ವಿವಾಹವೆಂಬ ಕಲ್ಪನೆಯು ಒಂದು ದೇಶದಿಂದ ಮತ್ತೊಂದು ದೇಶಕ್ಕೂ ಹಾಗು ಪೀಳಿಗೆಯಿಂದ ಪೀಳಿಗೆಗೂ ಬದಲಾಗುತ್ತಿರುತ್ತದೆ. ವಿವಾಹ ಸಂಬಂಧವು ಮನುಷ್ಯನ ವೈಯಕ್ತಿಕ ಬೆಳವಣಿಗೆ ಮತ್ತು ಆಧ್ಯಾತ್ಮಿಕ ಮಟ್ಟ ಪ್ರಮುಖವಾಗಿದೆ. ಇದು ಮಾನವನಿಗೆ ಕರ್ಮಗಳ ಮೂಲಕ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಪರಿಪೂರ್ಣತೆಯನ್ನು ನೀಡುತ್ತದೆ. ವಿವಾಹವು ಮೂರು ಘಟ್ಟಗಳಲ್ಲಿ ಅಭಿವೃದ್ದಿ ಹೊಂದಲು ಸಹಕಾರಿಯಾಗಿದೆ - 1. ಭೌತಿಕ ಬೆಳವಣಿಗೆ 2. ಬೌದ್ಧಿಕ ಬೆಳವಣಿಗೆ 3. ಮಾನಸಿಕ ಬೆಳವಣಿಗೆ. ಈ ಮೂರು ಆಧಾರದ ಮೇಲೆ ಗಂಡು ಮತ್ತು ಹೆಣ್ಣಿನ ಅವಶ್ಯಕತೆಗಳು ಏನು ಎಂಬುದನ್ನು ಅಭ್ಯಸಿಸಬಹುದು. ಇದರಿಂದ ಅವರುಗಳ ಸಂಬಂಧದಲ್ಲಿ ಸುಧಾರಣೆಯನ್ನು ಕಂಡುಕೊಳ್ಳಬಹುದು. ಪುರುಷ ಕುಂಡಲಿಯಲ್ಲಿ ಕುಜ ಮತ್ತು ಶುಕ್ರ ಪುರುಷ ಕುಂಡಲಿಯಲ್ಲಿ ಶುಕ್ರವು ಆತ ಯಾರಿಗೆ ಆಕರ್ಷಿತರಾಗುತ್ತಾನೆಂಬುದನ್ನು ತಿಳಿಸಿದರೆ, ಕುಜವು ಹೆಣ್ಣಿನ ಜೊತೆಗೆ ವರ್ತನೆಯನ್ನು ತಿಳಿಸುತ್ತದೆ. 1. ಪುರುಷನ ಕುಂಡಲಿಯಲ್ಲಿ ಶುಕ್ರನು ಕನ್ಯೆಯ ಗುಣಲಕ್ಷಣಗಳನ್ನು ಮತ್ತು ಯಾವ ರೀತಿಯ ಕನ್ಯೆ ಆಯ್ಕೆ ಮಾಡುತ್ತಾನೆಂದು ತಿಳಿಸುತ್ತದೆ. ಉದಾಹರಣೆಗೆ ಶುಕ್ರನು ಮೀನ ರಾಶಿಯಲ್ಲಿದ್ದರೆ ಕಲಾನಿಪುಣ ಕನ್ಯೆಯನ್ನು ಇಷ್ಟಪಡುತ್ತಾನೆ. ಶುಕ್ರನು ಕುಂಭರಾಶಿಯಲ್ಲಿದ್ದು ಕುಜನೊಂದಿಗೆ ವೃಷಭ ರಾಶಿ ಅಥವಾ ತುಲಾ ರಾಶಿಯಲ್ಲಿದ್ದರೆ ಅವರ ವೈಯಕ್ತಿಕ ದಾಂಪತ್ಯ ಜೀವನದಲ್ಲಿ ವ್ಯತ್ಯಾಸಗಳನ್ನು ನೋಡಬಹುದು. 2. ಶುಕ್ರನು ಪೃಥ್ವಿತತ್ವದ ರಾಶಿಗಳಾದ ವೃಷಭ, ಕ...