ದಾಂಪತ್ಯ ಕಲಹಗಳ ನಿವಾರಣೆಗಾಗಿ (ಪರಸ್ತ್ರೀ ಸಹವಾಸದಿಂದ ಉಂಟಾಗಿರುವ ಸಾಂಸಾರಿಕ ತೊಂದರೆಗಳ ನಿವಾರಣೆಗಾಗಿ ಪರಿಹಾರೋಪಾಯಗಳು) ೧.ಕೃತಿಕಾ ಉತ್ತರ ಉತ್ತರಾಷಾಡ ನಕ್ಷತ್ರ ಅಥವ ಸಪ್ತಮಿ ತಿಥಿ ಭಾನುವಾರ ಇರುವಾಗ ಹಿಂದಿನ ದಿನವೇ(ಶನಿವಾರದಂದು) ಬಿಳಿ ಎಕ್ಕದ ಗಿಡವನ್ನು ಪೂಜಾಸಾಮಗ್ರಿಗಳಿಂದ ಮೊಸರನ್ನ ನೈವೇದ್ಯ ಮಾಡಿ ಒಂದು ಅರಿಸಿನ ಕೊನೆಯನ್ನು ಅರಿಸಿನದ ದಾರಮಾಡಿ ಗಿಡಕ್ಕೆ ಕಟ್ಟಿ ೫ಜನ ಸ್ತ್ರೀಯರಿಗೆ ಅರಿಸಿನ ಕುಂಕುಮ ನೀಡಿ ಬರುವುದು ಭಾನುವಾರ ದಂದು ಆಗಿಡಬಳಿ ಬಂದು ಮತ್ತೆ ಪೂಜೆ ಮಾಡಿ ಅರಿಸಿನದ ಕೊಂಬು ಕಟ್ಟಿರುವ ಕೊಂಬೆಯನ್ನು ಕತ್ತರಿಕೊಂಡು ತಂದು ಮನೆಯಲ್ಲಿ ಒಂದು ತಟ್ಟೆಯಲ್ಲಿ ನವದಾನ್ಯ ಗಳಮೇಲೆ ಆ ಅರಿಸಿನದ ಕೊಂಬಿನ ಸಮೆತ ಇರುವ ಎಕ್ಕದ ಗಿಡವನ್ನು ಇಟ್ಟು ಎರಡು ದೀಪವನ್ನು ಹಚ್ಚಿ ದೇವಿಯ ಯಾವುದಾದರು ಮಂತ್ರವನ್ನು ಅಥವ ಶತನಾಮಾವಳಿಯನ್ನು ೧೦೮ ಸಲ ಜಪಿಸಿ ನಂತರ ಆ ಗಿಡವನ್ನು ನಮಿಸಿ ದೇವರ ಮನೆಯಲ್ಲಿ ಅಥವ ಮನೆಯ ಮುಂಬಾಗಿಲಿನ ಗೋಡೆಗೆ ಒಳಬಾಗದಲ್ಲಿ ಕಟ್ಟುವುದು ನಿತ್ಯವು ಪೂಜೆಮಾಡುವುದು. ೨.ಪ್ರದೋಷ ವಿರುವ ದಿವಸ ನೋಡಿಕೊಂಡು ಒಂದು ತಾಮ್ರದ ತಗಡಿನಲ್ಲಿ ಪತಿಯ ಹೆಸರು,ಅವನ ತಾಯಿಯ ಹೆಸರು(ಅತ್ತೆಯ ಹೆಸರು)ಪತ್ನಿಯ ಹೆಸರು ತನ್ನ ತಾಯಿಯ ಹೆಸರು ಬರೆದು ಒಂದು ಜೇನುತುಪ್ಪದ ಬಾಟಲ್ ನಲ್ಲಿ ಹಾಕಿ ತಗಡನ್ನು ಸುತ್ತಿ ಜೇನಿನಲ್ಲಿ ಸಂಪೂರ್ಣ ಮುಳುಗುವಂತಿರಲಿ ಮುಚ್ಚಳ ಹಾಕಿ ಪೂಜೆ ಮಾಡಿ ಪ್ರಾಥಿಸಿಕೊಂಡು ಹರಿಯುವ ನೀರಲ್ಲಾಗಲಿ ಪಾಳು ಬಾವಿಯಲ್ಲಾಗಲಿ ಹುತ್ತದ ...