ಯಾವುದೇ ನಿವೇಶನದ ಆಯವನ್ನು ನಿರ್ಣಯಿಸಲು ಈ ಕೆಳಗಿನ ಮೂಲ ಸೂತ್ರಗಳನ್ನು ಅನುಸರಿಸಬೇಕು (ಆದಾರ:-ಓಂಟಿಕೊಪ್ಪಲ್ ಪಂಚಾಂಗ) *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ನವಗ್ರಹಗಳಿಂದ ಗುಣಿಸಿ ದಿಕ್ಪಾಲಕರಿಂದ ಭಾಗಿಸಿದಾಗ ಉಳಿಯುವ ಶೇಷವೇ ಆ ನಿವೇಶನಕ್ಕೆ ಧ್ವಜ,ಗಜ,ವೃಷಭ,ಸಿಂಹ,ಸ್ವಾನ,ಖರ,ಕಾಕ,ಆಯವಾಗುತ್ತದೆ.(ವಾಸದ ಮನೆಗಳಿಗೆ ಧ್ವಜ,ಗಜ,ವೃಷಭ,ಸಿಂಹ ಆಯಗಳು ಶುಭ) *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ದಿಕ್ಪಾಲಕರಿಂದ ಗುಣಿಸಿ ಮಾಸಗಳಿಂದ ಭಾಗಿಸಿದಾಗ ಉಳಿಯುವ ಶೇಷವೇ ಧನಾಂಶವಾಗುತ್ತದೆ. *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ತ್ರಿಮೂರ್ತಿಗಳಿಂದ ಗುಣಿಸಿ ದಿಕ್ಪಾಲಕರಿಂದ ಭಾಗಿಸಿದಾಗ ಉಳಿಯುವ ಶೇಷವೇ ಋಣಾಂಶವಾಗುತ್ತದೆ. *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ನವಗ್ರಹಗಳಿಂದ ಗುಣಿಸಿ ೨ ಸಂವತ್ಸರಗಳಿಂದ ಭಾಗಿಸಿದಾಗ ಉಳಿಯುವ ಶೇಷವೇ ಆ ಮನೆಗೆ ಆಯುಷ್ಯವಾಗುತ್ತದೆ. ಸೂ:- ಯಾವುದೇ ಮನೆಗೆ ಬಾಗಿಲನ್ನು ಇಡಲು ಮೂರು ವಿಧಾನಗಳನ್ನು ಅನುಸರಿಸಬಹುದಾಗಿದೆ. ೧) ಮನೆಯ ಯಜಮಾನನ ಜನ್ಮ ರಾಶಿಯಂತೆ ೨)ಆಯದ ಅನುಸಾರ೩)ತಮ್ಮ ಹಿರಿಯರು ಅನುಸರಿಸಿಕೊಂಡು ಬಂದರೀತಿ(ಈ ಮೂರರಲ್ಲಿ ಯಾವುದಾದರು ಒಂದುರೀತಿಯಲ್ಲಿ ಬಾಗಿಲಿಡಬಹುದು. ಆಯದ ಪ್ರಕಾರ ಬಾಗಿಲಿಡುವುದು ಅತ್ಯಂತ ಶುಭಕರವಾಗಿರುತ್ತದೆ. ೨) ವಾಸದ ಮನೆಗೆ ಯಾವಾಗಲು ಒಳಆಯವನ್ನು ಇಡುವುದು ಸೂಕ್ತ.(ಅಂದರೆ ಕಟ್ಟಡವನ್ನು ಕಳೆದು ನಾಲ್ಕು ಗೋಡೆಯ ಒಳಬಾಗವನ್ನು ಆಯಕ್ಕೆ ತಗೆದುಕೊಳ್ಳಬೇಕು) ೩)ಮನೆಯ ಶುಭಾಯನಿರ್ಣಯಕ...