತ್ಪತ್ತಿಯಲ್ಲಿ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚುತ್ತದೆ. ಮಧುಮೇಹದಲ್ಲಿ ಮೂರು ಮುಖ್ಯವಾದ ವಿಧಗಳಿವೆ. ಅವುಗಳೆಂದರೆ ಟೈಪ್1, ಟೈಪ್2, ಗೆಸ್ಟೇಷನಲ್ ಮಧುಮೇಹ. ಟೈಪ್1 ಮಧುಮೇಹ- ಶರೀರದ ರೋಗ ನಿರೋಧಕ ಶಕ್ತಿಯು ಶರೀರದ ವಿರುದ್ಧವಾಗಿ ವರ್ತಿಸುವಾಗ ಉಂಟಾಗುವುದು ಆಟೋ ಇಮ್ಯೂನ್ ಕಾಯಿಲೆ. ಟೈಪ್1ಸಹ ಇಂಥದ್ದೇ. ಇದರಲ್ಲಿ ಶರೀರದ ರೋಗ ನಿರೋಧಕ ಶಕ್ತಿಯು ಇನ್ಸುಲಿನ್ ಉತ್ಪತ್ತಿಸುವ ಪ್ಯಾಂಕ್ರಿಯಾಸಿಸ್ ಬೀಟಾ ಕಣಗಳನ್ನು ನಾಶ ಪಡಿಸುತ್ತದೆ. ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಅಥವಾ ಮಧ್ಯವಯಸ್ಕರ...

ಕಿಡ್ನಿಸ್ಟೋನ್ ಸಮಸ್ಯೆಗೆ ಸರಾಗ ಚಿಕಿತ್ಸೆ

ಯೌವನಾವಸ್ಥೆಯಲ್ಲಿ ಕಾಡುವ ಸಮಸ್ಯೆಯಲ್ಲಿ ಮೂತ್ರಕೋಶದ ಕಲ್ಲು ಮುಖ್ಯವಾದದ್ದು. ಇದು ಮೂತ್ರ ಸಂಬಂಧಿತ ವ್ಯಾಧಿಯಲ್ಲೊಂದು. ಮೂತ್ರದಲ್ಲಿ ಕಲ್ಲು ಬೀಳುವ ಸಮಸ್ಯೆ ಅನ್ನುವ ಇದು ಹಲವರನ್ನು ಕಾಡುತ್ತದೆ. ಇದಕ್ಕೆ ಹಲವಾರು ಚಿಕಿತ್ಸೆಗಳಿದ್ದರೂ ಸಮಸ್ಯೆಯನ್ನು ಸಂಪೂರ್ಣ ನಿಯಂತ್ರಿಸುವುದು ಮಾತ್ರ ಆಯುರ್ವೇದವೇ. ಸಾಮಾನ್ಯವಾಗಿ 20ರಿಂದ 40ರ ವಯೋಮಾನದವರಲ್ಲಿ ಈ ವ್ಯಾಧಿ ಹೆಚ್ಚಾಗಿ ಕಾಣುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಅಶ್ಮರಿ ಅನ್ನುತ್ತೇವೆ. ಅಂದರೆ ಕಲ್ಲು ಎಂದರ್ಥ. ಇದನ್ನು ರಿನಲ್ ಕಾಲಿಕ್ಯುಲೈ ಅಂತಲೂ ಕರೆಯುತ್ತಾರೆ. ನಮ್ಮ ಶರೀರದ ಕೆಲವು ಭಾಗಗಳಲ್ಲಿ ಹರಳುಗಳು ಏರ್ಪಡುವವು. ಆದರೆ ಇವು ಮೂತ್ರದಲ್ಲಿ ಹೊರಗೆ ಹೋಗುತ್ತವೆ. ಆದರೆ ಇದು ಕಿಡ್ನಿಯ ಮೇಲೆ ಪ್ರಭಾವ ಬೀರುವುದರಿಂದ ಹೆಚ್ಚಿನ ಜಾಗೃತಿ ಅಗತ್ಯ. ಇದಕ್ಕೆ ಕಾರಣಗಳೆಂದರೆ ಅತೀಯಾದ ಮಾಂಸಹಾರ ಸೇವನೆ, ಕಡಿಮೆ ದ್ರವ ಪದಾರ್ಥ ತೆಗೆದುಕೊಳ್ಳುವುದು, ಅತಿಯಾದ ಮಾನಸಿಕ ಒತ್ತಡ, ಅಧಿಕ ರಕ್ತದೊತ್ತಡ, ಮೆಗ್ನಿಶಿಯಂ, ಸಿಟಿಕ್, ಫಾಸ್ಪೆಟ್, ಆ್ಯಕ್ಸಿಲೆಟ್ಸ್‌ಗಳು ಈ ಸಮಸ್ಯೆಗೆ ಕಾರಣವಾಗುತ್ತವೆ. ಲಕ್ಷಣ ಈ ಸಮಸ್ಯೆ ನಿಗದಿತ ಲಕ್ಷಣಗಳನ್ನು ಒಳಗೊಂಡಿರುವುದಿಲ್ಲ. ಆದರೆ ಮೂತ್ರ ವಿಸರ್ಜನೆಯಲ್ಲಿ ಉರಿ ಆಗಬಹುದು. ಮೂತ್ರದಲ್ಲಿ ರಕ್ತ ಬರಬಹುದು. ವಾಂತಿ ಅಥವಾ ವಾಕರಿಕೆ, ಚಳಿ,ಜ್ವರ, ಬೆನ್ನುನೋವು ಕಾಣಿಸಬಹುದು. ಜಾಗ್ರತಿ ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಮುಖ್ಯವಾಗಿ ನೀರು, ಬಾರ್ಲಿ ಜ್ಯೂಸ್ ಹೆಚ...

ಔಷಧ ಗಿಡದಿಂದ ಪೊಸಿಟಿವ್ ಎನರ್ಜಿ

ಪ್ರಕೃತಿಯೇ ಹಾಗೆ ಆದರಲ್ಲಿ ಯಾವಾಗಲೂ ಆಧ್ಯಾತ್ಮಿಕ ಎನರ್ಜಿಯೊಂದು ಅಂತರ್ಗತವಾಗಿ ಹರಿಯುತ್ತಲೇ ಇರುತ್ತದೆ. ಆದರೆ ಮನೆಯೊಳಗೆ ಕೃತಕ ವಸ್ತುಗಳೇ ತುಂಬಿರುವುದರಿಂದ ಅಂತಹ ಶಕ್ತಿ ಒಳಗೆ ಹೆಚ್ಚಾಗಿ ಇರುವುದಿಲ್ಲ. ಹೀಗಾಗಿ ನೈಸರ್ಗಿಕ ಶಕ್ತಿ ಮನೆಯೊಳಗೆ ಹರಿಯುವಂತೆ ಮಾಡಲು ಇನ್ನಷ್ಟು ಯತ್ನಗಳನ್ನು ಮಾಡಬೇಕಾಗುತ್ತದೆ. ಇದಕ್ಕೆ ಅಷ್ಟೇನೂ ಕಷ್ಟ ಪಡಬೇಕಾಗಿಲ್ಲ. ಮನೆಯೊಳಗೆ ಗಿಡ, ಹೂ, ಗಿಡಮೂಲಿಕೆಗಳನ್ನು ಬೆಳೆದರೆ ಸಾಕು. ಸ್ವಲ್ಪವೇ ದಿನದಳಲ್ಲಿ ಮನೆಯೊಳಗೆ ಪೊಸೆಟಿವ್ ಎನರ್ಜಿ ಹರಿದಾಡುವುದು ನಿಮ್ಮ ಅನುಭವಕ್ಕೆ ಬಂದೇ ಬರುತ್ತದೆ. ಕರಿಬೇವು : ಅಡುಗೆ ಮನೆಯ ಯಾವುದೇ ತಿಂಡಿ ಇರಲಿ ಅದಕ್ಕೆ ಕರಿಬೇವು ಸೇರಿಸಿದರೆ ಘಮಘಮ. ಇದು ಮನೆಯೊಳಗೆ ಸುಲಭವಾಗಿ ಬೆಳೆಯುತ್ತದೆ. ಪಾಟ್‌ನಲ್ಲಿ ಕರಿಬೇವನ್ನುಬೆಳೆಯಬಹುದು. ಆರಂಭದಲ್ಲಿ ಇದಕ್ಕೆ ಒಂದು ಆಧಾರ ಸ್ತಂಭ ಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸೂರ್ಯನ ಬೆಳಕು ಬೀಳುತ್ತಿರಬೇಕು. ಜೊತೆಗೆ ದಿನಕ್ಕೊಮ್ಮೆ ನೀರು ಹಾಕಬೇಕು. ಪುದಿನಾ : ಪುದಿನಾ ಒಂದು ತಂಪುಕಾರಕ ಸೊಪ್ಪು. ಇದರ ಬಳಕೆ ಆಯುರ್ವೇದದಲ್ಲಿ ಸಾಕಷ್ಟಿದೆ. ಉತ್ತಮ ಮಣ್ಣು ಕಿಟಕಿಯಿಂದ ಒಂದಿಷ್ಟು ಸೂರ್ಯ ಬೆಳಕು ಇದರ ಬೆಳವಣಿಗೆಗೆ ಸಾಕು. ಇದು ಬೇಗನೆ ಬೆಳೆಯುತ್ತದೆ. ಚಿಕ್ಕ ಪಾಟ್‌ನಲ್ಲಿ ಇದರ ಬೀಜಗಳನ್ನು ಹರವಿ ಬಿಡಿ. ಆದರೆ ಪಾಟ್ ಇಡುವ ಜಾಗದಲ್ಲಿ ಸೂರ್ಯ ಬಿಸಿಲು ಪ್ರಖರವಾಗಿ ಬೀಳಬಾರದು. ಹಾಗೆಂದು ಕಡಿಮೆಯೂ ಆಗಬಾರದು. ಕೊತ್ತಂಬರಿ ಸೊಪ್ಪು : ಇದಂತೂ ಪ್ರತಿಯೊಂದು ...

ಔಷಧೀಯ ಗುಣವುಳ್ವ ಬಿಲ್ವ ಡಾ.ವಸುಂಧರಾ ಭೂಪತಿ

ಭಕ್ತರು ಶಿವನಿಗೆ ವಿಶೇಷವಾದ ಬಿಲ್ವ ಪತ್ರೆಯಿಂದ ಪೂಜಿಸಿ ಪಾವನರಾಗುತ್ತಾರೆ. ಶಿವನ ಪೂಜೆಗೆ ಬಿಲ್ವ ಪತ್ರೆ ಎಷ್ಟು ಮಹತ್ವವೋ ಅಂತೆಯೇ ಈ ಬಿಲ್ವಪತ್ರೆಯು ಔಷಧೀಯ ಗುಣಗಳನ್ನೂ ಹೊಂದಿವೆ. ಬಿಲ್ವ ಸಮೃದ್ಧಿಯ ಸಂಕೇತ. ಇದರ ವೈಜ್ಞಾನಿಕ ಹೆಸರು ಛಿಜ್ಝಛಿ ಞಚ್ಟಞಛ್ಝಿಟ. ಬಿಲ್ವವನ್ನು ಭಾರತದೆಲ್ಲೆಡೆಯೂ ಬೆಳೆಯಲಾಗುತ್ತದೆ. ಬಿಲ್ವ ಮಧ್ಯಮ ಗಾತ್ರದ ಮರವಾಗಿದ್ದು, ಆರರಿಂದ ಏಳೂವರೆ ಮೀಟರ್ ಎತ್ತರ ಬೆಳೆಯುತ್ತದೆ. ಉಪಯುಕ್ತ ಭಾಗ ಬೇರು, ಎಲೆ, ತೊಗಟೆ, ಹೂ, ಹಣ್ಣು, ಕಾಯಿ ಎಲ್ಲವೂ ಔಷಧೀಯ ಗುಣ ಹೊಂದಿವೆ. ರಾಸಾಯನಿಕ ಅಂಶಗಳು ಎಲೆ: ರುಟಿನ್ ಮಾರ್ಮೆಸಿನ್, ಎಗಿಲಿನ್, ಎಗಿಲಿನಿನ್, ಆಲ್ಫಾ ಮತ್ತು ಬೀಟಾ ಫಿಲ್ಲಾಂಡ್ರಿನ್ ಇರುತ್ತವೆ. ತಾಜಾ ಎಲೆಗಳಿಂದ ತೈಲವನ್ನು ತೆಗೆಯಲಾಗುತ್ತದೆ. ತೈಲವು ಹಳದಿಯುಕ್ತ ಹಸಿರು ಬಣ್ಣದಿಂದ ಕೂಡಿದ್ದು ಸುಗಂಧ ಹೊಂದಿರುತ್ತವೆ. ಬಿಲ್ವದ ಬೇರು: ಕ್ಯಾಂಥೊಟಾಕ್ಸಿನ್, ಅಂಬೆಲಿಫೆರಾನ್, ಮಾರ್ಮೆಸಿನ್, ಮಾರ್ಮಿನ್, ಸ್ಕಿಮ್ನಿನ್ ಇರುತ್ತವೆ. ಹಣ್ಣು: ಪಿಕ್ವಿನ್, ಟಾನಿನ್, ಮಾರ್ಮೆಸಿನ್ ಇರುತ್ತದೆ. ಕಾಯಿ: ಮಾರ್ಮೆಲಿನ್, ಎಗೆಲಿನ್, ಇಂಪಿರೆಟೊರಿನ್ ಇರುತ್ತದೆ. ಉಪಯುಕ್ತ ಗುಣಗಳು ಕಾಮಾಲೆ: ಬಿಲ್ವದ ಎಲೆಯ ರಸವನ್ನು 10 ರಿಂದ 20 ಮಿಲಿಯಷ್ಟು ಜೇನು ತುಪ್ಪದೊಂದಿಗೆ ಬೆರೆಸಿ ಕಾಮಾಲೆಯಿಂದ ಬಳಲುವವರಿಗೆ 7 ರಿಂದ 14 ದಿನ ನೀಡಬೇಕು. ಜ್ವರ ಇರುವವವರಿಗೆ ಎಲೆಯ ರಸದೊಂದಿಗೆ ಕಾಳುಮೆಣಸಿನ ಪುಡಿ (ಒಂದು ಚಿಟಿಕೆ) ಬೆರೆಸಿ ಕುಡಿಯಬೇಕು. ...

ಯುಗಾದಿ: ನಿತ್ಯ ನಂಬಿಕೆಯ ಬಿಂಬಗಳು

ಜೂಲಿಯಸ್ ಸೀಸರ್‌ನಿಂದ ಶಾಲಿವಾಹನ ಶಕೆಯವರೆಗೆ * ಚಿದಂಬರ ಭಟ್ಟ ಆರ್ ಜೋಶಿ ವಸಂತ ಋತುವಿನ ಆಗಮನವೆಂದರೆ ಸಂಭ್ರಮ ಪಲ್ಲವಿಸುವ ಸಮಯ. ಈ ಋತುರಾಜನ ಆಗಮನದೊಂದಿಗೆ ಯುಗಾದಿಯೂ ಬರುತ್ತದೆ. ಧರ್ಮಸಿಂಧು, ಅಥರ್ವವೇದ, ಶತಪಥ ಬ್ರಾಹ್ಮಣ ಇನ್ನೂ ಮುಂತಾದ ಧಾರ್ಮಿಕ ಗ್ರಂಥಗಳಲ್ಲಿ ಯುಗಾದಿಯ ವೈಶಿಷ್ಟ್ಯದ ಉಲ್ಲೇಖವಿದೆ. 'ಯುಗ' ಎಂದರೆ- ನೂತನ ವರ್ಷ; 'ಆದಿ' ಎಂದರೆ- ಆರಂಭ. ಅಂದಹಾಗೆ, ಭಗವದ್ಗೀತೆಯ 'ವಿಭೂತಿ ಯೋಗ'ದಲ್ಲಿ ಶ್ರೀಕೃಷ್ಣನು 'ಋತುಗಳಲ್ಲಿ ವಸಂತವು ನಾನು' (ಋತೂನಾಂ ಕುಸುಮಾಕರಃ) ಎಂದು ಖುಷಿಯಿಂದ ಹೇಳಿಕೊಂಡಿದ್ದಾನೆ. ಈ ಋತುವಿನಲ್ಲಿ ಹೊಸ ಚಿಗುರಿನ ಹಸಿರು ವಸ್ತ್ರವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ, ಕೋಗಿಲೆಗಳ ಇಂಚರವನ್ನು ಆಲಿಸಿದಾಗ, 'ಆನಂದಮಯ ಈ ಜಗ ಹೃದಯ' ಎಂಬ ಕವಿ ವಾಣಿಯ ಸತ್ಯದ ದರ್ಶನವಾಗುತ್ತದೆ. ಕ್ರಿಸ್ತಪೂರ್ವ 2000ದಷ್ಟು ಮೊದಲೇ ಮೆಸಪಟೋಮಿಯಾದಲ್ಲಿ ಹೊಸ ವರ್ಷ ಆಚರಿಸುವ ಪದ್ದತಿ ಇತ್ತು. ಬ್ಯಾಬಿಲೋನಿಯಾದಲ್ಲಿ ಮೇಷ ಮಾಸದ ಅಮಾವಾಸ್ಯೆಯಂದು, ಅಸ್ಸೀರಿಯಾದಲ್ಲಿ ತುಲಾ ಮಾಸದ ಅಮಾವಾಸ್ಯೆಯಂದು, ಪರ್ಷಿಯನ್ನರು ಮತ್ತು ಈಜಿಪ್ಶಿಯನ್ನು ತುಲಾ ಸಂಕ್ರಾಂತಿಯಂದು, ಗ್ರೀಕರು ಮಕರ ಸಂಕ್ರಾಂತಿಯಂದು ಹೊಸ ವರ್ಷವನ್ನು ಆಚರಿಸುತ್ತಿದ್ದರು. ಈಗ ನಾವು 'ಯುಗಾದಿ ಯಾವತ್ತು?' ಎಂದು ಯಾರಾದರೂ ಕೇಳಿದರೆ ನಮ್ಮ ಪಂಚಾಂಗ ನೋಡಿ ಥಟ್ಟನೆ ಉತ್ತರ ಹೇಳಬಹುದು ತಾನೇ? ಆದರೆ, ಇವುಗಳಲ್ಲಿ ನಮ...

ವರಮಹಾಲಕ್ಷ್ಮಿ ವ್ರತ ಮಾಡುವ ಪದ್ಧತಿ

ವರಮಹಾಲಕ್ಷ್ಮಿ ವ್ರತ - ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಮಾಡುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು. ಕೆಲವರ ಮನೆಯಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತೆ, ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಲಕ್ಷ್ಮಿ ದೇವಿಗೆ ಪೂಜೆ ಮಾಡಿ. ಈ ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು: • ರಂಗೋಲಿ, ಮಣೆ / ಮಂಟಪ • ದೇವರ ವಿಗ್ರಹ, ದೇವರ ಪಟ • ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ • ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು • ಪೂಜಾ ವಿಧಾನ ಇರುವ ಪುಸ್ತಕ /ಕ್ಯಾಸೆಟ್ / ಸಿ.ಡಿ. • ಅರಿಶಿನ, ಕುಂಕುಮ, ಮಂತ್ರಾಕ್ಷತೆ • ಶ್ರೀಗಂಧ, ಊದಿನ ಕಡ್ಡಿ • ಹೂವು, ಪತ್ರೆ, ಗೆಜ್ಜೆ ವಸ್ತ್ರ • ಪಂಚಾಮೃತ - ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ • ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ • ನೈವೇದ್ಯ - ಪಾಯಸ, ಹುಗ್ಗಿ, ಅನ್ನ, ಕೋಸಂಬರಿ , ಇತ್ಯಾದಿ • ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ • ಆರತಿ ತಟ್ಟೆ, ಸೊಡಲು, ಹೂಬತ್ತಿ, ಕೆಲವು ಪೂಜೆಗಳಲ್ಲಿ...

ನವಗ್ರಹಗಳ ವಿಚಾರ ನವಗ್ರಹಗಳ ಕರಾಮತ್ತು ಮಾರ್ಚಿ ೨೦೧೧ ಹೊಸತು ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ

ನವಗ್ರಹಗಳ ವಿಚಾರ ನವಗ್ರಹಗಳ ಕರಾಮತ್ತು ಮಾರ್ಚಿ ೨೦೧೧ ಹೊಸತು ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ ನವಗ್ರಹಗಳು ಮನುಜನಿಗೆ ಒಳ್ಳೆಯದು ಮಾಡುವುದಿಲ್ಲವೇ? ಕೆಟ್ಟದೇ ಮಾಡುವುದೇ? ಎಂಬ ಜಿಜ್ಞಾಸೆ ನನ್ನನ್ನು ಕಾಡಿತು. ಏನೇ ತೊಂದರೆ ಎದುರಾದರೂ ಅದು ನವಗ್ರಹಗಳ ಉಪಟಳ ಎಂದು ಭಾವಿಸಿ ನವಗ್ರಹ ಹೋಮ, ದಾನ, ಪೂಜೆ ಮಾಡಿಸುತ್ತಾರೆ. ಉದಾಹರಣೆಗೆ ಹೇಳಬೇಕೆಂದಾದರೆ ಮನೆ ಒಳಗೆ ನಡೆಯುತ್ತಿರುವಾಗ ಬಾಗಿಲು, ಕಿಟಕಿ, ಗೋಡೆ, ಅಡುಗೆ ಮನೆಯ ಕಟ್ಟೆ ಪದೇಪದೇ ಕೈಗೆ ಕಾಲಿಗೆ ತಗಲಿ ನೋವು ಕೊಟ್ಟರೆ ಅದು ನವಗ್ರಹಗಳ ಕಾಟವೇ ಸೈ ಎಂದು ಭಾವಿಸುತ್ತಾರೆ. ಪರಿಚಿತರೊಬ್ಬರಿಗೆ ಪ್ರತೀದಿನವೂ ಒಮ್ಮೆ ತಗಲಿದಲ್ಲಿಗೇ ಬಾಗಿಲು ಕಟ್ಟೆ ಇತ್ಯಾದಿ ತಗಲಿ ಕೈ ತೋಳೆಲ್ಲ ನೋವು ಬಂತಂತೆ. ಸುಮಾರು ದಿನ ನೋವು ಅನುಭವಿಸಿದರಂತೆ. ಇದರ ಪರಿಹಾರಕ್ಕಾಗಿ ಇರುವ ದಾರಿ ಒಂದೇ. ನವಗ್ರಹ ಹೋಮ ಹಾಗೂ ಪೂಜೆ ಎಂದು ಬಲ್ಲವರು ಹೇಳಿದರಂತೆ. ಹಾಗಾಗಿ ತಡಮಾಡದೆ ಅವನ್ನು ಮಾಡಿಸಿದರು. ತದನಂತರದ ಪರಿಣಾಮ ಏನಾಯಿತೆಂದು ಗೊತ್ತಿಲ್ಲ. ಬಾಗಿಲು ಹಿಡಿ, ಕಟ್ಟೆ ಎಲ್ಲ ತಟಸ್ಥವಾಗಿ ಅವರಿಗೆ ತಗಲದೆ ಇದ್ದುವೋ ಏನೋ? ಈಗ ನವಗ್ರಹಗಳೆಂದರೆ ಏನು ಎಂಬುದನ್ನು ತಿಳಿಯೋಣ: ಭಾರತೀಯ ಸಂಪ್ರದಾಯದಂತೆ ಸೂರ್ಯ, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಎಂಬ ಒಂಬತ್ತು ಗ್ರಹಗಳು. ನವಗ್ರಹ ಜಪ: ಸೂರ್ಯನೇ ಮೊದಲಾದ ಗ್ರಹಗಳ ಅನುಗ್ರಹಕ್ಕಾಗಿ ಶಾಸ್ತ್ರೋಕ್ತವಾದ ವಿಧಾನದಿಂದ ಮಾಡುವ ಆಯಾಯ ಗ್ರಹಗಳ ಮಂತ್ರ ಪುರಶ್ಚರಣೆ...

ವ್ಯವಹಾರ ನಿರ್ಧರಿಸುವ ತಿಲ ರಹಸ್ಯ ಡಾ.ಅನಸೂಯ ಎಸ್.ರಾಜೀವ್

ವ್ಯವಹಾರ ನಿರ್ಧರಿಸುವ ತಿಲ ರಹಸ್ಯ ಡಾ.ಅನಸೂಯ ಎಸ್.ರಾಜೀವ್ ಪರಮಾತ್ಮನ ಲೀಲೆ ವಿಚಿತ್ರವಾದುದು. ಅವನು ಮನುಷ್ಯನಿಗೆ ಬುದ್ಧಿಶಕ್ತಿಯನ್ನು ಕೊಟ್ಟು ಉನ್ನತಮಟ್ಟದಲ್ಲಿಟ್ಟ. ಮನುಷ್ಯನು ತನ್ನ ಪ್ರತಿಭಾಶಕ್ತಿಯಿಂದ ಗೂಢವಿದ್ಯೆಗಳನ್ನು ಅಭ್ಯಾಸ ಮಾಡಿದ. ಶರೀರದಲ್ಲಿರುವ ಮಚ್ಚೆಗಳ ಮೂಲಕ ಮನುಷ್ಯನ ಸ್ವಭಾವ, ಆಚಾರ, ವ್ಯವಹಾರಗಳನ್ನು ನಿರ್ಧರಿಸುವುದೇ ತಿಲ ರಹಸ್ಯ. ಭಾರತೀಯ ಆಚಾರ್ಯರು ತಿಲದ ವರ್ಣಗಳ ಬಗ್ಗೆ ಹೀಗೆ ತಿಳಿಸಿರುತ್ತಾರೆ. ಜಾತಕದಲ್ಲಿ ರವಿ, ಕುಜರು ಬಲಾಢ್ಯರಾಗಿದ್ದರೆ ಕೆಂಪು ವರ್ಣದ ಮಚ್ಚೆಯನ್ನು ಜಾತಕರು ಹೊಂದಿರುತ್ತಾರೆ. ಚಂದ್ರ, ಶುಕ್ರ ಬಲಾಢ್ಯರಾಗಿದ್ದರೆ ಬಿಳಿ ಬಣ್ಣದ ಮಚ್ಚೆ, ಗುರು ಬಲಾಢ್ಯನಾಗಿದ್ದರೆ ಜೇನು ವರ್ಣದ ಮಚ್ಚೆ, ಶನಿ ಬಲಾಢ್ಯನಾಗಿದ್ದರೆ ಕಪ್ಪು ಬಣ್ಣದ ಮಚ್ಚೆಯನ್ನು ಹೊಂದಿರುತ್ತಾರೆ. ಹೀಗೆ ವ್ಯಕ್ತಿಗಳಿಗೆ ಯಾವ ಗ್ರಹ ಬಲಾಢ್ಯವಾಗಿರುವುದೋ ಆ ಗ್ರಹದ ವರ್ಣದ ಮಚ್ಚೆ ಇರುತ್ತದೆ. ಶಿರೋ ಭಾನು: ಮುಖ:ಚಂದ್ರ: ಕಂಠೇ ಕುಜ: ವಕ್ಷೇ ಬುಧ: ಉದರೇ ಗುರು: ಗುಹ್ಯೇ ಶುಕ್ರ: ಜಂಘೇ ಶನಿ: ಪಾದಾಭ್ಯೋ ರಾಹು ಕೇತುಶ್ಚ ಎಂಬ ಸೂತ್ರದಂತೆ ದೇಹದ ಯಾವ ಭಾಗದಲ್ಲಿ ಮಚ್ಚೆ ಕಾಣುತ್ತದೋ ಆ ಭಾಗವನ್ನಾಳುವ ಗ್ರಹ ಬಲಾಢ್ಯವಾಗಿರುತ್ತದೆ ಎಂದು ಅವರು ತಿಳಿಸಿರುತ್ತಾರೆ. ನಕ್ಷತ್ರ ಪುರುಷನ ಅಂಗಗಳಿಗೆ ಸಂಬಂಧಿಸಿದ ಜಾಗದಲ್ಲಿ ಮಚ್ಚೆ ಇದ್ದರೆ ಆಯಾ ನಕ್ಷತ್ರದಲ್ಲಿ ಹುಟ್ಟಿದವರು ಅಥವಾ ಆ ನಕ್ಷತ್ರಗಳ ಅಧಿಕ ಪ್ರಭಾವಕ್ಕೆ ಒಳಗಾದವರು ಎಂದೂ ತಿಳಿಸಿರುತ್ತಾ...

ಧ್ವನಿಮುದ್ರಿಕೆ: ಎಲ್ಲಿ ಹನುಮನೋ ಅಲ್ಲಿ ರಾಮನು ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ.ರಾಜ್‍ಕುಮಾರ್

ಧ್ವನಿಮುದ್ರಿಕೆ: ಎಲ್ಲಿ ಹನುಮನೋ ಅಲ್ಲಿ ರಾಮನು ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ.ರಾಜ್‍ಕುಮಾರ್ ಎತ್ತಲೋ ಮಾಯವಾದ.. ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ಎತ್ತಿ ತಂದೆ ಎಲ್ಲಿಂದ ರಾಯ ಮುತ್ತೆತ್ತ ರಾಯ ಅಕ್ಕ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ ನಗೆಯ ತಂದೆಯ ಮಹನೀಯ.. ಆ.. ಮಾರುತಿ ರಾಯ ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ಎತ್ತಿ ತಂದೆ ಎಲ್ಲಿಂದ ರಾಯ ಮುತ್ತೆತ್ತ ರಾಯ ಸೀತಮ್ಮ ಸ್ನಾನ ಮಾಡಿ ಮೂಗುತಿಯ ಹುಡುಕಾಡಿ ನಿನ್ನ ಕೂಗಿದಳೇನು ಹನುಮಂತ ರಾಯ ನೀರಲ್ಲಿ ಬಾಲಬಿಟ್ಟು ನದಿಯನ್ಣೇ ಶೋಧಿಸಿದೆ ಎಂಥ ಶ್ರದ್ಧೆಯೋ ಮಹನೀಯ.. ಆ.. ಹನುಮಂತ ರಾಯ ಅಮ್ಮ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ ಮುತ್ತೆತ್ತ ರಾಯನೆಂದು ಹರಸಿದಳೇನು ನಿನ್ನಂಥ ದಾಸನನು ಪಡೆಯ ಆ ರಾಮನು ಎಂಧ ಭಾಗ್ಯವಂತನಯ್ಯ.. ಆ.. ಮಾರುತಿ ರಾಯ ನಿನ್ನಂತೆ ಭಕ್ತಿಯಿಲ್ಲ ನಿನ್ನಂತೆ ಶಕ್ತಿಯಿಲ್ಲ ಏನೂ ಇಲ್ಲದ ಜೀವ ನನ್ನದು ಸ್ವಾಮಿ ನಿನ್ನೇ ನಾ ನಂಬಿ ಬಂದೆ ನೀನೇ ನನ್ನ ತಾಯಿ ತಂದೆ ಕಾಪಾಡುವ ಹೊಣೆಯು ನಿನ್ನದು.. ತಂದೆ ನಿನ್ನದು ಆಂಜನೇಯನ ಮನದಲಿ ನೆನೆದರೆ ಸಾಲದೆ ಅವನಿಂದಾಗದ ಕಾರ್ಯ ಜಗದಲಿ ಏನಿದೆ ಆ ಸುಂದರ ಮೂರುತಿ ಮನದಲಿ ನಿಂತರೆ ಸಾಲದೆ ಮಾರುತಿ ರಾಯನು ಒಲಿದರೆ ಚಿಂತೆಯು ಏನಿದೆ ರಾಮಚಂದ್ರನ ದುಃಖವ ಕಳೆವನಲ್ಲವೆ ನಿನ್ನ ದುಃಖವ ಕಳೆವುದು ಅವನಿಗಸಾಧ್ಯವೆ ದುಷ್ಟರಕ್ಕಸರ ನಾಶ ಮಾಡಿದವನಲ್ಲವೆ ನಿನ್ನ ದುಷ್ಠಗುಣಗಳ ಅಳಿಸಲು ಅವನಿಗಸಾಧ್ಯವೆ ಸಾಗರವನ್ನೆ ದಾಟ...

ಗ್ಯಾಸ್' ಅಬ್ಬರಿಸುತ್ತಿದೆಯೇ?

ಗ್ಯಾಸ್' ಅಬ್ಬರಿಸುತ್ತಿದೆಯೇ? ಪ್ರತಿ ವ್ಯಕ್ತಿಯೂ ಗುದ ದ್ವಾರದಿಂದ ಪ್ರತಿ ದಿನ `ಗ್ಯಾಸ್` ಹೊರಹಾಕುತ್ತಾನೆ. ಪ್ರತಿಯೊಬ್ಬರ ಜಠರ ಮತ್ತು ಕರುಳಿನಲ್ಲಿ ಸ್ವಲ್ಪ ಮಟ್ಟಿನ `ಗ್ಯಾಸ್` ಸಂಚಯ ಯಾವತ್ತೂ ಇದ್ದೆೀ ಇರುತ್ತದೆ. ಸಾಮಾನ್ಯ ಮನುಷ್ಯ ದಿನಕ್ಕೆ ಸುಮಾರು 14 ಸಾರಿ `ಗ್ಯಾಸ್` ಹೊರಹಾಕುವುದು ಸಾಮಾನ್ಯ. ಇದಕ್ಕಿಂತ ಹೆಚ್ಚಾದರೆ ಮಾತ್ರ ತೊಂದರೆ.- ಅಪಾನವಾತ, ಹೂಸು, ವಾಯು ಪ್ರಕೋಪ (flatulence) ಎಂದೆಲ್ಲ ಕರೆಸಿಕೊಳ್ಳುತ್ತಾ ಉದರದಲ್ಲಿ ಸಂಚಯವಾಗುವ ವಾಯುವೇ ಈಗೀಗ ಆಡು ಮಾತಿನಲ್ಲಿ ಇಂಗ್ಲಿಷ್‌ನ `ಗ್ಯಾಸ್` ಎಂದು ಕರೆಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಕರುಳಿನಲ್ಲಿ 500 ರಿಂದ 2000 ಮಿಲಿಯಷ್ಟು `ಗ್ಯಾಸ್` ಉತ್ಪಾದನೆಯಾಗುತ್ತದೆ ಮತ್ತು ಇದು ಗುದ ದ್ವಾರದ ಮೂಲಕ ಹೊರಹೋಗುತ್ತದೆ. ಸಾಮಾನ್ಯವಾಗಿ ಐದು ರೀತಿಯ ವಾಸನೆ ರಹಿತ `ಗ್ಯಾಸ್`ಗಳು ಇರುತ್ತವೆ. ಅವುಗಳೆಂದರೆ ನೈಟ್ರೋಜನ್, ಹೈಡ್ರೋಜನ್, ಕಾರ್ಬನ್ ಡೈ ಆಕ್ಸೈಡ್, ಮೀಥೇನ್ ಮತ್ತು ಆಕ್ಸಿಜನ್. ಇದಲ್ಲದೇ ವಿಶಿಷ್ಟ ವಾಸನೆಯುಳ್ಳ ಸ್ಕೇಟೋಲ್, ಇಂಡೋಲ್ ಮತ್ತು ರಂಜಕಯುಕ್ತ ಗ್ಯಾಸ್‌ಗಳೂ ಉದರದಲ್ಲಿ ಉತ್ಪಾದನೆಯಾಗುತ್ತವೆ. ಉರಿಯುವ ಗುಣವಿರುವ ಗ್ಯಾಸ್‌ನಿಂದ ನೀವು ಬಳಲುತ್ತಿದ್ದರೆ ಇದಕ್ಕೆ ಕಾರಣ ಹೈಡ್ರೋಜನ್ ಮತ್ತು ಮೀಥೇನ್. ಉದರದಲ್ಲಿ ಈ `ಗ್ಯಾಸ್`ನ ಪ್ರಮಾಣ ನೇರವಾಗಿ ನಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳ ಮೇಲೆ, ಅವುಗಳಿಂದಾಗುವ ಹುದುಗುವಿಕೆ (fermentation) ಜೀರ್ಣ ಕ್ರಮ, ಹೀರುವ ಕ್ರ...

ಯಾವ ದಾನ ಮಾಡಿದರೆ ಯಾವ ಫಲ?

ಯಾವ ದಾನ ಮಾಡಿದರೆ ಯಾವ ಫಲ? ದಾನದಿಂದ ಮನುಷ್ಯ ದೊಡ್ಡವನಾಗುತ್ತಾನೆ. ಇದರಿಂದಲೇ ಶ್ರೇಯಸ್ಸು ಲಭಿಸುತ್ತದೆ. ದಾನದಿಂದ ಪಾಪ ಪರಿಹಾರವಾಗುತ್ತದೆ ಎನ್ನಲಾಗುತ್ತದೆ. ದಾನದ ಹಿಂದೆ ಇಲ್ಲದವರಿಗೆ ಇರುವವರು ನೀಡುವ ಮೂಲಕ ಮತ್ತೊಬ್ಬರ ಅಗತ್ಯ ಪೂರೈಕೆಯಾಗುವ ಆಶಯವಿರುವುದು ಸತ್ಯ. ಅನೇಕ ಬಗೆಯ ದಾನಗಳನ್ನು ನಾವು ಗುರುತಿಸಬಹುದು. ಬನ್ನಿ ಜೋತಿಷ್ಯದಂತೆ ಯಾವ ದಾನದಿಂದ ಯಾವ ರೀತಿಯ ಲಾಭವಾಗುತ್ತದೆ ಎಂದು ನೋಡೋಣ. 1.ಅನ್ನ ದಾನ ಮಾಡಿದರೆ:- ದಾರಿದ್ರ ನಾಶವಾಗುತ್ತದೆ, ಸಾಲಗಳು ತೀರುತ್ತದೆ. 2.ವಸ್ತು ದಾನ ಮಾಡಿದರೆ:- ಆಯುಷ್ಯ ಹೆಚ್ಚುತ್ತದೆ. 3.ಜೇನು ತುಪ್ಪ ದಾನಮಾಡಿದರೆ:- ಪುತ್ರ ಭಾಗ್ಯ ಕಾಣಿಸುತ್ತದೆ. 4.ದೀಪ ದಾನಮಾಡಿದರೆ:- ಕಣ್ಣು ಚನ್ನಾಗಿ ಕಾಣಿಸುತ್ತದೆ. 5.ಅಕ್ಕಿ ದಾನಮಾಡಿದರೆ:- ಪಾಪ ಪರಿಹಾರವಾಗುತ್ತದೆ. 6.ತುಪ್ಪ ದಾನಮಾಡಿದರೆ:- ರೋಗ ನಿವಾರಣೆಯಾಗುತ್ತದೆ. 7. ಹಾಲು ದಾನಮಾಡಿದರೆ:- ದುಖಃ ತೀರುತ್ತದೆ. 8. ಮೊಸರು ದಾನಮಾಡಿದರೆ:-ಇಂದ್ರಿಯಗಳು ವೃದ್ಧಿಯಾಗುತ್ತವೆ. 9.ಹಣ್ಣು ಗಳನ್ನು ದಾನಮಾಡಿದರೆ:- ಬುದ್ಧಿ,ಸಿದ್ಧಿಯು ಲಭಿಸುತ್ತದೆ. 10.ಬಂಗಾರ ದಾನಮಾಡಿದರೆ:- ಕುಟುಂಬದಲ್ಲಿ ಇರುವ ದೋಷ ನೀಗುತ್ತದೆ. 11.ಬೆಳ್ಳಿ ದಾನಮಾಡಿದರೆ:- ಮನಸ್ಸಿನ ಚಿಂತೆ ನೀಗುತ್ತದೆ. 12.ಹಸು(ಗೋವು) ದಾನಮಾಡಿದರೆ:- ಖುಷಿ,ದೇವರುಗಳು,ಪಿತೃಗಳಿಂದ ವಿಮೋಚನೆ 13.ತೆಂಗಿನಕಾಯಿ ದಾನಮಾಡಿದರೆ:- ನೆನೆದ ಕಾರ ಸಿದ್ಧಿಸುತ್ತದೆ. 14. ನೆಲ್ಲಿಕಾಯಿ ದಾನಮಾಡಿದರೆ:- ಜ್ಞಾನ ದಕ್...

ಜೋಕಿನ ಜೋಕು

ಸೆಂಡ್ ಆಫ್ ಕಮಿಟಿ... ರಿಸೆಪ್ಷನ್ ಕಮಿಟಿ ಆದಾಗ... ಖ್ಯಾತ ಶಿಕ್ಷಣ ತಜ್ಞ, ವಿಚಾರವಾದಿ ಡಾ. ಎಚ್. ನರಸಿಂಹಯ್ಯ ಅವರು, ತಮ್ಮ ಸಾವಿನ ಬಳಿಕ ತಮ್ಮ ಅಂತ್ಯಕ್ರಿಯೆ ಹೇಗೆ ನಡೆಯಬೇಕು, ತಮ್ಮ ಅಂಗಾಂಗಗಳನ್ನು ಹೇಗೆ ದಾನ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ತಾವೇ ನಿರ್ಧರಿಸಿ ತಮ್ಮ ಆತ್ಮೀಯರನ್ನು ಒಳಗೊಂಡ ಸಮಿತಿಯೊಂದನ್ನು ಮಾಡಿದ್ದರು. ಆದರೆ, ಡಾ.ಎಚ್.ನರಸಿಂಹಯ್ಯ ಅವರಿಗೆ ಮೊದಲೇ ಸಮಿತಿಯಲ್ಲಿದ್ದ ಇಬ್ಬರು ಸಾವನ್ನಪ್ಪಿದರು. ಆಗ ಎಚ್.ಎನ್. ಹೇಳಿದ್ದು ಏನು ಗೊತ್ತೆ... ಅಲ್ಲ ಇವರನ್ನು ಸೆಂಡ್‌ಆಫ್ ಕಮಿಟಿಗೆ ಮೆಂಬರ್ ಮಾಡಿದ್ರೆ, ನನಗಿಂತ ಮೊದಲೇ ಮೇಲೆ ಹೋಗಿ, ರಿಸೆಪ್‌ಷನ್ ಕಮಿಟಿ ರಚನೆ ಮಾಡಿದ್ದಾರೆ... (ಈ ಘಟನೆ ಸ್ಮರಿಸಿಕೊಂಡವರು, ಡಾ. ಮಹೇಶ್ ಜೋಶಿ, ಹಿರಿಯ ನಿರ್ದೇಶಕರು, ದೂರದರ್ಶನ ಕೇಂದ್ರ, ಬೆಂಗಳೂರು) ಜೋಕಿನ ಜೋಕು ಗುಂಡನ ಬಾಸ್ ಗೆ ಜೋಕು ಹೇಳುವ ಚಪಲ. ಆದರೆ ಅವರಿಗೆ ಗೊತ್ತಿದ್ದು ಒಂದೇ ಒಂದು ಕೆಟ್ಟ ಜೋಕು. ಪದೇಪದೇ ಅದನ್ನೇ ಹೇಳುತ್ತಿದ್ದರು. ಆದರೂ ಗುಂಡ ಗಹಗಹಿಸಿ ನಗುತ್ತಿದ್ದ. ಇದನ್ನು ನೋಡಿದ ವ್ಯಕ್ತಿಯೊಬ್ಬರು, ಗುಂಡನನ್ನು ಪಕ್ಕಕ್ಕೆ ಕರೆದು ಕೇಳಿದ್ರು. ಎನ್ ಸಾರ್ ಅಷ್ಟು ಜೋರಾಗಿ ನಕ್ತಾ ಇದ್ದೀರಿ. ಆ ಜೋಕು ಕೇಳಿದ್ರೆ ನಗೂನೇ ಬರಲ್ಲ? ಜೊತೆಗೆ ಅವನು ಹೇಳಿದ ಜೋಕೇ ಹೇಳ್ತಾ ಇದ್ದಾನೆ ಆದ್ರೂ ನೀವು ನಕ್ತಾನೇ ಇದ್ದೀರಿ ಏಕೆ ಎಂದು ಪ್ರಶ್ನಿಸಿದರು. ಗುಂಡ ಹೇಳಿದ ಏನ್ ಮಾಡ್ಲಿ ಸ್ವಾಮಿ, ಅವರು ನನ್ನ ಬಾಸ್. ನಾನು ಈಗ ನಗದೇ ಇದ್ರೆ ಅವರ...

ಸೊಪ್ಪುಗಳು ಪೌಷ್ಟಿಕ ಗುಣಗಳು:ಔಷಧೀಯ ಗುಣಗಳು

ಹರಿವೆ ಸೊಪ್ಪು ಹರಿವೆ ಅಥವಾ ಕೀರೆ ದಂಟಿನ ಜಾತಿಗೆ ಸೇರಿದ ಸೊಪ್ಪು ತರಕಾರಿಯದರೂ ಅದರಷ್ಟು ಎತ್ತರಕ್ಕೆ ಬೆಳೆಯುವುದಿಲ್ಲ. ಹರಿವೆಯ ಕಾಂಡಭಾಗ ಸಣಕಲು; ಎಲೆಗಳೂ ಸಣ್ಣವೇ, ಕಾಂಡ ಹಾಗೂ ಎಲೆಗಳ ಬಣ್ಣ ತಿಳಿ ಹಸುರು ಇಲ್ಲವೇ ಕೆಂಪು. ತಿಳಿ ಹಸುರು ಬಗೆಯ ಸೊಪ್ಪು ಹೆಚ್ಚು ರುಚಿಯಾಗಿರುತ್ತದೆ. ದೇಶದ ಎಲ್ಲಾ ಭಾಗಗಳಲ್ಲಿ ಇದರ ಬೇಸಾಯ ಕಂಡುಬರುತ್ತದೆ. ಪೌಷ್ಟಿಕ ಗುಣಗಳು: ಹರಿವೆ ದಂಟುಸೊಪ್ಪಿನಷ್ಟೇ ಪೌಷ್ಟಿಕ. ಅದರಲ್ಲಿ ಅಧಿಕ ಪ್ರಮಾಣದ ನಾರು, ಖನಿಜ ಪದಾರ್ಥ ಹಾಗೂ ಜೀವಸತ್ವಗಳಿರುತ್ತವೆ. ಔಷಧೀಯ ಗುಣಗಳು : ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣ ಹಾಗೂ ಇತರ ಖನಿಜ ಪದಾರ್ಥಗಳಿದ್ದು ರಕ್ತದ ಉತ್ಪಾದನೆಗೆ ನೆರವಾಗುತ್ತವೆ. ಅದೇ ರೀತಿ ಇದರಲ್ಲಿನ ನಾರಿನ ಅಂಶ ಮಲಬದ್ಧತೆಯನ್ನು ದೂರ ಮಾಡಬಲ್ಲದು. ಕ್ರಮವರಿತು ತಿನ್ನುತ್ತಿದ್ದಲ್ಲಿ ಅದರ ಸಂಪೂರ್ಣ ಲಾಭ ಸಿಗುತ್ತದೆ. ಉಗಮ ಮತ್ತು ಹಂಚಿಕೆ : ಇದು ಬಹುಶಃ ಸ್ವದೇಶೀ ಎನಿಸಿದ್ದು ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಸ್ಯ ವರ್ಣನೆ : ಹರಿವೆ ಅಮರಾಂಥೇಸೀ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಸಣಕಲಾದ ಕಾಂಡಗಳನ್ನು ಹೊಂದಿರುತ್ತದೆ. ಎಲೆಗಳೂ ಸಹ ಸಣ್ಣವಿರುತ್ತವೆ. ಬುಡಭಾಗದಲ್ಲಿ ಹಲವಾರು ಕವಲು ರೆಂಬೆಗಳಿದ್ದು ಸ್ವಲ್ಪ ಮಟ್ಟಿಗೆ ಪೊದರೆಯಂತೆ ಹರಡಿ ಬೆಳೆದಿರುತ್ತದೆ. ಒಟ್ಟಾಗಿ ಸೇರಿಸಿ ಕುಡುಗೋಲಿನಿಂದ ನೆಲಮಟ್ಟಕ್ಕೆ ಕೊಯ್ದು ತೆಗೆಯಬೇಕು. ಮೊದಲ ಕೊಯ್ಲಿನ ನಂತರ ಮತ್ತಷ್ಟು ಚಿಗುರು ಮೂಡಿ ಬೆಳೆಯುತ್ತವ...