ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು ಸಾದಾರಣವಾಗಿ ಯಾರದೇ ಜನ್ಮಕುಂಡಲಿಯಲ್ಲಿ (ಯಾವುದೇರೀತಿಯ)ಹನ್ನೆರಡು ಕಾಳಸರ್ಪದೋಷಗಳಿದ್ದಾಗ್ಯು ಕೂಡ ಅದನ್ನು ಭಂಗಗೊಳಿಸಬಲ್ಲ ಕೆಲವು ಯೋಗಗಳಿದ್ದಾಗ ಈ ಸರ್ಪದೋಷಗಳು ನಿವಾರಣೆಯಾಗುತ್ತವೆ ಅಥವ ಈ ಯೋಗದಿಂದ ಉಂಟಾಗುವ ಕೆಟ್ಟಫಲಗಳು ನಾಶವಾಗುತ್ತವೆ.ಅಂತಹ ಬಲವಾದ ಯೋಗಗಳೆಂದರೆ:- ಯಾರ ಜನ್ಮಕುಂಡಲಿಯಲ್ಲಿ ಪಂಚಮಹಾಪುರುಷಯೋಗಗಳಲ್ಲಿ ಯಾವುದಾದರು ಒಂದು ಯೋಗವಿದ್ದಾಗ್ಗೆ ಈ ಕಾಳಸರ್ಪದೋಷವು ಉಂಟುಮಾಡುವ ಕೆಟ್ಟಫಲವನ್ನು ನಾಶಮಾಡುತ್ತದೆ. ಆ ಪಂಚ ಮಹಾಪುರುಷ ಯೋಗಗಳು ಯಾವುವೆಂದರೆ:- *ಕುಜನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ರುಚಕಯೋಗದಿಂದ* *ಬುದನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಭದ್ರಯೋಗದಿಂದ *ಗುರುವಿನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಹಂಸಯೋಗದಿಂದ* *ಶುಕ್ರನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಮಾಳವ್ಯಯೋಗದಿಂದ* *ಶನಿಯಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಶಶ(ಸಸ)ಯೋಗದಿಂದ* *ಜನ್ಮ ಕುಂಡಲಿಯಲ್ಲಿ ಕೇಂದ್ರಗಳಾದ ೧ ೪ ೭ ೧೦ ನೇ ಮನೆಯಲ್ಲಿ ಶುಭಗ್ರಹಗಳಿದ್ದರೆ* *ಪ್ರಭಲವಾದ ಯೋಗಗಳು ಇರುವುದರಿಂದ* *ರಾಹುವುನೊಂದಿಗೆ ಯಾವುದೇ ಇತರೆ ಗ್ರಹವಿದ್ದು ಆ ಗ್ರಹ ಹೆಚ್ಚಿನ ಅಂತರದಲ್ಲಿ(ಡಿಗ್ರಿಯಲ್ಲಿ) ಇದ್ದಲ್ಲಿ ಈ ಯೋಗ ಭಂಗವಾಗುತ್ತದೆ(ಉದಾ:-೬ಡಿಗ್ರಿ೨೫ ನಿಮಿಷದಲ್ಲಿ ರಾ...