ಜಾತಕದಲ್ಲಿ ಸಂತಾನ ಯೋಗ ಈಗಿನ ಕಾಲದಲ್ಲಿ ಸಂತಾನದ ಸಂಖ್ಯೆ ಕಡಿಮೆ ಮಾಡಿಕೊಂಡು ಜೀವನ ಮಾಡುತ್ತಾರೆ.ಆದರೆ ಸಂತತಿ ಇಲ್ಲದವರು ವೈದ್ಯರಿಂದ ಚಿಕಿತ್ಸೆ ಪಡೆಯುವುದು, ಜ್ಯೋತಿಷ್ಯರ ಸಲಹೆ ಪಡೆಯುವುದು, ಸಂತಾನಕ್ಕಾಗಿ ಪೂಜೆ ಮಾಡಿಸುವುದು ಹೀಗೆ ಎಲ್ಲ ಪ್ರಯತ್ನ ಮಾಡುತ್ತಾರೆ. ಸಂತತಿಯ ಯೋಗವನ್ನು ಅವರವರ ಜಾತಕದಿಂದ ನೋಡಬಹುದು. *ಜನ್ಮ ಲಗ್ನದಿಂದ ಅಥವಾ ಚಂದ್ರ ರಾಶಿಯಿಂದ ಪಂಚಮ ಸಪ್ತಮಗಳನ್ನು ಭಾಗ್ಯಾಧಿಪತಿಯು ನೋಡಿದರೆ ಸಂತಾನ ಮತ್ತು ದಾಂಪತ್ಯವು ಸುಖಮಯವಾಗುತ್ತದೆ. *ಲಗ್ನ ಅಥವಾ ಚಂದ್ರನಿಂದ ಪಂಚಮಾಧಿಪತಿ ಮತ್ತು ಸಪ್ತಮಾಪತಿಯು ನವಮದಲ್ಲಿ ಇದ್ದರೆ ಅತ್ಯಂತ ಸುಖಮಯ ದಾಂಪತ್ಯ ಜೀವನ ಹಾಗೂ ಸಂತತಿ ಸುಖ ಇರುತ್ತದೆ. *ಪಂಚಮದ ಅಧಿಪತಿಯು ಪಂಚಮದಲ್ಲಿ ಸಪ್ತಮಾಧಿಪತಿಯು ನವಮದಲ್ಲಿ ಇದ್ದರೆ ಇಂತಹ ಜಾತಕದವರು ಸುಖಮಯ ದಾಂಪತ್ಯ ಜೀವನ ಮಾಡುತ್ತಾರೆ. *ಪಂಚಮ, ಸಪ್ತಮ ಮತ್ತು ನವಮದಲ್ಲಿ ಶುಭ ಗ್ರಹಗಳು ಇದ್ದರೆ ಅಥವಾ ಈ ಮನೆಯನ್ನು ಶುಭ ಗ್ರಹಗಳು ನೋಡಿದರೆ ಇಂತಹ ಜಾತಕದರಿಗೆ ಪುತ್ರ ಸಂತತಿ ಇರುವುದಲ್ಲದೆ ಇವರು ಸುಖಮಯ ದಾಂಪತ್ಯ ಜೀವನವನ್ನು ಅನುಭವಿಸುತ್ತಾರೆ. *ಪಂಚಮ, ಸಪ್ತಮ ಮತ್ತು ನವಮಾಧಿಪತಿಗಳು ಷಷ್ಠ, ಅಷ್ಟಮ ಮತ್ತು ದ್ವಾದಶದಲ್ಲಿ ಇದ್ದರೆ ದಾಂಪತ್ಯ ಜೀವನ ಸುಖಮಯವಾಗಿರುವುದಿಲ್ಲ. *ಜಾತಕದಲ್ಲಿ ಬೇರೆ ಬೇರೆ ಭಾವಗಳಲ್ಲಿ ಪಂಚಮ, ಸಪ್ತಮ ಮತ್ತು ನವಮಾಧಿಪತಿ ಇದ್ದರೆ ದಾಂಪತ್ಯ ಜೀವನವು ಮಧ್ಯಮ ಇರುತ್ತದೆ. ಶುಕ್ರ - ಕುಜರ ಯತಿಯು ಇದ್ದರೆ ದಾಂಪತ್ಯ ಜೀವ...