ಪೀಡಾಪರಿಹಾರಕ ಶ್ರೀಶನಿದೇವರ ಸ್ತೋತ್ರ ಶ್ರೀಶನಿಸ್ತೋತ್ರಮ್ ನಮಸ್ತೇ ಕೋಣಸಂಸ್ಥಾಯ ಪಿಂಗಲಾಯ ನಮೋಸ್ತು ತೇ | ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಸ್ತು ತೇ || ೧ || ನಮಸ್ತೇ ರೌದ್ರದೇಹಾಯ ನಮಸ್ತೇ ಚಾಂತಕಾಯ ಚ | ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ || ೨ || ನಮಸ್ತೇ ಮಂದಸಂಜ್ಞಾಯ ಶನೈಶ್ಚರ ನಮೋಸ್ತು ತೇ | ಪ್ರಸಾದಂ ಕುರು ದೇವೇಶ ದಿನಸ್ಯ ಪ್ರಣತಸ್ಯ ಚ || ೩ || ಕೋಣಸ್ಥಃ ಪಿಂಗಲೋ ಬಭ್ರುಃ ಕೃಷ್ಣೋ ರೌದ್ರೋಂತಕೋ ಯಮಃ | ಸೌರಿಃ ಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತಃ || ೪ || ಏತಾನಿ ದಶ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ | ಶನೈಶ್ಚರಕೃತಾ ಪೀಡಾ ನ ಕದಾಚಿದ್‍ಭವಿಷ್ಯತಿ || ೫ || ಸಾಡೇಸಾತಿ ಅಥವಾ ಏಳರಾಟ ಶನಿಕಾಟವಿದ್ದವರು ಪ್ರತಿನಿತ್ಯ ಪ್ರಾತಃ ಕಾಲದಲ್ಲಿ ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿದರೆ ಪಿಡೆಯಿಂದ ಶೀಘ್ರ ಪರಿಹಾರವಾಗಿ ಶ್ರೀಶನೈಶ್ಚರನ ಅನುಗ್ರಹವಾಗುತ್ತದೆ. ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ | ಅರಿಷ್ಟಂ ಹರ ಮೇಭೀಷ್ಟಂ ಕುರು ಮಾ ಕುರು ಸಂಕಟಮ್ || ಶ್ರಿಶನೈಶ್ಚರ ಪೀಡಾ ಪರಿಹಾರೋಪಾಯಗಳು ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ | ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ || – ಗರುಡಪುರಾಣ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ. ಇಂಥಹ ಕರ್ಮಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯವೆಂಬ ದಿವ...