ರತ್ನರಾಜ್ ಜೈನ್ ನೋಡುವಾಗ ಮಾಣಿಕ್ಯರತ್ನದಂತೆ ಏಕ ನಕ್ಷತ್ರ. ಹಾಗಾಗಿ ಮಾಣಿಕ್ಯರತ್ನದ ಜತೆ ಏಕಮುಖ ರುದ್ರಾಕ್ಷಿ ಧರಿಸಬಹುದು. ಈ ನಕ್ಷತ್ರಕ್ಕೆ ದೇವತೆ ವಾಯು. ನರಸಿಂಹ ಸ್ವಾಮಿ ದೇವರ ಜನನ ಈ ನಕ್ಷತ್ರದಲ್ಲಿಯೇ ಆಗಿರುತ್ತದೆ. (ಇದು ಸತ್ಯವೇ ಎಂದು ತಿಳಿದುಕೊಳ್ಳಬೇಕಾದರೆ 13.5.2014ರ ಮಂಗಳವಾರ ವೈಶಾಖ ಶುದ್ಧ ಚತುರ್ದಶಿ ದಿನ ಸ್ವಾತಿ ನಕ್ಷತ್ರವಿದೆ ಅದನ್ನು ನೋಡಬಹುದು). ಆ ದಿನ ನರಸಿಂಹಜಯಂತಿ ಕೂಡ ಆಗಿದೆ. ಜೈನರ 24ನೇ ತೀರ್ಥಂಕರರು ಮಹಾವೀರಸ್ವಾಮಿ ದೀಪಾವಳಿ ಅಮಾವಾಸ್ಯೆಯ ದಿನದಂದು ಸ್ವಾತಿ ನಕ್ಷತ್ರದಲ್ಲಿಯೇ ಮೋಕ್ಷ ಪಡೆದರು. ನಕ್ಷತ್ರದ ವಿಶೇಷತೆಯೆಂದರೆ ಈ ನಕ್ಷತ್ರದ ದಿನ ಗೃಹ ಪ್ರವೇಶವಾದರೆ ಮೂರು ವರ್ಷಗಳಲ್ಲಿ ಮನೆಯನ್ನು ಮಾರಾಟ ಮಾಡಿ ಬೇರೆ ಮನೆ ಕಟ್ಟುವಿರಿ. ಸಮುದ್ರದಲ್ಲಿರುವ ಮುತ್ತುಗಳಿಗೆ ಈ ನಕ್ಷತ್ರದ ಮಳೆ ಶ್ರೇಷ್ಠ ಆಗಿದೆ. ಈ ನಕ್ಷತ್ರದ ದಿನ ಅಮೂಲ್ಯವಸ್ತು ಕಳವಾದರೆ ಸಿಗಲಾರದು. ವಧು-ವರರ ಕೂಟಗಳಲ್ಲಿ ವ್ಯತ್ಯಾಸವಿದ್ದರೂ ಮಾಡಬಹುದು. ಆದರೆ ವಿವಾಹದ ನಂತರ ಲಕ್ಷ್ಮೀ ನರಸಿಂಹದೇವರ ದರ್ಶನ ಮಾಡತಕ್ಕದ್ದು. ಈ ನಕ್ಷತ್ರದಲ್ಲಿ ಜನಿಸಿದವನು ದೈವ ಭಕ್ತನೂ,ವಿನಯವಂತನೂ,ಉತ್ತಮ ವ್ಯಾಪಾರಿಯೂ, ದಯೆ ಉಳ್ಳವನೂ, ಕೈಲಾಸದ ಬಡ ಜನರಿಗೆ ಸಹಾಯ ಹಸ್ತ ಉಳ್ಳವನೂ, ಇವನ ಆರಾಧ್ಯ ದೇವರು ಲಕ್ಷ್ಮೀ ನರಸಿಂಹಸ್ವಾಮಿ. ಸ್ತ್ರೀಯಾದರೆ ಐಶ್ವರ್ಯವಂತಳೂ, ಪತಿವ್ರತೆ, ಪುತ್ರಸಂಹಾರ ಉಳ್ಳವಳೂ, ಯಶೋವಂತಳೂ, ನಿಧಾನವಾಗಿ ಕೆಲಸ ಮಾಡುವವಳು. ಆದರೆ ತವರು ಮನೆ ಬಗ್ಗೆ...